ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಪತಿಯ ಕೊಲೆಗೆ 10 ಸಾವಿರ ರೂಪಾಯಿ ಸುಪಾರಿ ಕೊಟ್ಟ ಪತ್ನಿ

Posted by Vidyamaana on 2023-10-06 07:03:47 |

Share: | | | | |


ಪತಿಯ ಕೊಲೆಗೆ 10 ಸಾವಿರ ರೂಪಾಯಿ ಸುಪಾರಿ ಕೊಟ್ಟ ಪತ್ನಿ

ಕಾರವಾರ: ಗಂಡನ ಸ್ನೇಹಿತನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಮಹಿಳೆಯೊಬ್ಬಳು ಕೊನೆಗೂ ಅಂದರ್​ ಆಗಿದ್ದಾಳೆ. ಪ್ರಿಯಕರನಿಗೆ ಕೇವಲ 10 ಸಾವಿರ ಸುಪಾರಿ ಕೊಟ್ಟು ತನ್ನ ಗಂಡನನ್ನು ಕುಮಟಾದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿಸಿರುವ ಪ್ರಕರಣವನ್ನು ಕುಮಟಾ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


ಸೆ.30 ರಂದು ಕುಮಟಾ ತಾಲೂಕಿನ ದೇವಿಮನೆ ಘಟ್ಟದ ದೇವಸ್ಥಾನವೊಂದರ ಹಿಂಬದಿ ಪ್ರದೇಶದಲ್ಲಿ ಅಪರಿಚಿತ ಶವವೊಂದು ಪತ್ತೆಯಾದಾಗ, ಕುಮಟಾ ಪೊಲೀಸರು ತೆರಳಿ ಪರಿಶೀಲಿಸಿದ್ದರು. ಸುಮಾರು 35 ರಿಂದ 40 ವರ್ಷದ ಪುರುಷನನ್ನು ಯಾರೋ ಕೊಲೆ ಮಾಡಿ ದೇಹವನ್ನು ಎಸೆದು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.


ಇನ್ನು ಶವದ ಗುರುತಿನ ಪತ್ತೆಗೆ ಕುಮಟಾ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಪತ್ತೆಗೆ ಮುಂದಾದಾಗ ಯಾವ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಮೃತ ವ್ಯಕ್ತಿಯ ಕಿಸೆಯಲ್ಲಿ ಮಂಗಳೂರಿನಿಂದ ಶಿರಸಿಗೆ ಕೆಎಸ್ಆರ್ ಟಿಸಿ ಬಸ್​ನಲ್ಲಿ ಪ್ರಯಾಣಿಸಿದ ಟಿಕೆಟ್​ದಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಯಿತು.


ಕೊನೆಗೆ ಕುಮಟಾ ಪೊಲೀಸರು ಬೇರೆ ಜಿಲ್ಲೆಯಲ್ಲಿನ ನಾಪತ್ತೆ ಪ್ರಕರಣಗಳ ಪತ್ತೆಗೆ ಮುಂದಾದಾಗ ಬಾಗಲಕೋಟೆ ಜಿಲ್ಲೆಯ ಹೊಸೂರು ಗ್ರಾಮದ ಬಶೀರಸಾಬ್ ಎಂಬ ವ್ಯಕ್ತಿಯು ನಾಪತ್ತೆಯಾಗಿದ್ದು, ಆತನ ಶವ ಪತ್ತೆಯಾಗಿರುವುದು ಗೊತ್ತಾಗಿತ್ತು. ಪೊಲೀಸರು ಮೃತ ಬಶೀರಸಾಬ್​ನ ಊರಿನಲ್ಲಿ ವಿಚಾರಣೆ ಮಾಡಲು ಮುಂದಾದಾಗ ಆತನಿಗೂ ಮತ್ತು ಆತನ ಪತ್ನಿಗೂ ಆಗಾಗ್ಗೆ ಗಲಾಟೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು


ಈ ಬಗ್ಗೆ ಮೃತ ಬಶೀರಸಾಬ್ ಪತ್ನಿ ರಾಜಮಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಹಿಂದೆ ಆಕೆ ಇರುವುದು ಶಂಕೆ ವ್ಯಕ್ತವಾಗಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರ ಪರಶುರಾಮ್, ಆತನ ಸ್ನೇಹಿತ ರವಿ ಹಾಗೂ ಆದೇಶ ಕುಂಬಾರ ಸೇರಿಕೊಂಡು ಕೊಲೆ ಮಾಡಿಸಿರುವ ವಿಷಯವನ್ನು ಬಾಯ್ಬಿಟ್ಟಿದ್ದಳು. ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.


ಆರೋಪಿ ರಾಜಮಾಗೆ ಇಬ್ಬರು ಮಕ್ಕಳಿದ್ದು ಪತಿ ಬಶೀರಸಾಬ್ ಜೊತೆ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಬಶೀರಸಾಬ್ ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಬಾದಾಮಿ ತಾಲೂಕಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಕುರಿ ಮಾರಾಟ ಮಾಡಲು ಬಶೀರಸಾಬ್ ಸಹೋದರ ಖಾಸಿಂ ತೆರಳಿದ್ದ ವೇಳೆ ಆರೋಪಿ ಪರಶುರಾಮನ ಪರಿಚಯ ಆಗಿತ್ತು.


ಖಾಸಿಂ ಪರಿಚಯದ ಮೇಲೆ ಆರೋಪಿ ಪರಶುರಾಮ್ ಬಶೀರಸಾಬ್ ಮನೆಗೆ ಬಂದಾಗ ಆತನ ಹೆಂಡತಿ ರಾಜಮಾಳನ್ನು ಪರಿಚಯ ಮಾಡಿಕೊಂಡಿದ್ದ. ರಾಜಮಾ ಹಾಗೂ ಪರಶುರಾಮ್ ಇಬ್ಬರದ್ದು ಒಂದೇ ಊರಾಗಿದ್ದರಿಂದ ಪರಿಚಯ ನಂತರ ಪ್ರೇಮಕ್ಕೆ ತಿರುಗಿತ್ತು.


ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಪ್ರಾರಂಭವಾಗಿ ಈ ವಿಷಯ ಪತಿ ಬಶೀರಸಾಬ್ ಗೆ ಸಹ ತಿಳಿದಿತ್ತು. ಬಶೀರ್ ಸಾಬ್ ಹೆಂಡತಿ ರಾಜಮಾ ಜೊತೆ ಗಲಾಟೆ ಮಾಡಿಕೊಳ್ಳಲು ಪ್ರಾರಂಭ ಮಾಡಿದ್ದನು. ಆತನ ಪತ್ನಿ ರಾಜಮಾ ತನ್ನ ತವರು ಮನೆಗೆ ಬಂದು ಉಳಿದಿದ್ದಳು. ಸೆ.26ರಂದು ಪ್ರಿಯಕರ ಪರಶುರಾಮನನ್ನು ಕರೆಯಿಸಿಕೊಂಡಿದ್ದ ರಾಜಮಾ, 10 ಸಾವಿರ ರೂಪಾಯಿ ಹಣವನ್ನು ನೀಡಿ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಳು.


ಪರಶುರಾಮ್ ಬಶೀರಸಾಬ್​ನನ್ನು ಪ್ರವಾಸಕ್ಕೆಂದು ತನ್ನ ಸ್ನೇಹಿತ ರವಿ ಮತ್ತು ಆದೇಶ ಎನ್ನುವವರ ಜೊತೆ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಸೆ.29ರಂದು ಮಂಗಳೂರು ಪ್ರವಾಸ ಮುಗಿಸಿ ವಾಪಸ್ ಬರುವಾಗ ದೇವಿಮನೆ ಘಟ್ಟದಲ್ಲಿ ಬಸ್​​ನಿಂದ ಇಳಿದಿದ್ದರು. ದೇವಸ್ಥಾನದ ಹಿಂದೆ ಕುಡಿಯಲು ನಾಲ್ವರು ಕುಳಿತಿದ್ದು ಬಶೀರಸಾಬ್​ನಿಗೆ ಕುಡಿಸಿದ ನಂತರ ಉಳಿದ ಪರಶುರಾಮ್, ರವಿ ಹಾಗೂ ಆದೇಶ ಮೂರು ಜನ ಸೇರಿ ಬಶೀರಸಾಬ್ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಟಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.


ಕುಮಟಾ ಪೊಲೀಸ್​ ಠಾಣೆ ಸಿಪಿಐ ತಿಮ್ಮಪ್ಪ ನಾಯ್ಕ, ಪಿಎಸ್​​​ಐ ನವೀನ್ ನಾಯ್ಕ ಹಾಗೂ ಸಂಪತ್ ನೇತೃತ್ವದಲ್ಲಿ ಪೊಲೀಸ​ರ ತಂಡ ಕೆಲವೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ದಕ್ಷಿಣ ಕನ್ನಡದಲ್ಲಿ ಪ್ರಾಯೋಗಿಕವಾಗಿ ಸಿಡಿಲು ನಿರೋಧಕ ಯಂತ್ರಗಳ ಅಳವಡಿಕೆ : ಸಚಿವ ದಿನೇಶ್ ಗುಂಡೂರಾವ್

Posted by Vidyamaana on 2024-06-11 12:37:21 |

Share: | | | | |


ದಕ್ಷಿಣ ಕನ್ನಡದಲ್ಲಿ ಪ್ರಾಯೋಗಿಕವಾಗಿ ಸಿಡಿಲು ನಿರೋಧಕ ಯಂತ್ರಗಳ ಅಳವಡಿಕೆ : ಸಚಿವ ದಿನೇಶ್ ಗುಂಡೂರಾವ್

ಮಂಗಳೂರು :ಪುತ್ತೂರು, ಸುಳ್ಯ, ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ಸಂಭವಿಸಿದ 4-6 ಸ್ಥಳಗಳಲ್ಲಿ ಜಿಲ್ಲಾಡಳಿತ ಮಿಂಚು ನಿರೋಧಕಗಳನ್ನು ಅಳವಡಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಪುತ್ತೂರು, ಸುಳ್ಯ ಮತ್ತು ಸುಬ್ರಹ್ಮಣ್ಯವನ್ನು ಸಿಡಿಲು ಬಡಿದು ಹಾಟ್ಸ್ಪಾಟ್ ಎಂದು ಪರಿಗಣಿಸಲಾಗಿದ್ದು, ಈ ಪ್ರದೇಶಗಳಲ್ಲಿಯೂ ಸಿಡಿಲು ಹೊಡೆತದಿಂದ ಸಾವುಗಳು ಸಂಭವಿಸಿವೆ.ಹೀಗಾಗಿ, ಮಿಂಚು ನಿರೋಧಕಗಳನ್ನು ಅಳವಡಿಸುವ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

Posted by Vidyamaana on 2023-05-08 05:21:21 |

Share: | | | | |


ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

ಬೆಂಗಳೂರು; ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ 83.89 ಶೇಕಡಾ ಫಲಿತಾಂಶ ಬಂದಿದೆ. ನಾಲ್ಕು ವಿದ್ಯಾರ್ಥಿಗಳ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಚಿತ್ರದುರ್ಗ ಫಲಿಂತಾಶದಲ್ಲಿ ಪ್ರಥಮ ಸ್ಥಾನ ಪಡೆದ್ರೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

ಚಿತ್ರದುರ್ಗ ಜಿಲ್ಲೆ 96.80 ಶೇಕಡಾ ಫಲಿತಾಂಶ ಪಡೆದರೆ, ಮಂಡ್ಯ ಜಿಲ್ಲೆ 96.74 ಶೇಕಡಾ ಫಲಿತಾಂಶ ಪಡೆದಿದೆ.

ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

Posted by Vidyamaana on 2023-10-04 09:41:44 |

Share: | | | | |


ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

ವಿಟ್ಲ : ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ  ಸೂರಿಕುಮೇರಿನಲ್ಲಿ ಪಿಕಪ್ ವಾಹನವೊಂದು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯ ಮೇಲೆ ನಿಂತ ಘಟನೆ  ಅ 03 ರಂದು ಬುಧವಾರ ಮುಂಜಾನೆ ನಡೆದಿದೆ.


    ಸೂರಿಕುಮೇರ್ ಬದ್ರಿಯಾ ಜುಮಾ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆಯಲ್ಲಿ ತಮಿಳುನಾಡು ನೋಂದಾಯಿತ ಬಾಳೆಹಣ್ಣು ಸಾಗಾಟದ ಪಿಕಪ್ ವಾಹನವು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯೊಳಗೆ ನಿಂತಿದೆ, ನಿದ್ದೆಯ ಮಂಪರಿನಲ್ಲಿ ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

ಸುರತ್ಕಲ್: ಇನಾಯತ್ ಆಲಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆ

Posted by Vidyamaana on 2024-04-24 07:21:32 |

Share: | | | | |


ಸುರತ್ಕಲ್: ಇನಾಯತ್ ಆಲಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆ

ಮಂಗಳೂರು, ಎ.23: ನಾನೂ ಒಬ್ಬ ಹಿಂದು. ಹಿಂದೂ ಧರ್ಮದ ಆಚಾರ - ವಿಚಾರಗಳನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೇನೆ‌. ಹಿಂದೂ ಧರ್ಮ ನನಗೆ ಸಾಮರಸ್ಯದ ಬದುಕನ್ನು ಹೇಳಿಕೊಟ್ಟಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೈಕಂಪಾಡಿ ಎಪಿಎಂಸಿ ಮುಂಭಾಗ ಮಂಗಳವಾರ ಸಂಜೆ ಇನಾಯತ್ ಆಲಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ತುಳುನಾಡಿನ ಸಂಸ್ಕೃತಿ, ಗ್ರಾಮೀಣ ಸೊಗಡಿನ ಆಟಗಳು ಇವುಗಳ ಜೊತೆಗೆ ಈ ತುಳುನಾಡಿನಲ್ಲಿ ಮೆಡಿಕಲ್ ಹಬ್, ಶಿಕ್ಷಣ ಹಬ್ ಮಾಡಲು ಸಾಧ್ಯ. ಪ್ರವಾಸೋದ್ಯಮ ಬೆಳೆಸಲು ವಿಫುಲ ಅವಕಾಶಗಳಿವೆ. ಇದರಿಂದ ಉದ್ಯೋಗ ಸೃಷ್ಟಿ, ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಯುವಕರು ನಮ್ಮೂರಲ್ಲೇ ಉದ್ಯೋಗ ಪಡೆಯಲು ಸಾಧ್ಯ. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಬದಲು ಮಕ್ಕಳ ಜೊತೆಗಿದ್ದು ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಅಭಿವೃದ್ಧಿಯ ಜೊತೆ ಹೆತ್ತವರ ಕನಸೂ ಈಡೇರಲಿದೆ. ಮನೆ ಮನೆಗಳು ಗಟ್ಟಿಯಾದರೆ, ದೇಶ ಸಮೃದ್ಧವಾಗಲಿದೆ ಎಂದರು.


ಕಾಂಗ್ರೆಸ್ ಗೆಲ್ಲುವುದು ನಿಶ್ಚಯವಾಗುತ್ತಿದ್ದಂತೆ ಅಪಪ್ರಚಾರದ ಕೆಲಸ ನಡೆಯುತ್ತಿದೆ. ಇದಕ್ಕೆ ಕಿವಿ ಕೊಡಬೇಡಿ. ನೀವು ತಲೆತಗ್ಗಿಸುವ ಕೆಲಸವನ್ನು ತಾನೆಂದೂ ಮಾಡುವುದಿಲ್ಲ. ನೀವು ಪಟ್ಟ ಶ್ರಮ ವ್ಯರ್ಥವಾಗಬಾರದು. ಆದ್ದರಿಂದ ಮುಂದಿರುವ ಕೆಲವು ಗಂಟೆಗಳಷ್ಟು ಸಮಯ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ತುಳುನಾಡಿನ ಸಾಮರಸ್ಯದ ಗತವೈಭವ ಮರುಕಳಿಸಲಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬೈಕಂಪಾಡಿಯಲ್ಲಿ ನಡೆದಿರುವ ಪ್ರಚಾರ ಸಭೆ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರಾಮಾಣಿಕ, ಸಮರ್ಥ ಅಭ್ಯರ್ಥಿ. ಯಾವುದೇ ಕಳಂಕ ರಹಿತ ವ್ಯಕ್ತಿತ್ವ ಅವರದ್ದು. ಮತದಾನದ ಕೊನೆಕ್ಷಣದ ವರೆಗೂ ಕೆಲಸ ಮಾಡಿ, ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಿ ಎಂದರು

ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಹಾವು ಕಡಿತ

Posted by Vidyamaana on 2023-11-16 21:14:49 |

Share: | | | | |


ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಹಾವು ಕಡಿತ

ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಮನೆಯಲ್ಲಿ ವಾಕಿಂಗ್ ನಡೆಸುವ ವೇಳೆ ಹಾವೊಂದು ಕಚ್ಚಿರುವ ಬಗ್ಗೆ ವರದಿಯಾಗಿದೆ.


ಸಂಜೀವ ಮಠಂದೂರು ರವರು ಸಂಜೆ ವೇಳೆ ಮನೆ ಸಮೀಪ ವಾಕಿಂಗ್ ನಡೆಸುತ್ತಿದ್ದು, ಈ ವೇಳೆ ಹಾವು ಕಚ್ಚಿದೆ ಎನ್ನಲಾಗಿದೆ.


ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಅವರು ಯಾವುದೇ ತೊಂದರೆಯಿಲ್ಲದೆ., ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

Recent News


Leave a Comment: