ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಜೂ.11: ದ.ಕ.ಜಿಲ್ಲೆಯ ನೂತನ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿಗೆ

Posted by Vidyamaana on 2023-06-09 16:47:53 |

Share: | | | | |


ಜೂ.11: ದ.ಕ.ಜಿಲ್ಲೆಯ ನೂತನ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಮಂಗಳೂರಿಗೆ

ಮಂಗಳೂರು: ದ.ಕ.ಜಿಲ್ಲೆಯ ನೂತನ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೂ.11ರಂದು ದ.ಕ.ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಲಿರುವ ಅವರು ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದೇ ದಿನ ರಾತ್ರಿ ಬೆಂಗಳೂರಿಗೆ ಮರಳಲಿದ್ದಾರೆ.

ಜೂ.11ರಂದು ಬೆಳಗ್ಗೆ 8:35ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು 12:30ಕ್ಕೆ ಬಿಜೈಯಲ್ಲಿರುವ ಸರಕಾರಿ ಬಸ್ ನಿಲ್ದಾಣದಲ್ಲಿ ‘ಶಕ್ತಿ’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಪರಾಹ್ನ 3ಕ್ಕೆ ದ.ಕ.ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳ ಜೊತೆ ಪ್ರಗತಿಪರಿಶೀಲನೆ ಮಾಡುವರು. ರಾತ್ರಿ 9:50ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

ಮೂಡಿಗೆರೆಯಲ್ಲಿ ಮುಸ್ಲಿಂ ಯುವತಿ ಮನೆಯಲ್ಲಿ ಅಡಗಿ ಕುಳಿತಿದ್ದ ಅಜಿತ್

Posted by Vidyamaana on 2023-05-27 11:36:45 |

Share: | | | | |


ಮೂಡಿಗೆರೆಯಲ್ಲಿ ಮುಸ್ಲಿಂ ಯುವತಿ ಮನೆಯಲ್ಲಿ ಅಡಗಿ ಕುಳಿತಿದ್ದ ಅಜಿತ್

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ  ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಮುಸ್ಲಿಂ ಯುವತಿಯ ಜೊತೆ ಸ್ನೇಹ ಬೆಳೆಸಿದ ಆರೋಪದಲ್ಲಿ  ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದ್ದು, ಯುವತಿಯ ಮನೆಯಲ್ಲೇ ಅಜಿತ್ ಸಿಕ್ಕಿಬಿದ್ದಿದ್ದ. ಯುವತಿಯ ಮನೆಯ ಕಬೋರ್ಡ್​​​ನಲ್ಲಿ ಅವಿತು ಕುಳಿತಿದ್ದ ಎಂಬ ವಿಚಾರ ಬಯಲಾಗಿದೆ.

ಅಜಿತ್ ಕಬೋರ್ಡ್​​​ನಲ್ಲಿ ಅವಿತು ಕುಳಿತಿರುವುದು ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದ ಅಜಿತ್ ಮೇಲೆ ಯುವಕರ ಗುಂಪು ಹಲ್ಲೆ ಮಾಡಿತ್ತು. ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಮಾಡಿದ್ದಕ್ಕೆ ತನ್ನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದ.

ಈ ಮಧ್ಯೆ ಅಜಿತ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಅಜಿತ್​ಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲವು ದಾಖಲೆ ವೈಶಿಷ್ಟ್ಯಗಳೊಂದಿಗೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಂಪನ್ನ

Posted by Vidyamaana on 2024-01-30 19:04:19 |

Share: | | | | |


ಹಲವು ದಾಖಲೆ  ವೈಶಿಷ್ಟ್ಯಗಳೊಂದಿಗೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಂಪನ್ನ

ಪುತ್ತೂರು: ಜ.೨೭ ರಂದು ಬೆಳಿಗ್ಗೆ ಆರಂಭಗೊಂಡಿದ್ದ ೩೧ನೇ ವರ್ಷದ ಪುತ್ತೂರಿನ ಐತಿಹಾಸಿಕ ಕೋಟಿ ಚೆನ್ನಯ ಜೋಡು ಕರೆ ಕಂಬಳ ಜ.೨೯ರಂದು ಬೆಳಗಿನ ಜಾವ ಸಂಪನ್ನಗೊಂಡಿದೆ. ಎರಡು ಹಗಲು ಎರಡು ರಾತ್ರಿ ಕಂಬಳ ನಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಒಟ್ಟು ೬ ವಿಭಾಗಗಳ ೧೮೭ ಜೊತೆ ಕೋಣಗಳು  ಭಾಗವಹಿಸಿದ್ದು ಜ.೨೯ರಂದು ಬೆಳಿಗ್ಗೆ ೫ ಗಂಟೆಯ ಸುಮಾರಿಗೆ ಅಂತಿಮ ಸ್ಪರ್ಧೆಯು ನಡೆಯಿತು. ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವರ್ಷಂಪ್ರತಿಯಂತೆ ಈ ಬಾರಿಯೂ ೩೧ನೇ ವರ್ಷದ ಕೋಟಿ ಚೆನ್ನಯ ಜೋಡು ಕರೆ ಕಂಬಳವು ಬಹಳ ಅದ್ದೂರಿಯಾಗಿ ವಿಜ್ರಂಭಣೆಯಿಂದ ನಡೆದು ಹೊಸ ಇತಿಹಾಸ ನಿರ್ಮಿಸಿದೆ. ಕಂಬಳವು ಯಶಸ್ವಿಯಾಗಿ ನೆರವೇರಲು ಹಲವಾರು ದಿನಗಳಿಂದ ಹಗಲು ರಾತ್ರಿ ದುಡಿದ ಕಂಬಳ ಸಮಿತಿಯ ವಿವಿಧ ಪದಾಧಿಕಾರಿಗಳಿಗೆ, ಸದಸ್ಯರಿಗೆ ಎಲ್ಲಾ ಸ್ವಯಂಸೇವಕರಿಗೆ ಕಂಬಳ ಅಭಿಮಾನಿಗಳಿಗೆ ಹಾಗೂ ಇದಕ್ಕಾಗಿ ತನು, ಮನ ,ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ಮುಂದೆಯೂ ಕಂಬಳವು ಇದೇ ರೀತಿಯಾಗಿ ಯಶಸ್ವಿಯಾಗಿ ಮುಂದುವರಿಯಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಇದಕ್ಕೂ ಮೊದಲು ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ ,ಚನಿಲ ತಿಮ್ಮಪ್ಪ ಶೆಟ್ಟಿ ,ರಾಧಾಕೃಷ್ಣ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ಆರಿಯಡ್ಕ ಜೈರಾಜ್ ಭಂಡಾರಿ, ಸಿದ್ದನಾಥ ಎಸ್.ಕೆ. ಮೂಕಾಂಬಿಕ ಗ್ಯಾಸ್ ಏಜೆನ್ಸಿನ ಮಾಲಕ ಸಂಜೀವ ಆಳ್ವ, ಪ್ರಶಾಂತ್ ಶೆಣೈ, ನಗರಸಭಾ ಸದಸ್ಯರಾದ ರಮೇಶ್ ರೈ ನೆಲ್ಲಿಕಟ್ಟೆ , ಮುಹಮ್ಮದ್ ರಿಯಾಜ್, ಯೂಸುಫ್ ಡ್ರೀಮ್, ಶೈಲಾ ಪೈ, ಬಾಲಚಂದ್ರ, ಕೋಡಿಂಬಾಡಿ  ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಪೂಜಾರಿ ಸೂರ್ಯನಾಥ ಆಳ್ವ, ದಯಾನಂದ ರೈ ಕೋರ್ಮಂಡ, ಸಂತೋಷ್ ಕುಮಾರ್ ರೈ ಕೈಕಾರ, ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ, ಬಿ ಕೆ  ಶಿವಕುಮಾರ್, ನಗರಸಭಾ ನಿಕಟಪೂರ್ವಾಧ್ಯಕ್ಷ ಜೀವಂಧರ್ ಜೈನ್, ಅರಿಯಡ್ಕ ಚಿಕ್ಕಪ್ಪ ನಾಕ್, ಡಾ. ದೀಪಕ್ ರೈ, ಕೇಶವ ಯಂ, ನರಸಿಂಹ ಕಾಮತ್, ಕಿಶೋರ್ ಕುಮಾರ್  ಬೊಟ್ಯಾಡಿ, ಬವಿನ್ ಸವಜಾನಿ, ಶರತ್ ಕುಮಾರ್ ರೈ, ಬೆಟ್ಟ ಈಶ್ವರ ಭಟ್, ಭಾಸ್ಕರ ಗೌಡ ಕೋಡಿಂಬಾಳ, ಅರಿಯಡ್ಕ ಉದಯ ಶಂಕರ ಶೆಟ್ಟಿ,ಸಂತೋಷ್ ಶೆಟ್ಟಿ ಪ್ರಸಾದ್ ಪಾಣಾಜೆ, ದಯಾನಂದ ರೈ ಮನವಳಿಕೆ, ಬೂಡಿಯಾರ್ ಪುರುಷೋತ್ತಮ ರೈ ,ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಜಿಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ  ರಂಜಿತ್ ಬಂಗೇರ, ಪ್ರವೀಣ್ ಶೆಟ್ಟ ತಿಂಗಳಾಡಿ, ರೂಪ ರೇಖಾ ಆಳ್ವ, ಎಂ ಕುಶಲ ಪೆರಾಜೆ ,ಪ್ರವೀಣ್ ಕುಮಾರ್,  ನಿಹಾಲ್ ಪಿ. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ,ಜಗನ್ನಾಥ ರೈ ಜಿ, ಉಮಾನಾಥ್ ಶೆಟ್ಟಿ ಪೆರ್ನೆ,ತಿಂಗಳಾಡಿ ಬಾಲಯ ಲೋಹಿತ್ ಬಂಗೇರ,ದಯಾನಂದ ರೈ, ರಾಮನಾಥ್ ವಿಟ್ಲ ,ರೂಪೇಶ್ ರೈ ಆಲಿಮಾರ ,ದಿನಕರ ರೈ, ಸುಧೀರ್ ಶೆಟ್ಟಿ, ಗಂಗಾಧರ ಶೆಟ್ಟಿ ಕೈಕಾರ, ರಾಮಣ್ಣ ಪೂಜಾರಿ, ಅಬ್ದುಲ್ ರಜಾಕ್ ಬಿ ಎಚ್, ಹರಿಪ್ರಸಾದ್ ರೈ, ಬಾಲಕೃಷ್ಣ ಆಳ್ವ ಕೊಡಾಜೆ ,ಸತೀಶ್ ರೈ ಕಟಾವು ಶಿವರಾಮ ಭಟ್ ಬಿಕರ್ನ ಕಟ್ಟೆ,  ಆಕಾಶ್ ಐತಾಳ್, ಕೃಷ್ಣ ಪ್ರಸಾದ್ ಭಂಡಾರಿ, ರವಿ ಪ್ರೊವಿಜನ್ ಸ್ಟೋರ್ , ನವೀನ್ ಶೆಟ್ಟಿ, ಶಾಪಿ ಸುಳ್ಯ, ಮೋಹನ್ ನಾಯಕ್, ಚಂದ್ರಹಾಸ ಶೆಟ್ಟಿ, ಶೀನಪ್ಪ ಪೂಜಾರಿ ಎಂ .ಜಿ. ಅಬೂಬಕ್ಕರ್ ಉಪ್ಪಿನಂಗಡಿ, ಉಮೇಶ ನಾಯಕ್, ಗಿರಿಧರ ಹೆಗ್ಡೆ, ಹರ್ಷಕುಮಾರ್ ರೈ ಮಾಡಾವು, ಕೃಷ್ಣಪ್ಪ ಸಂಪ್ಯ, ಕೃಷ್ಣಲ್ ಸ್ಟೀಲ್ ಇಂಡಸ್ಟ್ರೀಸ್‌ನ ಮಾಲಕ ಕಿರಣ್ ಡಿಸೋಜಾ, ನಿರೀಕ್ಷಿತ್  ರೈ, ಮಂಜುನಾಥ ಗೌಡ, ಯೂಸುಫ್ ಗೌಸಿಯ, ಹಾಜಿ ಯೂಸುಫ್ ಕೈಕಾರ ನ್ಯಾಯವಾದಿ ರಾಕೇಶ್  ಮಸ್ಕರೇನಸ್, ಎಂ ಪಿ ಉಮ್ಮರ್ ,ಶರೂನ್  ಸಿಕ್ವೇರಾ, ಲೋಕೇಶ್ ಪಡ್ಡಾಯೂರು, ಹರೀಶ್  ವಾಲ್ತಾಜೆ ,ಆಯ್ಕೆ ಸಪ್ಲಾಯಿಸ್ ಮಾಲಕ ಇಮ್ರಾನ್ ಖಾನ್ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.

ಕಂಬಳದ ಸಮಾರೋಪ ಸಮಾರಂಭದ ಆರಂಭದಲ್ಲಿ ತೀರ್ಪುಗಾರರಿಗೆ ಆರೋಗ್ಯ ಇಲಾಖೆಯವರಿಗೆ, ಶಾಮಿಯಾನ ಬ್ಯಾಂಡ್ ಸಹಿತ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ವಿಜಯಕುಮಾರ್ ಜೈನ್ ಕಂಚಿನ ಮನೆ ,ಅಪ್ಪು ಯಾನೆ ವಲೇರಿಯನ್ ಡೇಸಾ, ಅಲ್ಲಿಪಾದೆ , ರಾಜೀವ ಶೆಟ್ಟಿ ಹೆಡ್ತೂರು , ಸುದರ್ಶನ್ ನಾಯಕ್ ಕಂಪ, ರಾಜೇಶ್ ನಾಯಕ್ ನೆಲ್ಲಿಕಟ್ಟೆ, ನವೀನ್ ನಾಯಕ್ ಬೆದ್ರಾಳ, ಸದಾಶಿವ ಸಾಮಾನಿ ಸಂಪಿಗೆದಡಿ, ಸಚಿನ್ ಸರೋಳಿ, ಗೋಪಾಲ ಶೆಟ್ಟಿ, ಸುಮಿತ್ ಶೆಟ್ಟಿ, ಸುಜಿತ್ ಶೆಟ್ಟಿ, ರತ್ನಾಕರ ನಾಯಕ್, ಗಂಗಾಧರ, ಆಲಿಕುಂಞ, ಪ್ರವೀಣ್ ಸಚಿನ್ ಸರೋಳಿ ಉಮಾಶಂಕರ್ ನಾಯಕ್ ಪಾಂಗಳಾಯಿ ಮೊದಲಾದವರನ್ನು ಸನ್ಮಾನಿಸಲಾಯಿತು

 ಸಮಿತಿಯ ವಿವಿಧ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ .ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಸಂಚಾಲಕ ವಸಂತಕುಮಾರ್  ರೈ ದುಗ್ಗಲ, ಉಪಾಧ್ಯಕ್ಷರಾದ ಶಿವರಾಮ ಆಳ್ವ ಬಳ್ಳಮಜಲು, ಜಿನ್ನಪ್ಪ ಪೂಜಾರಿ ಮುರ, ರೋಶನ್ ರೈ ಬನ್ನೂರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಗೋಪಾಲ ಕಡಂಬು ಮೂಡಬಿದ್ರೆ, ಹಸೈನಾರ್ ಬನಾರಿ, ಖಾದರ್ ಪೊಳ್ಯ ,ಪ್ರಕಾಶ ನೆಕ್ಕಿಲಾಡಿ , ಶಶಿಕಿರಣ್ ರೈ ನೂಜಿ ಬೈಲು ಪೂರ್ಣೇಶ್ ಭಂಡಾರಿ, ಶಶಿ ನೆಲ್ಲಿಕಟ್ಟೆ, ಸುರೇಶ್ ಚಿಕ್ಕ ಪುತ್ತೂರು, ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ವಸಂತಕುಮಾರ್ ರೈ ದುಗ್ಗಳ ಸಹಕರಿಸಿದರು.


 ಕನಹಲಗೆ: ೦೬ ಜೊತೆ  ಅಡ್ಡಹಲಗೆ: ೦೪ ಜೊತೆ

 ಹಗ್ಗ ಹಿರಿಯ: ೧೫ ಜೊತೆ  ನೇಗಿಲು ಹಿರಿಯ: ೪೦ ಜೊತೆ

 ಹಗ್ಗ ಕಿರಿಯ: ೨೫ ಜೊತೆ  ನೇಗಿಲು ಕಿರಿಯ: ೯೭ ಜೊತೆ

ಒಟ್ಟು ಕೋಣಗಳ ಸಂಖ್ಯೆ: ೧೮೭ ಜೊತೆ

ಕನಹಲಗೆ:( ೬.೫ ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )

ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್

ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಎ

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ ಬಿ

ಓಡಿಸಿದವರು: ಬಾರಾಡಿ ಸತೀಶ್

ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ ಬಿ

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ಬಿ

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ನೇಗಿಲು ಹಿರಿಯ:

ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ ಎ

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ

ಓಡಿಸಿದವರು: ಮಾಳ ಆಧೀಶ್ ಪೂಜಾರಿ

ನೇಗಿಲು ಕಿರಿಯ: ( ಸಮಾನ ಬಹುಮಾನ )

ಮುನಿಯಾಲ್ ಉದಯ ಕುಮಾರ್ ಶೆಟ್ಟಿ

ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ಉಡುಪಿ ಬ್ರಹ್ಮಗಿರಿ ಪ್ರಥಮ ಗಣನಾಥ ಹೆಗ್ಡೆ ಬಿ

ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

ಪುತ್ತಿಲ ಪರಿವಾರ ಅಸ್ತಿತ್ವಕ್ಕೆ

Posted by Vidyamaana on 2023-05-21 14:53:25 |

Share: | | | | |


ಪುತ್ತಿಲ ಪರಿವಾರ ಅಸ್ತಿತ್ವಕ್ಕೆ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಹೊಸ ಮನ್ವಂತರ ಸೃಷ್ಟಿಯ ಬಳಿಕ ಇದೀಗ ಪುತ್ತಿಲ ಪರಿವಾರ ಅಸ್ತಿತ್ವಕ್ಕೆ ಬಂದಿದೆ. ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ನಡೆದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಾದ ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಯಿತು.

ಬದಿಯಡ್ಕ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಗಳ ನವಜಾತ ಶಿಶು ಮೃತ್ಯು

Posted by Vidyamaana on 2023-02-18 14:42:11 |

Share: | | | | |


ಬದಿಯಡ್ಕ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಗಳ ನವಜಾತ ಶಿಶು ಮೃತ್ಯು

ಬದಿಯಡ್ಕ : ತಾಯಿಯ ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ನವಜಾತ ಶಿಶು ಸಾವಿಗೀಡಾಗಿದ ಹೃದಯ ವಿದ್ರಾವಕ ಘಟನೆ ಬದಿಯಡ್ಕದಲ್ಲಿ ವರದಿಯಾಗಿದೆ. ಎದೆಹಾಲು ಗಂಟಲಲ್ಲಿ ಸಿಲುಕಿ ಉಕ್ಕಿನಡ್ಕ ನಿವಾಸಿಗಳಾದ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಯ ದಿನದ 25 ಹಸುಗೂಸು ಸಾವಿಗೀಡಾಗಿದೆ.

     ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿತು. ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಆ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೂ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಂಚನೆ ಪ್ರಕರಣ : ಮುಸ್ಲಿಮ್ ಲೀಗ್ ನಾಯಕರ ಆಸ್ತಿ ಮುಟ್ಟುಗೋಲು

Posted by Vidyamaana on 2023-08-23 16:00:45 |

Share: | | | | |


ವಂಚನೆ ಪ್ರಕರಣ : ಮುಸ್ಲಿಮ್ ಲೀಗ್ ನಾಯಕರ ಆಸ್ತಿ ಮುಟ್ಟುಗೋಲು

ಕಾಸರಗೋಡು: ಫ್ಯಾಶನ್‌ ಗೋಲ್ಡ್‌ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ಲಿಂ ಲೀಗ್‌ ನಾಯಕರಾದ ಚಂದೇರದ ಪೂಕೋಯ ತಂಙಳ್‌, ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.


ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ ಹೊಣೆಗಾರಿಕೆಯುಳ್ಳ ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್‌ ಸೆಕ್ರೆಟರಿ ಸಂಜಯ್‌ಎಂ. ಕೌಲ್‌ ಅವರು ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆಗೆ ಮೇಲ್ನೋಟ ವಹಿಸುವ ಕಣ್ಣೂರು ಕ್ರೈಂ ಬ್ರ್ಯಾಂಚ್‌ ಎಸ್‌ಪಿ ಪಿ.ವಿ. ಸದಾನಂದನ್‌ ಅವರ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.


ಕಂಪೆನಿಯ ಚೇರ್ಮನ್‌ ಆಗಿರುವ ಖಮರುದ್ದೀನ್‌, ಪೂಕೋಯ ತಂಙಳ್‌ ಅವರ ಹೆಸರಿನಲ್ಲಿ ಪಯ್ಯನ್ನೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಕೊಠಡಿಗಳನ್ನೊಳಗೊಂಡ ಫ್ಯಾಶನ್‌ ಆರ್ನಮೆಂಟ್‌ ಜ್ಯುವೆಲ್ಲರಿ ಕಟ್ಟಡ ಹಾಗೂ ಬೆಂಗಳೂರು ಸಿಲಿಕುಂಡ ವಿಲೇಜ್‌ನಲ್ಲಿ ಪೂಕೋಯ ತಂಙಳ್‌ ಹೆಸರಿನಲ್ಲಿರುವ 1 ಎಕ್ರೆ ಭೂಮಿ ಮುಟ್ಟುಗೋಲು ಹಾಕಿಕೊಂಡ ಸೊತ್ತುಗಳಲ್ಲಿ ಒಳಗೊಂಡಿದೆ



Leave a Comment: