ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಸುದ್ದಿಗಳು News

Posted by vidyamaana on 2024-07-03 20:52:26 |

Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಗರದ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯುತಿದ್ದ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದರು.

ಘಟನೆ ನಡೆದ ವಿಚಾರ ತಿಳುಯುತ್ತಲೇ ಸ್ಥಳಕ್ಕೆ ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ನಡುವೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು.

ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ.

 Share: | | | | |


ಮೂಡುಬಿದಿರೆ: ವಿಶಾಲ್ ಟೂರಿಸ್ಟ್ ಬಸ್ ಪಲ್ಟಿ: ಹಲವು ಮಂದಿಗೆ ಗಾಯ

Posted by Vidyamaana on 2023-08-26 01:32:33 |

Share: | | | | |


ಮೂಡುಬಿದಿರೆ: ವಿಶಾಲ್ ಟೂರಿಸ್ಟ್ ಬಸ್ ಪಲ್ಟಿ: ಹಲವು ಮಂದಿಗೆ ಗಾಯ

ಮೂಡುಬಿದಿರೆ: ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಶುಕ್ರವಾರ ರಾತ್ರಿ ವಿಶಾಲ್ ಟೂರಿಸ್ಟ್ ಬಸ್ ಪಲ್ಟಿಯಾಗಿ ಹಲವು ಮಂದಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಸ್ಸು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಆಗಿದ್ದು, ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ ಗಾಂಧೀನಗರದ ನಡುವೆ

ಅಪಘಾತಕ್ಕೀಡಾಗಿದೆ. ಒಟ್ಟು 27 ಮಂದಿ

ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಊರವರು ಜಮಾಯಿಸಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಸೇವೆಯ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

ಶಾಸಕರ ಇಂದಿನ ಕಾರ್ಯಕ್ರಮ ಜು 16

Posted by Vidyamaana on 2023-07-15 23:16:57 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 16

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 16 ರಂದು...

ಬೆಳ್ಳಗ್ಗೆ 10 ಗಂಟೆಗೆ  ಕೆಮ್ಮಾಯಿಯಲ್ಲಿ ವಿಘ್ನೇಶ್ ಇಂಟರ್ಲಾಕ್ಸ್ ಶಾಪ್ ಉಧ್ಘಾಟನಾ ಸಮಾರಂಭ

ಬೆಳ್ಳಗ್ಗೆ  10:30 ಕ್ಕೆ ಪಡ್ನೂರ್ ವಲಯ ದಿಂದ ಶಾಸಕರಿಗೆ ಅಭಿನಂದನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ಲೋ ಫೆಸ್ಟ್ ಗೆ ಚಾಲನೆ

Posted by Vidyamaana on 2023-12-20 20:33:26 |

Share: | | | | |


ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ಲೋ ಫೆಸ್ಟ್ ಗೆ ಚಾಲನೆ

ಪುತ್ತೂರು: ಸುಳ್ಯ, ಕುಶಾಲನಗರ, ಹಾಸನದಲ್ಲಿ ಚಿನ್ನಾಭರಣದ ಮಳಿಗೆ ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ 2024ನೇ ಜ.15ರ ತನಕ ನಡೆಯುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ’ಗ್ಲೋ ಫೆಸ್ಟ್’ ಗೆ ಡಿ.18ರಂದು ಚಾಲನೆ ನೀಡಲಾಯಿತು. 2ಸಾವಿರಕ್ಕೂ ಮಿಕ್ಕಿ ವಿನ್ಯಾಸದ ಕಣ್ಮನ ಸೆಳೆಯುವ ವಜ್ರಾಭರಣಗಳ ಸಂಗ್ರಹದ ಗ್ಲೋ ಫೆಸ್ಟ್ ಅನ್ನು ಪ್ರತಿ ವರ್ಷದಂತೆ ನಾಲ್ವರು ಸಾಧಕ ಮಹಿಳೆಯರು ಉದ್ಘಾಟಿಸಿದರು.



ಸುಮಾರು ಮೂರು ತಲೆಮಾರುಗಳಿಂದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನ ಗ್ರಾಹಕರಾಗಿರುವ ಭಜನಾ ಸಂಕೀರ್ತಣೆ ಸಹಿತ ಹಲವು ಧಾರ್ಮಿಕ ಕಾರ್ಯದಲ್ಲಿ ಸೇವೆ ನೀಡುತ್ತಿರುವ ವಿಜಯ ಆರ್ ನಾಯಕ್, ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ವಿದ್ಯಾ ಆರ್ ಗೌರಿ, ಪ್ರಗತಿ ಪರ ಕೃಷಿಕರಾಗಿರುವ ಸೀಮಾ ಆಳ್ವ, ಇನ್ನರ್‌ವೀಲ್ ಕ್ಲಬ್‌ನಲ್ಲಿ ತೊಡಗಿಸಿಕೊಂಡಿರುವ ನ್ಯಾಯವಾದಿ ಸೀಮಾನಾಗರಾಜ್ ಅವರು ಜೊತೆಯಾಗಿ ಗ್ಲೋ ಫೆಸ್ಟ್ ಅನ್ನು ಉದ್ಘಾಟಿಸಿದರು.

ಎಲ್ಲರಿಗೂ ಕೈಗೆಟಕುವ ಆಭರಣ ಇಲ್ಲಿದೆ:

ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ದಕ್ಷಿಣ ಕನ್ನಡ ಮಾತ್ರವಲ್ಲ ದೇಶ ವಿದೇಶಕ್ಕೆ ಹೆಸರುವಾಸಿಯಾಗಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಮಳಿಗೆ ಅತ್ಯುತ್ತಮ ದರ, ಗುಣಮಟ್ಟ ಹಾಗು ವಿಭಿನ್ನ ಶೈಲಿಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಇವತ್ತು ಗ್ಲೋ ಫೆಸ್ಟ್ ಮೂಲಕ ಕೈಗೆಟಕುವ ದರದಲ್ಲೂ ವಜ್ರದ ಆಭರಣ ಸಿಗುತ್ತದೆ ಎಂಬ ಅರಿವನ್ನು ಗ್ರಾಹಕರಿಗೆ ಪರಿಚಯಿಸಿದ್ದಾರೆ ಎಂದರು.

ಗುಣಮಟ್ಟ, ನಂಬಿಕೆಯಲ್ಲಿ ಜಿ.ಎಲ್.ಆಚಾರ್ಯ ಪ್ರಸಿದ್ದಿ:

ನ್ಯಾಯವಾದಿ ಸೀಮಾ ನಾಗರಾಜ್ ಅವರು ಮಾತನಾಡಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯಲ್ಲಿ ಚಿನ್ನದ ಗುಣಮಟ್ಟ ಮತ್ತು ನಂಬಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ ಗ್ರಾಹಕರಿಗೆ ಆಭರಣ ಖರೀದಿಸುವಲ್ಲಿ ಪ್ರೋತ್ಸಾಹ ನೀಡುತ್ತಿದೆ. ಇಲ್ಲಿನ ಚಿನ್ನದ ಹೂಡಿಕೆಗೆ ಸಂಬಂಧಿಸಿ ಇರುವ ಸ್ವರ್ಣ ನಿಧಿ ಯೋಜನೆ ತುಂಬಾ ಪ್ರಯೋಜವಾಗಿದೆ. ನಾವು ನಾಲ್ಕು ಜನ ಮಕ್ಕಳು ನಮ್ಮ ಮದುವೆ ಆಭರಣ ಇಲ್ಲೇ ಖರೀದಿಸಿದ್ದು, ನನ್ನ ಗಂಡನ ಮನೆಯವರೂ ಕೂಡಾ ಹಲವು ವರ್ಷಗಳಿಂದ ಜಿ.ಎಲ್. ಸಂಸ್ಥೆಯ ಗ್ರಾಹಕರಾಗಿರುವುದು ನಂಬಿಕೆ ವಿಶ್ವಾಸಕ್ಕೆ ದೊಡ್ಡ ಹೆಜ್ಜೆಯಾಗಿದೆ ಎಂದರು.



ನಮ್ಮ ಕುಟುಂಬವೇ ಜಿ.ಎಲ್. ಗ್ರಾಹಕರು:

ಪ್ರಗತಿಪರ ಕೃಷಿಕರಾಗಿರುವ ಸೀಮಾ ಆಳ್ವ ಅವರು ಮಾತನಾಡಿ 40 ವರ್ಷಗಳ ಹಿಂದೆಯೇ ನಾವು ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಗ್ರಾಹಕರಾಗಿದ್ದೇವೆ. ನನ್ನ ತಾಯಿಯ ವಿವಾಹಕ್ಕೂ ಇಲ್ಲಿಂದಲೇ ಚಿನ್ನಾಭರಣ ಖರೀದಿ ಮಾಡಿದ್ದರು. ನಮ್ಮ ಕುಟುಂಬವೇ ಇಲ್ಲಿನ ಗ್ರಾಹಕರು ಎಂದರು.



40 ವರ್ಷಗಳೀಂದ ನಾವು ಜಿ.ಎಲ್.ಗ್ರಾಹಕರು:

ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವಿಜಯ ನಾಯಕ್ ಅವರು ಮಾತನಾಡಿ ನಾನು ವರ್ಷಕ್ಕೆ ಮೂರು ಸಲ ಜಿ.ಎಲ್.ಆಚಾರ್ಯ ಜ್ಯುವಲ್ಲರ‍್ಸ್‌ಗೆ ಬರುತ್ತೇನೆ. ನನ್ನ ಮೊಮ್ಮಕ್ಕಳ ಹುಟ್ಟಿದ ಹಬ್ಬ ಸಹಿತ ಹಲವು ಸಂದರ್ಭದಲ್ಲಿ ಇಲ್ಲಿಂದಲೇ ಆಭರಣ ಖರೀದಿಸುತ್ತಿದ್ದೇನೆ. ಕಳೆದ 40 ವರ್ಷಗಳಿಂದಲೂ ನಮ್ಮ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಚಿನ್ನದ ಸಂಬಂಧ ಉತ್ತಮವಾಗಿದೆ ಎಂದ ಜಿ.ಎಲ್. ಗ್ಲೋ ಫೆಸ್ಟ್‌ಗೆ ಶುಭ ಹಾರೈಸಿದರು.



ವಜ್ರ ದುಬಾರಿ ಎಂಬ ಭಾವನೆ ಕ್ರಮೇಣ ಕಡಿಮೆಯಾಗಿದೆ

ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ಮಂಡಳಿತ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ ಕಳೆದ 11 ವರ್ಷಗಳಿಂದ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಗ್ಲೋ ಫೆಸ್ಟ್ ಎಂಬ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುತ್ತೇವೆ. ವರ್ಷದಿಂದ ವರ್ಷಕ್ಕೆ ಗ್ರಾಹಕರು ಹೆಚ್ಚಿನ ಸ್ಪಂಧನೆ ಲಭ್ಯವಾಗಿದೆ. ವಜ್ರ ಎಂಬುದು ಬಹಳ ದುಬಾರಿ, ಕೈಗೆ ಎಟಕ್ಕದು ಎಂಬ ಭಾವನೆ ಇವತ್ತು ಕ್ರಮೇಣ ಕಡಿಮೆ ಆಗಿದೆ. ಇವತ್ತು ಅತ್ಯಂತ ಸಣ್ಣ ವಜ್ರಗಳನ್ನು ಪೋಣಿಸಿ ಆಭರಣ ಮಾಡುವ ತಂತ್ರಜ್ಞಾನವಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೂ ವಜ್ರ ಖರೀದಿಗೆ ಸಾಧ್ಯವಾಗಿದೆ. ಇದರೊಂದಿಗೆ ಮದುಮಗಳ ಶೃಂಗಾರಕ್ಕೆ ಬೇಕಾದ ಎಲ್ಲಾ ಆಭರಣಗಳು ನಮ್ಮಲ್ಲಿ ವಿಭಿನ್ನ ಶೈಲಿಯಲ್ಲಿದೆ. ಗ್ಲೋ ಫೆಸ್ಟ್‌ನಲ್ಲಿ ಆಕರ್ಷಕ ರಿಯಾಯಿತಿ ದರ ನೀಡುತ್ತಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಜಿ.ಎಲ್.ಬಲರಾಮ ಆಚಾರ್ಯ ಸ್ವಾಗತಿಸಿ, ಬಲರಾಮ ಆಚಾರ್ಯ ಅವರ ಪತ್ನಿ ರಾಜಿ ಬಲರಾಮ ಆಚಾರ್ಯ, ಸಂಸ್ಥೆಯ ಆಡಳಿತ ನಿರ್ದೇಶಕರಾದ ಸುದನ್ವ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ. ಗ್ಲೋ ಫೆಸ್ಟ್‌ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.6,ಸಾವಿರದ ವರೆಗೆ ರಿಯಾಯಿತಿ, ಆಯ್ದ ವಜ್ರಾಭರಣಗಳ ಪ್ರತಿ ಖರೀದಿ ಮೇಲೆ ರೂ. 7ಸಾವಿರದ ವರೆಗೆ ರಿಯಾಯಿತಿ ನೀಡಲಾಗುವುದು. ಗ್ಲೋ ವಜ್ರಾಭರಣಗಳ ಸಂಗ್ರಹಕ್ಕೆ ಬೈ ಬ್ಯಾಕ್ ಮತ್ತು ಎಕ್ಸೇಜೆಂಜ್ ಗ್ಯಾರಂಟಿಯನ್ನು ಸಂಸ್ಥೆ ದೃಡೀಕರಿಸುತ್ತದೆ. ಗ್ಲೋ ಫೆಸ್ಟ್‌ನಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅತ್ತೆ-ಅಳಿಯನ ಮಧ್ಯೆ ಅನೈತಿಕ ಸಂಬಂಧದ ಕಟ್ಟು ಕಥೆ ಕಟ್ಟಿದ ಮಂತ್ರವಾದಿ: ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

Posted by Vidyamaana on 2024-03-22 21:57:17 |

Share: | | | | |


ಅತ್ತೆ-ಅಳಿಯನ ಮಧ್ಯೆ ಅನೈತಿಕ ಸಂಬಂಧದ ಕಟ್ಟು ಕಥೆ ಕಟ್ಟಿದ ಮಂತ್ರವಾದಿ: ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ರಾಮನಗರ, ಮಾರ್ಚ್​​ 22: ಅತ್ತೆ-ಅಳಿಯನ‌ ಮಧ್ಯೆ ಅನೈತಿಕ ಸಂಬಂಧದ ಕಥೆ ಕಟ್ಟಿ ಹಣ ಸುಲಿಗೆ ಮಾಡಲು ಮಂತ್ರವಾದಿ (mantrav

non

i) ಮುಂದಾಗಿದ್ದು, ಆತನ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಾರ್ಚ್​ 9ರಂದು ಕನಕಪುರದ ಟಿ ಬೇಕುಪ್ಪೆ ಸರ್ಕಲ್​​ನ‌ ಅರ್ಕಾವತಿ ನದಿ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುತ್ತುರಾಜು (25) ಮೃತ ‌ಯುವಕ. ಮೊದಲಿಗೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಮೃತ ಯುವಕನ ಮೊಬೈಲಿನಲ್ಲಿ ಮಂತ್ರವಾದಿಯ ಬೆದರಿಕೆ ವಾಯ್ಸ್ ನೋಟ್ ಪತ್ತೆ ಬಳಿಕ ಮಂತ್ರವಾದಿಯೇ ಕಾರಣವೆನ್ನಲಾಗುತ್ತಿದೆ. ಪಂಡಿತ್ ಸರಕಾರ​ ಪ್ರಸಾದ್ ಹೆಸರಿನ ಫೇಸ್ಬುಕ್ ಪೇಜ್ ಹೊಂದಿದ್ದ ವಿಷ್ಣು ಎಂಬಾತನನ್ನು ಬಂಧಿಸಿದ್ದು, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಯುಡಿಆರ್​​​ ಅಡಿ ಪ್ರಕರಣ ದಾಖಲಿಸಿದ್ದಾರೆ.ಫೆಸ್​​ಬುಕ್​ನಲ್ಲಿ ಪಂಡಿತ್​​ ಸರಕಾರ ಪ್ರಸಾದ್ ಸಂಪರ್ಕ​​


ದೊಡ್ಡ ಆಲಹಳ್ಳಿಯಲ್ಲಿ ಸಾಮಿಲ್ ನಡೆಸುತ್ತಿದ್ದ ಮುತ್ತುರಾಜ್​, ಕಳೆದ ಕೆಲ ದಿನಗಳಿಂದ ಉದ್ಯೋಗದಲ್ಲಿ ನಷ್ಟ ಉಂಟಾಗಿದೆ. ಹೀಗಾಗಿ ಇದರಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಫೆಸ್​​ಬುಕ್​ನಲ್ಲಿ ಪಂಡಿತ್​​ ಸರಕಾರ ಪ್ರಸಾದ್​ ಎಂಬ ಹೆಸರಿನ ಮಂತ್ರವಾದಿಯ ಸಮಸ್ಯೆ ನಾಶ, ವಶೀಕರಣ,‌ ಜಿಗುಪ್ಸೆಗೆ ಪರಿಹಾರ ಎಂಬ ಪ್ರೊಫೈಲ್​​ ನೀಡಿ ಸಂಪರ್ಕ ಮಾಡಿದ್ದಾನೆ.ಸಾಮಿಲ್ ನಡೆಯುತ್ತಿಲ್ಲ. ಜಿಗುಪ್ಸೆ ಆಗುತ್ತಿದೆ‌ ಎಂದು ಮುತ್ತುರಾಜ್​ ಕಷ್ಟ ಹೇಳಿಕೊಂಡಿದ್ದ. ನಿನಗೆ ಒಳ್ಳೆಯ ಯೋಗವಿದೆ. ನಾನು ಹೇಳಿದಂತೆ ಮಾಡು. ನಿನ್ನ ಮನೆಯವರೆಲ್ಲರ ಫೋಟೋ ಕಳುಹಿಸಿಕೊಡು ಎಂದು ಮಂತ್ರವಾದಿ ಹೇಳಿದ್ದಾನೆ. ಅದಕ್ಕೆ ತನ್ನ ಹಾಗೂ ಪತ್ನಿ, ಮಗಳು, ಹಾಗೂ ಅತ್ತೆಯ ಫೋಟೋವನ್ನು ಮುತ್ತುರಾಜ್ ಕಳುಹಿಸಿದ್ದಾನೆ. ಇತ್ತ ಫೋಟೋ ಕಳುಹಿಸಿದ ಬಳಿಕ ಮಂತ್ರವಾದಿ ತನ್ನ ಕುಕೃತ್ಯ ಶುರು ಮಾಡಿಕೊಂಡಿದ್ದಾನೆ.


ಮಂತ್ರವಾದಿಯ ಬೆದರಿಕೆ


ಅತ್ತೆಯ ಹಾಗೂ ನಿನ್ನ ಮಧ್ಯೆ ಅನೈತಿಕ‌ ಸಂಬಂಧದ ಬಗ್ಗೆ ಪೋಸ್ಟ್ ಹಾಕ್ತೀನಿ ಅಂತ‌ ಬೆದರಿಕೆ ಹಾಕಲು ಶುರುಮಾಡಿದ್ದಾನೆ. ಒಂದು ಕಡೆ ಮುತ್ತುರಾಜ್,‌ ಇನ್ನೊಂದು ಕಡೆ ಅತ್ತೆಯ ಫೋಟೋ ಹಾಕಿ ಎಡಿಟ್ ಮಾಡಿದ್ದಾನೆ. ತನ್ನ ಸ್ವಂತ ಅತ್ತೆಯನ್ನು ಲೈಂಗಿಕವಾಗಿ ಬಳಿಸಿಕೊಳ್ಳಲು 15 ಸಾವಿರ ರೂ. ಕೊಟ್ಟಿದ್ದಾನೆ ಅಂತ ಮಂತ್ರವಾದಿ ಪೊಸ್ಟ್ ಕ್ರಿಯೆಟ್ ಮಾಡಿದ್ದಾನೆ. ಅದನ್ನು ಮುತ್ತುರಾಜ್​​ಗೆ ಕಳುಹಿಸಿ ಬ್ಲ್ಯಾಕ್​ಮೇಲ್​​ ಮಾಡಿದ್ದಾನೆ. ನೀನು ಹಣ ಕೊಡು, ಇಲ್ಲದಿದ್ರೆ ಇದನ್ನು ಫೇಸ್​​ಬುಕ್​​ನಲ್ಲಿ ಹಾಕುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ.ಪದೇ ಪದೇ ಮಂತ್ರವಾದಿಯ ವಾಟ್ಸಪ್ ಮೆಸೆಜ್, ವಾಯ್ಸ್ ನೋಟ್​ಗಳ ಬೆದರಿಕೆಗೆ ಕುಗ್ಗಿ ಹೋಗಿದ್ದ ಮುತ್ತುರಾಜ್​​, ಮಾರ್ಚ್​ 9ರಂದು ಅರ್ಕಾವತಿ ನದಿ ಬಳಿ ಬೈಕ್‌ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಮಿಲ್ ನಷ್ಟದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಮಾರ್ಚ್​ 18 ಎಂದು ಮುತ್ತುರಾಜ್ ಮೊಬೈಲ್ ಗಮನಿಸಿದ ಬಾಮೈದ ಶಶಿಕುಮಾರ್​​, ಈ‌ ವೇಳೆ ಮುತ್ತುರಾಜ್ ಮೊಬೈಲಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಂತ್ರವಾದಿ ವಾಯ್ಸ್ ನೋಟ್, ಆತ್ಮಹತ್ಯೆಗೂ ಮುನ್ನ ಮಾತನಾಡಿದ್ದು, ಮುತ್ತುರಾಜ್ ಹಾಗೂ ಅತ್ತೆಯ ಮಧ್ಯೆ ಕಟ್ಟಿದ್ದ ಸುಳ್ಳು ಸಂಬಂಧದ ಕಥೆಯ ಗುಟ್ಟು ರಟ್ಟಾಗಿತ್ತು.ಕೂಡಲೇ ಕನಕಪುರ ಪೊಲೀಸರಿಗೆ ಮುತ್ತುರಾಜ್ ಪತ್ನಿ ಶಿಲ್ಪಾ ಮಾಹಿತಿ ನೀಡಿದ್ದು, ತನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಕಾರಣ ಮಂತ್ರವಾದಿ ಎಂದು ದೂರು ನೀಡಿದ್ದಾರೆ. ಮುತ್ತುರಾಜ್ ಮೊಬೈಲ್ ಪಡೆದುಕೊಂಡು ವಿಚಾರಣೆ ಕೈಗೆತ್ತಿಕೊಂಡ ಕನಕಪುರ ಪೊಲೀಸರು, ಕೇಸ್ ವಿಚಾರಣೆ ಮಾಡುತ್ತಿದ್ದಂತೆ ಶಾಕ್​ ಆಗಿದ್ದಾರೆ. ಕಾರಣ ಆ ಮಂತ್ರವಾದಿ ‌22 ವರ್ಷದ ಪದವಿ ಓದುತ್ತಿದ್ದ ಯುವಕ. ಆತನ ಹೆಸರು ವಿಷ್ಣು ಶಾಸ್ತ್ರಿ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮುತ್ತುರಾಜ್​​ಗೆ ಬ್ಲ್ಯಾಕ್​​ಮೇಲ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಯಾವುದೇ ಸಮಸ್ಯೆಯಾದರೂ ನನಗೆ ಅಥವಾ ನನ್ನ‌ಕಚೇರಿಗೆ ಮಾಹಿತಿ ಕೊಡಿ: ಶಾಸಕ ಅಶೋಕ್ ರೈ ಮನವಿ

Posted by Vidyamaana on 2024-06-27 21:21:41 |

Share: | | | | |


ಯಾವುದೇ ಸಮಸ್ಯೆಯಾದರೂ ನನಗೆ ಅಥವಾ ನನ್ನ‌ಕಚೇರಿಗೆ ಮಾಹಿತಿ ಕೊಡಿ: ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು. ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಬೇಡಿ. ಹೊಳೆ,ಕೆರೆ,ಭಾವಿಯ ಕಡೆ ಮಕ್ಕಳು ತೆರಳದಂತೆ ಎಚ್ಚರವಹಿಸಿ. ವಿದ್ಯುತ್ ಕಂಬ, ಮನೆಯ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್ ,ವಿದ್ಯುತ್ ಕಂಬ ಮುಟ್ಟಲು ಹೋಗಬೇಡಿ. ಬಾವಿ ಕುಸಿಯುತ್ತಿರುವ ಘಟನೆಗಳು ನಡೆದಿದ್ದು ಬಾವಿಯಿಂದ ದೂರ ಇರಿ. ಮನೆಯ ಬಳಿ ಧರೆ ಇದ್ದರೆ ಅದಕ್ಕೆ ಪ್ಲಾಸ್ಡಿಕ್ ಹೊದಿಕೆ ಹಾಕಿ ನೀರು ಇಂಗದಂತೆ ನೋಡಿಕೊಳ್ಳಿ. ಧರೆ ಕುಸಿಯುವ ಭೀತಿಯಲ್ಲಿದ್ದರೆ ತಕ್ಷಣ ನನಗೆ ಅಥವಾ ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿ. 

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ಇರಿಸಲಾಗಿದ್ದ ಹಣದಲ್ಲಿ ಲಕ್ಷ ರೂಪಾಯಿ ಮಾತ್ರ ಎಗರಿಸಿದ ಕಳ್ಳರು

Posted by Vidyamaana on 2023-10-07 20:22:31 |

Share: | | | | |


ಬಂಟ್ವಾಳ: ದ್ವಿಚಕ್ರವಾಹನದಲ್ಲಿ ಇರಿಸಲಾಗಿದ್ದ ಹಣದಲ್ಲಿ ಲಕ್ಷ ರೂಪಾಯಿ ಮಾತ್ರ ಎಗರಿಸಿದ ಕಳ್ಳರು

ಬಂಟ್ವಾಳ : ದ್ವಿಚಕ್ರ ವಾಹನದಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂ.ನಗದು ಕಳವಾಗಿರುವ ಬಗ್ಗೆ ಬಿಸಿರೋಡಿನಲ್ಲಿ ವರದಿಯಾಗಿದೆ.


    ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರ ರೂಪಾಯಿ ಒಂದು ಲಕ್ಷ ಹಣ ಕಳವಾಗಿದೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


   ಅವರು ಶುಕ್ರವಾರ ಬೆಳಿಗ್ಗೆ ರೂ.1.40 ಲಕ್ಷ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಬಳಿಕ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ಇರಿಸಲಾಗಿದ್ದ, ದ್ವಿಚಕ್ರವಾಹನದ ಸೀಟಿನಡಿ ಇರುವ ಬಾಕ್ಸ್ ನಲ್ಲಿ ಇರಿಸಿದ್ದರು.


ಬಳಿಕ ಬೇರೆಬೇರೆ ಕೆಲಸ ನಿಮಿತ್ತ ಅಲ್ಲಿಂದ ತೆರಳಿದ್ದರು.


ಮಧ್ಯಾಹ್ನ ಬಳಿಕ ಬಂದು ಸೀಟು ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ಮಾತ್ರ ಇದ್ದು ಉಳಿದ 1ಲಕ್ಷ ಹಣ ಕಳವಾಗಿದೆ ಎಂದು ತಿಳಿಸಿದ್ದಾರೆ.


ಬಂಟ್ವಾಳ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.



Leave a Comment: