ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


BIG NEWS: ಆದಾಯ ಗಳಿಕೆಯಲ್ಲಿ ಸತತ 13ನೇ ವರ್ಷವೂ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಮೊದಲ ಸ್ಥಾನ

Posted by Vidyamaana on 2024-04-07 11:17:04 |

Share: | | | | |


BIG NEWS: ಆದಾಯ ಗಳಿಕೆಯಲ್ಲಿ ಸತತ 13ನೇ ವರ್ಷವೂ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಮೊದಲ ಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲ 2023 - 24ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 146.01 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಈ ಮೂಲಕ ಸತತ 13ನೇ ವರ್ಷವೂ ಆದಾಯ ಗಳಿಕೆಯಲ್ಲಿ ರಾಜ್ಯದ ಮೊದಲ ದೇಗುಲವಾಗಿ ಹೊರಹೊಮ್ಮಿದೆ.ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕಳೆದ ಹಣಕಾಸು ವರ್ಷದಲ್ಲಿ 123 ಕೋಟಿ ರೂಪಾಯಿ ಆದಾಯ ಬಂದಿದ್ದು, ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಯೆ ಸುಬ್ರಹ್ಮಣ್ಯವೂ ಸೇರಿದಂತೆ ರಾಜ್ಯದ ಹಲವು ದೇಗುಲಗುಳ ಆದಾಯ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ನಾಲ್ವರ ಕೊಲೆ ಆರೋಪಿ ಪ್ರವೀಣ್‌ ಚೌಗುಲೆ ಅರ್ಜಿ ವಜಾಗೊಳಿಸಿದ ಉಡುಪಿ ನ್ಯಾಯಾಲಯ

Posted by Vidyamaana on 2023-12-30 17:30:02 |

Share: | | | | |


ನಾಲ್ವರ ಕೊಲೆ ಆರೋಪಿ  ಪ್ರವೀಣ್‌ ಚೌಗುಲೆ ಅರ್ಜಿ ವಜಾಗೊಳಿಸಿದ ಉಡುಪಿ ನ್ಯಾಯಾಲಯ

ಉಡುಪಿ: ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಉಡುಪಿ ನೇಜಾರು ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್‌ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿ ತಿರಸ್ಕೃತವಾಗಿದೆ.ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ನೀಡಿದೆ.


ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಡಿ.14ರಂದು ವಕೀಲ ಕೆ.ಎಸ್‌.ಎನ್‌.ರಾಜೇಶ್ ಮೂಲಕ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಗೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿದ್ದರು.


ಈ ಕುರಿತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ

ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

Posted by Vidyamaana on 2023-12-08 08:11:30 |

Share: | | | | |


ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಡಿ.9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌ (ಜನತಾ ನ್ಯಾಯಾಲಯ) ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್‌ ಆಗಿದೆ. ವ್ಯಾಜ್ಯ ಮುಕ್ತ, ಸೌಹಾರ್ದಯುತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಅದಾಲತ್ ಮಾಡಲಾಗುತ್ತಿದೆ.


ಡಿ.9ರಂದು ಹೈಕೋರ್ಟ್‌ನ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳು ಸಹಿತ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣ ಪೀಠಗಳಲ್ಲಿ ಲೋಕ್‌ ಅದಾಲತ್‌ ಕಲಾಪಗಳು ನಡೆಯಲಿವೆ.


ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಏರಿಕೆಯಾಗಬಹುದು.


ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಗ ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಜೊತೆಗೆ ಇದ್ದರು.

ನಿಜವಾದ ಸೇವಕ ಎಂದಿಗೂ ಅಹಂಕಾರಿಯಲ್ಲ. ಚುನಾವಣೆಗಳಲ್ಲಿ ಶಿಷ್ಟಾಚಾರವನ್ನು ಪಾಲಿಸಲಾಗಿಲ್ಲ: ಮೋಹನ್ ಭಾಗವತ್

Posted by Vidyamaana on 2024-06-11 10:17:17 |

Share: | | | | |


ನಿಜವಾದ ಸೇವಕ ಎಂದಿಗೂ ಅಹಂಕಾರಿಯಲ್ಲ. ಚುನಾವಣೆಗಳಲ್ಲಿ ಶಿಷ್ಟಾಚಾರವನ್ನು ಪಾಲಿಸಲಾಗಿಲ್ಲ: ಮೋಹನ್ ಭಾಗವತ್

ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಾದ ಚುನಾವಣೆಯ ಫಲಿತಾಂಶದ ಬಗ್ಗೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ನಿಜವಾದ ಸೇವಕ ಅಹಂಕಾರ  ಹೊಂದಿರುವುದಿಲ್ಲ ಮತ್ತು ಇತರರಿಗೆ ಯಾವುದೇ ಹಾನಿಯಾಗದಂತೆ ಕೆಲಸ ಮಾಡುತ್ತಾನೆ ಎಂದು ಹೇಳಿದರು.

ಕಹಿ ಚುನಾವಣಾ ಪ್ರಚಾರವನ್ನು ಉಲ್ಲೇಖಿಸಿದ ಅವರು, ಶಿಷ್ಟಾಚಾರವನ್ನು ಕಾಪಾಡಿಕೊಳ್ಳಲಾಗಿಲ್ಲ ಎಂದು ಹೇಳಿದರು.


ಹೊಸ ಬಿಜೆಪಿ ನೇತೃತ್ವದ ಮೈತ್ರಿಕೂಟವು ತನ್ನ ಮೊದಲ ಕ್ಯಾಬಿನೆಟ್ ಸಭೆಯನ್ನು ನಡೆಸಿದ ದಿನದಂದು ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಆವರ್ತಕ ತರಬೇತಿ ಕಾರ್ಯಕ್ರಮವಾದ ಕಾರ್ಯಕರ್ತರ ವಿಕಾಸ್ ವರ್ಗ್ ಸಮಾರೋಪದ ನಂತರ ಆರ್‌ಎಸ್‌ಎಸ್ ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಒಮ್ಮತವನ್ನು ನಿರ್ಮಿಸುವ ಮಹತ್ವವನ್ನು ಒತ್ತಿ ಹೇಳಿದರು.

ಜಿಲ್ಲೆಯ ಮಂಗಳೂರು ಬಂಟ್ವಾಳ ಉಳ್ಳಾಲ ಮೂಡುಬಿದರೆ ಶಾಲೆಗಳಿಗೆ ರಜೆ

Posted by Vidyamaana on 2023-07-04 02:48:11 |

Share: | | | | |


ಜಿಲ್ಲೆಯ ಮಂಗಳೂರು ಬಂಟ್ವಾಳ ಉಳ್ಳಾಲ ಮೂಡುಬಿದರೆ ಶಾಲೆಗಳಿಗೆ ರಜೆ


ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಮಂಗಳೂರು, ಬಂಟ್ವಾಳ, ಮೂಡುಬಿದರೆ, ಉಳ್ಳಾಲ ತಾಲೂಕುಗಳ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಜುಲೈ 4ರಂದು ರಜೆ‌ ಘೋಷಿಸಿ ಜಿಲ್ಲಾಧಿಕಾರಿ‌ ಆದೇಶ ಹೊರಡಿಸಿದ್ದಾರೆ.


ಪುತ್ತೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು, ಇಲ್ಲಿನ ಶಾಲಾ - ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ 4 ದಿನ ಆರು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಕ್ರಮಗಳನ್ನು ಘೋಷಿಸಿದೆ. ಅದರಂತೆ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ, ಪ್ರವಾಸಿಗರಿಗೆ ಎಚ್ಚರಿಕೆ ಹಾಗೂ ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಲಾಗಿದೆ.

ದ.ಕ.ದಲ್ಲಿ ತಹಶೀಲ್ದಾರ್‌ಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸುವ ಅಧಿಕಾರ ನೀಡಿ ಡಿಸಿ ಆದೇಶಿಸಿದ್ದಾರೆ. ಉಳಿದ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ ರಜೆ ನೀಡಲು ಸೂಚಿಸಲಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ.

ಆಕರ್ಷಣ್ ನ ಆಕರ್ಷಕ ಕೊಡುಗೆ

Posted by Vidyamaana on 2023-10-21 15:47:39 |

Share: | | | | |


ಆಕರ್ಷಣ್ ನ ಆಕರ್ಷಕ ಕೊಡುಗೆ

ಪುತ್ತೂರು: ಕಾಂಕ್ರೀಟ್ ಉತ್ಪನ್ನಗಳ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ಆಕರ್ಷಣ್ ಇಂಡಸ್ಟ್ರೀಸ್ ತನ್ನ 28ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್’ಗಳನ್ನು ಹೊರಬಿಟ್ಟಿದೆ.

ಈ ಆಫರ್’ಗಳು ಅಕ್ಟೋಬರ್ 21ರಿಂದ ಆರಂಭಗೊಂಡಿದ್ದು, 25ರವರೆಗೆ ಮಾತ್ರ ಲಭ್ಯವಿರಲಿದೆ. ಈ ಐದು ದಿನಗಳಲ್ಲಿ ಗ್ರಾಹಕರು ಸಂಸ್ಥೆಗೆ ಭೇಟಿ ನೀಡಿ, ಉತ್ಪನ್ನಗಳನ್ನು ಖರೀದಿಸಿದಲ್ಲಿ ವಿಶೇಷ ಕೊಡುಗೆಗಳನ್ನು ನೀಡಲು ಆಕರ್ಷಣ್ ಇಂಡಸ್ಟ್ರೀಸ್ ಮುಂದಾಗಿದೆ.

ಸ್ಪರ್ಧಾತ್ಮಕ ದರದಲ್ಲಿ ಉತ್ಪನ್ನಗಳನ್ನು ನೀಡುವುದು ಮಾತ್ರವಲ್ಲ, ಇದರೊಂದಿಗೆ ಡೆಲಿವರಿಯನ್ನು ಉಚಿತವಾಗಿ ನೀಡಲಾಗುವುದು. ಡ್ರ್ಯಾಗನ್ ಫ್ರುಟ್ ಕೃಷಿಗೆಂದೇ ಸಿದ್ಧಪಡಿಸಿದ ಸ್ಟ್ಯಾಂಡ್’ಗೆ ಉಚಿತ ಡೆಲಿವರಿ, ಜನರ ಅಗತ್ಯಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಲಭ್ಯವಿರುವ ಹಾಗೂ ಎರಡೇ ದಿನದಲ್ಲಿ ನಿರ್ಮಿಸಬಹುದಾದ ಸದೃಢ, ಸುಂದರ ರೆಡಿವಾಲ್ ಅಥವಾ ಕಾಂಪೌಂಡ್ ವಾಲ್, ಬೇಲಿ ಕಂಬಗಳ ಖರೀದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.



Leave a Comment: