ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಸುದ್ದಿಗಳು News

Posted by vidyamaana on 2024-07-01 19:31:51 |

Share: | | | | |


ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಮಳೆಗಾಲ ಆರಂಭವಾಗಿದ್ದು, ಈ ಋತುವಿನಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯವಾಗಿದೆ. ಋತುಮಾನದ ಕಾಯಿಲೆಗಳ ಜೊತೆಗೆ ಡೆಂಗ್ಯೂ ಅಪಾಯವಿದೆ. ಡೆಂಗ್ಯೂ ವಾಸ್ತವವಾಗಿ ಹೆಣ್ಣು ಈಜಿಪ್ಟಿ (ಈಡಿಸ್ ಸೊಳ್ಳೆ) ಸೊಳ್ಳೆಗಳಿಂದ ಹರಡುತ್ತದೆ.

ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದ್ರೆ, ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿ ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಕೇವಲ ಮನುಷ್ಯನ ಕೆಳಗಿನ ಅಂಗಗಳನ್ನ ಗುರಿಯಾಗಿಸುತ್ತಾರೆ. ಈ ಸೊಳ್ಳೆಗಳು ಕಚ್ಚಿದರೆ ತೀವ್ರ ಜ್ವರದ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಡೆಂಗ್ಯೂ ಸೊಳ್ಳೆಗಳು ಕೂಲರ್‌, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಛಾವಣಿಗಳು, ಟೈರ್‌ಗಳು, ಗುಂಡಿಗಳು ಇತ್ಯಾದಿಗಳಲ್ಲಿ ತಮ್ಮ ಮೊಟ್ಟೆಗಳನ್ನ ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನ ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆಗಳಾಗಿ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳು ಹುಟ್ಟಿದ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ.

ಡೆಂಗ್ಯೂ ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂ ಲಕ್ಷಣಗಳು ಕಾಣಿಸುವುದಿಲ್ಲ. ಆದ್ರೆ, ಕೆಲವು ದಿನಗಳ ನಂತರ ಅದರ ಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈಡಿಸ್ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಬರುತ್ತದೆ. ಈ ಸೊಳ್ಳೆಗಳು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ಡೆಂಗ್ಯೂ ಸೊಳ್ಳೆಗಳು ಮನೆಗಳ ಮೂಲೆಗಳಲ್ಲಿ ಪರದೆಯ ಹಿಂದೆ, ಸೊಳ್ಳೆಗಳು ಇರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ.

ಡೆಂಗ್ಯೂ ಜ್ವರದ ಲಕ್ಷಣಗಳು.!

ಡೆಂಗ್ಯೂ ಈಡಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಜ್ವರದಂತಿರುತ್ತವೆ. ಆದ್ರೆ, ಇದು ತೀವ್ರವಾದ ಹೆಮರಾಜಿಕ್ ಜ್ವರಕ್ಕೆ ಕಾರಣವಾಗಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ವೈದ್ಯರು.

ಲಕ್ಷಣಗಳೇನು.?

ತೀವ್ರವಾದ ಜ್ವರ, ತಲೆನೋವು, ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಣ್ಣುಗಳ ಕೆಳಗೆ ನೋವು, ಮೊಣಕಾಲು ನೋವು, ಊತ, ಹಲ್ಲು, ಮೂಗು, ಒಸಡುಗಳಿಂದ ರಕ್ತಸ್ರಾವ ಇತ್ಯಾದಿಗಳನ್ನ ಗಮನಿಸಿದರೆ ತಕ್ಷಣವೇ ಎಚ್ಚರಗೊಳ್ಳಿ.

ಡೆಂಗ್ಯೂ ತಡೆಗಟ್ಟುವುದು ಹೇಗೆ.?

* ವಿಶೇಷವಾಗಿ ಮಳೆಗಾಲದಲ್ಲಿ ದೇಹವನ್ನ ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನ ಧರಿಸಿ.

* ಮಲಗುವಾಗ ಸೊಳ್ಳೆ ಪರದೆಗಳನ್ನ ಬಳಸಿ.

* ಸೊಳ್ಳೆ ಕಡಿತವನ್ನು ತಡೆಯಲು ದೇಹಕ್ಕೆ ಎಣ್ಣೆ ಅಥವಾ ಕ್ರೀಮ್ ಹಚ್ಚಿ.

* ನಿಮ್ಮ ಮನೆ ಮತ್ತು ಸುತ್ತಮುತ್ತ ಕೊಳಕು ನೀರು ಬರುವುದನ್ನ ತಪ್ಪಿಸಿ.

* ಅನಗತ್ಯ ವಸ್ತುಗಳು ಹಾಗೂ ಕೂಲರ್ ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು.

* ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 Share: | | | | |


ಮದುವೆಯಾದ ಮೂರೇ ದಿನಕ್ಕೆ ತವರು ಸೇರಿದ ಪತ್ನಿ; ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ವಿನೋದ್ ಆತ್ಮಹತ್ಯೆ

Posted by Vidyamaana on 2024-02-06 14:55:29 |

Share: | | | | |


ಮದುವೆಯಾದ ಮೂರೇ ದಿನಕ್ಕೆ ತವರು ಸೇರಿದ ಪತ್ನಿ; ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ವಿನೋದ್ ಆತ್ಮಹತ್ಯೆ

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.ವಿನೋದ್(24) ಮೃತರು.

ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟು ಹೋದಳೆಂದು ಮನನೊಂದ ವಿನೋದ್ ಮನೆಯಲ್ಲಿ ಯಾರು ಇಲ್ಲದ ವೇಳೆ ಸಮಯ ನೋಡಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.


ತೇಗೂರು ಗ್ರಾಮದ ತನುಜಾ ಎಂಬ ಯುವತಿ ಹಾಗೂ ವಿನೋದ್ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಡಿಸೆಂಬರ್ 10 ರಂದು ವಿನೋದ್ ಹಾಗೂ ತನುಜಾ ಮದುವೆಯಾಗಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ನವ ಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಠಾಣೆಯಲ್ಲಿ ಪಂಚಾಯಿತಿ ನಡೆದಿದ್ದು ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ. ಮದುವೆಯಾದ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಹೇಳಿ ಯುವತಿ ಉಲ್ಟಾ ಹೊಡೆದಿದ್ದಾಳೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ

Posted by Vidyamaana on 2023-05-14 10:50:58 |

Share: | | | | |


ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ

ಹೊಸದಿಲ್ಲಿ: ಕರ್ನಾಟಕ ಕೇಡರ್‌ ನ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಉನ್ನತ ಮಟ್ಟದ ಆಯ್ಕೆ ಸಮಿತಿಯು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರನ್ನಾಗಿ ನೇಮಿಸಿದೆ.ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸೇವೆ ಸಲ್ಲಿಸುತ್ತಿರುವ ಸೂದ್ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಆಯ್ಕೆ ಸಮಿತಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರವೀಣ್ ಸೂದ್ ಅವರನ್ನು ಮುಂದಿನ ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲು ಸರ್ವಾನುಮತದಿಂದ ಆಯ್ಕೆ ಮಾಡಿದೆ.

ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸರಕಾರದಿಂದ ಸೂಚನೆ

Posted by Vidyamaana on 2023-07-13 09:51:46 |

Share: | | | | |


ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸರಕಾರದಿಂದ ಸೂಚನೆ

ನವದೆಹಲಿ: ದೇಶದಲ್ಲೆಡೆ ಟೊಮೆಟೋ ದರ ಏರಿಕೆಯಾಗಿದೆ. ಕೆ.ಜಿಗೆ 150 ರೂ ದಾಟಿದಂತೆ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ

ಹೆಚ್ಚು ಟೊಮೆಟೋ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಬೆಳೆ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ , ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳಿಗೆ ಕೇಂದ್ರ ಸೂಚನೆ ನೀಡಿದೆ.


ಈ ಹಿನ್ನಲೆ ಗಗನಕ್ಕೇರಿರುವ ಟೊಮೆಟೋ ದರ ಇಳಿಕೆಯಾಗುವ ಸಾಧ್ಯತೆ ಇದೆ. ಜು.14 ಅನ್ವಯವಾಗುವಂತೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ದ ವ್ಯಾಪ್ತಿಯಲ್ಲಿ ಎನ್‌ಸಿಸಿಎಫ್ ಮತ್ತು ನಾಫೆಡ್‌ ವತಿಯಿಂದ ಟೊಮೆಟೋವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಬಗ್ಗೆ ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.


ಯಾವ ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಅದರ ಆಧಾರದಲ್ಲಿ ಟೊಮೆಟೋ ಪೂರೈಸಬೇಕು ಎಂಬ ವಿಚಾರವನ್ನೂ ಗುರುತಿಸಲಾಗಿದ್ದು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್‌ ಮತ್ತು ನಾಸಿಕ್‌, ಆಂಧ್ರಪ್ರದೇಶದದಿಂದ ಹೆಚ್ಚಿನ ಪ್ರಮಾಣದಲ್ಲಿ ಟೋಮೋಟೋ ಪೂರೈಕೆಯಾಗುತ್ತದೆ. ಇನ್ನು ದಿಲ್ಲಿ ಮತ್ತು ಎನ್‌ಸಿಆರ್‌ಗೆ ಕರ್ನಾಟಕದ ಕೋಲಾರ, ಹಿಮಾಚಲ ಪ್ರದೇಶದಿಂದ ಟೊಮೆಟೋ ಪೂರೈಕೆಯಾಗುತ್ತದೆ.


ಹೀಗಾಗಿ ನಾಸಿಕ್‌ನಿಂದ ಹೊಸ ಬೆಳೆ ಪೂರೈಕೆಯಾಗಲಿದೆ. ಮುಂದಿನ ತಿಂಗಳು ನಾರಾಯಣಗಾಂವ್‌, ಔರಂಗಾಬಾದ್‌, ಮಧ್ಯಪ್ರದೇಶಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುವ ವಿಶ್ವಾಸವನ್ನುಸರಕಾರದ ಮೂಡಿಸಿದೆ.

ಕಿಡ್ನಿ ಸ್ಟೋನ್ ಗೆ ತಡೆ ಹೇಗೆ? ಇಲ್ಲಿ ಓದಿ

Posted by Vidyamaana on 2023-01-19 09:23:03 |

Share: | | | | |


ಕಿಡ್ನಿ ಸ್ಟೋನ್ ಗೆ ತಡೆ ಹೇಗೆ? ಇಲ್ಲಿ ಓದಿ

       ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ. ನಮ್ಮಆಹಾರ ಪದ್ಧತಿಯು ಬದಲಾಗಿದ್ದು ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆಗಳಲ್ಲಿ ಮೂತ್ರಕೋಶದಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಕಾಣಿಸಿಕೊಳ್ಳುವುದು ಒಂದಾಗಿದೆ.


ಕಿಡ್ನಿ ಸ್ಟೋನ್ ಉಂಟಾಗುವುದು ಹೇಗೆ?

ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ಮಾರ್ಪಟ್ಟು ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುತ್ತವೆ. ಈ ಕಲ್ಲುಗಳು ಹರಳುಗಳ ರೂಪದಲ್ಲಿ ಅಥವಾ ಕಲ್ಲಿನಂತೆಯೇ ಕಾಣಿಸಿಕೊಳ್ಳಬಹುದು. ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ತಡೆದಾಗ ನೋವು ಕಾಣಿಸಿಕೊಳ್ಳುತ್ತದೆ. ಹೆಂಗಸರಿಗಿಂತ ಗಂಡಸರಲ್ಲಿ ಈ ಸಮಸ್ಯೆಯು ಹೆಚ್ಚು. 

ಮೂತ್ರಕೋಶದಲ್ಲಿ ಕಲ್ಲು ಉಂಟಾದ ಬಳಿಕ ಒತ್ತಡದ ಕಾರಣದಿಂದಾಗಿ ನೋವು ಕಾಣಿಸಿಕೊಳ್ಳುವುದು. ಬೆನ್ನು, ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಇತರ ಭಾಗದಲ್ಲಿ ನೋವು

 ಕಾಣಿಸಿಕೊಳ್ಳುವುದು. ಬೆನ್ನು, ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಇತರ ಭಾಗದಲ್ಲಿ ನೋವು ಕಂಡುಬರುವುದು. ಕಲ್ಲು ದೊಡ್ಡದಾಗಿದ್ದರೆ ಆಗ ಭಾಗ ಊದಿಕೊಳ್ಳುತ್ತದೆ. ಮೂತ್ರ ವಿಸರ್ಜಿಸುವಾಗ ನೋವಾಗುತ್ತದೆ. ಆಗಾಗ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಮೂತ್ರಚೀಲ ಸಂಪೂರ್ಣ ಖಾಲಿಯಾಗಿಲ್ಲ ಎಂಬ ಅನುಭವವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ನೋವಾಗುತ್ತದೆ. ಕೆಲವೊಮ್ಮೆ ಮೂತ್ರದಿಂದ ದುರ್ವಾಸನೆ ಬರುತ್ತದೆ. ವಾಂತಿ/ವಾಕರಿಕೆಯೂ ಉಂಟಾಗಬಹುದು. ಕಲ್ಲುಗಳು ದೊಡ್ಡದಾದರೆ ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸಲು ಆಗುವುದಿಲ್ಲ.


ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ತಡೆಯಬಹುದೇ?

ಪ್ರತಿದಿನ ನಾವು ಸರಿಯಾಗಿ ನೀರನ್ನು ಕುಡಿಯುವುದು ಅತ್ಯಂತ ಮುಖ್ಯ. ನಾವು ನೀರನ್ನು ಬೇಕಾದಷ್ಟು ಕುಡಿಯದೇ ಇರುವುದು ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣ. ಜೊತೆಗೆ ಮಸಾಲೆ ಆಹಾರ, ಕೂಲ್ ಡ್ರಿಂಕ್ಸ್ ಮತ್ತು ಕಾಫಿ/ಟೀ ಹೆಚ್ಚಾಗಿ ಸೇವಿಸುವುದೂ ಈ ಸಮಸ್ಯೆಯನ್ನು ಉಂಟುಮಾಡುತ್ತದೆ.ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಲವಣಾಂಶಗಳ ಶೇಖರಣೆ ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಲು ದಿನನಿತ್ಯ ಕನಿಷ್ಠ ಮೂರು ಲೀಟರ್ ನೀರನ್ನು ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಲವಣಾಂಶಗಳು ಮೂತ್ರದ ರೂಪದಲ್ಲಿ ದೇಹದಿಂದ ಹೊರಹೋಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದಾಗಿದೆ.


ಕಿಡ್ನಿ ಸ್ಟೋನ್ ತಡೆಯಲು ಆಹಾರ ಕ್ರಮ ಪರಿಣಾಮಕಾರಿ

ನಮ್ಮ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು. ಆಹಾರದಲ್ಲಿ ಹೆಚ್ಚು ಉಪ್ಪು (ರಸಾಯನಿಕವಾಗಿ ಸೋಡಿಯಂಕ್ಲೋರೈಡ್) ಇದ್ದರೆ ಕಿಡ್ನಿ ಕಲ್ಲುಗಳ ಅಪಾಯ ಕಂಡುಬರುತ್ತದೆ. ಏಕೆಂದರೆ ಇದು ಮೂತ್ರದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಮ್ಮನ್ನು ಮೂತ್ರದಿಂದ ರಕ್ತ ಹೀರಿಕೊಳ್ಳದಂತೆ ತಡೆಯುತ್ತದೆ. ಇದು ಮೂತ್ರದಲ್ಲಿ ಕ್ಯಾಲ್ಸಿಯಂ ಸೇರಿಕೊಳ್ಳಲು ಕಾರಣವಾಗುತ್ತದೆ. ಹೀಗಾಗಿ  ಅತಿಯಾದ ಉಪ್ಪಿನ ಬಳಕೆ ಕಿಡ್ನಿ ಸ್ಟೋನಿಗೆ ಕಾರಣವಾಗಬಹುದು. ಹಾಗೆಯೇ ಸಂಸ್ಕರಿಸಿದ ಆಹಾರದಲ್ಲಿ ಉಪ್ಪು ಹೆಚ್ಚಾಗಿರುವುದರಿಂದ (ಚಿಪ್ಸ್, ಚೌಚೌ ಇತ್ಯಾದಿ) ಅದರ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಪದೇ ಪದೇ ಕಾಫಿ ಸೇವನೆ ಮಾಡುವುದು ನಮ್ಮ ಚಯಾಪಚಯ ಕ್ರಿಯೆಯನ್ನು (ಮೆಟಾಬಾಲಿಸಂ) ಹೆಚ್ಚಿಸುತ್ತವೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುತ್ತದೆ. ಪರಿಣಾಮವಾಗಿ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುತ್ತವೆ.

ಕಿಡ್ನಿಯಲ್ಲಿ ಕಲ್ಲು ಸಮಸ್ಯೆಯನ್ನು ತಡೆಯಲು ದಿನಕ್ಕೆ ಕನಿಷ್ಠ ಮೂರು/ನಾಲ್ಕು ಲೀಟರಿನಷ್ಟು ನೀರನ್ನು ಕುಡಿಯಬೇಕು. ಸಿಟ್ರಿಕ್ ಆಮ್ಲ (ಹುಳಿ) ಇರುವ ಆಹಾರವನ್ನು ಹೇರಳವಾಗಿ ಸೇವಿಸಬೇಕು (ಲಿಂಬೆ ಹಣ್ಣು, ಮೂಸಂಬಿ, ಕಿತ್ತಲೆ ಇತ್ಯಾದಿ). ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಅನಾನಸು ಮತ್ತು ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸಬೇಕು. ಹೆಚ್ಚಿನ ಹಣ್ಣು, ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುತ್ತದೆ. ಅವುಗಳ ಬಳಕೆ ಹೆಚ್ಚಾಗಿರಲಿ (ಎಳನೀರು, ಪೈನಾಪಲ್, ಬಾಳೆಹಣ್ಣು, ಕರ್ಬೂಜ, ಕಲ್ಲಂಗಡಿ, ಒಣದ್ರಾಕ್ಷಿ ಇತ್ಯಾದಿ). ಬಾಳೆದಿಂಡು ಮತ್ತು ಅದರ ರಸದ ಸೇವನೆ ಉಪಯುಕ್ತ. ಬಾರ್ಲಿ ನೀರು ಮತ್ತು ಹುರುಳಿ ಕಾಳು/ಹೆಸರು ಕಾಳು ಬೇಯಿಸಿದ ನೀರನ್ನು ಸೇವಿಸುವುದು ಒಳ್ಳೆಯದು.

ಮೂತ್ರಕೋಶದಲ್ಲಿ ಕಲ್ಲುಗಳು ಇರುವವರು ಆಹಾರದಲ್ಲಿ ಪಥ್ಯ ಮಾಡುವುದು ಉತ್ತಮ. ಎಲೆಕೋಸು, ಹೂಕೋಸುಗಳ ಸೇವನೆ ಬೇಡ. ಜೊತೆಗೆ ಈಗಾಗಲೇ ಮೂತ್ರಕೋಶದಲ್ಲಿ ಕಲ್ಲಿನ  ಸಮಸ್ಯೆ ಇರುವವರು ಬೀಜಗಳಿರುವ ತರಕಾರಿಗಳು ಅಂದರೆ ಟೊಮ್ಯಾಟೋ, ದೊಣ್ಣಮೆಣಸಿನಕಾಯಿಗಳನ್ನು ಸೇವಿಸಬಾರದು. ಮಸಾಲೆಯುಕ್ತ ಮಾಂಸಾಹಾರದ ಸೇವನೆ ಕಡಿಮೆ ಮಾಡುವುದು ಒಳ್ಳೆಯದು. ಅಗತ್ಯಕ್ಕಿಂತ ಕಾಫಿ, ಚಹಾ, ಹಸಿರು ಚಹಾ, ಚಾಕಲೇಟ್, ಕೂಲ್ ಡ್ರಿಂಕ್ಸ್, ಸೋಡಾ, ಮದ್ಯಪಾನದ ಸೇವನೆ ಬೇಡ.

ಹೆಚ್ಚು ತೂಕ ಹೊಂದಿರುವವರು ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಬಗ್ಗೆ ಹುಷಾರಾಗಿರಬೇಕು. ಸ್ಥೂಲಕಾಯ ದೇಹದಲ್ಲಿ ಆಮ್ಲ ಮತ್ತು ಲವಣಗಳ ಪ್ರಮಾಣವನ್ನು ಹೆಚ್ಚಿಸಬಹುದು. ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರ ಕ್ರಮಗಳಿವೆ. ಹಲವಾರು ಮಾತ್ರೆಗಳು ಮತ್ತು ಕಷಾಯಗಳ ಸೇವನೆ ಉಪಯೋಗಕಾರಿ. ಹೆಚ್ಚು ನೀರನ್ನು ಕುಡಿದರೆ ಮೂತ್ರಕೋಶದಲ್ಲಿರುವ ಕಲ್ಲುಗಳು ನಿಧಾನವಾಗಿ ಕರಗಿ ಮೂತ್ರದ ಮೂಲಕ ಹೊರಗೆ ಹೋಗುತ್ತವೆ. ಒಂದಕ್ಕಿಂತ ಹೆಚ್ಚು/ದೊಡ್ಡಗಾತ್ರದ ಕಲ್ಲುಗಳು ಇದ್ದರೆ ಸ್ವಲ್ಪ ದೀರ್ಘಾವಧಿಯ ಚಿಕಿತ್ಸೆಯು ಬೇಕಾಗಬಹುದು. ಪಂಚಕರ್ಮ ಚಿಕಿತ್ಸೆಯ ವಿರೇಚನ ಕೂಡ ಒಳ್ಳೆಯದು. ಆದರೆ ಯಾವುದಕ್ಕೂ ವೈದ್ಯರನ್ನು ಕಾಣಬೇಕು.


ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೈಸರ್ಗಿಕವಾಗಿ ಕಿಡ್ನಿ ಕಲ್ಲುಗಳನ್ನು ಗುಣಪಡಿಸಬಹುದು. ನಿಂಬೆಯನ್ನು ಕಿಡ್ನಿ ಸ್ಟೋನ್ ನಿವಾರಣೆಗೆ ಮನೆಮದ್ದಾಗಿ ಬಳಸುವ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ.

ಅತಿ ಹೆಚ್ಚು ತ್ಯಾಜ್ಯ (Waste) ನಿಮ್ಮ ರಕ್ತದಲ್ಲಿ (Blood) ಶೇಖರಣೆ (Store) ಆಗುತ್ತಾ ಹೋದಾಗ ಕಿಡ್ನಿ ಸ್ಟೋನ್ (Kidney Stone) ಸಮಸ್ಯೆ ದೇಹದಲ್ಲಿ (Body) ಉಂಟಾಗುತ್ತದೆ. ಈ ವೇಳೆ ನಿಮ್ಮ ದೇಹವು ಸಾಕಷ್ಟು ಮೂತ್ರ ಹೊರ ಹಾಕಲು ಸಾಧ್ಯ ಆಗುವುದಿಲ್ಲ. ಇದು ನಿಮ್ಮ ಮೂತ್ರಪಿಂಡದಲ್ಲಿ ಹರಳುಗಳು ಉಂಟಾಗಲು ಮುಖ್ಯ ಕಾರಣವಾಗುತ್ತದೆ. ಮತ್ತು ಕ್ರಮೇಣ ಈ ಸ್ಫಟಿಕವು ತನ್ನಂತೆಯೇ ಇತರ ತ್ಯಾಜ್ಯಗಳೊಂದಿಗೆ ಬೆರೆಯಲು ಶುರು ಮಾಡುತ್ತದೆ. ಮತ್ತು ಕಲ್ಲುಗಳನ್ನು ರೂಪಿಸುತ್ತದೆ. ಕಾಲಾನಂತರದಲ್ಲಿ, ಅವುಗಳ ಗಾತ್ರವು ಹೆಚ್ಚಾಗುತ್ತಾ ಹೋಗುತ್ತದೆ. ಅದರಿಂದಾಗಿ ಮೂತ್ರಪಿಂಡದ ಕಲ್ಲುಗಳು ಏಕೆ ಸಂಭವಿಸುತ್ತವೆ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ.


ಮೂತ್ರಪಿಂಡದ ಕಲ್ಲುಗಳು ಏಕೆ ಸಂಭವಿಸುತ್ತವೆ?

ಕಡಿಮೆ ನೀರು ಕುಡಿಯುವ ಅಭ್ಯಾಸ,

ಅನುವಂಶಿಕವಾಗಿ ಕಲ್ಲುಗಳಾಗುವ ಪ್ರವೃತ್ತಿ,

ಆಗಾಗ್ಗೆ ಸಂಭವಿಸುವ ಮೂತ್ರನಾಳದ ಸೋಂಕು,

ವಿಟಮಿನ್ ಸಿ ಅಥವಾ ಕ್ಯಾಲ್ಸಿಯಂ ಔಷಧಿಗಳ ಅತಿಯಾದ ಸೇವನೆ,

ದೀರ್ಘಕಾಲದ ಬೆಡ್ ರೆಸ್ಟ್,

ಹೈಪರ್ಪ್ಯಾರಾಥೈರಾಯ್ಡಿಸಮ್

ಇವುಗಳು ಸಾಮಾನ್ಯವಾಗಿ ಕಂಡು ಬರುವ ಕಾರಣ ಆಗಿವೆ. ಇದಲ್ಲದೆ, ಬೊಜ್ಜು ಹೊಂದಿರುವ ಜನರು ಮತ್ತು ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.


ಕಿಡ್ನಿ ಸ್ಟೋನ್ ಗೆ ಮನೆಮದ್ದು ಯಾವವು? 

ಹೀಗೆ ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸಲು ಹಲವು ಬಗೆಯ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ನೀವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೈಸರ್ಗಿಕವಾಗಿ ಕಿಡ್ನಿ ಕಲ್ಲುಗಳನ್ನು ಗುಣಪಡಿಸಬಹುದು. ನಿಂಬೆಯನ್ನು ಕಿಡ್ನಿ ಸ್ಟೋನ್ ನಿವಾರಣೆಗೆ ಮನೆಮದ್ದಾಗಿ ಬಳಸುವ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ.

ಹೊಟ್ಟೆಯ ಶಾಖವನ್ನು ಶಮನಗೊಳಿಸುವುದಲ್ಲದೆ, ಇದರಲ್ಲಿರುವ ಔಷಧೀಯ ಗುಣಗಳು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಕೆಲಸ ಮಾಡುತ್ತದೆ. ಆದರೆ ಇದನ್ನು ಔಷಧಿಯಾಗಿ ತೆಗೆದುಕೊಳ್ಳಲು ಕೆಲವು ವಿಶೇಷ ವಿಧಾನ ಬಳಸಲಾಗುತ್ತದೆ.


ನಿಂಬೆಯ ಔಷಧೀಯ ಗುಣಗಳು

ವಿಟಮಿನ್-ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಫೈಬರ್ ನಂತಹ ಪೋಷಕಾಂಶಗಳೂ ಇದರಲ್ಲಿವೆ. ಇದು ಕ್ಯಾನ್ಸರ್ ವಿರೋಧಿ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಸಂಶೋಧನೆಯ ಪ್ರಕಾರ, ಇದರಲ್ಲಿರುವ ಸಿಟ್ರೇಟ್ ಗುಣವು ಮೂತ್ರಪಿಂಡದಲ್ಲಿ ಕಲ್ಲುಗಳ ಬೆಳವಣಿಗೆ ತಡೆಯುತ್ತದೆ.


ನಿಂಬೆ ರಸದೊಂದಿಗೆ ಗೋಧಿ ಹುಲ್ಲು ಮತ್ತು ತುಳಸಿ ಮಿಶ್ರಣ ಮಾಡಿ

ಯಾವುದೇ ಔಷಧಿ ಮತ್ತು ಶಸ್ತ್ರಚಿಕಿತ್ಸೆಯಿಲ್ಲದೆ ನೀವು ಮೂತ್ರಪಿಂಡದ ಕಲ್ಲನ್ನು ತೊಡೆದು ಹಾಕಲು ಬಯಸಿದರೆ, ನಿಂಬೆ, ಗೋಧಿ ಹುಲ್ಲು ಮತ್ತು ತುಳಸಿಯ ಮಿಶ್ರಣ ಬಳಸಿ. 1 ಟೀಚಮಚ ನಿಂಬೆ ಮತ್ತು ತುಳಸಿ ರಸವನ್ನು 1 ಗ್ಲಾಸ್ ಗೋಧಿ ಹುಲ್ಲಿನ ರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ನಿಯಮಿತವಾಗಿ ಕುಡಿಯಿರಿ. ಕಿಡ್ನಿ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.


ನಿಂಬೆ ರಸದೊಂದಿಗೆ ಆಪಲ್ ಸೈಡರ್ ವಿನೆಗರ್

ಆಪಲ್ ವಿನೆಗರ್ನಲ್ಲಿರುವ ಅಸಿಟಿಕ್ ಆಮ್ಲವು ಕಲ್ಲುಗಳನ್ನು ಕರಗಿಸುತ್ತದೆ. ಇದರಿಂದಾಗಿ ಕಲ್ಲಿನ ಗಾತ್ರವು ಚಿಕ್ಕದಾಗುತ್ತದೆ ಮತ್ತು ಮೂತ್ರದೊಂದಿಗೆ ದೇಹದಿಂದ ಹೊರ ಹೋಗುತ್ತದೆ. ಪ್ರಯೋಜನಗಳಿಗಾಗಿ ನಿಂಬೆಯೊಂದಿಗೆ 1 ಟೀಚಮಚ ನಿಂಬೆ ರಸ ಮತ್ತು ಸೇಬು ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಮತ್ತು ನಿಯಮಿತವಾಗಿ ಇದನ್ನು ದಿನಕ್ಕೆ 3-4 ಬಾರಿ ಸೇವಿಸಿ.

ನಿಂಬೆ ಜೊತೆ ಆಲಿವ್ ಎಣ್ಣೆ

ಆಲಿವ್ ಎಣ್ಣೆಯು ಕಲ್ಲುಗಳ ರಚನೆ ತಡೆಯುತ್ತದೆ. ಕಲ್ಲುಗಳಿಂದ ಮೂತ್ರಪಿಂಡದ ಹಾನಿ ತಡೆಗಟ್ಟುವಲ್ಲಿ ಇದು ಸಹಾಯಕವಾಗಿದೆ. ನಿಂಬೆಯೊಂದಿಗೆ ಬೆರೆಸಿದ ಆಲಿವ್ ಎಣ್ಣೆಯನ್ನು ಸೇವಿಸಲು ಸೂಚಿಸಲಾಗುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳಿಂದ ಉಂಟಾಗುವ ನೋವನ್ನು ನಿವಾರಿಸಲು ಈ ಮಿಶ್ರಣವು ಕೆಲಸ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ 1-1 ಚಮಚ ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ದಿನಕ್ಕೆ 2-3 ಬಾರಿ ಸೇವಿಸಬಹುದು.

ಪ್ಯಾನ್-ಆಧಾರ್ ಲಿಂಕ್ ಗೋಲ್ಮಾಲ್! ಪ್ಯಾನ್ ಕಾರ್ಡ್ ನಿಷ್ಕ್ರಿಯದ ಭಯಭಿತ್ತಿ ಸೈಬರ್ ಕೇಂದ್ರಗಳಿಂದ ಹಗಲುದರೋಡೆ

Posted by Vidyamaana on 2023-03-25 05:57:07 |

Share: | | | | |


ಪ್ಯಾನ್-ಆಧಾರ್ ಲಿಂಕ್ ಗೋಲ್ಮಾಲ್!  ಪ್ಯಾನ್ ಕಾರ್ಡ್ ನಿಷ್ಕ್ರಿಯದ ಭಯಭಿತ್ತಿ ಸೈಬರ್ ಕೇಂದ್ರಗಳಿಂದ ಹಗಲುದರೋಡೆ

ಹೊಸದಿಲ್ಲಿ: ಆಧಾರ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಅನ್ನು ಜೋಡಣೆ ಮಾಡಲು ಮಾ.31 ಕಡೆಯ ದಿನವಾಗಿದೆ. ಗಡುವಿಗೆ ಕೆಲವೇ ದಿನಗಳಷ್ಟೇ ಜೋಡಣೆ ಮಾಡದಿದ್ದರೆ ಏ.1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಈ ಆದೇಶದ ಲಾಭ ಪಡೆಯುತ್ತಿರುವ ಸೈಬರ್ ಸೆಂಟರ್ ಗಳು , ಗ್ರಾಹಕರಿಂದ ಹಗಲು ದರೋಡೆಗಿಳಿದಿವೆ. ಗ್ರಾಹಕರು ಬಂದೊಡನೆ ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪರಿಶೀಲನೆಗೆ ಮುಂದಾಗುತ್ತಾರೆ. ಆಗಿದ್ದರೂ, ಆಗದೇ ಇದ್ದರೂ – ಲಿಂಕ್ ಆಗಿಲ್ಲ ಎಂದು ಗ್ರಾಹಕರಿಂದ 1300 ರೂ. ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ, ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ, ಒಂದು ವೇಳೆ ಲಿಂಕ್ ಮಾಡದೇ ಹೋದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆಗ ಅದನ್ನು ವಿವಿಧ ಉದ್ದೇಶಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ವ್ಯವಹಾರಗಳೂ ಸೇರಿದಂತೆ ವಿವಿಧಡ ಈಗ ಪ್ಯಾನ್ ಬಳಕೆ ಕಡ್ಡಾಯವಾಗಿದೆ.

ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಗಡುವನ್ನು ಈ ಹಿಂದೆ ಹಲವಾರು ಬಾರಿ -ಪ್ಯಾನ್ ಲಿಂಕ್ನ ಸ್ಟೇಟಸ್ ಪರಿಶೀಲಿಸಬಹುದು. ವಿಸ್ತರಿಸಲಾಗಿತ್ತು. ಈಗ ಕೊನೆಯದಾಗಿ ಮಾರ್ಚ್ 31ರ ಗಡುವನ್ನು ಆದಾಯ ತೆರಿಗೆ ಇಲಾಖೆ ನೀಡಿದೆ.

ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?: 

ಆದಾಯ ತಂಗ ಇಲಾಖೆಯ ಪೋರ್ಟಲ್ https://eportal.incometax gov.in/ ಜಾಲತಾಣಕ್ಕೆ ಭೇಟಿ ನೀಡಿ, ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಬಹುದು.

ಅದೇ ರೀತಿ, ಈ ವೆಬ್, ವಿಳಾಸಕ್ಕೂ ತೆರಳಿ https://www.pan.utitsl.com/ ಆಧಾರ್ – ಪ್ಯಾನ್ ಲಿಂಕಿನ ಸ್ಟೇಟಸ್ ಪರಿಶೀಲಿಸಬಹುದು.

ಎಸ್ಎಂಎಸ್ ಮೂಲಕವೂ ಲಿಂಕ್ ಮಾಡಿ!

1.) ಮೊದಲು, UIDPAN ಫಾರ್ಮ್ಯಾಟ್ನಲ್ಲಿ ಸಂದೇಶವನ್ನು ಟೈಪ್ ಮಾಡಿ, ಅಂದರೆ, UIDPAN (ಸ್ಪೇಸ್) 12-ಅಂಕಿಯ ಆಧಾರ್ ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಸಂಖ್ಯೆ (ಸ್ಪೇಸ್) 10-ಅಂಕಿಯ PAN ಸಂಖ್ಯೆ.

2. )ನಿಮ್ಮ ನೋಂದಾಯಿತ ಸಂಖ್ಯೆಯಿಂದ 567678 ಅಥವಾ 56161 ಗೆ ಮಾತ್ರ SMS ಕಳುಹಿಸಿ.

3.) ಬಳಿಕ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಕುರಿತು ನೀವು ದೃಢೀಕರಣ ಸಂದೇಶವನ್ನು ಪಡೆಯುವಿರಿ.

.ಲಿಂಕ್ ಮಾಡಲು ಎಷ್ಟು ಶುಲ್ಕ?

ನೀವು ಇನ್ನೂ ನಿಮ್ಮ ಆಧಾರ್ ಮಾಡದೇ ಇದ್ದಲ್ಲಿ ಈಗ ನೀವು www.inco- metax.gov.in ಜಾಲತಾಣಕ್ಕೆ ಹೋಗಿ, ಅಲ್ಲಿ ಲಿಂಕ್ ಆಧಾರ್ ಎನ್ನುವ ಆಯ್ಕೆ ಯನ್ನು ಕ್ಲಿಕ್ ಮಾಡಿದರೆ, ಮಾಹಿತಿ ತೆರೆದುಕೊಳ್ಳುತ್ತದೆ. 1,000 ರೂ. ಶುಲ್ಕವನ್ನು ಪಡೆಯುವಿರಿ. ಪಾವತಿಸಿ ಲಿಂಕ್ ಮಾಡಬಹುದು.

ಮೇ 21: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ

Posted by Vidyamaana on 2023-05-16 03:26:05 |

Share: | | | | |


ಮೇ 21: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ

ಪುತ್ತೂರು: ಪುತ್ತಿಲ ಅಭಿಮಾನಿಗಳಿಂದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಎನ್ನುವ ಹೆಸರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಮೇ 21ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ದರ್ಬೆ ವೃತ್ತದಿಂದ‌ ಹೊರಡುವ ಜಾಥಾ ಮುಖ್ಯರಸ್ತೆಯಾಗಿ ಸಂಚರಿಸಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಳ್ಳಲಿದೆ.

ಕಾಲ್ನಡಿಗೆ ಜಾಥಾದ ಬಳಿಕ ದೇವಸ್ಥಾನದ ವಠಾರದಲ್ಲಿ ಬೃಹತ್ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣೆ ಬಳಿಕ ಪುತ್ತಿಲ ಅಭಿಮಾನಿಗಳು ಎಂಪಿ ಫಾರ್ ಪುತ್ತಿಲ ಅಭಿಯಾನ‌ ಕೈಗೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಪುತ್ತಿಲ ಘೋಷ ವಾಕ್ಯ ಹತ್ತೂರಿಗೆ ಪುತ್ತಿಲ ಎಂಬುದಾಗಿ ಪರಿವರ್ತನೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮೇ 21ರಂದು ನಡೆಯುವ ಕಾಲ್ನಡಿಗೆ ಜಾಥಾ ಹಾಗೂ ಬೃಹತ್ ಕಾರ್ಯಕರ್ತರ ಸಭೆ ಮಹತ್ವ ಪಡೆದುಕೊಂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ವೀರೋಚಿತ ಸೋಲು ಅನುಭವಿಸಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆಯ ಬಳಿಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಿಕೊಂಡಿದ್ದಾರೆ. ಸರ್ವಧರ್ಮೀಯರು ಪುತ್ತಿಲ ಅಭಿಮಾನಿಗಳಾಗಿರುವುದು ಕಾಂಗ್ರೆಸ್ ವಿಜಯೋತ್ಸವದ ವೇಳೆಯೇ ಗಮನಕ್ಕೆ ಬಂದಿತ್ತು.



Leave a Comment: