ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಸುದ್ದಿಗಳು News

Posted by vidyamaana on 2024-07-01 12:44:53 |

Share: | | | | |


ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಹಾಸನ: ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್‌, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಪೊಲೀಸ್ ಗಂಡನ ವಿರುದ್ಧ ದೂರು ನೀಡಲೆಂದು ಪತ್ನಿ ಮಮತಾ(37) ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆ, ಹಿಂಬಾಲಿಸಿ ಬಂದಿದ್ದ ಲೋಕನಾಥ್ ಹಾಸನ ಎಸ್ಪಿ ಕಚೇರಿ ಎದುರಲ್ಲೇ ಪತ್ನಿಯ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.‌

ಮಹಿಳೆಯನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾಳೆ.‌ ಆರೋಪಿ ಪತಿ ಲೋಕನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 Share: | | | | |


ಸಂಪ್ಯ : ರಿಕ್ಷಾ ತಂಗುದಾಣಕ್ಕೆ ಶಾಸಕರಿಂದ ಅನುದಾನ: ಚಾಲಕರ ಹರ್ಷ

Posted by Vidyamaana on 2024-01-04 21:42:43 |

Share: | | | | |


ಸಂಪ್ಯ : ರಿಕ್ಷಾ ತಂಗುದಾಣಕ್ಕೆ ಶಾಸಕರಿಂದ ಅನುದಾನ: ಚಾಲಕರ ಹರ್ಷ

ಪುತ್ತೂರು: ಸಂಪ್ಯ ಠಾಣೆಯ ಮುಂಭಾಗದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ಶಾಸಕರಾದ ಅಶೋಕ್ ರೈ ಯವರು ರೂ 5 ಲಕ್ಷ ಅನುದಾನ ಮೀಸಲಿರಿಸಿದ್ದು ಶಾಸಕರರಿಗೆ ಚಾಲಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣವಾಗಬೇಕೆಂಬ ಬೇಡಿಕೆ ಈ ಬಾರಿ ಈಡೇರಿದೆ ಎಂದು ಚಾಲಕರು ಹರ್ಷ ವ್ಯಕ್ತಪಡಿಸಿದರು.

ಆಟೋ ಚಾಲಕ ಮಾಲಕರ ಸಂಘ ಸಂಪ್ಯ ಹಾಗೂ ಗೆಳೆಯರ ಬಳಗ ಸಂಪ್ಯ ಇದರ ಸಭೆಯು ಸಂಪ್ಯದಲ್ಲಿ ನಡೆಯಿತು.‌ಸಭೆಯಲ್ಲಿಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶೋಕ್,ಸಲಾಂ ಸಂಪ್ಯ, ರಾಮಕೃಷ್ಣ ಕೊಟ್ಟಾರ್,ಶಾಂತಪ್ಪ, ವಿಠಲ. ಲಿಂಗಪ್ಪ ಗೌಡ,ಖಾದರ್, ದೀಕ್ಷಿತ್, ಕರೀಂ ಶರೀಫ್, ಸದಾಶಿವ,ಹರೀಶ್ ಬಾರಿಕೆ,ನಾರಾಯಣ,ಸುರೇಶ್ ಒಊಜಾರಿ,ರಮೇಶ್ ಬಾರಿಕೆ,ಪ್ರಶಾಂತ್ ರೈ,ಇಸ್ಮಾಯಿಲ್ ವಾಗ್ಳೆ,ಮಂಜಪ್ಪ ಗೌಡ,ಮೊಯಿದಿನ್ ಅರಫಾ,ನಾರಾಯಣ ತಿಂಗಳಾಡಿ ಮತ್ತಿತರರು ಉಪಸ್ಥಿತರಿದ್ದರು.

ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

Posted by Vidyamaana on 2023-10-24 20:27:34 |

Share: | | | | |


ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

ಬೀಜಿಂಗ್: ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ಅವರನ್ನು ಚೀನಾ ಸರ್ಕಾರ ತೆಗೆದುಹಾಕಿದೆ. ಇದಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ. ಚೀನಾ ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದ್ದು, ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಸಚಿವರನ್ನು ಸರಕಾರ ವಜಾ ಮಾಡಿದೆ ಎಂದಿದೆ.


ಯಾವುದೇ ವಿವರಣೆಯನ್ನು ನೀಡದೆ ಜುಲೈನಲ್ಲಿ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಮಾಜಿ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಬಳಿಕ  ಅದೇ ರೀತಿಯ ಕ್ರಮ ಎದುರಿಸಿದ ಎರಡನೇ ವ್ಯಕ್ತಿ ಲಿ ಅವರಾಗಿದ್ದಾರೆ.


ಮಾರ್ಚ್‌ನಲ್ಲಿ ಕ್ಯಾಬಿನೆಟ್ ಪುನರ್ರಚನೆಯ ಸಮಯದಲ್ಲಿ ರಕ್ಷಣಾ ಸಚಿವ ಆದ ಲಿ  ಆಗಸ್ಟ್ 29 ರಂದು ಭಾಷಣವೊಂದನ್ನು ಮಾಡಿದ ನಂತರ ಜನರ ಜೊತೆ ಕಾಣಿಸಿಕೊಂಡಿರಲಿಲ್ಲ. ಆವರು ಕಾಣೆಯಾಗಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಅವರ ಎಲ್ಲಿದ್ದಾರೆ ಏನ್‌ ಮಾಡ್ತಿದಾರೆ ಅಂತ ತಿಳುದು ಬಂದಿರಲಿಲ್ಲ.ಅಧ್ಯಕ್ಷ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಾಯಕ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರ ಮುಂದುವರಿಯುವ ಬಗ್ಗೆ ಪ್ರಶ್ನೆಗಳನ್ನು ಲಿ ಎತ್ತಿದ್ದರು. ಅಪಾರ ದೇಶ ನಿಷ್ಠೆ ತೋರುತ್ತಿದ್ದ ಆವರು ಸಾರ್ವಜನಿಕ ಮತ್ತು ಖಾಸಗಿ ಭ್ರಷ್ಟಾಚಾರದ ವಿರುದ್ಧ ಪಟ್ಟುಬಿಡದೆ ದನಿ ಎತ್ತುತ್ತಿದ್ದರು.


ಇದು ಜಿನ್‌ಪಿಂಗ್ ಅವರಿಗೆ ಮುಜುಗರ ತರುತ್ತಿತ್ತು. ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಬೇಕು, ಹದಗೆಡುತ್ತಿರುವ ಆರ್ಥಿಕತೆಯ ನಡುವೆ ಅಮೆರಿಕಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಮ್ಮ ಮಾತು ಕೇಳುವವರನ್ನು ಆ ಸ್ಥಾನಕ್ಕೆ ತರಬೇಕೆಂಬುದು ಅಧ್ಯಕ್ಷ ಜಿನ್‌ಪಿಂಗ್ ಯೋಚಿಸುತ್ತಿದ್ದರು ಎನ್ನಲಾಗಿದೆ.

ಯುವಶಕ್ತಿ ಸೇವಾಪಥದ ದ್ವಿತೀಯ ವಾರ್ಷಿಕೋತ್ಸವ ಸೇವಾ ಸಂಭ್ರಮ ಸಂಪನ್ನ

Posted by Vidyamaana on 2024-03-29 11:47:20 |

Share: | | | | |


ಯುವಶಕ್ತಿ ಸೇವಾಪಥದ ದ್ವಿತೀಯ ವಾರ್ಷಿಕೋತ್ಸವ ಸೇವಾ ಸಂಭ್ರಮ ಸಂಪನ್ನ

ಬಂಟ್ವಾಳ :ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ  ಸೇವಾಕಾರ್ಯದಲ್ಲಿ  ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುತ್ತಿರುವ ಯುವಶಕ್ತಿ ಸೇವಾಪಥವು  ತನ್ನ ದ್ವೀತಿಯ ವಾರ್ಷಿಕೋತ್ಸವವನ್ನು  "ಸೇವಾ ಸಂಭ್ರಮ" ಎಂಬ ವಿನೂತನ ಪರಿಕಲ್ಪನೆಯ ಮೂಲಕ ಕಟ್ಟದ ಪಡ್ಪು ಅರುಣೋದಯ ಸಭಾಭವನದಲ್ಲಿ ಆಚರಿಸಿಕೊಂಡಿತು .

ಸಮಾಜ ಬಂಧುಗಳಿಂದ ಸಂಗ್ರಹಿಸಿ ಜಿಲ್ಲೆಯ ವಿವಿಧ ಭಾಗದ ಒಟ್ಟು 11 ಜನ ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ನಾಲ್ಕು ಲಕ್ಷ ರೂಗಳ ಆರ್ಥಿಕ ಸಹಕಾರ ನೀಡುವುದರ ಮೂಲಕ ಯುವಶಕ್ತಿ ಸೇವಾಪಥವು ಶಕ್ತ ಸಮಾಜ ಮತ್ತು ಅಶಕ್ತ ಸಮಾಜದ ನಡುವಿನ ಕೊಂಡಿಯೆನಿಸಿತು.


BIG BREAKING NEWS: 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಅನುಮತಿ: ಹೈಕೋರ್ಟ್ ಆದೇಶ

Posted by Vidyamaana on 2024-03-07 19:47:33 |

Share: | | | | |


BIG BREAKING NEWS: 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಅನುಮತಿ: ಹೈಕೋರ್ಟ್ ಆದೇಶ

ಬೆಂಗಳೂರು : 5, 8 , 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಲಾಗಿದೆ.ಹೈಕೋರ್ಟ್ ಏಕ ಸದಸ್ಯ ಪೀಠ ಈ ತರಗತಿಗಳ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು.ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.

ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲಾಗಿತ್ತು.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಗಣೇಶ್ ಆಚಾರ್ಯ ನಿಧನ

Posted by Vidyamaana on 2024-07-02 20:49:13 |

Share: | | | | |


ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಗಣೇಶ್ ಆಚಾರ್ಯ ನಿಧನ

ಕೊಣಾಜೆ , ಜುಲೈ 2: ಜೂನ್ 28 ರಂದು ಹರೇಕಳ ಸಮೀಪ ನಡೆದಿದ್ದ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಗಣೇಶ್ ಆಚಾರ್ಯ ( 27) ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಗಣೇಶ್ ಜೂ.28 ರಂದು ಬೆಳಗ್ಗೆ ಹರೇಕಳ ಕಡೆಯಿಂದ ಕೊಣಾಜೆ ಮಾರ್ಗವಾಗಿ ಹೋಗುವ ಸಂದರ್ಭ ಹರೇಕಳ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ಅಪಘಾತ ಸಂಭವಿಸಿದೆ.

ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

Posted by Vidyamaana on 2023-06-21 05:10:54 |

Share: | | | | |


ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲೇ ಸಾವನ್ನಪ್ಪಿದ ಘಟನೆ ಜೂ 20 ಬೆಳಿಗ್ಗೆ ಗರ್ಡಾಡಿ ಬಳಿ ನಡೆದಿದೆ.ಪಡಂಗಡಿ ಸಮೀಪದ ಒಡಿಲು ಎಂಬಲ್ಲಿಯ ದಿಕ್ಷೀತ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವೇಣೂರು ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಧರ್ಮಸ್ಥಳದಿಂದ ಹುಬ್ಬಳ್ಳಿಗೆ ತೆರಳುತಿದ್ದ ಬಸ್ ಗರ್ಡಾಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಕಳೆದ ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.



Leave a Comment: