ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್‌: ಹೆಚ್ಚುವರಿ SPP ಹುದ್ದೆಗೆ ಜಾಯ್ಕಾ ಕೊಥಾರಿ ರಾಜೀನಾಮೆ

Posted by Vidyamaana on 2024-06-11 19:33:50 |

Share: | | | | |


ಪ್ರಜ್ವಲ್ ರೇವಣ್ಣ ಅಶ್ಲೀಲ  ವೀಡಿಯೋ ಕೇಸ್‌: ಹೆಚ್ಚುವರಿ SPP ಹುದ್ದೆಗೆ ಜಾಯ್ಕಾ ಕೊಥಾರಿ  ರಾಜೀನಾಮೆ

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ಪೊಲೀಸರ ತನಿಖೆಗೆ ವಹಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಎಸ್‌ಐಟಿ ಪರವಾಗಿ ವಾದಿಸೋದಕ್ಕೆ ಹೆಚ್ಚುವರಿ ಎಸ್ ಪಿಪಿಯಾಗಿ ಜಾಯ್ನಾ ಕೊಥಾರಿ ಅವರನ್ನು ನೇಮಿಸಲಾಗಿತ್ತು.ಇಂತಹ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದಾರೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ, ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್ ಪ್ರಕರಣ, ಭವಾನಿ ರೇವಣ್ಣ ವಿರುದ್ಧದ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ಪೊಲೀಸರ ಮೂಲಕ ತನಿಖೆ ನಡೆಸುತ್ತಿದೆ. ಈಗಾಗಲೇ ಹಲವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಆರೋಪಿಗಳಿಗೆ ಸಂಬಂಧಿಸಿದಂತ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೆಚ್ಚುವರಿ ಎಸ್ ಪಿಪಿಯಾಗಿ ಜಾಯ್ನಾ ಕೊಥಾರಿ ಸಮರ್ಥವಾಗೇ ವಾದಿಸಿದ್ದರು.

ಅನ್ ನ್ಯಾಚುರಲ್ ಸೆಕ್ಸ್ ಗೆ ಫೋರ್ಸ್ ಮಾಡಿದ ಪತಿಯ ಮ್ಯಾಟರ್ ಮೇಲೆ ದಾಳಿ ಮಾಡಿದ ಪತ್ನಿ

Posted by Vidyamaana on 2024-01-29 21:24:41 |

Share: | | | | |


ಅನ್ ನ್ಯಾಚುರಲ್ ಸೆಕ್ಸ್ ಗೆ ಫೋರ್ಸ್ ಮಾಡಿದ ಪತಿಯ ಮ್ಯಾಟರ್ ಮೇಲೆ ದಾಳಿ ಮಾಡಿದ ಪತ್ನಿ

ಲಕ್ನೋ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಪಡಿಸಿದ್ದಕ್ಕೆ ಸಿಟ್ಟಿನಲ್ಲಿ ಪತ್ನಿಯೇ ಪತಿಯ ಶಿಶ್ನವನ್ನು ಕಚ್ಚಿ ಗಾಯಗೊಳಿಸಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.‌


ತೀವ್ರ ಗಾಯಗೊಂಡಿದ್ದ ರಾಮು ನಿಶಾದ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜ.28ರಂದು ಘಟನೆ ನಡೆದಿದ್ದು ರಾಮು ನಿಶಾದ್ ತನ್ನ ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಪತ್ನಿ ಒಪ್ಪದೇ ಇದ್ದು ಇಬ್ಬರ ನಡುವೆ ಜಗಳ ಆಗಿತ್ತು. ಸಿಟ್ಟಿನಲ್ಲಿದ್ದ ಪತ್ನಿ ಪತಿಯ ಖಾಸಗಿ ಅಂಗವನ್ನು ಹಲ್ಲಿನಿಂದ ಕಚ್ಚಿದ್ದಾಳೆ. ಆಸ್ಪತ್ರೆಗೆ ದಾಖಲಾಗಿದ್ದಾರೆ. 


ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಪತಿ ಬೇಡಿಕೆ ಇಟ್ಟಿದ್ದಕ್ಕೆ ಬೇಸರಗೊಂಡು ಹೀಗೆ ಮಾಡಿರುವುದಾಗಿ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ. ಮಹಿಳೆ ವಿರುದ್ಧ ಸೆಕ್ಷನ್ 326 ರ ಅಡಿಯಲ್ಲಿ ಉದ್ದೇಶಪೂರ್ವಕ ತೀವ್ರ ಗಾಯವನ್ನು ಉಂಟುಮಾಡಿದ ಮತ್ತು ಸೆಕ್ಷನ್ 506 ರ ಅಡಿಯಲ್ಲಿ ಜೀವಕ್ಕೆ ಅಪಾಯ ಉಂಟು ಮಾಡಬಲ್ಲ ರೀತಿ ವರ್ತಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಕಮಲ ಬಿಟ್ಟು ಡಿವಿಎಸ್ ಕೈ ಹಿಡಿಯೋದು ಫಿಕ್ಸ್

Posted by Vidyamaana on 2024-03-19 16:51:09 |

Share: | | | | |


ಕಮಲ ಬಿಟ್ಟು ಡಿವಿಎಸ್ ಕೈ ಹಿಡಿಯೋದು ಫಿಕ್ಸ್

ಬೆಂಗಳೂರು, ಮಾ.19: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಡಿವಿ ಸದಾನಂದಗೌಡ(DV S

non

ananda Gowda) ಅವರು ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಸಂಪರ್ಕದಲ್ಲಿರುವುದನ್ನು ಗೌಡ್ರು ಹೇಳಿದ್ದಾರೆ. ಇಂದು ಒಕ್ಕಲಿಗರ ಸಂಘದೊಂದಿಗೆ ಸಭೆ ನಡೆಸಿದ ಸದಾನಂದಗೌಡ, ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಸದಾನಂದ ಗೌಡ ಅವರ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಸಂಘದ ಅಧ್ಯಕ್ಷರು ಘೋಷಿಸಿದ್ದಾರೆ.

ನಾಳೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ ಎಂದು ಹೇಳಿದ ಸದಾನಂದಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷರು, ನಿರ್ದೇಶಕರ ಜತೆ ಸಭೆ ನಡೆಸಿದ್ದೇನೆ. ಒಂದಷ್ಟು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಈಗ ಯಾವುದನ್ನೂ ನಾನು ಹೇಳುವುದಿಲ್ಲ. ಎಲ್ಲವನ್ನೂ ನಾಳೆ ಹೇಳುತ್ತೇನೆ ಎಂದರು.ಸದಾನಂದಗೌಡ ನಿರ್ಧಾರಕ್ಕೆ ಒಕ್ಕಲಿಗರ ಸಂಘದ ಬೆಂಬಲ

ಸಭೆ ಬಳಿಕ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ, ಸದಾನಂದಗೌಡರು ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲವಿದೆ. ನಾಳೆ ಅವರೇ ಸುದ್ದಿಗೋಷ್ಠಿ ಮಾಡಿ ಎಲ್ಲಾ ಹೇಳುತ್ತಾರೆ ಎಂದರು.ಒಕ್ಕಲಿಗ ಸಮುದಾಯಕ್ಕೆ ಮೂರು ಪಕ್ಷಗಳಲ್ಲೂ ಅನ್ಯಾಯ ಆಗಿದೆ. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ 8 ಟಿಕೆಟ್ ಕೊಡಲಾಗಿದೆ. ಒಕ್ಕಲಿಗ ಸಮುದಾಯದ ಇಬ್ಬರಿಗೆ ಮಾತ್ರ ಟಿಕೆಟ್ ಕೊಡಲಾಗಿದೆ. ಒಕ್ಕಲಿಗ ಸಮುದಾಯಕ್ಕೂ ಎಂಟು ಕಡೆ ಟಿಕೆಟ್ ಕೊಡಬೇಕು. ಬಿಜೆಪಿಯಲ್ಲಿ ಸಿ.ಟಿ.ರವಿ, ಪ್ರತಾಪ್ ​ಸಿಂಹಗೆ ಟಿಕೆಟ್ ಕೊಟ್ಟಿಲ್ಲ. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಅಕ್ಕನ ಬ್ಯಾಗ್‍ನಿಂದ 8 ಲಕ್ಷದ ಚಿನ್ನ ಎಗರಿಸಿದ ತಂಗಿ

Posted by Vidyamaana on 2024-02-02 08:58:27 |

Share: | | | | |


ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಅಕ್ಕನ ಬ್ಯಾಗ್‍ನಿಂದ 8 ಲಕ್ಷದ ಚಿನ್ನ ಎಗರಿಸಿದ ತಂಗಿ

ಬೆಂಗಳೂರು: ಸ್ವಂತ ಅಕ್ಕನ ಆಭರಣಗಳನ್ನೇ ಕದ್ದು ತಂಗಿಯೊಬ್ಬಳು ಕದ್ದು ಜೈಲು ಸೇರಿದ ಪ್ರಕರಣವೊಂದು ನಗರದಲ್ಲಿ ವರದಿಯಾಗಿದೆ.


ಅಕ್ಕನ ಜೊತೆ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ, ಆಭರಣಗಳ ಮೇಲೆ ಕಣ್ಣು ಹಾಕಿದ್ದ ತಂಗಿ ಕತ್ತಲಲ್ಲಿ ಅಕ್ಕನ ಬ್ಯಾಗ್‍ನಲ್ಲಿ ಕೈಯಾಡಿಸಿ ಆಭರಣ ಕದ್ದಿದ್ದಾಳೆ. ದಂಡು ರೈಲು ನಿಲ್ದಾಣ ಬರುತ್ತಿದ್ದಂತೆ ಸದ್ದಿಲ್ಲದೇ ಚಿನ್ನಾಭರಣ ದೋಚಿ ಏನೂ ಗೊತ್ತಿಲ್ಲದವಳಂತೆ ಸುಮ್ಮನಿದ್ದಳು. ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ್ದ ಅಕ್ಕ ಲಲಿತಾಗೆ ಚಿನ್ನಾಭರಣ ಕಳುವಾಗಿರುವುದು ತಿಳಿದಿದೆ.


ಆಭರಣ ಕಳವು ಬಗ್ಗೆ ರೈಲ್ವೇ ಪೊಲೀಸರಿಗೆ (Police) ಲಲಿತಾ ದೂರು ನೀಡಿದ್ದಾರೆ. ಪೊಲೀಸರು ಲಲಿತಾಳ ತಂಗಿ ಚಂದ್ರ ಶರ್ಮಾಳ ನಡವಳಿಕೆ ಮೇಲೆ ಅನುಮಾನ ಪಟ್ಟು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಬಂಧಿತಳಿಂದ 8.50 ಲಕ್ಷ ರೂ. ಮೌಲ್ಯದ 152 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.


ಆರೋಪಿ ಚಂದ್ರ ಶರ್ಮಾಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಬಡಗನ್ನೂರು : ಭಾರೀ ಗಾಳಿ-ಮಳೆಗೆ ಶಾಲಾ ಕಾಂಪೌಂಡ್ ಕುಸಿತ

Posted by Vidyamaana on 2023-11-09 11:26:22 |

Share: | | | | |


ಬಡಗನ್ನೂರು : ಭಾರೀ ಗಾಳಿ-ಮಳೆಗೆ ಶಾಲಾ ಕಾಂಪೌಂಡ್ ಕುಸಿತ

ಪುತ್ತೂರು : ನಿನ್ನೆ ಸುರಿದ ಭಾರೀ ಗಾಳಿ-ಮಳೆಗೆ ಶಾಲಾ ಕಾಂಪೌಂಡ್ ಕುಸಿದ ಘಟನೆ ಬಡಗನ್ನೂರಿನಲ್ಲಿ ನಡೆದಿದೆ.

ಬಡಗನ್ನೂರಿನ ಶಾಲಾ ಕಾಂಪೌಂಡ್ ನಿನ್ನೆ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಕುಸಿದು ಬಿದ್ದಿದೆ.

ಘಟನೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಗಣಿ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಮಹಿಳಾ ಅಧಿಕಾರಿಯನ್ನು ಕತ್ತು ಕೊಯ್ದು ಭೀಕರ ಕೊಲೆ ; ಮನೆಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ

Posted by Vidyamaana on 2023-11-05 15:11:03 |

Share: | | | | |


ಗಣಿ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಮಹಿಳಾ ಅಧಿಕಾರಿಯನ್ನು ಕತ್ತು ಕೊಯ್ದು ಭೀಕರ ಕೊಲೆ ; ಮನೆಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ

ಬೆಂಗಳೂರು, ನ.5: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಮಹಿಳಾ ಅಧಿಕಾರಿಯೊಬ್ಬರನ್ನು ಬೆಂಗಳೂರಿನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ಪ್ರತಿಮಾ (45) ಎಂಬ ಅಧಿಕಾರಿಯನ್ನು ಅವರ ಮನೆಯಲ್ಲೇ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. 


ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್‌ ಅಪಾರ್ಟ್ಮೆಂಟ್‌ ನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪ್ರತಿಮಾ ಅವರು ಬೆಂಗಳೂರಿನ  ಗ್ರಾಮಾಂತರ ಜಿಲ್ಲೆಯ ಗಣಿ ಮತ್ತು ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 


ಗಂಡ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು. ರಾತ್ರಿ 8 ಗಂಟೆಗೆ ಕಚೇರಿಯಿಂದ ಸರ್ಕಾರಿ ವಾಹನದಲ್ಲಿಯೇ ಮನೆಗೆ ಬಂದಿದ್ದು ಆಬಳಿಕ ಮನೆಗೆ ನುಗ್ಗಿದ ಆಗಂತುಕರು ಕೊಲೆ ಮಾಡಿ ಹೋಗಿದ್ದಾರೆ. ಪರಿಚಿತರೇ ಈ ಕೃತ್ಯ  ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶನಿವಾರ ರಾತ್ರಿ ಪ್ರತಿಮಾ ಅವರಿಗೆ ಅಣ್ಣ ಕರೆ ಮಾಡಿದ್ದು, ಕರೆ ಸ್ವೀಕರಿಸಿರಲಿಲ್ಲ. ಬೆಳಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಹೀಗಾಗಿ ಇದೊಂದು ಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿದೆ. 


18 ವರ್ಷಗಳ ಹಿಂದೆ ಪ್ರತಿಮಾ ಹಾಗೂ ತೀರ್ಥಹಳ್ಳಿಯ ಸತ್ಯನಾರಾಯಣ ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಪ್ರತಿಮಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನೌಕರಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಎಸ್ಸೆಸ್ಸೆಲ್ಸಿ ಓದುವ ಮಗನಿದ್ದಾನೆ. ತೀರ್ಥಹಳ್ಳಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದು ಅಲ್ಲಿ ಎರಡು ಎಕರೆ ಅಡಿಕೆ ತೋಟವೂ ಇದ್ದುದರಿಂದ ತಂದೆ, ಮಗ ಅಲ್ಲಿಗೆ ತೆರಳಿದ್ದರು. ಇತ್ತ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಪ್ರತಿಮಾ ಒಂಟಿಯಾಗಿಯೇ ನೆಲೆಸಿದ್ದರು.



Leave a Comment: