ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಯುವತಿ ಕರೆದಳು ಅಂತ ರೂಮಿಗೆ ಹೋದ ಯೂಟ್ಯೂಬರ್​ಗೆ ಕಾದಿತ್ತು ಆಘಾತ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಬೆತ್ತಲೆ

Posted by Vidyamaana on 2023-11-05 07:30:37 |

Share: | | | | |


ಯುವತಿ ಕರೆದಳು ಅಂತ ರೂಮಿಗೆ ಹೋದ ಯೂಟ್ಯೂಬರ್​ಗೆ ಕಾದಿತ್ತು ಆಘಾತ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಬೆತ್ತಲೆ

ಕೊಚ್ಚಿ: ಓರ್ವ ಯೂಟ್ಯೂಬರ್​ನನ್ನು ಹನಿಟ್ರ್ಯಾಪ್​ ಬಲೆಗೆ ಕೆಡವಿ ಹಣ ಮತ್ತು ಕಾರು ದೋಚಿದ ಆರೋಪದ ಮೇಲೆ ಯುವತಿಯರಿಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇಡುಕ್ಕಿಯ ವತ್ತಪರಾ ಮೂಲದ ಪಿ.ಎಸ್​. ಅಭಿಲಾಷ್​ (28), ಕೊಲ್ಲಂನ ಕೈತೋಡ್​ ನೀಲಮೇಲ್​ ನಿವಾಸಿ ಎ.ಐ.ಅಮೀನ್​ (23), ಇಡುಕ್ಕಿಯ ಸಾಂತಂಪರಾ ಮೂಲದ ಪಿ. ಅಥಿರಾ (28) ಹಾಗೂ ಇಡುಕ್ಕಿಯ ವಲರಾ ಮೂಲದ ಕೆ.ಕೆ. ಅಕ್ಷಯಾ (21) ಎಂದು ಗುರುತಿಸಲಾಗಿದೆ. ನಾಲ್ವರನ್ನು ಥ್ರಿಪ್ಪನಿಥುರಾದಲ್ಲಿರುವ ಅಪಾರ್ಮೆಂಟ್​ನಲ್ಲಿ ಕೂಥಟ್ಟುಕುಲಂ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಕೌಟುಂಬಿಕ ಸಲಹೆಗಾರರೂ ಆಗಿರುವ ಮಂಚೇರಿಯ ಯೂಟ್ಯೂಬರ್ ವಂಚನೆಗೆ ಒಳಗಾದವರು. ಆರೋಪಿ ಅಕ್ಷಯಾ, ತನಗೆ ಕೌನ್ಸೆಲಿಂಗ್​ ಬೇಕಿದೆ ಎಂದು ಹೇಳಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಮಧ್ಯವಯಸ್ಕ ಯೂಟ್ಯೂಬರ್​ನನ್ನು ಕೂಥಟ್ಟುಕುಲಂನಲ್ಲಿರುವ ಬಾಡಿಗೆ ರೂಮಿಗೆ ಕರೆದಿದ್ದಳು. ರೂಮಿಗೆ ತೆರಳಿದ ಬಳಿಕ ಅಕ್ಷಯಾ ಕೊಟ್ಟ ಜ್ಯೂಸ್ ಕುಡಿದ ಯೂಟ್ಯೂಬರ್​ ನಿದ್ದೆಗೆ ಜಾರಿದ್ದಾರೆ. ಎಚ್ಚರಗೊಳ್ಳುವಷ್ಟರಲ್ಲಿ ವಂಚನೆ ಗ್ಯಾಂಗ್​ನ ನಾಲ್ವರು ಸೇರಿ ಆಥಿರಾ ಜತೆ ಬೆತ್ತಲೆಯಾಗಿ ನಿಲ್ಲುವಂತೆ ಮಾಡಿ ಫೋಟೋ, ವಿಡಿಯೋ ತೆಗೆದಿದ್ದಾರೆ.ಇದಾದ ಬಳಿಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಯೂಟ್ಯೂಬರ್​ಗೆ ಗ್ಯಾಂಗ್​ ಬೆದರಿಕೆ ಹಾಕಿದೆ. ಇದರಿಂದ ಹೆದರಿದ ಯೂಟ್ಯೂಬರ್ ಗ್ಯಾಂಗ್​ನ ಬೇಡಿಕೆಯಂತೆ ತನ್ನ ಖಾತೆಯಲ್ಲಿದ್ದ 14000 ರೂಪಾಯಿಯನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಅಲ್ಲದೆ, ಎರಡು ಲಕ್ಷ ರೂ. ಮೌಲ್ಯದ ಕಾರನ್ನು ಸಹ ಆರೋಪಿಗಳು ವಶಕ್ಕೆ ಪಡೆದಿದ್ದಾರೆ.ಕೂಥಟ್ಟುಕುಲಂ ಠಾಣಾ ಪೊಲೀಸರಿಗೆ ಯೂಟ್ಯೂಬರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ನಿವಾಸವನ್ನು ಮೊಬೈಲ್ ಟವರ್ ಲೊಕೇಶನ್ ಮತ್ತು ವಾಹನದ ಜಿಪಿಎಸ್ ಲೊಕೇಶನ್ ಮೂಲಕ ಪತ್ತೆ ಹಚ್ಚಲಾಯಿತು. ನ.03 ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ತಂಡ ಇನ್ಯಾವುದೇ ರೀತಿಯ ವಂಚನೆ ಮಾಡಿದ್ದರೆ ಪರಿಶೀಲಿಸಲಾಗುವುದು ಎಂದು ಡಿವೈಎಸ್ಪಿ ಟಿ.ಬಿ.ವಿಜಯನ್ ಹಾಗೂ ಇನ್ಸ್​ಸ್ಪೆಕ್ಟರ್ ಎಂ.ಎ.ಆನಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ

Posted by Vidyamaana on 2024-02-17 21:49:20 |

Share: | | | | |


ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನ ಕಾಂಗ್ರೆಸ್ ಸಮಾವೇಶದತ್ತ ಬರುವ ವೇಳೆ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮುಖ್ಯಮಂತ್ರಿ ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಸಮಾವೇಶ ನಡೆಯುವ ಸಹ್ಯಾದ್ರಿ ಮೈದಾನಕ್ಕೆ ಬರುವ ವೇಳೆ ಮುತ್ತಿಗೆ ಹಾಕಲು ಬೊಂದೆಲ್ ಬಳಿ ಕಾರ್ಯಕರ್ತರು ಸೇರಿದ್ದರು. 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು ರಸ್ತೆಯಲ್ಲಿ ಮುಖ್ಯಮಂತ್ರಿ ಬರುವಾಗ ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 3

Posted by Vidyamaana on 2023-09-03 01:50:16 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 3

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 3 ರಂದು



ಬೆಳಿಗ್ಗೆ 10 ಗಂಟೆಗೆ ದ ಕ ಜಿಲ್ಲಾ ಟ್ಯಾಕ್ಸಿಮೆನ್ ,ಮ್ಯಾಕ್ಸಿಕ್ಯಾಬ್  ಅಸೋಸಿಯೇಶನ್ ಸುರ್ಣಮಹೋತ್ಸವ


ಸ್ಥಳ: ಮಂಗಳೂರು ಪುರಭವನ


11 ಗಂಟೆಗೆ ಕೆಪಿಟಿ ಮಂಗಳೂರಿನಲ್ಲಿ ಅಭಿಮತ ಚಾನೆಲ್ ಉದ್ಘಾಟನೆ


12 ಗಂಟೆಗೆ ಕಂಬಳಬೆಟ್ಟುವಿನಲ್ಲಿ ಸೇವಾ ಸಹಕಾರಿ ಸಂಘ ಉದ್ಘಾಟ‌ನೆ


4 ಗಂಟೆಗೆ ಅಜ್ಜನಡ್ಕ ಸೌಹಾರ್ಧ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ 

 ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ

ಸರಕಾರಿ ಕಚೇರಿ ಜಾಲಾಡಿದ ಕಳ್ಳರು

Posted by Vidyamaana on 2023-09-05 02:56:06 |

Share: | | | | |


ಸರಕಾರಿ ಕಚೇರಿ ಜಾಲಾಡಿದ ಕಳ್ಳರು

ಪುತ್ತೂರು: ಇಲ್ಲಿನ ಕುಂಬ್ರದಲ್ಲಿ ಸರಕಾರಿ ಕಚೇರಿಗಳನ್ನೇ ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಕುಂಬ್ರದಲ್ಲಿರುವ ಒಳಮೊಗ್ರು ಗ್ರಾಮ ಪಂಚಾಯತ್ ಕಚೇರಿ, ಗ್ರಾಮ ಕರಣಿಕರ ಕಚೇರಿ, ಕೆ.ಪಿ.ಎಸ್. ಸ್ಕೂಲಿಗೆ ಕಳ್ಳರು ನುಗ್ಗಿದ್ದಾರೆ. ಕಚೇರಿಗಳ ಬಾಗಿಲು ಮುರಿದು ಒಳ ನುಗ್ಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಕೊಡಗಿನ ಅನಧಿಕೃತ, ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ಬಂದ್

Posted by Vidyamaana on 2024-06-28 23:59:46 |

Share: | | | | |


  ಕೊಡಗಿನ ಅನಧಿಕೃತ, ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ಬಂದ್

ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇದೀಗ ಕೊಡಗಿನಲ್ಲಿ ಹೊಸ ಟ್ರೆಂಡ್ ಆಗಿ ಪ್ರವಾಸಿಗರನ್ನು ಸೆಳೆಯಲು ಹಲವು ಪ್ರದೇಶಗಳಲ್ಲಿ ಗಾಜಿನ ಸೇತುವೆಗಳನ್ನೂ ನಿರ್ಮಿಸಲಾಗುತ್ತಿದೆ.

ಆದರೆ, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಗ್ಲಾಸ್ ಬ್ರಿಡ್ಜ್ ಅನ್ನು ಸೂಕ್ತ ಅನುಮತಿ ಇಲ್ಲದ ಕಾರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬಂದ್ ಮಾಡಿದೆ.

ಕೆ ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸುಮಾರು 200 ಮೀಟರ್ ಉದ್ದದ ಗಾಜಿನ ಸೇತುವೆಯು ವಿಶಾಲವಾದ ಹಸಿರು ಮತ್ತು ಪರ್ವತಗಳ ಮಧ್ಯ ನಿರ್ಮಿಸಲಾಗಿದೆ. ಈ ಗಾಜಿನ ಸೇತುವೆಯು ಪ್ರಧಾನ ಪ್ರವಾಸಿ ತಾಣವಾದ ಅಬ್ಬೆ ಜಲಪಾತದ ದಾರಿಯಲ್ಲಿದೆ.

ಈ ಸೇತುವೆಯನ್ನು ನಿರ್ಮಿಸಲು ಖಾಸಗಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರೂ, ಸೇತುವೆಯ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಅದು ಈಗ ದುರ್ಬಲ ಸ್ಥಿತಿಯಲ್ಲಿದೆ. ಜೌಗು ಪ್ರದೇಶದಲ್ಲಿರುವ ಈ ಗಾಜಿನ ಸೇತುವೆಯ ಕೆಳಗಿನ ಸಡಿಲವಾದ ಮಣ್ಣು ಕ್ರಮೇಣ ಕೆಳಕ್ಕೆ ಜಾರುತ್ತಿರುವುದರಿಂದ ಅಪಾಯದ ಸ್ಥಿತಿ ಎದುರಾಗಿದೆ.

ಲೇಖಕಿ ಕೈಹಿಡಿದ ಪತ್ರಕರ್ತ ಗಣೇಶ್ ಕಲ್ಲರ್ಪೆ

Posted by Vidyamaana on 2023-11-01 16:44:34 |

Share: | | | | |


ಲೇಖಕಿ ಕೈಹಿಡಿದ ಪತ್ರಕರ್ತ ಗಣೇಶ್ ಕಲ್ಲರ್ಪೆ

ಪುತ್ತೂರು: ಪತ್ರಕರ್ತ  ಗಣೇಶ್ ಎನ್. ಕಲ್ಲರ್ಪೆಅವರು ಬುಧವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.


ಸಕಲೇಶಪುರದ ಲೇಖಖಿ (ಸುಶ್ಮಿತಾ) ಅವರೊಂದಿಗೆ ಸಕಲೇಶಪುರದ ಶ್ರೀ ಉಮಾಶಂಕರ ಸಮುದಾಯ ಭವನದಲ್ಲಿ ನ 01 ಬುಧವಾರ ದಂದು ನೆರವೇರಿತು.ಗಣೇಶ್ ರವರ

 ವೈವಾಹಿಕ ಜೀವನಕ್ಕೆ ವಿದ್ಯಮಾನ ಬಳಗ ಶುಭವನ್ನು ಹಾರೈಸುತ್ತಿದೆ.


ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.



Leave a Comment: