ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ; ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಸುದ್ದಿಗಳು News

Posted by vidyamaana on 2024-06-30 21:58:04 |

Share: | | | | |


ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ;  ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.

ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.

ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ

ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.

ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

 Share: | | | | |


10 ನಿಮಿಷ ತಡಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್: ಬಿಟ್ಟು ಹಾರಿದ ವಿಮಾನ

Posted by Vidyamaana on 2023-07-28 02:35:54 |

Share: | | | | |


10 ನಿಮಿಷ ತಡಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್: ಬಿಟ್ಟು ಹಾರಿದ ವಿಮಾನ

ಬೆಂಗಳೂರು : ವಿಮಾನ ನಿಲ್ದಾಮಕ್ಕೆ 10 ನಿಮಿಷ ತಡವಾಗಿ ಆಗಮಿಸಿದ ಕಾರಮಕ್ಕಾಗಿ ಹೈದರಾಬಾದ್ ಪ್ರಯಾಣಿಸಬೇಕಿದ್ದಂತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವರನ್ನು ಬಿಟ್ಟು ಏರ್ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದಂತ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.ಈ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವಂತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಶಿಷ್ಟಾಚಾರ ಉಲ್ಲಂಘಿಸಿದ ಏರ್ ಏಷ್ಯಾ ಮೇಲೆ ಗರಂ ಆಗಿದ್ದು, ಸಂಸ್ಥೆ ಹಾಗೂ ಕೆಐಎ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.


ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಹೈದರಾಬಾದ್ ಗೆ ತೆರಳಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಡುವ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೇ ವಿಮಾನ ನಿಲ್ದಾಣಕ್ಕೆ 10 ನಿಮಿಷ ಅವರು ತಡವಾಗಿ ಆಗಮಿಸಿದ್ದರು.ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ ಹೊತ್ತಿಗೆ ಅವರು ಪ್ರಯಾಣಿಸಬೇಕಿದ್ದಂತ ಏರ್ ಏಷ್ಯಾ ವಿಮಾನವು ಗಗನಕ್ಕಾರಿತ್ತು. ಈ ಘಟನೆಯಿಂದ ಬೇಸರಗೊಂಡ ಅವರು, ರಾಜ್ಯದ ಮೊದಲ ಪ್ರಜೆಯಾದ ತಮಗೆ ಅಗೌರವ ಸೂಚಿಸಲಾಗಿದೆ ಎಂಬುದಾಗಿ ಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.


ಇದಾದ ಬಳಿಕ ಮಧ್ಯಾಹ್ನ 3.30ಕ್ಕೆ ಹೈದರಾಬಾದ್ ಗೆ ಹೊರಟಿಟ್ದ ಬೇರೆ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲರು ಪ್ರಯಾಣ ಬೆಳೆಸಿದರು. ಆದ್ರೇ ತಮ್ಮನ್ನು ಬಿಟ್ಟು ತೆರಳಿದಂತ ನಿಗದಿತ ವಿಮಾನದ ವಿರುದ್ಧ ರಾಜ್ಯಪಾಲರ ಸೂಚನೆ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ FIR ದಾಖಲಿಸಿ, ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ:ಮೇಲ್ಕಾರ್ ಮೂಲದ ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ

Posted by Vidyamaana on 2024-05-21 11:07:56 |

Share: | | | | |


ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ:ಮೇಲ್ಕಾರ್ ಮೂಲದ ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ

ಸಕಲೇಶಪುರ: ಲಾರಿ ಮತ್ತು ಕಾರು ಡಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.ಮೃತರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿ ಶಬೀರ್ ಎಂಬವರ ಪತ್ನಿ ಸಫಿಯಾ(50) ಮತ್ತು ಪುತ್ರ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿದ್ದ ಹೋರಿ ನಾಪತ್ತೆ

Posted by Vidyamaana on 2024-05-04 21:54:38 |

Share: | | | | |


ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿದ್ದ ಹೋರಿ ನಾಪತ್ತೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುತ್ತಿದ್ದ ಸಾಧು ಸ್ವಭಾವದ ‘ಅಣ್ಣು’ ಎಂಬ ಹೆಸರಿನ ಹೋರಿಯೊಂದು ನಾಪತ್ತೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.ಎ.30ರಿಂದ ಈ ಹೋರಿ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ.

IPL ಸಿರಾಜ್ ಬಿಗು ದಾಳಿ; ಪಂಜಾಬ್ ವಿರುದ್ಧ ಜಯದ ನಗೆ ಬೀರಿದ RCB

Posted by Vidyamaana on 2023-04-20 16:31:01 |

Share: | | | | |


IPL ಸಿರಾಜ್ ಬಿಗು ದಾಳಿ; ಪಂಜಾಬ್ ವಿರುದ್ಧ ಜಯದ ನಗೆ ಬೀರಿದ RCB

ಮೊಹಾಲಿ : ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐ ಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 24 ರನ್ ಗಳ ಅಮೋಘ ಜಯ ಸಾಧಿಸಿದೆ.ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು . ಆರ್ ಸಿಬಿ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತು. ನಾಯಕ ವಿರಾಟ್ ಕೊಹ್ಲಿ 59 ರನ್ ಗಳಿಸಿ ಔಟಾದರು. ಅಮೋಘ ಆಟವಾಡಿದ ಡು ಫ್ಲೆಸಿಸ್ 84 ರನ್ ಗಳಿಸಿದರು.ಗುರಿ ಬೆನ್ನಟ್ಟಿದ ಪಂಜಾಬ್ 18.2 ಓವರ್ ಗಳಲ್ಲಿ 150 ರನ್ ಗಳಿಗೆ ಆಲೌಟಾಯಿತು. ಪ್ರಭಾಸಿಮ್ರಾನ್ ಸಿಂಗ್ 46, ಜಿತೇಶ್ ಶರ್ಮಾ 41 ರನ್ ಗಳಿಸಿದರೂ ಉಳಿದ ಆಟಗಾರರು ನೆಲಕಚ್ಚಿ ಆಡಲು ವಿಫಲರಾದರು. ಆರ್ ಸಿಬಿ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ 21 ರನ್ ನೀಡಿ 4 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸಿರಾಜ್ ಎರಡು ಎಲ್ಬಿಡಬ್ಲ್ಯೂ ಮತ್ತು ಎರಡು ಕ್ಲೀನ್ ಬೌಲ್ಡ್ ಮಾಡಿ ಪಂದ್ಯದ ಚಿತ್ರಣ ಬದಲಿಸಿದರು. ಅವರ ಎಕಾನಮಿ ರೇಟ್ 5.20 ಆಗಿತ್ತು.  ವನಿಂದು ಹಸರಂಗ 2 ವಿಕೆಟ್, ಪಾರ್ನೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.n

ಕೊಹ್ಲಿ ಅವರು ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಕಳೆದ ಪಂದ್ಯದಲ್ಲಿ ನೋವಿಗೆ ಗುರಿಯಾಗಿದ್ದ ಫ್ಲೆಸಿಸ್ ಫೀಲ್ಡಿಂಗ್ ಗೆ ಇಳಿಯದೆ ಬ್ಯಾಟಿಂಗ್ ಮಾತ್ರ ಮಾಡಿದರು.ಆಡಿದ 6 ಪಂದ್ಯಗಳಲ್ಲಿ3 ಪಂದ್ಯಗಳಲ್ಲಿ ಗೆದ್ದಿರುವ ಆರ್ ಸಿಬಿ 6 ಅಂಕಗಳೊಂದಿಗೆ(-0.068 ರನ್ ರೇಟ್) ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಏ 19:ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

Posted by Vidyamaana on 2023-04-18 15:37:50 |

Share: | | | | |


ಏ 19:ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಏ.19 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ನಾಳೆ ಬೆಳಗ್ಗೆ 8 ಗಂಟೆಗೆ  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ  ಜೆ ಡಿ ಎಸ್ ಕಾರ್ಯಕರ್ತರು , ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಬೆಳಗ್ಗೆ 10 ಗಂಟೆಗೆ ದರ್ಬೆ ಸರ್ಕಲ್ ನಿಂದ ಬೃಹತ್ ರ‍್ಯಾಲಿಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ  ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‍ ಪಕ್ಷಕ್ಕೆ ಸೇರಿದ್ದರು.

ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ

Posted by Vidyamaana on 2022-12-15 14:31:23 |

Share: | | | | |


ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾರತೀಯ ಸೇನೆಯಿಂದ ಇತ್ತೀಚೆಗೆ ನಿವೃತ್ತಿಗೊಂಡ ಯೋಧ ಹವಾಲ್ದಾರ್ ನಂದಾವರ ವಿಶ್ವನಾಥ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ವಿಶ್ವನಾಥ ಶೆಣೈ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ದೊರಕುವುದೇ ಒಂದು ಅಪೂರ್ವ ಸಂಗತಿ. ಇತ್ತೀಚೆಗೆ ಅಗ್ನಿವೀರ್ ಎಂಬ ಯೋಜನೆಯ ಮೂಲಕ ಯುವಶಕ್ತಿ ಭಾರತೀಯ ಸೈನ್ಯವನ್ನು ಸೇರಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಂಡಿವೆ ಎಂದರಲ್ಲದೆ ಈಚೆಗಿನ ದಿನಗಳಲ್ಲಿ ರಾಷ್ಟ್ರದ ಗಡಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ನಾವಿಂದು ಸುಖವಾದ ಜೀವನ ಸಾಗಿಸುವಲ್ಲಿ ವೀರಯೋಧರ ತ್ಯಾಗವಿದೆ. ಹೆತ್ತ ತಂದೆತಾಯಿಗಿಂತ, ಮಡದಿ ಮಕ್ಕಳಿಗಿಂತಲೂ ದೇಶವೇ ಮುಖ್ಯ ಎಂಬ ಭಾವನೆಯಿಂದ ರಾಷ್ಟ್ರಕ್ಕಾಗಿಯೇ ತನ್ನನ್ನು ತಾನು ಸಮರ್ಪಿಸುವ ಯೋಧನಿಗೆ ಗೌರವ ನೀಡಬೇಕಾದದ್ದು ಭಾರತೀಯರೆಲ್ಲರÀ ಕರ್ತವ್ಯ. ಪ್ರತಿಯೊಬ್ಬನೂ ದೇಶದ ವೀರ ಯೋಧ ತಾನಾಗುವುದಕ್ಕೆ ಸಾಧ್ಯವೇ ಎಂದು ಕೇಳಿಕೊಳ್ಳಬೇಕಿದೆ. ತನ್ಮೂಲಕ ಭಾರತಾಂಬೆಯ ಸೇವೆಗೆ ಮನಮಾಡಬೇಕಿದೆ ಎಂದರು.



Leave a Comment: