ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ವಿಸಿಟರ್​ ಪಾಸ್ ಅವಾಂತರ​: ಸ್ಪೀಕರ್ ಎದುರು ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್​ ಸಿಂಹ

Posted by Vidyamaana on 2023-12-13 21:29:16 |

Share: | | | | |


ವಿಸಿಟರ್​ ಪಾಸ್ ಅವಾಂತರ​: ಸ್ಪೀಕರ್ ಎದುರು ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್​ ಸಿಂಹ

ನವದೆಹಲಿ: ಇಂದು ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್​ ಕುರ್ಚಿಯತ್ತ ನುಗ್ಗಿದ ಇಬ್ಬರು ಕಿಡಿಗೇಡಿಗಳಲ್ಲಿ ಓರ್ವ ಸಂಸದ ಪ್ರತಾಪ್​ ಸಿಂಹ ಹೆಸರಲ್ಲಿ ವಿಸಿಟರ್​ ಪಾಸ್​ ಪಡೆದಿದ್ದು, ಈ ವಿಚಾರವಾಗಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರನ್ನು ಭೇಟಿ ಮಾಡಿರುವ ಪ್ರತಾಪ್​ ಸಿಂಹ ವಿವರಣೆ ನೀಡಿದ್ದಾರೆ.ಘಟನೆಯ ಬೆನ್ನಲ್ಲೇ ಇಂದು ಸಂಜೆ ಸ್ಪೀಕರ್​ ಕಚೇರಿಗೆ ತೆರಳಿದ ಪ್ರತಾಪ್​ ಸಿಂಹ, ಆರೋಪಿ ಸಾಗರ್​ ಶರ್ಮಾ ಅವರ ತಂದೆ ಶಂಕರ್​ ಲಾಲ್​ ಶರ್ಮಾ ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್​ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್​ ಪಾಸ್​ಗಾಗಿ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.


ಸಾಗರ್ ಶರ್ಮಾ, ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಇದನ್ನು ಹೊರತುಪಡಿಸಿ ಹೆಚ್ಚುವರಿ ಮಾಹಿತಿ ಇಲ್ಲ ಎಂದು ಸ್ಪೀಕರ್​ ಮುಂದೆ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ಇಂದು ಸದನದ ಒಳಗೆ ಕಲರ್​ ಗ್ಯಾಸ್​ ಕ್ಯಾನಿಸ್ಟರ್​ನಿಂದ ಗದ್ದಲ ಎಬ್ಬಿಸಿದ ಇಬ್ಬರು ಕಿಡಿಗೇಡಿಗಳನ್ನು ಸಾಗರ್​ ಶರ್ಮ ಮತ್ತು ಮನೋರಂಜನ್​ ಡಿ ಎಂದು ಗುರುತಿಸಲಾಗಿದೆ. ಇದರಲ್ಲಿ ಸಾಗರ್​ ಶರ್ಮಾ ಬಳಿ

ಪ್ರತಾಪ್​ ಸಿಂಹ ವಿಸಿಟರ್​ ಪಾಸ್​ ಪತ್ತೆಯಾಗಿದ್ದು, ಈ ವಿಚಾರವನ್ನು ಉಚ್ಛಾಟಿತ ಬಿಎಸ್​ಪಿ ಸಂಸದ ಡ್ಯಾನಿಶ್​ ಅಲಿ ಮಾಧ್ಯಮಗಳ ಮೂಲಕ ಬೆಳಕಿಗೆ ತಂದರು. ಬಳಿಕ ಪ್ರತಿಪಕ್ಷಗಳು ಪ್ರತಾಪ್​ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಗೆ ಕಾಂಗ್ರೆಸ್​ ಕಾರ್ಯಕರ್ತರು ಮುತ್ತಿಗೆ ಸಹ ಹಾಕಿದ್ದಾರೆ. ಮುತ್ತಿಗೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಕೃತ್ಯಕ್ಕೆ ಸಂಸದರೇ ನೇರ ಹೊಣೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಸಂಸದರ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಸದನದ ಒಳಗೆ ಗದ್ದಲ ಏರ್ಪಟ್ಟ ಸಂದರ್ಭದಲ್ಲೇ ಸಂಸತ್ತಿನ ಹೊರಭಾಗದಲ್ಲಿ ಓರ್ವ ಮಹಿಳೆ ಮತ್ತು ಯುವಕ ಕಲರ್ ಗ್ಯಾಸ್​ ಸಿಂಪಡಿಸಿ, ಘೋಷಣೆ ಕೂಗಿ

ಪ್ರತಿಭಟನೆ ನಡೆಸಿದರು. ಇವರನ್ನು ಅನ್ಮೋಲ್​ ಶಿಂಧೆ ಮತ್ತು ನೀಲಂ ಎಂದು ಗುರುತಿಸಲಾಗಿದೆ. ನಾಲ್ವರು ಸಹ ಒಬ್ಬರಿಗೊಬ್ಬರು ಪರಿಚಿತರು ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕದಲ್ಲಿದ್ದ ನಾಲ್ವರು ಸಂಚು ರೂಪಿಸಿದ್ದರು. ಈ ಸಂಚಿನಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದಾರೆ. ಇಬ್ಬರು ಸದನದ ಒಳಗೆ, ಮತ್ತಿಬ್ಬರು ಸಂಸತ್ತಿನ ಹೊರಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದರೆ, ಇನ್ನಿಬ್ಬರು ಶಂಕಿತರು ಪರಾರಿಯಾಗಿದ್ದಾರೆ. ಅವರಿಗಾಗಿ ತನಿಖಾ ಏಜೆನ್ಸಿಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.


ಐವರು ವ್ಯಕ್ತಿಗಳು ಗುರುಗ್ರಾಮ್‌ನಲ್ಲಿ ಲಲಿತ್ ಝಾ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದಲ್ಲಿ ಒಟ್ಟಿಗೆ ತಂಗಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಐವರ ಗುರುತು ದೃಢಪಟ್ಟಿದ್ದು, ಆರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.ಶಂಕರ್​ ಲಾಲ್​ ಶರ್ಮರ ಪುತ್ರ ಸಾಗರ್​ ಶರ್ಮ ಎಂಬಾತ ಮೈಸೂರು ಲೋಕಸಭಾ ಸಂಸದ ಪ್ರತಾಪ್​ ಸಿಂಹ ಹೆಸರಿನಲ್ಲಿ ಪಾಸ್​ ಪಡೆದು ಪ್ರೇಕ್ಷಕರ ಗ್ಯಾಲರಿಗೆ ಆಗಮಿಸಿದ್ದ. ಮತ್ತೊಬ್ಬ ಆರೋಪಿ ಮನೋರಂಜನ್​ ಡಿ ಮೈಸೂರಿನ ನಿವಾಸಿ. ಬೆಂಗಳೂರಿನ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಇ ವ್ಯಾಸಾಂಗ ಮಾಡಿದ್ದಾನೆ. ಇವರಿಬ್ಬರು ಪ್ರೇಕ್ಷಕರ ಗ್ಯಾಲರಿಯ ಚೇಂಬರ್​ನಿಂದ ಜಿಗಿದು ಸ್ಪೀಕರ್​ ಕುರ್ಚಿಯತ್ತ ನುಗ್ಗಿದರು. ತಕ್ಷಣ ಅವರನ್ನು ಅಲ್ಲಿಯೇ ಇದ್ದ ಕೆಲವು ಸಂಸದರು ಹಿಡಿದುಕೊಂಡರು.


ಸಂಸತ್ತಿನ ಹೊರಗಡೆ ಕಲರ್​ ಗ್ಯಾಸ್​ ಸಿಂಪಡಿಸಿ ಸರ್ಕಾರಿ ವಿರೋಧಿ ಘೋಷಣೆ ಕೂಗುತ್ತಿದ್ದ ನೀಲಂ ಎಂಬಾಕೆ, ಹರಿಯಾಣದ ಹಿಸರ್​ನಲ್ಲಿ ಪಿಜಿಯಲ್ಲಿ ವಾಸವಿದ್ದಳು. ಹರಿಯಾಣದ ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗುತ್ತಿದ್ದಳು. ಇನ್ನೊಬ್ಬ ಆರೋಪಿ ಅನ್ಮೋಲ್​ ಶಿಂಧೆ ಮಹಾರಾಷ್ಟ್ರ ಲಾತೂರ್ ಜಿಲ್ಲೆಯವನು. ನೀಲಂ ಅಥವಾ ಅನ್ಮೋಲ್ ಮೊಬೈಲ್ ಫೋನ್ ತಂದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಬಳಿ ಯಾವುದೇ ಬ್ಯಾಗ್ ಅಥವಾ ಗುರುತಿನ ಪುರಾವೆಯೂ ಇರಲಿಲ್ಲ. ಅವರು ತಾವಾಗಿಯೇ ಸಂಸತ್ತನ್ನು ತಲುಪಿದರು ಮತ್ತು ಯಾವುದೇ ಸಂಘಟನೆಯೊಂದಿಗೆ ತಮ್ಮ ಸಂಪರ್ಕವನ್ನು ನಿರಾಕರಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಮುಂದುವರಿದಿದೆ.


ಲೋಕಸಭೆ ಸ್ಪೀಕರ್​ ಹೇಳಿದ್ದೇನು?

ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು

BIG UPDATE: ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆ, ಸಾವಿರಾರು ಜನರನ್ನು ರಕ್ಷಿಸಿದ ಸೇನೆ

Posted by Vidyamaana on 2024-07-31 08:05:36 |

Share: | | | | |


BIG UPDATE: ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆ, ಸಾವಿರಾರು ಜನರನ್ನು ರಕ್ಷಿಸಿದ ಸೇನೆ

ವಯನಾಡ್: ವಯನಾಡ್ನ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಕನಿಷ್ಠ 143 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 130 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.ಮಂಗಳವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ವಯನಾಡ್ನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ ಕಾರಣ ಎನ್ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಅನೇಕ ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಪರಿಷತ್‌ ಚುನಾವಣೆ- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಸಭೆ

Posted by Vidyamaana on 2024-05-27 21:31:18 |

Share: | | | | |


ಪರಿಷತ್‌ ಚುನಾವಣೆ- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಸಭೆ

ಮಂಗಳೂರು: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಭೆ ಸೋಮವಾರ ನಗರದ ಡೊಂಗರಕೇರಿಯ ಕೆನರಾ ಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ನಡೆಯಿತು.

ಸಭೆಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ ಓರ್ವ ನುರಿತ ರಾಜಕಾರಣಿ. ಅವರ ಮಾತುಗಳು ಕೇಳಿದ್ರೆ ಅವರು ಬಾಲ್ಯದಲ್ಲಿ ಸ್ವಯಂ ಸೇವಕ ಆಗಿರಬೇಕು ಅನಿಸುತ್ತದೆ. ಡಾ.ಧನಂಜಯ ಸರ್ಜಿ ಹೊಟ್ಟೆ ಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ. ಅವರು ಮಾಡಿರುವ ಸೇವೆಯ ಕಾರಣಕ್ಕೆ ಜನರು ಅವರನ್ನು ಗುರುತಿಸಿದ್ದಾರೆ ಎಂದರು.

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ ರಾಷ್ಟ್ರಪತಿ ಆಡಳಿತ ಜಾರಿ?

Posted by Vidyamaana on 2023-06-30 10:14:38 |

Share: | | | | |


ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ ರಾಷ್ಟ್ರಪತಿ ಆಡಳಿತ ಜಾರಿ?

ಮಣಿಪುರ: ಕಳೆದ 58 ದಿನಗಳಿಂದ ಹಿಂಸಾಚಾರದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ನಿಲ್ಲದಿದ್ದರೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡುವಂತೆ ಎಲ್ಲಾ ವಿರೋಧ ಪಕ್ಷಗಳು ಒತ್ತಡ ಹೇರುತ್ತಿವೆ. ಮಣಿಪುರ ಕಳೆದ 58 ದಿನಗಳಿಂದ ಹಿಂಸಾಚಾರದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ.ಹಿಂಸಾಚಾರ ನಿಲ್ಲದಿದ್ದರೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡುವಂತೆ ಎಲ್ಲಾ ವಿರೋಧ ಪಕ್ಷಗಳು ಒತ್ತಡ ಹೇರುತ್ತಿವೆ. ಈ ಮಧ್ಯೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮಧ್ಯಾಹ್ನ 3 ಗಂಟೆಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿ ರಾಜಿನಾಮೆ ನೀಡಲಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು ಎರಡು ತಿಂಗಳ ಕಾಲ ಅಶಾಂತಿ ನೆಲೆಸಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸುವಲ್ಲಿ ವಿಫಲರಾಗಿರುವ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಭೇಟಿ ನೀಡಿದ ಎರಡನೇ ದಿನದಂದು ರಾಜ್ಯಪಾಲರನ್ನು ಭೇಟಿಯಾದರುಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಮಣಿಪುರದಲ್ಲಿ ಶಾಂತಿ ನೆಲೆಸುವ ಅಗತ್ಯವಿದೆ ಎಂದು ಹೇಳಿದರು. ಬಿರೇನ್ ಸಿಂಗ್ ಮೂರು ಗಂಟೆಗೆ ರಾಜ್ಯಪಾಲರನ್ನು ಭೇಟಿ ಸಾಧ್ಯತೆ! ಮಣಿಪುರದ ಇತ್ತೀಚಿನ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಬೇಕಿತ್ತು.


ಆದರೆ ಇದೀಗ ಎನ್ ಬಿರೇನ್ ಸಿಂಗ್ ಅವರು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ವರದಿಯ ಪ್ರಕಾರ, ಬಿರೇನ್ ಸಿಂಗ್ ಅವರಿಗೆ ರಾಜೀನಾಮೆ ನೀಡಲು ಅಥವಾ ಕೇಂದ್ರವು ಮಧ್ಯಪ್ರವೇಶಿಸಿ ಅಧಿಕಾರ ವಹಿಸಿಕೊಳ್ಳುವ ಆಯ್ಕೆಯನ್ನು ನೀಡಲಾಯಿತು. ಇದಾದ ನಂತರ ಮುಖ್ಯಮಂತ್ರಿಗೆ ರಾಜೀನಾಮೆ ನೀಡದೆ ಬೇರೆ ದಾರಿಯೇ ಇಲ್ಲದಂತಾಗಿದೆ. ಮೇ 3ರಿಂದ ಹಿಂಸಾಚಾರ ಮಣಿಪುರದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮೇ 3ರಂದು ಬುಡಕಟ್ಟು ಕುಕ್ಕಿ ಸಮುದಾಯಮೆರವಣಿಗೆಯನ್ನು ಆಯೋಜಿಸಿತ್ತು.

ಅದರ ನಂತರ ಹಿಂಸಾಚಾರ ಪ್ರಾರಂಭವಾಯಿತು. ರಾಜ್ಯದ ಜನಸಂಖ್ಯೆಯ ಶೇಕಡಾ 53ರಷ್ಟಿರುವ ಮೈತೇಯಿ ಸಮುದಾಯವು ಮುಖ್ಯವಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದೆ. ಅದೇ ಸಮಯದಲ್ಲಿ, ನಾಗಾ ಮತ್ತು ಕುಕಿಯಂತಹ ಬುಡಕಟ್ಟು ಸಮುದಾಯಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದೆ ಮತ್ತು ಮುಖ್ಯವಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ

ಮಾಜಿ ಸಚಿವ ಎಸ್‌ ಅಂಗಾರ ಅವರ ನಿವಾಸಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Posted by Vidyamaana on 2024-03-20 15:37:58 |

Share: | | | | |


ಮಾಜಿ ಸಚಿವ ಎಸ್‌ ಅಂಗಾರ ಅವರ ನಿವಾಸಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

ಸುಳ್ಯ: ಮಾಜಿ ಸಚಿವ ಎಸ್ ಅಂಗಾರ ಅವರ ನಿವಾಸಕ್ಕೆ ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ನೀಡಿ ಆಶೀರ್ವಾದ ಪಡೆದರು.

ಎಸ್.ಅಂಗಾರರವರ ದೊಡ್ಡತೋಟ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ,ಮುಖಂಡರಾದ ಹರೀಶ್ ಕಂಜಿಪಿಲಿ, ಎ.ವಿ. ತೀರ್ಥರಾಮ ಮತ್ತಿತರರು ಉಪಸ್ಥಿತರಿದ್ದರು.

ನೇಣು ಬಿಗಿದುಕೊಂಡು ರೌಡಿ ಶೀಟರ್ ಅರುಣ್ ಆತ್ಮಹತ್ಯೆ

Posted by Vidyamaana on 2024-04-07 19:26:58 |

Share: | | | | |


ನೇಣು ಬಿಗಿದುಕೊಂಡು ರೌಡಿ ಶೀಟರ್ ಅರುಣ್ ಆತ್ಮಹತ್ಯೆ

ಬೆಂಗಳೂರು : ನೇಣು ಬಿಗಿದುಕೊಂಡು ರೌಡಿ ಶೀಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ದಿನ್ನೂರಿನಲ್ಲಿ ನಡೆದಿದೆ. ಅರುಣ್ ಅಲಿಯಾಸ್ ಚಿನ್ನಿ(28) ಆತ್ಮಹತ್ಯೆಗೆ ಶರಣಾದ ರೌಡಿ ಶೀಟರ್ ಆಗಿದ್ದು, 2019ರಲ್ಲಿ ಲೋಕನಾಥ್ ಎಂಬಾತನ ಕೊಲೆ ಪ್ರಕರಣದಲ್ಲಿ ಅರುಣ್‌ ಜೈಲುಪಾಲಾಗಿದ್ದ.ನಂತರ ಜಾಮೀನಿನ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಇತ್ತೀಚಿಗೆ ಅರುಣ್ ಮಾನಸಿಕ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ.

Recent News


Leave a Comment: