ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಕುಸಿದು ಬಿದ್ದ ಬಿಜೆಪಿ ಫೈರ್ ಬ್ರ್ಯಾಂಡ್​ ಯತ್ನಾಳ್​ ಆಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಶಿಫ್ಟ್

Posted by Vidyamaana on 2023-07-19 12:29:31 |

Share: | | | | |


ಕುಸಿದು ಬಿದ್ದ ಬಿಜೆಪಿ  ಫೈರ್ ಬ್ರ್ಯಾಂಡ್​  ಯತ್ನಾಳ್​ ಆಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು : ಹತ್ತು ಶಾಸಕರನ್ನು ವಿಧಾನ ಸಭೆಯಿಂದ ಅಮಾನತ್ತು ಮಾಡಲಾದ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಶಾಸಕರನ್ನು ಹೊತ್ತು ಹೊರ ಹಾಕುವ ವೇಳೆ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುತ್ತಿದ್ದರು, ಬಸವನಗೌಡ ಯತ್ನಾಳ್ ವಿಧಾನ ಸೌಧದ ಕಾರಿಡಾರ್‍ ನಲ್ಲಿ ಕುಸಿದು ಬಿದ್ದರು.ಗದ್ದಲದ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಸ್ವಸ್ಥ, ಬಿಪಿ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ತುರ್ತುವಾಹನದ ಮೂಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ ಸದ್ಯಸರು ವಿಧಾನಸಭೆಯ ಬಾಗಿಲ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಬಿಪಿಯಲ್ಲಿ ಏಳಿರಿಳಿತವಾಗಿ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದು, ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಅಂಬ್ಯುಲೆನ್ಸ್‌ ಮೂಲಕ ಶಿಫ್ಟ್‌ ಮಾಡಲಾಗಿದೆ ಅಂತ ತಿಳಿದು ಬಂದಿದೆ.

ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

Posted by Vidyamaana on 2024-02-03 22:26:23 |

Share: | | | | |


ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

ಕಾಞಂಗಾಡ್ : ಸ್ನಾನ ಮಾಡಲು ತೆರಳಿದ್ದ ಮಹಿಳೆ ಸ್ನಾನಗೃಹದಲ್ಲೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳದ ಕಾಞಂಗಾಡ್ ನಲ್ಲಿ ಸಂಭವಿಸಿದೆ.ಇಲ್ಲಿನ ಬಾವಾ ನಗರದ ನಿವಾಸಿ ಮಜೀದ್ ಮತ್ತು ಶಕೀಲಾ ದಂಪತಿಯ ಪುತ್ರಿ ಶುಹೈರಾ (36) ಮೃತ ದುರ್ದೈವಿಯಾಗಿದ್ದಾರೆ .ಸೇನಾ ಅಧಿಕಾರಿ ಕೋಝಿಕ್ಕೋಡ್ ಶರೀದ್ ಅವರ ಪತ್ನಿಯಾಗಿರುವ ಶುಹೈರಾ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾತ್ ರೂಂ ಗೆ ಸ್ನಾನಕ್ಕೆಂದು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.ಕೂಡಲೇ ಸ್ತಳಿಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಶುಹೈರಾ ಆದಾಗಲೇ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದ್ದು. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.

BIG NEWS : ಇನ್ಮುಂದೆ ರಾಜ್ಯದ ಗ್ರಾಮಪಂಚಾಯಿತಿಗಳಲ್ಲೇ ಸಿಗಲಿದೆ ಜನನ-ಮರಣ ಪ್ರಮಾಣಪತ್ರದ ಟಿಜಿಟಲ್ ದಾಖಲೆ

Posted by Vidyamaana on 2024-06-10 05:43:59 |

Share: | | | | |


BIG NEWS : ಇನ್ಮುಂದೆ ರಾಜ್ಯದ ಗ್ರಾಮಪಂಚಾಯಿತಿಗಳಲ್ಲೇ ಸಿಗಲಿದೆ ಜನನ-ಮರಣ ಪ್ರಮಾಣಪತ್ರದ ಟಿಜಿಟಲ್ ದಾಖಲೆ

ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲೇ ಜನನ, ಮರಣ ಪ್ರಮಾಣಪತ್ರಗಳ ಡಿಜಿಟಲ್‌ ದಾಖಲೆಗಳು ಸಿಗಲಿವೆ.ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ನೋಂದಣಿಗಳನ್ನು ದಾಖಲಿಸುವ ಉದ್ದೇಶದಿಂದ ಗ್ರಾಮಪಂಚಾಯಿತಿಗಳಲ್ಲೇ ಜನನ ಮರಣ ಪತ್ರಗಳ ಡಿಜಿಟಲ್‌ ದಾಖಲೆಗಳನ್ನು ನೀಡಲು ನಿರ್ಧರಿಸಿದೆ.

ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯ ಕೋಡಿಂಬಾಡಿ ಯಲ್ಲಿ ಧರೆ ಕುಸಿತ

Posted by Vidyamaana on 2024-08-03 21:43:22 |

Share: | | | | |


ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯ ಕೋಡಿಂಬಾಡಿ ಯಲ್ಲಿ ಧರೆ ಕುಸಿತ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೋಡಿಂಬಾಡಿ ಯಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆ ಬಂದ್ ಆಗಿದೆ. ಶಾಸಕ ಅಶೋಕ್‌ ಕುಮಾರ್ ರೈ ಅವರ ಮನೆಯ ಬಳಿಯಲ್ಲಿ ಈ ಭೂಕುಸಿತ ಉಂಟಾಗಿದ್ದು, ರಸ್ತೆಗೆ ಮಣ್ಣು ಬಿದ್ದಿದೆ.

ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

Posted by Vidyamaana on 2023-07-01 11:34:46 |

Share: | | | | |


ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ನಿಶ್ಚಿತವಾದ ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಗುರಿಯನ್ನು ಸಾಧಿಸುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು. ನಿರಂತರ ಪ್ರಯತ್ನದಿಂದ ಗೆಲುವು  ಸಾಧ್ಯ ಎಂದು ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಂ ಜಗನ್ನಾಥ ಕಾಮತ್ ಅಂಡ್ ಕೋ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಸಿಎ ಎಂ ಜಗನ್ನಾಥ ಕಾಮತ್ ಹೇಳಿದರು ಅವರು ಜುಲೈ ೧ರಂದು ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ವಾಣಿಜ್ಯ ಸಂಘದ ಉದ್ಘಾಟನೆ ಮತ್ತು ರಾಷ್ಟ್ರೀಯ ಸಿಎ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಿಎ ಮಾಡಲು ವಿದ್ಯಾರ್ಥಿಗಳಿಗೆ ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಸಾಮಾನ್ಯ ಗಣಿತ ಇನ್ನಿತರ ಕ್ಷೇತ್ರದಲ್ಲಿ ಪದವಿ ಅಗತ್ಯವಿರುತ್ತದೆ. ಸಿಎ ಮಾಡಲು ಬೇಕಾದ ಅರ್ಹತೆ ಪರಿಶ್ರಮದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾದ ಫೈನಾನ್ಸಿಯಲ್ ಎನಾಲಿಸ್ಟ್ ಅಟ್ ಅಮೆಜಾನ್ ನ ಸಿಎ ಕೆ ಮಹಮ್ಮದ್ ಫೈರೋಜ್ ಮಾತನಾಡಿ “ವೈಫಲ್ಯವು ಯಶಸ್ಸಿನ ಮೆಟ್ಟಿಲು ಕಷ್ಟಪಟ್ಟು”. ಓದಿ ವಿಷಯವನ್ನು ಸರಿಯಾಗಿ ಗ್ರಹಿಸಿಕೊಂಡಾಗ ವಿದ್ಯಾರ್ಥಿಗಳು ಸಿಎ ಆಗಲು ಸಾಧ್ಯವಾಗುತ್ತದೆ. ನಿರಂತರ ಪರಿಶ್ರಮ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ವಾಣಿಜ್ಯಶಾಸ್ತವನ್ನು ಅಧ್ಯಯನ ಮಾಡುವುದರಿಂದ ಹಲವಾರು ಅವಕಾಶಗಳು ಸಿಗುತ್ತದೆ. ಬ್ಯಾಂಕಿAಗ್ ಕ್ಷೇತ್ರ, ಚಾರ್ಟೆಡ್ ಅಕೌಂಟೆAಟ್ ನಂತಹ ಬೇರೆ ಬೇರೆ ಕ್ಷೇತ್ರಗಳು ವಿದ್ಯಾರ್ಥಿಗಳ ಮುಂದೆ ತೆರೆದಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ ವಿದ್ಯಾರ್ಥಿಗಳಾದ ನಿಧಾ ಅತಿಥಿಗಳನ್ನು ಸ್ವಾಗತಿಸಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಆಸ್ತಿಕ ವಂದಿಸಿ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು

ಉದ್ಯೋಗ ಮಾಹಿತಿ : 3500 ಅಗ್ನಿವೀರರ ನೇಮಕಾತಿಗೆ ಅರ್ಜಿ ಆಹ್ವಾನ ಇಲ್ಲಿದೆ ಮಾಹಿತಿ

Posted by Vidyamaana on 2023-07-29 07:37:54 |

Share: | | | | |


ಉದ್ಯೋಗ ಮಾಹಿತಿ : 3500 ಅಗ್ನಿವೀರರ ನೇಮಕಾತಿಗೆ ಅರ್ಜಿ ಆಹ್ವಾನ ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರವಾಯು ಪ್ರವೇಶಕ್ಕಾಗಿ ಆಯ್ಕೆ ಪರೀಕ್ಷೆಗೆ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆಆಸಕ್ತ ಅಭ್ಯರ್ಥಿಗಳು agnipathvayu.cdac.in ಗಂಟೆಗೆ ಐಎಎಫ್ ಅಗ್ನಿವೀರವಾಯು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ನೋಂದಣಿ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನಾಂಕವಾಗಿದೆ.


ವಯಸ್ಸಿನ ಮಿತಿ : ಅಭ್ಯರ್ಥಿಗಳು ಜೂನ್ 27, 2003 ರಿಂದ ಡಿಸೆಂಬರ್ 27, 2006 ರ ನಡುವೆ ಜನಿಸಿರಬೇಕು. ಒಂದು ವೇಳೆ, ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ತೇರ್ಗಡೆಯಾದರೆ, ದಾಖಲಾತಿಯ ದಿನಾಂಕದಂದು ಗರಿಷ್ಠ ವಯಸ್ಸಿನ ಮಿತಿ 21 ವರ್ಷಗಳು ಆಗಿರಬೇಕು.


ಶೈಕ್ಷಣಿಕ ಅರ್ಹತೆ ವಿಜ್ಞಾನ ವಿಷಯಗಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ನೊಂದಿಗೆ ಇಂಟರ್ ಮೀಡಿಯೇಟ್ / 10 + 2 / ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.ಅಥವಾ


ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಎಂಜಿನಿಯರಿಂಗ್ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ (ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ / ಕಂಪ್ಯೂಟರ್ ಸೈನ್ಸ್ / ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ / ಇನ್ಫರ್ಮೇಷನ್ ಟೆಕ್ನಾಲಜಿ) ಅನ್ನು ಒಟ್ಟು 50% ಅಂಕಗಳೊಂದಿಗೆ ಮತ್ತು ಡಿಪ್ಲೊಮಾ ಕೋರ್ಸ್ನಲ್ಲಿ ಇಂಗ್ಲಿಷ್ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (ಅಥವಾ ಡಿಪ್ಲೊಮಾ ಕೋರ್ಸ್ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್ / ಮೆಟ್ರಿಕ್ಯುಲೇಷನ್ನಲ್ಲಿ).ಅಥವಾ


ವೃತ್ತಿಪರವಲ್ಲದ ವಿಷಯದೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಅನ್ನು ಉತ್ತೀರ್ಣರಾಗಿರಬೇಕು. ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಭೌತಶಾಸ್ತ್ರ ಮತ್ತು ಗಣಿತವನ್ನು ಒಟ್ಟು 50% ಅಂಕಗಳೊಂದಿಗೆ ಮತ್ತು ವೃತ್ತಿಪರ ಕೋರ್ಸ್ನಲ್ಲಿ ಇಂಗ್ಲಿಷ್ನಲ್ಲಿ 50% ಅಂಕಗಳೊಂದಿಗೆ (ಅಥವಾ ವೃತ್ತಿಪರ ಕೋರ್ಸ್ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್ / ಮೆಟ್ರಿಕ್ಯುಲೇಷನ್ನಲ್ಲಿ) ಪಡೆದಿರಬೇಕು.


ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಯಾವುದೇ ಸ್ಟ್ರೀಮ್ / ವಿಷಯಗಳಲ್ಲಿ ಇಂಟರ್ಮೀಡಿಯೇಟ್ / 10 + 2 / ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಮತ್ತು ಇಂಗ್ಲಿಷ್ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಥವಾ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಕನಿಷ್ಠ 50% ಅಂಕಗಳೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಅನ್ನು ಉತ್ತೀರ್ಣರಾಗಿರಬೇಕು ಮತ್ತು ವೃತ್ತಿಪರ ಕೋರ್ಸ್ನಲ್ಲಿ ಇಂಗ್ಲಿಷ್ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (ಅಥವಾ ವೃತ್ತಿಪರ ಕೋರ್ಸ್ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್ / ಮೆಟ್ರಿಕ್ಯುಲೇಷನ್ನಲ್ಲಿ).


ವೈದ್ಯಕೀಯ ಮಾನದಂಡಗಳು : ಅಗ್ನಿವೀರವಾಯು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಾಮಾನ್ಯ ವೈದ್ಯಕೀಯ ಮಾನದಂಡಗಳು ಈ ಕೆಳಗಿನಂತಿವೆ.


ಎತ್ತರ ಪುರುಷ ಅಭ್ಯರ್ಥಿಗಳಿಗೆ: ಕನಿಷ್ಠ ಎತ್ತರ 152.5 ಸೆಂ.ಮೀ. ಮಹಿಳಾ ಅಭ್ಯರ್ಥಿಗಳಿಗೆ: ಕನಿಷ್ಠ ಎತ್ತರ 152 ಸೆಂ.ಮೀ. ಉತ್ತರಾಖಂಡದ ಈಶಾನ್ಯ ಅಥವಾ ಗುಡ್ಡಗಾಡು ಪ್ರದೇಶಗಳಿಗೆ ಸೇರಿದ ಅಭ್ಯರ್ಥಿಗಳಿಗೆ, ಕನಿಷ್ಠ ಎತ್ತರ 147 ಸೆಂ.ಮೀ. ಲಕ್ಷದ್ವೀಪದ ಅಭ್ಯರ್ಥಿಗಳ ವಿಷಯದಲ್ಲಿ, ಕನಿಷ್ಠ ಎತ್ತರ 150 ಸೆಂ.ಮೀ.


ತೂಕ: ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ.


ಎದೆ: ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಎದೆಯ ಗೋಡೆಯು ಕನಿಷ್ಠ 5 ಸೆಂ.ಮೀ ವಿಸ್ತರಣೆಯೊಂದಿಗೆ ಉತ್ತಮ ಅನುಪಾತದಲ್ಲಿರಬೇಕು.


ಶ್ರವಣ: ಅಭ್ಯರ್ಥಿಯು ಸಾಮಾನ್ಯ ಶ್ರವಣವನ್ನು ಹೊಂದಿರಬೇಕು, ಅಂದರೆ ಪ್ರತಿ ಕಿವಿಯಿಂದ 6 ಮೀಟರ್ ದೂರದಿಂದ ಬಲವಂತದ ಪಿಸುಗುಟ್ಟುವಿಕೆಯನ್ನು ಪ್ರತ್ಯೇಕವಾಗಿ ಕೇಳಲು ಸಾಧ್ಯವಾಗುತ್ತದೆ.


ದಂತ: ಆರೋಗ್ಯಕರ ಒಸಡುಗಳು, ಉತ್ತಮ ಹಲ್ಲುಗಳು ಮತ್ತು ಕನಿಷ್ಠ 14 ಹಲ್ಲಿನ ಅಂಕಗಳನ್ನು ಹೊಂದಿರಬೇಕು.


ವೇತನ ಶ್ರೇಣಿ : ಅಗ್ನಿವೀರವಾಯು ಅವರಿಗೆ ಅವರ ಮಾಸಿಕ ಕೊಡುಗೆ ಮತ್ತು ಅವರ ನಿಶ್ಚಿತಾರ್ಥದ ಅವಧಿ ಪೂರ್ಣಗೊಂಡ ನಂತರ ಸರ್ಕಾರದಿಂದ ಸಮಾನ ಕೊಡುಗೆಯನ್ನು ಒಳಗೊಂಡ ಒಂದು ಬಾರಿಯ ಸೇವಾ ನಿಧಿ ಪ್ಯಾಕೇಜ್ ಅನ್ನು ಈ ಕೆಳಗಿನಂತೆ ನೀಡಲಾಗುವುದು:ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ: https://agnipathvayu.cdac.in/AV/img/upcoming/AGNIVEER_VAYU_01-2024.pdf

Recent News


Leave a Comment: