ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ರಾಹುಲ್ ಗಾಂಧಿ ಬಂಧನ, ಸಂಸತ್ ಸದಸ್ಯತ್ವ ರದ್ದು ಖಂಡಿಸಿದ ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ

Posted by Vidyamaana on 2023-03-26 11:42:14 |

Share: | | | | |


ರಾಹುಲ್ ಗಾಂಧಿ ಬಂಧನ, ಸಂಸತ್ ಸದಸ್ಯತ್ವ ರದ್ದು ಖಂಡಿಸಿದ ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ

ಬೆಂಗಳೂರು: ಭಾರತ್ ಜೋಡೋದ ಯಶಸ್ಸನ್ನು ಸಹಿಸದೇ ಕವಟದಿಂದ, ದ್ವೇಷದಿಂದ ಕಾಂಗ್ರೆಸಿನ ಯುವ ನಾಯಕ, ಸಂಸದ ರಾಹುಲ್ ಗಾಂಧಿಯವರನ್ನು ಜೈಲಿಗೆ ಹಾಕುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಆದ್ದರಿಂದ ನರೇಂದ್ರ ಮೋದಿ ವಿರುದ್ಧ ಮೋದಿ ಹಟಾವೋ, ದೇಶ ಬಚಾವೋ ಎನ್ನುವ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಿದ್ದೇವೆ ಎಂದು ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯಾಧ್ಯಕ್ಷ ಜುನೈದ್‌ ಪಿ.ಕೆ. ಘೋಷಿಸಿದ್ದಾರೆ.

ಮೋದಿ ಎಂಬ ಉಪನಾಮ ಹೊಂದಿರುವ ವ್ಯಕ್ತಿಗಳು, ಮಧ್ಯಮ ವರ್ಗದವರು ಕಟ್ಟಿರುವ ತೆರಿಗೆ ಹಣವನ್ನು ಲೂಟಿ ಮಾಡಿದ್ದು, ಅದಕ್ಕೆ ಪ್ರಧಾನಿ ಬೆಂಬಲ ನೀಡಿದ್ದಾರೆ. ಹೀಗಿರುವಾಗ ಇದನ್ನು ಕಾಂಗ್ರೆಸಿನ ಮುಂಚೂಣಿ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿರುವುದರಲ್ಲಿ ತಪ್ಪೇನು ಎಂದು ಜುನೈದ್ ಪ್ರಶ್ನಿಸಿದ್ದಾರೆ.

ಸಂಸದನಾಗಿ, ಕಾಂಗ್ರೆಸ್ ಮುಂಚೂಣಿ ನಾಯಕನಾಗಿ, ಜಾತ್ಯಾತೀತತೆ, ಬಾಂಧವ್ಯದ ತಳಹದಿಯೊಂದಿಗೆ ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಯುವ ನಾಯಕ ರಾಹುಲ್‌ ಗಾಂಧಿ, ಮೋದಿ, ಚೋಕ್ಸಿಯಂತಹವರು ಲೂಟಿ ಮಾಡಿರುವ ಕೋಟ್ಯಾಂತರ ರೂ.ವನ್ನು ರಾಹುಲ್ ಗಾಂಧಿ ಸರಿಯಾಗಿಯೇ ಪ್ರಶ್ನಿಸಿದ್ದಾರೆ. ಇದನ್ನು ಸಹಿಸದೇ ಅವರನ್ನು ಜೈಲಿಗೆ ಕಳುಹಿಸುವುದು, ಅವರ ಸಂಸದ ಸ್ಥಾನವನ್ನು ರದ್ದು ಮಾಡಿಸುವ ಪ್ರಧಾನಿ ಮೋದಿ ಕ್ರಮಕ್ಕೆ ಯಂಗ್ ಬ್ರಿಗೇಡ್ ಖಂಡನೆ ಸೂಚಿಸುತ್ತದೆ ಎಂದು ಜುನೈದ್ ತಿಳಿಸಿದ್ದಾರೆ.

  ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಅನುಸರಿಸುತ್ತಿರುವ ಮೋದಿ ಕ್ರಮವನ್ನು ಪ್ರತಿ ಮನೆಗೂ ತಲುಪಿಸಲಾಗುವುದು, ಪ್ರತಿ ಮಗುವಿಗೂ ತಲುಪಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆದ್ರಾಳ ತೋಡಿಗೆ ಗುಡ್ಡೆ ಕುಸಿತ ದಿಕ್ಕು ಬದಾಯಿಸಿದ ಹರಿಯುವ ಮಳೆ ನೀರು ತೋಟಗಳು ಜಲಾವೃತ

Posted by Vidyamaana on 2024-08-03 09:48:11 |

Share: | | | | |


ಬೆದ್ರಾಳ ತೋಡಿಗೆ ಗುಡ್ಡೆ ಕುಸಿತ ದಿಕ್ಕು ಬದಾಯಿಸಿದ ಹರಿಯುವ ಮಳೆ ನೀರು ತೋಟಗಳು ಜಲಾವೃತ

ಪುತ್ತೂರು:ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿ ಬೆದ್ರಾಳ ತೋಡಿಗೆ ಆ.3 ರ ನಸುಕಿನ ಜಾವ ಭಾರಿ ಪ್ರಮಾಣದ ಗುಡ್ಡೆಯ ಮಣ್ಣು ಕುಸಿದು ಬಿದ್ದು ತೋಡಿನಲ್ಲಿ ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗಿ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿದೆ. 

ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಇಂಜಿನಿಯರ್ ಸಚಿನ್, ಮುತ್ತು ಶೆಟ್ಟಿ ಸಹಿತ ಮೂರು ಮಂದಿಯ ತೋಟಗಳು ಜಲಾವೃತಗೊಂಡಿದೆ. ತೋಡಿನ ಬದಿಯಲ್ಲಿರುವ ಯಶೋಧಾರ ಎಂಬವರ ಮನೆಯೂ ಅಪಾಯದಂಚಿನಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕೆ ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು ತೆರಳಿದ್ದಾರೆ.

ಅಕ್ರಮ ಗೋ ತ್ಯಾಜ್ಯ ಸಾಗಾಟ ಅಂದಿದ್ದ ನಟಿ ಐಂದ್ರಿತಾ ರೈ; ಪೊಲೀಸ್‌ ಸ್ಪಷ್ಟನೆ - ಪೋಸ್ಟ್ ಡಿಲೀಟ್

Posted by Vidyamaana on 2024-04-08 17:47:57 |

Share: | | | | |


ಅಕ್ರಮ ಗೋ ತ್ಯಾಜ್ಯ ಸಾಗಾಟ ಅಂದಿದ್ದ ನಟಿ ಐಂದ್ರಿತಾ ರೈ; ಪೊಲೀಸ್‌ ಸ್ಪಷ್ಟನೆ - ಪೋಸ್ಟ್ ಡಿಲೀಟ್

ಬೆಂಗಳೂರು : ಇಲ್ಲಿನ ಬೊಮ್ಮನಹಳ್ಳಿ ಸಮೀಪ ಕಳೆದ ಬುಧವಾರ ಟ್ರಕ್‌ವೊಂದರಲ್ಲಿ ಗೋಮಾಂಸ ತ್ಯಾಜ್ಯವನ್ನು (cow waste) ಸಾಗಿಸಿದ್ದ ಬಗ್ಗೆ ಶಂಕೆ ಇದೆ. ಆದರೆ ಬೊಮ್ಮನಹಳ್ಳಿ ಪೊಲೀಸರು (bomanahalli police) ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ನಿರಾಕರಿಸುತ್ತಿದ್ದಾರೆ. ಗೋಹತ್ಯೆ ಕಾನೂನು ಬಾಹಿರವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕೆಂದು ನಟಿ ಐಂದ್ರಿತಾ ರೈ (Aindrita Ray) ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದರು.ಗೋಮಾಂಸವನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಕೆಲವು ವ್ಯಕ್ತಿಗಳು ತ್ಯಾಜ್ಯ ಸಾಗಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ ವಿಡಿಯೊ ಮಾಡಿಕೊಂಡಿದ್ದರು. ಈ ವಿಡಿಯೊವನ್ನು ನಟಿ ಐಂದ್ರಿತಾ ರೈ ಪೊಲೀಸ್ ಕಮೀಷನರ್, ಬೆಂಗಳೂರು ಪೊಲೀಸ್ ಹಾಗೂ ಆಗ್ನೇಯ ವಿಭಾಗ ಡಿಸಿಪಿಗೆ ಟ್ಯಾಗ್ ಮಾಡಿ, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ

Posted by Vidyamaana on 2024-02-24 18:28:18 |

Share: | | | | |


ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ

ಪುತ್ತೂರು: ಬೊಳುವಾರು ವಿಶ್ವಕರ್ಮ ಸಭಾಭವನಕ್ಕೆ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸ್ಟೈನ್ಲೆಸ್ ಸ್ಟೀಲ್ ಸಿಂಕ್ನ ಉದ್ಘಾಟನೆ ಹಾಗೂ ಸ್ಥಳಾಂತರಗೊಂಡ ತುಳಸಿ ಕಟ್ಟೆಯ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 24ರಂದು ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಮಾತನಾಡಿ, ಸೊಸೈಟಿ ಇಂದು ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಈ ವರ್ಷ ವಿಶೇಷವಾಗಿ 60 ಕಾರ್ಯಕ್ರಮ ಮಾಡಬೇಕು ಎಂಬ ಯೋಜನೆ ಇದೆ. ಅದರಲ್ಲಿ ಗ್ರಾಹಕರ ಸಮಾವೇಶ ಏರ್ಪಡಿಸಬೇಕು ಎಂಬ ಆಲೋಚನೆ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಅವರದ್ದು. ಸಾಮಾಜಿಕ ಕಳಕಳಿಯ ಕಾರಣಕ್ಕೆ ಫಾಲ್ಕೆ ಬಾಬುರಾವ್ ಆಚಾರ್ಯ ಅವರು 1964ರಲ್ಲಿ ಸೊಸೈಟಿ ಹುಟ್ಟಿಕೊಂಡಿತು. ಇಂತಹ ಸಂಸ್ಥೆ ಇಂದು ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಇಂದು ವಿಶ್ವಬ್ರಾಹ್ಮಣ ಸೇವಾ ಸಂಘದ ಮನವಿ ಮೇರೆಗೆ ಸ್ಟೈನ್ಲೆಸ್ ಸ್ಟೀಲ್ ಸಿಂಕ್ ಅನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಕೆ. ಮಾತನಾಡಿ, ಸಮಿತಿ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯುತ್ತಿದ್ದೇವೆ. ಮಾಜಿ ಶಾಸಕ ಸಂಜೀವ ಮಠಂದೂರು ನೀಡಿದ ಅನುದಾನದಲ್ಲಿ ಪಾಕಶಾಲೆ, ಕಚೇರಿ ಮೊದಲಾದ ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ. ಇದೀಗ ವಾಸ್ತುಪ್ರಕಾರವಾಗಿ ತುಳಸಿಕಟ್ಟೆಯನ್ನು ಸ್ಥಳಾಂತರಿಸಿ, ಪ್ರತಿಷ್ಠಾಪನೆ ಮಾಡಲಾಗಿದೆ. 1.5 ಲಕ್ಷ ರೂ.ನಲ್ಲಿ ಸ್ಟೈನ್ಲೆಸ್ ಸ್ಟೀಲ್ ಸಿಂಕ್ ಅನ್ನು ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಕೊಡುಗೆಯಾಗಿ ನೀಡಿದ್ದು, ಇಂದು ಉದ್ಘಾಟನೆಗೊಂಡಿದೆ. ಮುಂದೆ ವೇದಿಕೆ ನವೀಕರಣ, ಪಾರ್ಕಿಂಗ್ ವ್ಯವಸ್ಥೆಗಳು ಆಗಬೇಕಿದೆ ಎಂದರು.


ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಅಣ್ಣಿ ಆಚಾರ್ಯ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಶಶಿಕಾಂತ ಆಚಾರ್ಯ ಶುಭ ಹಾರೈಸಿದರು.


ಸಂಸ್ಥೆಯ ಪರವಾಗಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಅವರನ್ನು ಸನ್ಮಾನಿಸಲಾಯಿತು.


ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಆನೆಗುಂದಿ ಗುರುಸೇವಾ ಪರಿಷತ್ ಪುತ್ತೂರು ವಲಯ ಅಧ್ಯಕ್ಷ ವಿ. ಪುರುಷೋತ್ತಮ್ ಆಚಾರ್ಯ, ಎಸ್.ಕೆ.ಜಿ.ಐ. ಸೊಸೈಟಿಯ ಪುತ್ತೂರು ಶಾಖಾ ಪ್ರಬಂಧಕಿ ಉಷಾ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ್ ಉಪಸ್ಥಿತರಿದ್ದರು.


ಶ್ರೀನಿವಾಸ ಆಚಾರ್ಯ ಪ್ರಾರ್ಥಿಸಿ, ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿದರು. ಕಿಶನ್ ಬಿ.ವಿ. ವಂದಿಸಿ, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಎನ್. ಕಾರ್ಯಕ್ರಮ ನಿರೂಪಿಸಿದರು.



ತುಳಸಿ ಕಟ್ಟೆ ಪ್ರತಿಷ್ಠೆ:

ಸ್ಥಳಾಂತರಗೊಂಡು ಪ್ರತಿಷ್ಠಾಪನೆಗೊಂಡ ತುಳಸಿ ಕಟ್ಟೆಯ ಧಾರ್ಮಿಕ ಕಾರ್ಯಕ್ರಮವನ್ನು ಗೇರುಕಟ್ಟೆ ರಮೇಶ್ ಪುರೋಹಿತ್ ನಡೆಸಿಕೊಟ್ಟರು. ಕೆ. ಕೃಷ್ಣ ಆಚಾರ್ಯ ಹಾಗೂ ಬೇಬಿ ಕೆ. ಆಚಾರ್ಯ ದಂಪತಿ ನೇತೃತ್ವ ವಹಿಸಿದ್ದರು.


ಪೊಲೀಸ್ ಠಾಣೆಯಲ್ಲೇ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

Posted by Vidyamaana on 2023-11-21 16:38:20 |

Share: | | | | |


ಪೊಲೀಸ್ ಠಾಣೆಯಲ್ಲೇ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

ಹಾಸನ: ಪೊಲೀಸ್ ಠಾಣೆಯಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ಸೋಮವಾರ ನಡೆದಿದೆ.ಕಿರುಕುಳದಿಂದ ಬೇಸತ್ತು ಪತ್ನಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.ಹರೀಶ್​ (34) ಪ್ರಕರಣದ ಆರೋಪಿ. ಶಿಲ್ಪಾ ಗಂಡನಿಂದ ಹಲ್ಲೆಗೊಳಗಾದವರು. 


ಹರೀಶ್ ಮತ್ತು​ ಶಿಲ್ಪಾ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಹಾಸನದ ಕೈಗಾರಿಕಾ ಪ್ರದೇಶದ ಸಮೀಪವಿರುವ ಬಿಟ್ಟಗೌಡನಹಳ್ಳಿಯಲ್ಲಿ ವಾಸವಿದ್ದರು. ಪತ್ನಿ ವಿರುದ್ಧ ಆರೋಪಿ ಅನುಮಾನ ಪಡುತ್ತಿದ್ದ. ಈ ನಡೆಯನ್ನು ಪ್ರಶ್ನಿಸಿದರೆ ಹಲ್ಲೆ ಮಾಡುತ್ತಿದ್ದ. ಹೀಗೆ ಪ್ರತಿನಿತ್ಯದ ಕಿರುಕುಳದಿಂದ ನೊಂದ ಶಿಲ್ಪಾ ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.


ದೂರಿನಂತೆ ಪೊಲೀಸರು ಆರೋಪಿಯನ್ನು ಕರೆಯಿಸಿ ಬುದ್ಧಿ ಹೇಳಲು ಮುಂದಾಗಿದ್ದರು. ಈ ವೇಳೆ ಪಿಎಸ್‌ಐ ಉಮಾ ಅವರು ಹರೀಶ್​ನನ್ನು ವಿಚಾರಣೆ ಮಾಡುತ್ತಿದ್ದರು. ಇದರಿಂದ ಕುಪಿತನಾದ ಆತ ಪೊಲೀಸರೆದುರೇ ಪತ್ನಿಯ ಹತ್ಯೆ ಮುಂದಾದ. ತಾನು ಮೊದಲೇ ತಂದಿದ್ದ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ.ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಚಾಕು ಕಿತ್ತುಕೊಂಡಿದ್ದಾರೆ.


ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹರೀಶ್‌ ವಿರುದ್ಧ ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ವಿಟ್ಲ : ಪತಿ ವಿದೇಶದಲ್ಲಿ..ಪತ್ನಿ, ಮಕ್ಕಳು ತವರಿಗೆ ಹೋಗಿದ್ದಾಗ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ ಖದೀಮರು

Posted by Vidyamaana on 2024-08-06 19:50:09 |

Share: | | | | |


ವಿಟ್ಲ : ಪತಿ ವಿದೇಶದಲ್ಲಿ..ಪತ್ನಿ, ಮಕ್ಕಳು ತವರಿಗೆ ಹೋಗಿದ್ದಾಗ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ ಖದೀಮರು

ವಿಟ್ಲ: ವಿಟ್ಲ ಸಾಲೆತ್ತೂರು ನಿವಾಸಿ ಜಗನ್ನಾಥ್ ರವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ. ಜಗನ್ನಾಥ್‌ರವರು ಕೆಲಸದ ನಿಮಿತ್ತ ವಿದೇಶದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯ ಜಗನ್ನಾಥ್‌ ಹಾಗೂ ಇಬ್ಬರು ಮಕ್ಕಳು ಮಾತ್ರ ವಾಸ ಮಾಡುತ್ತಿದ್ದರು. ಆ.3ರಂದು ವಿಜಯ ತನ್ನ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದು ಆ.4ರಂದು ವಾಪಾಸು ಹಿಂದಿರುಗಿ ಮನೆಗೆ ಬರುವ ಈ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

Recent News


Leave a Comment: