ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸುದ್ದಿಗಳು News

Posted by vidyamaana on 2024-07-25 16:43:22 |

Share: | | | | |


ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

 ಮುಂಬೈ: ಇಂಜಿನಿಯರ್ ಒಬ್ಬರು ತಮ್ಮ ಕಾರನ್ನು ಅಟಲ್ ಸೇತುವಿನಲ್ಲಿ ನಿಲ್ಲಿಸಿ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಈ ದೃಶ್ಯ ಅಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೇತುವೆಯಿಂದ ಕೆಳಗೆ ಹಾರಿದವರನ್ನು ಡೊಂಬಿವಿಲಿಯ ಪಲ್ಲವ ನಗರದ ನಿವಾಸಿ ಕರ್ತುರಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಮಧ್ಯಾಹ್ನ 12.35ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಆಟಲ್ ಸೇತು ಬ್ರಿಡ್ಜ್ ಮೇಲೆ ಬಂದಿದ್ದು, ಸೇತುವೆ ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಟೋಲ್ ಕಂಟ್ರೋಲ್‌ ರೂಮ್‌ನವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನವಶೇವ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಕೂಡಲೇ ಎಂಟಿಹೆಚ್‌ಎಲ್‌ನಿಂದ ರಕ್ಷಣಾ ತಂಡ ಹಾಗೂ ಕರಾವಳಿ ಭದ್ರತಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ತೊಂದರೆಯಿಂದಲೇ ಶ್ರೀನಿವಾಸ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇವಲ ತನ್ನ ಪರ್ಸ್ ಮಾತ್ರ ಬಿಟ್ಟು ಶ್ರೀನಿವಾಸ್ ಸಮುದ್ರಕ್ಕೆ ಹಾರಿದ್ದಾರೆ. ಈ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಐಡಿ ಕಾರ್ಡ್ ಇತ್ತು. ಡೆತ್‌ನೋಟ್ ಆಗಲಿ, ಫೋನ್ ಆಗಲಿ ಕಾರಿನಲ್ಲಿ ಪತ್ತೆಯಾಗಿಲ್ಲ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮನ್ ಬಾಗ್ವಾನ್ ಹೇಳಿದ್ದಾರೆ.

ಬಿಟೆಕ್ ಮಾಡಿದ್ದ ಶ್ರೀನಿವಾಸ್ ಮುಂಬೈನ ಲೋಧಾದಲ್ಲಿ 2023ರಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಅರಬ್ ರಾಷ್ಟ್ರ ಕುವೈತ್‌ನಲ್ಲಿ ಕೆಲಸ ಮಾಡಿದ್ದರು. 2023ರಲ್ಲಿ ಮುಂಬೈಗೆ ವಾಪಸಾದ ಅವರು ಲೋಧಾ ಗ್ರೂಪ್‌ಗೆ ಕೆಲಸಕ್ಕೆ ಸೇರಿದ್ದರು. ಇದಾದ ನಂತರ ಇವರು ತಮ್ಮ ಪಾಲುದಾರರ ಜೊತೆಗೂಡಿ ಇಲೆಕ್ಟ್ರಿಕ್ ಕಂಟ್ರಾಕ್ಟ್ ಕೆಲಸ ಶುರು ಮಾಡಿದ್ದರು. ಶ್ರೀನಿವಾಸ್ ಪತ್ನಿಯಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ಶ್ರೀನಿವಾಸ್ ಈ ಹಿಂದೆಯೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಮಯಕ್ಕೆ ಸರಿಯಾಗಿ ಯಾರೋ ಪಾರು ಮಾಡಿದ್ದರಿಂದ ಅವರ ಜೀವ ಉಳಿದಿತ್ತು ಎಂದು ಪತ್ನಿ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ್ ಕಡೆಯದಾಗಿ ಸಂಬಂಧಿಕರೊಬ್ಬರ ಜೊತೆ ಮಾತನಾಡಿದ್ದು, ಈ ವೇಳೆ ಅವರು ಸಹಜವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದುವರೆಗೂ ನೀರಿಗೆ ಹಾರಿದ ಶ್ರೀನಿವಾಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಮೊದಲ ಪ್ರಕರಣ ಅಲ್ಲ ಈ ಹಿಂದೆ ಮಹಿಳಾ ವೈದ್ಯರೊಬ್ಬರು ಅಟಲ್ ಸೇತುವಿನಿಂದ ಕೆಳಗೆ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

 Share: | | | | |


ಬೆಳ್ತಂಗಡಿ : ಅನಾಥ ಶವ ಪತ್ತೆ; ಬ್ಯಾಗಿನಲ್ಲಿತ್ತು 6.65 ಲಕ್ಷ ರೂ. ನಗದು

Posted by Vidyamaana on 2023-05-15 04:22:54 |

Share: | | | | |


ಬೆಳ್ತಂಗಡಿ : ಅನಾಥ ಶವ ಪತ್ತೆ; ಬ್ಯಾಗಿನಲ್ಲಿತ್ತು  6.65 ಲಕ್ಷ ರೂ. ನಗದು

ಬೆಳ್ತಂಗಡಿ: ಉಜಿರೆ ದೂರವಾಣಿ ವಿನಿಮಯ ಕೇಂದ್ರದ ಸಮೀಪ ಶುಕ್ರವಾರ ವ್ಯಕ್ತಿಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.ಮಡಿಕೇರಿ ಕುಶಾಲನಗರ ಮೂಲದ ತಮ್ಮಯ್ಯ (55) ಉಜಿರೆಯಲ್ಲಿ ಬಹಳ ಸಮಯದಿಂದ ವಾಸವಿದ್ದರು. ಅವರು ಬಸ್‌ ತಂಗುದಾಣ, ಅಂಗಡಿಗಳು ಮುಚ್ಚಿದಾಗ ಅವುಗಳ ಮುಂಭಾಗದಲ್ಲಿ, ಬಿಎಸ್ಸೆನ್ನೆಲ್‌ ಕಚೇರಿ ಪಕ್ಕದಲ್ಲಿ ವಸತಿ ಹೂಡಿ ದಿನ ಕಳೆಯುತ್ತಿದ್ದರು.ಆದರೆ ಅವರ ವಾರಸುದಾರರ ಕುರಿತು ಈ ಪರಿಸರದ ಯಾರಿಗೂ ಮಾಹಿತಿ ಇಲ್ಲ. ಶುಕ್ರವಾರ ಸಂಜೆ ಇವರ ಮೃತದೇಹ ದೂರವಾಣಿ ವಿನಿಮಯ ಕೇಂದ್ರದ ಬಳಿ ಪತ್ತೆಯಾಗಿದೆ. ಈ ಬಗ್ಗೆ ಉಜಿರೆ ಬೆಳಾಲು ಘಟಕದ ಶೌರ್ಯ ವಿಪತ್ತು ಸ್ವಯಂಸೇವಕರಾದ ರವೀಂದ್ರ, ಸುಧೀರ್‌ ಹಾಗೂ ರಾಘವೇಂದ್ರ ಇವರು ತತ್‌ಕ್ಷಣ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

6.65 ಲಕ್ಷ ರೂ. ಹಣ ಪತ್ತೆ

ಪೊಲೀಸರ ಸಮ್ಮುಖದಲ್ಲಿ ಕುಟುಂಬದವರ ಪತ್ತೆಗಾಗಿ ವ್ಯಕ್ತಿಯ ಮೃತದೇಹದ ಬಳಿ ಇದ್ದ ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ಸುಮಾರು 6.65 ಲಕ್ಷ ರೂ. ಹಣ ಪತ್ತೆಯಾಗಿದೆ. ಇದನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ. ವ್ಯಕ್ತಿಯು ಕೂಲಿ ಕೆಲಸ ಮಾಡಿ ಸಂಗ್ರಹಿಸಲಾಗಿದ್ದ ಮೊತ್ತವಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಪತ್ತು ನಿರ್ವಹಣ ಯೋಜನಾಧಿಕಾರಿ ಜೈವಂತ ಪಟಗಾರ್‌ ಉಪಸ್ಥಿತರಿದ್ದು, ತಂಡದ ಸದಸ್ಯರಿಗೆ ನಿರ್ದೇಶನ ನೀಡಿದ್ದರು. ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌, ಮೇ 10 ರಂದು ಚುನಾವಣೆ, 13 ಕ್ಕೆ ಫಲಿತಾಂ

Posted by Vidyamaana on 2023-03-29 06:57:47 |

Share: | | | | |


ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌, ಮೇ 10 ರಂದು ಚುನಾವಣೆ, 13 ಕ್ಕೆ ಫಲಿತಾಂ

ವದೆಹಲಿ: ಹದಿನಾರನೇ ವಿಧಾನಸಭೆ ಕರ್ನಾಟಕ ರಾಜ್ಯ ವಿಧಾನಸಭೆಗೆ ಇಂದು ದಿನಾಂಕವನ್ನು ನಿಗದಿ ಮಾಡಲಾಗಿದೆ. ಒಟ್ಟು ಒಂದೇ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು. 

ಮೊದಲ ಹಂತದ ಚುನಾವಣಾ ಪ್ರಕ್ರಿಯೆ ವಿವರ ಹೀಗಿದೆ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: 20 ಏಪ್ರಿಲ್‌

ನಾಮಪತ್ರ ಪರಿಶೀಲನೆ ಕೊನೆಯ ದಿನ: 23 ಏಪ್ರಿಲ್‌

ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ: ಏಪ್ರಿಲ್‌ 24

ಮತದಾನ ನಡೆಯುವ ದಿನಾಂಕ: 10 ಮೇ

ಮೇ 13 ಕ್ಕೆ ಫಲಿತಾಂಶ

224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 5,21,76,579 ಕೋಟಿ ಮತದಾರರಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಮತದಾರರ ಸಂಖ್ಯೆ 5,21,73,599 ಇದೆ. ಈ ಪೈಕಿ ಪುರುಷ ಮತದಾರರ ಸಂಖ್ಯೆ - 2,62,42,561 ಹಾಗೂ ಮಹಿಳಾ ಮತದಾರರ ಸಂಖ್ಯೆ 2,59,26,319 ಇದೆ. ರಾಜ್ಯದಲ್ಲಿ ಅಂದಾಜು 4,699 ತೃತೀಯ ಲಿಂಗಿಗಳಿದ್ದು,ಮೊದಲ ಬಾರಿ ಮತದಾನ ಮಾಡುವವರ ಸಂಖ್ಯೆ (18+) - 9,17,241ಇದೆ ಒಟ್ಟು ಮತಗಟ್ಟೆಗಳು -58,282 ಇವೆ ಈ ಪೈಕಿ ನಗರ ಪ್ರದೇಶದಲ್ಲಿ 24,063 ಇವೆ. ಮಹಿಳೆಯರಿಂದ ನಿರ್ವಹಣೆ ಮಾಡುವ ಮತಗಟ್ಟೆಗಳ ಸಂಖ್ಯೆ 1320 ಹಾಗೂ ಗ್ರಾಮೀಣ ಭಾಗದಲ್ಲಿ ಇರುವ ಮತಗಟ್ಟೆಗಳು 34,219 ಹಾಗೂ ಮಾದರಿ ಮತಗಟ್ಟೆಗಳ ಸಂಖ್ಯೆ 240 ಇವೆ.

ಇದೇ ಮೊದಲ ಬಾರಿಗೆ 80 ವರ್ಷ ಅದಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನ ಮತದಾರರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. . ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯ ಒದಗಿಸಲಾಗುವುದು. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12,15,763 ಮಂದಿ ಮತದಾರರಿದ್ದಾರೆ. 16,976 ಮಂದಿ 100 ವರ್ಷ ಮೇಲ್ಪಟ್ಟವರಿದ್ದಾರೆ. 5.55 ಲಕ್ಷ ಅಂಗವಿಕಲರಿದ್ದು, ಈ ಪೈಕಿ ಮತದಾನ ಕೇಂದ್ರಕ್ಕೆ ಬರಲಾಗದೆ ಮನೆಯಲ್ಲೇ ಮತದಾನ ಬಯಸುವವರಿಗೆ ಆಯೋಗ ಸೌಲಭ್ಯ ಕಲ್ಪಿಸಲಿದೆ.

ಏಪ್ರಿಲ್ 26ರಂದು ರಾಜ್ಯದಲ್ಲಿ ಮತದಾನ; ಬ್ಯಾಂಕು,ಹೈಕೋರ್ಟ್ ನ್ಯಾಯಪೀಠಗಳಿಗೆ, ಕಚೇರಿಗಳಿಗೆ ರಜೆಯಾ? ಇಲ್ಲಿದೆ ಮಾಹಿತಿ

Posted by Vidyamaana on 2024-04-24 15:31:52 |

Share: | | | | |


ಏಪ್ರಿಲ್ 26ರಂದು ರಾಜ್ಯದಲ್ಲಿ ಮತದಾನ; ಬ್ಯಾಂಕು,ಹೈಕೋರ್ಟ್ ನ್ಯಾಯಪೀಠಗಳಿಗೆ, ಕಚೇರಿಗಳಿಗೆ ರಜೆಯಾ? ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್ 24: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ (Lok Sabha elections Phase 2 polling) ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕವೂ ಸೇರಿದಂತೆ 13 ರಾಜ್ಯಗಳಲ್ಲಿ ಶುಕ್ರವಾರ ಮತದಾರರು ಮತ ಚಲಾಯಿಸಲಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳೂ ಒಳಗೊಂಡಿವೆ. ಮತದಾನದ ದಿನದಂದು ಮತದಾನವನ್ನು ಕಡ್ಡಾಯವಾಗಿ ಮಾಡಬೇಕೆಂಬ ಅಲಿಖಿತ ನಿಯಮ ಇದೆ. ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಂದು ರಜೆ ಇರುತ್ತದೆ.

ಏಪ್ರಿಲ್ 26ರಂದು ಕರ್ನಾಟಕದಲ್ಲಿ ಯಾವುದಕ್ಕೆ ರಜೆ?

ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಏಪ್ರಿಲ್ 26, ಶುಕ್ರವಾರ ರಜೆ ಇರುತ್ತದೆ.

ಬ್ಯಾಂಕುಗಳಿಗೆ ರಜೆ

ಶಾಲೆ, ಕಾಲೇಜುಗಳಿಗೆ ರಜೆ

ಹೈಕೋರ್ಟ್ ನ್ಯಾಯಪೀಠಗಳಿಗೆ ರಜೆ

ಬಿಜೆಪಿ ಸದಸ್ಯತ್ವ ಪಡೆದ ದೇವದಾಸ್ ಕಾಪಿಕಾಡ್

Posted by Vidyamaana on 2024-09-04 22:02:50 |

Share: | | | | |


ಬಿಜೆಪಿ ಸದಸ್ಯತ್ವ ಪಡೆದ ದೇವದಾಸ್ ಕಾಪಿಕಾಡ್

ಮಂಗಳೂರು: ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ತುಳು ಕಲಾವಿದ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದರು.

ಮಂಗಳೂರಿನಲ್ಲಿ ದೇವದಾಸ್ ಕಾಪಿಕಾಡ್ ರವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ಸದಸ್ಯತ್ವ ಪಡೆದರು.

ICC ODI World Cup: ಟೀಂ ಇಂಡಿಯಾ ಪ್ರಕಟ - ಯಾರಿಗೆಲ್ಲಾ ಸಿಕ್ತು ಚಾನ್ಸ್??

Posted by Vidyamaana on 2023-09-05 15:31:58 |

Share: | | | | |


ICC ODI World Cup: ಟೀಂ ಇಂಡಿಯಾ ಪ್ರಕಟ - ಯಾರಿಗೆಲ್ಲಾ ಸಿಕ್ತು ಚಾನ್ಸ್??

ಮುಂಬೈ: ಅಕ್ಟೋಬರ್ 5ರಿಂದ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ಭಾರತ ತಂಡವನ್ನು ಅಂತಿಮಗೊಳಿಸಲಾಗಿದೆ. 15 ಜನರ ತಂಡವನ್ನು ಆಯ್ಕೆ ಮಾಡಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ತಂಡದ ಆಯ್ಕೆ ಬಗ್ಗೆ ಪ್ರಕಟಿಸಿದರು.


ಏಷ್ಯಾ ಕಪ್ ನಲ್ಲಿ ಆಡುತ್ತಿರುವ ತಂಡವೇ ಬಹುತೇಕ ಅಂತಿಮವಾಗಿದೆ. ವಿಶ್ವಕಪ್ ಗೆ 15 ಜನರ ತಂಡ ಪ್ರಕಟಿಸಬೇಕಾದ ಕಾರಣ 17 ಜನರ ಏಷ್ಯಾ ಕಪ್ ತಂಡದಲ್ಲಿದ್ದ ಯುವ ಆಟಗಾರರಾದ ತಿಲಕ್ ವರ್ಮಾ ಮತ್ತು ಕನ್ನಡಿಗ ಪ್ರಸಿಧ್ ಕೃಷ್ಣ ವಿಶ್ವಕಪ್ ಕೂಟಕ್ಕೆ ಸ್ಥಾನ ಪಡೆದಿಲ್ಲ.


ಕನ್ನಡಿಗ ಕೆ.ಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಕಳೆದ ಐಪಿಎಲ್ ವೇಳೆ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಹಲವು ತಿಂಗಳ ಚೇತರಿಕೆಯ ಬಳಿಕ ಏಷ್ಯಾ ಕಪ್ ಗೆ ಆಯ್ಕೆಯಾಗಿದ್ದರು. ಆದರೆ ಸರಿಯಾಗಿ ಫಿಟ್ ಆಗದ ಕಾರಣ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.ವಿಕೆಟ್ ಕೀಪರ್ ಕೋಟಾದಲ್ಲಿ ಕೆಎಲ್ ರಾಹುಲ್ ಮತ್ತು ಎಡಗೈ ಆಟಗಾರ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ಏಷ್ಯಾ ಕಪ್ ಗೆ ಬ್ಯಾಕಪ್ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್ ರನ್ನು ವಿಶ್ವಕಪ್ ನಿಂದ ಕೈಬಿಡಲಾಗಿದೆ.



ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮಾ, ಅನುಭವಿ ವಿರಾಟ್ ಕೊಹ್ಲಿ ಜೊತೆಗೆ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಹೊರತಾಗಿಯೂ ಸೂರ್ಯ ವಿಶ್ವಕಪ್ ಸ್ಕ್ಯಾಡ್ ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.



ಆಲ್ ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ.


ತಂಡದಲ್ಲಿ ಸ್ಪಿನ್ನರ್ ಗಳಾಗಿ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ನರ್ ಗಳಾಗಿದ್ದಾರೆ. ಏಷ್ಯಾಕಪ್ ನಲ್ಲಿ ಸ್ಥಾನ ಪಡೆಯದ ಅನುಭವಿ ಸ್ಪಿನ್ನರ್ ಗಳಾದ ಯುಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ವಿಶ್ವಕಪ್ ಗೂ ಅವಕಾಶ ಸಿಕ್ಕಿಲ್ಲ.


ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಇದ್ದಾರೆ.


ವಿಶ್ವಕಪ್ ಗೆ ಭಾರತ ತಂಡ


ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ  ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮತ್ತು ಮೊಹಮ್ಮದ್ ಸಿರಾಜ್.

ಅಜ್ಜನ ಮರಣ ಪತ್ರಕ್ಕೆ ಲಂಚ ; ಚೇಳ್ಯಾರು ಗ್ರಾಮ ಲೆಕ್ಕಿಗ ವಿಜಿತ್ ಲೋಕಾಯುಕ್ತ ಬಲೆಗೆ

Posted by Vidyamaana on 2023-11-24 15:47:57 |

Share: | | | | |


ಅಜ್ಜನ ಮರಣ ಪತ್ರಕ್ಕೆ ಲಂಚ ;  ಚೇಳ್ಯಾರು ಗ್ರಾಮ ಲೆಕ್ಕಿಗ ವಿಜಿತ್ ಲೋಕಾಯುಕ್ತ ಬಲೆಗೆ

ಮಂಗಳೂರು: ಮರಣ ದೃಡೀಕರಣ ಪತ್ರ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಚೇಳ್ಯಾರಿನಲ್ಲಿ ನಡೆದಿದೆ.

ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಯನ್ನು ಚೇಳ್ಯಾರು ಗ್ರಾಮ ಅಧಿಕಾರಿ ಶ್ರೀ ವಿಜಿತ್ ಎಂದು ಗುರುತಿಸಲಾಗಿದೆ.


ಘಟನೆ ವಿವರ: ದೂರುದಾರ ವ್ಯಕ್ತಿ ತನ್ನ ತಾಯಿಯ ಹೆಸರಿನಲ್ಲಿ ಮಂಗಳೂರಿನ ಚೇಳ್ಯಾರು ಗ್ರಾಮದಲ್ಲಿ 42 ಸೆಂಟ್ಸ್ ಜಾವವಿದ್ದು ಅದರಲ್ಲಿ ಐದು ಸೆಂಟ್ಸ್ ಜಾಗವನ್ನು ನೆರೆಮನೆವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದರು ಇದಕ್ಕೆ ಸಂಬಂಧಿಸಿ ಅಗತ್ಯ ದಾಖಲೆಗಳನ್ನು ಹಿಡಿದುಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದ ವೇಳೆ ಅಜ್ಜನ ಮರಣ ಪ್ರಮಾಣ ಪತ್ರ ಜೊತೆಗೆ ಸಂತತಿ ನಕ್ಷೆ ತರುವಂತೆ ಹೇಳಿದ್ದಾರೆ.


ಅದರಂತೆ ವ್ಯಕ್ತಿ ಕಳೆದ ಸಪ್ಟೆಂಬರ್ ತಿಂಗಳಲ್ಲಿ ಅಜ್ಜನ ಮರಣ ಪ್ರಮಾಣ ಪಾತ್ರ ಹಾಗೂ ಸಂತತಿ ನಕ್ಷೆ ಮಾಡಲು ಚೇಳ್ಯಾರು ಗ್ರಾಮ ಕರಣಿಕರ ಕಛೇರಿಯುಗೆ ತೆರಳಿ ಅರ್ಜಿ ಸಲ್ಲಿಸಿದ್ದಾರೆ. ಆ ಬಳಿಕ ಎರಡು ಮೂರೂ ಬಾರಿ ಕಚೇರಿಗೆ ತೆರಳಿ ಅರ್ಜಿಯ ವಿಚಾರವಾಗಿ ಗ್ರಾಮ ಆಡಳಿತ ಅಧಿಕಾರಿ ಶ್ರೀ ವಿಜಿತ್ ಅವರನ್ನು ವಿಚಾರಿಸಿದಾಗ ಯಾವುದೇ ಉತ್ತರ ಸಿಗಲಿಲ್ಲ ಆ ಬಳಿಕ ನವೆಂಬರ್ 20 ರಂದು ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ನಿಮ್ಮ ಅಜ್ಜನ ಮರಣ ದೃಡೀಕರಣ ಪತ್ರ ರೆಡಿ ಇದೆ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಬಂದು ತೆಗೆದುಕೊಳ್ಳಿ ಹಾಗೆಯೇ ಬರುವಾಗ ಹದಿನೈದು ಸಾವಿರ ರೂಪಾಯಿಗಳನ್ನು ತರುವಂತೆ ವಿಜಿತ್ ಹೇಳಿದ್ದಾರೆ ಇದಕ್ಕೆ ಪ್ರತಿಯಾಗಿ ಅರ್ಜಿದಾರ ವ್ಯಕ್ತಿ ತನ್ನ ಬಳಿ ಅಷ್ಟೊಂದು ದುಡ್ಡು ಇಲ್ಲ ಎಂದು ಹೇಳಿದ್ದಾರೆ ಆದರೆ ಅದಕ್ಕೆ ಪ್ರತಿಕ್ರಿಯಿಸಿದ ವಿಜಿತ್ ಇವತ್ತು ಆಗದಿದ್ದರೂ ಪರವಾಗಿಲ್ಲ ನಾಳೆಯಾದರೂ ತನ್ನ ಎಂದು ಹೇಳಿದ್ದಾರೆ.ಇದಾದ ಬಳಿಕ ನವೆಂಬರ್ 22 ರಂದು ಮತ್ತೆ ಗ್ರಾಮ ಕರಣಿಕರ ಕಚೇರಿಗೆ ತೆರಳಿ ಮರಣ ಪ್ರಮಾಣ ಪತ್ರ ಪಡೆಯಲು ಹೋದಾಗ ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಮರಣ ಪ್ರಮಾಣ ಪತ್ರ ನೀಡಿ ಹಣ ಕೊಡುವಂತೆ ಕೇಳಿಕೊಂಡಿದ್ದಾರೆ ಈ ವೇಳೆ ಇಷ್ಟೊಂದು ದುಡ್ಡು ನನ್ನ ಬಳಿ ಇಲ್ಲ ಸ್ವಲ್ಪ ಕಡಿಮೆ ಮಾಡಿ ಎಂದಿದ್ದಕ್ಕೆ ಎರಡು ಸಾವಿರ ಕಡಿಮೆ ಮಾಡಿ ಹದಿಮೂರು ಸಾವಿರ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ವಿಚಾರವನ್ನು ಲೋಕಾಯುಕ್ತ ಪೊಲೀಸರಿಗೆ ದೂರಿನ ಮೂಲಕ ನೀಡಿದ್ದು ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು ಇಂದು ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ತೆರಳಿದ್ದಾರೆ ಅದರಂತೆ ದೂರುದಾರ ವ್ಯಕ್ತಿ ಬೆಳಿಗ್ಗೆ ಕಚೇರಿಗೆ ತೆರಳಿ ಅಧಿಕಾರಿಗೆ ದುಡ್ಡು ನೀಡುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಲಂಚದ ನೀಡಿದ ಹಣವನ್ನು ವಶಪಡಿಸಿಕೊಂಡಿದ್ದಾರೆ.


ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಚಲುವರಾಜು ಬಿ. ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ. ಸುರೇಶ ಕುಮಾರ್ ಪಿ. ಕಾರ್ಯಾಚರಣೆಯಲ್ಲಿ ಇದ್ದರು.

Recent News


Leave a Comment: