ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಶಬರಿಮಲೆ ಯಾತ್ರೆಗೆ ವೃತ ಕೈಗೊಂಡ ಪಾದ್ರಿ ಚರ್ಚ್ ಪರವಾನಿಗೆ ರಿಟರ್ನ್ ಮಾಡಿದ್ದೇಕೆ?

Posted by Vidyamaana on 2023-09-10 18:31:35 |

Share: | | | | |


ಶಬರಿಮಲೆ ಯಾತ್ರೆಗೆ ವೃತ ಕೈಗೊಂಡ ಪಾದ್ರಿ ಚರ್ಚ್ ಪರವಾನಿಗೆ ರಿಟರ್ನ್ ಮಾಡಿದ್ದೇಕೆ?

ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಅನುಸರಿಸಿದ 41 ದಿನಗಳ ವ್ರತವನ್ನು ಕೈಗೊಂಡುದಕ್ಕೆ ಕೇರಳದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಧಾರ್ಮಿಕ ಸೇವೆಗಳನ್ನು ನಿರ್ವಹಿಸುವುದಕ್ಕಾಗಿ ಚರ್ಚ್ ನೀಡಿದ್ದ ಪರವಾನಗಿಯನ್ನೇ ಹಿಂದಿರುಗಿಸಿ ಸುದ್ದಿಯಾಗಿದ್ದಾರೆ.

ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದಲ್ಲಿ ಪಾದ್ರಿಯಾಗಿರುವ ರೆವ್ ಮನೋಜ್ ಕೆ.ಜಿ. ಅವರು ಈ ತಿಂಗಳ ಕೊನೆಯಲ್ಲಿ ದೇವಾಲಯಕ್ಕೆ ತೀರ್ಥಯಾತ್ರೆಗೆ ಹೋಗುವ ಸಲುವಾಗಿ 41 ದಿನಗಳ ಸಾಂಪ್ರದಾಯಿಕ ವ್ರತವನ್ನು ಆಚರಿಸುತ್ತಿದ್ದಾರೆ. ಚರ್ಚ್‌ಗೆ ಈ ಬಗ್ಗೆ ತಿಳಿದಾಗ, ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದೆ.


ನಾನು ಕ್ರಿಶ್ಚಿಯನ್ ಸಿದ್ಧಾಂತಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ನನ್ನಿಂದ ವಿವರಣೆಯನ್ನು ಕೇಳಿದರು. ವಿವರಣೆಯನ್ನು ನೀಡುವ ಬದಲು, ನಾನು ಪಾದ್ರಿಯಾದಾಗ ಸ್ವೀಕರಿಸಿದ, ಚರ್ಚ್ ನನಗೆ ನೀಡಿದ ಗುರುತಿನ ಚೀಟಿ ಮತ್ತು ಪರವಾನಗಿಯನ್ನು ಹಿಂದಿರುಗಿಸಿದೆ” ಎಂದು ಮನೋಜ್ ಕೆ.ಜಿ. ಪಿಟಿಐಗೆ ತಿಳಿಸಿದ್ದಾರೆ.


ತಾನು ಮಾಡಿದ್ದು ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದ ನಿಯಮಗಳು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ನನ್ನ ಕೆಲಸವು ಚರ್ಚ್‌ನ ಸಿದ್ಧಾಂತಗಳನ್ನು ಆಧರಿಸಿಲ್ಲ, ಬದಲಿಗೆ ಅದು “ಲಾರ್ಡ್ಸ್” ಸಿದ್ಧಾಂತಗಳನ್ನು ಆಧರಿಸಿದೆ ಎಂದು ಮನೋಜ್ ಹೇಳಿದ್ದಾರೆ.


“ದೇವರು ಪ್ರತಿಯೊಬ್ಬರನ್ನು ಅವರ ಜಾತಿ, ಮತ, ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೆ ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ. ಇತರರನ್ನು ಪ್ರೀತಿಸುವುದು ಅವರ ಚಟುವಟಿಕೆಗಳಲ್ಲಿ ಸೇರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ನೀವು ಚರ್ಚ್ ಸಿದ್ಧಾಂತ ಅಥವಾ ದೇವರ ಸಿದ್ಧಾಂತವನ್ನು ಅನುಸರಿಸಲು ಬಯಸುತ್ತೀರಾ ಎಂದು ನಿರ್ಧರಿಸಬಹುದು.ನೀವು ದೇವರನ್ನು ಪ್ರೀತಿಸುತ್ತೀರಾ ಅಥವಾ ಚರ್ಚ್ ಅನ್ನು ಪ್ರೀತಿಸುತ್ತೀರಾ, ನೀವು ನಿರ್ಧರಿಸಬಹುದು. ‘ಚರ್ಚ್’ ಎಂದರೆ ಸಾಂಪ್ರದಾಯಿಕ, ನಿರ್ಮಿತ ಪದ್ಧತಿಗಳು” ಎಂದು 41 ದಿನಗಳ ವ್ರತ ಕೈಗೊಳ್ಳುವ ನಿರ್ಧಾರವನ್ನು ಟೀಕಿಸಿದವರಿಗೆ ಫೇಸ್‌ಬುಕ್‌ನಲ್ಲಿ ಸ್ಪಷ್ಟವಾದ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.

ಮನೋಜ್ ಪಾದ್ರಿಯಾಗುವ ಮೊದಲು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು.ಆಧ್ಯಾತ್ಮಿಕ ಬೋಧನೆಗಳಿಗೆ ಅಧಿಕೃತತೆಯನ್ನು ನೀಡುವ ಸಲುವಾಗಿ ಅವರು ಪಾದ್ರಿಯಾದೆ ಎಂದು ಹೇಳಿದರು

ಸಸಿಹಿತ್ಲು ಕಡಲತೀರದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಶ್ವ ಯೋಗ ದಿನಾಚರಣೆ

Posted by Vidyamaana on 2024-06-22 16:21:31 |

Share: | | | | |


ಸಸಿಹಿತ್ಲು ಕಡಲತೀರದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಶ್ವ ಯೋಗ ದಿನಾಚರಣೆ

ಮಂಗಳೂರು, ಜೂನ್.21: ಯೋಗ ಮತ್ತು ಯೋಗ್ಯತೆ ಎರಡೂ ಕೂಡಿ ಬಂದಾಗ ಮಾತ್ರ ವಿಕಾಸ ಸಾಧ್ಯ. ಆದರೆ ಎರಡೂ ಫಲಿಸಬೇಕೆಂದರೆ ಅತ್ಯಗತ್ಯ ನಮ್ಮ ಪ್ರಯತ್ನ. ದಕ್ಷಿಣ ಕನ್ನಡ ಎಂಬ ಸಾಧ್ಯತೆಗಳ ಸಾಗರದಲ್ಲಿ ಅಭಿವೃದ್ಧಿಯ ಒಂದು ನವಯುಗ ಪ್ರಾರಂಭಿಸಲು ನಾವೆಲ್ಲ ಸೇರಿ ಈ ನವಪಥದಲ್ಲಿ ನವ ಪ್ರಯತ್ನಗಳನ್ನು ಮಾಡಬೇಕು. ಇಡಿ ವಿಶ್ವವೇ ನಮ್ಮ ದಕ್ಷಿಣ ಕನ್ನಡದತ್ತ ನೋಡುವಂತೆ ಮಾಡಬೇಕು ಎಂಬ ಆಶಯದಿಂದ ಈಗಾಗಲೇ ಸಾಹಸ ಕ್ರೀಡೆಗಳ ಮೂಲಕ ಅಂತರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಕಲ್ಪಿಸಿದ ಸಸಿಹಿತ್ಲು ಕಡಲ ತೀರದಲ್ಲಿ ಇಂದು ಯೋಗ ವಿದ್ ಯೋಧ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. 

ಸಸಿಹಿತ್ಲು ಬೀಚಿನಲ್ಲಿ ನಡೆದ ಯೋಗ ವಿದ್ ಯೋಧ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸೇರಿ ಸಮುದ್ರ ತಟದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.

ಜನ್ಮ ಕೊಟ್ಟ ತಾಯಿಗೇ ಅತ್ಯಾಚಾರ ಯತ್ನ ವಿರೋಧಿಸಿದ್ದಕ್ಕೆ ಕುತ್ತಿಗೆ ಬಿಗಿದು ಕೊಲೆ

Posted by Vidyamaana on 2023-10-31 20:30:40 |

Share: | | | | |


ಜನ್ಮ ಕೊಟ್ಟ ತಾಯಿಗೇ ಅತ್ಯಾಚಾರ ಯತ್ನ  ವಿರೋಧಿಸಿದ್ದಕ್ಕೆ ಕುತ್ತಿಗೆ ಬಿಗಿದು ಕೊಲೆ

ಮಂಗಳೂರು, ಅ.31: ಹೆತ್ತ ತಾಯಿಯನ್ನೇ ಕೊಂದ ಪ್ರಕರಣದಲ್ಲಿ ಭಯಾನಕ ವಿಚಾರವನ್ನು ಪೊಲೀಸರು ಹೊರಗೆಡವಿದ್ದು ಕೊಲೆಗೂ ಮುನ್ನ ಮಗನೇ ತಾಯಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ.‌ ಕಟೀಲು ಬಳಿಯ ಗಿಡಿಗೆರೆ ಎಂಬಲ್ಲಿ ತಾಯಿಯನ್ನು ಕೊಲೆಗೈದ ಕೃತ್ಯದಲ್ಲಿ ಬಜ್ಪೆ ಪೊಲೀಸರು ಮಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಕಾರಣ ತಿಳಿದುಬಂದಿದೆ. 


ಕಟೀಲು ಸಮೀಪದ ಗಿಡಿಗೆರೆ ನಿವಾಸಿ ರತ್ನಾ ಶೆಟ್ಟಿ (56) ಎಂಬವರನ್ನು ಅವರ ಸ್ವಂತ ಮಗ  ರವಿರಾಜ್ ಶೆಟ್ಟಿ (33) ಅ.26ರ ಗುರುವಾರ  ರಾತ್ರಿ ಕೊಲೆಗೈದು ಮನೆಗೆ ಬೀಗ ಹಾಕಿ ಕಿನ್ನಿಗೋಳಿಯ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಭಾನುವಾರ ಬೆಳಗ್ಗೆ ತಾಯಿ ನೆಲೆಸಿದ್ದ ಬಾಡಿಗೆ ಮನೆಯಲ್ಲಿ ನೊಣಗಳು ಮುತ್ತಿಕೊಂಡಿದ್ದು ಸ್ಥಳೀಯರು ನೋಡಿದಾಗ ರತ್ನಾ ಶೆಟ್ಟಿ ಸಾವನ್ನಪ್ಪಿದ್ದು ಕಂಡುಬಂದಿತ್ತು. 


ಬಜ್ಪೆ ಪೊಲೀಸರು ಕೊಲೆ ಶಂಕೆಯಲ್ಲಿ ತನಿಖೆ ನಡೆಸಿದ್ದರು. ಮಗ ರವಿರಾಜ್ ಮೇಲೆ ಶಂಕೆ ಉಂಟಾಗಿ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತಾನೇ ಕೊಂದಿರುವುದು ಎಂದು ಒಪ್ಪಿಕೊಂಡಿದ್ದಾನೆ. ರತ್ನಾ ಅವರ ಪತಿ ದಯಾನಂದ ಶೆಟ್ಟಿ ಅವರು 7 ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ತಾಯಿ, ಮಗ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು.  ಅರೋಪಿ ರವಿ ಗಾಂಜಾ ವ್ಯಸನಿಯಾಗಿದ್ದು ಗಾಂಜಾ ಅಮಲಿನಲ್ಲಿ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿ ಕೈಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು ಅತ್ಯಾಚಾರವೆಸಗಿ ಕೊಲೆಗೈದಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ. 


ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದೆ‌. ಡ್ರಗ್ಸ್ , ಗಾಂಜಾ ಸೇವನೆ ಹಾಗೂ ಅತ್ಯಾಚಾರ ಎಸಗಿರುವ ಬಗ್ಗೆ ವೈದ್ಯಕೀಯ ವರದಿ ಬಳಿಕವೇ ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ಸ್ ಪೆಕ್ಟರ್ ಸಂದೀಪ್ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸರಕಾರದಿಂದ ಸೂಚನೆ

Posted by Vidyamaana on 2023-07-13 09:51:46 |

Share: | | | | |


ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸರಕಾರದಿಂದ ಸೂಚನೆ

ನವದೆಹಲಿ: ದೇಶದಲ್ಲೆಡೆ ಟೊಮೆಟೋ ದರ ಏರಿಕೆಯಾಗಿದೆ. ಕೆ.ಜಿಗೆ 150 ರೂ ದಾಟಿದಂತೆ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ

ಹೆಚ್ಚು ಟೊಮೆಟೋ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಬೆಳೆ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ , ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳಿಗೆ ಕೇಂದ್ರ ಸೂಚನೆ ನೀಡಿದೆ.


ಈ ಹಿನ್ನಲೆ ಗಗನಕ್ಕೇರಿರುವ ಟೊಮೆಟೋ ದರ ಇಳಿಕೆಯಾಗುವ ಸಾಧ್ಯತೆ ಇದೆ. ಜು.14 ಅನ್ವಯವಾಗುವಂತೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ದ ವ್ಯಾಪ್ತಿಯಲ್ಲಿ ಎನ್‌ಸಿಸಿಎಫ್ ಮತ್ತು ನಾಫೆಡ್‌ ವತಿಯಿಂದ ಟೊಮೆಟೋವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಬಗ್ಗೆ ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.


ಯಾವ ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಅದರ ಆಧಾರದಲ್ಲಿ ಟೊಮೆಟೋ ಪೂರೈಸಬೇಕು ಎಂಬ ವಿಚಾರವನ್ನೂ ಗುರುತಿಸಲಾಗಿದ್ದು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್‌ ಮತ್ತು ನಾಸಿಕ್‌, ಆಂಧ್ರಪ್ರದೇಶದದಿಂದ ಹೆಚ್ಚಿನ ಪ್ರಮಾಣದಲ್ಲಿ ಟೋಮೋಟೋ ಪೂರೈಕೆಯಾಗುತ್ತದೆ. ಇನ್ನು ದಿಲ್ಲಿ ಮತ್ತು ಎನ್‌ಸಿಆರ್‌ಗೆ ಕರ್ನಾಟಕದ ಕೋಲಾರ, ಹಿಮಾಚಲ ಪ್ರದೇಶದಿಂದ ಟೊಮೆಟೋ ಪೂರೈಕೆಯಾಗುತ್ತದೆ.


ಹೀಗಾಗಿ ನಾಸಿಕ್‌ನಿಂದ ಹೊಸ ಬೆಳೆ ಪೂರೈಕೆಯಾಗಲಿದೆ. ಮುಂದಿನ ತಿಂಗಳು ನಾರಾಯಣಗಾಂವ್‌, ಔರಂಗಾಬಾದ್‌, ಮಧ್ಯಪ್ರದೇಶಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುವ ವಿಶ್ವಾಸವನ್ನುಸರಕಾರದ ಮೂಡಿಸಿದೆ.

ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ ತೀರ್ಥಲತಾ ನಾಪತ್ತೆ

Posted by Vidyamaana on 2023-08-02 10:49:33 |

Share: | | | | |


ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ   ತೀರ್ಥಲತಾ ನಾಪತ್ತೆ

ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ ವಿವಾಹಿತೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ.ಇಲ್ಲಿನ ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ ಕಾಣೆಯಾದ ವಿವಾಹಿತೆ.


ಈ ಬಗ್ಗೆ ಅವರ ತಂದೆ ದೂರು ನೀಡಿದ್ದು, ತನ್ನ ಮಗಳನ್ನು ಗದಗ ಮೂಲದ ಮುಂಡರಗಿಯ ಶಿವರಾಜ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ತಂದೆ ಮನೆಗೆ ಬಂದಿದ್ದ ಆಕೆ ಸುಬ್ರಹ್ಮಣ್ಯದಲ್ಲಿರುವ ಡೆಂಟಲ್ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ತೆರಳಿ ಬಳಿಕ ಮನೆಗೆ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.


ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿಕೊಂಡು ಸಾರ್ವಜನಿಕ ಪ್ರಕಟನೆ ಹೊರಡಿಸಿ ಮಾಹಿತಿ ಸಿಕ್ಕಲ್ಲಿ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.

ವಿಧಾನ ಸೌಧ ವಾಸ್ತುದೋಷ: ಐದು ವರ್ಷಗಳಿಂದ ಮುಚ್ಚಿದ್ದ ಬಾಗಿಲು ಓಪನ್

Posted by Vidyamaana on 2023-06-24 16:06:21 |

Share: | | | | |


ವಿಧಾನ ಸೌಧ ವಾಸ್ತುದೋಷ: ಐದು ವರ್ಷಗಳಿಂದ ಮುಚ್ಚಿದ್ದ ಬಾಗಿಲು ಓಪನ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ ಶನಿವಾರ ಒಳ ಪವೇಶಿಸಿ ಮೌಢ್ಯದ ವಿರುದ್ಧ ತಮ್ಮ ನಿಲುವನ್ನು ಮತ್ತೆ ಸಾಬೀತುಪಡಿಸಿದ್ದಾರೆ.ಜನರ ಬಗ್ಗೆ ಕಾಳಜಿ,ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ.ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ,ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ.ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ.ನಡೆ – ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ.ಜನತೆಯ ಆಶೀರ್ವಾದ ಇರಲಿ.” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಅನ್ನಭಾಗ್ಯ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆ ವೇಳೆ ಸಿಎಂ ಬಾಗಿಲು ತೆರೆಸುವ ನಿರ್ಧಾರ ಕೈಗೊಂಡಿದ್ದಾರೆ. ಲಿಫ್ಟ್ ನಲ್ಲಿ ವಿಧಾನಸೌಧದ ಮೂರನೇ ಮಹಡಿಗೆ ಬಂದ ಸಿಎಂ ದಕ್ಷಿಣ ದ್ವಾರ ಬಂದ್‌ ಆಗಿರುವುದನ್ನು ಗಮನಿಸಿ ಜತೆಗಿದ್ದ ಅಧಿಕಾರಿಗಳಿಗೆ ಬಾಗಿಲು ಏಕೆ ಮುಚ್ಚಿದೆ ಎಂದು ಪ್ರಶ್ನಿಸಿದ್ದಾರೆ. ಸಿಬಂದಿ ಪಶ್ಚಿಮ ದ್ವಾರ ಮುಖೇನ ಒಳ ಹೋಗಿ ದಕ್ಷಿಣ ಬಾಗಿಲು ತೆರೆದ ಬಳಿಕ ಸಿದ್ದರಾಮಯ್ಯ ಅದೇ ದಾರಿಯಲ್ಲಿ ಒಳ ಪ್ರವೇಶಿಸಿ ಸಭೆ ನಡೆಸಿದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಮುಚ್ಚಿದ್ದ ದಕ್ಷಿಣ ದ್ವಾರವನ್ನು ಅಧಿಕಾರಿಗಳಿಗೆ ಸೂಚನೆ ನೀಡಿ ತೆರೆಸಿದ್ದರು.



Leave a Comment: