ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಸುದ್ದಿಗಳು News

Posted by vidyamaana on 2024-06-30 19:51:42 |

Share: | | | | |


ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.

 Share: | | | | |


ಶಿರಾಡಿ: ಸರಣಿ ಅಪಘಾತ; ಕಾರಿನಲ್ಲಿದ್ದ ನಾಲ್ವರಿಗೆ ಗಾಯ

Posted by Vidyamaana on 2024-06-24 05:53:02 |

Share: | | | | |


ಶಿರಾಡಿ: ಸರಣಿ ಅಪಘಾತ; ಕಾರಿನಲ್ಲಿದ್ದ ನಾಲ್ವರಿಗೆ ಗಾಯ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಅರಣ್ಯ ಇಲಾಖೆಯ ನರ್ಸರಿ ಬಳಿ ಲಾರಿಯೊಂದು ಎರಡು ಕಾರುಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡು ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರವಾಗಿ ಗಾಯಗಳಾದ ಘಟನೆ ರವಿವಾರ ಸಂಭವಿಸಿದೆ.

ಮೈಸೂರಿನಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು

Posted by Vidyamaana on 2023-07-18 03:38:37 |

Share: | | | | |


ಮೈಸೂರಿನಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು

ಪಿರಿಯಾಪಟ್ಟಣ: ಬೆಳ್ಳಂಬೆಳಗ್ಗೆ ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ.

ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು( ಜುಲೈ 18) ಮುಂಜಾನೆ 4.30ಕ್ಕೆ ಈ ದುರ್ಘಟನೆ ಸಂಭವಿಸಿದೆ.


ಘಟನೆಯಲ್ಲಿ ಮುದಾಸೀರ್, ಮುಜಾಯಿದ್, ಅಹ್ಮದ್​​​ ಪಾಷಾ  ಮೃತಪಟ್ಟಿದ್ದಾರೆ.

ಇನ್ನುಳಿದ ಮೂವರಿಗೆಗಾಯಗಳಾಗಿದ್ದು, ಅಪಘಾತ ನಡೆದ ವೇಳೆ ಅದೇ ರಸ್ತೆಯಲ್ಲಿ ಪುತ್ತೂರು ಬಪ್ಪಳಿಗೆಯ ಶಾಫಿ ಗಡಪ್ಪಿಲ ಬಪ್ಪಳಿಗೆ, ಅಮ್ಮಿ ಗಡಪ್ಪಿಲ ಬಪ್ಪಳಿಗೆ, ಹುರೈಸ್ ಬಪ್ಪಳಿಗೆ, ಆಶಿಕ್ ಬಪ್ಪಳಿಗೆ ಮೊದಲಾದವರು ತೆರಳುತ್ತಿದ್ದ ಘಟನೆ ನೋಡಿದ ಅವರು ತಮ್ಮ ಕಾರನ್ನು ನಿಲ್ಲಿಸಿ ಕೂಡಲೇ ಕಾರಿನ ಗಾಜು ಡೋರನ್ನು ಸರಳಿನಿಂದ ತೆಗೆದು ಮೂರು ಮೃತ ದೇಹಗಳನ್ನು ಹೊರ ತೆಗೆಯಲು ಸಹಕರಿಸಿದ್ದಾರೆ

ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಬಕ : ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಬಿಜೆಪಿ ವತಿಯಿಂದ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

Posted by Vidyamaana on 2023-09-17 15:25:04 |

Share: | | | | |


ಕಬಕ : ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಬಿಜೆಪಿ ವತಿಯಿಂದ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರ 73ನೇ ಜನ್ಮದಿನದ ಪ್ರಯುಕ್ತ ಕಬಕ ಮಹಾದೇವಿ ದೇವಸ್ಥಾನದಲ್ಲಿ ಅವರ ಆಯುಷ್ಯ,ಆರೋಗ್ಯ ವೃದ್ಧಿಗಾಗಿ ಮತ್ತು ಮುಂದಿನ ಚುನಾವಣೆಯಲ್ಲೂ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಅವರಿಗೆ ಮಹಾದೇವಿ ಅನುಗ್ರಹಿಸಲಿ ಎಂದು ಕುಂಕುಮಾರ್ಚನೆ ಸೇವೆ ಮಾಡುವುದರ ಮೂಲಕ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ,ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ನಿತೀಶ್ ಕುಮಾರ್ ಶಾಂತಿವನ,ಎಸ್.ಟಿ ಮೋರ್ಚ ಪ್ರ.ಕಾರ್ಯದರ್ಶಿ ಹರೀಶ್ ಬಿಜತ್ರೆ, ಪುಣಚ ಮಹಾಶಕ್ತೀ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ,ಮಾಣಿಲ ಬಿಜಿಪಿ ಪ್ರಮುಖರಾದ ಗೀತಾನಂದ ಶೆಟ್ಟಿ,ರಾಜೇಶ್ ಬಾಳೆಕಲ್ಲು,ಕಬಕ ಶಕ್ತೀ ಕೇಂದ್ರದ ಜಯರಾಮ್ ನೆಕ್ಕರೆ, ಪಂಚಾಯತ್ ಸದಸ್ಯರಾದ ರುಕ್ಮಯ ಗೌಡ,ಯತೀಶ್ ಪದ್ನಡ್ಕ,ವಿಟ್ಲ ಮುಡ್ನೂರು ಪಂ.ಅಧ್ಯಕ್ಷರಾದ ಪುನೀತ್ ಮಾಡತ್ತಾರು,ಕಿಶೋರ್ ನಾಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.

ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ. 6ರಂದು ದೇವರ ಪ್ರತಿಷ್ಠಾ ವಾರ್ಷಿಕೋತ್ಸವ

Posted by Vidyamaana on 2024-05-05 16:14:09 |

Share: | | | | |


ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ. 6ರಂದು ದೇವರ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ. 6ರಂದು ನಡೆಯಲಿರುವ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮೇ. 5ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ಮತ್ತು ತುಲಾಭಾರ ಸೇವೆ ನಡೆಯಿತು.‌ ಮೇ. 5ರಂದು ಬೆಳಿಗ್ಗೆ ದೇವಳದಲ್ಲಿ ನಿತ್ಯ ಮಹಾಪೂಜೆ ನಡೆಯಿತು. ನಂತರ ಶಾಂತಿನಗರ ಪೂಜಾ ಮೈದಾನದಿಂದ ಭಜನೆಯೊಂದಿಗೆ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು. ಬಳಿಕ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ನಿಕಟಪೂರ್ವ ಆಡಳಿತ ಮೊಕ್ತೇಸರ ಯು‌.ಜಿ.ರಾಧ, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಸಹಿತ ಹಲವರು ಭಾಗವಹಿಸಿದ್ದರು.‌ 

ಉಪ್ಪಿನಂಗಡಿ: ಮಹಿಳೆ ಮೃತ್ಯು; ಕೊಲೆ ಶಂಕೆ

Posted by Vidyamaana on 2024-06-17 14:08:49 |

Share: | | | | |


ಉಪ್ಪಿನಂಗಡಿ: ಮಹಿಳೆ ಮೃತ್ಯು; ಕೊಲೆ ಶಂಕೆ

ಉಪ್ಪಿನಂಗಡಿ: ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.ಇಲ್ಲಿನ ನಿವಾಸಿ ಹೇಮಾವತಿ (37 ) ಮೃತ ಮಹಿಳೆ.

ಹೇಮಾವತಿ ಅವರು ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ನಿನ್ನೆ ರಾತ್ರಿ ಕೃತ್ಯ ನಡೆದಿದೆ.

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ

Posted by Vidyamaana on 2024-03-27 12:26:28 |

Share: | | | | |


ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ

ಬೆಳ್ತಂಗಡಿ: ಕಾಂಗ್ರೆಸ್ನ ಲೋಕಸಭಾ ಚುನಾವಣಾ ಕಚೇರಿಯನ್ನು ಬೆಳ್ತಂಗಡಿ ಹೇರಾಜೆ ಕಾಂಪ್ಲೆಕ್ಸ್ನಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಮಾನಾಥ ರೈ ಉದ್ಘಾಟಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬೆಳ್ತಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ಬೆಳ್ತಂಗಡಿ ಚುನಾವಣಾ ಉಸ್ತುವಾರಿಗಳಾದ ಧರ್ಣೇಂದ್ರ ಕುಮಾರ್, ರಜತ್ ಗೌಡ, ಸುಭಾಶ್ ರೈ, ಮಾಲಾಡಿ ಗ್ರಾಪಂ ಅಧ್ಯಕ್ಷ ಪುನೀತ್ ಕುಮಾರ್ ಮಾಲಾಡಿ, ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್,  ಶೇಖರ್ ಕುಕ್ಯಾಡಿ, ಮನೋಹರ್ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ ಸೇರಿದಂತೆ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.



Leave a Comment: