ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಶಾಪಿಂಗ್ ವೇಳೆ ಮಾಲ್ ನಲ್ಲಿ ಕುಸಿದು ಬಿದ್ದ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಪತ್ನಿ!

Posted by Vidyamaana on 2024-09-01 09:05:23 |

Share: | | | | |


ಶಾಪಿಂಗ್ ವೇಳೆ ಮಾಲ್ ನಲ್ಲಿ ಕುಸಿದು ಬಿದ್ದ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಪತ್ನಿ!

ಬೆಂಗಳೂರು : ನಗರದಲ್ಲಿ ಶಾಪಿಂಗ್ ಗೆ ತೆರಳಿದ್ದಂತ ವೇಳೆಯಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ಮಾಜಿ ಕೇಂದ್ರ ಸಚಿವ ಸದಾನಂದಗೌಡ ಅವರ ಪತ್ನಿ ಡಾಟಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಧಾರವಾಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಿಂದ 1.24 ಕೋಟಿ ಕಳವು ಪ್ರಕರಣ

Posted by Vidyamaana on 2023-11-02 11:08:25 |

Share: | | | | |


ಧಾರವಾಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಿಂದ 1.24 ಕೋಟಿ ಕಳವು ಪ್ರಕರಣ

ಧಾರವಾಡ  : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ (ಎಸ್‌ಕೆಡಿಆರ್‌ಪಿಡಿ) ಯೋಜನಾ ಕಚೇರಿಯಲ್ಲಿ ಕೋಟ್ಯಾಂತರ ನಗದು ಕಳ್ಳತನ ನಡೆದಿರುವ ಘಟನೆ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾಪೂರದಲ್ಲಿ ನಡೆದಿದೆ. ವಿಜಯದಶಮಿ ದಿನದಂದು ನಡೆದ ಈ ಪ್ರಕರಣವನ್ನು ಇದೀಗ ಪೊಲೀಸರು ಭೇದಿಸಿದ್ದು, ಒಟ್ಟು 10 ಜನರನ್ನು ಬಂಧಿಸಲಾಗಿದೆ.ಈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹೇಳಿದ್ದಾರೆ.


ಇಲ್ಲಿಯ ವಿದ್ಯಾಗಿರಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಕೆಡಿಆರ್‌ಡಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರು (23), ನವಲಗುಂದದ ಕಳ್ಳಿಮಠ ಓಣಿಯ ಬಸವರಾಜ ಶೇಖಪ್ಪ ಬಾಬಜಿ (34), ಮಹಾಂತೇಶ ಲಕ್ಷ್ಮಣ ಹಿರಗಣ್ಣವರ (27) ಹಾಗೂ ನವಲಗುಂದದ ಜಿಲಾನಿ ಬವರಸಾಬ ಜಮಾದಾರ (25), ಪರಶುರಾಮ ಹನುಮಂತಪ್ಪ ನೀಲಪ್ಪಗೌಡ್ರ (34), ಭೋವಿ ಓಣಿಯ ರಂಗಪ್ಪ ನಾಗಪ್ಪ ಗುಡಾರದ (31), ಮಂಜುನಾಥ ಯಮನಪ್ಪ ಭೋವಿ(22), ಕುಂಬಾರ ಓಣಿಯ ಕಿರಣ ಶರಣಪ್ಪ ಕುಂಬಾರ,ಆರ್ಮಿ ಕಾಲನಿಯ ರಜಾಕ ಅಹ್ಮದ ಅಲ್ಲಾವುದ್ದೀನ ಮುಲ್ಲಾನವರ (31), ವಿದ್ಯಾರ್ಥಿ ಆಗಿರುವ ವಿರೇಶ ಸಿದ್ದಪ್ಪ ಚವಡಿ (20) ಬಂಧಿತರು. ಈ ಆರೋಪಿಗಳಿಂದ ಈವರೆಗೆ 79,89,870 ರೂ. ನಗದು, ಕೃತ್ಯಕ್ಕೆ ಬಳಸಿದ ಸ್ವಿಪ್ಟ ಡಿಸೈರ್ ಕಾರು, ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೆÊಲ್ ಸೇರಿದಂತೆ ಒಟ್ಟು 85,89,870 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.


ಎಸ್‌ಕೆಡಿಆರ್‌ಪಿಡಿ ವತಿಯಿಂದ ದಿನನಿತ್ಯ ಸಂಗ್ರಹಿಸುತ್ತಿದ್ದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗುತ್ತದೆ. ಆದರೆ ವಿಜಯದಶಮಿ ಪ್ರಯುಕ್ತ ರಜೆ ಹಿನ್ನಲೆಯಲ್ಲಿ ಕಚೇರಿಯಲ್ಲಿಯೇ 1,24,48,087 ರೂ. ನಗದು ಹಣವನ್ನು ಇರಿಸಲಾಗಿತ್ತು. ಕಚೇರಿಯ ಭದ್ರತಾ ಕೊಠಡಿಯ ಭದ್ರತಾ ಲಾಕರ್‌ಗಳಲ್ಲಿ ಇರಿಸಲಾಗಿದ್ದ ಈ ಹಣವನ್ನು ಆಯುಧಗಳಿಂದ ಮೀಟಿ ಅದರಲ್ಲಿದ್ದ ಹಣವನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅ.24 ರಂದು ದೂರು ದಾಖಲಾಗಿತ್ತು.

ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ

Posted by Vidyamaana on 2024-03-27 14:09:19 |

Share: | | | | |


ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ

ಬೆಂಗಳೂರು: ಬಿಜೆಪಿ ಪಕ್ಷದ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿಗೌಡ ರಮೇಶ್‌ಗೌಡ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಸ್ಪೀಕರ್ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ತೇಜಸ್ವಿನಿ ಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಹೊರಟ್ಟಿ ಅವರು, ಬಿಜೆಪಿಯ ತೇಜಸ್ವಿನಿಗೌಡ ರಮೇಶ್‌ಗೌಡ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳಿಂದ‌ ರಾಜೀನಾಮೆ ನೀಡುತ್ತಿದ್ದೇನೆ ಎಂದು‌ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


ತೇಜಸ್ವಿನಿ ರಮೇಶ್ ಅವಧಿ‌ ಜೂನ್‌ವರೆಗೂ ಇತ್ತ, ಅವರೇ ಖುದ್ದು ಹಾಜರಾಗಿ ರಾಜೀನಾಮೆ ಕೊಟ್ಟ ಕಾರಣ ಸ್ವೀಕಾರ ಮಾಡಿದ್ದೇನೆ. ಯಾರೇ ಶಾಸಕರು ರಾಜೀನಾಮೆ ನೀಡಿದರೂ ನಮಗೆ ಮನವರಿಕೆ ಆದ ಮೇಲೆ ಸ್ವೀಕಾರ ಮಾಡೋದು, ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿ, ಒತ್ತಡಗಳಿಗೆ ಒಳಗಾಗಿ ರಾಜೀನಾಮೆ ಕೊಡಬಹುದು. ಹೀಗಾಗಿ ಸ್ವಲ್ಪ ಸಮಯವಕಾಶ ನೀಡಿ ಆ ಬಳಿಕ ರಾಜೀನಾಮೆ ಸ್ವೀಕಾರ ಮಾಡ್ತೀವಿ ಎಂದು ಸ್ಪೀಕರ್ ತಿಳಿಸಿದ್ದಾರೆ.ಮೈಸೂರು ಕೊಡಗು ಕ್ಷೇತ್ರದಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಬಿಜೆಪಿಗೆ ಗುಡ್ ಬೈ ಹೇಳಲು ತೇಜಸ್ವಿನಿಗೌಡ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಿಯೇ ತಮ್ಮ ಎಂಎಲ್​ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಉಡುಪಿ ತಾಯಿ ಮಕ್ಕಳ ಹತ್ಯೆ: ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಚಾರಣೆ ನಡೆಸಲು ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಸಚಿವರಿಗೆ ಮನವಿ

Posted by Vidyamaana on 2023-12-01 10:40:43 |

Share: | | | | |


ಉಡುಪಿ ತಾಯಿ ಮಕ್ಕಳ ಹತ್ಯೆ: ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಚಾರಣೆ ನಡೆಸಲು ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಸಚಿವರಿಗೆ ಮನವಿ

ಉಡುಪಿ: ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂರು ಮಕ್ಕಳ ಬರ್ಬರ ಕೊಲೆ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಚಾರಣೆ ನಡೆಸಬೇಕು. ಹಂತಕನಿಗೆ ಗರಿಷ್ಠ ಪ್ರಮಾಣದ ಕಠಿಣ ಶಿಕ್ಷೆಯಾಗಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮೂಲಕ ಕಾನೂನು ಸಚಿವರಿಗೆ ಮನವಿ ಸಲ್ಲಿಸಿದೆ. ಇದೇ ಸಮಯದಲ್ಲಿ ಬಳಿಕ ಆರೋಪಿಯನ್ನು ಕೃತ್ಯ ನಡೆದ 2 ದಿನಗಳಲ್ಲಿ ಬಂಧಿಸಿದ ಪೊಲೀಸರ ಶ್ರಮ ಶ್ಲಾಘಿಸಿದ ವೇದಿಕೆ, ಎಸ್‌ಪಿ ಅರುಣ್ ಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ. ಬಳಿಕ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ನಿಯೋಗ ಅವರಿಗೆ ಸಾಂತ್ವನ ಹೇಳಿದೆ.


ಮುಸ್ಲಿಂ ಸಾಹಿತಿಗಳು ಲೇಖಕರು, ಚಿಂತಕರ ವೇದಿಕೆಯಾದ ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ, ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್, ಝಮೀರ್ ಅಹ್ಮದ್ ರಶಾದಿ, ಇಬ್ರಾಹಿಂ ಸಾಹೇಬ್ ಕೋಟ, ಮುಹಮ್ಮದ್ ಇರ್ಫಾನಿ, ನಜೀರ್ ಬೆಳವಾಯಿ, ಅಶ್ರಫ್ ಕುಂದಾಪುರ, ಇಕ್ಬಾಲ್ ಹಾಲಾಡಿ, ರಫೀಕ್ ನಾಗೂರು, ಅಬ್ದುಲ್ ರೌಫ್, ತೌಫೀಕ್ ಗಂಗೊಳ್ಳಿ, ಅಸ್ಲಮ್ ಹೈಕಾಡಿ, ಉಸ್ಮಾನ್ ಹೈಕಾಡಿ, ಆರ್.ಎ.ಲೋಹಾನಿ, ಮುಹಮ್ಮದ್ ಮುಹಸೀನ್ ಇದ್ದರು.

ಬ್ಯಾಂಕ್‌ನಿಂದ ಕಿರುಕುಳ ಆರೋಪ; ವಿಕಾಸಸೌಧದೆದುರು ದಂಪತಿಯಿಂದ ಆತ್ಮಹತ್ಯೆ ಹೈಡ್ರಾಮಾ

Posted by Vidyamaana on 2024-01-10 20:26:23 |

Share: | | | | |


ಬ್ಯಾಂಕ್‌ನಿಂದ ಕಿರುಕುಳ ಆರೋಪ; ವಿಕಾಸಸೌಧದೆದುರು ದಂಪತಿಯಿಂದ ಆತ್ಮಹತ್ಯೆ ಹೈಡ್ರಾಮಾ

ಬೆಂಗಳೂರು: ಖಾಸಗಿ ಬ್ಯಾಂಕ್‌ನಲ್ಲಿ (Private Bank) ಪಡೆದುಕೊಂಡಿದ್ದ ಸಾಲಕ್ಕೆ ದುಪ್ಪಟ್ಟು ಹಣ ಕಟ್ಟಿದರೂ ಕಿರುಕುಳ ನಿಂತಿಲ್ಲ ಎಂದು ಆರೋಪಿಸಿ ಕುಟುಂಬವೊಂದು ವಿಕಾಸಸೌಧದ ಮುಂದೆ ಆತ್ಮಹತ್ಯೆಗೆ (Self Harming) ಯತ್ನಿಸಿದೆ. ಕೂಡಲೇ ಅವರನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದಿದ್ದಾರೆ.ವಿಕಾಸಸೌಧದ ಮುಂದೆ ಬಂದಿದ್ದ ಶಾಯಿಸ್ತಾ ಬಾನು ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿ ಏಕಾಏಕಿ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದಾರೆ.

ತಮಗೆ ಅನ್ಯಾಯವಾಗಿದೆ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೂಗಿಕೊಡಿದ್ದಾರೆ. ಆದರೆ, ಅಷ್ಟರಲ್ಲಿ ವಿಕಾಸಸೌಧದ ಕಾವಲಿಗೆ ಇದ್ದ ಪೊಲೀಸರು ಅವರನ್ನು ತಡೆದಿದ್ದು, ರಕ್ಷಣೆ ಮಾಡಿದ್ದಾರೆ.


ಏನಿದು ಪ್ರಕರಣ?

ಜೆಜೆ ನಗರದಲ್ಲಿ ಶಾಯಿಸ್ತಾ ಬಾನು ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿಯ ಮನೆಯ ಇದೆ. ಈ ಮನೆ ಮೇಲೆ 50 ಲಕ್ಷ ರೂಪಾಯಿ ಸಾಲವನ್ನು ಈ ಕುಟುಂಬವು ಪಡೆದಿದೆ ಎನ್ನಲಾಗಿದೆ. ಈ ಸಾಲಕ್ಕೆ ಈಗ ಬಡ್ಡಿ ಸೇರಿ ಒಟ್ಟು 97 ಲಕ್ಷ ರೂಪಾಯಿಯನ್ನು ಕಟ್ಟಿದರೂ ಬ್ಯಾಂಕ್‌ನಿಂದ ಕಿರುಕುಳ ತಪ್ಪಿಲ್ಲ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ತಮಗೆ ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಮೇಲೆ ಕೇಸ್ ದಾಖಲು

ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಮೇಲೆ ಈಗ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಐಪಿಸಿ 309 (ಆತ್ಮಹತ್ಯೆಗೆ ಯತ್ನ) ಹಾಗೂ ಐಪಿಸಿ 290 (ಸಾರ್ವಜನಿಕ ಸ್ಥಳಗಳಲ್ಲಿ ದುರ್ವರ್ತನೆ ) ಅಡಿ ಕೇಸ್ ದಾಖಲಾಗಿದೆ. ಶಾಯಿಸ್ತಾ ಬಾನು ಹಾಗು ಮೊಹಮದ್ ಮುನಾಯಿದ್ ಉಲ್ಲಾ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಆ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಠಾಣಾ ಜಾಮೀನಿನ ಮೇಲೆ ಅವರನ್ನು ಪೊಲೀಸರು ಬಿಡುಗಡೆ ಮಾಡಿ ಕಳುಹಿಸಿದ್ದಾರೆ

ಶಿವಮೊಗ್ಗ: ಬೆಚ್ಚಿಬೀಳಿಸಿದ ಒಂಟಿ ಮಹಿಳೆ ಕೊಲೆ

Posted by Vidyamaana on 2023-06-18 07:17:48 |

Share: | | | | |


ಶಿವಮೊಗ್ಗ: ಬೆಚ್ಚಿಬೀಳಿಸಿದ ಒಂಟಿ ಮಹಿಳೆ ಕೊಲೆ

ಶಿವಮೊಗ್ಗ: ಇಲ್ಲಿನ ವಿಜಯ ನಗರ 2ನೇ ತಿರುವಿನಲ್ಲಿರುವ ಮನೆಯಯೊಂದರಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ನಗರವನ್ನೇ ಬೆಚ್ಚಿ ಬೀಳಿಸಿದೆ.ಕಮಲಮ್ಮ (54) ಕೊಲೆಯಾದ ಮಹಿಳೆ. ಮನೆಯಲ್ಲಿ ಬೇರೆ ಯಾರೂ ಇರದ ಸಮಯದಲ್ಲಿ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.ಕಮಲಮ್ಮ ಅವರು ಚಿಕ್ಕಮಗಳೂರಿನ ತರೀಕೆರೆ ಅಜ್ಜಂಪುರದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನ ಅವರ ಪತ್ನಿ. ಮಲ್ಲಿಕಾರ್ಜುನ ಅವರು ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದರು. ಶನಿವಾರ ಸಂಜೆ ಮನೆಯಲ್ಲಿ ಕಮಲಮ್ಮ ಒಬ್ಬರೇ ಇದ್ದಾಗ ಕೃತ್ಯ ಎಸೆಯಲಾಗಿದೆ.ಮಲ್ಲಿಕಾರ್ಜುನ ಅವರು ಪತ್ನಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅಕ್ಕಪಕ್ಕದರಿಗೆ ಕರೆ ಮಾಡಿದ್ದಾರೆ. ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Recent News


Leave a Comment: