ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಬಾಲಕನೊಂದಿಗೆ ಲವ್ ! 16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೆಪ್!

Posted by Vidyamaana on 2024-06-19 13:46:52 |

Share: | | | | |


ಬಾಲಕನೊಂದಿಗೆ ಲವ್ ! 16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೆಪ್!

ವಿಜಯಪುರ: 16ವರ್ಷದ ಬಾಲಕನೊಂದಿಗೆ 28ವರ್ಷದ ವಿವಾಹಿತ ಮಹಿಳೆ ಎಸ್ಕೇಪ್‌ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 4ವರ್ಷದ ಮಗುವಿನೊಂದಿಗೆ ಅಪ್ರಾಪ್ತ ಬಾಲಕನೊಂದಿಗೆ ವಿವಾಹಿತ ಮಹಿಳೆ ಎಸ್ಕೇಪ್ ಆಗಿದ್ದು, ವಿವಾಹಿತ ಮಹಿಳೆ ನನ್ನ ಮಗನನ್ನು ಅಪರಹಿಸಿಕೊಂಡು ಹೋಗಿದ್ದಾಳೆ ಎಂದು ತಾಯಿ ಅಕ್ಕಮಹಾದೇವಿ ಆರೋಪ ಮಾಡಿದ್ದಾರೆ.

ಮನೆಯಲ್ಲೇ ನೇಣು ಬಿಗಿದುಕೊಂಡ ಮಹಿಳೆ… ಪ್ರಿಯಕರ ಲಿಂಗರಾಜು ಪೊಲೀಸ್ ವಶಕ್ಕೆ

Posted by Vidyamaana on 2023-10-19 09:50:08 |

Share: | | | | |


ಮನೆಯಲ್ಲೇ ನೇಣು ಬಿಗಿದುಕೊಂಡ ಮಹಿಳೆ…  ಪ್ರಿಯಕರ ಲಿಂಗರಾಜು ಪೊಲೀಸ್ ವಶಕ್ಕೆ

ರಾಮನಗರ: ಮನೆಯಲ್ಲಿ ಯಾರು ಇಲ್ಲದ ವೇಳೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕನಕಪುರದ ನಿರ್ವಾಣೇಶ್ವರ ನಗರದಲ್ಲಿ ಮಂಗಳವಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.



ಕಮಲಾಬಾಯಿ (38) ಆತ್ಮಹತ್ಯೆಗೆ ಶರಣಾದ ಮಹಿಳೆ.


ಮಂಗಳವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಮಲಾಬಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಬುಧವಾರ ಬೆಳಿಗ್ಗೆ ಮನೆಯವರಿಗೆ ಗೊತ್ತಾಗಿದೆ ಅಷ್ಟೋತ್ತಿಗಾಗಲೇ ಮಹಿಳೆ ಮೃತಪಟ್ಟಿದ್ದರು ಎನ್ನಲಾಗಿದೆ. ಬಳಿಕ ಮನೆಯವರು ಕನಕಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪ್ರಿಯಕರ ಲಿಂಗರಾಜು ನಾಯಕ(47) ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪತಿಯಿಂದ ದೂರವಾಗಿದ್ದ ಕಮಲಾಬಾಯಿ ಲಿಂಗರಾಜು ನಾಯಕ್ ಜೊತೆ ಸಂಬಂಧ ಹೊಂದಿರುವ ಬಗ್ಗೆ ಶಂಕೆ ಇತ್ತು, ಅಲ್ಲದೆ ಈ ಹಿಂದೆ ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದು, ಇಬ್ಬರ ನಡುವೆ ಗಲಾಟೆ ಆಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಮೃತ ಮಹಿಳೆಯ ಮಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಲಿಂಗರಾಜು ನನ್ನ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಲಿಂಗರಾಜುನನ್ನು ವಿಚಾರಣೆ ನಡೆಸುತ್ತಿದ್ದಾರೆ.


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪ್ರಿಯಕರ ಲಿಂಗರಾಜು ನಾಯಕ(47) ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ - ಹಮಾಸ್ ಬೆಂಬಲಿಸಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ಪೊಲೀಸ್ ವಶಕ್ಕೆ

Posted by Vidyamaana on 2023-10-14 18:59:44 |

Share: | | | | |


ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ - ಹಮಾಸ್ ಬೆಂಬಲಿಸಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ಪೊಲೀಸ್ ವಶಕ್ಕೆ

ಮಂಗಳೂರು : ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ನ ಹಮಾಸ್ ​ಉಗ್ರರ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಹಮಾಸ್  ಬೆಂಬಲಿಸಿ ವೀಡಿಯೋ ಹರಿಬಿಟ್ಟಿದ್ದ ಮಂಗಳೂರಿನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಮಂಗಳೂರಿನ ಬಂದರು ನಿವಾಸಿ ಜಾಕಿರ್ ಯಾನೆ ಜಾಕಿ ಬಂಧಿತ ಆರೋಪಿ.


ಹಮಾಸ್ ಬೆಂಬಲಿಸಿ, ಪ್ಯಾಲೇಸ್ಟೈನ್, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸುವಂತೆ ಕರೆ ನೀಡಿ ಜಾಕಿರ್ ವೀಡಿಯೋ ಹರಿಬಿಟ್ಟಿದ್ದ. ಈತನ ವಿವಾದಾತ್ಮಕ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


ಈ ಕೃತ್ಯದ ಬಗ್ಗೆ ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ಅವರು ಸ್ವಯಂ ದೂರು ದಾಖಲಿಸಿ ಆರೋಪಿ ಜಾಕಿರ್ ಯಾನ ಜಾಕಿ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಇನ್ನು ಈ ಆರೋಪಿತನ ಮೇಲೆ ಈ ಹಿಂದ ಕೂಡ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಜನವರಿ 22ರಂದು ದೀಪಾವಳಿ ಆಚರಿಸಿ : ದೇಶದ 140 ಕೋಟಿ ಭಾರತೀಯರಿಗೆ ಪ್ರಧಾನಿ ಮೋದಿ ಮನವಿ

Posted by Vidyamaana on 2023-12-30 16:09:52 |

Share: | | | | |


ಜನವರಿ 22ರಂದು ದೀಪಾವಳಿ ಆಚರಿಸಿ : ದೇಶದ 140 ಕೋಟಿ ಭಾರತೀಯರಿಗೆ ಪ್ರಧಾನಿ ಮೋದಿ ಮನವಿ

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉದ್ಘಾಟನೆಗೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ಆಗಮಿಸಿದ್ದು, ನೂತನವಾಗಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಉದ್ಘಾಟಿಸಿದರು.ನಂತ್ರ ಅಯೋಧ್ಯೆಯಲ್ಲಿ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, 2024ರ ಜನವರಿ 22 ರಂದು ರಾಮ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕ್ಷಣಕ್ಕಾಗಿ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದೆ ಎಂದು ಹೇಳಿದರು. ಇನ್ನು ಜನವರಿ 22ರಂದು 140 ಕೋಟಿ ಭಾರತೀಯರು ದೀಪಗಳ ಹಬ್ಬವಾಗಿ ಆಚರಿಸಬೇಕು ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಪ್ರಧಾನಿ ನಗರದ ಮೂಲಕ ಮೆಗಾ ರೋಡ್ ಶೋ ನಡೆಸಿದ ನಂತರ ನವೀಕರಿಸಿದ ರೈಲ್ವೆ ನಿಲ್ದಾಣವನ್ನ ಉದ್ಘಾಟಿಸಿದ್ದರು.ಇಂದು ಇಡೀ ಜಗತ್ತು ಜನವರಿ 22ರ ಐತಿಹಾಸಿಕ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದೆ, ಅಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯ ಜನರಲ್ಲಿ ಈ ಉತ್ಸಾಹವು ತುಂಬಾ ಸಹಜವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು "ನಾನು ಭಾರತದ ಪ್ರತಿಯೊಂದು ಮಣ್ಣಿನ ಕಣ ಮತ್ತು ಜನರ ಆರಾಧಕ. ನನಗೂ ನಿಮ್ಮಷ್ಟೇ ಕುತೂಹಲವಿದೆ" ಎಂದರು.


ಪ್ರಧಾನಿ ಮೋದಿ ಅವರು 15 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದರು. ಇದಕ್ಕಾಗಿ ಅಯೋಧ್ಯೆಯ ಜನತೆಯನ್ನು ಪ್ರಧಾನಿ ಅಭಿನಂದಿಸಿದ್ದಾರೆ. ನಾವು ನಮ್ಮ ಪರಂಪರೆಯನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದರು. ನಮ್ಮ ಪರಂಪರೆ ನಮಗೆ ಸ್ಫೂರ್ತಿ ನೀಡುತ್ತದೆ. ಇದೇ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಗುಡಾರದಲ್ಲಿ ಕುಳಿತಿದ್ದ ಕಾಲವಿತ್ತು ಮತ್ತು ಇಂದು ರಾಮ ಲಲ್ಲಾ ಮಾತ್ರವಲ್ಲ, ದೇಶದ ನಾಲ್ಕು ಕೋಟಿ ಬಡವರಿಗೂ ಶಾಶ್ವತ ಮನೆ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು.

ಹೃದಯಾಘಾತದಿಂದ ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ನಿಧನ

Posted by Vidyamaana on 2024-08-18 22:06:05 |

Share: | | | | |


ಹೃದಯಾಘಾತದಿಂದ ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ನಿಧನ

ನವದೆಹಲಿ: ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ಅವರು ಭಾನುವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲ್ ಅವರು ಕಳೆದ ವರ್ಷ ಜುಲೈ 19 ರಂದು ಭಾರತೀಯ ಕೋಸ್ಟ್ ಗಾರ್ಡ್ನ 25 ನೇ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಪಾಲ್ ಅವರನ್ನು ಚೆನ್ನೈನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಕೋಸ್ಟ್ ಗಾರ್ಡ್ ಮಹಾನಿರ್ದೇಶಕರು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ.

ಪಾಲ್ ಅವರ ನಿಧನವು ಅಕಾಲಿಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ದೊಡ್ಡ ದಾಪುಗಾಲು ಹಾಕಿದೆ ಎಂದು ಹೇಳಿದರು.

ಪುತ್ತೂರು: ಪ್ರಯಾಣಿಕರ ಓವರ್ ಲೋಡ್ - ಬಸ್ ಓಡಿಸಲು ನಿರಾಕರಿಸಿದ ಕೆಎಸ್ ಆರ್ ಟಿಸಿ ಚಾಲಕ

Posted by Vidyamaana on 2023-10-29 15:35:36 |

Share: | | | | |


ಪುತ್ತೂರು: ಪ್ರಯಾಣಿಕರ ಓವರ್ ಲೋಡ್ - ಬಸ್ ಓಡಿಸಲು ನಿರಾಕರಿಸಿದ ಕೆಎಸ್ ಆರ್ ಟಿಸಿ ಚಾಲಕ

ಪುತ್ತೂರು : ಪ್ರಯಾಣಿಕರ ಓವರ್  ಲೋಡ್‌ಗೆ ಭಯಗೊಂಡು ಕೆಎಸ್ಆರ್ ಟಿಸಿ  ಬಸ್ ಓಡಿಸಲು ನಿರಾಕರಿಸಿದ ಚಾಲಕ ಘಟನೆ ಕಡಬದಿಂದ ಪುತ್ತೂರಿಗೆ ತೆರಳುವ ಬಸ್‌ ನಲ್ಲಿ ನಡೆದಿದೆ.

ಬಸ್ ಅಲಂಕಾರ್ ತಲುಪಿದಾಗ 130 ಮಂದಿ ಬಸ್ ಹತ್ತಿದ್ದರು. ಇದು ವಾಹನದ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಾಗಿತ್ತು. ಅರ್ಧದಷ್ಟು ಪ್ರಯಾಣಿಕರು ಇಳಿಯಬೇಕು ಇಲ್ಲದಿದ್ದರೆ ಬಸ್ ಓಡಿಸಲು ಹೋಗುವುದಿಲ್ಲ ಎಂದು ಚಾಲಕ ಹೇಳಿದರು.


ಇತ್ತೀಚೆಗೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ ಹೋಗುವ ಬೆಳಗ್ಗಿನ ಸಂಚಾರಿಸುವ ಒಂದು ಬಸ್ಸನ್ನು ನಿಲ್ಲಿಸಲಾಗಿತ್ತು. ಈ ಹಿನ್ನಲೆ ಬೆಳಗ್ಗಿನ ಆರಂಭದ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಓವರ್ ಲೋಡ್

ಆಗುತ್ತಿತ್ತು. ಇದರಿಂದ ಇತ್ತೀಚೆಗೆ ಬಸ್ ನ ಟಯರ್ ಬ್ಲಾಸ್ಟ್ ಆದ ಘಟನೆ ನಡೆದಿತ್ತು. ಹೀಗಾಗಿ ಬಸ್ ಚಾಲಕನಿಗೆ 5,000 ದಂಡ ಕೂಡ ವಿಧಿಸಲಾಗಿತ್ತು. ಇತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಹಾಕುವಂತೆ ಜನರು ವಿನಂತಿಸಿದರು ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರ ಆರೋಪ.


ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ 7.30 ಕ್ಕೆ ಬಸ್ಸು ಹೊರಟರೆ ಮತ್ತೆ 8.40 ರ ನಂತರವೇ ಕಡಬದಿಂದ ಈ ಮಾರ್ಗವಾಗಿ ಬಸ್ ತೆರಳುತ್ತದೆ. ಪರಿಣಾಮ 7.30 ರ ಬಸ್ಸು ಆಲಂಕಾರು ತಲುಪುವಾಗ ಜನರಿಂದ ತುಂಬಿಹೋಗಿರುತ್ತದೆ. ಇನ್ನು ಈ ಬಸ್ಸಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಇತರ ಪ್ರಯಾಣಿಕರೆಂದು ಸುಮಾರು 150 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಹೀಗಾಗಿ ಚಾಲಕ ಅಪಾಯ ಸಂಭವಿಸಬಹುದು ಎಂದು ಬಸ್ ಟಯರ್ ದುರ್ಬಲವಾಗಿದೆ ನಾನು ಇನ್ನು ಮುಂದೆ ಬಸ್ಸು ಓಡಿಸುವುದಿಲ್ಲ ನಿಲ್ಲಿಸಲಾಯಿತು.


ಬಳಿಕ ಪ್ರಯಾಣಿಕ ಒಬ್ಬ ಡಿಪೋಗೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಚಾಲಕ ಬಸ್‌ ಓಡಿಸಲು ಮುಂದಾದ . ಆದರೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಹೋಗುವ ಬಸ್ಸಿನ ಸೇವೆಯನ್ನು ಕಡಿತಗೊಳಿಸಿರುವುದೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Recent News


Leave a Comment: