ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


BJP Ticket ವಂಚನೆ ; ಗದಗದಲ್ಲೂ ಅಭಿನವ ಹಾಲಶ್ರೀಯಿಂದ 1 ಕೋಟಿ ರೂ. ನಾಮ!

Posted by Vidyamaana on 2023-09-23 07:12:53 |

Share: | | | | |


BJP Ticket ವಂಚನೆ ; ಗದಗದಲ್ಲೂ ಅಭಿನವ ಹಾಲಶ್ರೀಯಿಂದ 1 ಕೋಟಿ ರೂ. ನಾಮ!

ಗದಗ: ರಾಜ್ಯದೆಲ್ಲೆಡೆ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಸಂಚಲನವುಂಟು ಮಾಡಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯ ಶಿರಹಟ್ಟಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ಅಭಿನವ ಹಾಲಶ್ರೀ ವಿರುದ್ಧ ಪ್ರಕರಣ ದಾಖಲಾಗಿದೆ.


ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂಜಯ್ ಚವಡಾಳ ಅವರೇ ಅಭಿನವ ಹಾಲಶ್ರೀ ವಿರುದ್ಧ 1 ಕೋಟಿ ರೂ. ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸಂಜಯ್ ಚವಡಾಳ ಅವರು ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಶ್ರೀಗಳಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಮೂಲತಃ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ ಕರ್ತವ್ಯ ಲೋಪದಡಿ ಅಮಾನತ್ತುಗೊಂಡಿದ್ದು, ಪ್ರಸ್ತುತ ಮುಂಡರಗಿ ಪಟ್ಟಣದಲ್ಲಿ ವಾಸವಾಗಿದ್ದಾರೆ. ಸೆ. 19ರಂದು ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಹಾಲಶ್ರೀ ವಿರುದ್ಧ ಲಿಖಿತ ದೂರು ನೀಡಿದ್ದಾರೆ.


ಸಂಜಯ್ ಚವಡಾಳ ಅವರು ಮೂರು ಹಂತದಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ದಾಖಲಿಸಿರುವ ಬಗ್ಗೆ ಮಾಹಿತಿಯಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಮುಂಡರಗಿ ಪೊಲೀಸರು ಕೇವಲ ಎನ್‌ಸಿ ದಾಖಲಿಸಿಕೊಂಡು ಸಮರ್ಪಕ ದಾಖಲೆ ಒದಗಿಸುವಂತೆ ಮುಂಡರಗಿ ಪೊಲೀಸರು ಸೂಚಿಸಿದ್ದಾರೆ. ಇತ್ತ ದೂರು ದಾಖಲಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಜಯ್ ಕಣ್ಮರೆಯಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಎಸ್‌ಪಿ ಬಿ.ಎಸ್. ನೇಮಗೌಡ ಪ್ರತಿಕ್ರಿಯೆ: ಎಂಎಲ್‌ಎ ಟಿಕೆಟ್‌ಗಾಗಿ ಹಣ ಪಡೆದು ವಂಚಿಸಿರುವ ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ದೂರು ದಾಖಲಾದ ಹಿನ್ನೆಲೆಯಲ್ಲಿ ದೂರು ನೀಡಿದ ಸಂಜಯ ಚವಡಾಳಗೆ ಗದಗ ಪೊಲೀಸರು ನೋಟಿಸ್ ನೀಡಿದ್ದು, ಹಣ ನೀಡಿದ ಬಗ್ಗೆ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್, ವಿವಿಧ ಹಂತದಲ್ಲಿ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ವಂಚನೆ ಕುರಿತಂತೆ ಸಮಂಜಸ ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಿದೇವೆ. ಇದುವರೆಗೂ ಯಾವುದೇ ದಾಖಲೆಯನ್ನು ದೂರುದಾರರು ಒದಗಿಸಿಲ್ಲ. ದಾಖಲೆಗಳನ್ನ ನೀಡಿದ ನಂತರ ಮುಂದಿನ ತನಿಖೆ ಆರಂಭಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ನಿಫಾ ಕಾಟ – ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

Posted by Vidyamaana on 2023-09-12 21:35:12 |

Share: | | | | |


ಕೇರಳದಲ್ಲಿ ನಿಫಾ ಕಾಟ – ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

 ಕೋಝಿಕ್ಕೋಡ್: ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಜ್ವರಕ್ಕೆ ಸಂಬಂಧಿಸಿದ ಎರಡು ಅಸ್ವಾಭಾವಿಕ ಸಾವುಗಳು ದಾಖಲಾದ ನಂತರ, ಕೇರಳ ಆರೋಗ್ಯ ಇಲಾಖೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಎಚ್ಚರಿಕೆ ನೀಡಿದೆ.ಎರಡು ಸಾವುಗಳು ನಿಪಾ ವೈರಸ್‌ನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಮೃತರೊಬ್ಬರ ಸಂಬಂಧಿಕರು ತೀವ್ರ ನಿಗಾ ಘಟಕದಲ್ಲಿ(ಐಸಿಯು) ಇದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.ಕೇರಳದಲ್ಲಿ ನಿಪಾ ಹಾವಳಿ


ಈ ನಿಟ್ಟಿನಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಹಿಂದೆ 2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾ ಏಕಾಏಕಿ ಸಂಭವಿಸಿತ್ತು. ನಂತರ 2021 ರಲ್ಲಿ ಸಹ ಕೋಝಿಕೋಡ್ನಲ್ಲಿ ನಿಪಾ ಪ್ರಕರಣ ವರದಿಯಾಗಿತ್ತು. ದಕ್ಷಿಣ ಭಾರತದಲ್ಲಿ ಮೊದಲ ನಿಪಾ ವೈರಸ್ ಹರಡುವಿಕೆಯು ಮೇ 19, 2018 ರಂದು ಕೋಝಿಕ್ಕೋಡ್‌ನಲ್ಲಿ ವರದಿಯಾಗಿದೆ.

ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತೆ ನಿಪಾ

ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ನಿಪಾ ವೈರಸ್ ಸೋಂಕು ಪ್ರಾಣಿಗಳಿಂದ ಜನರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ಜನರಲ್ಲಿ, ಇದು ಲಕ್ಷಣರಹಿತ(ಸಬ್‌ಕ್ಲಿನಿಕಲ್) ಸೋಂಕಿನಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ವರೆಗೆ ಹಲವಾರು ಕಾಯಿಲೆಗಳನ್ನು ಉಂಟುಮಾಡುತ್ತದೆ.

ನಿಪಾ ವೈರಸ್ ಬಗ್ಗೆ ಮಾಹಿತಿ

ತಜ್ಞರ ಪ್ರಕಾರ ನಿಪಾ ಒಂದು ಪ್ಯಾರಾಮಿಕ್ಸೊವೈರಸ್. ಇದು ಸಾಮಾನ್ಯ ಶೀತವನ್ನು ಉಂಟುಮಾಡುವ ಬೆರಳೆಣಿಕೆಯ ವೈರಸ್‌ಗಳಲ್ಲಿ ಒಂದಾದ ಹ್ಯೂಮನ್ ಪ್ಯಾರೆನ್‌ಫ್ಲುಯೆಂಜಾ ವೈರಸ್‌ಗೆ ಸಂಬಂಧಿಸಿದೆ. ಇದರ ನೈಸರ್ಗಿಕ ಆತಿಥೇಯವೆಂದರೆ ಹಣ್ಣಿನ ಬಾವಲಿ, ದೊಡ್ಡ ಮತ್ತು ಸಣ್ಣ ಹಾರುವ ನರಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ವಿತರಿಸಲ್ಪಡುತ್ತವೆ. ಇಲ್ಲಿಯವರೆಗೆ ನಿಪಾ ವೈರಸ್‌ನ ಮಾನವ ಸೋಂಕಿನ ಎಲ್ಲಾ ಪ್ರಕರಣಗಳು ಸೋಂಕಿತ ಬಾವಲಿಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಕಾರಣದಿಂದಾಗಿವೆ.ಬಾವಲಿ ಮೂತ್ರದಿಂದ ಕಲುಷಿತಗೊಂಡ ಹಣ್ಣು ಅಥವಾ ಹಣ್ಣಿನ ರಸವು ಜನರಿಗೆ ವೈರಸ್ ಹರಡುವ ಪ್ರಮುಖ ಮಾರ್ಗವಾಗಿದೆ. ಮಾನವ ಸೋಂಕಿನ ಪ್ರಕರಣಗಳಲ್ಲಿ, ಇಲ್ಲಿಯವರೆಗೆ, ಪ್ರಾಥಮಿಕ ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕಗಳಾದ ಕುಟುಂಬ ಸದಸ್ಯರು ಅಥವಾ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯ ಸಿಬ್ಬಂದಿಗೆ ಮಾತ್ರ ಸೀಮಿತವಾಗಿ ಹರಡಿದೆ.


ಮುಖ್ಯವಾಗಿ ನಿಪಾ ವೈರಸ್ ಜೀವಕೋಶಗಳನ್ನು ಪ್ರವೇಶಿಸಲು ಬಳಸುವ ಪ್ರೋಟೀನ್ಗಳು, ಮೆದುಳು ಮತ್ತು ಕೇಂದ್ರ ನರ ಅಂಗಾಂಶಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ನಿಪಾ ಸೋಂಕು ಹೆಚ್ಚಿನ ಸಂದರ್ಭಗಳಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ನಿಂದ ಸಾವಿಗೆ ಕಾರಣವಾಗುತ್ತದೆ, ಏಕೆಂದರೆ ವೈರಸ್ ಜೀವಕೋಶಗಳಿಗೆ ಪ್ರವೇಶಿಸಲು ಸುಲಭವಾದ ಅಂಗಾಂಶಗಳಲ್ಲಿ ವೈರಸ್ ಉತ್ತಮವಾಗಿ ಪುನರಾವರ್ತಿಸುತ್ತದೆ.

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪ-ಪುತ್ತಿಲ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲು

Posted by Vidyamaana on 2023-10-07 04:47:42 |

Share: | | | | |


ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪ-ಪುತ್ತಿಲ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲು

ಪುತ್ತೂರು:ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭ ನಡೆದ ಕಲ್ಲುತೂರಾಟದಿಂದ ಮನೆಗಳಿಗೆ ಹಾನಿಯಾಗಿರುವ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ್ದ ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಸ್ಥಳೀಯ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಕಲ್ಲುತೂರಾಟದಿಂದ ಮನೆಗೆ ಹಾನಿಯಾಗಿ ಸಂತ್ರಸ್ತರಾಗಿದ್ದವರ ಭೇಟಿ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 ಎ ಅಡಿಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಬಂಟ್ವಾಳ: ಪಲ್ಟಿಯಾಗಿ ಗದ್ದೆಗೆ ಬಿದ್ದ ಖಾಸಗಿ ಬಸ್

Posted by Vidyamaana on 2024-07-16 08:19:28 |

Share: | | | | |


ಬಂಟ್ವಾಳ: ಪಲ್ಟಿಯಾಗಿ ಗದ್ದೆಗೆ ಬಿದ್ದ ಖಾಸಗಿ ಬಸ್

ಬಂಟ್ವಾಳ : ಬಿ.ಸಿ.ರೋಡು - ಸರಪಾಡಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಎಂಬಲ್ಲಿ ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.

ಭಾರೀ ಮಳೆಯಿಂದ ಮುಖ್ಯ ರಸ್ತೆ ಹದಗೆಟ್ಟಿದ್ದು, ಬಸ್‌ ಒಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ ಆಶಿಫ್ ಮುಕ್ವೆ ಅಧ್ಯಕ್ಷ, ಸುಹೈಲ್ ಬಡಕೋಡಿ ಕಾರ್ಯದರ್ಶಿ

Posted by Vidyamaana on 2024-05-29 06:32:45 |

Share: | | | | |


ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ  ಆಶಿಫ್ ಮುಕ್ವೆ ಅಧ್ಯಕ್ಷ, ಸುಹೈಲ್ ಬಡಕೋಡಿ ಕಾರ್ಯದರ್ಶಿ

ಪುತ್ತೂರು: SDTU ಇದರ ಸಹ ಸಂಘಟನೆಯಾದ ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ವಾರ್ಷಿಕ ಕಾರ್ಯಕ್ರಮ ಯೂನಿಯನ್ ಅಧ್ಯಕ್ಷ ಮೊಹಮ್ಮದ್ ಕುಞ ಬಾಬ ರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಮನೀಶ್ ಹಾಲ್ ನಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಹಮೀದ್ ಕೆ. ಎಸ್ ವಾಚಿಸಿದರೆ, ಕಾರ್ಯದರ್ಶಿ ಹನೀಫ್ ಪೈಸಾರಿ ಸ್ವಾಗತಿಸಿದರು. ಬಳಿಕ ನೂತನ ಸಮಿತಿ ರಚನೆ ನಡೆಸಲಾಯಿತು

ಯೂನಿಯನ್ ಉಸ್ತುವಾರಿಯಾಗಿ ಶಮೀರ್ ನಾಜೂಕು, ಅಧ್ಯಕ್ಷರಾಗಿ ಆಶಿಫ್ ಮುಕ್ವೆ, ಉಪಾಧ್ಯಕ್ಷರಾಗಿ ಶಾಕಿರ್ ಬೆಳಂದೂರು, ಕಾರ್ಯದರ್ಶಿಯಾಗಿ ಸುಹೈಲ್ ಬಡಕೋಡಿ, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ಸಾಲ್ಮರ

ಕುರಿಯ : ಸಿಡಿಲು ಬಡಿದು ಮನೆಗೆ ಹಾನಿ

Posted by Vidyamaana on 2023-11-04 09:06:48 |

Share: | | | | |


ಕುರಿಯ : ಸಿಡಿಲು ಬಡಿದು ಮನೆಗೆ ಹಾನಿ

ಪುತ್ತೂರು : ಪುತ್ತೂರು ಸುತ್ತಮುತ್ತಲ ಗ್ರಾಮ ಗಳಲ್ಲಿ ನ 3 ರಂದು ರಾತ್ರಿ  ಗುಡುಗು, ಮಿಂಚು ಸಹಿತ ಮಳೆ ಸುರಿದಿದ್ದು,ಆರ್ಯಾಪು ಗ್ರಾಮದ ಕುರಿಯ ಅಜಲಾಡಿ ನಿವಾಸಿ ರುಖ್ಯ  ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.


ಸಿಡಿಲ ಆಘಾತಕ್ಕೆ ಮನೆಯ ವಯರಿಂಗ್‌ ಸಂಪೂರ್ಣ ಕೆಟ್ಟುಹೋಗಿದೆ.ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಆರ್ಯಾಪು ಗ್ರಾ.ಪಂ. ಸದಸ್ಯ ಯಾಕುಬ್ ಸಾಹೇಬ್ ಭೇಟಿ ನೀಡಿದರು

Recent News


Leave a Comment: