ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ರಾಮದರ್ಶನ ಪಡೆದು ಹೃದಯಾಘಾತದಿಂದ ಕೊನೆಯುಸಿರೆಳೆದ ಉಡುಪಿ ಮೂಲದ ಶಾನುಭಾಗ್‌

Posted by Vidyamaana on 2024-03-11 08:44:56 |

Share: | | | | |


ರಾಮದರ್ಶನ ಪಡೆದು ಹೃದಯಾಘಾತದಿಂದ ಕೊನೆಯುಸಿರೆಳೆದ ಉಡುಪಿ ಮೂಲದ ಶಾನುಭಾಗ್‌

ಅಯೋಧ್ಯೆ/ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಪಾಂಗಾಳ ಪಾಂಡುರಂಗ ಶಾನುಭಾಗ್‌ (62) ಅವರು ಮಾ.10ರಂದು ಅಯೋಧ್ಯೆಯ ರಾಮಮಂದಿರದ ಬಳಿ ನಿಧನ ಹೊಂದಿದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.ಪ್ರತಿಷ್ಠೆಯ ಮಂಡಲಪೂಜೆ ಸಮಾಪನ ಸಂದರ್ಭ ರವಿವಾರ ಬೆಳಗ್ಗೆ ರಾಮನ ದರ್ಶನ ಪಡೆದು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂಸ್ಕೃತದಲ್ಲಿಯೇ ಮಾತನಾಡಿದ್ದರು. ಅಪರಾಹ್ನ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ದ್ವಾರದ ಬಳಿ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಿಧನ ಹೊಂದಿದ್ದರು. ಮುಂದಿನ ವ್ಯವಸ್ಥೆಯನ್ನು ವಿಶ್ವ ಹಿಂದೂ ಪರಿಷತ್‌ ಪ್ರಮುಖರಾದ ಗೋಪಾಲ್‌, ಮಾಜಿ ಶಾಸಕ ಕೆ.ರಘುಪತಿ ಭಟ್‌ ಮಾಡಿದರು.

ಶಾನುಭಾಗ್‌ ಅವರು ಅಂಧರಾಗಿದ್ದರೂ ಬಾಲ್ಯದಿಂದಲೂ ಆರೆಸ್ಸೆಸ್‌ ಸಂಪರ್ಕ ಹೊಂದಿ ಜಿಲ್ಲಾ ಬೌದ್ಧಿಕ್‌ ಪ್ರಮುಖ್‌ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಶ್ರೀರಾಮ ಮಂದಿನ ನಿರ್ಮಾಣ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದರು. ಸಿಂಡಿಕೇಟ್‌ ಬ್ಯಾಂಕಿನ ಮಣಿಪಾಲ ಪ್ರಧಾನ ಕಚೇರಿ, ಉಡುಪಿಯ ಕೆಥೋಲಿಕ್‌ ಸೆಂಟರ್‌ ಕಚೇರಿಗಳಲ್ಲಿ ಟೆಲಿಫೋನ್‌ ಆಪರೇಟರ್‌ ಮತ್ತು ಸಿಬಂದಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ರಾಮಾಯಣ, ಮಹಾಭಾರತದಲ್ಲಿ ಅಪಾರವಾದ ಪಾಂಡಿತ್ಯ ಹೊಂದಿದ್ದರು. ಚಿಂತಕರೂ ಆಗಿದ್ದ ಇವರ ನಿಧನಕ್ಕೆ ಪೇಜಾವರ ಶ್ರೀ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಪುತ್ತೂರು :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕಡಬ ಮೂಲದ ಡಾ.ಆದಂ ಅಸೌಖ್ಯದಿಂದ ನಿಧನ

Posted by Vidyamaana on 2024-04-20 19:47:08 |

Share: | | | | |


ಪುತ್ತೂರು :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕಡಬ ಮೂಲದ ಡಾ.ಆದಂ ಅಸೌಖ್ಯದಿಂದ ನಿಧನ

ಬೆಳ್ತಂಗಡಿ : ತಲಪಾಡಿ ಕೆ.ಸಿ ರೋಡ್ ನಿವಾಸಿ ಡಾ! ಆದಂ ಉಸ್ಮಾನ್(65) ಅಲ್ಪಕಾಲದ ಅಸೌಖ್ಯದಿಂದ ಎ.20 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಪುತ್ತೂರು,ಕಡಬ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸುಮಾರು 14 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದರು.

ಸ್ಟೂಡೆಂಟ್ ವೀಕ್ಷಿತ್ ಸೂಸೈಡ್ ಪ್ರಕರಣ – ತಂದೆ ಕೊಟ್ಟ ದೂರಿನಲ್ಲೇನಿದೆ

Posted by Vidyamaana on 2023-10-10 21:21:15 |

Share: | | | | |


ಸ್ಟೂಡೆಂಟ್ ವೀಕ್ಷಿತ್ ಸೂಸೈಡ್ ಪ್ರಕರಣ – ತಂದೆ ಕೊಟ್ಟ ದೂರಿನಲ್ಲೇನಿದೆ

ಪುತ್ತೂರು : ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೃತ ವೀಕ್ಷಿತ್ ರವರ ತಂದೆ ಚೆನ್ನಪ್ಪ ಗೌಡ ರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


ಕುರಿಯ ಗಡಾಜೆ ನಿವಾಸಿ ಚೆನ್ನಪ್ಪ ಗೌಡ ರವರು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಚೆನ್ನಪ್ಪ ಗೌಡ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿಕೊಂಡಿದ್ದು, ಕಿರಿಯ ಮಗ ವೀಕ್ಷಿತ್ ಪುತ್ತೂರಿನ ಫಿಲೋಮಿನ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅ.9 ರಂದು ತನ್ನ ಪತ್ನಿ ಮತ್ತು ಮಗನೊಂದಿಗೆ ಊಟ ಮಾಡಿ ಮಲಗಿದ್ದು, ಮಗ ವೀಕ್ಷಿತ್ ಆತನ ಬೆಡ್ ರೂಮಿನಲ್ಲಿ ಮಲಗಿರುತ್ತಾನೆ.


ಅ.10 ರಂದು ಬೆಳಿಗ್ಗೆ ವೀಕ್ಷಿತ್ ರವರ ರೂಮಿನ ಬಾಗಿಲು ಬಡಿದಾಗ ವೀಕ್ಷಿತ್ ರವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ಪತ್ನಿಯನ್ನು ಕರೆದು ಇಬ್ಬರು ಸೇರಿ ಜೋರಾಗಿ ಕರೆದಿದರೂ ವೀಕ್ಷಿತ್ ರವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ಸಂಶಯಗೊಂಡು ಒಂದು ಪಿಕಾಸಿನಲ್ಲಿ ಬಾಗಿಲನ್ನು ಮೀಟಿ ಬಾಗಿಲನ್ನು ತೆಗೆದು ನೋಡಿದಾಗ ರೂಮಿನಲ್ಲಿರುವ ಫ್ಯಾನಿಗೆ

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ UDR .No: 36/2023 ಕಲo: 174 CRPC ರಂತೆ ಪ್ರಕರಣ ದಾಖಲಾಗಿದೆ.

ಮೃತ ವೀಕ್ಷಿತ್ ತಂದೆ ನೀಡಿದ ದೂರಿನಲ್ಲಿ ಮಗ ಯಾವುದೋ ವಿಚಾರಕ್ಕೆ ಮನಸಿನಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದು, ಮರಣದ ಮೇಲೆ ಯಾವುದೇ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವೀಕ್ಷಿತ್ ರಾತ್ರಿ ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹಿತೆಯ ಫೋಟೋ ಸ್ಟೋರಿ ಹಾಕಿದ್ದ ಎಂಬ ಮಾಹಿತಿ ಆತನ ಆಪ್ತ ವಲಯದಿಂದ ತಿಳಿದು ಬಂದಿದೆ.

ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

Posted by Vidyamaana on 2023-05-08 05:21:21 |

Share: | | | | |


ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

ಬೆಂಗಳೂರು; ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ 83.89 ಶೇಕಡಾ ಫಲಿತಾಂಶ ಬಂದಿದೆ. ನಾಲ್ಕು ವಿದ್ಯಾರ್ಥಿಗಳ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಚಿತ್ರದುರ್ಗ ಫಲಿಂತಾಶದಲ್ಲಿ ಪ್ರಥಮ ಸ್ಥಾನ ಪಡೆದ್ರೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

ಚಿತ್ರದುರ್ಗ ಜಿಲ್ಲೆ 96.80 ಶೇಕಡಾ ಫಲಿತಾಂಶ ಪಡೆದರೆ, ಮಂಡ್ಯ ಜಿಲ್ಲೆ 96.74 ಶೇಕಡಾ ಫಲಿತಾಂಶ ಪಡೆದಿದೆ.

ಇವತ್ತು ಶಾಲೆಗೆ ರಜೆ ಉಂಟಾ..? ಎಂದು ಮಕ್ಕಳಿಂದ ಡಿಸಿಗೆ ಫೋನ್ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ!

Posted by Vidyamaana on 2024-07-19 03:56:13 |

Share: | | | | |


ಇವತ್ತು ಶಾಲೆಗೆ ರಜೆ ಉಂಟಾ..? ಎಂದು ಮಕ್ಕಳಿಂದ ಡಿಸಿಗೆ ಫೋನ್ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ!

ಮಂಗಳೂರು: ಜಿಲ್ಲಾಧಿಕಾರಿಯೆಂದರೆ ಒಂದು ಜಿಲ್ಲೆಯ ಆಡಳಿತಾತ್ಮಕ ಆಗುಹೋಗುಗಳನ್ನು ಮಾನಿಟರ್ ಮಾಡುವ ಮತ್ತು ತನ್ನ ಅಧೀನದಲ್ಲಿರುವ ಇಲಾಖೆಗಳ ಅಧಿಕಾರಿಗಳಿ ಕಾಲ ಕಾಲಕ್ಕೆ ಸೂಕ್ತ ನಿರ್ದೇಶನವನ್ನು ನೀಡುವ ಮಹತ್ತರವಾದ ಜವಾಬ್ದಾರಿಯುತ ಹುದ್ದೆ.

ಆದರೆ, ಇತ್ತೀಚಿನ ಕೆಲ ದಿನಗಳಲ್ಲಿ ಈ ಮಳೆಗೆ ಸಂಬಂಧಿಸಿ ಶಾಲೆಗೆ ರಜೆ ನೀಡುವ ವಿಚಾರದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಹೊಸದೊಂದ ಟ್ರೆಂಡ್ ಶುರುವಾಗಿದೆ, ಅದೇನೆಂದರೆ ನಾಳೆ ಶಾಲೆಗೆ ರಜೆ ಇದೆಯೇ ಎಂದು ಮಕ್ಕಳೇ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಕೇಳುವ ಚಾಳಿ. ಇದನ್ನು ದಕ್ಷಿಣ ಕನ್ನಡದ ಈಗಿನ ಜಿಲ್ಲಾಧಿಕಾರಿಗಳಾಗಿರುವ ಮುಲ್ಲೈ ಮುಹಿಲನ್ ಅವರು ಒಂದು ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಸ್ನೇಹಿತರ ಮುಂದೆ ವಿಷಯ ಹಂಚಿಕೊಂಡು ತಮಾಷೆಯಾಗಿ ಹೇಳಿದ್ದರು.

ಆದರೆ, ಇದರಲ್ಲಿ ಎರಡು ವಿಚಾರಗಳನ್ನು ನಾವು ಯೋಚಿಸಬೇಕಾಗಿದೆ, ಒಂದು ಅದು ಮಕ್ಕಳು ತಾವೇ ಸ್ವತಃ ಜಿಲ್ಲಾಧಿಕಾರಿಯವರಿಗೆ ಕಾಲ್ ಮಾಡ್ತಾರೋ ಅಥವಾ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ನಂಬರ್ ನೀಡಿ ಹೀಗೆ ಮಾತನಾಡಬೇಕೆಂದು ತಿಳಿಸಿ ಕಾಲ್ ಮಾಡಿಸ್ತಾರೋ ಅನ್ನುವುದು. ಇನ್ನೊಂದು, ಜಿಲ್ಲಾಧಿಕಾರಿಯವರು ಸಾರ್ವಜನಿಕರ ತುರ್ತು ಸ್ಪಂದನೆಗೆಂದು ನೀಡಿರುವ ಸಂಪರ್ಕ ಸಂಖ್ಯೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ತಿದ್ದಾರೆಯೇ ಎಂಬುದು ಇನ್ನೊಂದು ವಿಚಾರ.

ಯಾಕೆಂದರೆ ಒಂದು ಪಂಚಾಯತ್ ಮಟ್ಟದ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿಸಬೇಕೆಂದರೂ ಅವರ ಕಾರ್ಯದೊತ್ತಡದ ನಡುವೆ ಅಷ್ಟೊಂದು ಸುಲಭದ ವಿಚಾರವಲ್ಲ. ಅಂತದ್ದರಲ್ಲಿ ಒಂದು ಜಿಲ್ಲೆಯ ಕಾರ್ಯಾಂಗದ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿವರಿಗೆ ಹೀಗೆ ಮಕ್ಕಳಿಂದ ಕರೆಗಳ ಮೇಲೆ ಕರೆಗಳು ಬರುತ್ತಿದ್ದರೆ ಅವರಿಗೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಮಳೆಗಾಲದಲ್ಲಿ ನಡೆಯಬಹುದಾದ ತುರ್ತು ವಿಚಾರಗಳಿಗೆ ಗಮನಕೊಡಲು ಕಷ್ಟವಾಗುವುದಿಲ್ಲವೇ? ಮಕ್ಕಳಿಗೆ ರಜೆ ಇದೆ ಎಂದಾದರೆ ಅದು ಜಿಲ್ಲಾಧಿಕಾರಿಗಳ ಮೂಲಕವೇ ಆದೇಶ ಬಂದು ಮಾಧ್ಯಮಗಳಲ್ಲಿ ತಕ್ಷಣವೇ ಪ್ರಸಾರಗೊಳ್ಳುತ್ತದೆ ಮಾತ್ರವಲ್ಲದೇ ಇದೀಗ ಎಲ್ಲಾ ಶಾಲೆಗಳಲ್ಲಿ ವಾಟ್ಸ್ಯಾಪ್ ಗ್ರೂಪ್ ಗಳ ಮೂಲಕ ಮಾಹಿತಿ ಹಂಚುವ ವ್ಯವಸ್ಥೆಯಿದ್ದು ಆ ಮೂಲಕ ಮಕ್ಕಳಿಗೆ ಮತ್ತು ಪೋಷಕರಿಗೆ ಮಾಹಿತಿ ಸಿಗುತ್ತದೆ ಅಲ್ಲವೇ?

ವಿಷಯ ಹೀಗಿರುವಾಗ ಜಿಲ್ಲಾಧಿಕಾರಿಯವರ ಅಮೂಲ್ಯ ಸಮಯವನ್ನು ಮಕ್ಕಳ ಮೂಲಕ ಫೋನ್ ಮಾಡಿಸಿ ರಜೆ ಕೇಳುವ ವಿಚಾರಕ್ಕೆ ಹಾಳು ಮಾಡುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರಾಗಿರುವ ನಾವೆಲ್ಲರೂ ಯೋಚಿಸಬೇಕಾದ ವಿಚಾರವಲ್ಲವೇ?

ಈಗಿನ ಜಿಲ್ಲಾಧಿಕಾರಿಗಳಂತೂ ಮಗುವಿನಂತಹ ಮನಸ್ಸಿನವರು, ಸದಾ ನಗುನಗುತ್ತಲೇ ಜನರ ಸಮಸ್ಯೆಗೆ ಸ್ಪಂದಿಸುವಂತಹ ವ್ಯಕ್ತಿತ್ವದವರು ಎಂಬ ಮಾತು ಜಿಲ್ಲೆಯ ಜನರದ್ದಾಗಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳೂ ಜನಸ್ಪಂದನೆಯ ವಿಚಾರದಲ್ಲಿ ಪಾಸಿಟಿವ್ ಆಗಿಯೇ ಇರುತ್ತಿದ್ದರು. ಹೀಗಿರುವಾಗ ಅವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿ ಅಲ್ಲವೇ?

ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ

Posted by Vidyamaana on 2024-01-08 15:31:10 |

Share: | | | | |


ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ

ಪುತ್ತೂರು: ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಹಾಗೂ ಕಾರ್ಯಾಧ್ಯಕ್ಷರಾಗಿ ಎನ್. ಚಂದ್ರಹಾಸ ಶೆಟ್ಟಿರವರು ಆಯ್ಕೆಯಾಗಿದ್ದಾರೆ.

ಉದ್ಯಮಿ ರಾಕೇಶ್ ಮಲ್ಲಿರವರು ಬಂಟ್ವಾಳ ತಾಲೂಕಿನವರಾಗಿದ್ದು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಕಾರ್ಯಾಧ್ಯಕ್ಷರಾಗಿ, ಕಾಂಗ್ರೆಸ್‌ ಕಾರ್ಮಿಕ ಘಟಕದ ಇಂಟಕ್ ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎನ್.ಚಂದ್ರಹಾಸ ಶೆಟ್ಟಿಯವರು ಪ್ರತಿಷ್ಠಿತ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿದ್ದು, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾಗಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ನಡುವೆ ಉದ್ಯಮಿ ಮುತ್ತಪ್ಪ ರೈ ನೇತೃತ್ವದ ಪುತ್ತೂರಿನ ಕೋಟಿ ಚೆನ್ನಯ ಕಂಬಳದ ಮುಂದಾಳತ್ವ ವಹಿಸಿಕೊಂಡು ಅದರ ಯಶಸ್ಸಿಗಾಗಿ ಈಗಲೂ ಶ್ರಮಿಸುತ್ತಾ ಬಂದಿರುತ್ತಾರೆ.

Recent News


Leave a Comment: