ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಸುದ್ದಿಗಳು News

Posted by vidyamaana on 2024-06-30 19:50:01 |

Share: | | | | |


ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು. 


ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ನಿಮ್ಮದೇ: HDKಗೆ ಕಾಂಗ್ರೆಸ್ ಪ್ರಶ್ನೆ

Posted by Vidyamaana on 2024-04-25 22:52:33 |

Share: | | | | |


ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ನಿಮ್ಮದೇ: HDKಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್‌ ಡ್ರೈವ್‌ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.


ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಪೆನ್‌ ಡ್ರೈವ್‌ ತೋರಿಸುವ ಕುಮಾರಸ್ವಾಮಿ ಅವರ ಹಳೆಯ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌, ಈ ಪ್ರಶ್ನೆ ಕೇಳಿದೆ.ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ ಎಂದು ಕಾಂಗ್ರೆಸ್‌ ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದೆ.

ಚಂದ್ರಯಾಣ 3: ಭಾರತಕ್ಕೆ ಐತಿಹಾಸಿಕ ಯಶಸ್ಸು

Posted by Vidyamaana on 2023-08-23 12:56:29 |

Share: | | | | |


ಚಂದ್ರಯಾಣ 3: ಭಾರತಕ್ಕೆ ಐತಿಹಾಸಿಕ ಯಶಸ್ಸು

ಬೆಂಗಳೂರು : ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ 06.03ಕ್ಕೆ ಯಶಸ್ವಿಯಾಗಿ ಇಳಿದಿದ್ದು , ಇಸ್ರೋ ಛಲಕ್ಕೆ ಹೊಸದೊಂದು ಬಲ ದೊರಕಿದ್ದು ಭಾರತದ ವೈಜ್ಞಾನಿಕ ಶಕ್ತಿಯ ಅನಾವರಣವಾಗಿ ಜಗತ್ತಿಗೆ ಮತ್ತೊಮ್ಮೆ ಬೆಳಕು ಚಲ್ಲಿದೆ.


ನಾಲ್ಕು ವರ್ಷಗಳಲ್ಲಿ ಇಸ್ರೋದ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಸ್ಪರ್ಶಿಸುವಲ್ಲಿ ಮತ್ತು ರೋಬೋಟಿಕ್ ಲೂನಾರ್ ರೋವರ್ ಅನ್ನು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಯುಎಸ್ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನ ಯಶಸ್ಸು ಪಡೆದುಕೊಂಡ ನಾಲ್ಕನೇ ದೇಶ ಭಾರತವಾಗಿದೆ. ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಯಶಸ್ವಿ ಯಾಗಿದ್ದವು.


ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ನ್ನು ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿಸಲು ಸಾಕಷ್ಟು ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದರು.

ಜೂ 28 :ಸೌದಿ ಅರೇಬಿಯಾದಲ್ಲಿ ಈದುಲ್ ಅಝ್ಹಾ ಆಚರಣೆ.

Posted by Vidyamaana on 2023-06-18 23:19:00 |

Share: | | | | |


ಜೂ 28 :ಸೌದಿ ಅರೇಬಿಯಾದಲ್ಲಿ  ಈದುಲ್ ಅಝ್ಹಾ ಆಚರಣೆ.

ಜಿದ್ದಾ: ರವಿವಾರ ರಾತ್ರಿ ದುಲ್ ಹಜ್ ಮಾಸದ ಆರಂಭವನ್ನು ಸೂಚಿಸುವ ಅರ್ಧಚಂದ್ರಾಕಾರ ಕಂಡುಬಂದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಈದ್ ಅಲ್ ಅಝ್ಹಾ ಹಬ್ಬವನ್ನು ಜೂನ್ 28 ರಂದು ಆಚರಿಸಲಿದೆ.

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿನ ದುಲ್ ಹಜ್ ಮಾಸ ಜೂನ್ 19 ರಂದು ಸೋಮವಾರ ಪ್ರಾರಂಭವಾಗಲಿರುವುದರಿಂದ ಅರಾಫಾದ

ದಿನವು ಮಂಗಳವಾರ ಜೂನ್ 27 ರಂದು ನಡೆಯಲಿದೆ. ಈದ್ ಅಲ್ ಅಝ್ಹಾ ಜೂನ್ 28 ರಂದು ಆಚರಿಸಲಾಗುವುದು ಎಂದು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಪ್ರಕಟಿಸಿದೆ.

ಈದುಲ್ ಅಝ್ಹಾ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಸ್ಲಿಂ ಬಾಂಧವರು ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ಮಾಸ ದುಲ್ ಹಜ್‌ನ ಹತ್ತನೆಯ ದಿನದಂದು ಆಚರಿಸುತ್ತಾರೆ.

ಕೇವಲ ಬಲ್ಬ್‌ಗಳನ್ನು ಬದಲಿಸೋ ಕೆಲಸಕ್ಕೆ ಸಿಗಲಿದೆ 1 ಕೋಟಿ ರೂ.ವರೆಗೆ ಸಂಬಳ! ಎಲ್ಲಿ ಗೊತ್ತಾ?

Posted by Vidyamaana on 2023-06-12 15:48:37 |

Share: | | | | |


ಕೇವಲ ಬಲ್ಬ್‌ಗಳನ್ನು ಬದಲಿಸೋ ಕೆಲಸಕ್ಕೆ ಸಿಗಲಿದೆ 1 ಕೋಟಿ ರೂ.ವರೆಗೆ ಸಂಬಳ! ಎಲ್ಲಿ ಗೊತ್ತಾ?

    ನೆಮ್ಮದಿಯ ಜೀವನ ನಡೆಸಲು ಉದ್ಯೋಗ ಅತ್ಯಗತ್ಯ. ಯಾವುದೇ ಕೆಲಸ ಆದ್ರೂ ಹಣ ಗಳಿಸಬಹುದು. ಕೆಲವರು ಕಷ್ಟಪಟ್ಟರೆ ಲಕ್ಷಗಟ್ಟಲೆ ತಲುಪಬಹುದು. ಆದರೆ, ಕೇವಲ ಬಲ್ಬ್‌ಗಳನ್ನು ಬದಲಾಯಿಸುವುದರಿಂದ ನೀವು ಕೋಟಿಗಳನ್ನು ಗಳಿಸಬಹುದೇ?ಎಂದು ನೀವೆಂದಾದರೂ ಯೋಚಿಸಿದ್ದೀರಾ?.

ಹೌದು, ಗೋಪುರದ ಸಿಗ್ನಲ್ ಟವರ್‌ಗಳ ಮೇಲೆ ಬಲ್ಬ್‌ಗಳನ್ನು ಬದಲಾಯಿಸುವ ಕೆಲಸಕ್ಕೆ ಕೋಟ್ಯಂತರ ರೂಪಾಯಿ ಸಂಬಳ ಪಡೆಯಬಹುದು.ಇವು ಸಾಮಾನ್ಯ ಗೋಪುರಗಳಲ್ಲ ಇಷ್ಟೊಂದ ಸಂಬಳ ಪಡೆಯಬೇಕು ಅಂದ್ರೆ, ನೂರಾರು ಮೀಟರ್ ಎತ್ತರದ ಸಿಗ್ನಲ್ ಟವರ್‌ಗಳ ಮೇಲೆ ಕೆಲಸ ಮಾಡಬೇಕು. ಮೇಲಕ್ಕೆ ಹೋಗುವಾಗ ತೆಳ್ಳಗಿನ ಕಂಬಿಗಳ ಮೇಲೆ ಕಣ್ಣು ತಿರುಗಿಸದೆ ಧೈರ್ಯವಾಗಿ ನಡೆಯಬೇಕು. ಇವು ಹೊರಗೆ ಕಾಣುವ ಗೋಪುರಗಳಂತಲ್ಲ. ಮೇಲಕ್ಕೆ ಹೋಗುವ ಮಾಪಕಗಳು ತೆಳುವಾಗಿರುತ್ತವೆ. ಅಂತಿಮವಾಗಿ ತೆಳುವಾದ ರಾಡ್ ಮಾತ್ರ ಇರುತ್ತದೆ. ಈ ಟವರ್‌ಗಳನ್ನು ಹತ್ತುವುದು ಮತ್ತು ಬಲ್ಬ್‌ಗಳನ್ನು ಬದಲಾಯಿಸುವುದು ಭಯಾನಕ ಕೆಲಸ. ಒಂದು ಹಗ್ಗ ಮಾತ್ರ ಇಲ್ಲಿ ರಕ್ಷಣೆಯಾಗಿರುತ್ತದೆ. ಪ್ರತಿಯೊಬ್ಬರೂ ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ವಿಶೇಷ ತರಬೇತಿಯ ಅಗತ್ಯವಿದೆ. ದೈಹಿಕವಾಗಿ ಸದೃಢವಾಗಿರಬೇಕು. ಅಂತಹ ಟವರ್‌ಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಬೇಡಿಕೆಯಿದೆ.ಕೋಟಿಗಟ್ಟಲೆ ಸಂಬಳ ಉದ್ಯೋಗಿಯ ಸಂಬಳವು ಗೋಪುರದ ಎತ್ತರ, ಅನುಭವ ಮತ್ತು ಕೌಶಲ್ಯವನ್ನು ಅವಲಂಬಿಸಿರುತ್ತದೆ. ಒಂದು ಗೋಪುರದ ಮೇಲೆ ಮತ್ತು ಕೆಳಗೆ ಹೋಗಲು ಕನಿಷ್ಠ ಆರು ಗಂಟೆಗಳು ತೆಗೆದುಕೊಳ್ಳುತ್ತದೆ. 1500 ಮೀಟರ್ ಟವರ್ ಏರಬಲ್ಲವರಿಗೆ 1 ಕೋಟಿ ರೂ. ಸಂಬಳ ನೀಡಲಾಗುವುದು. ಹೊಸ ಉದ್ಯೋಗಿಗಳಿಗೆ ಪ್ರತಿ ಗಂಟೆಗೆ ಸರಾಸರಿ $17 ಪಾವತಿಸಲಾಗುತ್ತದೆ. ಆದರೆ.. ಈ ದೀಪಗಳನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಮೆರಿಕದ ಡಕೋಟಾ ನಗರದ ಟ್ವಿಟರ್ ಖಾತೆಯಲ್ಲಿ ಬೆಳಕಿಗೆ ಬಂದಿದೆ.

ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 13 ಮಂದಿ ಬಂಧನ

Posted by Vidyamaana on 2023-10-16 13:47:12 |

Share: | | | | |


ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 13 ಮಂದಿ ಬಂಧನ

ಬೆಳಗಾವಿ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು 13 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ.


ಅರ್ಜುನ ಗಂಡವ್ವಗೋಳ, ಲಕ್ಷ್ಮಿ ಮಸ್ಕಿ, ಶೋಭಾ ಮಾಳಗಿ, ಮಾರ್ಕಂಡೇಶ್ವರ ಮಹಿಮಗೋಳ, ರಾಘವೇಂದ್ರ ಚಿಂಚಲಿ, ಸರಸ್ವತಿ ಕೋಳಿ, ಸಾವಿತ್ರಿ ಪೂಜೇರಿ, ಕಮಲವ್ವ ಭಜಂತ್ರಿ, ಮಾರುತಿ ದೊಡಮನಿ, ಉದಯ ಗಂಡವ್ವಗೋಳ, ಕೃಷ್ಣಾ ಗಂಡವ್ವಗೋಳ, ಸುಧೀರ ಜೋಡಟ್ಟಿ, ಶಾಲವ್ವ ದೊಡಮನಿ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ ರಾತ್ರಿ 9ರ ಸುಮಾರಿಗೆ ಇಲ್ಲಿನ ಮೃತ್ಯುಂಜಯ ಸರ್ಕಲ್ನಲ್ಲಿ ಸೇರಿದ ಕೆಲವು ಮಹಿಳೆಯರು ಹಾಗೂ ಪುರುಷರ ಗುಂಪು ಹಣದ ವಿಚಾರವಾಗಿ, ಶ್ರೀದೇವಿ ಎಂಬ ಮಹಿಳೆಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆ ಬಳಿಕ ಚಪ್ಪಲಿ, ಬೂಟುಗಳನ್ನು ಕಟ್ಟಿ ಹಾರ ಮಾಡಿ ಕೊರಳಿಗೆ ಹಾಕಿ ರಸ್ತೆ ಮಧ್ಯೆ ಮೆರವಣಿಗೆ ಮಾಡಿದ್ದರು. ಈ ಅಮಾನವೀಯ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣದಡಿ ಘಟಪ್ರಭಾ ಮಹಿಳಾ ಠಾಣೆಯಲ್ಲಿ 13ಕ್ಕೂ ಹೆಚ್ಚು ಮಂದಿ ವಿರುದ್ಧ ದೂರು ದಾಖಲಾಗಿದೆ.

ಸೌಹಾರ್ಧತೆಗೆ ಧಕ್ಕೆಯಾಗುವ ಬ್ಯಾನರ್ ಅಳವಡಿಕೆ ಆರೋಪ

Posted by Vidyamaana on 2023-10-30 16:59:38 |

Share: | | | | |


ಸೌಹಾರ್ಧತೆಗೆ ಧಕ್ಕೆಯಾಗುವ ಬ್ಯಾನರ್ ಅಳವಡಿಕೆ ಆರೋಪ

ಬೆಳ್ತಂಗಡಿ : ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಹಾಕಿದ ಬ್ಯಾನರ್ ಗಳ ಸಮೀಪ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ಧಕ್ಕೆ ಬಾಧಕವಾಗುವಂತಹ ಬರವಣಿಗೆ ಇರುವ ಬ್ಯಾನರ್ ಅಳವಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ನಿವಾಸಿ ಸಂದೀಪ್ ರೈ ನೀಡಿರುವ ದೂರಿನ ಮೇರೆಗೆ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ.ವಿ ಗೌಡ, ಮನೋಹರ್ ಮನ್ನಡ್ಕ, ಮನೋಜ್ ಸಾಲ್ಯಾನ್ ಕುಂಜರ್ಪ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.


ಅ.29 ರಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್ ಗಳ ಸಮೀಪದಲ್ಲೇ, ಸದ್ರಿ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ಧತೆಕ್ಕೆ ಬಾಧಕವಾಗುವಂತಹ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್ ಗಳನ್ನು ಅಳವಡಿಸಿ, ಪ್ರಾದೇಶಿಕ ಗುಂಪುಗಳ ನಡುವೆ ವೈರತ್ವ, ದ್ವೇಷ ,ವೈಮನಸ್ಸು ಭಾವನೆಗಳನ್ನು ಬಿತ್ತಿಸಿ ಅಸೌಹಾರ್ಧತೆಯನ್ನು ಸೃಷ್ಟಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ ವಿ ಗೌಡ, ಮನೋಹರ್ ಮನ್ನಡ್ಕ,ಮನೋಜ್ ಸಾಲ್ಯಾನ್ ಕುಂಜರ್ಪ, ಮತ್ತು ಇತರರ ವಿರುದ್ದ ಹಾಗೂ ಸಮಾಜದ ಸ್ವಾಸ್ತ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ದಗಳನ್ನು ಬರೆದ ಬ್ಯಾನರ್ ಅಳವಡಿಸುವುದಕ್ಕೆ ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 106 /2023 ಕಲಂ; 120(B)153(A) 153(B) ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



Leave a Comment: