ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲ ಕೋಡಿ ಮೂಲದ ರುಕಿಯ ಸಹಿತ ನಾಲ್ವರ ಬಂಧನ- ಪಿಂಪ್‌ ಲತೀಫ್ ಪರಾರಿ

Posted by Vidyamaana on 2023-03-08 11:42:43 |

Share: | | | | |


ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲ ಕೋಡಿ ಮೂಲದ ರುಕಿಯ ಸಹಿತ ನಾಲ್ವರ ಬಂಧನ- ಪಿಂಪ್‌ ಲತೀಫ್ ಪರಾರಿ

ಉಳ್ಳಾಲ: ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿರುವ ಉಳ್ಳಾಲ ಪೊಲೀಸರು, ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ದಾಳಿಯ ವೇಳೆ ಗ್ರಾಹಕ ಹಾಗೂ ಮಹಿಳೆಯರ ಮಧ್ಯೆ ಪಿಂಪ್‌ ರೀತಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಪರಾರಿಯಾಗಿ ತಪ್ಪಿಸಿಕೊಂಡಿದ್ದಾನೆ.ಬಂಟ್ವಾಳದ ಬೋಳಂತೂರು ವಿಟ್ಲಕೋಡಿ ನಿವಾಸಿ ರುಕಿಯಾ (50), ಉಳ್ಳಾಲ ಸುಭಾಶ್ ನಗರ, ಕಡಪರನಿವಾಸಿ ಅಬ್ದುಲ್ ಶಮೀರ್ (30), ಬೆಳ್ತಂಗಡಿ ಕಾಣಿಯೂರು ನೋಂಡಿಲ್ ಕಜೆ ಮನೆ ನಿವಾಸಿ ಅಬ್ದುಲ್ ರಝಾಕ್ ಉಸ್ಮಾನ್ (45) ಹಾಗೂ ಉಳ್ಳಾಲ ಅಕ್ಕರೆಕೆರೆಮಿಲಾಸ್ ಪ್ಲಾಟ್ ನಿವಾಸಿ ಮುಹಮ್ಮದ್ ಇಬ್ರಾಹೀಂ(38) ಬಂಧಿತ ಆರೋಪಿಗಳು. ಲತೀಫ್ ಎಂಬಾತ ತಲೆಮರೆಸಿಕೊಂಡಿರುವ ಪಿಂಪ್‌.ಉಳ್ಳಾಲದ ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ವಿಜೇತ ನಗರದಲ್ಲಿರುವ ʼ ಯಾನ್ವಿʼ   ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಉಳ್ಳಾಲ ಪೊಲೀಸರು ,  ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ.   ಈಸಂಬಂಧ ರುಕಿಯಾ ಮತ್ತು ಲತೀಫ್ ಎಂಬವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತುರುಕಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಲತೀಫ್  ತಲೆಮರೆಸಿಕೊಂಡಿದ್ದಾನೆ. ದಾಳಿಯ ವೇಳೆ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್’ಗಳು, 5000 ರೂ.ನಗದು ಸೇರಿ ಒಟ್ಟು 1,76,580 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್ ಹಾಗೂ ಪಿಎಸ್ಐ ಮಂಜುಳಾ, ಸಿಬ್ಬಂದಿಗಳಾದ ಮಂಜುನಾಥ್, ವಾಸುದೇವ, ಚವ್ಹಾಣ್, ದಾಕ್ಷಾಯಿಣಿ, ಲಕ್ಷ್ಮೀ, ಎಸಿಪಿ ಸ್ಮಾಡ್ ಸಿಬ್ಬಂದಿ ರೆಜಿ ಭಾಗವಹಿಸಿದ್ದರು.

ಸೌಜನ್ಯ ಕೊಲೆ ಪ್ರಕರಣ: ಸಂತೋಷ್ ರಾವ್ ಪರ ವಾದಿಸಿದ್ದು ಪುತ್ತೂರಿನ ವಕೀಲ ಮೋಹಿತ್

Posted by Vidyamaana on 2023-06-18 14:30:22 |

Share: | | | | |


ಸೌಜನ್ಯ ಕೊಲೆ ಪ್ರಕರಣ: ಸಂತೋಷ್ ರಾವ್ ಪರ ವಾದಿಸಿದ್ದು ಪುತ್ತೂರಿನ ವಕೀಲ ಮೋಹಿತ್

ಪುತ್ತೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ನ್ಯಾಯಾಲಯದಲ್ಲಿ ವಾದಿಸಿದ್ದು ಪುತ್ತೂರಿನ ವಕೀಲ. 

ಆ ಯುವ ವಕೀಲನ ಹೆಸರು ಮೋಹಿತ್ ಕುಮಾರ್ ಅಡ್ಕಾರ್ಮಜಲ್. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದವರು.

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಸಂತೋಷ್ ರಾವ್ ಅವರಿಂದ ೧ ರೂ.ವನ್ನು ಪಡೆಯದೇ ವಾದಿಸಿದ್ದು ಇಲ್ಲಿ ವಿಶೇಷ.

ಸಂತೋಷ್ ರಾವ್ ಅವರನ್ನು ಆರೋಪಿ ಎಂದು‌ ಬಂಧಿಸಿದಾಗಲೇ ಹಲವು ಅನುಮಾನಗಳು‌ ಹುಟ್ಟಿಕೊಂಡಿತ್ತು. ಈ ಅನುಮಾನಗಳ ಎಳೆಯನ್ನು‌ ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮೋಹಿತ್ ಅವರ ವಾದವನ್ನು ನ್ಯಾಯಾಲಯ ಎತ್ತಿ‌ ಹಿಡಿದಿದೆ. ನ್ಯಾಯಾಲಯದಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಪಡಿಸಲು ಮೋಹಿತ್ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾ ನಾಯಕನನ್ನು ನಿರ್ಲಕ್ಷಿಸಿದರೇ ಪ್ರಧಾನಿ ಮೋದಿ?: ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ

Posted by Vidyamaana on 2023-11-20 21:41:40 |

Share: | | | | |


ಆಸ್ಟ್ರೇಲಿಯಾ ನಾಯಕನನ್ನು ನಿರ್ಲಕ್ಷಿಸಿದರೇ ಪ್ರಧಾನಿ ಮೋದಿ?: ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ

ಹೊಸದಿಲ್ಲಿ: ನಿನ್ನೆ (ರವಿವಾರ) ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕನನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೋವನ್ನು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು, ಪ್ರಧಾನಿ ಮೋದಿ ನಡೆಗೆ ಟೀಕೆ ಮಾಡಿದ್ದಾರೆ.

  ಎಡಿಟ್ ಮಾಡಿದ ವಿಡಿಯೊ ನೋಡಲು ಕ್ಲಿಕ್ ಮಾಡಿ 

ವಿಶ್ವಕಪ್ ನಂತಹ ಒಂದು ಜಾಗತಿಕ ಕ್ರೀಡೆಯಲ್ಲಿ ಭಾರತ ಸೋತರೂ, ಗೆದ್ದ ಇತರೆ ದೇಶದ ತಂಡವನ್ನು ಅಭಿನಂದಿಸುವ ಗಟ್ಟಿತನ ಬೇಕು. ಅದೂ ಕೂಡಾ ಒಂದು ದೇಶದ ಪ್ರಧಾನಿ ಹೀಗೆ ಮಾಡಬಾರದಿತ್ತು ಎಂದು ನೆಟ್ಟಿಗರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಹಲವಾರು ನೆಟ್ಟಿಗರು ಇದನ್ನು ವೈರಲ್ ಮಾಡಿದ್ದು, ತಮ್ಮ ವಿರೋಧ ವ್ಯಕ್ತಪಡಿಸಿದ್ದರು.

Fact Check:

ವೈರಲ್ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ 


ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅವರು ವಿಶ್ವಕಪ್ ಟ್ರೋಫಿ ಪ್ರದಾನ ಮಾಡಿ ಬೆನ್ನು ತಟ್ಟಿ ಅಭಿನಂದಿಸಿದ್ದರು.


ಆದರೆ, ಕೆಲವರು ಪ್ರಧಾನಿ ಮೋದಿ ಅವರು ಪ್ಯಾಟ್ ಕಮಿನ್ಸ್ ಬೆನ್ನು ತಟ್ಟುವ ಹಾಗೂ ಅಭಿನಂದಿಸುವ ದೃಶ್ಯವನ್ನು ಎಡಿಟ್ ಮಾಡಿ ವೇದಿಕೆಯಿಂದ ಕೆಳಗಿಳಿಯುತ್ತಿರುವ ದೃಶ್ಯವನ್ನು ಮಾತ್ರ ಹಂಚಿಕೊಂಡಿದ್ದಾರೆ.

ವಿಶ್ವಕಪ್ ಫೈನಲ್​ ಪಂದ್ಯಕ್ಕೆ ಕ್ಷಣಗಣನೆ

Posted by Vidyamaana on 2023-11-19 04:26:58 |

Share: | | | | |


ವಿಶ್ವಕಪ್ ಫೈನಲ್​ ಪಂದ್ಯಕ್ಕೆ ಕ್ಷಣಗಣನೆ

ಮಂಗಳೂರು, ನ.18: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾಟವನ್ನು ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯ ಮೂಲಕ ನೇರ ಪ್ರಸಾರದಲ್ಲಿ ತೋರಿಸುವಂತೆ ರಾಜ್ಯ ಸರಕಾರ ಆದೇಶ ಮಾಡಿದೆ.


ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ಈ ಕುರಿತು ದೊಡ್ಡ ಪರದೆಯ ಮೂಲಕ ಸಾರ್ವಜನಿಕರಿಗೆ ನೇರ ಪ್ರಸಾರದಲ್ಲಿ ವೀಕ್ಷಣೆಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆಯನ್ನೂ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.


ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟವಾಡಲಿದ್ದು, ಗುಜರಾತಿನ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾಟ ನಡೆಯಲಿದೆ. ವಿಶ್ವಕಪ್ ಫೈನಲ್ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಕ್ರಿಕೆಟ್ ಮೇನಿಯಾ ಎದ್ದಿದೆ.

ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ಅ.22ರಂದು ನಡೆಯಲಿದೆ ಪುತ್ತೂರುದ ಪಿಲಿಗೊಬ್ಬು

Posted by Vidyamaana on 2023-09-23 13:10:28 |

Share: | | | | |


ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ಅ.22ರಂದು ನಡೆಯಲಿದೆ ಪುತ್ತೂರುದ ಪಿಲಿಗೊಬ್ಬು

ಪುತ್ತೂರು : ವಿಜಯ ಸಾಮ್ರಾಟ್  ಪುತ್ತೂರು ಇದರ ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ಪುತ್ತೂರುದ ಪಿಲಿಗೊಬ್ಬು  ಕಾರ್ಯಕ್ರಮ  ಅ.22 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ.ಕ ಜಿಲ್ಲೆಯ ಆಹ್ವಾನಿತ ಹತ್ತು ತಂಡಗಳ ಪಿಲಿಗೊಬ್ಬು ಸ್ಪರ್ಧೆಯು ನಡೆಯಲಿದ್ದು, ಈ ಸ್ಪರ್ಧೆಯ ಯಶಸ್ವಿಗೆ ದರ್ಬೆ ಶ್ರೀರಾಮ ಸೌಧದಲ್ಲಿ ಸಮಿತಿಯನ್ನು ರಚಿಸಲಾಯಿತು.

ಶ್ರೀರಾಮ ಸೌಧದ ಮಾಲಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಾರ್ಯಾಧ್ಯಕ್ಷರಾಗಿ ಸುಜಿತ್ ರೈ ಪಾಲ್ತಾಡ್, ಸಂಚಾಲಕರಾಗಿ ನಾಗರಾಜ್ ನಡುವಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷರುಗಳಾಗಿ ಸಂದೀಪ್ ರೈ ನಂಜೆ ಹಾಗೂ ದೇವಿಪ್ರಕಾಶ್ ಭಂಡಾರಿ, ಕಾರ್ಯದರ್ಶಿಗಳಾಗಿ ಸುರೇಶ್ ಪಿದಪಟ್ಲ ಹಾಗೂ ಶರತ್ ಕುಮಾರ್ ಮಾಡಾವು, ಜೊತೆ ಕಾರ್ಯದರ್ಶಿಯಾಗಿ ಶಂಕರ್ ಭಟ್, ಈಶಾನ್ಯ, ಕೋಶಾಧಿಕಾರಿಯಾಗಿ ರಾಜೇಶ್ ಕೆ. ಗೌಡ ಹಾಗೂ ಅಶೋಕ್ ಅಡೂರು, ಸಂಘಟನಾ ಕಾರ್ಯದರ್ಶಿಗಳಾಗಿ ಅರುಣ್ ರೈ ಹಾಗೂ ಉದಯ್ ಪಾಟಾಳಿ ಬೆಳ್ಳಾರೆ.


ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಯಾನಂದ ಶೆಟ್ಟಿ ಉಜೈಮಾರ್, ಪ್ರೀತಂಶೆಟ್ಟಿ ಪೆರ್ನೆ, ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಪ್ರಮೀತ್ ರಾಜ್ ಕಟ್ಟತ್ತಾರು, ವಿನಯ ರೈ ಕೋರಿಕ್ಕಾರು, ಆನಂದ ತೆಂಕಿಲ, ದಿನೇಶ್ ವಾಸುಕಿ, ಚಂದ್ರಶೇಖರ ರೈ ಸಣಂಗಲ, ಸತೀಶ್ ರೈ ದೇವಿನಗರ, ಕಿಶೋರ್ ಕೊಳಿಗೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ಸಚಿನ್ ಶೆಟ್ಟಿ ನರಿಮೊಗರು, ಸಾಯಿರಾಂ ಬಾಳಿಲ, ಸುಬ್ಬು ಸಂಟ್ಯಾರ್, ವಸಂತ ಕುಮಾರ್ ಪುತ್ತೂರು, ಸತೀಶ್ ಬಲಮುರಿ, ಪ್ರದೀಪ್ ರೈ ಕರ್ನೂರ್, ಪ್ರಶಾಂತ್ ಸವಣೂರು, ಯಶು ಸಂಪ್ಯ, ಯತೀಶ್ ಕುರಿಯ, ಪುನೀತ್ ಕೆಯ್ಯರು, ಹರ್ಷಕುಮಾರ್ ಪುತ್ತೂರು, ಚರಣ್ ರೈ ಮಠ, ಸಚಿನ್ ಸವಣೂರು, ಪವನ್ ಶೆಟ್ಟಿ, ಪ್ರಗತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Shocking News: ಪ್ರಿಯಕರನ ಮೇಲೆ ಬಿಸಿ ನೀರು ಎರಚಿದ ಪ್ರೇಯಸಿಯ ಕುಟುಂಬಸ್ಥರು!

Posted by Vidyamaana on 2024-05-21 14:51:40 |

Share: | | | | |


Shocking News: ಪ್ರಿಯಕರನ ಮೇಲೆ ಬಿಸಿ ನೀರು ಎರಚಿದ ಪ್ರೇಯಸಿಯ ಕುಟುಂಬಸ್ಥರು!

ಮಡಿಕೇರಿ: ಪ್ರೀತಿಸಿದ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಬಿಸಿ ನೀರು (Boilling water) ಎರಚಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ನಡೆದಿದೆ. 

ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ ನಿವಾಸಿ ಸುಹೇಲ್ (27) ಎಂಬ ಯುವಕನ ಮೇಲೆ ಬಿಸಿ ನೀರು ಎರಚಲಾಗಿದ್ದು ಯುವಕನ ಮುಖ, ಗುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

Recent News


Leave a Comment: