ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ : ಆರೋಪಿಗೆ ಜಾಮೀನು

Posted by Vidyamaana on 2023-12-06 21:25:29 |

Share: | | | | |


ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ : ಆರೋಪಿಗೆ ಜಾಮೀನು

ಪುತ್ತೂರು: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು, ಅಪಹರಿಸಿ, ನಂತರ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಕಡಬದ  ಯಜ್ಞೇಶ್ ಎಂಬವರಿಗೆ  ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಘಟನೆಯ ಹಿನ್ನಲೆ :

ದಿನಾಂಕ 10/10/2020 ರಂದು ಬೆಳಿಗ್ಗೆ 07:30 ಗಂಟೆಗೆ ಅಪ್ರಾಪ್ತ ಬಾಲಕಿಯು ತನ್ನ ಮನೆಯಿಂದ ಹೊರಡುವಾಗ ತನಗೆ ಇನ್ನು ಮೂರು ದಿನ ವಿಶೇಷ ತರಗತಿಯಿದ್ದು, ಬೊಳುವಾರಿನ  ತನ್ನ ಗೆಳತಿಯ ಮನೆಗೆ ಹೋಗಿ ಶುಕ್ರವಾರದಂದು ಸಂಜೆ ಮನೆಗೆ ಬರುವುದಾಗಿ ತಿಳಿಸಿ ಕಾಲೇಜಿಗೆ ಹೋಗಿರುತ್ತಾಳೆ. ಬಳಿಕ ಅಪ್ರಾಪ್ತ ಬಾಲಕಿಯು ಮನೆಗೆ ಫೋನ್ ಮಾಡದೆ ಇರುವುದರಿಂದ, ಅವಳ ಸ್ನೇಹಿತೆಯಲ್ಲಿ ವಿಚಾರಿಸಿದಾಗ, ಅವಳು ಸ್ನೇಹಿತೆಯ ಮನೆಗೆ ಹೋಗದೆ ಇರುವುದನ್ನು ತಿಳಿದು, ನಂತರ  ಕಾಲೇಜಿನಲ್ಲಿ ವಿಚಾರಿಸಿದಾಗ, ಮಧ್ಯಾಹ್ನದವರೆಗೆ ಕಾಲೇಜಿಗೆ ಬಂದು ನಂತರ ಬಂದಿರುವುದಿಲ್ಲ ಎಂಬುದನ್ನು ತಿಳಿದು, ಅಪ್ರಾಪ್ತ ಬಾಲಕಿಯ ತಂದೆಯು  ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು  ಭಾರತೀಯ ದಂಡ ಸಂಖ್ಯೆಯ ಕಲಂ 363 ರಂತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಅಪ್ರಾಪ್ತ ಬಾಲಕಿಯು ತನ್ನ ತಂದೆಯೊಂದಿಗೆ ದಿನಾಂಕ 13/10/2023 ರಂದು ಪೊಲೀಸ್ ಠಾಣೆಗೆ ಹಾಜರಾಗಿ ಆರೋಪಿಯನ್ನು ಕಳೆದ ಮೂರು ತಿಂಗಳಿನಿಂದ ಪ್ರೀತಿಸುತ್ತಿದ್ದು, ದಿನಾಂಕ 10 /10 /2023 ರಂದು ಮಡಿಕೇರಿಗೆ ಹೋಗಿ ಅಲ್ಲಿ ಆರೋಪಿಯ  ಅತ್ತೆ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿರುವುದಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಈ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 4ರನ್ವಯ ಪ್ರಕರಣ ದಾಖಲಿಸಿ, ತದನಂತರ ತನಿಖೆ ಮುಂದುವರಿಸಿ, ಆರೋಪಿಯನ್ನಲಾಗಿದ್ದ  ಯಜ್ಞೆಶ್ ರವರನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದರು.


    ಆರೋಪಿಯು ತನ್ನ ಪರ ವಕೀಲರಾದ ಕಜೆ ಲಾ ಚೇಂಬರ್ಸ್ ನ  ಶ್ರೀ ಮಹೇಶ್ ಕಜೆ ಅವರ ಮುಖಾಂತರ   ಜಾಮೀನು ಕೋರಿ ಅರ್ಜಿ   ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್ ವಿ ರವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಕಾಪು ಠಾಣೆ ಮಹಿಳಾ ಪೇದೆ ಆತ್ಮಹತ್ಯೆ ; ಕೆಎಸ್ಸಾರ್ಟಿಸಿ ಉದ್ಯೋಗಿ ಪತಿಯನ್ನು ಬಂಧಿಸಿದ ಪೊಲೀಸರು

Posted by Vidyamaana on 2024-04-01 20:14:15 |

Share: | | | | |


ಕಾಪು ಠಾಣೆ ಮಹಿಳಾ ಪೇದೆ ಆತ್ಮಹತ್ಯೆ ; ಕೆಎಸ್ಸಾರ್ಟಿಸಿ ಉದ್ಯೋಗಿ ಪತಿಯನ್ನು ಬಂಧಿಸಿದ ಪೊಲೀಸರು

ಉಡುಪಿ, ಎ.1: ಕಾಪು ಪೊಲೀಸ್ ಠಾಣೆ ಮಹಿಳಾ ಸಿಬಂದಿ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಮಾ.30ರಂದು ಕಾಪು ಠಾಣೆ ಸಿಬಂದಿ, ಬಾಗಲಕೋಟ ಮೂಲದ ಜ್ಯೋತಿ (28) ತನ್ನ ಪೊಲೀಸ್ ಕ್ವಾಟ್ರಸ್ ನಲ್ಲಿ ಸಾವಿಗೆ ಶರಣಾಗಿದ್ದರು. ಇವರ ಪತಿ ರವಿಕುಮಾರ್ ಕೆಎಸ್ಸಾರ್ಟಿಸಿ ಉದ್ಯೋಗಿಯಾಗಿದ್ದು ಬೆಳಗ್ಗೆ ಕೆಲಸಕ್ಕೆ ಹೊರಡುವ ಸಂದರ್ಭದಲ್ಲಿ ಪತ್ನಿ ನೇಣಿಗೆ ಶರಣಾಗಿದ್ದರೆಂದು ತಿಳಿಸಿದ್ದರು.

ಮುಳಿಯ ವೃಕ್ಷಾರೋಪಣ; ಸಾರ್ವಜನಿಕರಿಗೆ ೩,೦೦೦ಕ್ಕೂ ಅಧಿಕ ಗಿಡಗಳ ವಿತರಣೆ

Posted by Vidyamaana on 2024-06-06 11:17:26 |

Share: | | | | |


ಮುಳಿಯ ವೃಕ್ಷಾರೋಪಣ; ಸಾರ್ವಜನಿಕರಿಗೆ ೩,೦೦೦ಕ್ಕೂ ಅಧಿಕ ಗಿಡಗಳ ವಿತರಣೆ

ಪುತ್ತೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಳಿಯ ಜ್ಯುವೆಲ್ಸ್ ವತಿಯಿಂದ ಮುಳಿಯ ವೃಕ್ಷಾರೋಪಣ ಕಾರ್ಯಕ್ರಮದ ಮೂಲಕ ಪುತ್ತೂರಿನ ಮುಳಿಯ ಜ್ಯುವೆಲ್ಸ್ ಆವರಣದಲ್ಲಿ ಗ್ರಾಹಕರಿಗೆ ಗಿಡ ವಿತರಣೆ ಮಾಡಲಾಯಿತು.

ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಕುಮಾರ್ ಹೊಳ್ಳ ಅವರಿಗೆ ಗಿಡಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು, ನೆಲ್ಯಾಡಿ, ಸೋಮವಾರಪೇಟೆ ಶಾಖೆಗಳಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಏಕಕಾಲಕ್ಕೆ ನಡೆಯಿತು. ಎಲ್ಲಾ ಶೋರೂಮ್‌ಗಳಲ್ಲಿ ಸಾರ್ವಜನಿಕರಿಗೆ ೩,೦೦೦ಕ್ಕೂ ಅಧಿಕ ಗಿಡಗಳನ್ನು ವಿತರಿಸಲಾಯಿತು.

ವಿಟ್ಲ: ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎಲ್ ಎನ್ ಕೂಡೂರು ಹೃದಯಾಘಾತದಿಂದ ನಿಧನ

Posted by Vidyamaana on 2024-06-30 10:36:16 |

Share: | | | | |


ವಿಟ್ಲ: ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎಲ್ ಎನ್ ಕೂಡೂರು ಹೃದಯಾಘಾತದಿಂದ ನಿಧನ

ವಿಟ್ಲ :ವಿಟ್ಲ ನಿವಾಸಿ, ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ, ವಿಠಲ್‌ ಎಜ್ಯುಕೇಶನ್‌ ಸೊಸೈಟಿ ಸಂಚಾಲಕ ಎಲ್ ಎನ್ ಕೂಡೂರು ನಿಧನರಾದರು.

ಇವರು ಕೃಷಿಕರಾಗಿದ್ದು, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಲ್ಲಿ ಹಲವು ವರ್ಷಗಳ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಲಕ್ಷಾಂತರ ಅಭಿಮಾನಿ ಗಳಿಸಿದ್ದ ಹಾವೇರಿ ರಾಕ್ ಸ್ಟಾರ್‌ ಹೋರಿ ನಿಧನ

Posted by Vidyamaana on 2024-04-07 19:10:43 |

Share: | | | | |


ಲಕ್ಷಾಂತರ ಅಭಿಮಾನಿ ಗಳಿಸಿದ್ದ ಹಾವೇರಿ ರಾಕ್ ಸ್ಟಾರ್‌ ಹೋರಿ ನಿಧನ

ಹಾವೇರಿ: ಜಿಲ್ಲೆಯ ಹೆಸರಾಂತ ರಾಕ್ ಸ್ಟಾರ್ ಖ್ಯಾತಿಯ ಹೋರಿ (Bull) ಕೊನೆಯುಸಿರೆಳೆದಿದೆ. ಕಳೆದ ಕೆಲವು ದಿನಗಳಿಂದ ಹೋರಿ ಬಳಲುತ್ತಿತ್ತು. ಇಂದು ರಾಕ್ ಸ್ಟಾರ್ ಖ್ಯಾತಿಯ ಹೋರಿ ಸಾವನ್ನಪ್ಪಿದೆ. ಕಳೆದ ಹತ್ತು ವರ್ಷಗಳಿಂದ ಹೋರಿ ಹಬ್ಬದಲ್ಲಿ ರಾಕ್​ ಸ್ಟಾರ್​ ಭಾಗಿಯಾಗುತ್ತಿದ್ದನು.ಹಾವೇರಿಯ ಕಾಂಗ್ರೆಸ್ ಅಭ್ಯರ್ಥಿ ಆನಂದ್​ ಗಡ್ಡದೇವರಮಠ (Anand G

non

d

non

evaramath) ಮೃತ ಹೋರಿಯ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Former CM Basavaraj Bommai) ಸಹ ರಾಕ್​ ಸ್ಟಾರ್​ ಹೋರಿಯ ನಿಧನಕ್ಕೆ ಸಂತಾಪ ಸೂಚಿಸಿ ಎಕ್ಸ್​ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ರಾಕ್​ ಸ್ಟಾರ್​ ರಾಜ್ಯಾದ್ಯಂತ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದನು.

ಮಾವನಿಗೆ ಸೊಸೆಯಿಂದಲೇ ಹಲ್ಲೆ ; ಕೊಲೆಯತ್ನ ಕೇಸು ದಾಖಲು, ಆರೋಪಿತ ಕೆಇಬಿ ಅಧಿಕಾರಿ ಉಮಾಶಂಕರಿ ಪೊಲೀಸ್ ವಶಕ್ಕೆ

Posted by Vidyamaana on 2024-03-11 23:19:42 |

Share: | | | | |


ಮಾವನಿಗೆ ಸೊಸೆಯಿಂದಲೇ ಹಲ್ಲೆ ; ಕೊಲೆಯತ್ನ ಕೇಸು ದಾಖಲು, ಆರೋಪಿತ ಕೆಇಬಿ ಅಧಿಕಾರಿ ಉಮಾಶಂಕರಿ ಪೊಲೀಸ್ ವಶಕ್ಕೆ

ಮಂಗಳೂರು, ಮಾ.11: ವೃದ್ಧ ಮಾವನನ್ನು ಮನೆಯಲ್ಲಿ ಕೂಡಿಹಾಕಿ ಸೊಸೆಯೇ ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಕುಲಶೇಖರದಲ್ಲಿ ಬೆಳಕಿಗೆ ಬಂದಿದ್ದು, ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.


ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ(76) ಹಲ್ಲೆಗೀಡಾದವರು. ಇವರ ಮಗ ಪ್ರೀತಂ ಸುವರ್ಣ ವಿದೇಶದಲ್ಲಿ ಕೆಲಸದಲ್ಲಿದ್ದು, ಮನೆಯ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ತನ್ನ ವೃದ್ಧ ತಂದೆಗೆ ಪತ್ನಿ ಉಮಾಶಂಕರಿ ವಾಕಿಂಗ್ ಸ್ಟಿಕ್ ನಲ್ಲಿ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಮಗನ ಗಮನಕ್ಕೆ ಬಂದಿತ್ತು. ಅದರಂತೆ, ಪ್ರೀತಂ ಸುವರ್ಣ ತನ್ನ ತಂಗಿ ಮೂಡುಬಿದ್ರೆಯಲ್ಲಿ ಗಂಡನ ಮನೆಯಲ್ಲಿ ನೆಲೆಸಿರುವ ಪ್ರಿಯಾಗೆ ವಿಷಯ ತಿಳಿಸಿದ್ದರು.ಅಲ್ಲದೆ, ಸಿಸಿಟಿವಿ ದೃಶ್ಯ ಮುಂದಿಟ್ಟು ಪೊಲೀಸ್ ದೂರು ಕೊಡುವಂತೆ ಸೂಚಿಸಿದ್ದರು. ಮಗಳು ಪ್ರಿಯಾ ಸುವರ್ಣ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಹಲ್ಲೆಗೀಡಾದ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿತ ಮಹಿಳೆ ಉಮಾಶಂಕರಿ ಅತ್ತಾವರ ಕೆಇಬಿ ವಿಭಾಗದಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ. ಸರಕಾರಿ ಅಧಿಕಾರಿ ಎನ್ನುವ ದರ್ಪದಿಂದಲೋ ಏನೋ ವೃದ್ಧ ವ್ಯಕ್ತಿಯನ್ನು ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದು, ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.



Leave a Comment: