ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ರೀಲ್ಸ್ ಮಾಡುವುದನ್ನು ವಿರೋಧಿಸಿದ್ದಕ್ಕೆ ಗಂಡನನ್ನೇ ಹತ್ಯೆ ಮಾಡಿದ ಪತ್ನಿ!

Posted by Vidyamaana on 2024-01-09 14:54:51 |

Share: | | | | |


ರೀಲ್ಸ್ ಮಾಡುವುದನ್ನು ವಿರೋಧಿಸಿದ್ದಕ್ಕೆ ಗಂಡನನ್ನೇ ಹತ್ಯೆ ಮಾಡಿದ ಪತ್ನಿ!

ಪಾಟ್ನಾ: ರೀಲ್ಸ್ ಮಾಡುವುದನ್ನು ವಿರೋಧಿಸಿದ್ದಕ್ಕೆ ಪತ್ನಿಯೊಬ್ಬಳು ಅಪ್ಪ- ಅಮ್ಮನೊಂದಿಗೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.ಈ ಘಟನೆ ಬಿಹಾರದ (Bihar) ಬೇಗುಸರಾಯ್‌ನಲ್ಲಿ (Begusarai) ನಡೆದಿದೆ. ಮಹೇಶ್ವರ್ ಕುಮಾರ್ ಸಾವನ್ನಪ್ಪಿದ ದುರ್ದೈವಿ. ಈ ವ್ಯಕ್ತಿ ಕೋಲ್ಕತ್ತಾದಲ್ಲಿ (Kolkata) ಕೂಲಿ ಕೆಲಸ ಮಾಡುತ್ತಿದ್ದರು.ಪತ್ನಿ ರಾಣಿಕುಮಾರಿಗೆ ರೀಲ್ಸ್ ಮಾಡುವ ಹುಚ್ಚಿತ್ತು. ಆದರೆ, ಪತಿ ಅದನ್ನು ವಿರೋಧಿಸಿದ್ದರು. ಹೀಗಾಗಿ ಕೋಪಗೊಂಡ ಪತ್ನಿಯು ತನ್ನ ತಂದೆ-ತಾಯಿಯೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.


ಫಫೌತ್ ಗ್ರಾಮದ ರಾಣಿ ಕುಮಾರಿ ಸುಮಾರು 7 ವರ್ಷಗಳ ಹಿಂದೆ ಮಹೇಶ್ವರ್ ನನ್ನ ಮದುವೆಯಾಗಿದ್ದರು. ಮಹೇಶ್ವರ್ ಕೆಲಸಕ್ಕೆ ಹೋಗುವ ವೇಳೆ ಫಫೌತ್ ಗ್ರಾಮದಲ್ಲಿನ ತನ್ನ ಅತ್ತೆಯ ಮನೆಗೆ ಹೋಗಿದ್ದರು ಎನ್ನಲಾಗಿದೆ. ಇನ್ಸ್ಟಾಗ್ರಾಂ ರೀಲ್ಸ್ ವಿಚಾರವಾಗಿ ಮಹೇಶ್ವರ್ ಮತ್ತು ರಾಣಿ ಕುಮಾರಿ ನಡುವೆ ವಾಗ್ವಾದ ನಡೆದಿತ್ತು. ಆಗ ಜಗಳ ವಿಕೋಪಕ್ಕೆ ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ

Posted by Vidyamaana on 2023-12-12 04:48:39 |

Share: | | | | |


ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ  ವಿದ್ಯುತ್ ವ್ಯತ್ಯಯ

ಪುತ್ತೂರು: ಮಾಣಿ ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಹಾಗೂ 110/33/11ಕೆವಿ ಮಾಡಾವು ವಿದ್ಯುತ್‌ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.12 ರಂದು ಮಂಗಳವಾರ ಪೂರ್ವಾಹ್ನ 10:00 ರಿಂದ ಸಾಯಂಕಾಲ 5:00 ವರೆಗೆ  ಮಾಡಾವು-ಕಾವು-ಸುಳ್ಯ, 33ಕೆವಿ ಮಾಡಾವು-ಬೆಳ್ಳಾರೆ ಮತ್ತು 33 ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು ವಿದ್ಯುತ್ ಮಾರ್ಗ ಹಾಗೂ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ವಿದ್ಯುತ್ ಮಾರ್ಗಗಳ ವಿದ್ಯುತ್‌ ನಿಲುಗಡೆ ಮಾಡಲಾಗುವುದು.


ಆದ್ದರಿಂದ 110/33/11ಕೆವಿ ಮಾಡಾವು. 33/11ಕೆವಿ ಸುಳ್ಯ, ಬೆಳ್ಳಾರೆ, ಗುತ್ತಿಗಾರು ಮತ್ತು ಕಾವು ವಿದ್ಯುತ್ “ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡಗರ್‌ಳು ಮತ್ತು 33/11ಕೆವಿ ಕುಂಬ್ರ ವಿದ್ಯುತ್‌ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಬೆಳ್ಳಾರೆ :ಎನ್‌ಐಎ ಅಧಿಕಾರಿಗಳ ತಂಡ ಮನೆಯೊಂದಕ್ಕೆ ದಿಢೀ‌ರ್ ದಾಳಿ

Posted by Vidyamaana on 2024-03-05 10:14:24 |

Share: | | | | |


ಬೆಳ್ಳಾರೆ :ಎನ್‌ಐಎ ಅಧಿಕಾರಿಗಳ ತಂಡ ಮನೆಯೊಂದಕ್ಕೆ ದಿಢೀ‌ರ್ ದಾಳಿ

ಬೆಳ್ಳಾರೆ, ಮಾ. 05. ಎನ್‌ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರದಂದು ಬೆಳ್ಳಂಬೆಳಗ್ಗೆ ನಡೆದಿದೆ.ಎನ್‌ಐಎ ಅಧಿಕಾರಿಗಳ ತಂಡವು ಮನೆಯೊಂದಕ್ಕೆ ದಿಢೀ‌ರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದ್ದು, . ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ

Posted by Vidyamaana on 2023-06-22 00:55:18 |

Share: | | | | |


ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಿದ್ದಾರೆ. ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ ಆಗಿರುವ ಸಂಗತಿಯನ್ನು ಚರ್ಚಿಸಿದರು.ಇದು ಸೌಹಾರ್ದ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ರಾಜ್ಯದ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಪ್ರಮುಖವಾಗಿ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. " ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು" ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಬೆಳಗ್ಗೆ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಚರ್ಚಿಸುವುದಾಗಿ ಅಮಿತ್ ಶಾ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಗೃಹ ಸಚಿವರಿಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಸಂಕ್ರಾಂತಿ ಕೋಳಿ ಕಾಳಗ ನೋಡಲು ನೂಕುನುಗ್ಗಲು- ವಿದೇಶದಿಂದಲೂ ಆಗಮನ!

Posted by Vidyamaana on 2024-01-31 10:31:16 |

Share: | | | | |


ಸಂಕ್ರಾಂತಿ ಕೋಳಿ ಕಾಳಗ ನೋಡಲು ನೂಕುನುಗ್ಗಲು- ವಿದೇಶದಿಂದಲೂ ಆಗಮನ!

ಆಂಧ್ರಪ್ರದೇಶ): ಸಂಕ್ರಾಂತಿ ಪ್ರಯುಕ್ತ ಆಂಧ್ರಪ್ರದೇಶದ ಉಭಯ ಗೋದಾವರಿ ಜಿಲ್ಲೆ ಸೇರಿದಂತೆ ವಿವಿಧೆಡೆ ನಡೆದ ವಾರ್ಷಿಕ ಕೋಳಿ ಕಾಳಗದಲ್ಲಿ ಭಾಗವಹಿಸಲು (ಪಂಟರ್‌) ಮತ್ತು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಂ ಸನಿಹದ ಪೆದಮೀರಂ ಹಳ್ಳಿಯಲ್ಲಿ ಹೊರರಾಜ್ಯಗಳಿಂದ ಬಂದಿದ್ದ ಕಾರುಗಳು ಸಾಲುಗಟ್ಟಿದ್ದವು.ಅವರೆಲ್ಲ ಕೋಳಿ ಕಾಳಗ ನೋಡಲು ಬಂದವರು. ಅಲ್ಲಿ ನೆರೆದವರಲ್ಲಿ ಹಬ್ಬಕ್ಕೆಂದು ವಿದೇಶದಿಂದ ಹಾರಿಬಂದಿದ್ದವರೂ ಇದ್ದರು. ಈ ಸಮಯದಲ್ಲಿ ಕೋಟ್ಯಂತರ ರೂಪಾಯಿಯ ವ್ಯವಹಾರ ನಡೆಯುತ್ತದೆ. 


ಸಾವಿರಕ್ಕೂ ಹೆಚ್ಚು ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಜೂಜುಕೋರರ ನೆರವಿಗೆ ಕಾರ್ಡ್ ಸ್ವೈಪಿಂಗ್ ಯಂತ್ರ, ಹಣ ಎಣಿಸುವ ಯಂತ್ರಗಳನ್ನೂ ತರಲಾಗಿತ್ತು. ಉಪಹಾರವೂ ಸೇರಿದಂತೆ ಮಾಂಸಾಹಾರದ ಭೋಜನ ವ್ಯವಸ್ಥೆ ಮಾಡಲಾಗಿತ್ತು. 


ಅಲ್ಲಿ ಕೋಳಿ ಕಾಳಗದ ಜೊತೆಗೆ ಇಸ್ಪೀಟ್ ಮತ್ತಿತರ ಜೂಜುಗಳನ್ನೂ ಆಡಲಾಗುತ್ತಿತ್ತು. ಅಲ್ಲಿಗೆ ಅರ್ಧ ಕಿಲೋಮೀಟರ್ ದೂರದ ಜುವ್ವಲಪಾಲೇಂ ಎಂಬಲ್ಲಿಯೂ ಸಣ್ಣದೊಂದು ಕೋಳಿ ಕಾಳಗ ಮತ್ತಿತರ ಜೂಜಾಟ ನಡೆಯುತ್ತಿತ್ತು. ಜೂಜುಕೋರರು ಮತ್ತು ಪ್ರೇಕ್ಷಕರ ಪೈಕಿ ಹೆಚ್ಚಿನವರು ಗಂಡಸರೇ ಆಗಿದ್ದರೂ ಕೆಲವು ಮಹಿಳೆಯರು, ಮಕ್ಕಳೂ ಕೂಡ ಸಂಕ್ರಾಂತಿ ಹಬ್ಬದ ವಿಶೇಷ ಕೋಳಿ ಕಾಳಗ ನೋಡಲು ಬಂದಿದ್ದರು. ಕೋಳಿ ಕಾಳಗ, ಜೂಜಾಟಗಳು ಉಭಯ ಗೋದಾವರಿ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲ, ಆಂಧ್ರದ ಕೃಷ್ಣಾ, ಎನ್‌ಟಿಆರ್ ಮತ್ತಿತರ ಜಿಲ್ಲೆಗಳಲ್ಲಿಯೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮೂರು ದಿನಗಳವರೆಗೆ ನಡೆಯುತ್ತವೆ.

ಉಡುಪಿಯಲ್ಲೊಂದು ಸ್ಪೆಷಲ್ ಮದುವೆ ; ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ವಧು-ವರ; ಮಂಟಪದಲ್ಲೇ ನಡೆಯಿತು ಕೋಳಿ ಅಂಕ

Posted by Vidyamaana on 2023-12-13 11:27:12 |

Share: | | | | |


ಉಡುಪಿಯಲ್ಲೊಂದು ಸ್ಪೆಷಲ್ ಮದುವೆ ; ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ವಧು-ವರ; ಮಂಟಪದಲ್ಲೇ ನಡೆಯಿತು ಕೋಳಿ ಅಂಕ

ಉಡುಪಿಯಲ್ಲಿ ನಡೆದ ಸ್ಪೆಷಲ್ ಮದುವೆಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಜೆಸಿಬಿಯಲ್ಲಿ ಮದುವೆ ಹಾಲ್ ಗೆ ಎಂಟ್ರಿ ಕೊಟ್ಟ ವಧು-ವರರು ಅಲ್ಲೇ ಮಂಟಪದಲ್ಲೇ ಕೋಳಿ ಅಂಕ ನಡೆಸಿದ್ದಾರೆ.


ಅಂದ್ದಾಗೆ ಇಂತಹ ಸ್ಪೆಷಲ್ ಮ್ಯಾರೇಜ್ ನಡೆದಿರೋದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ. ಇಲ್ಲಿನ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭ ಎಲ್ಲಾ ಮದುವೆಗಳಿಂದ ವಿಭಿನ್ನವಾಗಿ ನಡೆದಿದೆ. ಇದಕ್ಕೆಲ್ಲಾ ಕಾರಣ ಅವರ ಸ್ನೇಹಿತರು ಎನ್ನಲಾಗಿದೆ.


ಗೆಳೆಯನ ಮದುವೆಯನ್ನು ವಿಭಿನ್ನವಾಗಿ ಮಾಡಬೇಕೆಂದು ಮಿಥುನ್ ಸ್ನೇಹಿತರೇ ಆ ಪರಿಸರಕ್ಕೆ ಹೊಸದಾದ ಕೆಲವು ಪರಿಕಲ್ಪನೆಯನ್ನು ಅನಾವರಣ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆ ಹಾಲ್‌ಗೆ ವಧು-ವರರನ್ನು ಕಾರ್‌ನಲ್ಲಿ ಕರೆತರುತ್ತಾರೆ. ಆದರೆ ಮಿಥುನ್ ಮತ್ತು ಪೂಜಾ ಜೋಡಿ ಬಂದಿದ್ದು ಜೆಸಿಬಿಯಲ್ಲಿ. ಜೆಸಿಬಿಯ ಮುಂದಿನ ಕೊಕ್ಕೆಯಲ್ಲಿ ಕುಳ್ಳಿರಿಸಿ ಜೋಡಿಯನ್ನು ಮದುವೆ ಹಾಲ್‌ನತ್ತ ಕರೆ ತರಲಾಗಿದೆ. ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಮುಂಭಾಗಕ್ಕೆ ಜೊಡಿಸಿ ಅದರಲ್ಲಿ ವರವಧು ಕುಳಿತು ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.


ಇದು ಮದುವೆಗೆ ಬಂದಿದ್ದ ಎಲ್ಲರ ಮೊಗದಲ್ಲಿ ನಗು ತಂದಿದೆ. ಮದುವೆಗೆ ಜೆಸಿಬಿ ಬಳಸಿದ್ದೇ ವಿಭಿನ್ನವಾಗಿದೆ ಎಂದು ಮದುವೆಗೆ ಬಂದವರು ಮಾತನಾಡಿಕೊಳ್ಳುತ್ತಿರುವಾಗಲೇ ಮತ್ತೊಂದು ವಿಭಿನ್ನವಾದ ಘಟನೆ ಮಿಥುನ್ ಮತ್ತು ಪೂಜಾ ಜೋಡಿ ಮದುವೆಯಲ್ಲಿ ನಡೆದಿದೆ. ಇನ್ನು ಮದುವೆ ಶಾಸ್ತ್ರಗಳು ಮಗಿಯುತ್ತಿದ್ದಂತೆ ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಮದುವೆ ಮಂಟಪದಲ್ಲೇ ಕಾಳಗ ಮಾಡಿಸಿದ್ದಾರೆ. ವಧು ಕಡೆಯಿಂದ ಒಂದು ಕೋಳಿಯನ್ನು ಹಾಗೂ ವರನ ಕಡೆಯಿಂದ ಒಂದು ಕೋಳಿಯನ್ನು ಮದುವೆ ಮಂಟಪದಲ್ಲೇ ಕೋಳಿ ಅಂಕಣಕ್ಕೆ ಇಳಿಸಲಾಗಿದೆ. ವರ ಮಿಥುನ್‌ಗೆ ಕೋಳಿ ಅಂಕಕ್ಕೆ ಹೋಗುವ ಹವ್ಯಾಸವಿದ್ದು, ಅದಕ್ಕಾಗಿ ಗೆಳೆಯರು ಈ ಅಚ್ಚರಿ ಕೊಟ್ಟಿದ್ದಾರೆ. ಸದ್ಯ ಬ್ರಹ್ಮಾವರದ ಈ ವಿಭಿನ್ನ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

Recent News


Leave a Comment: