ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಕೆ ಗೆ ಅನುಮತಿ ನೀಡಿದ ಜಿಲ್ಲಾ ನ್ಯಾಯಾಲಯ

Posted by Vidyamaana on 2024-01-31 16:02:09 |

Share: | | | | |


ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಕೆ ಗೆ ಅನುಮತಿ ನೀಡಿದ ಜಿಲ್ಲಾ ನ್ಯಾಯಾಲಯ

ಜ್ಞಾನವಾಪಿ ಮಸೀದಿಯಲ್ಲಿ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮಸೀದಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಮಸೀದಿಯ ಕೆಳಗಿರುವ 10 ಮೊಹರು ನೆಲಮಾಳಿಗೆಗಳಲ್ಲಿ ಹಿಂದೂ ಪೂಜೆಗಳು ಇನ್ನು 7 ದಿನಗಳಲ್ಲಿ ಪ್ರಾರಂಭವಾಗಲಿವೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

“ಹಿಂದೂ ಕಡೆಯವರು ‘ವ್ಯಾಸ್ ಕಾ ತೆಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದಾರೆ. ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ. ಜಿಲ್ಲಾಡಳಿತ 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಿದೆ” ಎಂದು ಹಿಂದೂ ಪರ ಅರ್ಜಿದಾರರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪುರಾತತ್ವ ಇಲಾಖೆ ಮಸೀದಿಯಲ್ಲಿ ಸರ್ವೆ ನಡೆಸಿತ್ತು. ಅದರ ವರದಿಯು ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು.

ಚೀನಾದ ನ್ಯೂಮೋನೀಯ ಪರಿಣಾಮ : ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ

Posted by Vidyamaana on 2023-11-26 20:08:05 |

Share: | | | | |


ಚೀನಾದ ನ್ಯೂಮೋನೀಯ ಪರಿಣಾಮ : ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ

ದೆಹಲಿ : ಚೀನಾದಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ಸನ್ನದ್ಧತೆಯ ಕ್ರಮಗಳನ್ನು ತತ್ ಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಸರಕಾರ ಇಂದು ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ಚೀನಾದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದ್ದು, ಸದ್ಯಕ್ಕೆ ಯಾವುದೇ ಎಚ್ಚರಿಕೆಗೆ ಯಾವುದೇ ಕಾರಣವಿಲ್ಲ" ಎಂದು ಒತ್ತಿ ಹೇಳಿದೆ.ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರ ಬರೆದಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಔಷಧಗಳು ಮತ್ತು ಇನ್ಫ್ಲುಯೆನ್ಸಕ್ಕೆ ಲಸಿಕೆಗಳು, ವೈದ್ಯಕೀಯ ಆಮ್ಲಜನಕ, ಪ್ರತಿಜೀವಕಗಳು, ವೈಯಕ್ತಿಕ ರಕ್ಷಣ ಸಾಧನಗಳು, ಆಮ್ಲಜನಕ ಸ್ಥಾವರಗಳು ಮತ್ತು ವೆಂಟಿಲೇಟರ್‌ಗಳ ಕಾರ್ಯವೈಖರಿ, ಆರೋಗ್ಯ ಸೌಲಭ್ಯಗಳಲ್ಲಿನ ಸೋಂಕು ನಿಯಂತ್ರಣ ಅಭ್ಯಾಸಗಳು,ಪರೀಕ್ಷಾ ಕಿಟ್‌ಗಳಂತಹ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ನೀಡಿದೆ. ಸಣ್ಣ ಮಕ್ಕಳಲ್ಲಿ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ(ವಾಕಿಂಗ್‌ ನ್ಯುಮೋನಿಯಾ) ಸಾಮಾನ್ಯ ಬ್ಯಾಕ್ಟೀರಿಯಾ ಆಧಾರಿತ ಸಮಸ್ಯೆ ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಬೀಜಿಂಗ್‌ ಮತ್ತು ಲಿಯನಾನಿಂಗ್‌ ಪ್ರಾಂತ್ಯಗಳ ಆಸ್ಪತ್ರೆಗಳಲ್ಲಿ ಮಕ್ಕಳು ಚಿಕಿತ್ಸೆಗೆ ಆಗಮಿಸುವ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೊಸ ಸಮಸ್ಯೆಗೆ ಕಾರಣ ಏನು ಎಂಬ ಬಗ್ಗೆ ಅಲ್ಲಿನ ಸರಕಾರ ಸ್ಪಷ್ಟನೆ ನೀಡಿಲ್ಲವಾಗಿದೆ.

ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

Posted by Vidyamaana on 2024-08-13 07:51:26 |

Share: | | | | |


ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

ಪಾಟ್ನಾ: ವಿಮಾನ ನಿಲ್ದಾಣದ ರನ್ ವೇ ನಲ್ಲಿಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳು ಕಾದಾಡಿರುವ ವಿಡಿಯೋ ವೈರಲ್ ಆಗುತ್ತಿದೆ.ಹಾವು ಮತ್ತು ಮುಂಗುಸಿ ಜೈವಿಕವಾಗಿ ಬದ್ಧವೈರಿಗಳು.. ಇವುಗಳ ಕದನ ಮನುಷ್ಯಕ ಕಣ್ಣಿಗೆ ಕಾಣಸಿಗುವುದು ಅಪರೂಪ. ಆದರೆ ಬಿಹಾರ ರಾಜಧಾನಿ ಪಾಟ್ನಾದ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಇಂತಹ ಅಪರೂಪದ ದೃಶ್ಯ ಕಂಡಿದೆ.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

Posted by Vidyamaana on 2024-07-01 19:16:06 |

Share: | | | | |


ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬೆಂಗಳೂರು ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು

ಇನ್ಟ್ರಾಗ್ರಾಮ್ ಪೋಸ್ಟ್ ಮಾಡಿದ ದರ್ಶನ್ ಪತ್ನಿ

Posted by Vidyamaana on 2024-06-20 08:02:42 |

Share: | | | | |


ಇನ್ಟ್ರಾಗ್ರಾಮ್ ಪೋಸ್ಟ್ ಮಾಡಿದ ದರ್ಶನ್ ಪತ್ನಿ

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ಬಳಿಕ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಅಸತ್ಯಗಳನ್ನು ಪ್ರಕಟಿಸಬೇಡಿ ಎಂದು ಮಾಧ್ಯಮಗಳಲ್ಲಿ ವಿನಂತಿಸಿದ್ದಾರೆ.

ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬದವರಿಗೆ ಸಂತಾಪ ಸೂಚಿಸಿದ್ದ ವಿಜಯಲಕ್ಷ್ಮಿ, ತಾಯಿ ಚಾಮುಂಡೇಶ್ವರಿ ಹಾಗೂ ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ. ಸತ್ಯಾಸತ್ಯತೆ ಆದಷ್ಟು ಬೇಗ ಹೊರಬರಲಿ, ಸತ್ಯಮೇವ ಜಯತೆ ಎಂದು ಬರೆದಿದ್ದಾರೆ.

ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

Posted by Vidyamaana on 2023-07-08 14:27:30 |

Share: | | | | |


ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

ಸೂರತ್: ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಗಡಿ ಭದ್ರತಾ ಪಡೆ (BSF) ನೌಕರನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆಬಂಧಿತ ಆರೋಪಿ ನೀಲೇಶ್ ಬಾಲಿಯಾ ಕಳೆದ ಐದು ವರ್ಷಗಳಿಂದ ಬಿಎಸ್‌ಎಫ್‌ನ ಭುಜ್ ಪ್ರಧಾನ ಕಚೇರಿಯಲ್ಲಿ ಸಿಪಿಡಬ್ಲ್ಯೂಡಿಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.2023 ರ ಜನವರಿಯಲ್ಲಿ ಪಾಕಿಸ್ಥಾನದ ಮಹಿಳಾ ಗುಪ್ತಚರ ಏಜೆಂಟ್ ಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ

Recent News


Leave a Comment: