ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಸುಲಭವಾದ ಮಾರ್ಗಗಳು ಇಲ್ಲಿವೆ

Posted by Vidyamaana on 2023-10-31 14:13:02 |

Share: | | | | |


ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಸುಲಭವಾದ ಮಾರ್ಗಗಳು ಇಲ್ಲಿವೆ

   ಕೈಗಳಿಗೆ ಹಚ್ಚಿದ ಮೆಹೆಂದಿ ಗಾಢ ಬಣ್ಣ ಬರದಿದ್ದರೆ ಬೇಸರವಾಗುವುದು ಕೂಡ ಉಂಟು. ಆದರೆ ಇನ್ನೂ ಮುಂದೆ ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಈ ಸುಲಭವಾದ ಮಾರ್ಗಗಳನ್ನು ಪ್ರಯತ್ನಿಸಿ. ಮೆಹಂದಿ ಕೈಗಳ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಕೂಡ ಇವೆ.ಹಬ್ಬಗಳ ಸಮಯದಲ್ಲಿ ಅಥವಾ ಮದುವೆ ಸಮಾರಂಭಗಳಲ್ಲಿ ಕೈಗಳಿಗೆ ಮೆಹೆಂದಿಯನ್ನು ಹಚ್ಚಲಾಗುತ್ತದೆ. ಆದರೆ ಕೈಗಳಿಗೆ ಹಚ್ಚಿದ ಮೆಹೆಂದಿ ಗಾಢ ಬಣ್ಣ ಬರದಿದ್ದರೆ ಬೇಸರವಾಗುವುದು ಕೂಡ ಉಂಟು. ಆದರೆ ಇನ್ನೂ ಮುಂದೆ ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಈ ಸುಲಭವಾದ ಮಾರ್ಗಗಳನ್ನು ಪ್ರಯತ್ನಿಸಿ.


 ಹಬ್ಬದ ಸಮಯದಲ್ಲಿ ಮೆಹಂದಿಯನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೆಹೆಂದಿಯ ಬಣ್ಣವು ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿಯ ಆಳವನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ.ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಸುಲಭ ಮಾರ್ಗಗಳು:


ಮೊದಲು ಕೈ ತೊಳೆಯಿರಿ:

ಮೆಹೆಂದಿ ಹಚ್ಚುವ ಮೊದಲು, ಕೈಗಳನ್ನು ಸಾಬೂನು ಅಥವಾ ಹ್ಯಾಂಡ್‌ವಾಶ್‌ನಿಂದ ಸರಿಯಾಗಿ ಸ್ವಚ್ಛಗೊಳಿಸಿ. ಕೆಲವೊಮ್ಮೆ ಕೈಯಲ್ಲಿರುವ ಬೆವರು ಹಾಗೂ ಕೊಳೆಯಿಂದಾಗಿ ಮೆಹೆಂದಿಯ ಬಣ್ಣ ಗಾಢವಾಗದಿರಲು ಕಾರಣವಾಗಬಹುದು.

ಮಾಯಿಶ್ಚರೈಸರ್ ಹಚ್ಚಬೇಡಿ:

  ನಿಮ್ಮ ಕೈಗಳನ್ನು ತೊಳೆದ ತಕ್ಷಣ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ. ಆದರೆ ಮೆಹೆಂದಿಯನ್ನು ಹಚ್ಚುವ ಮೊದಲು ಮಾಯಿಶ್ಚರೈಸರ್ ಹಚ್ಚಬೇಡಿ. ಇವುಗಳಲ್ಲಿರುವ ರಾಸಾಯನಿಕಗಳು ಮೆಹಂದಿಯ ಬಣ್ಣವನ್ನು ಮಂದಗೊಳಿಸುತ್ತವೆ. ಆದ್ದರಿಂದ ಮಾಯಿಶ್ಚರೈಸರ್ ಅಥವಾ ಕ್ರೀಮ್ ಅನ್ನು ಮೆಹೆಂದಿಯನ್ನು ಹಚ್ಚುವ ಮೊದಲು ಅನ್ವಯಿಸುವುದನ್ನು ತಪ್ಪಿಸಿ.


ನಿಂಬೆ ಮತ್ತು ಸಕ್ಕರೆ:

ನಿಂಬೆ ರಸ ಮತ್ತು ಸಕ್ಕರೆಯ ಮನೆಮದ್ದನ್ನು ಸಹ ನೀವು ಪ್ರಯತ್ನಿಸಬಹುದು. ಇದು ತುಂಬಾ ಹಳೆಯ ಮನೆಮದ್ದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ನಿಂಬೆ ರಸವನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ. ಈಗ ಅದನ್ನು ಮೆಹೆಂದಿಯ ಮೇಲೆ ಸಿಂಪಡಿಸಿ.ಮೆಹೆಂದಿ ಒಣಗಿದ ನಂತರವೇ ನೀವು ರಸವನ್ನು ಅನ್ವಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ.


ನೈಸರ್ಗಿಕವಾಗಿ ಒಣಗಲು ಬಿಡಿ:

ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ನೀವು ಬಯಸಿದರೆ, ಅದನ್ನು ನೈಸರ್ಗಿಕವಾಗಿ ಒಣಗಲು ಬಿಡಿ. ಹೇರ್​​ ಡ್ರೈಯರ್​​ ಬಳಸಿ ಮೆಹೆಂದಿಯನ್ನು ಒಣಗಿಸುವುದರಿಂದ ಬಣ್ಣ ಮಾಸುವುದಲ್ಲದೆ ವಿನ್ಯಾಸವೂ ಹಾಳಾಗುತ್ತದೆ.


ಲವಂಗ ಹೊಗೆ:

ನಿಮ್ಮ ಕೈಯಲ್ಲಿರುವ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು, ಲವಂಗ ಹೊಗೆಯ ವಿಧಾನವನ್ನು ಪ್ರಯತ್ನಿಸಬಹುದು. ಒಂದು ಬಾಣಲೆಯ ಮೇಲೆ ಲವಂಗದ ಕೆಲವು ತುಂಡುಗಳನ್ನು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಹುರಿಯಿರಿ. ಹೊಗೆ ಬಂದ ತಕ್ಷಣ ಮೆಹೆಂದಿ ಕೈಗಳನ್ನು ಸ್ವಲ್ಪ ಹೊತ್ತು ಹೊಗೆ ತಾಗುವಂತೆ ಹಿಡಿಯಿರಿ.ಈ ಮನೆಮದ್ದು ತುಂಬಾ ಪರಿಣಾಮಕಾರಿ.

ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ ಸಾಧನಾಶ್ರೀ ಪುರಸ್ಕಾರ

Posted by Vidyamaana on 2024-07-30 06:10:00 |

Share: | | | | |


ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ ಸಾಧನಾಶ್ರೀ ಪುರಸ್ಕಾರ

ಬೆಳ್ತಂಗಡಿ:ಮಂಗಳೂರಿನಲ್ಲಿ ನಡೆದ ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ವಿಭಾಗದ ಸಮ್ಮೇಳನ ವೈಭವ - 2024 ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಅವರಿಗೆ ವೃತ್ತಿ ಮತ್ತು ಸಮಾಜಸೇವಾ ಕಾರ್ಯಸಾಧನೆಗಾಗಿ ಸಾಧನಾಶ್ರೀ- 2024 ಪ್ರಶಸ್ತಿ ನೀಡಿ ಜುಲೈ 28 ರಂದು ಗೌರವಿಸಲಾಯಿತು.

ಪುತ್ತೂರು : ಡಾ. ಎಂ.ಕೆ.ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ಸತ್ಯಜಿತ್ ಸುರತ್ಕಲ್

Posted by Vidyamaana on 2024-02-10 10:13:08 |

Share: | | | | |


ಪುತ್ತೂರು : ಡಾ. ಎಂ.ಕೆ.ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ಸತ್ಯಜಿತ್ ಸುರತ್ಕಲ್

ಪುತ್ತೂರು : ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಟಿಕೆಟ್ ಗೆ ಆಗ್ರಹಿಸುತ್ತಿರುವ ಸತ್ಯಜಿತ್ ಸುರತ್ಕಲ್ ಅವರು ಖ್ಯಾತ ವೈದ್ಯ ಡಾ.ಎಂ.ಕೆ. ಪ್ರಸಾದ್ ಅವರ ಮನೆಗೆ ಭೇಟಿ ನೀಡಿದರು.


ಪುತ್ತೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಅವರು ಬಳಿಕ ಡಾ.ಎಂ.ಕೆ. ಪ್ರಸಾದ್ ಅವರ ಮನೆಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಉಂಗುರ ಹಾಗೂ ಕಿವಿಯೋಲೆಗಳ ಮೇಳ

Posted by Vidyamaana on 2024-07-02 06:15:40 |

Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಉಂಗುರ ಹಾಗೂ ಕಿವಿಯೋಲೆಗಳ ಮೇಳ

ಪುತ್ತೂರು : ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗೆ ಜುಲೈ 1ರಿಂದ ಉಂಗುರ ಹಾಗೂ ಕಿವಿಯೋಲೆಗಳ ಮೇಳವನ್ನು ಪುತ್ತೂರು, ಮೂಡಬಿದ್ರೆ, ಸುಳ್ಯ ಹಾಸನ, ಮತ್ತು ಕುಶಾಲನಗರ ಮಳಿಗೆಗಳಲ್ಲಿ ಆಯೋಜಿಸಿದೆ.

ಚಿನ್ನವನ್ನು ಧರಿಸುವುದು ಸೌಂದರ್ಯದ ಸಂಕೇತವಾಗಿದೆ. ಹೂಡಿಕೆಯ ದೃಷ್ಟಿಯಿಂದ ಕೂಡಾ ಲಾಭದಾಯಕ. ಗ್ರಾಹಕರಿಗೆ ವಿವಿಧ ವಿನ್ಯಾಸಗಳ ಉಂಗುರ ಹಾಗೂ ಕಿವಿಯೋಲೆಗಳ ಅಪೂರ್ವ ಸಂಗ್ರಹ ಲಭ್ಯವಿದೆ. ಅದೇ ರೀತಿ Yellow Tag ಆಭರಣಗಳನ್ನು ಆಯ್ಕೆಮಾಡಿ ಅತ್ಯಂತ ಕಡಿಮೆ ತಯಾರಿಕಾ ವೆಚ್ಚದಲ್ಲಿ ಗ್ರಾಹಕರಿಗೆ ಲಭ್ಯವಿದೆ.

ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

Posted by Vidyamaana on 2023-05-21 11:14:43 |

Share: | | | | |


ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

ವಿಟ್ಲ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರಿಗೊಪ್ಪಿಸಿ ಎರಡು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ.ಕಂಬಳ ಕೋಣ ಎಂದು ನೆಪವೊಡ್ಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಯಾನಿಟರಿ ಪ್ಯಾಡ್‌ಗಳಲ್ಲಿ 5 ಕೋಟಿ ರೂ. ಮೌಲ್ಯದ ಕೊಕೇನ್‌ ಪತ್ತೆ ದಂಗಾದ ಕಸ್ಟಮ ಅಧಿಕಾರಿಗಳು ಲಾಕ್ ಆದ ಮೂವರು ಆಫ್ರಿಕನ್ ಲೇಡೀಸ್

Posted by Vidyamaana on 2023-10-14 12:12:21 |

Share: | | | | |


ಸ್ಯಾನಿಟರಿ ಪ್ಯಾಡ್‌ಗಳಲ್ಲಿ 5 ಕೋಟಿ ರೂ. ಮೌಲ್ಯದ ಕೊಕೇನ್‌ ಪತ್ತೆ ದಂಗಾದ ಕಸ್ಟಮ ಅಧಿಕಾರಿಗಳು ಲಾಕ್ ಆದ ಮೂವರು ಆಫ್ರಿಕನ್ ಲೇಡೀಸ್

ಮುಂಬೈ, : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.68 ಕೋಟಿ ರೂ ಮೌಲ್ಯದ ಕೊಕೇನ್‌ ಸಹಿತ ಮೂವರು ಆಫ್ರಿಕನ್ ಮಹಿಳೆಯರನ್ನು ಬಂಧಿಸಲಾಗಿದೆ.


ಸ್ಯಾನಿಟರಿ ಪ್ಯಾಡ್‌ಗಳಲ್ಲಿ ನಿಷಿದ್ಧ ವಸ್ತುಗಳನ್ನು ಮರೆಮಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ತಿಳಿಸಿದೆ.


ಮೂವರು ವಿದೇಶಿ ಮಹಿಳಾ ಪ್ರಯಾಣಿಕರಿಂದ ಒಟ್ಟು 568 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಸ್ಯಾನಿಟರಿ ಪ್ಯಾಡ್ ಮತ್ತು ಗುದನಾಳದ ಒಳಗೆ ಮರೆಮಾಚಿ ಡ್ರಗ್ಸ್ ತರುತ್ತಿದ್ದರು.


ನಿರ್ದಿಷ್ಟ ಗುಪ್ತಚರ ವರದಿಯ ಆಧಾರದ ಮೇಲೆ, DRI ಯ ಮುಂಬೈ ಘಟಕವು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Recent News


Leave a Comment: