ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಬಂಟ್ವಾಳ: ಚೂರಿ ಇರಿತ ಪ್ರಕರಣ; ಮೂವರು ಆರೋಪಿಗಳ ಬಂಧನ

Posted by Vidyamaana on 2024-08-07 22:08:02 |

Share: | | | | |


ಬಂಟ್ವಾಳ: ಚೂರಿ ಇರಿತ ಪ್ರಕರಣ; ಮೂವರು ಆರೋಪಿಗಳ ಬಂಧನ

ಬಂಟ್ವಾಳ : ಕ್ಷುಲ್ಲಕ ವಿಚಾರವಾಗಿ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಒಂದು ತಂಡದ ಇಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಎಂಬವರು ಬಂಧಿತ ಆರೋಪಿಗಳು.

ಕರ್ನಾಟಕ ವಿಧಾನಪರಿಷತ್ ವಿಪಕ್ಷನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ನೇಮಕ

Posted by Vidyamaana on 2023-12-25 15:13:31 |

Share: | | | | |


ಕರ್ನಾಟಕ ವಿಧಾನಪರಿಷತ್ ವಿಪಕ್ಷನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ನೇಮಕ

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಎನ್ನುವಂತೆ ಇದೀಗ ವಿಧಾನ ಪರಿಷತ್ ವಿಪಕ್ಷ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ ನೇಮಿಸಲಾಗಿದೆ. ಅಲ್ಲದೇ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರನ್ನಾಗಿ ಅರವಿಂದ್ ಬೆಲ್ಲದ್ ನೇಮಕ ಮಾಡಲಾಗಿದೆ.ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದಂತ ಜೆಪಿ ನಡ್ಡಾ ಅವರ ಸೂಚನೆಯ ಮೇರೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿವಿಧ ಜವಾಬ್ದಾರಿಗಳಿಗೆ ನಿಯುಕ್ತಿಗೊಳಿಸಲಾಗಿದೆ ಎಂದಿದ್ದಾರೆ.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ಉಪನಾಯಕರಾಗಿ ಸುನೀಲ್ ವಲ್ಯಾಪುರೆ ಹಾಗೂ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ನೇಮಕ ಮಾಡಲಾಗಿದೆ.


ಇನ್ನೂ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಅರವಿಂದ್ ಬೆಲ್ಲದ್, ಮುಖ್ಯ ಸಚೇತಕರಾಗಿ ದೊಡ್ಡನಗೌಡ ಜಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

BREAKING: ಚುನಾವಣೋತ್ತರ ಸಮೀಕ್ಷೆ ನಿಷೇಧಿಸಿ ಚುನಾವಣಾ ಆಯೋಗ ಖಡಕ್ ಆದೇಶ

Posted by Vidyamaana on 2024-04-18 17:11:23 |

Share: | | | | |


BREAKING: ಚುನಾವಣೋತ್ತರ ಸಮೀಕ್ಷೆ ನಿಷೇಧಿಸಿ ಚುನಾವಣಾ ಆಯೋಗ ಖಡಕ್ ಆದೇಶ

ಬೆಂಗಳೂರು : ಲೋಕಸಭಾ ಚುನಾವಣೆ ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಯನ್ನು ನಿಷೇಧಿಸಿ ಚುನಾವಣಾ ಆಯೋಗವು ಖಡಕ್ ಆದೇಶ ಹೊರಡಿಸಿದೆ.


ಈ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದಂತ ಸೂರಳ್ ಕರ್ ವಿಕಾರ್ ಕಿಶೋರ್ ಅವರು ಎಲ್ಲಾ ಮಾಧ್ಯಮಗಳ ಸಂಪಾದಕರು, ವರದಿಗಾರರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

Posted by Vidyamaana on 2024-04-08 20:25:26 |

Share: | | | | |


ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು, (ಏಪ್ರಿಲ್ 08): ಬೆಂಗಳೂರಿನ ಮಾಧವನಗರದಲ್ಲಿರುವ ಪ್ರತಿಷ್ಠಿತ ರೆನೈಸನ್ಸ್ ಹೋಟೆಲ್​ (Renaissance hotel) 19ನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶರಣ್ ಎನ್ನುವ 28 ವರ್ಷದ ಯುವಕ ಇಂದು (ಏಪ್ರಿಲ್ 08) ಮಧ್ಯಾಹ್ನ 2.30ರ ಸುಮಾರಿಗೆ ಹೋಟೆಲ್​ ರೂಮ್​ನ ಬಾಲ್ಕನಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.


ತಮಿಳುನಾಡು ಮೂಲದ ಶರಣ್ , ನಿನ್ನೆ(ಏಪ್ರಿಲ್ 08) ಹೋಟೆಲ್​ಗೆ ಬಂದು ಒಂದು ದಿನದ ಮೆಟ್ಟಿಗೆ ಎಂದು ಹೇಳಿ ರೂಮ್ ಪಡೆದುಕೊಂಡಿದ್ದ. ಬಳಿಕ ಇಂದು ಮತ್ತೆರೆಡು ದಿನ ಉಳಿಯುವುದಾಗಿ ಹೇಳಿದ್ದ. ಆದ್ರೆ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಹಲವು ಬಾರಿ ಇದೇ ಹೋಟೆಲ್ ನಲ್ಲಿ ಬಂದು ಉಳಿದುಕೊಂಡಿದ್ದ. ಆದ್ರೆ, ಶರಣ್ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

Posted by Vidyamaana on 2024-03-02 12:33:31 |

Share: | | | | |


ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

ಪುತ್ತೂರು: ನಯಾ ಚಪ್ಪಲ್ ಬಜಾರ್ನ ನವೀಕೃತ ಮಳಿಗೆಯ ಉದ್ಘಾಟನೆ ಮಾರ್ಚ್ 7ರಂದು ಬೆಳಿಗ್ಗೆ 10ಕ್ಕೆ ದರ್ಬೆ ಬುಶ್ರಾ ಟವರ್ನಲ್ಲಿ ನಡೆಯಲಿದೆ.

1998ರಲ್ಲಿ ಆಗಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರುಗಡೆ ಇದ್ದ ಎ.ಎಂ. ಕಾಂಪ್ಲೆಕ್ಸ್ನಲ್ಲಿ ನಯಾ ಚಪ್ಪಲ್ ಬಜಾರ್ ಕಾರ್ಯಾಚರಣೆ ಆರಂಭಿಸಿತು. ಬಳಿಕ ದರ್ಬೆಯ ಬುಶ್ರಾ ಟವರ್ಗೆ ಸ್ಥಳಾಂತರಗೊಂಡಿತು. ಸುಮಾರು 26 ವರ್ಷಗಳ ಸುದೀರ್ಘ ಪಯಣದಲ್ಲಿ  ಗ್ರಾಹಕರ ಮನಸೂರೆಗೊಂಡಿರುವ ರಫೀಕ್ ಎಂ.ಜಿ. ಮಾಲಕತ್ವದ ನಯಾ ಚಪ್ಪಲ್ ಬಜಾರ್ ಇದೀಗ ಆಧುನಿಕತೆಗೆ ತಕ್ಕಂತೆ ನವೀಕೃತಗೊಂಡು ಶುಭಾರಂಭಗೊಳ್ಳುತ್ತಿದೆ.


ನೂತನ ಸಂಸ್ಥೆಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರು ನವೀಕೃತ ಮಳಿಗೆಯನ್ನು ಉದ್ಘಾಟಿಸುವರು. ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿರುವರು. ದರ್ಬೆ ಬುಶ್ರಾ ಟವರ್ನ ಮಾಲಕ ಅಬ್ದುಲ್ ಅಜೀಜ್ ಅವರು ಪ್ರಥಮ ಗ್ರಾಹಕರಾಗಿ ಉಪಸ್ಥಿತರಿರುವರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಪುತ್ತೂರು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹಾಜಿ ಕೆ.ಪಿ., ಮಹಾವೀರ ಮೆಡಿಕಲ್ ಸೆಂಟರಿನ ಡಾ. ಅಶೋಕ್ ಪಡಿವಾಳ್,  ದರ್ಬೆ ಬಿಓಬಿಯ ಸೀನಿಯರ್ ಮ್ಯಾನೇಜರ್ ಸಾದೀಕ್ ಎಸ್.ಎಂ., ಲಿಯೋ ಜಿಲ್ಲಾ ಅಧ್ಯಕ್ಷೆ ಡಾ. ರಂಜಿತಾ ಎಚ್. ಶೆಟ್ಟಿ, ಕ್ರಿಸ್ಟೋಫರ್ ಕಾಂಪ್ಲೆಕ್ಸಿನ ವಲೇರಿಯನ್ ಡಯಾಸ್, ಡಾ. ಜಸ್ಪ್ರಿತ್ ಸಿಂಗ್ ದಿಲ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿ, ಪುತ್ತೂರು ಅಗ್ರಝೋನ್, ಸಿಝ್ಲರ್ನ ಪಿ.ಎನ್. ಪ್ರಸನ್ನ ಕುಮಾರ್ ಶೆಟ್ಟಿ, ಮದರ್ ಇಂಡಿಯಾದ ಎಂ.ಜಿ. ರಜಾಕ್ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಮಾಲಕ ಎಂಜಿ ರಫೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಮಾ.28 : ಪುತ್ತೂರಿನಲ್ಲಿ ಮಂಗಳೂರು ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 8ನೇ ಶಾಖೆ ಉದ್ಘಾಟನೆ

Posted by Vidyamaana on 2024-03-25 14:07:45 |

Share: | | | | |


ಮಾ.28 : ಪುತ್ತೂರಿನಲ್ಲಿ ಮಂಗಳೂರು ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 8ನೇ ಶಾಖೆ ಉದ್ಘಾಟನೆ

ಪುತ್ತೂರು: ಕಳೆದ 48 ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್  ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ ಪುತ್ತೂರು ಶಾಖೆ ಮಾ.28ರಂದು ಪುತ್ತೂರು ಏಳ್ಳುಡಿಯಲ್ಲಿರುವ ಮಹಾದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಮಾಧವ ಬಿ.ಎಮ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


1977ರಲ್ಲಿ ಶ್ರೀ ಭಗವತೀ ಶ್ರೇಯೋಭಿವೃದ್ಧಿ ಸಹಕಾರ ಸಂಘ ನೋಂದಣಿ ಮಾಡಿಕೊಂಡು 1984ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾನೂನು ಪ್ರಕಾರ ಶ್ರೀ ಭಗವತೀ ಶ್ರೇಯೋಭಿವೃದ್ಧಿ ಸಹಕಾರ ಸಂಘವು ಒಂದು ಬ್ಯಾಂಕ್ ಆಗಿ ಪರಿವರ್ತನೆಗೊಂಡಿತ್ತು. ನಂತರದ ಬೆಳವಣಿಗೆಯಲ್ಲಿ ಬ್ಯಾಂಕಿನ ಶಾಖೆಗಳು ವಿಸ್ತರಣೆಗೊಂಡು 2ಸಾವಿರ ಇಸವಿಯಲ್ಲಿ ವಿಟ್ಲದಲ್ಲಿ 7ನೇ ಶಾಖೆಯನ್ನು ಇದೀಗ ಪುತ್ತೂರನಲ್ಲಿ 8ನೇ ಶಾಖೆಯನ್ನು ಆರಂಭಿಸಲಾಗುತ್ತಿದೆ. ನೂತನ ಬ್ಯಾಂಕ್‌ನ ಉದ್ಘಾಟನೆ ಕಾರ್ಯಕ್ರಮ ನಿಶ್ಚಯ ಮಾಡಿ ಆಮಂತ್ರಣ ಪತ್ರ ನೀಡುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರಲಿಲ್ಲ. ಹಾಗಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೆವು. ಬಳಿಕದ ಬೆಳವಣಿಗೆಯಲ್ಲಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಭಾಗವಹಿಸಲು ಅನಾನುಕೂಲ ಆಗಿದೆ. ಈ ನಿಟ್ಟಿನಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಉದ್ಯಮಿ ಕಿಶೋರ್ ಕುಮಾರ್, ವಕೀಲರಾದ ಪಾಝೀಲ್, ಪಿ.ಕೆ.ಸತೀಶನ್, ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವೀನ್, ಉಳ್ಳಾಲದ ಚಂದ್ರಹಾಸ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.


ಶ್ರೀ ಭವತೀ ಸಹಕಾರ ಬ್ಯಾಂಕ್ ಎಲ್ಲಾ ವರ್ಷಗಳಲ್ಲಿ ಲಾಭಗಳಿಸುತ್ತಾ ಬಂದಿದ್ದು, 2024ಲ್ಲಿ ಪಸ್ತುತ 29,840 ಮಂದಿ ಸದಸ್ಯರಿದ್ದು, ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಯಲ್ಲಿ ಬ್ಯಾಂಕ ಅನ್ನು 2ನೇ ಟಯರ್‌ನಲ್ಲಿ ವರ್ಗೀಕರಿಸಲಾಗಿದೆ ಮಾತ್ರವಲ್ಲ ಉತ್ತಮ ಆರ್ಥಕ ಸಂಸ್ಥೆ ಎಂದು ಪರಿಗಣಿಸಲಾಗಿದೆ ಎಂದು ಮಾಧವ ಬಿ.ಎಮ್ ಹೇಳಿದರು.


ಬ್ಯಾಂಕಿನಲ್ಲಿ ಇರುವ ಠೇವಣಿಗಳಿಗೆ ಶೇ.3 ರಿಂದ 8.60 ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ 0.5 ಅಧಿಕ ಬಡ್ಡಿ ನೀಡಲಾಗುತ್ತದೆ. ಮಹಿಳೆಯರಿಗೆ 3 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ ಕೂಡಾ 0.5 ಅಧಿಕ ಬಡ್ಡಿ ನೀಡಲಾಗುತ್ತದೆ. ಪಾಲು ಬಂಡವಾಳಕ್ಕೆ ಬ್ಯಾಂಕಿನ ಲಾಭದಲ್ಲಿ ಡಿವಿಡೆಂಡ್ ನೀಡಲಾಗುತ್ತದೆ. ಗೃಹ ಸಾಲ, ಅಡವು ಸಾಲ, ವಾಹನ ಸಾಲ, ಚಿನ್ನಾಭರಣ ಅಡವು ಸಾಲ ಹಾಗು ಸಂಬಳದ ಆಧಾರದಲ್ಲಿ ಸಾಲಗಳನ್ನು ಶೀಘ್ರವಾಗಿ ನೀಡಲಾಗುತ್ತದೆ. ಗ್ರಾಹಕರಿಗೆ ಸನ್ಮಾನ, ವಿದ್ಯಾರ್ಥಿವೇತನ ಸಹಿತ ಇತರ ಸೌಲಭ್ಯಗಳನ್ನು ಬ್ಯಾಂಕ್‌ನಿಂದ ನೀಡಲಾಗುವುದು ಎಂದು ಮಾಧವ ಬಿ.ಎಮ್ ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ದೇವದಾಸ್‌ ಕೊಲ್ಯ, ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ರಾಜೇಶ್, ನಿರ್ದೇಶಕ ಕಿರಣ್, ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ರಾಘವ, ಪುತ್ತೂರು ನೂತನ ಶಾಖೆಯ ಮೆನೇಜ‌ರ್ ರಮೇಶ್ ಉಪಸ್ಥಿತರಿದ್ದರು.

Recent News


Leave a Comment: