ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


BREAKING: ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಖಾತೆ ತೆರೆದ ಬಿಜೆಪಿ: ಸೂರತ್ ನಲ್ಲಿ ಅಭ್ಯರ್ಥಿ ಅವಿರೋಧ ಆಯ್ಕೆ

Posted by Vidyamaana on 2024-04-22 16:11:35 |

Share: | | | | |


BREAKING: ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಖಾತೆ ತೆರೆದ ಬಿಜೆಪಿ: ಸೂರತ್ ನಲ್ಲಿ ಅಭ್ಯರ್ಥಿ ಅವಿರೋಧ ಆಯ್ಕೆ

ನವದೆಹಲಿ: ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆದ್ದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆಗೆ ಮುಂಚಿತವಾಗಿ ತನ್ನ ಖಾತೆಯನ್ನು ತೆರೆದಿದೆ.ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರಕ್ಕೆ ಸಹಿ ಹಾಕಿಲ್ಲ ಎಂದು ಅವರ ಪ್ರಸ್ತಾಪಕರು ಹೇಳಿದ ನಂತರ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು.ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪಡ್ಸಾಲ ಅವರಿಗೂ ಇದೇ ಗತಿಯಾಗಿದ್ದು, ಈ ಪ್ರಮುಖ ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಚುನಾವಣಾ ಸ್ಪರ್ಧೆಯಿಂದ ಪರಿಣಾಮಕಾರಿಯಾಗಿ ತೆಗೆದುಹಾಕಲಾಗಿದೆ.

ಮಂಗಳೂರು: ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ, ಪಬ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ

Posted by Vidyamaana on 2024-07-27 02:11:24 |

Share: | | | | |


ಮಂಗಳೂರು: ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ, ಪಬ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ

ಮಂಗಳೂರು : ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ ಮಾಡಿದ ಆರೋಪದ ಮೇರೆಗೆ ಮಂಗಳೂರಿನ ಪಬ್ ವಿರುದ್ಧ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಂಗಳೂರು ನಗರದ ದೇರೆಬೈಲ್‌ ಕೊಂಚಾಡಿಯಲ್ಲಿರುವ ಬಾರ್‌ ಮತ್ತು ಪಬ್ ಒಂದರಲ್ಲಿ ಸ್ಟೂಡೆಂಟ್ಸ್‌ ವೆಡ್ನೆಸ್ ಡೇ ನೈಟ್‌ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಮುಕ್ತವಾಗಿ ಆಹ್ವಾನಿಸಿದ್ದಾರೆ.

ಸಂಜೆ 7ಗಂಟೆಯಿಂದ ಮಧ್ಯರಾತ್ರಿ ವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್‌, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ಕೂಲ್‌ ಐಡಿ (ಗುರುತು ಕಾರ್ಡ್‌) ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್‌ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು (ಹುಡುಗಿಯರು) ಬಂದರೆ ಅವರಿಗೆ ಫ್ರೀ ಶೂಟರ್ಸ್ (ಸ್ಪೆಷಲ್‌ ಆಫರ್‌) ನೀಡುವ ಭರವಸೆಯನ್ನು ನೀಡಲಾಗಿತ್ತು.

ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಕಾರ್ಯಕ್ರಮ ಆಯೋಜನೆ ಮಾಡಿದ್ದ ಪಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ಮತ್ತು ಮಂಗಳೂರು ಪೊಲೀಸ್ ಅಧಿಕಾರಿಗಳು ಇದೀಗ ಪಬ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಮಂಗಳೂರಿನ ದೇರೆಬೈಲ್‌ನಲ್ಲಿರುವ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ಕರ್ ಲಾಂಜ್ ಬಾರ್) ಪಬ್‌ನ ಪ್ರಚಾರದ ಪೋಸ್ಟರ್ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ಪರಶುರಾಮ ಥೀಮ್‌ ಪಾರ್ಕ್‌; ಸಿಐಡಿ ತನಿಖೆಗೆ ನೀಡಿದ್ದನ್ನು ಸ್ವಾಗತಿಸಿದ ಸುನಿಲ್ ಕುಮಾರ್

Posted by Vidyamaana on 2024-02-09 07:38:43 |

Share: | | | | |


ಪರಶುರಾಮ ಥೀಮ್‌ ಪಾರ್ಕ್‌; ಸಿಐಡಿ ತನಿಖೆಗೆ ನೀಡಿದ್ದನ್ನು ಸ್ವಾಗತಿಸಿದ ಸುನಿಲ್ ಕುಮಾರ್

ಉಡುಪಿ: ”ಪರಶುರಾಮ ಥೀಂ ಪಾರ್ಕ್ ವಿಚಾರದ ಬಗ್ಗೆ ಅನಗತ್ಯವಾಗಿ ಎಬ್ಬಿಸುತ್ತಿದ್ದ ಊಹಾಪೋಹ ಹಾಗೂ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು. ಈ ಸುಳ್ಳು ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಕೊನೆಗೂ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ” ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.


ಫೇಸ್ ಬುಕ್ ಪೋಸ್ಟ್ ಮಾಡಿರುವ ಸುನಿಲ್ ಕುಮಾರ್, ”ಈ ಬಗ್ಗೆ ತನಿಖೆ ನಡೆಯಬೇಕೆಂದು ಆರು ತಿಂಗಳು ಹಿಂದೆಯೇ ನಾನು ಆಗ್ರಹಿಸಿದ್ದೆ.ಸರಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವ ಜತೆಗೆ ಥೀಂ ಪಾರ್ಕ್ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಆದಷ್ಟು ಬೇಗ ಥೀಂ ಪಾರ್ಕ್ ಪ್ರವಾಸಿಗಳ ವೀಕ್ಷಣೆಗೆ ಮುಕ್ತಗೊಳ್ಳುವಂತಾಗಬೇಕೆಂದು ಒತ್ತಾಯಿಸುತ್ತೇನೆ” ಎಂದು ಬರೆದಿದ್ದಾರೆ.ಸಿಐಡಿ ತನಿಖೆಗೆ ಒತ್ತಾಯ ಹಾಗೂ ಮುತುವರ್ಜಿ ತೋರಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಶೇಷ ಧನ್ಯವಾದಗಳು” ಎಂದು ಕೊನೆಯಲ್ಲಿ ಸೇರಿಸಿದ್ದಾರೆ

ಜಾಹೀರಾತು ಬ್ಲಾಕ್‌ ಮಾಡುವ ಯೂಟ್ಯೂಬ್‌ ಬಳಕೆದಾರರಿಗೆ ಬ್ರೇಕ್‌ ಹಾಕಿದ ಗೂಗಲ್‌; ವೀಕ್ಷಕರಿಗೆ 3 ಆಯ್ಕೆ ನೀಡಿದ ಯೂಟ್ಯೂಬ್‌

Posted by Vidyamaana on 2023-10-25 15:45:27 |

Share: | | | | |


ಜಾಹೀರಾತು ಬ್ಲಾಕ್‌ ಮಾಡುವ ಯೂಟ್ಯೂಬ್‌ ಬಳಕೆದಾರರಿಗೆ ಬ್ರೇಕ್‌ ಹಾಕಿದ ಗೂಗಲ್‌; ವೀಕ್ಷಕರಿಗೆ 3 ಆಯ್ಕೆ ನೀಡಿದ ಯೂಟ್ಯೂಬ್‌

ಯೂಟ್ಯೂಬ್‌ ಬಳಕೆ ಜಾಗತಿಕವಾಗಿ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಎಲ್ಲರೂ ಗೂಗಲ್‌ನ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಲು ಬಯಸುತ್ತಾರೆ. ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಸುದ್ದಿ, ಸಿನಿಮಾ, ಮನರಂಜನೆ, ಮಾಹಿತಿಯ ವಿಡಿಯೋಗಳನ್ನು ನೋಡಲು ಎಲ್ಲರೂ ಬಯಸುತ್ತಾರೆ. ಈ ರೀತಿ ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡುವಾಗ ಕಾಣಿಸುವ ಜಾಹೀರಾತುಗಳು ಸಾಕಷ್ಟು ಜನರಿಗೆ ಕಿರಿಕಿರಿ ಉಂಟು ಮಾಡುತ್ತಾರೆ.ಇಂತಹ ಕಿರಿಕಿರಿ ತಪ್ಪಿಸಲು ಕೆಲವು ಜಾಣರು ಆಡ್‌ ಬ್ಲಾಕರ್‌ ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ. ಈ ರೀತಿ ಜನರು ಆಡ್‌ ಬ್ಲಾಕರ್‌ ಬಳಸಿ ಯೂಟ್ಯೂಬ್‌ ಸೇವೆ ಪಡೆಯುವುದನ್ನು ತಪ್ಪಿಸಲು ಮತ್ತು ಇಂತಹ ಬಳಕೆದಾರರನ್ನು ಕಂಡುಹಿಡಿಯಲು ಗೂಗಲ್‌ ಆರಂಭಿಸಿದೆ.


ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಲು ಆಡ್‌ ಬ್ಲಾಕರ್‌ ಸಾಫ್ಟ್‌ವೇರ್‌ ಬಳಸುವವರಿಗೆ ಗೂಗಲ್‌ನ ಸೇವೆಗಳನ್ನು ಕಡಿತ ಮಾಡಲಾಗುತ್ತಿದೆ. ಎಲ್ಲಾದರೂ ಯೂಟ್ಯೂಬ್‌ ವೀಕ್ಷಿಸುವಾಗ ಆಡ್‌ ಬ್ಲಾಕಿಂಗ್‌ ಸಾಫ್ಟ್‌ವೇರ್‌ ಪತ್ತೆಯಾದರೆ ನಿಮಗೆ ಯೂಟ್ಯೂಬ್‌ನಲ್ಲಿ ಪಾಪ್‌ಅಪ್‌ ಸಂದೇಶ ಕಾಣಿಸಲಿದೆ. ಆ ಸಂದೇಶದಲ್ಲಿ ಈ ರೀತಿ ಆಡ್‌ ಬ್ಲಾಕರ್‌ ಬಳಸಬಾರದು ಎಂಬ ವಿವರದ ಜತೆಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.


ಆ ಯೂಟ್ಯೂಬ್‌ ಅಲಾರ್ಟ್‌ನಲ್ಲಿ ಈ ರೀತಿ ಬರೆದಿರುತ್ತದೆ. ಯೂಟ್ಯೂಬ್‌ ಬಳಸುವಾಗ ಆಡ್‌ ಬ್ಲಾಕರ್‌ ಬಳಸುವುದನ್ನು ನಿಷೇಧಿಸಲಾಗಿದೆ. ಜಾಹೀರಾತುಗಳು ಈ ಸೇವೆಯ ಅಗತ್ಯ ಭಾಗವಾಗಿದೆ. ನೀವು ಯೂಟ್ಯೂಬ್‌ ಪ್ರೀಮಿಯಂಗೆ ಹಣ ಪಾವತಿಸಿದರೆ ಮಾತ್ರ ಜಾಹೀರಾತು ಕಾಣಿಸುವುದಿಲ್ಲ.ನಿಮಗೆ ಒಟ್ಟು ಮೂರು ಆಯ್ಕೆಗಳು ಇವೆ. ನೀವು ಯೂಟ್ಯೂಬ್‌ ಜಾಹೀರಾತುಗಳಿಗೆ ಅನುಮತಿ ನೀಡುವುದು. ಯೂಟ್ಯೂಬ್‌ನಲ್ಲಿ ಜಾಹೀರಾತು ಕಾಣಿಸುವುದನ್ನು ತಡೆಯುವುದನ್ನು ನಿಲ್ಲಿಸಲು ಆಡ್‌ ಬ್ಲಾಕರ್‌ ಆಯ್ಕೆಯನ್ನು ಯೂಟ್ಯೂಬ್‌ ಈ ಸಂದರ್ಭದಲ್ಲಿ ಪ್ರದರ್ಶಿಸುತ್ತದೆ. ಅಥವಾ ಯೂಟ್ಯೂಬ್‌ ಪ್ರೀಮಿಯಂಗೆ ಸೈನ್‌ಅಪ್‌ ಆಗಿ. ಅಥವಾ ಈ ಸಂದೇಶ ಇಗ್ನೋರ್‌ ಮಾಡಿ. ಈ ರೀತಿ ಮೂರು ಆಯ್ಕೆ ನೀಡುತ್ತದೆ. ಸಂದೇಶ ಇಗ್ನೋರ್‌ ಮಾಡಿದ ಬಳಿಕವೂ ನೀವು ಆಡ್‌ ಬ್ಲಾಕರ್‌ ಬಳಸುವುದು ಖಾತ್ರಿಯಾದರೆ ಯೂಟ್ಯೂಬ್‌ ಸೇವೆ ಸ್ಥಗಿತಗೊಳ್ಳಲಿದೆ.


ಎಲ್ಲಾದರೂ ನೀವು ಯೂಟ್ಯೂಬ್‌ನ ಈ ಎಚ್ಚರಿಕೆಯನ್ನು ಕಡೆಗಣಿಸಿದ್ದೀರಿ ಎಂದಿರಲಿ. ಮತ್ತೆ ನೀವು ಹಲವು ವಿಡಿಯೋಗಳನ್ನು ನೋಡಬಹುದು. ಈ ಸಂದರ್ಭದಲ್ಲಿ ನೀವು ಆಡ್‌ ಬ್ಲಾಕರ್‌ ಮೂಲಕ ಜಾಹೀರಾತುಗಳಿಗೆ ತಡೆ ನೀಡುತ್ತಿದ್ದೀರಾ ಎಂದು ಪರಿಶೀಲಿಸುತ್ತದೆ. ಮೂರು ಸ್ಟ್ರೈಕ್‌ ಬಳಿಕ ನಿಮಗೆ ಯೂಟ್ಯೂಬ್‌ ವೀಕ್ಷಣೆಗೆ ಅವಕಾಶ ಇರುವುದಿಲ್ಲ.


ಬಹುತೇಕರು ಆನ್‌ಲೈನ್‌ ಬಳಸುವಾಗ ಆಡ್‌ ಬ್ಲಾಕರ್‌ಗಳನ್ನು ಬಳಸುತ್ತಾರೆ. ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳು ಕಾಣಿಸದಂತೆ ಮಾಡಲು ಈ ರೀತಿ ಮಾಡುತ್ತಾರೆ. ಈ ರೀತಿಯ ಆಡ್‌ ಬ್ಲಾಕರ್‌ಗಳು ನಿಮ್ಮ ಕಂಪ್ಯೂಟರ್‌ಗಳಿಗೂ ಹಾನಿ ಮಾಡಬಹುದು. ನಿಮ್ಮ ಕಂಪ್ಯೂಟರ್‌ನ ಸುರಕ್ಷತೆಗೂ ತೊಂದರೆ ನೀಡಬಹುದು. ನಿಮ್ಮ ಇಂಟರ್‌ನೆಟ್‌ ಚಟುವಟಿಕೆ ಮೇಲೆ ನಿಗಾ ಇಡಬಹುದು. ಕೆಲವೊಂದು ಆಡ್‌ ಬ್ಲಾಕರ್‌ಗಳು ಉತ್ತಮ ಸೇವೆ ನೀಡುತ್ತವೆ. ಖಾಸಗಿತನಕ್ಕೆ ಧಕ್ಕೆಯಾಗದಂತೆ ಸೇವೆ ನೀಡುತ್ತಾವೆ.


ಕಳೆದ ಹಲವು ವರ್ಷಗಳಿಂದ ಯೂಟ್ಯೂಬ್‌ ಈ ಆಡ್‌ ಬ್ಲಾಕರ್‌ಗಳನ್ನು ಗಮನಿಸುತ್ತಿತ್ತು. ಈ ರೀತಿ ಬಳಸುವ ಜನರ ಬಗ್ಗೆ ಮೌನವಾಗಿದ್ದಿತ್ತು. ಇದೀಗ ಈ ಮೂಲಕ ತನ್ನ ಸೇವೆಯನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ಯೂಟ್ಯೂಬ್‌ ವೀಕ್ಷಣೆಗೆ ಅವಕಾಶ ನೀಡದೆ ಇರಲು ನಿರ್ಧರಿಸಿದೆ. ಇದರಿಂದ ಯೂಟ್ಯೂಬ್‌ ಪ್ರೀಮಿಯಂ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ.


ಈ ರೀತಿ ಅಲಾರ್ಟ್‌ ಸಂದೇಶ ಬರುವ ತನಕ ನಿರಾಂತಕವಾಗಿ ಇತರರು ಯೂಟ್ಯೂಬ್‌ನಲ್ಲಿ ಆಡ್‌ ಬ್ಲಾಕರ್‌ ಬಳಕೆ ಮುಂದುವರೆಸಬಹುದು.

ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಧ್ವಜವಂದನೆ

Posted by Vidyamaana on 2023-08-16 09:56:04 |

Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಧ್ವಜವಂದನೆ

ಪುತ್ತೂರು: ಚಿನ್ನಾಭರಣಗಳಲ್ಲಿ ವಿಶಿಷ್ಟ ಸ್ಥಾನಮಾನ ಕಾಯ್ದುಕೊಂಡಿರುವ ಪುತ್ತೂರಿನ ಪ್ರತಿಷ್ಠಿತ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಸಂಸ್ಥೆಯ ಮಾಲಕ ಜಿ.ಎಲ್‌ ಬಲರಾಮ ಆಚಾರ್ಯ ಅವರು ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು.

ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ, ವೇದ ಲಕ್ಷ್ಮೀಕಾಂತ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

Posted by Vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

Recent News


Leave a Comment: