ಕರವೇಲು ಮಸೀದಿಯಲ್ಲಿ ಮರ್ಹೂಂ ಮುಸ್ತಫಾ ಹಾಜಿ ಕೆಂಪಿ ವಾರ್ಷಿಕ ಸ್ಮರಣೆ

ಸುದ್ದಿಗಳು News

Posted by vidyamaana on 2024-06-28 19:50:37 |

Share: | | | | |


ಕರವೇಲು ಮಸೀದಿಯಲ್ಲಿ ಮರ್ಹೂಂ ಮುಸ್ತಫಾ ಹಾಜಿ ಕೆಂಪಿ ವಾರ್ಷಿಕ ಸ್ಮರಣೆ

ಉಪ್ಪಿನಂಗಡಿ;ಇಲ್ಲಿಗೆ ಸಮೀಪದ ಕರುವೇಲು ಜುಮಾ ಮಸೀದಿಯಲ್ಲಿ  ಮರ್ಹೂಂ ಕೆಂಪಿ ಮುಸ್ತಫಾ ಹಾಜಿಯವರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮವು ಇಂದು ಜುಮಾ ನಮಾಜಿನ  ನಂತರ ನಡೆಯಿತು.

ಕುರ್ಅನ್ ಪಾರಾಯಣ ,ತಹ್ಲೀಲ್ ಸಮರ್ಪಣೆಯ ನಂತರ ಸ್ಥಳೀಯ ಖತೀಬ್ ಸಯ್ಯಿದ್ ಅನಸ್ ತಂಙಳ್ ದುಹಾಶಿರ್ವಚನ ಮಾಡಿ ಮುಸ್ತಪಾ ಹಾಜಿಯವರ ಗುಣಗಾನ ಮಾಡುತ್ತಾ ಸಮುದಾಯಕ್ಕಾಗಿ ತನ್ನ ಜೀವನ ಮುಡಿಪಾಗಿಟ್ಟಿದ್ದ ಹಾಜಿಯವರಲ್ಲಿ ಸಾಮಾಜಿಕ ಚಿಂತನೆ ಮೇಳೈಸಿತ್ತು.ಅವರು ನಿತ್ಯ ಸ್ಮರಣೀಯರು.ಕರವೇಲು ಮಸೀದಿಯ ಗೌರವದ್ಯಕ್ಷರಾಗಿ ನಮ್ಮ ಜಮಾತ್ ಗೆ ಅವರು ನೀಡಿದ ಕೊಡುಗೆ ಅಪಾರ ಎಂದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಜನಾಬ್ ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿ ಅವರ ಜೊತೆಗಿನ ದೀರ್ಘ ಒಡನಾಟದ  ಅನುಭವವನ್ನು ಮೆಲುಕು ಹಾಕಿದರು.

ಇಂದಿನ ಯುವ ಪೀಳಿಗೆಗೆ ಕೆಂಪಿಯವರ ಆಡಳಿತ ವೈಖರಿ ಮಾದರಿಯಾಗಿದೆ.ಜಮಾತನ್ನು ಸುಧಾರಣೆಯ ಹಾದಿಯಲ್ಲಿ ಮುನ್ನಡೆಸುವಾಗ ಧರ್ಮ ಗುರುಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದರು.ಹಿರಿಯರಿಗೆ ಗೌರವ,ಕಿರಿಯರ ಜೊತೆ ಪ್ರೀತಿ ತೋರಿದ್ದರಿಂದಲೇ ಮುಸ್ತಫಾ ಹಾಜಿ ಇಷ್ಟು ಎತ್ತರಕ್ಕೆ ಬೆಳೆದು ನಿಂತರು.

ಬಡವ ಬಲ್ಲಿದ ಎಂಬ ವ್ಯತ್ಯಾಸ ಇಲ್ಲದೆ ನ್ಯಾಯದ ಪರ ನಿಲ್ಲುವ ಧೈರ್ಯ ಅವರಿಗಿತ್ತು.

ಗಾಳಿ ಸುದ್ದಿ,ಪರಧೂಷಣೆಗೆ ನಿಂತು ಕೊಡದ ಹಾಜಿಯವರು ಎಲ್ಲವನ್ನೂ ಕೂಲಂಕುಷವಾಗಿ ಪರಾಂಬರಿಸಿ ನೋಡುತ್ತಿದ್ದರು.ತಂಟೆ ತಕರಾರು ಇದ್ದ ಉಪ್ಪಿನಂಗಡಿಯ ಅಸುಪಾಸಿನ ಬಹಳಷ್ಟು ಮೊಹಲ್ಲಾಗಳನ್ನು ಸರಿದಾರಿಗೆ ತರಲು ಹಾಜಿಯವರ ಕುಶಾಗ್ರತೆ ಬಹಳಷ್ಟು ಕೆಲಸ ಮಾಡಿತ್ತು.

ಆಯಾ ಊರಿನಲ್ಲಿ ನಾಯಕತ್ವ ಗುಣ ಇರುವವರಿಗೆ ಆಡಳಿತದ ಚುಕ್ಕಾಣಿ ವಹಿಸಿ ಕೊಡುವಲ್ಲಿ ಅವರು ನಿಪುಣರಾಗಿದ್ದರು.

ಎಂತಹ ಜಟಿಲ ಸಮಸ್ಯೆಗಳನ್ನು ಕೂಡಾ  ನಿಭಾಯಿಸುವಲ್ಲಿ ಅವರದ್ದು ಎತ್ತಿದ ಕೈಯಾಗಿತ್ತು ಎನ್ನುತ್ತಾ ಹಾಜಿಯವರನ್ನು ಸ್ಮರಿಸಿದರಲ್ಲದೇ 

ಉಪ್ಪಿನಂಗಡಿ ಅಸುಪಾಸಿನಲ್ಲಿ ಆ ಕಾಲದ ಹಿರಿಯರಾಗಿದ್ದ ಅಬ್ಬು ಹಾಜಿ ಮಠ,ಎಂಬಿ ಮೋನಾಕ,ಯೂಸಪಾಕ ಮಠ, ಕೆನರಾ ರಝಾಕ್ ಹಾಜಿ,ಪಳ್ಳಿಕುಞ ಹಾಜಿ,ಡಬ್ಬಲ್ ಫೋರ್ ಅಬ್ದುಲ್ ಖಾದಿರ್ ಹಾಜಿ,ಕೆಮ್ಮಾರ ಯೂಸುಪ್ ಹಾಜಿ,ಅಗ್ನಾಡಿ ಅಬೂಬಕರ್ ಹಾಜಿ,ಪೆದ್ಮಲೆ ಯೂಸುಪ್ ಹಾಜಿ,ಮೇದರಬೆಟ್ಟು ಕುಞಮೋನು ಹಾಜಿ,ಶುಕ್ರಿಯಾ ಅಬ್ಬಾಸ್ ಹಾಜಿ,ಕಡವಿನ ಬಾಗಿಲು ಅಬ್ಬು ಹಾಜಿ,ಮೋನು ಹಾಜಿ,ಐ ಹಸೈನಾರ್ ಹಾಜಿ,ಯುಟಿ ಇದ್ದಿಯಬ್ಬ ಹಾಜಿ,ಕರುವೇಲು ಮಮ್ಮಿ ಹಾಜಿ,ಮೈನಾ ಹಸನಬ್ಬ ಹಾಜಿ,ಅಬ್ದುಲ್ ರಹ್ಮಾನ್ ಬಾಬುಲ್ ಸಾಹೇಬ್ ಹಾಜಿ,ಕುದ್ಲೂರು ಹಮೀದ್ ಹಾಜಿ,ಕೆಂಪಿ ಅಬೂಬಕರ್ ,ಕೆಮ್ಮಾರ ಅಬ್ಬಾಸ್ ಹಾಜಿ,ರೈಟರ್ ಅಬೂಬಕರ್ ಹಾಜಿ,ಕರಾಯ ದೇಂತಾರು ಆದಂ ಹಾಜಿ,ಕೋಲ್ಪೆ ಅಬ್ದುಲ್ಲ ಕೋಯ ತಂಙಲ್,ಬಂಡಾಡಿ ರಝಾಕ್ ಮಾಸ್ಟರ್ ಮೊದಲಾದ ಹಲವಾರು ಅಗಲಿದ ಉಪ್ಪಿನಂಡಿ ಅಸುಪಾಸಿನ ಗೌರವಯುತ ನಾಯಕರ ಗರಡಿಯಲ್ಲಿ ಪಳಗಿದ ಮುಸ್ತಫಾ ಹಾಜಿ ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಲದ ನಾಯಕನಾಗಿ ಹೊರಹೊಮ್ಮಿ ಬದುಕನ್ನು ದೀರ್ಘವಾಗಿ  ಆಸ್ವಾದಿಸುವ ಮುನ್ನವೇ ನಮ್ಮಿಂದ ಅಗಲಿದ್ದು ಇಡೀ ಸಮಾಜಕ್ಕೆ ನಷ್ಟವಾಯಿತು ಎಂದರು.

ದೀರ್ಘ ಇಪ್ಪತ್ತು ವರ್ಷಗಳ ನನ್ನ ಸೇವಾವಧಿಯ ಅರ್ಧ ಭಾಗ ಅವರ ಅಧಿಕಾರವಧಿಯಲ್ಲಿ ಸೇವೆ ಗಯ್ಯುವ ವೇಳೆ ನನ್ನೊಂದಿಗೆ ಬಹಳ ವಿನಯ ಗೌರವದೊಂದಿಗೆ ವರ್ತಿಸುತ್ತಿದ್ದ ಮುಸ್ತಫಾ ಹಾಜಿ ಮಸೀದಿಯಿಂದ ವಿರಮಿಸಿದ ನಂತರವೂ ಪ್ರತೀ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರಲ್ಲದೇ ಪ್ರತೀ ರಮದಾನಿನಲ್ಲಿ ಪ್ರತ್ಯೇಕ ಆಹ್ವಾನ  ನೀಡಿ ಪ್ರೀತಿ ತೋರುತ್ತಿದ್ದರು.

ಇಂತಹ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಅದಕ್ಕೆ ಅಲ್ಲಾಹುವಿನ ವಿಶೇಷ ಭಾಗ್ಯ ಇರಬೇಕು ಎಂದ ದಾರಿಮಿಯವರು 

ಇಂದಿನ ಕೆಲವು ಮಸೀದಿ ಸಮಿತಿಯ ಯುವಕರು ಮಸೀದಿಯ ಗುರುಗಳನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಮಸೀದಿ ಕೆಲಸದಿಂದ ಉಸ್ತಾದರು ದೂರ ಸರಿಯುವಂತಹ ದುಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಕರುವೇಳು ಮಸೀದಿಯ ಅಧ್ಯಕ್ಷ ತೋಜಾ ಉಮ್ಮರ್ ಹಾಗೂ ಬೆಂಗಳೂರಿನ ಉದ್ಯಮಿ ಇಕ್ಬಾಲ್ ಕರುವೇಲು ರವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಅನ್ನದಾನ ಮಾಡಲಾಯಿತು.

 Share: | | | | |


ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

Posted by Vidyamaana on 2023-09-14 04:35:30 |

Share: | | | | |


ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಕಾರಣಕ್ಕೆ ಬಿಜೆಪಿ ತತ್ತರಿಸಿಹೋಗಿದ್ದು ಅಸ್ತಿತ್ವ ಉಳಿಸುದಕ್ಕೋಸ್ಕರ ಪ್ರತಿಭಟನೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಸೆ. ೧೩ ರಂದು ಪುತ್ತೂರಿನಲ್ಲಿ ರಾಜ್ಯ ಸರಕಾರದ ವಿರುದ್ದ ಪುತ್ತೂರು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಬ್ಲಾಕ್ ಅಧ್ಯಕ್ಷರು ಇದು ಪ್ರತಿಭಟನೆಗೋಸ್ಕರ ನಡೆದ ಪ್ರತಿಭಟನೆಯಾಗಿದೆ, ಪುತ್ತೂರಿನಲ್ಲಿ ಬಿಜೆಪಿಗೆ ಉಳಿಗಾಲವಿಲ್ಲದಂತ ಪರಿಸ್ಥಿತಿ ಇದೆ, ಕಾರ್ಯಕರ್ತರಿಲ್ಲದೆ ಬಿಜೆಪಿ ಕಂಗಾಲಾಗಿದೆ, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಈ ಪ್ರತಿಭಟನಾ ನಾಟಕ ಇಂದು ಪ್ರದರ್ಶನವಾಗಿದೆ ವಿನ ಅವರು ಮಡಿದ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕರದ ಗ್ಯಾರಂಟಿ ಯೋಜನೆಯ ಫಲವಾಗಿ ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಯಗುತ್ತಿದ್ದಾರೆ ಇದೆಲ್ಲವೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬಿಜೆಪಿಗರು ಬೆಚ್ಚಿ ಬಿದ್ದಿದ್ದಾರೆ ಅದರ ಪರಿಣಾಮವೇ ಇಂದು ನಡೆದ ಪ್ರತಿಭಟನೆಯಾಗಿದೆ ಎಂದು ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

Posted by Vidyamaana on 2023-07-03 23:42:26 |

Share: | | | | |


ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆ ಮತ್ತು ಮುಂಡೂರು ಫೀಡರ್‌ನಲ್ಲಿ ಜು.4ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 4ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೂರ್ನಡ್ಕ, ಕೆಮ್ಮಿಂಜೆ, ಮರೀಲ್, ಮುಕ್ರಂಪಾಡಿ, ಮೊಟ್ಟೆತ್ತಡ್ಕ, ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಟಿಕೆಟ್ ಕೈತಪ್ಪಿದ್ದಕ್ಕೆ ಎಂಡಿಎಂಕೆ ಸಂಸದ ಆತ್ಮಹತ್ಯೆಗೆ ಯತ್ನ ಪ್ರಕರಣ ; ಹೃದಯಘಾತದಿಂದ ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-03-28 13:50:10 |

Share: | | | | |


ಟಿಕೆಟ್ ಕೈತಪ್ಪಿದ್ದಕ್ಕೆ ಎಂಡಿಎಂಕೆ ಸಂಸದ ಆತ್ಮಹತ್ಯೆಗೆ ಯತ್ನ ಪ್ರಕರಣ ; ಹೃದಯಘಾತದಿಂದ ಆಸ್ಪತ್ರೆಯಲ್ಲಿ ನಿಧನ

ತಮಿಳುನಾಡು, ಮಾ 29: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಸಂಸದ ಗಣೇಶಮೂರ್ತಿ ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಗಣೇಶ್ ಮೂರ್ತಿ ಅವರು ಎಂಡಿಎಂಕೆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಈರೋಡೆ ಕ್ಷೇತ್ರದಲ್ಲಿ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿದ್ದರು.2024ರ ಚುನಾವಣೆಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು ಆದರೆ ಪಕ್ಷ ಯಾವುದೇ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿದೆ ಇದರಿಂದ ಗಣೇಶ್ ಅವರು ಟಿಕೆಟ್ ವಂಚಿತರಾಗಿದ್ದರು ಇದರಿಂದ ಹತಾಶೆಗೊಳಗಾದ ಅವರು ಮಾರ್ಚ್ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು ಗಂಭೀರ ಸ್ಥಿತಿಯಲ್ಲಿದ್ದ ಅವರು ಇಂದು ಮುಂಜಾನೆ ಹಠಾತ್ ಹೃದಯಾಘಾತಗೊಂಡು ನಿಧನಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ ನೀಡಿದ ಶಾಸಕರು

Posted by Vidyamaana on 2024-01-08 20:04:25 |

Share: | | | | |


ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ  ನೀಡಿದ ಶಾಸಕರು

ಪುತ್ತೂರು: ಶ್ವಾಸ ಕೋಶದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಕುಮಾರಿ ಪುಲಕಿತ ಎಂಬವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಆಕ್ಸಿಜನ್ ಯಂತ್ರವನ್ನು ನೀಡಿದರು.

ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು , ಆರ್ಥಿಕವಾಗಿ ತೀರ ಬಾಡತನದಲ್ಲಿರುವ ಇವರಿಗೆ ಆಕ್ಸಿಜನ್ ಯಂತ್ರ ಖರೀದಿಸಲು ಹಣಕಾಸಿನ ಅಡಚಣೆಯಾಗಿತ್ತು. ತನ್ನ ಸಂಕಷ್ಟವನ್ನು ಕಳೆದ ಮೂರು ದಿನಗಳ ಹಿಂದೆ ಶಾಸಕರ ಬಳಿ ಹೇಳಿಕೊಂಡಿದ್ದರು. ಆಕ್ಸಿಜನ್ ಯಂತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಮೂರು ದಿನದೊಳಗೆ ಅದನ್ನು ಸಂತ್ರಸ್ಥ ಮಹಿಳೆಗೆ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಅಳಿಕೆ ಗ್ರಾಪಂ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನನ್ನ ಬಳಿ ಸಹಾಯ ಕೇಳಿ ಈ ಬಡ ಕುಟುಂಬ ಕಚೇರಿಗೆ ಕಳೆದ ಮೂರದಿನಗಳ ಹಿಂದೆ ಬಂದಿದ್ರು. ತಕ್ಷಣವೇ ಮಹಿಳೆಯ ಉಸಿರಾಟಕ್ಕೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಯಂತ್ರವನ್ನು ಕೊಡಿಸಿದ್ದೇನೆ. ಅವರು ಆರೋಗ್ಯವಂತರಾಗಿರಲಿ ಎಂಬುದೇ ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಸನ್ನಿದಿಯಲ್ಲಿ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಪತ್ರ ಬಿಡುಗಡೆ

Posted by Vidyamaana on 2023-12-21 11:15:59 |

Share: | | | | |


ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಸನ್ನಿದಿಯಲ್ಲಿ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಡಿ.27 ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಡಿ.20 ರಂದು ನಡೆಯಿತು.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರವನ್ನು ಶ್ರೀ ಮಹಾಲಿಂಗೇಶ್ವರ ದೇವರ ಸತ್ಯ ಧರ್ಮ ನಡೆಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.



ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರವೀಂದ್ರನಾಥ್ ರೈ ಬಳ್ಳಮಜಲು, ಡಾ. ಸುಧಾ ಎಸ್. ರಾವ್, ರಾಮದಾಸ್ ಗೌಡ, ಶೇಖರ್ ನಾರಾವಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಅಯ್ಯಪ್ಪ ಭಕ್ತವೃಂದ ದೇವಾನಂದ ಸಹಿತ ಹಲವರು ಉಪಸ್ಥಿತರಿದ್ದರು

5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

Posted by Vidyamaana on 2023-09-19 16:29:41 |

Share: | | | | |


5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

ನವದೆಹಲಿ: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ 5 ದಿನಗಳ ಒಳಗಡೆ ದೇಶವನ್ನು ತೊರೆಯುವಂತೆ ಕೆನಡಾ ರಾಯಭಾರಿಗೆ (Can

non

ian Diplomat) ಭಾರತ ಸೂಚಿಸಿದೆ.ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿದೆ.

Re

non

more.....

ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌


ಜಿ20 ಶೃಂಗಸಭೆಯ (G20 Summit) ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ.


ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೆನಡಾದ ಆರೋಪಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ. ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ.



Leave a Comment: