KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ

Posted by Vidyamaana on 2023-11-10 19:15:26 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷರಾಗಿ  ವಿಜಯೇಂದ್ರ ಆಯ್ಕೆ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ  ಬಿ.ವೈ. ವಿಜಯೇಂದ್ರ ಆಯ್ಕೆಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸೀಟು ಗೆಲ್ಲದ ಹಿನ್ನಲೆಯಲ್ಲಿ ನಳೀನು ಕುಮಾರ್ ಕಟೀಲ್‌ ಅವರನ್ನು ಬದಲಾವಣೆ ಮಾಡಲಾಗುವುದು ಎನ್ನಲಾಗುತ್ತಿತ್ತು. ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಎಂಬ ಬಗ್ಗೆಯೂ ಚರ್ಚೆಯಾಗುತ್ತಿತ್ತು. ಎಲ್ಲದಕ್ಕೂ ಈಗ ಫುಲ್ ಸ್ಟಾಪ್‌ ಬಿದ್ದಿದೆ. ಬಿಜೆಪಿ ಹೈಕಮಾಂಡ್‌ ಮಾಜಿ ಸಿಎಂ ಬಿ.ವೈ. ಯಡಿಯೂರಪ್ಪರ ಪುತ್ರ ಬಿ ಬೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದೆ.


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಪುತ್ರ ವಿಜಯೇಂದ್ರ ಈ ಹಿಂದೆ ಭಾರತೀಯ ಜನತಾ ಯುವ ಮೋರ್ಚಾದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ವಕೀಲರಾಗಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಸದ್ಯ ಶಿಕಾರಿ ಪುರದ ಶಾಸಕರಾಗಿದ್ದಾರೆ.

ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ!

Posted by Vidyamaana on 2024-09-04 21:19:58 |

Share: | | | | |


ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ!

ತೀರ್ಥಹಳ್ಳಿ : ಭಾರಿ ಮಳೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಗುಡ್ಡ ಕುಸಿತ ಪ್ರಕರಣಗಳು ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ನಡುವೆ ಮತ್ತೊಂದು ಗುಡ್ಡ ಕುಸಿದಿದೆ.

ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಕುಸಿದಿದೆ. ಸೋಮವಾರ ರಾತ್ರಿ ಭಾರೀ ಶಬ್ದದಿಂದ ಗುಡ್ಡ ಕುಸಿದ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಸುತ್ತಮುತ್ತಲೂ ಗದ್ದೆ, ತೋಟ, ಹಾಗೂ ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿದ ದ.ಕ. ನೂತನ ಸಂಸದ ಬ್ರಿಜೇಶ್ ಚೌಟ

Posted by Vidyamaana on 2024-06-06 12:38:36 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿದ ದ.ಕ. ನೂತನ ಸಂಸದ ಬ್ರಿಜೇಶ್ ಚೌಟ

ಬೆಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದರು.

ಬೆಂಗಳೂರಿನಲ್ಲಿ ಇಂದು ವಿಜಯೇಂದ್ರ ಭೇಟಿ ಮಾಡಿದ

ಬಂಟ್ವಾಳ ; ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಾಯಿ, ಮಗಳನ್ನು ಬೆದರಿಸಿ ದರೋಡೆ, ಮುಸುಕುಧಾರಿಗಳ ಕೃತ್ಯ, ನಗ- ನಗದು ಲೂಟಿ

Posted by Vidyamaana on 2024-01-11 14:50:55 |

Share: | | | | |


ಬಂಟ್ವಾಳ ; ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಾಯಿ, ಮಗಳನ್ನು ಬೆದರಿಸಿ ದರೋಡೆ, ಮುಸುಕುಧಾರಿಗಳ ಕೃತ್ಯ, ನಗ- ನಗದು ಲೂಟಿ

ಬಂಟ್ವಾಳ, ಜ.11: ನಾಲ್ವರು ಮುಸುಕುಧಾರಿಗಳು  ಮನೆಯೊಂದಕ್ಕೆ ನುಗ್ಗಿ ತಾಯಿ, ಮಗಳಿಗೆ  ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ನಗ- ನಗದನ್ನು ದರೋಡೆಗೈದ ಘಟನೆ ಬೆಳ್ಳಂಬೆಳಗ್ಗೆ ವಗ್ಗದಲ್ಲಿ ನಡೆದಿದೆ. 


ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಫ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ. ಮನೆಯಲ್ಲಿ ತಾಯಿ ಫ್ಲೋರಿನ್ ಪಿಂಟೊ ಮತ್ತು ಅವರ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದರು. ಮನೆಯಲ್ಲಿ ಬೇರೆ ಯಾರೂ ಇಲ್ಲವೆಂದು ತಿಳಿದಿದ್ದವರೇ ರಾಬರಿ ನಡೆಸಿದ್ದಾರೆ. ಕಪಾಟಿನಲ್ಲಿರಿಸಿದ್ದ ಸುಮಾರು ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ, 30 ಸಾವಿರ ರೂ. ನಗದು ಹಾಗೂ ಒಟ್ಟು ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ನಗ- ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಸುಮಾರು 6.30ರ ವೇಳೆಗೆ ಕಾಲಿಂಗ್ ಬೆಲ್ ಹಾಕಿದ್ದು ಬಾಗಿಲು ತೆಗದ ಕೂಡಲೇ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ಚಿನ್ನ, ನಗದು ತೆಗೆದು ಕೊಡುವಂತೆ ಬೆದರಿಸಿದ್ದಾರೆ.


ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದು ಕಪಾಟು ಬೀಗದ ಕೀ ಪಡೆದಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ಆಸ್ಟಿನ್ ಪಿಂಟೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಇದೇ ಪರಿಸರದಲ್ಲಿ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ. ಹರೀಶ್ ಭೇಟಿ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು : ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಆರೋಪ ಪ್ರಕರಣ

Posted by Vidyamaana on 2024-04-08 12:04:31 |

Share: | | | | |


ಮಂಗಳೂರು : ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಆರೋಪ ಪ್ರಕರಣ

ಮಂಗಳೂರು : ಏಳು ವರ್ಷಗಳ ಹಿಂದೆ ಬಲ್ಮಟ ಸರ್ಕಲ್ ಬಳಿ ಅನಧಿಕೃತವಾಗಿ ಫ್ಲೇಕ್ಸ್ ಮತ್ತು ಬಂಟಿಂಗ್ ಅಳವಡಿಸಿದ್ದು ಅದನ್ನು ತೆರವುಗೊಳಿಸುವ ಕರ್ತವ್ಯಕ್ಕೆ ನೇಮಿಸಿದ್ದಾರೆ ಎನ್ನಲಾದ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮಂಗಳೂರಿನ  ಕಾರ್ಪೊರೇಟರ್ ವಿಜಯ್ ಕುಮಾರ್ ಶೆಟ್ಟಿ, ಹಿಂದಿನ ಮಹಾಪೌರರಾಗಿದ್ದ ದಿವಾಕರ್ ಪಾಂಡೇಶ್ವರ, ನವೀನ್ ಚಂದ್ರ, ರಾಜೇಂದ್ರ,ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರವರಗಳನ್ನು ಮಂಗಳೂರಿನ 6ನೇ ಜೆಎಂಎಫ್‌ಸಿ  ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ.


 ದಿನಾಂಕ 08/03/2018 ರಂದು ಮಂಗಳೂರು ನಗರದ ಜ್ಯೋತಿ-ಬಲ್ಮಠ ರಸ್ತೆಯ ತೆರೆದ ಸ್ಥಳದಲ್ಲಿ ಹಾಕಲಾಗಿದ್ದ  ಅನಧೀಕೃತ ಫಲಕ ಮತ್ತು ಬ್ಯಾನರ್ ಗಳನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಸೂಚನೆಯಂತೆ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ತೆರವು ಕಾಮಗಾರಿಯನ್ನು ನಡೆಸುತ್ತಿದ್ದಾಗ  ವಿಜಯ್ ಕುಮಾರ್ ಶೆಟ್ಟಿ, ದಿವಾಕರ ಪಾಂಡೇಶ್ವರ, ನವೀನ್ ಚಂದ್ರ,ರಾಜೇಂದ್ರ, ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರರವರುಗಳು ಸದ್ದಿ ಸರಕಾರಿ ಕರ್ತವ್ಯ ನಿರ್ವಹಣೆಯ ಕಾಯಕಕ್ಕೆ ಕಾರ್ಯಕ್ಕೆ ತಡೆವೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ರೈಲಿನಲ್ಲಿ ಕೋಟಿ-ಕೋಟಿ ಹಣ ಸಾಗಾಟ

Posted by Vidyamaana on 2024-04-09 10:55:05 |

Share: | | | | |


ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ರೈಲಿನಲ್ಲಿ ಕೋಟಿ-ಕೋಟಿ ಹಣ ಸಾಗಾಟ

ಚೆನ್ನೈ: ಲೋಕಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನ ತಿರುನೆಲ್ವೇಲಿಗೆ ರೈಲಿನಲ್ಲಿ ತೆರಳುತ್ತಿದ್ದ ಮೂವರಿಂದ ಫ್ಲೈಯಿಂಗ್‌ ಸ್ಕ್ವಾಡ್‌ನ ಅಧಿಕಾರಿಗಳು 4 ಕೋಟಿ ರೊ. ನಗದು ವಶಪಡಿಸಿಕೊಂಡಿದ್ದಾರೆ.


ಈ ಮೂವರು ತಿರುನೆಲ್ವೇಲಿಯ ಬಿಜೆಪಿ ಅಭ್ಯರ್ಥಿ ನೈನಾರ್‌ ನಾಗೇಂದ್ರನ್‌ ಅವರ ಬೆಂಬಲಿಗರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಮೂವರು ಎಗ್ಮೋರ್‌ನಿಂದ ತಿರುನೆಲ್ವೇಲಿಗೆ ತೆರಳುತ್ತಿದ್ದರು. ತಾಂಬರಂ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ಪರಿಶೀಲಿಸಿದಾಗ ದಾಖಲೆಗಳಿಲ್ಲದ ನಗದು ಪತ್ತೆಯಾಗಿದೆ. ಈ ಕುರಿತು ಆದಾಯ ತೆರಿಗೆ ಇಲಾಖೆಯು ತನಿಖೆ ನಡೆಸಲಿದೆ ಎಂದು ಚುನಾವಣಾ ಅಧಿಕಾರಿಗಳು  ತಿಳಿಸಿದರು.

Recent News


Leave a Comment: