ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಸುದ್ದಿಗಳು News

Posted by vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

 Share: | | | | |


ಅಸೈಗೋಳಿಯಲ್ಲಿ ಭೀಕರ ರಸ್ತೆ ಅಪಘಾತ ; ಯುವತಿ ಸಾವಿನ ಬೆನ್ನಲ್ಲೇ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನೂ ಸಾವು

Posted by Vidyamaana on 2024-03-25 22:28:35 |

Share: | | | | |


ಅಸೈಗೋಳಿಯಲ್ಲಿ ಭೀಕರ ರಸ್ತೆ ಅಪಘಾತ ; ಯುವತಿ ಸಾವಿನ ಬೆನ್ನಲ್ಲೇ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನೂ ಸಾವು

ಉಳ್ಳಾಲ, ಮಾ. 25:  ದೇರಳಕಟ್ಟೆ ಸಮೀಪದ ಅಸೈಗೋಳಿ ತಿಬ್ಲೆಪದವು ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸಹ ಸವಾರಳಾಗಿದ್ದ ವಿವಾಹಿತ ಮಹಿಳೆ ಮೃತಪಟ್ಟಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರನೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾನೆ. 


ಮಂಗಳೂರಿನ ಪಚ್ಚನಾಡಿ ನಿವಾಸಿ ಯತೀಶ್‌ ದೇವಾಡಿಗ(29) ಸಾವನ್ನಪ್ಪಿದ ಯುವಕ. ನಿನ್ನೆ ಸಂಜೆ ತಿಬ್ಲೆಪದವು ರಾಜ್ಯ ಹೆದ್ದಾರಿಯಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಡಿವೈಡರ್ ನೆಗೆದು ಇನ್ನೊಂದು ಬದಿಯ ರಸ್ತೆಗೆ ಬಿದ್ದಿತ್ತು. ಸವಾರ ಯತೀಶ್ ಮತ್ತು ಸಹ ಸವಾರೆ ಶ್ರೀನಿಧಿ(30) ರಸ್ತೆಗೆಸೆಯಲ್ಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಪಡೀಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಹಳೆಯಂಗಡಿ ತೋಕೂರು ಬಳಿಯ ನಿವಾಸಿ ಶ್ರೀನಿಧಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿಯೇ ಸಾವನ್ನಪ್ಪಿದ್ದರುಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯತೀಶ್ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆದಿತ್ಯವಾರ ಶ್ರೀನಿಧಿ ಅವರು ಮುಡಿಪುವಿನಲ್ಲಿ ನಡೆದಿದ್ದ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಜೆ ಯತೀಶ್ ಜೊತೆ ಬೈಕಿನಲ್ಲಿ ಮಂಗಳೂರಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. 


ತೋಕೂರಿನ‌ ತವರು ಮನೆಯಲ್ಲೇ ಉಳಿದಿದ್ದ ಶ್ರೀನಿಧಿಗೆ ಇಬ್ಬರು ಪುಟ್ಟ ಮಕ್ಕಳಿದ್ದು ಮನೆ ಮಗಳ ಸಾವಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯತೀಶ್ ದೇವಾಡಿಗನೂ ಪೋಷಕರಿಗೆ ಏಕೈಕ ಪುತ್ರನಾಗಿದ್ದು ಆತನ ಅಕಾಲಿಕ ಅಗಲಿಕೆಯಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ನಾನು ನಿಶ್ಚಿಂತೆಯಿಂದ ಇರುತ್ತೇನೆ - ಮೌನಕ್ಕಿರುವ ಬೆಲೆ ಮಾತಿಗಿಲ್ಲ.. ಡಾ. ವೀರೇಂದ್ರ ಹೆಗ್ಗಡೆ

Posted by Vidyamaana on 2023-10-30 14:31:24 |

Share: | | | | |


ನಾನು ನಿಶ್ಚಿಂತೆಯಿಂದ ಇರುತ್ತೇನೆ - ಮೌನಕ್ಕಿರುವ ಬೆಲೆ ಮಾತಿಗಿಲ್ಲ.. ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ನಾನು ನಿಶ್ಚಿಂತೆಯಿಂದ ಇರುತ್ತೇನೆ. ಮೌನಕ್ಕಿರುವ ಬೆಲೆ ಮಾತಿಗಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮಸಂರಕ್ಷಣಾ ‌ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ನಮಗೆ ಸಾಕಷ್ಟು ಪ್ರಸಾದ ಬಂದಿದೆ. ಹಲವು ದೇವಸ್ಥಾನದಿಂದ ನಮಗೆ ಪ್ರಸಾದ ಬಂದಿದೆ. ನಿಜವಾದ ಪ್ರೀತಿ, ಭಕ್ತಿ ಇಟ್ಟಿದ್ದಕ್ಕೆ ಧನ್ಯವಾದಗಳು. ನಿಮಗೆ, ನಿಮ್ಮ ಕುಟುಂಬಕ್ಕೆ ಧನ್ಯವಾದಗಳು. ಮೌನಕ್ಕಿರೋ ಬೆಲೆ , ಮಾತಿಗಿಲ್ಲ. ನಾನು ಅವರಾಗೆ ಮಾತಾಡಿದ್ರೆ ವ್ಯತ್ಯಾಸ ಗೊತ್ತಾಗೊದಿಲ್ಲ. ಸ್ವಾಮೀಜಿಗಳು ಮಂತ್ರಾಕ್ಷತೆ ಕೊಟ್ಟು ನಿಮ್ಮೊಂದಿಗೆ ಇದ್ದಾರೆ ಅಂದಿದ್ದಾರೆ. ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಅಭಯ ನೀಡಿದರು.


ನನ್ನ ಪತ್ನಿ, ಸಹೋದರ, ಅವರ ಪುತ್ರರು ಸಾಕಷ್ಟು ನೋವುಂಡಿದ್ದಿದ್ದಾರೆ. ಮಳೆಯಿಂದ ಎಲ್ಲಾ ಕಷ್ಟ ಕಳೆದುಹೋಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಟೀಕೆ ಆಪತ್ತು ಬಂದಾಗ ನೀವು ಮಾಡಿದ ಪೂಜೆ, ಪ್ರಾರ್ಥನೆಗೆ ಬಲ ಬಂದಿದೆ. ನಾನು ನಿಶ್ಚಿಂತೆಯಿಂದ ಇರುತ್ತೇನೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು ಸೇರಿ ಎಲ್ಲರೂ ಬೆಂಬಲಿಸಿದ್ದಾರೆ. ನಿಮ್ಮ ತ್ಯಾಗ ಎಲ್ಲವೂ ನಮ್ಮ ಸಂಪತ್ತು. ಮಹಾರಾಷ್ಟ್ರದಿಂದ ಕೇರಳದವರೆಗೆ ದೇವಸ್ಥಾನಕ್ಕೆ ಸಹಾಯ ಮಾಡಿದ್ದೇವೆ. ಹಿಂದೆಗಿಂತ ದುಪ್ಪಟ್ಟು ಸೇವೆ ಮಾಡುತ್ತೇನೆ ಎಂದು ಪೂಜ್ಯರು ಹೇಳಿದರು.


ಹೆಗ್ಗಡೆಯವರಪರವಾಗಿನಾವಿದ್ದೇವೆ


ಸಭೆ ಮುಕ್ತಾಯದ ಬಳಿಕ ಸನಾತನ ಪರಂಪರೆಯ ರಕ್ಷಣೆಗೆ ನಾವಿದ್ದೇವೆ. ಧರ್ಮಸ್ಥಳ ಪರಂಪರೆಯ ರಕ್ಷಣೆಗೆ, ಧರ್ಮಸ್ಥಳದ ಪರವಾಗಿ, ಹೆಗ್ಗಡೆಯವರ ಪರವಾಗಿ ನಾವಿದ್ದೇವೆ ಎಂದು ನೆರೆದಿದ್ದ ಭಕ್ತರು ಘೋಷಣೆ ಕೂಗಿದರು. ಹರಶಂಭೋ, ಮಹಾದೇವ, ಶಿವಶಂಕರ, ನೀಲಕಂಠ ಸಮೋಸ್ತುತೆ ಎಂದು ಪ್ರಾರ್ಥನೆ ಮೊಳಗಿಸಿದರು.

ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

Posted by Vidyamaana on 2024-06-24 13:44:56 |

Share: | | | | |


ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

ಪುತ್ತೂರು: ಪ್ರತೀ ಮಳೆಗಾಲದಲ್ಲಿ ವನಮಹೋತ್ಸವ ಬಹಳ ಅಬ್ನರದಿಂದ ಆಚರಣೆ ಮಾಡುತ್ತೇವೆ, ಸಿಕ್ಕ ಸಿಕ್ಕಲ್ಲೆಲ್ಲ ಗಿಡ ನೆಡುತ್ತಾರೆ ಆದರೆ ಅದು ನೆಟ್ಟ ಬಳಿಕ ಏನಾಗಿದೆ ಎಂದು ನೋಡಬೇಕಾದ ಅಥವಾ ಅದನ್ನು ಆರೈಕೆ ಮಾಡಬೇಕಾದ ಜವಾವ್ದಾರಿಯೂ ನಮಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ‌ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಬದಿಗಳಲ್ಲಿಯೂ ಗಡಿಗಳನ್ನು ನೆಡುವಂತೆ ಸೂಚನೆ ನೀಡಿದ್ದೇನೆ. ಗಿಡಗಳನ್ನು ಪ್ರಾಣಿಗಳು ತಿನ್ನದಂತೆ ಅದಕ್ಕೆ ತಡೆ ಬೇಲಿ ಗೊಬ್ಬರ ಮತ್ತು ಕಾಲ ಕಾಲಕ್ಕೆ ಅದಕ್ಕೆ ಗೊಬ್ಬರವನ್ನೂ ಹಾಕುವಂತೆ ಸೂಚನೆ ನೀಡಿದ್ದೇನೆ. ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗೆ. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ‌ ಮೂಡಬೇಕಿದೆ.ಯಾವುದೇ ಕಾರಣಕ್ಕೂ ಸಾರ್ವಜನಿಕರು ನೆಟ್ಟ ಗಿಡವನ್ನು ಕೀಳಬೇಡಿ ಗಿಡಗಳು ಯಾರಿಗಾದರೂ ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.

ನಾಶವಾಗುತ್ತಿರುವ ಗಿಡಗಳ ಪೋಷಣೆ ಮಾಡಬೇಕು:

ಈಗಾಗಲೇ ಅನೇಕ ಕಾಟು ಹಣ್ಣಿನ ಗಿಡಗಳು‌ನಾಶವಾಗುತ್ತಿದೆ. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿದೆ ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ರೈ ಚಾರಿಟೇಬಲ್ ಟ್ರಸ್ಟ್ ವನಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನಾಧ್ಯಂತ ಜಂಟಿಯಾಗಿ  ನಡೆಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ವನಮಹೋತ್ಸವ ನಡೆಯಲಿದೆ ಎಂದು ಹೇಳಿದರು.

ಉಪವಾಸದ ನಡುವೆಯೂ ನೀರಿಗೆ ಬಿದ್ದವನನ್ನು ರಕ್ಷಿಸಲು ನದಿಗೆ ಜಿಗಿದ ನೇತ್ರಾವತಿ ವೀರರು

Posted by Vidyamaana on 2024-04-01 21:29:03 |

Share: | | | | |


ಉಪವಾಸದ ನಡುವೆಯೂ ನೀರಿಗೆ ಬಿದ್ದವನನ್ನು ರಕ್ಷಿಸಲು ನದಿಗೆ ಜಿಗಿದ ನೇತ್ರಾವತಿ ವೀರರು

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ವೇಳೆ ನರಿಕೊಂಬು ಗ್ರಾಮದಲ್ಲಿ ನಡೆದಿದೆ.

  ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಆನುಶ್ ಮೃತಪಟ್ಟ ಯುವಕ.

ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

Posted by Vidyamaana on 2023-05-22 13:24:27 |

Share: | | | | |


ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ವಿಧಾನಸೌಧ ಶಾಸನ ರಚಿಸುವ ಪುಣ್ಯ ಸ್ಥಳ. ಅಂತಹ ವಿಧಾನಸೌಧಕ್ಕೆ ಶಾಸಕನಾಗಿ ಪ್ರವೇಶ ಮಾಡುವುದೇ ದೊಡ್ಡ ಸಂತೋಷದ ಭಾವನೆ. ಅದಕ್ಕೆ ಕಾರಣರು ನನ್ನ ಕ್ಷೇತ್ರದ ಜನರು. ಅವರಿಗೆ ಇದನ್ನು ಅರ್ಪಿಸಲು ಬಯಸುತ್ತೇನೆ.

ಇದು ಅಶೋಕ್ ಕುಮಾರ್ ರೈ ಅವರ ಫಸ್ಟ್ ರಿಯಾಕ್ಷನ್...

ಶಾಸಕನಾಗಿ ಸೋಮವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ವಿದ್ಯಮಾನಕ್ಕೆ ಫಸ್ಟ್ ರಿಯಾಕ್ಷನ್ ನೀಡಿದರು.

ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಅಶೋಕ್ ಕುಮಾರ್ ರೈ ಅವರು, ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಮೆಟ್ಟಿಲುಗಳಿಗೆ ನಮಿಸಿ, ಮುಂದಡಿ ಇಟ್ಟರು.

ಬೆಂಗಳೂರು ಕಂಬಳ: ಓಟದಲ್ಲಿ ಚಿನ್ನದ ಪದಕ ಗೆದ್ದ ಕಾಂತಾರ ಕೋಣಗಳು

Posted by Vidyamaana on 2023-11-26 19:39:25 |

Share: | | | | |


ಬೆಂಗಳೂರು ಕಂಬಳ: ಓಟದಲ್ಲಿ ಚಿನ್ನದ ಪದಕ ಗೆದ್ದ ಕಾಂತಾರ ಕೋಣಗಳು

ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ. ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ.ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟವನ್ನು ಅಲ್ಲಿ ನೆರೆದಿದ್ದವರು ಕಣ್ತುಂಬಿಕೊಂಡರು.ಅರಮನೆ ಮೈದಾನದಲ್ಲಿ ನಿರ್ಮಿಸಿರುವ ರಾಜ-ಮಹಾರಾಜ ಕೆರೆಯಲ್ಲಿ ಬೆಂಗಳೂರು ಕಂಬಳದ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಪ್ಪು, ಕಿಟ್ಟು ಜೋಡಿ ಕೋಣಗಳು ಇತಿಹಾಸ ಬರೆದಿವೆ.ಏಳು ಬಲಿಷ್ಠ ಕೋಣಗಳ ಹಿಂದಿಕ್ಕಿದ ಕಾಂತಾರ ಜೋಡಿ ಕೋಣವು ಒಂದು ಲಕ್ಷ ನಗದು ಹಾಗೂ 16 ಗ್ರಾಂ ಚಿನ್ನ ತನ್ನದಾಗಿಸಿಕೊಂಡಿತು



Leave a Comment: