ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಘೋಷಣೆ

Posted by Vidyamaana on 2023-07-13 16:47:50 |

Share: | | | | |


ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಘೋಷಣೆ

ಬೆಂಗಳೂರು: ಸರ್ಕಾರದ ಮಹತ್ವಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಡೆಡ್ ಲೈನ್ ವಿಧಿಸಿದೆ. ಗೃಹ ಜ್ಯೋತಿ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಖುದ್ದು ಇಂಧನ ಸಚಿವರೇ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ.ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಆಗಿರುವ ಗೊಂದಲಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಉತ್ತರ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜೂ. 27ರಂದು ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ಜಾರ್ಜ್ ತಿಳಿಸಿದ್ದಾರೆ

ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ಧನುಷ್

Posted by Vidyamaana on 2024-04-08 21:59:35 |

Share: | | | | |


 ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ಧನುಷ್

ನವದೆಹಲಿ : ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನದ ಸೆಕ್ಷನ್ 13 ಬಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ದಂಪತಿಗೆ ಹತ್ತಿರದ ಮೂಲಗಳು ತಿಳಿಸಿವೆ.ಇಬ್ಬರೂ ಜನವರಿ 2022ರಲ್ಲಿ ಬೇರ್ಪಡುವ ನಿರ್ಧಾರವನ್ನ ಘೋಷಿಸಿದರು. ಆ ಸಮಯದಲ್ಲಿ, ಅವರ ಪ್ರಕಟಣೆಯು ಅವರ ಅನುಯಾಯಿಗಳಿಗೆ ಭಾರಿ ಆಘಾತವನ್ನುಂಟು ಮಾಡಿತು.

ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

Posted by Vidyamaana on 2024-07-01 19:31:51 |

Share: | | | | |


ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಮಳೆಗಾಲ ಆರಂಭವಾಗಿದ್ದು, ಈ ಋತುವಿನಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯವಾಗಿದೆ. ಋತುಮಾನದ ಕಾಯಿಲೆಗಳ ಜೊತೆಗೆ ಡೆಂಗ್ಯೂ ಅಪಾಯವಿದೆ. ಡೆಂಗ್ಯೂ ವಾಸ್ತವವಾಗಿ ಹೆಣ್ಣು ಈಜಿಪ್ಟಿ (ಈಡಿಸ್ ಸೊಳ್ಳೆ) ಸೊಳ್ಳೆಗಳಿಂದ ಹರಡುತ್ತದೆ.

ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದ್ರೆ, ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿ ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಕೇವಲ ಮನುಷ್ಯನ ಕೆಳಗಿನ ಅಂಗಗಳನ್ನ ಗುರಿಯಾಗಿಸುತ್ತಾರೆ. ಈ ಸೊಳ್ಳೆಗಳು ಕಚ್ಚಿದರೆ ತೀವ್ರ ಜ್ವರದ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಡೆಂಗ್ಯೂ ಸೊಳ್ಳೆಗಳು ಕೂಲರ್‌, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಛಾವಣಿಗಳು, ಟೈರ್‌ಗಳು, ಗುಂಡಿಗಳು ಇತ್ಯಾದಿಗಳಲ್ಲಿ ತಮ್ಮ ಮೊಟ್ಟೆಗಳನ್ನ ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನ ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆಗಳಾಗಿ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳು ಹುಟ್ಟಿದ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ.

ಫಿಲೋಮಿನಾ ಪಿಯು ವಿದ್ಯಾರ್ಥಿಗಳಿಂದ ಚಾರಣ ಸಂದರ್ಶನ

Posted by Vidyamaana on 2023-07-03 14:31:22 |

Share: | | | | |


ಫಿಲೋಮಿನಾ ಪಿಯು ವಿದ್ಯಾರ್ಥಿಗಳಿಂದ ಚಾರಣ ಸಂದರ್ಶನ

ಪುತ್ತೂರು: ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಸಂಘ ರೋವರ್ಸ್ ಮತ್ತು ರೇಂಜರ್ಸ್ ಆಶ್ರಯದಲ್ಲಿ  ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಚಾರಣ ನಡೆಸಲಾಯಿತು. 

ಇದೇ ಸಂದರ್ಭ ಪಾಣಾಜೆ ಕಿಲಂಪಾಡಿ ಪ್ರದೇಶದ ದೈವನರ್ತಕರ ಬಳಿ ದೈವಾರಾಧನೆಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು. ಆರ್ಲಪದವಿನ ಜಾಂಬ್ರಿ ಬೆಟ್ಟ ಪ್ರದೇಶಕ್ಕೆ ವಿದ್ಯಾರ್ಥಿಗಳು ಚಾರಣವನ್ನು ನಡೆಸಿದರು. ಸುಮಾರು 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಕಾಲೇಜಿನ ಉಪನ್ಯಾಸಕರಾದ ಸುರೇಶ್ ಕುಮಾರ್, ಸಂದೇಶ್ ಲೋಬೊ, ಶರತ್ ಆಳ್ವ ಸಹಕರಿಸಿದರು.

ಇಂದು ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ -ಮಾಹಿತಿ ಕಾರ್ಯಾಗಾರ

Posted by Vidyamaana on 2023-07-12 03:12:42 |

Share: | | | | |


ಇಂದು ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ -ಮಾಹಿತಿ ಕಾರ್ಯಾಗಾರ

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ - ಮಾಹಿತಿ ಕಾರ್ಯಾಗಾರವು ಜು.12ರಂದು ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್‌ ರಾಯನ್ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ತಿಲಕ್ ರೈ, ಕುತ್ಯಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ ಹರೀಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಂತ ಫಿಲೋಮಿನ ಕಾಲೇಜಿನ ಕ್ಯಾಂಪಸ್ ಡೈರೆಕ್ಟರ್ ರೆ, ಫಾ. ಸ್ಟಾನಿ ಪಿಂಟೋ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್‌ ಕುಮಾರ್ ಮತ್ತು ಜಿಲ್ಲಾ ಉಪಾಧ್ಯಕ್ಷ ಡಾ|ಶಿವಶರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್‌: ಆರೋಪಿ ಮನೋಜ್ ಅರೆಸ್ಟ್

Posted by Vidyamaana on 2024-08-11 23:11:23 |

Share: | | | | |


ಬೆಂಗಳೂರಿನ ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್‌: ಆರೋಪಿ ಮನೋಜ್ ಅರೆಸ್ಟ್

ಬೆಂಗಳೂರು: ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಮೊಬೈಲ್ ಇಟ್ಟಿದ್ದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ.

Recent News


Leave a Comment: