ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್ ಸಂಶಯಾಸ್ಪದ ಮೃತ್ಯು

Posted by Vidyamaana on 2024-03-31 13:44:12 |

Share: | | | | |


ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್ ಸಂಶಯಾಸ್ಪದ ಮೃತ್ಯು

ಬ್ರಹ್ಮಾವರ , ಮಾ.31: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬವರ ಮೃತದೇಹವು ಮಾ.29ರಂದು ಮಧ್ಯಾಹ್ನ ಉಪ್ಪೂರು ಮಾಯಾಡಿ ಎಂಬಲ್ಲಿರುವ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.ರಿಕ್ಷಾ ಚಾಲಕ ವೃತ್ತಿ ಹಾಗೂ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇವರು ಮಾ.27ರಂದು ರಾತ್ರಿ ಮನೆಯಿಂದ ರಿಕ್ಷಾದಲ್ಲಿ ಹೋಗಿದ್ದರು.ಬಳಿಕ ಹುಡು ಕಾಡಿದಾಗ ಮನೆ ಬಳಿಯ ಮೈದಾನದ ಸಮೀಪ ಇವರ ರಿಕ್ಷಾ ಪತ್ತೆಯಾಗಿತ್ತು. 

ಬಸ್ ನಿಲ್ದಾಣ ಮುಂಭಾಗ ಬಸ್ ಆಮ್ನಿ ಅಪಘಾತ

Posted by Vidyamaana on 2023-07-27 05:52:10 |

Share: | | | | |


ಬಸ್ ನಿಲ್ದಾಣ ಮುಂಭಾಗ ಬಸ್ ಆಮ್ನಿ ಅಪಘಾತ

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಬಸ್ ಹಾಗೂ ಆಮ್ನಿ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದ್ದು, ಘಟನೆಗೆ ಕೆ.ಎಸ್.ಆರ್.ಟಿ.ಸಿ.ಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.

ಪುತ್ತೂರು ಕೆ.ಎಸ್.ಆರ್.ಟಿ.ಸಿ. ಮುಂಭಾಗ ತೀರಾ ಇಕ್ಕಟ್ಟಿನ ರಸ್ತೆ. ಹಾಗಿದ್ದು, ಕೆ.ಎಸ್.ಆರ್.ಟಿ.ಸಿ. ಮುಂಭಾಗ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ಇನ್ನಷ್ಟು ಸಮಸ್ಯೆಗೆ ಕಾರಣರಾಗಿದ್ದಾರೆ. ಇದರ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ, ಸ್ಪಂದಿಸದೇ ಇರುವುದು ಘಟನೆಗೆ ಕಾರಣ.

ಕೆ.ಎಸ್.ಆರ್.ಟಿ.ಸಿ. ಮುಂಭಾಗ ನಾಲ್ಕು ರಸ್ತೆ ಸಂಧಿಸುವ ಪ್ರಮುಖ ಸ್ಥಳ. ಇದರಲ್ಲಿ ಎರಡು ರಸ್ತೆ ವನ್ ವೇ ಆಗಿರುವುದು ಸಮಾಧಾನದ ಸಂಗತಿ. ಹಾಗೆಂದು ವಾಹನಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಹಳೆ ಪೋಸ್ಟ್ ಕಚೇರಿ ಸಂಪರ್ಕಿಸುವ ರಸ್ತೆ, ಮುಖ್ಯರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ, ನೆಲ್ಲಿಕಟ್ಟೆಯಿಂದ ಬರುವ ರಸ್ತೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಬರುವ ರಸ್ತೆ. ಈ ನಾಲ್ಕು ರಸ್ತೆಗಳ ವಾಹನಗಳು ಬಂದು ಸೇರುವ ಜಂಕ್ಷನ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ.

ಇಷ್ಟು ಒತ್ತಡವಿದ್ದರೂ, ಕೆ.ಎಸ್.ಆರ್.ಟಿ.ಸಿ.ಗೆ ಬರುವ ಖಾಸಗಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲ. ಇದ್ದ ಸ್ಥಳವನ್ನು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ಬಂದ್ ಮಾಡಿದ್ದಾರೆ. ಹಾಗೆಂದು ಬಸ್ ಟರ್ಮಿನಲ್ ಒಳಗಡೆಗೆ ಖಾಸಗಿ ವಾಹನಗಳ ಪ್ರವೇಶ ನಿಷಿದ್ಧ. ಹಾಗಾದರೆ ಸಾರ್ವಜನಿಕರು ಬಂದಿಳಿಯಲು ವಾಹನ ನಿಲ್ಲಿಸುವುದು ಎಲ್ಲಿ? ಬಸ್ ಟರ್ಮಿನಲಿನ ಮುಂಭಾಗದ ರಸ್ತೆಯಲ್ಲೇ ನಿಲ್ಲಿಸಬೇಕಷ್ಟೇ. ಹೆಚ್ಚಲ್ಲ, ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಲು ರಸ್ತೆಯಲ್ಲೇ ನಿಲ್ಲಿಸುವುದು ಇಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ.

ಹೀಗಿರುವಾಗ ಮುಂಭಾಗದ ಅಗಲ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು ಓಡಾಡುವುದಾದರೂ ಹೇಗೆ? ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕೇಳಿಯೂ ಕೇಳದಂತೆ, ನೋಡಿಯೂ ನೋಡದಂತೆ ಇರುವುದಾದರೂ ಯಾಕೆ? ಕೆ.ಎಸ್.ಆರ್.ಟಿ.ಸಿ.ಯ ತಪ್ಪು ನಿರ್ಧಾರಕ್ಕೆ ಗುರುವಾರ ಬೆಳಿಗ್ಗೆ ಅಪಘಾತ ನಡೆದಿದ್ದು, ಅಮಾಯಕರು ಕಷ್ಟ ಅನುಭವಿಸುವಂತಾಯಿತು.

ಬ್ಯಾರಿಕೇಡ್ ಹಾಕಿದ್ದಾದರೂ ಯಾಕೆ?

ಕೆ.ಎಸ್.ಆರ್.ಟಿ.ಸಿ. ಮುಂಭಾಗ ಬ್ಯಾರಿಕೇಡ್ ಹಾಕಲು ಒಂದು ಕಾರಣವಿತ್ತು. ಅಂದು ಅವಳಿ ವೀರರಾದ ಕೋಟಿ – ಚೆನ್ನಯರ ಹೆಸರನ್ನು ಟಸ್ ಟರ್ಮಿನಲಿಗೆ ನಾಮಕಾರಣ ಮಾಡುವ ದಿನ. ಸಚಿವರು, ಶಾಸಕರು ಆಗಮಿಸಬೇಕಾಗಿತ್ತು. ಹಾಗೇ ಬರುವಾಗ ನಿಲ್ದಾಣದ ಮುಂಭಾಗ ಒತ್ತಡ ನಿರ್ಮಾಣವಾಯಿತು. ಈ ಒಂದೇ ಕಾರಣಕ್ಕೆ, ಬಸ್ ಟರ್ಮಿನಲ್ ಮುಂಭಾಗ ಬ್ಯಾರಿಕೇಡ್ ಹಾಕಲಾಯಿತು. ಅದನ್ನು ಒಂದು ದಿನಕ್ಕೆ ಸೀಮಿತ ಮಾಡಬಹುದಿತ್ತು. ಆದರೆ ಹಾಗೇ ಮಾಡಲಿಲ್ಲ. ಅದನ್ನೇ ಶಾಶ್ವತವಾಗಿಸುವ ಯೋಜನೆ ಅಧಿಕಾರಿಗಳದ್ದು.

ಕಾನೂನನ್ನು ಬಡವರ ಮೇಲೆ ಹೇರುವ ಅಧಿಕಾರಿಗಳು, ತಮ್ಮ ವ್ಯಾಪ್ತಿಗೆ ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳುವುದು ಮಾತ್ರ ವಿಪರ್ಯಾಸ. ವಾಣಿಜ್ಯ ಸಂಕೀರ್ಣದ ಮುಂಭಾಗದ ಪಾರ್ಕಿಂಗ್ ಜಾಗವನ್ನು ಮುಚ್ಚುವಂತೆಯೇ ಇಲ್ಲ. ಅಥವಾ ತನ್ನ ಗ್ರಾಹಕರಿಗೆ ಮಾತ್ರ ಎಂದು ಬೋರ್ಡ್ ಹಾಕುವಂತೆ ಇಲ್ಲ ಎಂದು ಇತ್ತೀಚೆಗೆ ನ್ಯಾಯಾಲಯ ಸೂಚನೆ ನೀಡಿರುವುದೂ ಕೂಡ ಇಲ್ಲಿ ಉಲ್ಲೇಖನೀಯ.

ಡಿ.4ರಂದು ಅಕ್ಷಯ್ ಕಲ್ಲೇಗರ ವೈಕುಂಠ ಸಮಾರಾಧನೆ ಶ್ರದ್ಧಾಂಜಲಿ ಸಭೆ

Posted by Vidyamaana on 2023-12-04 07:35:24 |

Share: | | | | |


ಡಿ.4ರಂದು ಅಕ್ಷಯ್ ಕಲ್ಲೇಗರ ವೈಕುಂಠ ಸಮಾರಾಧನೆ ಶ್ರದ್ಧಾಂಜಲಿ ಸಭೆ

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಡಿಸೆಂಬರ್ 4ರಂದು ಅವರ ಕಲ್ಲೇಗ ಮನೆಯಲ್ಲಿ ನಡೆಯಲಿದೆ.


ಕಲ್ಲೇಗದ ಚಂದ್ರಶೇಖರ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರನಾಗಿ 1997ರ ಜುಲೈ 1ರಂದು ಜನಿಸಿದ ಅಕ್ಷಯ್ ಕಲ್ಲೇಗ ಅವರು

2018ರಲ್ಲಿ ಕಲ್ಲೇಗ ಟೈಗರ್ಸ್ ತಂಡ ಸ್ಥಾಪಿಸಿದ್ದರು. ಮೊದಲಿಗೆ 15 ಹುಲಿಗಳನ್ನು ಕುಣಿಸುವ ಮೂಲಕ ಆರಂಭಗೊಂಡ ಕಲ್ಲೇಗ ಟೈಗರ್ಸ್ ತಂಡ 2023ರಲ್ಲಿ 6ನೇ ವರ್ಷದ ಪ್ರದರ್ಶನದ ವೇಳೆ 89 ಹುಲಿಗಳ ಪ್ರದರ್ಶನ ನೀಡಿ ಪುತ್ತೂರಿನಲ್ಲಿ ಹುಲಿವೇಷದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು.


ಪುತ್ತೂರಿನ 2ನೇ ಅತೀ ದೊಡ್ಡ ಜಾತ್ರೆ ಎಂದು ಪ್ರಸಿದ್ದಿ ಪಡೆದ ಕಲ್ಲೇಗ ಕಲ್ಕುಡ ದೈವಸ್ಥಾನದ 2022ರ ವಾರ್ಷಿಕ ನೇಮೋತ್ಸವದ ಅಂಗವಾಗಿ ಟೀಮ್ ಕಲ್ಲೇಗ ಟೈಗರ್ಸ್ ಇದರ 4ನೇ ವರ್ಷದ ಪ್ರಯುಕ್ತ ಅಕ್ಷಯ್ ಕಲ್ಲೇಗ ನೇತೃತ್ವದಲ್ಲಿ ಕಲ್ಕುಡ ದೈವಕ್ಕೆ ಸುಮಾರು 2.5 ಲಕ್ಷ ರೂ ಮೌಲ್ಯದ ಬೆಳ್ಳಿಯ ‘ಜಕ್ಕೆಲಣಿ’ ಸಮರ್ಪಣೆ ಮಾಡಲಾಗಿತ್ತು. 2023ರಲ್ಲಿ ಕಲ್ಲೇಗ ಟೈಗರ್ಸ್ ಇದರ 5ನೇ ವರ್ಷದ ಅಂಗವಾಗಿ ಕಲ್ಲುರ್ಟಿ ದೈವಕ್ಕೆ 1.5 ಲಕ್ಷ ರೂ ಮೌಲ್ಯದ ಬೆಳ್ಳಿಯ ‘ಕದ್ರಿಮುಡಿ’ ಸಮರ್ಪಿಸಲಾಗಿತ್ತು.


2023ರಲ್ಲಿ ಟೀಮ್ ಕಲ್ಲೇಗ ಟೈಗರ್ಸ್ ಇದರ 5ನೇ ವರ್ಷದ ಅಂಗವಾಗಿ ಪುತ್ತೂರಿನ ನೆಹರೂನಗರ ಮುಖ್ಯರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ “PURIFIED WATER TANK” ನ್ನು ಕೊಡುಗೆಯಾಗಿ ನೀಡಲಾಗಿತ್ತು. ಇದಲ್ಲದೆ ಹಲವರಿಗೆ ಅಕ್ಷಯ್ ಕಲ್ಲೇಗ ನೇತೃತ್ವದಲ್ಲಿ ರಕ್ತದಾನ, ಅಪಘಾತಗಳಾದಾಗ ಆಸ್ಪತ್ರೆಗೆ ದಾಖಲಿಸುವ ಮಾನವೀಯತೆಯ ಕಾರ್ಯ ಮಾಡಲಾಗಿತ್ತು. 2022 ಹಾಗೂ 2023ರ ದಸರಾ ಸಮಯದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಡೆದ “ಪಿಲಿಪರ್ಬ” ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೆ ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ನಡೆದ “ಪಿಲಿ ರಂಗ್” ಸ್ಪರ್ಧೆಯಲ್ಲಿ 2022ರಲ್ಲಿ ದ್ವಿತೀಯ ಮತ್ತು 2023ರಲ್ಲಿ ಕಲ್ಲೇಗ ಟೈಗರ್ಸ್ ತೃತೀಯ ಸ್ಥಾನ ಪಡೆದಿತ್ತು.


ಈ ವರ್ಷ ಮೊದಲ ಬಾರಿಗೆ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ “ಪುತ್ತೂರ್ದ ಪಿಲಿಗೊಬ್ಬು” ಸ್ಪರ್ಧೆಯಲ್ಲಿ 3ನೇ ಸ್ಥಾನವನ್ನು ಕಲ್ಲೇಗ ಟೈಗರ್ಸ್ ಪಡೆದಿತ್ತು. ಹಲವು ಯುವಕರನ್ನು ಸಂಘಟಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಮನೆ ಮಾತಾಗಿದ್ದ ಅಕ್ಷಯ್ ಕಲ್ಲೇಗ ಅವರ ಚಿಂತನೆಯಂತೆ ಇನ್ನೂ ಹಲವಾರು ಜನಪರ ಕಾರ್ಯಗಳನ್ನು ನಡೆಸಲಾಗುವುದು ಎಂದು ಟೀಮ್ ಕಲ್ಲೇಗ ಟೈಗರ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದು, ಡಿ.4 ರಂದು ಅಕ್ಷಯ್ ಅವರ ಕಲ್ಲೇಗ ಮನೆಯಲ್ಲಿ ನಡೆಯುವ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದೆ.

ಪುತ್ತೂರು : ಇಂದು ಕರೆಂಟ್ ಇಲ್ಲ

Posted by Vidyamaana on 2024-03-28 08:13:50 |

Share: | | | | |


ಪುತ್ತೂರು : ಇಂದು ಕರೆಂಟ್ ಇಲ್ಲ

ಪುತ್ತೂರು: ಉಪ್ಪಿನಂಗಡಿ - ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್ ಪ್ರೆಸ್, ಕಾಂಚನ ಮತ್ತು ವಾಟರ್ ಸಪ್ಪೆ ಫೀಡರ್ ಮತ್ತು 110/33/11ಕೆವಿ ಕಲ್ಲೇರಿ ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಮತ್ತು ಕೆಮ್ಮಾರ ಫೀಡರ್‌ನಲ್ಲಿ ಮಾ.28 ಮ ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:30 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಮತ್ತು 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡ‌ರ್ ಇನ ನಿಂದ ವಿದ್ಯುತ್ ಸರಬರಾಜಾಗುವ ಬಜತ್ತೂರು, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮದ -ರೆ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಮಾ 31. ಜಿ.ಎಲ್. ಮಾಲ್ ನಲ್ಲಿ ಈಜ್ಝಿ ಬೈ ಉದ್ಘಾಟನೆ | ಗ್ರಾಹಕರಿಗೆ ವಿಶೇಷ ಉದ್ಘಾಟನೆಯ ಕೊಡುಗೆಗಳು

Posted by Vidyamaana on 2023-03-30 12:54:46 |

Share: | | | | |


ಮಾ 31.   ಜಿ.ಎಲ್. ಮಾಲ್ ನಲ್ಲಿ ಈಜ್ಝಿ ಬೈ ಉದ್ಘಾಟನೆ | ಗ್ರಾಹಕರಿಗೆ ವಿಶೇಷ ಉದ್ಘಾಟನೆಯ ಕೊಡುಗೆಗಳು

ಪುತ್ತೂರು: ಮಾರುಕಟ್ಟೆಯಲ್ಲಿ ಕುತೂಹಲ ಸೃಷ್ಟಿಸಿರುವ ಈಜ್ಝೀ ಬೈ ಡ್ರೆಸ್ ಮಳಿಗೆ ಮಾರ್ಚ್ ೩೧ರಂದು ಪುತ್ತೂರಿನ ಜಿಎಲ್ ವನ್ ಮಾಲ್ ನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.

ಪುರುಷರ ಉಡುಗೆ, ಮಹಿಳೆಯರ ಉಡುಗೆ, ಮಕ್ಕಳ ಉಡುಗೆ, ಪಾದರಕ್ಷೆಗಳು ಸೇರಿದಂತೆ ಬ್ರಾಂಡೆಡ್ ಉಡುಗೆಗಳು ಈಜ್ಝಿ ಬಯ್ ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅಪರಿಮಿತ ಆಯ್ಕೆಗಳು ಇಲ್ಲಿ ಗ್ರಾಹಕರಿಗೆ ತೆರೆದುಕೊಳ್ಳಲಿದ್ದು, ೬೯ ರೂ.ನಿಂದ ದರ ಆರಂಭಗೊಳ್ಳಲಿದೆ.

ಉದ್ಘಾಟನೆಯ ಕೊಡುಗೆಯಾಗಿ ೧೯೯೯ ರೂ. ಮೌಲ್ಯದ ಖರೀದಿಗೆ ಟ್ರೆಂಡಿ ಡಫಲ್ ಬ್ಯಾಗ್ ಕೇವಲ ರೂ. ೧೯೯ಕ್ಕೆ ಲಭ್ಯವಾಗಲಿದೆ. ಇದರೊಂದಿಗೆ ೫೦೦ ರೂ. ಮೌಲ್ಯದ ರಿಯಾಯಿತಿ ವೋಚರ್ ಕೂಡ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಸರಕಾರದಿಂದಲೇ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಾಟ… ಕೆಜಿಗೆ ಎಷ್ಟು ಗೊತ್ತಾ?

Posted by Vidyamaana on 2023-07-15 03:23:16 |

Share: | | | | |


ಕೇಂದ್ರ ಸರಕಾರದಿಂದಲೇ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಾಟ… ಕೆಜಿಗೆ ಎಷ್ಟು ಗೊತ್ತಾ?

ನವದೆಹಲಿ: ದೇಶದೆಲ್ಲೆಡೆ ಟೊಮ್ಯಾಟೋ ಭಾರಿ ಸದ್ದು ಮಾಡುತ್ತಿದೆ, ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ 150 ಇದ್ದ ಬೆಲೆ ಇದೀಗ ಇನ್ನೂರರ ಗಡಿ ದಾಟಿದೆ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಹೊಸ ನಿಯಮವೊಂದನ್ನು ತಂದಿದ್ದು ಟೊಮ್ಯಾಟೋ ಖರೀದಿಸಿ ಅದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಯೋಜನೆಯನ್ನು ಶುಕ್ರವಾರ ಆರಂಭಿಸಿದೆ.ಈಗಾಗಲೇ ದೆಹಲಿ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಟೊಮ್ಯಾಟೋ ಮಾರಾಟ ಆರಂಭವಾಗಿದ್ದು ವಾಹನಗಳ ಮೂಲಕ ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ.


ಸಹಕಾರ ಒಕ್ಕೂಟವಾದ ಎನ್‌ಸಿಸಿಎಫ್‌, ಟೊಮೆಟೋಗಳನ್ನು ತನ್ನದೇ ಆದ ಮೊಬೈಲ್‌ ವ್ಯಾನ್‌ಗಳಲ್ಲಿ ಮಾರಲು ಮುಂದಾಗಿದೆ.


ಸದ್ಯ ಚಿಲ್ಲರೆ ಅಂಗಡಿಗಳಲ್ಲಿ 150 ರು.ಗೆ ಕೇಜಿಯಂತೆ ಟೊಮ್ಯಾಟೋ ಮಾರಾಲಾಗುತ್ತಿದ್ದು, ಶುಕ್ರವಾರದಿಂದ ಇದನ್ನು 90 ರೂ..ಗೆ ಮಾರಾಟ ಮಾಡಲು ಎನ್‌ಸಿಸಿಎಫ್‌ ನಿರ್ಧರಿಸಿದೆ. ದಿಲ್ಲಿ ಮಾತ್ರವಲ್ಲ, ಲಖನೌ, ಕಾನ್ಪುರ ಹಾಗೂ ಜೈಪುರದಲ್ಲೂ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಲಾಗುತ್ತದೆ.ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೋ ತರಿಸಲಾಗುತ್ತಿದ್ದು. ದಿಲ್ಲಿ ಸೇರಿ ಐದು ರಾಜ್ಯಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ಸರ್ಕಾರ ಸೂಚನೆಯನ್ನು ನೀಡಿದೆ

Recent News


Leave a Comment: