ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ವಿದ್ಯಾರ್ಥಿ ಪವನ್ ನಿಗೂಢ ಸಾವು | ಆತ್ಮಹತ್ಯೆಯ ಬಗ್ಗೆಯೇ ಗೊಂದಲ.

Posted by Vidyamaana on 2023-03-10 11:57:43 |

Share: | | | | |


ವಿದ್ಯಾರ್ಥಿ ಪವನ್ ನಿಗೂಢ ಸಾವು | ಆತ್ಮಹತ್ಯೆಯ ಬಗ್ಗೆಯೇ ಗೊಂದಲ.

ಮಂಗಳೂರು: ಏಕಾಏಕಿ ಮನೆಯಿಂದ ನಾಪತ್ತೆಯಾದ ವಿದ್ಯಾರ್ಥಿಯೋರ್ವ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆಯೊಂದು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಗುರುಪುರ ಸೇತುವೆ ಹೊಳೆಯಲ್ಲಿ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸಿ ಚಿರಪರಿಚಿತನಾಗಿದ್ದ ಗುರುಪುರ- ಕೈಕಂಬ ಬಳಿಯ ಕಾಜಿಲ ಎಂಬಲ್ಲಿನ ನಿವಾಸಿ ಪವನ್ ಎಂದು ಗುರುತಿಸಲಾಗಿದೆ.ಈತ ನಿನ್ನೆ ಏಕಾಏಕಿ ಮನೆಯಿಂದ ಹೊರಟು ಹೋಗಿದ್ದು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಆಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇತ್ತ ಗಾಬರಿಗೊಂಡ ಮನೆಮಂದಿ ಹಾಗೂ ಹಿತೈಷಿಗಳು ಈತನ ಸುಳಿವು ಕಾಣಲು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ವಿವರಗಳನ್ನು ಹರಿಯಬಿಟ್ಟಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಮಧ್ಯಾಹ್ನ ಹೊತ್ತಿಗೆ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಹಾಗೂ ಪೊಲೀಸರ ಸಹಾಯದಿಂದ ಶವ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸಾವಿನ ಸುತ್ತ ಕೆಲವೊಂದು ಅನುಮಾನಗಳು ವ್ಯಕ್ತವಾಗಿದ್ದು, ಪ್ರೀತಿಯ ವಿಚಾರವಾಗಿ ನೊಂದುಕೊಂಡು ಆತ್ಮಹತ್ಯೆ ನಡೆಸಿದ್ದಾನೆ ಎನ್ನುವ ಮಾತುಗಳು ಕೇಳಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಜಾಗದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ – ಪುತ್ತಿಲ ಪರಿವಾರದಿಂದ ಖಂಡನೆ

Posted by Vidyamaana on 2024-01-16 20:47:54 |

Share: | | | | |


ಜಾಗದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ – ಪುತ್ತಿಲ ಪರಿವಾರದಿಂದ ಖಂಡನೆ

ಪುತ್ತೂರು : ಜಾಗದ ವಿಚಾರವಾಗಿ ನಡೆದ ತಕರಾರು ಹಲ್ಲೆ ವಿಚಾರದಲ್ಲಿ ಪುತ್ತಿಲ ಪರಿವಾರದ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಈ ವಿಚಾರವನ್ನು ಪುತ್ತಿಲ ಪರಿವಾರ ಖಂಡಿಸಿದೆ.


500 ವರ್ಷಗಳಿಂದ ಹಿಂದೂ ಸಮಾಜ ಕಾತರದಿಂದ ಕಾಯುತ್ತಿರುವ ಅಮೋಘ ಕ್ಷಣ ಜ.22ರ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರತಿಷ್ಠಾಪನೆ. ಮಂತ್ರಾಕ್ಷತೆ ವಿತರಿಸುವುದು ಸಹಿತ ರಾಮಮಂದಿರಕ್ಕೆ ಶುಭಕೋರಿ ಪುತ್ತೂರಿನಲ್ಲಿ ಪ್ರಪ್ರಥಮ 3ಡಿ ಬ್ಯಾನರ್ ಅಳವಡಿಸಿ ರಾಷ್ಟ್ರೀಯ ಹಬ್ಬದಂತೆ ಮನೆ ಮನೆಗಳಲ್ಲಿ ರಾಮಮಂದಿರ ಪ್ರತಿಷ್ಠಾಪನೆಯನ್ನು ಆಚರಿಸಲು ಪುತ್ತಿಲ ಪರಿವಾರ ಕಾಯುತ್ತಿದೆ.


ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರವನ್ನು ಅದರಲ್ಲೂ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರಾ ಖಂಡನೀಯ.


ಜಾಗದ ಗಲಾಟೆಗೆ ನಡೆದ ಘಟನೆ ಎಂದು ಪೊಲೀಸ್ ಎಫ್ಐಆರ್ ನಲ್ಲೇ ಉಲ್ಲೇಖ ಆಗಿದ್ದು, ಈ ಬಗ್ಗೆ ತಕ್ಷಣ ಸ್ಪಷ್ಟಿಕರಣ ಕೊಟ್ಟು ಗೊಂದಲ ನಿವಾರಿಸಿದ ದಕ್ಷಿಣ ಕನ್ನಡ ಎಸ್ಪಿ ರಿಷ್ಶಂತ್ ಅವರಿಗೆ ಧನ್ಯವಾದ ಎಂದು ಪುತ್ತಿಲ ಪರಿವಾರ ಹೇಳಿದೆ.


ದುರುದ್ದೇಶದಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ, ತೇಜೋವಧೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಕರಣವನ್ನು ತಿರುಚಿದವರ ವಿರುದ್ದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಯನ್ನು ಪುತ್ತಿಲ ಪರಿವಾರ ವಿನಂತಿಸಿದೆ.

ಜಾತೀಯತೆ, ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು: ದಸರಾ ಆಚರಣೆಯ ವೇಳೆ ಪ್ರಧಾನಿ ಮೋದಿ ಕರೆ

Posted by Vidyamaana on 2023-10-25 15:43:20 |

Share: | | | | |


ಜಾತೀಯತೆ, ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು: ದಸರಾ ಆಚರಣೆಯ ವೇಳೆ ಪ್ರಧಾನಿ ಮೋದಿ ಕರೆ

ನವದೆಹಲಿ : ದೇಶಕ್ಕೆ ಹಾನಿ ಮಾಡುತ್ತಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು. ಸ್ವಹಿತಾಸಕ್ತಿಗಳ ದಹನಕ್ಕೆ ದಸರೆಯು ನಾಂದಿ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ ಹಾಗೂ ಇದೇ ವೇಳೆ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.ಇಲ್ಲಿನ ದ್ವಾರಕಾ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾವಣ ದಹನ ಎಂಬುದು ಕೇವಲ ಪ್ರತಿಕೃತಿಯ ದಹನವಲ್ಲ. ಭಾರತ ಮಾತೆಯನ್ನು ಧರ್ಮ ಮತ್ತು ಪ್ರಾದೇಶಿಕತೆಯ ಹೆಸರಲ್ಲಿ ಭಾಗ ಮಾಡುತ್ತಿರುವುದರ ನಾಶವೂ ಸಹ ಆಗಿದೆ. ದೇಶಕ್ಕೆ ಹಾನಿ ತಂದೊಡ್ಡುತ್ತಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕಿತ್ತುಹಾಕಬೇಕು. ದಸರಾ ಹಬ್ಬ ಎನ್ನುವುದು ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸುವ ದಿನ. ಈ ವೇಳೆ ಸ್ವಹಿತಾಸಕ್ತಿಯ ದಹನವೂ ಆಗಬೇಕು ಎಂದು ವಿಪಕ್ಷಗಳ ಹೆಸರೆತ್ತದೆ ಪರೋಕ್ಷವಾಗಿ ಕುಟುಕಿದರು.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಶತಮಾನಗಳ ಕಾಲ ಕಾದ ಬಳಿಕ ಇದು ನೆರವೇರುತ್ತಿದೆ. ಇನ್ನು ಕೆಲವು ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ಜನರ ತಾಳ್ಮೆಗೆ ಜಯ ತಂದುಕೊಡಲಿದೆ ಎಂದು ಹೇಳಿದರು.


10 ಸಂಕಲ್ಪ ಮಾಡಿ:

ಇನ್ನು ಇದೇ ವೇಳೆ, ನೀರಿನ ಸಂರಕ್ಷಣೆ, ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ, ಸ್ವಚ್ಛತೆ, ವೋಕಲ್‌ ಫಾರ್‌ ಲೋಕಲ್‌: ಭಾರತದಲ್ಲಿ ತಯಾರಿಸಿದ ವಸ್ತುಗಳ ಖರೀದಿ, ಶ್ರೇಷ್ಠ ಕೆಲಸಗಳನ್ನು ಮಾಡುವುದು, ವಿದೇಶ ಪ್ರವಾಸಕ್ಕೂ ಮುನ್ನ ಭಾರತದಲ್ಲಿ ಪ್ರವಾಸ ಕೈಗೊಳ್ಳುವುದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು, ದೈನಂದಿನ ಊಟದಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದು, ಯೋಗ ಮತ್ತು ಆಟಗಳ ಮೂಲಕ ಫಿಟ್‌ನೆಸ್‌ ಜೀವನದ ಭಾಗ ಮಾಡಿಕೊಳ್ಳುವುದು ಮತ್ತು ಬಡ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ನೆರವು ನೀಡುವ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.ಸಮಾರಂಭದಲ್ಲಿ ಮೋದಿ ಅವರಿಗೆ ಶಾಲು ಹೊದೆಸಿ, ದಂಡವನ್ನು ನೀಡಿ ಸಾಂಪ್ರದಾಯಿಕವಾಗಿ ವೇದಿಕೆಗೆ ಸ್ವಾಗತಿಸಲಾಯಿತು. ವೇದಿಕೆಯ ಮೇಲಿದ್ದ ರಾಮ ಪಾತ್ರಧಾರಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಬಳಿಕ ಸೀತಾ ರಾಮಚಂದ್ರನಿಗೆ ಜಯವಾಗಲಿ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಅವರು ದೇಶದ ಜನರಿಗೆ ನವರಾತ್ರಿಯ ಶುಭಾಶಯ ತಿಳಿಸಿದರು.

ಪುತ್ತೂರು: ಅ.7ರಂದು ಶೌರ್ಯ ಜಾಗರಣ ರಥಯಾತ್ರೆ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ

Posted by Vidyamaana on 2023-10-06 15:45:31 |

Share: | | | | |


ಪುತ್ತೂರು: ಅ.7ರಂದು ಶೌರ್ಯ ಜಾಗರಣ ರಥಯಾತ್ರೆ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ

ಪುತ್ತೂರು: ವಿಶ್ವ ಹಿಂದೂ ಪರಿಷತಿನ 60ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ವತಿಯಿಂದ ಶೌರ್ಯ ಜಾಗರಣಾ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ ಅ. 7ರಂದು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಹಿಂದೂ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. 60ನೇ ವರ್ಷದ ಷಷ್ಟ್ಯಬ್ಲಿ ಆಚರಣೆ ಅಂಗವಾಗಿ ಇದೀಗ ಬೃಹತ್ ಶೌರ್ಯ ಜಾಗರಣಾ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸನಾತನ ಧರ್ಮವನ್ನು ಈ ಪವಿತ್ರ ಭರತಭೂಮಿಯಲ್ಲಿ ಸಂರಕ್ಷಿಸುವಲ್ಲಿ ಸಾವಿರಾರು ವೀರ ಪರಾಕ್ರಮಿಗಳು ತಮ್ಮ ತ್ಯಾಗ- ಬಲಿದಾನಗಳ ಮೂಲಕ ಹೋರಾಡಿದ್ದಾರೆ. ಸತಾನದ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸುವ ಬೆಳೆಸುವ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದ್ದು, ಹಿಂದೂಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಸೆ. 25ರಂದು ಚಿತ್ರದುರ್ಗದಿಂದ ರಥಯಾತ್ರೆ ಹೊರಟಿದ್ದು, ಅ. 7ರಂದು ಬೆಳಿಗ್ಗೆ ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ ಮೂಲಕ ಪುತ್ತೂರಿಗೆ ಸಂಜೆ ರಥಯಾತ್ರೆ ಆಗಮಿಸಲಿದೆ. ಈ ಯಾತ್ರೆಯನ್ನು ವಿವಿಧ ಕಡೆಗಳಲ್ಲಿ ಸ್ವಾಗತಿಸಲಾಗುವುದು. ಪುತ್ತೂರಿನಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಗುವುದು. ಇದರ ಅಂಗವಾಗಿ ಸಂಜೆ 4.30ಕ್ಕೆ ಬೃಹತ್ ಶೋಭಾಯಾತ್ರೆಗೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಚಾಲನೆ ನೀಡಲಾಗುವುದು. ಬಳಿಕ ಮುಖ್ಯರಸ್ತೆಯಾಗಿ ರಥಯಾತ್ರೆ ಚೆಂಡೆ, ಶಂಖನಾದದ ಜತೆಗೆ ಯುವಕರು ಹಲವಾರು ವೀರ ಪರಾಕ್ರಮಿಗಳ ವೇಷವನ್ನು ಧರಿಸಿ ಜತೆಗೂಡಿ ಸಾಗಿಬಂದು ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಸಂಜೆ 5.30ಕ್ಕೆ ನಡೆಯುವ ಬೃಹತ್ ಹಿಂದೂ ಶೌರ್ಯ ಸಂಗಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೈಷ್ಠ ಪ್ರಚಾರಕ್ ಸು.ರಾಮಣ್ಣ ಅವರು ದಿಕ್ಕೂಚಿ ಭಾಷಣ ಮಾಡುವರು. ವಿಹಿಂಪ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಅಧ್ಯಕ್ಷತೆ ವಹಿಸುವರು. ಬಜರಂಗಳದ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿರುವರು ಎಂದು ವಿವರಿಸಿದರು.


ಸೂಚಿಸಿದಲ್ಲಿ ವಾಹನ ಪಾರ್ಕಿಂಗ್ ಮಾಡುವಂತೆ ಸಂಘಟಕರ ಮನವಿ

 ಹಿಂದೂ ಶೌರ್ಯ ಸಂಗಮ, ಹಿಂದೂ ಶೌರ್ಯ ಜಾಗರಣಾ ರಥಯಾತ್ರೆಗೆ ಆಗಮಿಸುವವರಿಗೆ ವಾಹನ ಪಾರ್ಕ್ ಮಾಡಲು ಸ್ಥಳ ಸೂಚಿಸಲಾಗಿದೆ.


ಪಾಣಾಜೆ, ಕುಂಬ್ರ, ನರಿಮೊಗರು ಭಾಗದಿಂದ ಬರುವ ವಾಹನಗಳು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ಮತ್ತು ಉಪ್ಪಿನಂಗಡಿ, ಕಬಕ ಭಾಗದಿಂದ ಬರುವ ವಾಹನಗಳು ಹಾರಾಡಿ ರೈಲ್ವೇ ಸೇತುವೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹಿಂದೂ ಶೌರ್ಯ ಜಾಗರಣ ರಥ ಯಾತ್ರೆ ಸ್ವಾಗತ ಸಮಿತಿ ವಿನಂತಿಸಿದೆ.


ವಿಶ್ವ ಹಿಂದೂ ಪರಿಷತ್ 60ನೇ ಷಷ್ಟ್ಯಬ್ದದ ಅಂಗವಾಗಿ ನಾಳೆ ಪುತ್ತೂರಿನಲ್ಲಿ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಹಿಂದು ಬಾಂಧವರು ಸಹಕರಿಸುವಂತೆ ಸ್ವಾಗತ ಸಮಿತಿ ವಿನಂತಿಸಿದೆ.


ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ತಾಲೂಕು ಟೈಲರ್ಸ್ ಸಹಕಾರ ಸಂಘದ ವತಿಯಿಂದ ಗೌರವಾರ್ಪಣೆ

Posted by Vidyamaana on 2023-10-26 09:25:39 |

Share: | | | | |


ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ತಾಲೂಕು ಟೈಲರ್ಸ್ ಸಹಕಾರ ಸಂಘದ ವತಿಯಿಂದ ಗೌರವಾರ್ಪಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 56 ನೇ ಪಟ್ಟಾಭಿಷೇಕದ ವರ್ಧನ್ನೋತ್ಸವದ ಪ್ರಯುಕ್ತ ತಾಲೂಕು ಟೈಲರ್ಸ್ ಸಹಕಾರ ಸಂಘದ ವತಿಯಿಂದ ಗೌರವಿಸಲಾಯಿತು.


ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಉಪಾಧ್ಯಕ್ಷ ಕೆ.ಕುಶಾಲಪ್ಪ ಗೌಡ, ಸಂಘದ ನಿರ್ದೇಶಕರು ಜೋಸೆಫ್


ಡಿಸೋಜಾ,ವಸಂತ ಪೂಜಾರಿ ಎನ್, ವಸಂತ, ವಲೇರಿಯನ್ ಪಾಯಸ್, ರಾಜು ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ರೋಲ್ಸನ್ ಜೋಯೆಲ್ ಮೊರಸ್ ಉಪಸ್ಥಿತರಿದ್ದರು

ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

Posted by Vidyamaana on 2023-10-27 07:15:15 |

Share: | | | | |


ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಪುತ್ತೂರು :ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ತರಬೇತಿ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯದಲ್ಲಿ ಪ್ರಾರಂಭವಾಗಲಿದೆ 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯು ದಿನಾಂಕ 19/11/2023 ರಂದು ಹಾಗೂ ಕೆ.ಪಿ.ಎಸ್.ಸಿ ನೇಮಕಾತಿಯ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯು ದಿನಾಂಕ 4/11/2023 ಮತ್ತು 5 /11 /2023ರಂದು ನಡೆಯಲಿದ್ದು, ಈ ಎರಡು ನೇಮಕಾತಿಗಳ ಅಂತಿಮ ಹಂತದ ಪೂರ್ವ ತಯಾರಿಯ ತರಬೇತಿಯು ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. 

 ಹೆಚ್ಚಿನ ಮಾಹಿತಿಗಾಗಿ,

 ವಿದ್ಯಾಮಾತಾ ಅಕಾಡೆಮಿಯ ಪುತ್ತೂರು,  ಹಿಂದುಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎಪಿಎಂಸಿ ರಸ್ತೆ ,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ.- 574201.

962 046869/9148935808


ವಿದ್ಯಾಮಾತಾ ಅಕಾಡೆಮಿ ಸುಳ್ಯ,

ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣಕನ್ನಡ.

9448527606 ಅನ್ನು ಸಂಪರ್ಕಿಸಲು ಪ್ರಕಟಣೆಯು ತಿಳಿಸಿದೆ.



Leave a Comment: