ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಸುದ್ದಿಗಳು News

Posted by vidyamaana on 2024-06-30 19:51:42 |

Share: | | | | |


ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.

 Share: | | | | |


ವೈರತ್ವ ಮರೆತು ಪಾಕ್ ಆಟಗಾರರ ಜೊತೆ ಸುಂದರ ಕ್ಷಣಗಳನ್ನು ಕಳೆದ ಕೊಹ್ಲಿ; ವಿರಾಟ್ ನಡೆಗೆ ಅಭಿಮಾನಿಗಳು ಫಿದಾ

Posted by Vidyamaana on 2023-09-02 22:49:33 |

Share: | | | | |


ವೈರತ್ವ ಮರೆತು ಪಾಕ್ ಆಟಗಾರರ ಜೊತೆ ಸುಂದರ ಕ್ಷಣಗಳನ್ನು ಕಳೆದ ಕೊಹ್ಲಿ; ವಿರಾಟ್ ನಡೆಗೆ ಅಭಿಮಾನಿಗಳು ಫಿದಾ

   ಕ್ರಿಕೆಟ್ ಜಗತ್ತಿನ ಅತಿದೊಡ್ಡ ಕಾಳಗಕ್ಕೆ ಭಾರತ-ಪಾಕಿಸ್ತಾನ ತಂಡಗಳು (India vs Pakistan) ಸಜ್ಜಾಗಿವೆ. ಶ್ರೀಲಂಕಾದ ಪಲ್ಲೆಕೆಲೆ ಮೈದಾನವು ಬದ್ಧವೈರಿ ತಂಡಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. 2022ರ ಟಿ20 ವಿಶ್ವಕಪ್ (T20 World Cup 2022) ನಂತರ ಮತ್ತೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ಆಟಗಾರರು, ಮಹತ್ವದ ಪಂದ್ಯಕ್ಕೂ ಮುನ್ನ ಉಭಯ ಕುಶಲೋಪರಿ ವಿಚಾರಿಸಿ ಗಮನ ಸೆಳೆದರುಸೆಪ್ಟೆಂಬರ್ 1ರಂದು, ಶುಕ್ರವಾರ 2 ತಂಡಗಳು ಒಟ್ಟಿಗೆ ಅಭ್ಯಾಸ ನಡೆಸಿದ ವೇಳೆ ಈ ಅದ್ಭುತ ಕ್ಷಣಗಳು ಕಂಡುಬಂದವು.


ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಮರವನ್ನೇ ಸಾರಿದ್ದರೆ, ಮತ್ತೊಂದೆಡೆ ಮೈದಾನದಲ್ಲಿ ಅಭಿಮಾನಿಗಳು ಕೆಲ ಸಮಯ ಕಳೆದು ತಮಾಷೆ ಮಾಡುತ್ತಿದ್ದ ಕ್ಷಣಗಳು ಎಲ್ಲರ ಮನಗೆದ್ದವು. ಅದರಲ್ಲೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಪಾಕ್ ಆಟಗಾರರೊಂದಿಗೆ ವೈರತ್ವ ಮರೆತು ನಗುನಗುತ್ತಾ, ತಮಾಷೆ ಮಾಡುತ್ತಾ, ಆತ್ಮಿಯತೆಯಿಂದ ಮಾತನಾಡುತ್ತಾ ಹೆಚ್ಚು ಸಮಯ ಕಳೆದರು. ಇದರ ವಿಡಿಯೋ, ಫೋಟೋಗಳು ಸಖತ್​ ವೈರಲ್ ಆಗುತ್ತಿವೆ.


ಸಿಕ್ಸರ್​ ಸಿಡಿಸಿದ್ದ ರವೂಫ್​​ಗೆ ಕೊಹ್ಲಿ ಅಪ್ಪುಗೆ


ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಗೆಲ್ಲಲೇಬೇಕಾದ ಒತ್ತಡದ ಸಮಯದಲ್ಲಿ ಕೊಹ್ಲಿ ಸಿಡಿಸಿದ್ದ ರೋಚಕ ಸಿಕ್ಸರ್​​ಗಳನ್ನು ಯಾರು ತಾನೆ ಮರೆಯುತ್ತಾರೆ ಹೇಳಿ. ಹ್ಯಾರಿಸ್ ರವೂಫ್ ಬೌಲಿಂಗ್​​ನಲ್ಲಿ ನಂಬಲು ಅಸಾಧ್ಯವಾದ ಎಸೆತಗಳಿಗೆ ಕೊಹ್ಲಿ 2 ಸಿಕ್ಸರ್​ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ನೆಟ್ಸ್​​​ನಲ್ಲಿ ಬಹಳಹೊತ್ತು ಸಮಯ ಕಳೆದ ಕೊಹ್ಲಿ, ರವೂಫ್​ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದು ಅಲ್ಲದೆ ಅಪ್ಪುಗೆ ನೀಡಿದರು. ಇಬ್ಬರು ಸಹ ಕೆಲಹೊತ್ತು ಮಾತನಾಡಿದರು. ಟಿ20 ವಿಶ್ವಕಪ್​ ಬಳಿಕ ಈ ಇಬ್ಬರ ಭೇಟಿ ಇದೇ ಮೊದಲ ಬಾರಿಗೆ ಆಗಿದೆ.ರವೂಫ್​ ಭೇಟಿಯ ನಂತರ ಕೊಹ್ಲಿ ಶತ್ರು ರಾಷ್ಟ್ರದ ಇತರೆ ಆಟಗಾರರ ಜೊತೆ ಸಮಯ ಕಳೆದರು. ಪಾಕ್​ನ ಸ್ಪಿನ್ ಆಲ್‌ರೌಂಡರ್ ಶಾದಾಬ್ ಖಾನ್ ಮತ್ತು ವೇಗಿ ಶಾಹೀನ್ ಅಫ್ರಿದಿ ಅವರೊಂದಿಗೆ ಮಾತನಾಡುತ್ತಾ ತಮಾಷೆ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಶಾಹೀನ್ ಶಾ ಅಫ್ರಿದಿ ಜೊತೆ ಖುಷಿಯಾಗಿ ಮಾತನಾಡಿ ಆನಂದಿಸಿದರು. ಶಾದಾಬ್ ಅವರ ಬ್ಯಾಟ್ ಹಿಡಿದು ಕೊಹ್ಲಿ ಶಾಡೋ ಬ್ಯಾಟಿಂಗ್ ಕೂಡ ನಡೆಸಿದರು.


ಕೊಹ್ಲಿ ನಡೆದ ಉಭಯ ದೇಶಗಳ ಅಭಿಮಾನಿಗಳು ಫಿದಾ


ಕೊಹ್ಲಿ, ಪಾಕಿಸ್ತಾನ ಆಟಗಾರರೊಂದಿಗೆ ತುಂಬಾ ಆತ್ಮಿಯತೆಯಿಂದ ಮಾತನಾಡಿದ್ದು, ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ವಿರಾಟ್ ಆಧುನಿಕ ಕ್ರಿಕೆಟ್ ದಿಗ್ಗಜನಾಗಿದ್ದರೂ, ತುಂಬಾ ಸರಳತೆಯಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತ ಅವರ ನಡೆ ಕಂಡು ಭಾರತ-ಪಾಕಿಸ್ತಾನದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳ ಹೃದಯ ಗೆದ್ದಿರುವ ಈ ವಿಡಿಯೋಗಳು ನೆಟ್​ನಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

ಗೃಹಜ್ಯೋತಿಗೆ ಇದುವರೆಗೂ ಅರ್ಜಿ ಸಲ್ಲಿಸದವರಿಗೆ ಉಚಿತ ವಿದ್ಯುತ್ ಇಲ್ವಾ

Posted by Vidyamaana on 2023-07-13 17:07:27 |

Share: | | | | |


ಗೃಹಜ್ಯೋತಿಗೆ ಇದುವರೆಗೂ ಅರ್ಜಿ ಸಲ್ಲಿಸದವರಿಗೆ ಉಚಿತ ವಿದ್ಯುತ್ ಇಲ್ವಾ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಇಂದಿನಿಂದ (ಜುಲೈ 1) ಜಾರಿಗೆ ಬರುತ್ತಿದೆ. ಆದರೆ, ಅರ್ಜಿ ಹಾಕದವರಿಗೆ ಉಚಿತ ವಿದ್ಯುತ್ ಇಲ್ಲ, ಅರ್ಜಿ ಹಾಕದೇ ಉಚಿತ ಹೇಗೆ ಕೊಡೋದು. ಜುಲೈ ಕೊನೆ ವಾರದೊಳಗೆ ಅರ್ಜಿ ಸಲ್ಲಿಸಿದವರಿಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಸಿಗಲಿದೆ ಎಂದು ಇಂಧನ


ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈಗಾಗಲೇ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಜುಲೈ 1ರಿಂದ ಎಲ್ಲರಿಗೂ ಉಚಿತ ವಿದ್ಯುತ್ ಸಿಗಲಿದೆ. ಜೂನ್ ತಿಂಗಳಿನ ವಿದ್ಯುತ್ ಬಿಲ್ ಜುಲೈ ತಿಂಗಳಲ್ಲಿ ಬರಲಿದೆ. ಗೃಹಜ್ಯೋತಿ ಯೋಜನೆಗೆ ಅರ್ಹತೆ ಹೊಂದಿರುವವರಿಗೆ ಆಗಸ್ಟ್ ಒಂದಕ್ಕೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಹೇಳಿದರು.ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕದವರು ಬೇಗ ಹಾಕಬೇಕು. ಕೆಇಬಿ ಆಫೀಸ್‌ಗೆ ಹೋಗಿ ಅರ್ಜಿಯನ್ನು ಕೊಡಬಹುದು. ಅರ್ಜಿ ಹಾಕಲು ಈಗ ಅಷ್ಟು ಸಮಸ್ಯೆ ಇಲ್ಲ, ಒತ್ತಡ ಕಡಿಮೆ ಆಗಿದೆ. ಅರ್ಜಿ ಹಾಕಲು ಯಾವುದೇ ಡೆಡ್‌ಲೈನ್ ಅನ್ನು ನಾವು ನೀಡಿಲ್ಲ. ಆದರೆ, ಅರ್ಜಿ ಹಾಕದಿದ್ದರೆ ಉಚಿತ ವಿದ್ಯುತ್ ಸಿಗುವುದಿಲ್ಲ. ಅರ್ಜಿ ಹಾಕಲೇಬೇಕು. ಅರ್ಜಿ ಸಲ್ಲಿಸುವುದು ತಡವಾದರೆ, ಸೌಲಭ್ಯ ಸಿಗುವುದು ಕೂಡ ವಿಳಂಬ ಆಗುತ್ತದೆ ಎಂದರು.ಆಗಸ್ಟ್ 1 ರಿಂದ ಜುಲೈ ತಿಂಗಳಿನಿಂದ ಬಿಲ್ಲಿಂಗ್ ಮಾಡುತ್ತೇವೆ. ಅಷ್ಟರೊಳಗೆ ಅರ್ಜಿಯನ್ನು ಸಲ್ಲಿಸಿದ್ದವರಿಗೆ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಸಿಗುತ್ತದೆ. ಅರ್ಜಿ ಹಾಕದಿದ್ದರೆ ಮುಂದಿನ ತಿಂಗಳ ಬಿಲ್‌ನಲ್ಲಿ ವಿನಾಯಿತಿ ಸಿಗಲ್ಲ. ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕುವುದು ಒಳ್ಳೆಯದು. ಇನ್ನು ಟೈಂ ಇದೆ, ಬೇಗ ಅರ್ಜಿ ಹಾಕಲಿ ಎಂದು ಕೆಜೆ ಜಾರ್ಜ್ ಜನರಿಗೆ ಕರೆ ನೀಡಿದರು.ಶನಿವಾರದಿಂದ ಯೋಜನೆ ಜಾರಿ!


ಕಾಂಗ್ರೆಸ್ ಸರ್ಕಾರ ತಾನೂ ಚುನಾವಣೆ ವೇಳೆ ಘೋಷಿಸಿದಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ಗೃಹಜ್ಯೋತಿ ಜುಲೈ 1ರಿಂದ ಜಾರಿಯಾಗಿದೆ. ಜೂನ್ 18ರಿಂದಲೇ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 86 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ವಿದ್ಯುತ್ ಬಳಕೆಯ ಪ್ರಮಾಣದ ಸರಾಸರಿ ಜೊತೆಗೆ ಹೆಚ್ಚುವರಿ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ಸರ್ಕಾರ ನೀಡಲಿದೆ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಉಚಿತ ವಿದ್ಯುತ್ ಲಾಭ ಜನರಿಗೆ ಸಿಗುವುದಿಲ್ಲ.ಶನಿವಾರದಿಂದ ಯೋಜನೆ ಜಾರಿ!


ಕಾಂಗ್ರೆಸ್ ಸರ್ಕಾರ ತಾನೂ ಚುನಾವಣೆ ವೇಳೆ ಘೋಷಿಸಿದಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ಗೃಹಜ್ಯೋತಿ ಜುಲೈ 1ರಿಂದ ಜಾರಿಯಾಗಿದೆ. ಜೂನ್ 18ರಿಂದಲೇ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 86 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ವಿದ್ಯುತ್ ಬಳಕೆಯ ಪ್ರಮಾಣದ ಸರಾಸರಿ ಜೊತೆಗೆ ಹೆಚ್ಚುವರಿ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ಸರ್ಕಾರ ನೀಡಲಿದೆ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಉಚಿತ ವಿದ್ಯುತ್ ಲಾಭ ಜನರಿಗೆ ಸಿಗುವುದಿಲ್ಲ.ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಸೇವಾಸಿಂಧು ಪೋರ್ಟಲ್ ಅನ್ನು ರೂಪಿಸಲಾಗಿದೆ. ಮೊದಲ ವಾರ ಸರ್ವರ್ ಬ್ಯುಸಿಯಿಂದ ಜನರು ಅರ್ಜಿ ಸಲ್ಲಿಸಲು ಪರದಾಡಿದ್ದರು. ಈಗ ಸರ್ವರ್ ಸಮಸ್ಯೆ ಅಷ್ಟೊಂದು ಕಾಣುತ್ತಿಲ್ಲ. ಈಗ ಅರ್ಜಿಯನ್ನು ಜನರ ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಸಲ್ಲಿಸಬಹುದಾಗಿದೆ

ಕುಂದಾಪುರ : ಕಾಲೇಜ್ ಹುಡುಗಿಗೆ ನಜೀರ್ ನಿಂದ ಲೈಂಗಿಕ ಕಿರುಕುಳ - ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿನಿ, ವಿಡಿಯೋ ವೈರಲ್.

Posted by Vidyamaana on 2023-06-09 16:23:41 |

Share: | | | | |


ಕುಂದಾಪುರ : ಕಾಲೇಜ್ ಹುಡುಗಿಗೆ  ನಜೀರ್ ನಿಂದ ಲೈಂಗಿಕ ಕಿರುಕುಳ -  ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿನಿ, ವಿಡಿಯೋ ವೈರಲ್.

ಕುಂದಾಪುರ :ಇಂದು ಮುಂಜಾನೆ ವಿದ್ಯಾರ್ಥಿನಿಯೊಬ್ಬಳು ಬೀಜಾಡಿ - ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದಿಂದ ಕಾಲೇಜಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿ ನಜೀರ್ ಆಕೆಗೆ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ್ದು ಆಕೆ ಕೂಗಿಕೊಂಡಿದ್ದಾಳೆ.ಕೂಡಲೇ ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದುಕೊಂಡಿದ್ದು ವಿಚಾರಿಸಿದಾಗ ವಿದ್ಯಾರ್ಥಿನಿ‌ ನಡೆದ ಘಟನೆ ವಿವರಿಸಿದ್ದಾಳೆ. ನೊಂದ ವಿದ್ಯಾರ್ಥಿನಿ ಆರೋಪಿ ನಜೀರನಿಗೆ ಚಪ್ಪಲಿ ಏಟು ನೀಡಿದ್ದು, ಘಟನೆಯ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.ಬಳಿಕ ಸ್ಥಳೀಯರು ಆರೋಪಿಯನ್ನು ಕುಂದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿಯಿಂದ ದೂರು ದಾಖಲು ಮಾಡಿಕೊಂಡಿದ್ದು,‌ ಆರೋಪಿಯ ವಿಚಾರಣೆ ನಡೆಸಿದ್ದಾರೆ.

ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್

Posted by Vidyamaana on 2023-08-18 09:36:13 |

Share: | | | | |


ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್

ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ದಾರ ಅನುದಾನ ತಡೆ ಹಿಡಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಮೂರು ವಿಷಯಗಳನ್ನು ಮುಂದಿಟ್ಟು ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದಿತ್ತು. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಸೂಚನೆಯವರೆಗೂ ಹಣ ಬಿಡುಗಡೆ ಮಾಡಬಾರದು

 ಅನುದಾನ ಮಂಜೂರಾಗಿ ಈಗಾಗಲೇ ಶೇ.50ರಷ್ಟು ಹಣ ಬಿಡುಗಡೆ ಆಗಿದ್ದು, ಹಣ ಬಳಕೆ ಆಗದಿದ್ದಲ್ಲಿ ಉಳಿದ ಹಣ ಬಿಡುಗಡೆ ಮಾಡಬಾರದು ಹಾಗೂ ಕಾಮಗಾರಿ ಆರಂಭ ಆಗದಿದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡದಂತೆ ತಡೆಯುಬೇಕು. 3. ಆಡಳಿತಾತ್ಮಕ ಮಂಜೂರಾತಿ ಸ್ವೀಕೃತವಾಗಿದ್ದರೆ ಮುಂದಿನ ನಿರ್ದೇಶನದವರೆಗೆ ತಡೆ ಹಿಡಿಯಬೇಕು ಎಂದು ಮುಜರಾಯಿ ಇಲಾಖೆ ಆದೇಶದಲ್ಲಿ ತಿಳಿಸಿತ್ತು.


ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ದಿಢೀರ್ ಆದೇಶ ಹಿಂಪಡೆದಿದೆ. ಈ ಕುರಿತು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಪುತ್ತೂರು: ಸದಾಶಿವ ಪೈ ಗೆ ಚೂರಿ ಇರಿತ - ಗುಣಶೇಖರ್ ಶೆಟ್ಟಿಗೂ ಹಲ್ಲೆ ಆಸ್ಪತ್ರೆಗೆ ದಾಖಲು

Posted by Vidyamaana on 2024-06-13 16:10:46 |

Share: | | | | |


ಪುತ್ತೂರು:  ಸದಾಶಿವ ಪೈ ಗೆ  ಚೂರಿ ಇರಿತ - ಗುಣಶೇಖರ್ ಶೆಟ್ಟಿಗೂ ಹಲ್ಲೆ ಆಸ್ಪತ್ರೆಗೆ ದಾಖಲು

ಪುತ್ತೂರು : ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವರಿಗೆ ಚೂರಿಯಿಂದ ಇರಿದ ಘಟನೆ ಕೋರ್ಟ್ ರಸ್ತೆಯಲ್ಲಿ ಗುರುವಾರ ನಡೆದಿದೆ.

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಪುತ್ತೂರು ಟ್ರಾಫಿಕ್ ಎಸ್ಸೈ ಆಗಿ ಶಾಹೀದ್ ಅಫ್ರಿದಿ ಅಧಿಕಾರ ಸ್ವೀಕಾರ

Posted by Vidyamaana on 2024-02-20 19:43:09 |

Share: | | | | |


ಪುತ್ತೂರು ಟ್ರಾಫಿಕ್ ಎಸ್ಸೈ ಆಗಿ ಶಾಹೀದ್ ಅಫ್ರಿದಿ ಅಧಿಕಾರ ಸ್ವೀಕಾರ

ಪುತ್ತೂರು: ಪುತ್ತೂರು ನಗರ ಸಂಚಾರ ಪೊಲೀಸ್ ಠಾಣಾ ಪಿ.ಎಸ್.ಐ. ಆಗಿ ಶಾಹೀದ್ ಅಫ್ರಿದಿ ಮಂಗಳವಾರ (ಫೆ. 20) ಅಧಿಕಾರ ಸ್ವೀಕರಿಸಿದರು.

ಸಂಚಾರ ಎಸ್ಸೈ ಆಗಿದ್ದ ಉದಯರವಿ ಅವರು ಪುಂಜಾಲಕಟ್ಟೆಗೆ ವರ್ಗಾವಣೆಗೊಂಡ ಬಳಿಕ ತೆರವಾದ ಸ್ಥಾನಕ್ಕೆ ಶಾಹೀದ್ ಅಫ್ರಿದಿ ಆಗಮಿಸಿದ್ದಾರೆ.

ಇವರು ಚಿಕ್ಕಮಗಳೂರು ಪಂಚನಹಳ್ಳಿ ಠಾಣಾ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.

Recent News


Leave a Comment: