ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಸುದ್ದಿಗಳು News

Posted by vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

 Share: | | | | |


ಪುತ್ತೂರಿನಲ್ಲಿ ನಾಳೆ ರಮ್ಯ-ನಿಕೇತ್ ರಾಜ್ ಜೋಡಿ ಮಾಡಲಿದೆ ಮೋಡಿ -ಅಶೋಕ್ ರೈ ಪರ ಮತಯಾಚನೆ

Posted by Vidyamaana on 2023-05-07 09:17:33 |

Share: | | | | |


ಪುತ್ತೂರಿನಲ್ಲಿ ನಾಳೆ ರಮ್ಯ-ನಿಕೇತ್ ರಾಜ್ ಜೋಡಿ ಮಾಡಲಿದೆ ಮೋಡಿ -ಅಶೋಕ್ ರೈ ಪರ ಮತಯಾಚನೆ

ಪುತ್ತೂರು: ಖ್ಯಾತ ಚಲನಚಿತ್ರ ನಟಿ ರಮ್ಯ ಮತ್ತು ನಿಕೇತ್ ರಾಜ್ ಮೌರ್ಯ ಅವರು ನಾಳೆ ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ರೋಡ್ ಶೋ ದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಬೋಳುವಾರು ವೃತ್ತದಿಂದ ಆರಂಭಗೊಂಡು ದರ್ಬೆ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಯಲಿದೆ. ಖ್ಯಾತ ಚಲನಚಿತ್ರ ನಟಿ, ರಮ್ಯಾ ಮತ್ತು ಖ್ಯಾತ ವಾಗಿ ನಿಕೇತ್ ರಾಜ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಅಶೋಕ್ ಕುಮಾರ್ ರೈ ಪರ ಮತ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಜರತ್ ಇಮಾಮ್ ಶಾ ವಲೀ ದರ್ಗಾಗೆ ದಸರಾ ಆನೆಗಳ ಸಲಾಂ!

Posted by Vidyamaana on 2023-10-25 08:45:27 |

Share: | | | | |


ಹಜರತ್ ಇಮಾಮ್ ಶಾ ವಲೀ ದರ್ಗಾಗೆ ದಸರಾ ಆನೆಗಳ ಸಲಾಂ!

ಮೈಸೂರು: ಅರಮನೆ ನಗರಿ ಮೈಸೂರು ಸಾಂಸ್ಕೃತಿಕ ವೈವಿಧ್ಯದಿಂದಲೂ ಶ್ರೀಮಂತ. ಅಷ್ಟೇ ಅಲ್ಲ ಸೌಹಾರ್ದದ ಪ್ರತೀಕ. ನಾಡಹಬ್ಬ ದಸರೆಯು ಎಲ್ಲರನ್ನೂ ಒಳಗೊಳ್ಳುವ ಹಬ್ಬ. ಅದನ್ನು ಸಾಬೀತು ಮಾಡುವಂತೆ ಇಲ್ಲಿ ಪರಂಪರಾಗತವಾಗಿ ಬಂದ ನೂರಾರು ಆಚರಣೆಗಳಿವೆ. ಅವು ಎಲ್ಲ ಧರ್ಮಗಳಿಗೂ ಸೇರಿವೆ.ಸೋಮವಾರ ಅರಮನೆಯಲ್ಲಿ ಜಂಬೂಸವಾರಿಗೆ ಭರದ ಸಿದ್ಧತೆಗಳು ನಡೆದಿರುವಾಗಲೇ ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್ ಇಮಾಮ್ ಶಾ ವಲೀ ದರ್ಗಾಕ್ಕೆ ದಸರಾ ಆನೆಗಳು ಬಂದು ಸಲಾಂ ಮಾಡಿದವು.


ಈ ಬಹುತ್ವದ ಹಿರಿಮೆಯನ್ನು ಸಾರುವ, ವೈವಿಧ್ಯದ ಸುಂದರ  ದೃಶ್ಯವನ್ನು  ಕಣ್ಣುಂಬಿಕೊಳ್ಳಲು ನೂರಾರು ಜನರು ಜಮಾಯಿಸಿದ್ದರು. ಸೂಫಿ ಸಂತ ಇಮಾಮ್ ಶಾ ವಲೀ ಅವರಿಗೆ, ಚಾಮುಂಡೇಶ್ವರಿ ದೇವಿಗೆ ಭಕ್ತರು ಜಯಕಾರ ಹಾಕಿದರು. ನೋಡಿದವರ ಎದೆಯಲ್ಲಿ ಸೌಹಾರ್ದದ ಹೂ ಅರಳಿತು. ಭಕ್ತರಲ್ಲಿ ಕಣ್ಣಾಲಿಗಳು ತುಂಬಿದವು.


82 ವರ್ಷಗಳಿಂದಲೂ ವಿಜಯದಶಮಿಯ ಮುನ್ನಾ ದಿನ ಆನೆಗಳು ಇಲ್ಲಿಗೆ ಬರುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಸರಿಯಾಯಿತು. ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ.ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಅರಮನೆ ದಕ್ಷಿಣ ದ್ವಾರವಾದ ಬ್ರಹ್ಮಪುರಿಯಿಂದ ಆಗಮಿಸಿದವು. ಜಗನ್ನೋಹನ ಅರಮನೆ ಹಾದಿಯಲ್ಲಿ ಕ್ರಮಿಸಿ, ಕೃಷ್ಣವಿಲಾಸ ರಸ್ತೆಯಲ್ಲಿರುವ ದರ್ಗಾಕ್ಕೆ ಬಂದವು. ಧೂಪಾರತಿ ಮಾಡಿದ ನಂತರ ವಿಭೂತಿಯನ್ನು ಹಣೆಗೆ ಹಚ್ಚಲಾಯಿತು. ದರ್ಗಾದ ಚಾದರ ಮೇಲಿಟ್ಟಿದ್ದ ನವಿಲುಗರಿಯಿಂದ ಆಶೀರ್ವಾದವನ್ನು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬುಲ್ಲಾ ಷಾ ಖಾದ್ರಿ ಮಾಡಿದರು.


ಇದಕ್ಕೂ ಮೊದಲು ದರ್ಗಾದ ವತಿಯಿಂದ ಡಿಸಿಎಫ್ ಸೌರಭ್ ಕುಮಾರ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಲು ಹೊದಿಸಿ ಆಶೀರ್ವದಿಸಲಾಯಿತು. ಅಭಿಮನ್ಯು, ವರಲಕ್ಷ್ಮಿ ಅರ್ಜುನ, ಮಹೇಂದ್ರ, ವಿಜಯಾ, ಪ್ರಶಾಂತ, ಸುಗ್ರೀವ, ಕಂಜನ್, ಭೀಮ, ಹಿರಣ್ಯ, ಧನಂಜಯ, ಲಕ್ಷ್ಮಿ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದವು. ಗೋಪಿ


ರಾಜರಿಗೆ ಔಷಧಿಯಾಗಿ ಮಣ್ಣು ನೀಡಿದರು: 1757ರಲ್ಲಿ ರಾಜರಿಗೆ ಕಾಯಿಲೆ ಬರುತ್ತದೆ. ಯಾವುದೇ ವೈದ್ಯರಿಂದಲೂ ಪರಿಹಾರವಾಗದೇ ನರಳುತ್ತಿದ್ದಾಗ, ಅವರ ಎತ್ತಿನ ಗಾಡಿಯ ಸವಾರ ಸೂಫಿ ಗುರುಗಳನ್ನು ಕಂಡರೆ ವಾಸಿಯಾಗುತ್ತದೆ ಎಂದು ಸಲಹೆ ನೀಡಿದ್ದರು. ಅದರಂತೆ ಸಿದ್ದಿಪುರುಷ ಇಮಾಮ್ ಶಾ ವಲೀ ಅವರ ಬಳಿ ರಾಜರು ಬಂದಾಗ, ಗುರುಗಳು ಪೀಠದ ಪಕ್ಕದಲ್ಲಿದ್ದ ಮಣ್ಣನ್ನು ಮೈಗೆ ಸವರಿಕೊಳ್ಳುವಂತೆ ಅವರಿಗೆ ಕೊಟ್ಟರು ಎಂದು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬುಲ್ಲಾ ಷಾ ಖಾದ್ರಿ ಪ್ರಜಾವಾಣಿಗೆ ತಿಳಿಸಿದರು.


ರಾಜರು ಮಣ್ಣನ್ನು ಹಚ್ಚಿಕೊಳ್ಳಲಿಲ್ಲ. ಮೂರು ಬಾರಿ ರಾಜರ ಕನಸಿನಲ್ಲಿ ಬಂದ ಗುರುಗಳು ಔಷಧ ಹಚ್ಚಿಕೊಳ್ಳುವಂತೆ ಹೇಳಿದರು. ಕೊನೆಗೆ ರಾಜರು ಮಣ್ಣನ್ನು ಹಚ್ಚಿಕೊಂಡ ನಂತರ ಕಾಯಿಲೆ ವಾಸಿಯಾಯಿತು. ಬರಿಗಾಲಿನಲ್ಲೇ ಗುರುಗಳಿದ್ದ ಸ್ಥಳಕ್ಕೆ ಬಂದ ರಾಜರು ಆಶೀರ್ವಾದ ಪಡೆದರು. ಅಂದಿನಿಂದಲೂ ದರ್ಗಾ ರಾಜರ ಶ್ರದ್ಧಾಕೇಂದ್ರವೂ ಆಗಿದೆ ಎಂದರು.


*1758ರಲ್ಲಿ ಇಮಾಮ್ ಶಾ ವಲೀ ಅವರ ಸಮಾಧಿಯಾದ ನಂತರ 1801ರಿಂದಲೂ ರಾಜವಂಶಸ್ಥರು ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ. 8 ದಶಕದಿಂದ ಆನೆಗಳು ಆಶೀರ್ವಾದ ಪಡೆಯುತ್ತಿವೆ ಎಂದು ತಿಳಿಸಿದರು.ಇಲ್ಲಿ ಬರುವ ದಸರಾ ಆನೆಗಳು ಆಶೀರ್ವಾದ ಪಡೆದ ಮೇಲೆ ದರ್ಗಾಕ್ಕೆ ಬೆನ್ನು ತೋರಿಸಿ ತಿರುಗುವುದಿಲ್ಲ. ಹಿಮ್ಮುಖವಾಗಿ ಚಲಿಸಿ ನಂತರ ಅರಮನೆಗೆ ವಾಪಸಾಗುವುದು ಅಚ್ಚರಿಯೆನ್ನುತ್ತಾರೆ ಇಲ್ಲಿನ ಭಕ್ತರು. ಆನೆಗಳಿಗೆ ತೊಂದರೆಯಾದರೆ ಇಲ್ಲಿನ ಖಾದ್ರಿಗಳು ಅರಮನೆಯ ಆನೆ ಬಿಡಾರಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿ ದೃಷ್ಟಿ ತೆಗೆಯುತ್ತಾರೆ. ನಾಡಹಬ್ಬ ದಸರೆ, ಆನೆಗಳು ಹಾಗೂ ದರ್ಗಾದ ಗುರುಗಳಿಗೂ ನಂಟು ಶತಮಾನಗಳಿಂದ ಬೆಸೆದಿದೆ.


ದಸರಾ ನಾಡಹಬ್ಬವಾಗಿದ್ದು, ಇದು ಎಲ್ಲರನ್ನೂ ಒಳಗೊಳ್ಳುತ್ತದೆ. ಸಾಂಸ್ಕೃತಿಕ ವೈವಿಧ್ಯವನ್ನು ಸಾರುತ್ತದೆ. ಅಂಬಾರಿ ಆನೆಗಳಿಗೆ ಚಾಮುಂಡೇಶ್ವರಿ, ಇಮಾಮ್ ಶಾ ವಲೀ ಸೇರಿದಂತೆ ದೇವರ- ಗುರುಗಳ ಆಶೀರ್ವಾದ ಸಿಕ್ಕಿದೆ. ನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಡಿಸಿಎಫ್‌ ಸೌರಭ್ ಕುಮಾರ್ ತಿಳಿಸಿದರು.


ಆರ್‌ಎಫ್‌ಒ ಸಂತೋಷ್ ಹೂಗಾರ್, ಆನೆ ವೈದ್ಯ ಡಾ.ಮುಜೀಬ್ ರೆಹಮಾನ್, ಸಿಬ್ಬಂದಿ ಅಕ್ರಂ ಇದ್ದರು.

ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ :ಬೆಳ್ಳಾರೆಯಿಂದ ಈಶ್ವರಮಂಗಲ ಕಡೆ ತೆರಳುತ್ತಿದ್ದ ಟೆಂಪೋ

Posted by Vidyamaana on 2023-10-22 21:58:27 |

Share: | | | | |


ಪಾಲ್ತಾಡಿ ಬಳಿ  ಮದುವೆ ಟೆಂಪೋ ಪಲ್ಟಿ :ಬೆಳ್ಳಾರೆಯಿಂದ ಈಶ್ವರಮಂಗಲ ಕಡೆ ತೆರಳುತ್ತಿದ್ದ ಟೆಂಪೋ

ಪುತ್ತೂರು: ಬೆಳ್ಳಾರೆಯಿಂದ ಪುತ್ತೂರು ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಮದುವೆಯ ಟೆಂಪೋ ಪಾಲ್ತಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ   ಪಲ್ಟಿಯಾದ ಘಟನೆ ಅ 22 ರಂದು ಆದಿತ್ಯವಾರ ದಂದು  ಸಂಜೆ ನಡೆದಿದೆ.

💥ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ ವಿಡಿಯೋ


ಘಟನೆಯಲ್ಲಿ ಈಶ್ವರಮಂಗಲ ಮೂಲದ ವರನ ಕಡೆಯ ಸಂಬಂಧಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಟೆಂಪೋದಲ್ಲಿ ಹೆಚ್ಚಿನವರು ಮಹಿಳೆಯರಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆ ತರಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಾಡಹಗಲೇ ಕಾರಿನಲ್ಲಿದ್ದ 13.75 ಲಕ್ಷ ರೂ. ದೋಚಿದ ಕಳ್ಳರು

Posted by Vidyamaana on 2023-10-23 07:39:33 |

Share: | | | | |


ಹಾಡಹಗಲೇ ಕಾರಿನಲ್ಲಿದ್ದ 13.75 ಲಕ್ಷ ರೂ. ದೋಚಿದ ಕಳ್ಳರು

ಬೆಂಗಳೂರು : ಕಾರಿನಲ್ಲಿ ಇದ್ದ 13.75 ಲಕ್ಷ ರೂಪಾಯಿಯನ್ನು ಕಳ್ಳರು ದೋಚಿರುವ ಘಟನೆ ಬೆಂಗಳೂರಿನ (Bengaluru) ಸರ್ಜಾಪುರ (sarjapur) ಬಳಿಯ ಸೋಮ್‌ಪುರದ ಸಬ್‌ ರಿಜಿಸ್ಟರ್ ಕಚೇರಿ ಬಳಿ ಭಾನುವಾರ ನಡೆದಿದೆ.ಇಬ್ಬರು ದರೋಡೆಕೋರರು ಕೇವಲ 58 ಸೆಕೆಂಡ್‌ಗಳಲ್ಲಿ ಬಿಎಂಡಬ್ಲ್ಯೂ ಕಾರನ್ನು ಹಿಂಬಾಲಿಸಿಕೊಂಡು ಬಂದು ಹಣ ದೋಚಿ ಪರಾರಿಯಾಗಿದ್ದಾರೆ.ಇವರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಡಹಗಲೇ ನಡೆದ ಈ ದೃಶ್ಯ ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.

Re

non

more.....

ಸಿಸಿಟಿವಿ ದೃಶ್ಯ ನೋಡಿ 


ಒಬ್ಬ ಕಾರಿನ ಬಳಿ ಬಂದು ಸುತ್ತ ಯಾರಿದ್ದಾರೆ ಎನ್ನುವುದನ್ನು ಗಮನಿಸಿದ್ದಾನೆ. ಇನ್ನೊಬ್ಬ ದ್ವಿಚಕ್ರ ವಾಹನದಲ್ಲಿ ಅವನನ್ನು ಕರೆದುಕೊಂಡು ಹೋಗಲು ಸಿದ್ದವಾಗಿದ್ದ. ಎಲ್ಲವನ್ನು ಗಮನಿಸಿದ ಬಳಿಕ ಕಾರಿನ ಬಳಿ ಬಂದಿದ್ದ ಕಳ್ಳ ಒಂದೇ ಏಟಿಗೆ ಕಾರಿನ ಕಿಟಕಿ ಗಾಜನ್ನು ಪುಡಿ ಮಾಡಿ ಕಾರಿನ ಒಳಗೆ ಜಂಪ್ ಮಾಡಿ ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ.


ಆನೇಕಲ್‌ನ (Anekal) ಕಸಬಾ ನಿವಾಸಿಯಾದ ಮೋಹನ್ ಬಾಬು ಅವರು ಜಮೀನು ನೋಂದಣಿಗಾಗಿ ಸ್ನೇಹಿತರ ಬಳಿ 5 ಲಕ್ಷ ರೂ. ಪಡೆದಿದ್ದರು. ಇದನ್ನು ಸೇರಿಸಿ 13.75 ಲಕ್ಷ ರೂ. ನೊಂದಿಗೆ ಮೋಹನ್ ಬಾಬು ಅವರ ಸಂಬಂಧಿ ರಮೇಶ್ ಬಿಎಂಡಬ್ಲ್ಯೂ ಕಾರಿನಲ್ಲಿ ಸಬ್ ರಿಜಿಸ್ಟರ್ ಕಚೇರಿ ಬಳಿ ಮಧ್ಯಾಹ್ನ ಬಂದಿದ್ದರು. ಅಲ್ಲಿಂದ ಮೋಹನ್ ಬಾಬು ಅವರೊಂದಿಗೆ ಹೊರಡುವವರಿದ್ದರು. ಆದರೆ ಅಷ್ಟರಲ್ಲಿ ಕಳ್ಳರು ಹಣ ದೋಚಿ ಪರಾರಿಯಾಗಿದ್ದಾರೆ.


ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

Posted by Vidyamaana on 2023-08-27 01:52:31 |

Share: | | | | |


ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

ಪುತ್ತೂರು: ದೇಶದಲ್ಲಿ ಕಾನೂನು ಕಠಿಣವಾಗಬೇಕಾದ ಅವಶ್ಯಕತೆಯಿದ್ದು ದುಬೈ ಮಾದರಿಯ ಕಾನೂನು ಇಲ್ಲಿ ಜಾರಿಗೆ ಬರಬೇಕಾದ ಅನಿವಾರ್ಯತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ಪದ್ಮರಾಜ ಎಂಬಾತನಿಂದ ಕೊಲೆಯಾದ ವಿಟ್ಲ ಕುದ್ದುಪದವು ಸಮೀಪದ ಗೌರಿ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರುನಮ್ಮಲ್ಲಿ ನಡೆದಂತಹ ಘಟನೆ ದುಬೈಯಲ್ಲಿ

ನಡೆಯುತ್ತಿದ್ದರೆ ಒಂದು ವಾರದಲ್ಲಿ ಇಲ್ಲವೇ ಹತ್ತು

ವಿಧಿಸುತ್ತಿದ್ದರು. ಕೊಲೆಗಾರರಿಗೆ,

ದಿನದೊಳಗೆ ಅವರಿಗೆ ಮರಣ ದಂಡನೆ ಶಿಕ್ಷೆ ಅತ್ಯಾಚಾರಿಗಳಿಗೆ ಅದೇ ರೀತಿಯ ಶಿಕ್ಷೆ ಇಲ್ಲೂ ಜಾರಿಯಾಗಬೇಕು. ಅಂತಹ ಶಿಕ್ಷೆ ಜಾರಿಯಾದಾಗಲೇ ಇಂತಹ ದುಷ್ಟ ಕೃತ್ಯಗಳನ್ನು, ಸಮಾಜ ವಿದ್ರೋಹಿ ಕೆಲಸಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಅವರು ಹೇಳಿದರುಕಾನೂನಿನ ಭಯ ಇಲ್ಲದೆ ಇರುವುದೇ ಎಂದು ಅನೇಕ ಕೆಟ್ಟ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಕೊಲೆ ಮಾಡಿ ಜೈಲಿಗೆ ಹೋದವರು ವಾಪಸ್ ಬಂದು ರಾಜಾರೋಷವಾಗಿ ತಿರುಗಾಡುತ್ತಾರೆ. ಅವರಿಗೆ ಸಮಾಜದಲ್ಲಿ ವಿಶೇಷ ಗೌರವ ಸಿಗುವ ಕಾರ್ಯಗಳು ಕೆಲವು ನಡೆಯುತ್ತಿದೆ. ಹಾಗಾಗಿ ಇಂತಹ ಕೃತ್ಯ ಎಸಗಿದವರಿಗೆ ಮರಣ ದಂಡನೆ ಶಿಕ್ಷೆ ಆಗಬೇಕು ಎಂದು ಅಶೋಕ್ ರೈ ಹೇಳಿದರು.


ಆರೋಪಿಗೆ ಹೇಗಾದರೂ ಶಿಕ್ಷೆ ಕೊಡಿಸಲೇಬೇಕು, ಆತನನ್ನು ಬಿಟ್ರೆ ಇನ್ನೂ ಹೀಗೆಯೇ ಮಾಡುತ್ತಾನೆ. ಇಷ್ಟು ಸಣ್ಣ ಹುಡುಗಿ ಸತ್ತ ಮೇಲೆ ಆತನೂ ಹೋಗಬೇಕು ಎಂದು ಶಾಸಕರಿಗೆ ಮೃತ ಗೌರಿಯವರತಾಯಿ ಸೀತಾ ಅವರು ಮನವಿ ಸಲ್ಲಿಸಿದರು. ಈ ವೇಳೆ ಅವರಿಗೆ ಉತ್ತರಿಸಿದ ಶಾಸಕರು, ನಮಲ್ಲಿರುವುದು ಹಳೆಯ ಕಾನೂನು. ಕೊಲೆ ಮಾಡಿದವರು 6 ತಿಂಗಳಲ್ಲಿ ಹೊರಗೆ ಬರುತ್ತಾರೆ.ಹಾಗೆ ಬರುವಾಗ ಪದ್ಮರಾಜೆ ಎಂದಿರುವವನು ಪದ್ಮಣ್ಣೆ ಆಗುತ್ತಾನೆ. ಇದು ನಮ್ಮ ಜನರ ಪರಿಸ್ಥಿತಿ. ಇದು ಕಡಿಮೆಯಾಗಬೇಕು. ಒಂದೆರಡು ಜನರಿಗೆ ಮರಣದಂಡನೆ ಶಿಕ್ಷೆಯಾದರೆ ಇದೆಲ್ಲವೂ ನಿಲ್ಲುತ್ತದೆ. ಕೆಲವೊಂದು ಬೇರೆ ಕೇಸ್‌ಗಳಲ್ಲಿ ಶಿಕ್ಷೆ ಆಗಲು 15 ವರ್ಷ ಬೇಕಾಗುತ್ತದೆ. ಆದರೆ ಇಂತಹ ಕೇಸ್‌ಗಳಲ್ಲಿ 1 ವರ್ಷದ ಒಳಗೆ ಶಿಕ್ಷೆ  ನೀಡಿದರೆ ಕಾನೂನಿನ 

ಬಗ್ಗೆ ಭಯ ಬರುತ್ತದೆ. ಕಾನೂನು ಮಾಡುವುದು ನಾವೇ ಜನಪ್ರತಿನಿಧಿಗಳು, ಕಾನೂನು ಬದಲಾವಣೆ ಮಾಡುವ ಅವಶ್ಯ ಕತೆ ಇದೆ ಎಂದು ಶಾಸಕರು ಉತ್ತರಿಸಿದರು


ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್‌. ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಪುತ್ತೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್‌ ಮುಖಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ಇದನ್ನು ಕೇಳಿದ್ದಾರೆ ಬಹುತೇಕ ಜನ

Posted by Vidyamaana on 2024-02-13 13:28:42 |

Share: | | | | |


ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ಇದನ್ನು ಕೇಳಿದ್ದಾರೆ ಬಹುತೇಕ ಜನ

ಪ್ರೇಮಿಗಳ ದಿನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುವುದು. ಭಾರತದಲ್ಲಿ ಪ್ರೇಮಿಗಳು ಪರಸ್ಪರ ಬಟ್ಟೆ, ಹೂ, ಚಾಕೋಲೇಟ್‌, ಗ್ಯಾಜೆಟ್‌, ಮನೆ ವಸ್ತು ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ನೀಡಿ ವ್ಯಾಲಂಟೈನ್ಸ್‌ ಡೇ ಆಚರಣೆ ಮಾಡುತ್ತಾರೆ.ಆದ್ರೆ ಎಲ್ಲ ದೇಶದಲ್ಲೂ ಬರೀ ವಸ್ತುಗಳೇ ಉಡುಗೊರೆಯಾಗಿ ಸಿಗಬೇಕು ಎಂದೇನಿಲ್ಲ. ಹಣವನ್ನು ಕೂಡ ಉಡುಗೊರೆ ರೂಪದಲ್ಲಿ ನೀವು ದೇಶವಿದೆ. ಯಸ್.‌ ನಾವು ಫಿಲಿಪೈನ್ಸ್‌ ಬಗ್ಗೆ ಹೇಳ್ತಿದ್ದೇವೆ.


ಪ್ರೇಮಿಗಳ ದಿನಕ್ಕೂ ಮುನ್ನ ಅಲ್ಲೊಂದು ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ಬೇರೆ ಬೇರೆ ರಾಜ್ಯದ 1,200 ಜನರು ಪಾಲ್ಗೊಂಡಿದ್ದರು. ಈ ವೇಳೆ ವ್ಯಾಲಂಟೈನ್ಸ್‌ ಡೇ ಸಮಯದಲ್ಲಿ ಯಾವ ಉಡುಗೊರೆ ಬಯಸ್ತೀರಿ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅನೇಕರು ನೀಡಿದ ಉತ್ತರ ಹಣ. ‌ ಫಿಲಿಪೈನ್ಸ್‌ನ ಸಾಮಾಜಿಕ ಹವಾಮಾನ ಕೇಂದ್ರ ಸಮೀಕ್ಷೆ ನಡೆಸಿದ್ದು, ಎಷ್ಟು ಮಂದಿ ಯಾವ ಉಡುಗೊರೆ ಬಯಸಿದ್ದಾರೆ ಎಂಬುದನ್ನು ಅದು ಅಂಕಿ ಮೂಲಕ ವಿವರಿಸಿದೆ.ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 16ರಷ್ಟು ಮಂದಿ ಹಣ ನಿರೀಕ್ಷೆ ಮಾಡಿದ್ರೆ ಶೇಕಡಾ 11 ಮಂದಿ ಪ್ರೀತಿ ಒಡನಾಟ ಎಂದಿದ್ದಾರೆ. ಶೇಕಡಾ 10 ಮಂದಿ ಹೂವಾದ್ರೆ ಶೇಕಡಾ 9 ಮಂದಿ ಬಟ್ಟೆ ಆಯ್ಕೆ ಮಾಡಿದ್ದಾರೆ.


ಬೈಕ್‌, ವಾಹನ, ಗ್ರೀಟಿಂಗ್‌ ಕಾರ್ಡ್‌, ಕಿಸ್‌ ಕೇಳಿದವರ ಸಂಖ್ಯೆ ಶೇಕಡಾ ಒಂದಷ್ಟಿದೆ. ಸಮೀಕ್ಷೆಯಲ್ಲಿ ಇನ್ನೂ ಅನೇಕ ವಿಷ್ಯವನ್ನು ತಿಳಿಯುವ ಪ್ರಯತ್ನ ನಡೆಸಲಾಗಿದೆ. ಯಾರು ಖುಷಿಯಾಗಿದ್ದಾರೆ ಎಂಬುದನ್ನೂ ಇದ್ರಲ್ಲಿ ಪತ್ತೆ ಮಾಡಲಾಗಿದೆ. ಸಮೀಕ್ಷೆ ಪ್ರಕಾರ, ಮದುವೆಯಾದ ಶೇಕಡಾ 76ರಷ್ಟು ಪುರುಷರು ಖುಷಿಯಾಗಿದ್ರೆ ಮಹಿಳೆಯರ ಸಂಖ್ಯೆ ಶೇಕಡಾ 67ರಷ್ಟಿದೆ. ಉಡುಗೊರೆ ರೂಪದಲ್ಲಿ ಹಣ ಕೇಳಿದವರಲ್ಲಿ ಮಹಿಳೆಯರು ಮುಂದಿದ್ದಾರೆ.



Leave a Comment: