ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಅಡ್ಯಾರ್ ಬಳಿ ಬೈಕ್ ಅಪಘಾತ : ವಿಟ್ಲ ಮೂಲದ ಕಾರ್ತಿಕ್ ಮೃತ್ಯು.!

Posted by Vidyamaana on 2023-02-11 04:31:42 |

Share: | | | | |


ಅಡ್ಯಾರ್ ಬಳಿ ಬೈಕ್ ಅಪಘಾತ : ವಿಟ್ಲ ಮೂಲದ ಕಾರ್ತಿಕ್ ಮೃತ್ಯು.!

ವಿಟ್ಲ: ಬೈಕ್ ಅಪಘಾತ ಸಂಭವಿಸಿ ವಿಟ್ಲ ಮೂಲದ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೃತ ಯುವಕನನ್ನು ಮಾಣಿಲ ಗ್ರಾಮದ ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾನಿ ಮತ್ತು ಸುಧಾಮಣಿ ದಂಪತಿಗಳ ಪುತ್ರ ಕಾರ್ತಿಕ್ ಮಣಿಯಾನಿ (24) ಎಂದು ಗುರುತಿಸಲಾಗಿದೆ.

ಕಾರ್ತಿಕ್ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ ಎನ್ನಲಾಗಿದೆ.

ಮೃತರು ತಂದೆ, ತಾಯಿ, ಓರ್ವ ಸಹೋದರ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ

ಏ. 10: ಬೆಂಗಳೂರಿನಲ್ಲಿ ಕರಾವಳಿಗರ ಬೃಹತ್ ಇಪ್ತಾರ್ ಕೂಟ ಎಂ.ಎಂ.ವೈ.ಸಿ. ಆಯೋಜನೆ

Posted by Vidyamaana on 2023-04-07 06:43:53 |

Share: | | | | |


ಏ. 10: ಬೆಂಗಳೂರಿನಲ್ಲಿ ಕರಾವಳಿಗರ ಬೃಹತ್ ಇಪ್ತಾರ್ ಕೂಟ  ಎಂ.ಎಂ.ವೈ.ಸಿ. ಆಯೋಜನೆ

ಪುತ್ತೂರು: ಬೆಂಗಳೂರಿನ ಎಂ.ಎಂ.ವೈ.ಸಿ. ಆಶ್ರಯದಲ್ಲಿ ಜಯನಗರ 4ನೇ ಬ್ಲಾಕಿನ ಕಾಜ್ಝಿಯಾ ಪಾರ್ಟಿ ಹಾಲಿನಲ್ಲಿ ಸೋಮವಾರ ಏಪ್ರಿಲ್ 10ರ ಸಂಜೆ 5ರಿಂದ ಬೃಹತ್ ಇಫ್ತಾರ್ ಕೂಟ ಆಯೋಜಿಸಲಾಗಿದೆ.

ಕರಾವಳಿ ಭಾಗದಿಂದ ತೆರಳಿ ಉದ್ಯೋಗ, ಶಿಕ್ಷಣ, ವ್ಯವಹಾರ ಇತ್ಯಾದಿ ಕಾರ್ಯಗಳ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ನೆರವಾಗುವ ದೃಷ್ಟಿಯಿಂದ ಹುಟ್ಟಿಕೊಂಡ ಸಂಸ್ಥೆಯೇ ಎಂ.ಎಂ.ವೈ.ಸಿ. ಆರೋಗ್ಯ, ಶಿಕ್ಷಣ, ಉದ್ಯೋಗ ಈ 3 ಕ್ಷೇತ್ರದಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ಎಂ.ಎಂ.ವೈ‌.ಸಿ. ಮುಸ್ಲಿಂ ಯೂತ್ ಕೌನ್ಸಿಲ್ ಅಥವಾ ಮಂಗಳೂರು ಮರ್ಸಿ ಯೂತ್ ಕೌನ್ಸಿಲ್ ಎಂಬ ಹೆಸರಿನಿಂದ ಸಂಘಟನೆ ಖ್ಯಾತವಾಗಿದೆ.

ಅಪಘಾತ ನಡೆದ ಸಂದರ್ಭದಲ್ಲಿಯೂ ಈ ಸಂಘಟನೆ ನೆರವಿಗೆ ಧಾವಿಸಿದೆ‌. ಅಪಘಾತದ ನಂತರ ಪ್ರಕ್ರಿಯೆಗಳಾದ ಪೊಲೀಸ್ ಠಾಣೆ, ದಾಖಲಾತಿಗಳು, ಕಾನೂನಿನ ನೆರವು, ಪೋಸ್ಟ್ ಮಾರ್ಟಂ ಹೀಗೆ ಅನೇಕ ಕೆಲಸಗಳನ್ನು ಊರಿನಿಂದ ಬಂದು ನಡೆಸಿಕೊಡುವುದು ತುಸು ಕಷ್ಟವೇ. ಅಂತಹ ಸಂದರ್ಭ ಎಂ.ಎಂ.ವೈ.ಸಿ. ನೆರವಿಗೆ ಧಾವಿಸಿದೆ. ಇತ್ತೀಚೆಗೆ ದಾನಿಗಳ ನೆರವಿನಿಂದ ಆ್ಯಂಬುಲೆನ್ಸ್ ಕೂಡ ಸಂಘಟನೆಯ ಕಾರ್ಯಕ್ಕೆ ಜೊತೆಯಾಗಿದೆ.

ಕಳೆದ ಸುಮಾರು 10 ವರ್ಷಗಳಿಂದ ಬೆಂಗಳೂರಿನ ವಿವಿಧ 25 ವಲಯಗಳಲ್ಲಿ ಎಂ.ಎಂ.ವೈ.ಸಿ. ಸಕ್ರೀಯವಾಗಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಇಫ್ತಾರ್ ಕೂಟವನ್ನು ಆಯೋಜಿಸಿದೆ. 2600ಕ್ಕಿಂತ ಹೆಚ್ಚಿನ ಸದಸ್ಯರನ್ನು ಒಳಗೊಂಡ ಸಂಸ್ಥೆಯಿದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಫ್ತಾರ್ ಕೂಟವನ್ನು ಯಶಸ್ವಿ ಮಾಡಿಕೊಡುವಂತೆ ಸಂಘಟನೆಯ ಗೌರವಾಧ್ಯಕ್ಷ ಡಾ. ಉಮ್ಮರ್ ಹಾಜಿ, ಅಧ್ಯಕ್ಷ ಅಬೂಬಕ್ಕರ್ ಎಚ್., ಪ್ರಧಾನ ಕಾರ್ಯದರ್ಶಿ ಜುನೈದ್ ಪಿ.ಕೆ., ಉಪಾಧ್ಯಕ್ಷ ಖಲಂದರ್ ಹಾಜಿ ಮಿತ್ತೂರು, ವಹೀದ್ ಕಾಯರ್ ಕಾನ್, ಖಜಾಂಚಿ ಬಶೀರ್ ಎನ್. ಅವರು‌ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

ಲವ್‌ ಮಾಡ್ತಿದ್ದ ಹುಡ್ಗಿನ ಬೆಂಗ್ಳೂರಿಗೆ ಕರೆಸಿ, ಸ್ನೇಹಿತ ಚೇತನ್ ನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಪ್ರಿಯಕರ ಪುರುಷೋತ್ತಮ್

Posted by Vidyamaana on 2023-06-08 16:48:08 |

Share: | | | | |


ಲವ್‌ ಮಾಡ್ತಿದ್ದ ಹುಡ್ಗಿನ ಬೆಂಗ್ಳೂರಿಗೆ ಕರೆಸಿ, ಸ್ನೇಹಿತ ಚೇತನ್ ನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಪ್ರಿಯಕರ ಪುರುಷೋತ್ತಮ್

ಬೆಂಗಳೂರು: ಜೀವನದಲ್ಲಿ ಇನ್ನುಮುಂದೆ ಜೊತೆಯಾಗಿ ಇರ್ತೀನಿ, ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ ಎಂದು ಭರವಸೆ ನೀಡಿದ್ದ ಪ್ರೀತಿಸಿದ ಹುಡುಗನನ್ನು ನಂಬಿಕೊಂಡು ತುಮಕೂರಿನಿಂದ ಬೆಂಗಳೂರಿಗೆ ಬಂದ ಹುಡುಗಿಯ ಮೇಲೆ ಪ್ರೀತಿಸಿದ ಯುವಕ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಮಾಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೆಣ್ಣು ಮಕ್ಕಳಿಗೆ ಅಥವಾ ಮಹಿಳೆಯರಿಗೆ ಎಲ್ಲಿಗೆ ಹೋದರೂ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಂದೆ- ತಾಯಿಯನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿಯನ್ನು ಹೆಣ್ಣು ನಂಬುವುದಾದರೆ ಅದು ಪ್ರೀತಿಸಿದ ಹುಡುಗ ಅಥವಾ ಗಂಡ ಮಾತ್ರ. ಆದರೆ, ಇಲ್ಲಿ ಜೀವನಪೂರ್ತಿ ನಿನ್ನ ಜೊತೆಗಿರ್ತೀನಿ ಎಂದು ಭರವಸೆ ನೀಡಿದ ಪ್ರೀತಿಸಿದ ಯುವಕನನ್ನು ನಂಬಿಕೊಂಡು ಬಂದ ಯುವತಿಯ ಮೇಲೆ ಅತ್ಯಾಚಾರ ನಡೆದು ಹೋಗಿದೆ. ಅದು ಕೂಡ, ಪ್ರೀತಿಸಿದ ಯುವಕ ತಾನು ಮಾತ್ರವಲ್ಲದೇ ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದು, ಸಂತ್ರಸ್ತ ಯವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಗಿರಿನಗರದಲ್ಲಿ ಸ್ನೇಹಿತನ ಜೊತೆಗೂಡಿ ಅತ್ಯಾಚಾರ: ಯುವತಿಯ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ ಘಟನೆ ನಡೆದಿರುವುದು ಬೆಂಗಳೂರಿನ ಗಿರಿನಗರದ ಈರಣ್ಣಗುಡ್ಡೆಯಲ್ಲಿ. ಅತ್ಯಾಚಾರಕ್ಕೊಳಗಾದ ಯುವತಿ ತುಮಕೂರು ನಗರದವಳಾಗಿದ್ದು, ಪ್ಯಾರಾಮೆಡಿಕಲ್‌ ಅಭ್ಯಾಸ ಮಾಡುತ್ತಿದ್ದಳು. ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಹಾಗು ಸ್ನೇಹಿತನಿಂದ ಅತ್ಯಾಚಾರ ನಡೆದಿದೆ. ಪುರುಷೋತ್ತಮ್ ಹಾಗು ಚೇತನ್ ಬಂಧಿತ ಆರೋಪಿಗಳು. ಪುರುಷೋತ್ತಮ್ ಹಾಗು ಯುವತಿ ಒಂದು ವರ್ಷದಿಂದ ಲವ್ ಮಾಡುತ್ತಿದ್ದರು. ಮೂಲತಃ ತುಮಕೂರಿನ ನಿವಾಸಿಯಾದ ಯುವತಿ ಕಾಲೇಜಿನಲ್ಲಿ ಓದುತ್ತಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು.

ನಾಪತ್ತೆಯಾಗಿರುವ ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳದ ಕಾರ್ಯಕರ್ತರು

Posted by Vidyamaana on 2024-05-18 04:56:01 |

Share: | | | | |


ನಾಪತ್ತೆಯಾಗಿರುವ ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳದ ಕಾರ್ಯಕರ್ತರು

ಪುತ್ತೂರು ಮೇ 17: ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಯೊಂದು ನಾಪತ್ತೆಯಾಗಿದ್ದು, ನಾಪತ್ತೆಯಾಗಿರು ಹೋರಿಗಾಗಿ ಬಜರಂಗದಳದ ಕಾರ್ಯಕರ್ತರು ದೈವದ ಮೊರೆ ಹೋಗಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಎರಡು ಹೋರಿಗಳು ಮೇ 1 ರಿಂದ ನಾಪತ್ತೆಯಾಗಿತ್ತು.

ಒಂಟಿ ಸಲಗದ ಭೀಕರ ದಾಳಿಗೆ ಬಲಿಯಾದ ಅಂಬಾರಿ ವೀರ ಅರ್ಜುನ

Posted by Vidyamaana on 2023-12-04 21:34:15 |

Share: | | | | |


ಒಂಟಿ ಸಲಗದ ಭೀಕರ ದಾಳಿಗೆ ಬಲಿಯಾದ ಅಂಬಾರಿ ವೀರ ಅರ್ಜುನ

ಮೈಸೂರು, ಡಿ 04: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಲಕ್ಷಾಂತರ ಮಂದಿಯ ಮನೆಸೂರೆಗೊಂಡಿದ್ದ ಆನೆ ಅರ್ಜುನ ಅಸುನೀಗಿದ್ದಾನೆ.


ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಅರ್ಜುನ ಆನೆ ಮೃತಪಟ್ಟಿದೆ.


64 ವರ್ಷದ ಅರ್ಜುನ ಆನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿತ್ತು. ದಸರೆಯಿಂದ ನಾಲ್ಕು ವರ್ಷದ ಹಿಂದೆ ನಿವೃತ್ತಿ ನೀಡಲಾಗಿತ್ತು. ಅಂಬಾರಿ ಹೊರದೆ ಇದ್ದರೂ ದಸರೆಯಲ್ಲಿ ಭಾಗಿಯಾಗುತ್ತಿತ್ತು. ನಂತರ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು. ಈಗ ಆನೆ ಸೆರೆ ಕಾರ್ಯಾಚರಣೆ ವೇಳೆ ಹಾಸನ ಜಿಲ್ಲೆ ಎಸಳೂರು ಬಳಿ ಸೋಮವಾರ ಮಧ್ಯಾಹ್ನ ಮೃತಪಟ್ಟಿದೆ.


ಹತ್ತು ದಿನದಿಂದ ಹಾಸನ ಜಿಲ್ಲೆಯಲ್ಲಿ ಆನೆಗಳ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಐದು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಎಲ್ಲಾ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಇತ್ತು. ಸೋಮವಾರ ಬೆಳಗ್ಗೆ ಸಕಲೇಶಪುರ ತಾಲ್ಲೂಕು ಎಸಳೂರಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಶುರುವಾಗಿದ್ದು, ಈ ವೇಳೆ ದುರಂತ ನಡೆದಿದೆ.


ಅತ್ಯಂತ ಬಲಶಾಲಿಯಾದ ಅರ್ಜು‍ನ ಒಂಬತ್ತು ಬಾರಿ ಅಂಬಾರಿ ಹೊತ್ತಿದ್ದ. ಪುಂಡಾನೆಗಳನ್ನು ಪಳಗಿಸುವಲ್ಲಿಯೂ ಅರ್ಜು‍ನ ನಿಸ್ಸೀಮನಾಗಿದ್ದ. ಈ ಹಿಂದೆ ಬಲರಾಮನ ನಿವೃತ್ತಿಯ ನಂತರ 2012ರಿಂದ ಜಂಬೂಸವಾರಿಯಲ್ಲಿ ಅಂಬಾರಿಯನ್ನು ಹೊರಲು ಆರಂಭಿಸಿದ್ದ. ಅದಕ್ಕೂ ಹಿಂದೆ ಒಮ್ಮೆ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. 2012ರಿಂದ 2019ರವರಗೆ ಒಟ್ಟು 8 ಬಾರಿ ಅಂಬಾರಿ ಹೊತ್ತಿರುವ ಅರ್ಜು‍ನ ಗಾತ್ರದಲ್ಲಿ ಬಲಭೀಮನಾಗಿ ಎಲ್ಲರ ಗಮನ ಸೆಳೆದಿದ್ದ. ಗಜಪಡೆಯೊಂದಿಗೆ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಅರ್ಜುನ ತುಂಟಾಟ ಆಡುತ್ತಾ ತಾಲೀಮಿನಲ್ಲಿ ಶಿಸ್ತಿನ ಹೆಜ್ಜೆ ಹಾಕುತ್ತಿದ್ದ ಅರ್ಜುನನ್ನು ಈಗ ಮಾವುತ ವಿನು ನೋಡಿಕೊಳ್ಳುತ್ತಿದ್ದರು.


ಅರ್ಜುನ ಎಲ್ಲಾ ಆನೆಗಳಿಗಿಂತ ಹೆಚ್ಚು ಅಂದರೆ ಅಂದಾಜು 5725 ಕೆ.ಜಿ. ತೂಕ ಹೊಂದಿದ್ದ. ಈ ಮೂಲಕ ಅಂಬಾರಿ ಹೊತ್ತು ತಾನು ಶಕ್ತಿ ಶಾಲಿ ಎಂಬುದನ್ನು ನಿರೂಪಿಸಿದ್ದ. 2019ರವರೆಗೆ ಸುಸೂತ್ರವಾಗಿ ಅಂಬಾರಿ ಹೊತ್ತು ಗಮನ ಸೆಳೆದಿದ್ದ.


ಈ ಹಿಂದೆ ಈತನ ಉಸ್ತುವಾರಿಯನ್ನು ಮಾವುತ ದೊಡ್ಡಮಾಸ್ತಿ ನೋಡಿ ಕೊಳ್ಳುತ್ತಿದ್ದರು. ಅವರ ನಿಧನದ ಬಳಿಕ ವಿನು ಅವರು ಮಾವುತರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಹೆಚ್.ಡಿ.ಕೋಟೆಯ ಬಳ್ಳೆ ಶಿಬಿರದ ಅರ್ಜುನ 2.80 ಮೀಟರ್ ಎತ್ತರ, 3.75 ಮೀಟರ್ ಉದ್ದ ಹೊಂದಿದ್ದ. ಈತನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಒಂಬತ್ತು ಅಂಬಾರಿ ಹೊತ್ತಿದ್ದರೂ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಭಾಗವಹಿಸುತ್ತಾ ಬಂದಿರುವುದು ವಿಶೇಷವಾಗಿದೆ.


ಹಲವು ವರ್ಷಗಳ ಹಿಂದೆ ನಡೆದ ಆ ಒಂದು ಘಟನೆ ಅರ್ಜುನನಿಗೆ ನೋವು ತಂದಿತ್ತು. ಗಜಮಜ್ಜನಕ್ಕೆಂದು ಮೃಗಾಲಯದ ಬಳಿಯಿರುವ ಕಾರಂಜಿ ಕೆರೆಗೆ ಗಜಪಡೆಯನ್ನು ಕರೆದೊಯ್ಯಲಾಗಿತ್ತು. ಗಜಮಜ್ಜನದ ಬಳಿಕ ಕೆರೆಯಿಂದ ದಡಕ್ಕೆ ಹತ್ತಿಸುವ ವೇಳೆ ಅರ್ಜುನನ ಮುಂದೆ ಹೋಗುತ್ತಿದ್ದ ಇನ್ನೊಂದು ಆನೆಯ ಕಾವಡಿ ಜಾರಿ ಕೆಳಗೆ ಬಿದ್ದ. ಆ ಸಂದರ್ಭ ನೀರಿನಿಂದ ಮೇಲೆ ಬಂದ ಅರ್ಜುನನ ಕಾಲಿಗೆ ಆಕಸ್ಮಿಕವಾಗಿ ಸಿಕ್ಕಿ ಆತ ಸಾವನ್ನಪ್ಪಿದ್ದ. ಅದೊಂದು ಕಹಿ ಘಟನೆ ನಡೆದಿತ್ತು.


2019ರಲ್ಲಿ ನಾಲ್ಕು ಜನರನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರ್ಜುನನ್ನು ಬಳಸಿಕೊಂಡು ಮೂರು ದಿನ ಕಾರ್ಯಾಚರಣೆ ನಡೆಸಿ ಹುಲಿಯ ಹೆಜ್ಜೆಗುರುತು ಆಧರಿಸಿ ಹುಲಿಯನ್ನು ಹಿಡಿಯಲಾಗಿತ್ತು. ಇದಕ್ಕೆ ಮೆಚ್ಚಿ ಸರಕಾರ ಅರ್ಜುನ ಮತ್ತು ಮಾವುತ ವಿನುಗೆ ಪ್ರಶಸ್ತಿ ಪತ್ರ ನೀಡಿತ್ತು. ಇಷ್ಟೆಲ್ಲಾ ಕೀರ್ತಿ ಹೊಂದಿದ್ದ ಅರ್ಜುನ ಇಂದು ಪುಂಡ ಕಾಡಾನೆಯೊಂದರ ದಾಳಿಗೆ ಸಿಲುಕಿ ದುರ್ಮರಣಕ್ಕೆ ಈಡಾಗಿರುವುದು ನೋವಿನ ಸಂಗತಿ

ಕಡಬ: ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಸಹೋದರ ಶಿಜು ಡೆಂಗ್ಯೂ ಜ್ವರದಿಂದ ಮೃತ್ಯು

Posted by Vidyamaana on 2024-01-31 17:36:02 |

Share: | | | | |


ಕಡಬ: ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಸಹೋದರ ಶಿಜು ಡೆಂಗ್ಯೂ ಜ್ವರದಿಂದ ಮೃತ್ಯು

ಕಡಬ : ಡೆಂಗ್ಯೂ ಮತ್ತು ಮಲೇರಿಯಾ ಜ್ವರ ವಿಪರೀತವಾದ ಹಿನ್ನೆಲೆಯಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕುಟ್ರುಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ನಡೆದಿದೆ.


ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ ಶಿಜು ಕಲ್ಲೋಳಿಕಲ್ (31) ಎಂಬವರು ಮೃತಪಟ್ಟವರು.ಭಾನುವಾರ ಜ್ವರ  ಹಿನ್ನೆಲೆಯಲ್ಲಿ ಕಡಬದ ಖಾಸಗಿ ಮೆಡಿಕಲ್ ಸೆಂಟರ್‌ಗೆ ಅವರು ಚಿಕಿತ್ಸೆಗಾಗಿ ಆಗಮಿಸಿದ್ದರು.ಅಲ್ಲಿ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರ ಪತ್ತೆಯಾಗಿದೆ. ನಂತರದಲ್ಲಿ ಮನೆಗೆ ಬಂದ ಶಿಜು ಅವರಿಗೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಾರನೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದರು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು.ಆದರೆ ಮಂಗಳೂರಿನ ಆಸ್ಪತ್ರೆಗೆ ತಲುಪಿದ ವೇಳೆಗಾಗಲೇ ಶಿಜು ಅವರು ಮೃತಪಟ್ಟಿದ್ದರು.


ಶಿಜು ಅವರು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಅವರ ಸಹೋದರಾಗಿದ್ದಾರೆ. ಶಿಜು ಅವರು ಅಜ್ಜಿ, ತಾಯಿ ಸಾಲಿ,ಪತ್ನಿ ಧನ್ಯ, ಸಹೋದರಿ ಸ್ವಪ್ನ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.ಮೃತ ಶಿಜು ಅವರ ಅಂತ್ಯ ಸಂಸ್ಕಾರ ಕಾರ್ಯಗಳು ವಿಮಲಗಿರಿ ಸಂತ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚಿನಲ್ಲಿ ನೆರವೇರಿತು.

Recent News


Leave a Comment: