ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ಸುದ್ದಿಗಳು News

Posted by vidyamaana on 2024-07-24 17:19:41 |

Share: | | | | |


ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಏನಿದೆ?

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಜೆಪಿಯಿಂದ ಹೋರಾಟ :

ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲೇ ಆದೇಶ :

2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.

 Share: | | | | |


ಮಂಗಳೂರು ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

Posted by Vidyamaana on 2023-11-23 10:53:49 |

Share: | | | | |


ಮಂಗಳೂರು  ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮೃತಪಟ್ಟಿರುವ ಘಟನೆ ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ.


ಯಶ್ರಾಜ್ ಎಸ್.ಸುವರ್ಣ(43) ಮೃತರು ಎಂದು ತಿಳಿದು ಬಂದಿದೆ.


ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು. ಅನಂತರ ಲಾಡ್ಜ್ ನವರು ತೆರೆದಾಗಬೆಂಕಿ ಆವರಿಸಿತ್ತು.


ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

Posted by Vidyamaana on 2023-09-19 16:29:41 |

Share: | | | | |


5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

ನವದೆಹಲಿ: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ 5 ದಿನಗಳ ಒಳಗಡೆ ದೇಶವನ್ನು ತೊರೆಯುವಂತೆ ಕೆನಡಾ ರಾಯಭಾರಿಗೆ (Can

non

ian Diplomat) ಭಾರತ ಸೂಚಿಸಿದೆ.ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿದೆ.

Re

non

more.....

ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌


ಜಿ20 ಶೃಂಗಸಭೆಯ (G20 Summit) ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ.


ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೆನಡಾದ ಆರೋಪಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ. ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ.

ಉಳ್ಳಾಲ :ವಿದ್ಯಾರ್ಥಿ ಮಹಮ್ಮದ್ ಹುಝೈಫ್ ನಾಪತ್ತೆ

Posted by Vidyamaana on 2023-10-30 18:11:05 |

Share: | | | | |


ಉಳ್ಳಾಲ :ವಿದ್ಯಾರ್ಥಿ ಮಹಮ್ಮದ್ ಹುಝೈಫ್ ನಾಪತ್ತೆ

ಉಳ್ಳಾಲ : ಮಾಸ್ತಿ ಕಟ್ಟೆ ಆಝಾದ್ ನಗರದ ನಿವಾಸಿ ಉಸ್ಮಾನ್  ಫಯಾಜ್ ಎಂಬವರ  ಮಗ ವಿದ್ಯಾರ್ಥಿ  ಮೊಹಮ್ಮದ್ ಹುಝೈಫ್ (16ವ ) ಆಗಸ್ಟ್ 29 ರಂದು ಸಂಜೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ

 ಹುಡುಗನ ಬಗ್ಗೆ ಮಾಹಿತಿ ದೊರೆತಲ್ಲಿ ಉಳ್ಳಾಲ  ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸುವಂತೆ ಅಥವಾ ಕೆಳಗಿನ  ಮೊಬೈಲ್ ನಂಬರಿಗೆ  ಮಾಹಿತಿ ಕೊಟ್ಟು ಸಹಕರಿಸಬೇಕಾಗಿ ವಿನಂತಿ.

9845227231  9886588985

ಬೆಂಗಳೂರಲ್ಲಿ ಒಂದೇ ಮನೆಗೆ 21 ಬ್ಯಾಂಕ್ ಗಳಿಂದ ಸಾಲ ಪಡೆದ ಭೂಪ: ಹರಾಜಿ ಗೆ ಬ್ಯಾಂಕ್ ಗಳಿಂದ ಪೈಪೋಟಿ

Posted by Vidyamaana on 2024-02-18 20:36:42 |

Share: | | | | |


ಬೆಂಗಳೂರಲ್ಲಿ ಒಂದೇ ಮನೆಗೆ 21 ಬ್ಯಾಂಕ್ ಗಳಿಂದ ಸಾಲ ಪಡೆದ ಭೂಪ: ಹರಾಜಿ ಗೆ ಬ್ಯಾಂಕ್ ಗಳಿಂದ ಪೈಪೋಟಿ

ಬೆಂಗಳೂರು : ನಗರದಲ್ಲಿ ಒಂದೇ ಮನೆಗೆ ಒಂದು ಬ್ಯಾಂಕ್ ನಿಂದ ಲೋನ್ ಸಿಗೋದೇ ಕಷ್ಟ. ಹೀಗಿರುವಾಗ ಒಂದೇ ಮನೆಗೆ ಬರೋಬ್ಬರಿ 21 ಬ್ಯಾಂಕ್ ಗಳಿಂದ ಕೋಟ್ಯಂತರ ಸಾಲವನ್ನು ವ್ಯಕ್ತಿಯೊಬ್ಬ ಪಡೆದಿದ್ದಾರೆ. ಆ ಬಳಿಕ ಬ್ಯಾಂಕ್ ಗಳಿಗೆ ಸಾಲ ಕಟ್ಟಲಾಗದೇ, ಪರಾರಿಯಾಗಿದ್ದಾನೆ. ಇಂತಹ ಮನೆಯನ್ನು ಹರಾಜು ಹಾಕೋದಕ್ಕಾಗಿ 21 ಬ್ಯಾಂಕ್ ಗಳು ಪೈಪೋಟಿ ಕೂಡ ನಡೆಸಿರೋ ಘಟನೆ ನಡೆದಿದೆ.ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರಿನ ನಂಜುಂಡಪ್ಪ ಲೇಔಟ್ ನಲ್ಲಿನ ನಂಜುಂಡಯ್ಯ ಎಂಬುವರು ತಮ್ಮ ಒಂದೇ ಮನೆಯ ಮೇಲೆ 21 ಬ್ಯಾಂಕ್ ಗಳಿಂದ 5 ಕೋಟಿಗೂ ಹೆಚ್ಚು ಸಾಲ ಪಡೆದಿದ್ದಾರೆ. ಸಾಲ ಕಟ್ಟದ ಕಾರಣ, ನಂಜುಂಡಯ್ಯ ಮನೆಗೆ 21 ಬ್ಯಾಂಕ್ ಗಳು ಮನೆ ಹರಾಜು ಹಾಕೋ ಬಗ್ಗೆ ನೋಟಿಸ್ ಅಂಟಿಸಿದ್ದಾರೆ.


ಸಾಲ ಕಟ್ಟಲಾಗದೇ ಮನೆಗೆ ಬೀಗ ಹಾಕಿಕೊಂಡು ನಂಜುಂಡಯ್ಯ ಪರಾರಿಯಾಗಿದ್ದು, ಈಗ ನಾ ಮುಂದು, ತಾ ಮುಂದೆ ಎನ್ನುವಂತೆ ಬ್ಯಾಂಕ್ ಗಳು ನಂಜುಂಡಯ್ಯ ಮನೆಯನ್ನು ಹರಾಜು ಮಾಡೋದಕ್ಕೆ ತುದಿಗಾಲಲ್ಲಿ ನಿಂತಿವೆ.


ಒಂದು ಮನೆಗೆ ಒಂದು ಬಾರಿಗೆ ಸಾಲ ಕೊಡುವುದಕ್ಕೆ ವಿವಿಧ ದಾಖಲೆ ಪತ್ರಗಳನ್ನು ಹತ್ತಾರು ಬಾರಿ ಪಡೆದು, ಪರಿಶೀಲಿಸೋ ಬ್ಯಾಂಕ್ ಗಳು ಮಾತ್ರ, ನಂಜುಂಡಯ್ಯಗೆ 21 ಬ್ಯಾಂಕ್ ಗಳು ಸಾಲ ಕೊಟ್ಟಿದ್ದು ಹೇಗೆ ಎಂಬ ಅನುಮಾನ ಈಗ ಕಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಿಟಿ ಬಸ್ ಚಾಲಕನ ಧಾವಂತ ; ಬಸ್ಸಿನ ಬಾಗಿಲಲ್ಲಿದ್ದ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟು ಸಾವು !

Posted by Vidyamaana on 2023-08-30 06:28:04 |

Share: | | | | |


ಸಿಟಿ ಬಸ್ ಚಾಲಕನ ಧಾವಂತ ; ಬಸ್ಸಿನ ಬಾಗಿಲಲ್ಲಿದ್ದ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟು ಸಾವು !

ಮಂಗಳೂರು: ಖಾಸಗಿ ಬಸ್ಸಿನ ಬಾಗಿಲಿನಲ್ಲಿ ನೇತಾಡುತ್ತಿದ್ದ ಬಸ್ ಕಂಡಕ್ಟರ್ ಹೊರಕ್ಕೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಗರದ ನಂತೂರು ವೃತ್ತದಲ್ಲಿ ನಡೆದಿದೆ. 


ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು 15 ನಂಬರಿನ ಬಸ್ ಕದ್ರಿ ಕೆಪಿಟಿಯಿಂದ ಬಂದು ನಂತೂರು ವೃತ್ತದಲ್ಲಿ ಸಡನ್ ತಿರುವು ಪಡೆದಿದ್ದು ಎದುರಿನ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಕೆಳಕ್ಕೆ ಎಸೆಯಲ್ಪಟ್ಟಿದ್ದಾನೆ. ಬಸ್ ನಿರ್ವಾಹಕನಾಗಿದ್ದ ಮೂಲತಃ ಬಾಗಲಕೋಟ ಜಿಲ್ಲೆಯ ನಿವಾಸಿ, ಸದ್ಯ ಸುರತ್ಕಲ್ ತಡಂಬೈಲ್ ನಲ್ಲಿ ವಾಸವಿದ್ದ ಈರಯ್ಯ (23) ನೇರವಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದು ಕೂಡಲೇ ಅಲ್ಲಿದ್ದ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ರಾತ್ರಿ 8 ಗಂಟೆ ಸುಮಾರಿಗೆ ಯುವಕ ಸಾವನ್ನಪ್ಪಿದ್ದಾನೆ. ಇದರ ವಿಡಿಯೋ ಎದುರಿನ ವಾಹನದಲ್ಲಿದ್ದ ಫ್ರಂಟ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಅದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ ವೇಗವಾಗಿ ಚಲಿಸಿದ್ದರಿಂದಲೇ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಲೆಕ್ಷನ್ ಮಾಡುವ ಮತ್ತು ಟೈಮ್ ಕೀಪಿಂಗ್ ಭರದಲ್ಲಿ ನಗರದ ಖಾಸಗಿ ಬಸ್ ನಿರ್ವಾಹಕರು, ಚಾಲಕರು ಎರ್ರಾಬಿರ್ರಿಯಾಗಿ ವರ್ತಿಸುತ್ತಿದ್ದು ಬಸ್ಸಿನಲ್ಲಿ ಸಿಬಂದಿಯಾಗಿದ್ದ ಯುವಕನೊಬ್ಬ ಬಲಿಯಾಗಿದ್ದಾನೆ.

ವೃದ್ಧಾಪ್ಯ ವೇತನ 1,200 ರೂ.ನಿಂದ 2,000 ರೂ.ಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ

Posted by Vidyamaana on 2023-10-01 17:24:16 |

Share: | | | | |


ವೃದ್ಧಾಪ್ಯ ವೇತನ 1,200 ರೂ.ನಿಂದ 2,000 ರೂ.ಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಬೆಂಗಳೂರು (ಅ.01): ರಾಜ್ಯದಲ್ಲಿ ವೃದ್ಧಾಪ್ಯ ವೇತನ ಹೆಚ್ಚಳ ಮಾಡುವುದಕ್ಕೆ ಭಾರಿ ಬೇಡಿಕೆಯಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ 2024-25ನೇ ಸಾಲಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನವನ್ನು ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ಬೆಂಗಳೂರಿನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ವಿಶ್ವ ಹಿರಿಯರ ದಿನಾಚರಣೆ ಮಾಡುತ್ತಿದ್ದೆವು. ನಮ್ಮ ಸರ್ಕಾರ ಸಹಾ ಹಿರಿಯ ನಾಗರಿಕರ ದಿನಾಚರಣೆ ಮಾಡ್ತಿದೆ. ನಾಡಿನ ಎಲ್ಲಾ ಹಿರಿಯ ನಾಗರಿಕರಿಕರಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಶುಭಾಶಯ ಕೊರುತ್ತೇನೆ. ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಇದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಂದಿನ ಬಜೆಟ್ ನಲ್ಲಿ ವೃದ್ಧಾಪ್ಯದ ವೇತನ ಹೆಚ್ಚಳ ಮಾಡಿ ಘೋಷಣೆ ಮಾಡ್ತೀನಿ. ಎಷ್ಟು ಅಂತ ಈಗಲೇ ಹೇಳೋದಿಲ್ಲ ಈಗಿರೋದಕ್ಕಿಂತ ಹೆಚ್ಚಳ ಮಾಡ್ತೀವಿ ಎಂದರು.


ನಾಡಿನ ಎಲ್ಲ ವೃದ್ಧರೂ 100 ವರ್ಷಕ್ಕೂ ಹೆಚ್ಚು ಕಾಲ ಬಾಳಿ ಎಂದು ಆಶಿಸುತ್ತೇನೆ. ಬದುಕಿರೋತನಕ ಆರೋಗ್ಯವಾಗಿರಲಿ ಎಂದು ಆಶಿಸುತ್ತೇನೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಅಂದ್ರೆ ಹಿರಿಯರನ್ನ ಗೌರವಿಸೋದು. ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನೋದು ಒಂದು ಭಾಗ. ಬದಿಕಿರೋತನ ನಾವು ಸಾರ್ಥಕ ಜೀವನ ಸಾಗಬೇಕು. ಮನುಷ್ಯರಾಗಿ ಸಾಯುವುದು ಬಹಳ ಮುಖ್ಯವಾಗಿದೆ. ಕುವೆಂಪು ಹೇಳಿದಂತೆ ಎಲ್ಲರೂ ವಿಶ್ವಮಾನವರಾಗಬೇಕು. ಯಾವ ಧರ್ಮದಲ್ಲಿ ಹುಟ್ಟಿರಬಹುದು, ಆ ಧರ್ಮ ಪ್ರೀತಿಸಬೇಕು ಗೌರವಿಸಬೇಕು ಆದ್ರೆ ಇನ್ನೊಂದು ಧರ್ಮವನ್ನ ದ್ವೇಷಿಸಬಾರದು ಎಂದು ತಿಳಿಸಿದರು.


ವೇದಿಕೆಯಲ್ಲೇ ವೃದ್ಧಾಪ್ಯ ವೇತನ ಹೆಚ್ಚಿಸುವಂತೆ ಮನವಿ ಮಾಡಿದ ಸಚಿವೆ: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಕರ್ನಾಟಕದ ಸುಮಾರು 49 ಲಕ್ಷ ವೃದ್ಧರಿಗೆ ಸರ್ಕಾರದಿಂದ ಮಾಸಿಕ 1,200 ರೂ. ವೃದ್ಧಾಪ್ಯ ವೇತನವನ್ನು ನೀಡಲಾಗುತ್ತಿದೆ. ಇದನ್ನು 2,000 ರೂ.ವರೆಗೆ ಹೆಚ್ಚಳಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮನವಿ ಮಾಡಿದರು.

ರಾಜ್ಯದಲ್ಲಿ ಹಿರಿಯರು ನಾಗರಿಕರು 5 ಗ್ಯಾರಂಟಿ ಕೊಟ್ಟಿದ್ದೀರಾ. ಹಾಗೇ ನಮ್ಗೆ ಪೆನ್ಷನ್ ಜಾಸ್ತಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಹೀಗಾಗಿ, ವೇದಿಕೆ ಮೇಲೆಯೇ ನೀವು ಹಿರಿಯರಿದ್ದೀರಾ. ಹಿರಿಯ ನಾಗರಿಕರ ಕಷ್ಟದ ಬಗ್ಗೆಯೂ ತಮಗೆ ಅರಿವಿರುತ್ತದೆ. ಆದ್ದರಿಂದ ವೃದ್ಧಾಪ್ಯ ವೇತನವನ್ನು 2 ಸಾವಿರ ಹೆಚ್ಚಳ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು. ಎಂದು ವೇದಿಕೆಯಲ್ಲಿ ಸಿಎಂಗೆ ಮನವಿ ಮಾಡಿದರು.ಇಂದು ಕೂಡ ನನಗೆ ಅನೇಕ ಹಿರಿಯರು ಬೇಡಿಕೆ ಇಟ್ಟಿದ್ದಾರೆ. ಮಹಿಳೆಯರಿಗೆ 2 ಸಾವಿರ ಕೊಡ್ತಾ ಇದ್ದೀರಾ..? ನಮಗೆ ಪಿಂಚಣಿಯನ್ನ 2 ಕೊಡಿ ಅಂತ ಕೇಳಿದ್ದಾರೆ. ಆಗ ನಾನು ನಾನು ವೇದಿಕೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡ್ತೀನಿ ಎಂದು ಹೇಳಿದ್ದೆನು. ಈಗ 49 ಲಕ್ಷ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಮಾಸಿಕ ತಲಾ 1,200 ರೂ. ಪಿಂಚಣಿಯನ್ನು ಕೊಡಲಾಗುತ್ತಿದೆ. ಆದರೆ, ದಿನಬಳಕೆ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳ ಬೆಲೆ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಈ ಹಣ ಜೀವನ ನಿರ್ವಹಣೆಗೆ ಸಾಲುವುದಿಲ್ಲ. ಆದ್ದರಿಂದ ಮಾಸಿಕ 1200 ರೂ. ಪಿಂಚಣಿಯನ್ನ 2 ಸಾವಿರಕ್ಕೆ ಏರಿಕೆ ಮಾಡಲು ಮನವಿ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವೆ ಹೆಬ್ಬಾಳ್ಕರ್‌ ತಿಳಿಸಿದರು.

Recent News


Leave a Comment: