ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಅರುಣ್ ಕುಮಾರ್ ಪುತ್ತಿಲರಿಗೆ ಜಾಮೀನು ಮಂಜೂರು - ಆರೋಪಗಳಿಗೆ ಕಾನೂನು ಹೋರಾಟಕ್ಕೆ ತಯಾರಿ ಪುತ್ತಿಲ

Posted by Vidyamaana on 2024-09-02 14:49:54 |

Share: | | | | |


ಅರುಣ್ ಕುಮಾರ್ ಪುತ್ತಿಲರಿಗೆ ಜಾಮೀನು ಮಂಜೂರು - ಆರೋಪಗಳಿಗೆ ಕಾನೂನು ಹೋರಾಟಕ್ಕೆ ತಯಾರಿ ಪುತ್ತಿಲ

ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನಲೆಯಲ್ಲಿ ಕಾನೂನಿಗೆ ಗೌರವ ನೀಡಿ ನ್ಯಾಯಾಲಯಕ್ಕೆ ತನ್ನ ವಕೀಲರಾದ ನರಸಿಂಹ ಪ್ರಸಾದ್‌ ಮೂಲಕ ಅರುಣ್ ಕುಮಾರ್ ಪುತ್ತಿಲ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರುಣ್ ಕುಮಾರ್ ಪುತ್ತಿಲ ಅವರಿಗೆ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ಬಂದಂತಹ ಆರೋಪಗಳಿಗೆ ಕಾನೂನು ರೀತಿಯ ಹೋರಾಟ ಮಾಡುತ್ತೇನೆ ಎಂದು ಅರುಣ್ ಕುಮಾ‌ರ್ ಪುತ್ತಿಲ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ರೋಟರಿ ಸೆಂಟ್ರಲ್ ನಿಂದ ಮನೆಗೊಂದು ಗಿಡ

Posted by Vidyamaana on 2023-07-28 03:15:42 |

Share: | | | | |


ರೋಟರಿ ಸೆಂಟ್ರಲ್ ನಿಂದ ಮನೆಗೊಂದು ಗಿಡ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಪ್ರಶಾಂತಿ ಸದ್ಭಾವನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಕೇಪುಳು ಸಿಗಂದೂರು ಮನೆಯಲ್ಲಿ ಮನೆಗೊಂದು ಗಿಡ ಕಾರ್ಯಕ್ರಮ ನಡೆಯಿತು.


ಮೈಸೂರಿನ ಅವಧೂತರಾದ ಅರ್ಜುನ್ ಮಹಾರಾಜ್ ಗುರೂಜಿಯವರು ಗಿಡ ವಿತರಣೆಗೆ ಚಾಲನೆ ನೀಡಿದರು.


ಸಿಗಂದೂರು ಮನೆಯ ಡಾ ಸಂತೋಷ್ ಪ್ರಭು, ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಮದುಸೂದನ್ ನಾಯಕ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ, ಮೆಂಬರ್ಶಿಪ್ ಡೆವಲಪ್ ಮೆಂಟ್ ಚೇರ್ ಮೇನ್ ಅಶ್ರಫ್, ಸವಣೂರು ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ಸದಸ್ಯರಾದ ವಸಂತ ಶಂಕರ್, ಉಪನ್ಯಾಸಕಿ ಗೀತಾ ವಸಂತ್ ಉಪಸ್ಥಿತರಿದ್ದರು.

ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

Posted by Vidyamaana on 2023-02-17 05:34:28 |

Share: | | | | |


ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕಡಬ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.18 ಶನಿವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.

ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಸಂಜೆ 6 ಕ್ಕೆ ಕುಣಿತ ಭಜನೆ,  ಮಹಾಪೂಜೆ  ಮತ್ತು ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 12 ಕ್ಕೆ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಮುಳಿಯ ಪುತ್ತೂರು – ಬೆಳ್ತಂಗಡಿ ಶೋರೂಂಗಳಲ್ಲಿ ಡೈಮಂಡ್ ಪ್ರಭೆ

Posted by Vidyamaana on 2023-09-18 15:56:15 |

Share: | | | | |


ಮುಳಿಯ ಪುತ್ತೂರು – ಬೆಳ್ತಂಗಡಿ ಶೋರೂಂಗಳಲ್ಲಿ ಡೈಮಂಡ್ ಪ್ರಭೆ

ಪುತ್ತೂರು: ವೈವಿಧ್ಯಮಯ ಚಿನ್ನಾಭರಣಗಳಿಗೆ ಹೆಸರುವಾಸಿಯಾಗಿರುವ ಮುಳಿಯ ಜ್ಯುವೆಲ್ಲರ್ಸ್’ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಸೆ. 18ರಿಂದ ಅ. 5ರವರೆಗೆ ಡೈಮಂಡ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ.


ಕೈಗಟುಕು ವೈಭವ ಎನ್ನುವ ಸಾಲಿನೊಂದಿಗೆ ಗ್ರಾಹಕರ ಮುಂದೆ ಬಂದಿರುವ ಡೈಮಂಡ್ ಫೆಸ್ಟ್, ಹೆಸರಿನಂತೆ ಗ್ರಾಹಕರ ಕೈಗೆಟಕುವ ರೀತಿಯಲ್ಲಿದೆ. ಮಾತ್ರವಲ್ಲ ಗ್ರಾಹಕರಿಗಾಗಿ, ವಿಶೇಷ ಆಫರ್, ಗಿಫ್ಟ್’ಗಳನ್ನು ನೀಡಲಾಗಿದೆ.


ಡೈಮಂಡ್ ರಿಂಘ್ ಗೆಲ್ಲುವ ಅವಕಾಶದ ಜೊತೆಗೆ ನಿಮ್ಮ ಹಳೆ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇದರಲ್ಲಿ ಪ್ರತಿ ಗ್ರಾಂ ಮೇಲೆ 100 ರೂ.ಗೂ ಅಧಿಕ ಪಡೆಯುವ ಸುವರ್ಣಾವಕಾಶ ಗ್ರಾಹಕರಿಗಿದೆ. ಹೆಚ್ಚಿನ ಮಾಹಿತಿಗೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಮಳಿಗೆಯ 9844692916 ಹಾಗೂ ಬೆಳ್ತಂಗಡಿ ಮುಖ್ಯರಸ್ತೆಯಲ್ಲಿರುವ ಮುಳಿಯ ಮಳಿಗೆ 9343004916 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪುತ್ತೂರಿನ ಬಲನಾಡು ನೆಟ್ ವರ್ಕಿಂದ ಹೊರನಾಡು

Posted by Vidyamaana on 2023-06-16 11:20:44 |

Share: | | | | |


ಪುತ್ತೂರಿನ ಬಲನಾಡು ನೆಟ್ ವರ್ಕಿಂದ ಹೊರನಾಡು

ಪುತ್ತೂರು: ಹೇಳಿಕೊಳ್ಳಲು ಪುತ್ತೂರು ಪೇಟೆಯ ತೀರಾ ಸಮೀಪದ ಗ್ರಾಮ. ಆದರೆ ಇಂದಿಗೆ ಅಗತ್ಯಾತಿ ಅಗತ್ಯ ಎನಿಸಿಕೊಳ್ಳುವ ನೆಟ್ ವರ್ಕೇ ಇಲ್ಲಿಲ್ಲ. ಹಾಗಾಗಿ ಇದು ನೆಟ್ ವರ್ಕ್ ವಿಚಾರದಲ್ಲಿ ಕುಗ್ರಾಮ ಎಂದೇ ಹೇಳಬಹುದು.

ಈ ಗ್ರಾಮದ ಹೆಸರು ಬಲ್ನಾಡು. ಒಂದು ಕಾಲದ ಬಲ ನಾಡು. ಅಂದರೆ ಬಲ್ಲಾಳರು ಅಧಿಕಾರ ನಡೆಸುತ್ತಿದ್ದ ಕೇಂದ್ರಸ್ಥಾನವಿದು. ಆದ್ದರಿಂದಲೇ ಇದು ಬಲಯುತವಾದ ನಾಡು. ಅಂದು ಅಧಿಕಾರದಲ್ಲಿ ಮೆರೆದ ನಾಡು, ಇಂದು ಮೂಲಸೌಕರ್ಯ ವಂಚಿತವಾಗಿದೆ.

ತುರ್ತು ಸಂದೇಶ ರವಾನಿಸಬೇಕಿದ್ದರೂ ಫೋನ್ ಮಾಡುವಂತಿಲ್ಲ. ರಾತ್ರಿ ಹೊತ್ತಾದರೂ ಸರಿ, ಮಾತನಾಡಬೇಕು ಎಂದರೆ ಬಾಂಬ್ ಸ್ಕ್ವಾಡ್ ನಂತೆ ಸಿಗ್ನಲ್ ಹುಡುಕುತ್ತಾ ಹೋಗಬೇಕು. ಆನ್ ಲೈನ್ ನಂಬಿಕೊಂಡು ಕ್ಲಾಸ್ ತೆಗೆದುಕೊಂಡರಂತೂ ನಾಪಾಸೇ ಗತಿ. ಪ್ರೇಮಿಗಳ ವಿರಹ ವೇದನೆಯಂತೂ ಹೇಳತೀರದು. ಹೀಗೇ ಇಲ್ಲಿನ ಜನರ ಕಷ್ಟ ಒಂದೇ ಎರಡೇ.

ಬಲ್ನಾಡು ಗ್ರಾಮದಲ್ಲಿ ಘಟಾನುಘಟಿ ನಾಯಕರಿದ್ದಾರೆ. ರಾಜಕೀಯದಲ್ಲೂ ಉನ್ನತ ಸ್ಥಾನ ಅಲಂಕರಿಸಿದವರಿದ್ದಾರೆ. ಆದರೆ ಇವರನ್ನು ಸಂಪರ್ಕಿಸಬೇಕಿದ್ದರೂ, ಹರಸಾಹಸ ಪಡಬೇಕು. ಎಲ್ಲದಕ್ಕೂ ಮೂಲಕಾರಣ ನೆಟ್ ವರ್ಕ್ ಸಮಸ್ಯೆ. ಹಾಗಾಗಿ ಬಲನಾಡಾದರೂ ನೆಟ್ ವರ್ಕಿಂದ ಹೊರನಾಡಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ನೀಡುವವರು ಯಾರು? ಸಂಬಂಧಪಟ್ಟವರು ನ ಹರಿಸುವಿರಾ.

ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

Posted by Vidyamaana on 2023-09-15 16:11:05 |

Share: | | | | |


ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

ಬೆಂಗಳೂರು : ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ ಜೋಡಿಯನ್ನು ಬಂಧಿಸಲಾಗಿದೆ.


ಎಂಬಿಎ ಪದವೀಧರೆ ವಿದ್ಯಾರ್ಥಿನಿಯೊಬ್ಬರಿಗೆ ಇವರೇ ರೂಮ್‌ ನೀಡಿ ಬ್ಲಾಕ್‌ಮೇಲ್ ಮಾಡಿರುವುದು ಪತ್ತೆಯಾಗಿದೆ.ನಯನಾ ಹಾಗೂ ಕಿರಣ್ ಬಂಧಿತರು. ಇವರಿಬ್ಬರೂ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ನಡೆಸುತ್ತಿದ್ದರು.ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್​ ನೀಡಲಾಗಿತ್ತು. ಆದ್ರೆ, ರೂಮ್​ನಲ್ಲಿ ರಹಸ್ಯವಾಗಿ‌ ಕ್ಯಾಮೆರಾ ಅಡಗಿಸಿ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾಕ್​ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು.ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.


ನಯನಾ ಹಾಗೂ ಕಿರಣ್ ಜೊತೆಯಾಗಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ದರು. ಅದೇ ಹೋಟೆಲ್​ಗೆ ನಯನಾ ಸಂಬಂಧಿ ಯುವತಿ(ಬ್ಲ್ಯಾಕ್​ ಮೇಲ್​ ಪ್ರಕರಣದ ಸಂತ್ರಸ್ಥೆ) ಆಗಾಗ ತನ್ನ ಪ್ರಿಯಕರ ಜೊತೆ ಬರುತ್ತಿದ್ದಳು. ವೇಳೆ ಹೋಟೆಲ್ ರೂಮ್ ನಲ್ಲಿ ಇರುವಂತೆ ಹೇಳಿದ್ದ ನಯನಾ, ಬಳಿಕ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ನಂತರ ಅವರೇ ರೂಮ್ ಕೊಟ್ಟು ಅವರೆ ಬೀಸಿದ್ದು, ಅಶ್ಲೀಲವಾಗಿ ಎಡಿಟ್ ಮಾಡಿ‌ ಯುವತಿಗೆ ಆರೋಪಿ ಕಿರಣ್, ವಾಟ್ಸಪ್​ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ.ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್​ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.

Recent News


Leave a Comment: