ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ಆದೇಶದ ವಿರುದ್ಧ ಬೃಹತ್ ಪ್ರತಿಭಟನೆ

Posted by Vidyamaana on 2023-11-21 16:03:43 |

Share: | | | | |


ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ಆದೇಶದ ವಿರುದ್ಧ ಬೃಹತ್ ಪ್ರತಿಭಟನೆ

ಪುತ್ತೂರು: ಬಜರಂಗದಳ ಕಾರ್ಯಕರ್ತರ ಮೇಲೆ

ಗಡಿಪಾರು ನೋಟೀಸ್ ಜಾರಿ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ತಿಕ್ಕುವ ಹಿಂದೂ ವಿರೋಧಿ ಆಡಳಿತ ವ್ಯವಸ್ಥೆಯ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಬಜರಂಗದಳದ ವತಿಯಿಂದ ಬೃಹತ್‌ ಪ್ರತಿಭಟನೆ ಸೋಮವಾರ ಆಡಳಿತ ಸೌಧದ ಎದುರಿರುವ ಜೈ ಜವಾನ್ ಸ್ಮಾರಕದ ಬಳಿ ನಡೆಯಿತು.


ಪ್ರತಿಭಟನೆಯನ್ನುದ್ದೇಶಿಸಿ ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್‌ ಕೆ.ಆ‌ರ್. ಮಾತನಾಡಿ, ದೇಶದ ಪರವಾಗಿ ಕೆಲಸ ಮಾಡುತ್ತಿರುವ, ದೇಶದ ಸಾಂಸ್ಕೃತಿಕತೆಯ ಪ್ರತೀಕವಾದ ಗೋವಿನ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷೆಯಲ್ಲಿ ತೊಡಗಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಗಡಿಪಾರಿಗೆ ಆದೇಶಿಸಿರುವುದು ಖಂಡನೀಯ. ಜಿಹಾದಿ, ಭಯೋತ್ಪಾದಕರಂತಹ ರಾಷ್ಟ್ರದ್ರೋಹದ ಕೆಲಸ ಮಾಡುವವರನ್ನು ಗಡಿಪಾರು ಮಾಡಿ. ಅದನ್ನು ಬಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಈ ರೀತಿಯ ಶಿಕ್ಷೆಗೆ ಗುರಿಪಡಿಸಿದರೆ ಯಾವುದೇ ಹೋರಾಟಕ್ಕೆ ನಾವು ಸಿದ್ಧ. ತಕ್ಷಣ ಗಡಿಪಾರು ವಿಚಾರದ ಕುರಿತು ಮತ್ತೊಮ್ಮೆ ಚರ್ಚೆ ನಡೆಸಿ ಗಡಿಪಾರು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಇದಕ್ಕೆ ಸೂಕ್ತ ನ್ಯಾಯ ಸಿಗದಿದ್ದಲ್ಲಿ ಗಡಿಪಾರು ಯಾರೆನ್ನೆಲಾ ಮಾಡಬೇಕು ಎಂಬ ಪಟ್ಟಿಯನ್ನು ನಾವು ನೀಡುತ್ತೇವೆ. ಅವರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಿದರು.


ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಐದು ವರ್ಷದ ಹಿಂದೆ ಕಾಂಗ್ರೆಸ್ ಸರಕಾರ ಏನು ಮಾಡುತ್ತಿತ್ತು. ಅದನ್ನು ಅಧಿಕಾರಕ್ಕೆ ಬಂದು ಪುನರಪಿ ಮಾಡಲು ಹೊರಟಿದೆ. ಗಡಿಪಾರಿನಂತಹ ಶಿಕ್ಷೆ ವಿಧಿಸಿ ಹಿಂದೂಗಳ ಮನಸ್ಥೆರ್ಯವನ್ನು ಕುಸಿಯುವಂತಹ ಕೆಲಸ ಮಾಡುತ್ತಿದೆ. ಈ ಕುರಿತು ಜಿಲ್ಲಾಧ್ಯಕ್ಷರ ಬಳಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇವೆ. ಈ ವಿಚಾರವನ್ನು ಅಧಿಕಾರಿಗಳು ಮತ್ತೊಮ್ಮೆ ಮರು ಪರಿಶೀಲಿಸಿ ಗಡಿಪಾರಿನ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿಶೋ‌ರ್ ಬೊಟ್ಯಾಡಿ, ಬಿಜೆಪಿ ಮುಖಂಡರಾದ ಜೀವಂಧ‌ರ್ ಜೈನ್, ಯುವರಾಜ ಪೆರಿಯತ್ತೋಡಿ, ಬಜರಂಗದಳದ ಶ್ರೀಧರ್ ತೆಂಕಿಲ ಮತ್ತಿತರರು ಪಾಲ್ಗೊಂಡಿದ್ದರು. ವಿಶಾಖ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

BREAKING: ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ ಅಂಬರೀಶ್ ಮೈತ್ರಿ ಅಭ್ಯರ್ಥಿಗೆ ಬೆಂಬಲ

Posted by Vidyamaana on 2024-04-03 13:10:51 |

Share: | | | | |


BREAKING: ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ ಅಂಬರೀಶ್ ಮೈತ್ರಿ ಅಭ್ಯರ್ಥಿಗೆ ಬೆಂಬಲ

 ಮಂಡ್ಯ: ಲೋಕಸಭೆ ಚುನಾವಣೆ ಕುರಿತಂತೆ ತಮ್ಮ ನಿರ್ಧಾರವನ್ನು ಸುಮಲತಾ ಅವರು ತಿಳಿಸಿದ್ದಾರೆ. ಅವರು ಇಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ಲೋಕಸಭೆ ಚುನಾವಣೆಯ ಕುರಿತಂತೆ ಅವರ ನಿರ್ಧಾರವನ್ನು ತಿಳಿಸಿದರು.ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಅವರು ಹೇಳಿದರು.


ಕೊನೆ ಹಂತದ ತನಕ ನಾನು ಮಂಡ್ಯವನ್ನು ಬಿಜೆಪಿಗೆ ಉಳಿಸಿಕೊಳ್ಳುವುದಕ್ಕೆ ನಾನು ಹೋರಾಡಿದೆ. ನನಗೆ ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಮೈಸೂರಿನಿಂದ ಹಾಗೂ ಹಲವು ಆಮೀಶಗಳು ಬಂದವು ಆದರೆ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ ಅಂತ ಹೇಳಿದರು. ನನಗೆ ಸ್ವಾರ್ಥ ರಾಜಕಾಣ ಮಾಡಿ ಗೊತ್ತಿಲ್ಲ ಅಂತ ಹೇಳಿದರು. ಹಲವು ಮಂದಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವಂತೆ ಕೇಳಿದರು. ಇನ್ನೂ ಕೆಲವು ಮಂದಿ ಏಕಾಂಗಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದರು. ಇನ್ನೂ ಹಲವು ಕಡೆಗಳಲ್ಲಿ ಮಾಹಿತಿಯನ್ನು ಪಡೆದುಕೊಂಡು, ನಾನು ಕೂಡ ಚರ್ಚೆ ಮಾಡಿ ನಾನು ನಿರ್ಧಾರ ಮಾಡಿ ಈ ನಿರ್ಧಾರವನ್ನು ತೆಗೆದುಕೊಂಡಿರುವೆ ಅಂತ ಹೇಳಿದರು. ನನಗೆ ಪ್ರಧಾನಿ ಮೋದಿಯವರು ಕೂಡ ನನ್ನ ಸ್ಪರ್ಧೆ ಬಗ್ಗೆ ಮಾತನಾಡಿ ನನಗೆ ಸಂದೇಶವನ್ನು ನೀಡಿದ್ದಾರೆ ಅಂಥ ಹೇಳಿದ್ದಾರೆ.

ಮಹಿಳೆಯ ಕುತ್ತಿಗೆ ಹಿಸುಕಿ ಹತ್ಯೆಗೈದು ವ್ಯಕ್ತಿ ಪರಾರಿ, ಕಾರಣ?

Posted by Vidyamaana on 2024-01-05 09:09:09 |

Share: | | | | |


ಮಹಿಳೆಯ ಕುತ್ತಿಗೆ ಹಿಸುಕಿ ಹತ್ಯೆಗೈದು ವ್ಯಕ್ತಿ ಪರಾರಿ, ಕಾರಣ?

ಬೆಂಗಳೂರು (ಜ.05): ಮನೆಯಲ್ಲಿ ಏಕಾಂಗಿಯಾಗಿದ್ದಾಗ ಹಾರ್ಡ್‌ವೇರ್ ಮಳಿಗೆ ಮಾಲಿಕರೊಬ್ಬರ ಪತ್ನಿಯನ್ನು ಕಿಡಿಗೇಡಿಯೊಬ್ಬ ಕುತ್ತಿಗೆ ಹಿಸುಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಪ್ರಭಾಕರ ರೆಡ್ಡಿ ಲೇಔಟ್‌ ನಿವಾಸಿ ನೀಲಂ (30) ಕೊಲೆಯಾದ ದುರ್ದೈವಿ. ಈ ಕೃತ್ಯದಲ್ಲಿ ಮೃತರ ಪರಿಚಿತನ ಕೈವಾಡದ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.ತಮ್ಮ ಪತಿ ಹಾಗೂ ಮಕ್ಕಳು ಹೊರಗೆ ಹೋದ ಬಳಿಕ ನೀಲಂ ಒಬ್ಬರೇ ಮನೆಯಲ್ಲಿದ್ದರು. ಆ ವೇಳೆ ಅವರ ಮನೆಯೊಳಗೆ ಪ್ರವೇಶಿಸಿರುವ ಕಿಡಿಗೇಡಿಯು ನೀಲಂ ಅವರನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೆಲ ಹೊತ್ತಿನ ಬಳಿಕ ಶಾಲೆಗೆ ಮುಗಿಸಿ ಮೃತರ ಕಿರಿಯ ಪುತ್ರ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.ಹದಿಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದ ಉತ್ತರಪ್ರದೇಶ ಮೂಲದ ಪ್ರದ್ಯುಮ್ನ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಪ್ರಭಾಕರ ರೆಡ್ಡಿ ಲೇಔಟ್‌ನಲ್ಲಿ ನೆಲೆಸಿದ್ದರು. ಮನೆ ಸಮೀಪದಲ್ಲೇ ಹಾರ್ಡ್ ವೇರ್‌ ಮಳಿಗೆ ನಡೆಸುತ್ತಿದ್ದ ಪ್ರದ್ಯುಮ್ನ, ಪೇಂಟರ್‌ ಗುತ್ತಿಗೆದಾರರೂ ಆಗಿದ್ದಾರೆ. ಎಂದಿನಂತೆ ಬೆಳಗ್ಗೆ 9 ಗಂಟೆಗೆ ಅಂಗಡಿಗೆ ಬಾಗಿಲು ತೆರೆಯಲು ಅವರು ಮನೆಯಿಂದ ಹೊರಟರೆ, ಮಕ್ಕಳು ಶಾಲೆಗೆ ತೆರಳಿದ್ದರು. ಆಗ ನೀಲಂ ಮಾತ್ರ ಮನೆಯಲ್ಲಿದ್ದಾಗ ಬೆಳಗ್ಗೆ 11.30ಕ್ಕೆ ಬಂದ ಆರೋಪಿ ಹತ್ಯೆ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಶಾಲೆಗೆ ಮುಗಿಸಿ ಮಧ್ಯಾಹ್ನ12 ಗಂಟೆಗೆ ಮೃತರ ಕಿರಿಯ ಪುತ್ರ ಮನೆಗೆ ಮರಳಿದ್ದಾನೆ. ಆ ವೇಳೆ ಬಾಗಿಲು ತೆರೆದಿದ್ದ ಮನೆಯೊಳಗೆ ಪ್ರವೇಶಿಸಿ ಬಾಲಕ, ಕೋಣೆಯಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದ ತಾಯಿಯನ್ನು ಎಚ್ಚರಗೊಳಿಸಲು ಯತ್ನಿಸಿ ವಿಫಲವಾಗಿದ್ದಾನೆ. ಆಗ ಜೋರಾಗಿ ಬಾಲಕ ಅಳಲು ಕೇಳಿ ಆಗಮಿಸಿದ ನೆರೆಹೊರೆಯವರು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

Posted by Vidyamaana on 2023-03-30 06:23:29 |

Share: | | | | |


ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ನೆಲ್ಯಾಡಿ ಸಮೀಪದ ಜ್ಞಾನೋದಯ ಬೆಥನಿ ಕಾಲೇಜು ಸಮೀಪ ಕರ್ಬಸಂಕ ಎಂಬಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಪತಿ ಮತ್ತು ಪುತ್ರ ಗಂಭೀರ ಗಾಯಗೊಂಡ ಘಟನೆ ಮಾ.30ರಂದು ಬೆಳಿಗ್ಗೆ ನಡೆದಿದೆ.ಅನ್ನಪೂರ್ಣ(50ವ.) ಮೃತ ಮಹಿಳೆ. ಇವರ ಪುತ್ರ ಅಶ್ವಿನ್(25ವ)ಹಾಗೂ ಪತಿ ಭಾಸ್ಕರ(56)ಗಂಭೀರ ವಾಗಿ ಗಾಯಗೊಂಡವರು. ಕಾರನ್ನು ಅಶ್ವಿನ್ ಚಲಾಯಿಯಿಸುತ್ತಿದ್ದು ಕಾರು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಚಲಿಸುತಿತ್ತು ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆಕರೆದುಕೊಂಡು ಹೋಗಲಾಗಿದೆ.

ಅಪಘಾತವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ರಸ್ತೆ ಹಾಗೂ ಸೇತುವೆ ಕಾಮಾಗಾರಿ ನಡೆಯುತ್ತಿರುವ ಹಿನ್ನಲೆ ಡಿವೈಡರ್ ಆಳವಡಿಸಲಾಗಿದೆ. ಇದಕ್ಕೆ ಚಾಲಕ ಢಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿ ಬಿ.ಎಸ್., ಸಬ್ ಇನ್ಸೆಕ್ಟರ್ ರಾಜೇಶ್ ಕೆ.ವಿ., ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ, ಕುಶಾಲಪ್ಪ ನಾಯ್ಕರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ ಸರ್ಕಾರ.

Posted by Vidyamaana on 2023-02-21 10:48:59 |

Share: | | | | |


ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ  ಸರ್ಕಾರ.

ಬೆಂಗಳೂರು: ಉನ್ನತ ಸ್ಥಾನದಲ್ಲಿದ್ದು ಪರಸ್ಪರ ಕಿತ್ತಾಟ ನಡೆಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರನ್ನು ಸರ್ಕಾರ ಇದೀಗ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಮುಜರಾಯಿ ಇಲಾಖೆ ಆಯುಕ್ತರಾಗಿದ್ದ ಸಿಂಧೂರಿ ಹಾಗೂ ಕರಕುಶಲ ನಿಗಮದ ಎಂಡಿ ರೂಪಾ ಹಾಗೂ ರೂಪ ಪತಿ ಐಎಎಸ್​ ಅಧಿಕಾರಿ ಮನೀಶ್‌ ಮುದ್ಗಲ್‌ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.

ರೂಪ ಹಾಗೂ ಸಿಂಧೂರಿಗೆ ಸ್ಥಳವನ್ನು ತೋರಿಸದೆ ವರ್ಗಾಯಿಸಿರುವುದು ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಮುದ್ಗಲ್‌ ಅವರನ್ನು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.

ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

Posted by Vidyamaana on 2023-01-26 13:03:53 |

Share: | | | | |


ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

ಪುತ್ತೂರು: ಯಾವುದೇ ಪ್ರವಾಸಿಗ ಅಥವಾ ಯಾತ್ರಾರ್ಥಿ ತಾನು ಸಾಗುವ ಪ್ರಯಾಣದ ಸಂದರ್ಭ ಎದುರಾದ ಊರು ಯಾವುದೆಂದು ನೋಡಿಯೇ ನೋಡುತ್ತಾನೆ. ಆದರೆ ಪುತ್ತೂರು ಬಂದಾಗ ಮಾತ್ರ ಆತನಿಗೆ ಇದು ಯಾವ ಊರು ಎಂಬ ಅನುಮಾನ ಬಾರದೇ ಇರದು. ಇದಕ್ಕೆ ಕಾರಣ ಮುರದ ಬಳಿ ಸ್ವಾಗತಿಸುವ ಕಮಾನು.

ಮುರ ಹಾಗೂ ನೆಹರೂನಗರದ ನಡುವೆ ಪುತ್ತೂರು ನಗರಸಭೆಯ ಕಮಾನು ಎದುರುಗೊಳ್ಳುತ್ತದೆ. ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಪುತ್ತೂರು ನಗರಕ್ಕೆ ಸ್ವಾಗತ ನೀಡುವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆ. ಆದರೆ ವೈಚಿತ್ರ್ಯವೆಂದರೆ, ಯಾವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆಯೋ, ಆ ಉದ್ದೇಶವನ್ನೇ ಮರೆತಂತಿದೆ.

       ಪುತ್ತೂರು ನಗರಕ್ಕೆ ಸ್ವಾಗತ ಎನ್ನುವುದು ಕಮಾನಿನ ಫಲಕದಲ್ಲಿದ್ದ ಒಕ್ಕಣೆ. ಆದರೆ ಇಂದು ನೋಡಿದರೆ, `ಪು’ ಅಕ್ಷರ ಅಳಿಸಿಹೋಗಿದೆ. `ತ್ತೂರು’ ಶಬ್ದ ಮಾತ್ರ ಕಾಣಿಸುತ್ತಿದೆ. ಆದ್ದರಿಂದ ಹೊರಭಾಗದಿಂದ ಬಂದವರು, ಇದನ್ನು ಯಾವ ರೀತಿಯಲ್ಲಿ ಅರ್ಥವಿಸಿಕೊಳ್ಳಬೇಕು. ಸುತ್ತೂರು, ಮಿತ್ತೂರು, ಹತ್ತೂರು ಹೀಗೆ ಹತ್ತು ಹಲವು ಹೆಸರುಗಳ ಗೊಂದಲಕ್ಕೆ ಈಡಾಗುವ ಸಾಧ್ಯತೆಯೇ ಅಧಿಕ.

   ಈ ಕಮಾನಿನ ಫಲಕದಲ್ಲಿ ಹೆಚ್ಚಿನ ಎಲ್ಲಾ ಶಬ್ದಗಳು ಅಳಿಸಿಹೋಗಿದೆ. ಕಂಬ ಹಾಗೂ ಫಲಕ ಬಣ್ಣ ಕಳೆದುಕೊಂಡು, ವಿಕೃತಿಗೊಂಡಿದೆ. ಪ್ರವಾಸಿಗರ ಗಮನವನ್ನು ಸೆಳೆಯಬೇಕಿದ್ದ ಫಲಕ, ಪ್ರವಾಸಿಗರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ.

      ಇಂತಹ ಕಮಾನು, ಫಲಕಗಳು ಪುತ್ತೂರು ಪೇಟೆಯ ಅಂದವನ್ನು ಹೆಚ್ಚಿಸಬೇಕಿತ್ತು. ಮಾತ್ರವಲ್ಲ, ಪುತ್ತೂರು ಪೇಟೆಯ ಪ್ರತಿಬಿಂಬದಂತೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಈ ಫಲಕ ಪುತ್ತೂರು ಪೇಟೆಯ ಅಂದವನ್ನು ಕೆಡಿಸುವಂತಿದೆ. ಪುತ್ತೂರು ನಗರಸಭೆ ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿದೆ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ಈ ಫಲಕವನ್ನು ನೋಡಿದರೆ, ಇದು ನಿಜವೇ ಎಂಬ ಪ್ರಶ್ನೆಗೆ ದಾರಿ ಮಾಡಿಕೊಡುವಂತಿದೆ.

Recent News


Leave a Comment: