ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿವಿಎಸ್

Posted by Vidyamaana on 2023-11-08 19:16:29 |

Share: | | | | |


ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿವಿಎಸ್

ಹಾಸನ: ನಾನು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಬಾರದು ಎಂದು ಸಣ್ಣ ತೀರ್ಮಾನ ಮಾಡಿದ್ದೇನೆ ಎಮದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ (DV S

non

ananda Gowda) ಅವರು ಚುನಾವಣಾ ರಾಜಕೀಯಕ್ಕೆ (Electoral Politics) ನಿವೃತ್ತಿ ಘೋಷಿಸಿದ್ದಾರೆ.


ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವತ್ತು ವರ್ಷ ನನ್ನ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ನಮ್ಮ ಪಕ್ಷದಲ್ಲಿ ನಾನೇ ನಂಬರ್ ಒನ್ ಫಲಾನುಭವಿ. 10 ವರ್ಷ ಎಂಎಲ್‍ಎ, 20 ವರ್ಷ ಎಂಪಿ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, 5 ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ 7 ವರ್ಷ ನರೇಂದ್ರ ಮೋದಿ ಜೊತೆ ಕ್ಯಾಬಿನೆಟ್ ಮಂತ್ರಿ ಇಷ್ಟಕ್ಕೆ ಸಂತೋಷ ಪಡದ ರಾಜಕಾರಣಿ ಅವನು ರಾಜಕಾರಣಿ ಅಲ್ಲ. ಅವನನ್ನು ಸ್ವಾರ್ಥಿ ಎಂದು ತಿಳಿದುಕೊಳ್ಳುತ್ತೇನೆ ಎಂದರು.


ಎಲ್ಲಾ ರಾಜಕೀಯ ಪಕ್ಷದಲ್ಲಿ ನಾನು ಸತ್ಯಹರಿಶ್ಚಂದ್ರ ಅಂತ ಹೇಳಿಕೊಂಡರು ಕೂಡ ಹತ್ತು ಪರ್ಸೆಂಟ್ ಜನ ಅಧಿಕಾರಕ್ಕಾಗಿ ಜಂಪ್ ಮಾಡುವವರಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಬಿಜೆಪಿಯಿಂದ (BJP) ಕಾಂಗ್ರೆಸ್ (Congress), ಏನೂ ಇಲ್ಲದ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣ ಅವರ ಜೊತೆ. ಈ ರೀತಿ ಹೋಗುವಂತಹವರು ಎಲ್ಲಾ ಪೊಲಿಟಿಕಲ್ ಪಾರ್ಟಿಯಲ್ಲಿದ್ದಾರೆ. ಅದರಿಂದ ನಮ್ಮ ಪಾರ್ಟಿ ಹೊರತಾಗಿಲ್ಲ ಎಂದು ಹೇಳಿದರು


ಆಪರೇಷನ್ ಕಮಲದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿವಿಎಸ್, ನಮಗೆ ಅದರ ಅಗತ್ಯ ಇಲ್ಲ. ಹಿನ್ನಡೆ ನಂತರ ನಾವು ಸ್ವಂತ ಶಕ್ತಿಯಲ್ಲಿ ಬಿಜೆಪಿ ಕಟ್ಟಬೇಕೆಂದು ನಿರ್ಣಯ ಮಾಡಿದ್ದೇವೆ. ಯಾರನ್ನೋ ಕರೆದುಕೊಂಡು ಬಂದು ಮತ್ತೆ ವ್ಯಾತ್ಯಾಸಗಳಾಗುವುದು ಬೇಡ ಎಂದು ನಿಶ್ಚಯ ಮಾಡಿದ್ದೇವೆ ಎಂದು ತಿಳಿಸಿದರು.

ಎಸ್‌ಡಿಪಿಐ ಬನ್ನೂರು ವತಿಯಿಂದ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ

Posted by Vidyamaana on 2023-07-23 11:28:48 |

Share: | | | | |


ಎಸ್‌ಡಿಪಿಐ ಬನ್ನೂರು ವತಿಯಿಂದ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ

ಪುತ್ತೂರು :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ವತಿಯಿಂದ ಅರ್ಹ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮವು ಜು 23 ರಂದು ನಡೆಯಿತು.

   ಬನ್ನೂರು ಜುಮಾ ಮಸ್ಜಿದ್ ಧರ್ಮ ಗುರುಗಳು   ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಎಸ್‌ಡಿಪಿಐ ಬನ್ನೂರು ವಾರ್ಡ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಉದ್ಘಾಟಿಸಿದರು. ಪುತ್ತೂರು ನಗರ ಸಭಾ ಸದಸ್ಯೆ ಕೆ. ಫಾತಿಮತ್ ಝೂರಾ ಮನೆಯ ಯಜಮಾನಿ ಜಮೀಲಾ ಅವರಿಗೆ ಕೀ ಹಸ್ತಾಂತರಿಸಿದರು.


 ಮನೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಬನ್ನೂರು ವಾರ್ಡ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಹುಸೇನ್, ಕಾರ್ಯದರ್ಶಿ ಮುಸ್ತಫ, ಮುಸ್ಲಿಂ ಯೂಥ್ ಫೆಡರೇಷನ್ ಅಧ್ಯಕ್ಷ ಅಝರ್ ಬನ್ನೂರು ಹಾಗೂ ಸ್ಥಳೀಯ ಸಂಸ್ಥೆಗಳಾದ ಮುಸ್ಲಿಂ ಯೂಥ್ ಫೆಡರೇಷನ್ ಬನ್ನೂರು ಪರವಾಗಿ ಗೌರವ ಅಧ್ಯಕ್ಷ ರಫೀಕ್ ಬಾಂಬೆ , ಸುಲ್ತಾನ್ ಗೈಸ್ ಪರವಾಗಿ ಹನೀಫ್ , ವಾರ್ಡ್ ಸಂಖ್ಯೆ 05 ಬೂತ್ ಸಮಿತಿ ಪರವಾಗಿ ರಸೀಕ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. 


  ಈ ಸಂದರ್ಭದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸದಸ್ಯರಾದ ಪಿಬಿಕೆ ಮುಹಮ್ಮದ್, ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಕಾರ್ಯದರ್ಶಿ ಅಶ್ರಫ್ ಹಾರಾಡಿ, ಮುಸ್ಲಿಂ ಯೂಥ್ ಫೆಡರೇಷನ್ ಬನ್ನೂರು ಗೌರವ ಅಧ್ಯಕ್ಷ ರಫೀಕ್ ಬಾಂಬೆ, ಅಧ್ಯಕ್ಷ ಅಝರ್, ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಪುತ್ತೂರು ಅಧ್ಯಕ್ಷ ಬಾತೀಶ ಬಡಕ್ಕೂಡಿ, ಮುಸ್ಲಿಂ ಯೂಥ್ ಫೆಡರೇಷನ್ ಬನ್ನೂರು ಕಾರ್ಯದರ್ಶಿ ಸೈಫುದ್ದೀನ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಫಾಝ್ ಬನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು ಅಂಬಾರಿ ಉಡುಗೊರೆ

Posted by Vidyamaana on 2023-08-03 08:24:27 |

Share: | | | | |


ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು ಅಂಬಾರಿ ಉಡುಗೊರೆ

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸತ್ ಭವನದಲ್ಲಿ ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.


ಸಿದ್ದರಾಮಯ್ಯ ಅವರು ಎರಡನೇ ಸಲ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತಿರುವುದು.


ಭೇಟಿ ವೇಳೆ ಸಿದ್ದರಾಮಯ್ಯ ಅವರು, ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರ ಬಳಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.


ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರಾದ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದರು.

ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

Posted by Vidyamaana on 2024-01-10 14:39:27 |

Share: | | | | |


ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

ನೋಯ್ಡಾ: ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಪ್ರತಿದಿನ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ವರದಿಗಳು ಬರುತ್ತಿವೆ. ಇದೀಗ ನೋಯ್ಡಾದಿಂದ ಅಂತಹುದೇ ಪ್ರಕರಣವೊಂದು ಬಂದಿದ್ದು, ಕ್ರಿಕೆಟ್ ಮ್ಯಾಚ್ ಆಡುತ್ತಿದ್ದ ವ್ಯಕ್ತಿಯೊಬ್ಬ ರನ್ ತೆಗೆದುಕೊಳ್ಳುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಲು ಕ್ಲಿಕ್ ಮಾಡಿ

ಈ ವೇಳೆ ಅಲ್ಲಿದ್ದ ಇತರ ಆಟಗಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ.ಈ ಘಟನೆಯು ಥಾನಾ ಎಕ್ಸ್‌ಪ್ರೆಸ್‌ವೇ ಪ್ರದೇಶದ ಸೆಕ್ಟರ್ -135 ರಲ್ಲಿ ನಡೆದಿದ್ದು, ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಕೆಲವು ಮಂದಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಉತ್ತರಾಖಂಡ ಮೂಲದ 36 ವರ್ಷದ ವಿಕಾಸ್ ನೇಗಿ ಬ್ಯಾಟಿಂಗ್‌ಗೆ ಬಂದಿದ್ದರು. ಆಟದ ವೇಳೆ ವಿಕಾಸ್ ರನ್ ತೆಗೆದುಕೊಳ್ಳಲು ಓದಿದ್ದಾರೆ ಆದರೆ ಇದರ ನಡುವೆ ಹೃದಯಾಘಾತಕ್ಕೆ ಒಳಗಾಗಿ ಪಿಚ್ ನಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಆಟಗಾರರು ವಿಕಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು. ವಿಕಾಸ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಕಾಸ್ ರನ್ ತೆಗೆದುಕೊಳ್ಳಲು ಓಡಿ ನಂತರ ಪಿಚ್ ಮೇಲೆ ಬೀಳುವುದು ಕಂಡುಬಂದಿದೆ.

ನೇಣು ಬಿಗಿದು ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ

Posted by Vidyamaana on 2024-05-13 17:08:28 |

Share: | | | | |


ನೇಣು ಬಿಗಿದು  ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ

ಬೆಳ್ಳಾರೆ: ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಾರುವಿನಲ್ಲಿ ನಡೆದಿದೆ.

ಬೆಳ್ಳಾರೆ ನೆಟ್ಟಾರು ನಿವಾಸಿ ಚರಣ್ (22) ಆತ್ಮಹತ್ಯೆಗೆ ಶರಣಾದ ಯುವಕ.

ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದರ ಬಗ್ಗೆ ತನಿಖೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Posted by Vidyamaana on 2023-12-15 08:12:04 |

Share: | | | | |


ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದರ ಬಗ್ಗೆ ತನಿಖೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದು ಲೋಕಸಭೆಗೆ ನುಗ್ಗಿ ಆತಂಕ ಸೃಷ್ಟಿಸಿದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ದೆಹಲಿಯಲ್ಲಿ ಮಾತನಾಡಿದ ಅವರು, ಸಂಸದರು ಯಾವ ಹಿನ್ನೆಲೆಯಲ್ಲಿ ಅವರು ಪಾಸ್ ಕೊಟ್ಟಿದ್ದರು ಎಂಬ ಬಗ್ಗೆ ತನಿಖೆಯಾಗಲಿದೆ. ಯಾವುದೇ ಕಾರಣಕ್ಕೂ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರು ಬಂದಾಗ ಪಾಸ್ ಕೊಡುವುದು ಸಹಜ. ಪ್ರತಾಪ ಸಿಂಹ ಪಾಸ್ ಕೊಟ್ಟ ವಿಚಾರ ತನಿಖೆಗೆ ಒಳಪಡಲಿದೆ. ಮೂರು ಬಾರಿ ಪಾಸ್ ಪಡೆದಿರುವ ಬಗ್ಗೆ ಗೊತ್ತಿಲ್ಲ. ಮೈಸೂರಿನವರು ಎನ್ನುವ ಕಾರಣಕ್ಕೆ ಪಾಸ್ ಕೊಟ್ಟೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.


ಈ ಘಟನೆ ವಿಷಾದನೀಯ, ಖಂಡನೀಯ. ಘಟನೆ ನಂತರ ಲೋಕಸಭೆ ಸ್ಪೀಕರ್, ಸಭಾ ನಾಯಕರು ಸಭೆ ನಡೆಸಿ ಸಂಸತ್ ನಲ್ಲಿ ಸುರಕ್ಷಾ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಘಟನೆಯಿಂದ ಪಾಠ ಕಲಿತುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ. ಎಲ್ಲರ ಸಲಹೆ ಪಡೆದು ಸಂಸತ್ ರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ.ಇಂತಹ ಘಟನೆಗಳಲ್ಲಿ ಸ್ಪೀಕರ್ ಈ ಹಿಂದೆ ಕೈಗೊಂಡ ಕ್ರಮಗಳಂತೆ ಈ ಬಾರಿಯೂ ಕ್ರಮ ಕೈಗೊಳ್ಳಲಾಗಿದೆ. ಆಯುಧ ಸೇರಿದಂತೆ ಇತರೆ ವಸ್ತು ಪಡೆದು ಗ್ಯಾಲರಿಗೆ ಬರುವುದು ಬೇಡ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ಕೈಗೊಂಡ ಪರಂಪರೆ ಪರಿಶೀಲಿಸಿ ಅದರಂತೆ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ ಮಟ್ಟದ ತನಿಖೆಗೆ ಸ್ಪೀಕರ್ ಆದೇಶ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

Recent News


Leave a Comment: