ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಪುತ್ತೂರು ಶಾಸಕ ಕಚೇರಿಗೆ ನಗರಸಭೆ ನಿಧಿಯ ದುರುಪಯೋಗ - ನಗರಸಭೆ ಬಿಜೆಪಿ ಸದಸ್ಯರಿಂದ ಆಕ್ಷೇಪಿಸಿ ಆಡಳಿತಾಧಿಕಾರಿ ಡಿ.ಸಿಗೆ ಮನವಿ

Posted by Vidyamaana on 2023-09-15 17:18:43 |

Share: | | | | |


ಪುತ್ತೂರು ಶಾಸಕ ಕಚೇರಿಗೆ ನಗರಸಭೆ ನಿಧಿಯ ದುರುಪಯೋಗ - ನಗರಸಭೆ ಬಿಜೆಪಿ ಸದಸ್ಯರಿಂದ ಆಕ್ಷೇಪಿಸಿ ಆಡಳಿತಾಧಿಕಾರಿ ಡಿ.ಸಿಗೆ ಮನವಿ

ಪುತ್ತೂರು: ಶಾಸಕ ನೂತನ ಕಚೇರಿಗೆ ಪುತ್ತೂರು ನಗರಸಭಾ ನಿಧಿಯ ದುರುಪಯೋಗವಾಗಿದೆ ಮತ್ತು ನಗರಸಭೆಯ ನಗರೋತ್ಥಾನದ ವಿವಿಧ ಕಾಮಗಾರಿ ವಿಳಂಬ ಸಹಿತ ನಗರಸಭೆ ೨ ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಇನ್ನೂ ಆಗಿಲ್ಲ ಎಂದು ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರಿಗೆ ಪುತ್ತೂರಿನಲ್ಲಿ ಮನವಿ ಮಾಡಿದ್ದಾರೆ.


ಪುತ್ತೂರು ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿಯವರು ಸೆ.೧೫ ರಂದು ಆಗಮಿಸಿದ ವೇಳೆ ಸದಸ್ಯರು ಮನವಿ ಮಾಡಿದ್ದಾರೆ. ಪುತ್ತೂರು ಶಾಸಕರು ನಮ್ಮ ನಗರ ಸಭೆಯ ಕಟ್ಟಡದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಗರ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಅಲ್ಲಿಂದ ತೆರವುಗೊಳಿಸಿ ತಮ್ಮ ಶಾಸಕರ ಕೊಠಡಿಯನ್ನಾಗಿ ತಮ್ಮ ಮೂಲಕ ಪರಿವರ್ತಿಸಿರುತ್ತಾರೆ, ಅಲ್ಲದೆ ಸದ್ರಿ ಕಚೇರಿಯ ನವೀಕರಣಕ್ಕೆ, ಸುಮಾರು 31 ಲಕ್ಷ ರೂಪಾಯಿಗಳನ್ನು ಸಾರ್ವಜನಿಕರ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ನೀಡುವಂತೆ ತಮ್ಮ ಮೂಲಕ ಆದೇಶ ನೀಡಲಾಗಿದೆ. ಈ ರೀತಿ ನಾಗರಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ಶಾಸಕರ ಐಷಾರಾಮಿ ಕಚೇರಿಯ ಅಭಿವೃದ್ಧಿಗೆ ನೀಡಲು ಚುನಾಯಿತ ಸದಸ್ಯರುಗಳಾದ ನಮ್ಮ ಆಕ್ಷೇಪವಿರುತ್ತದೆ. ಅದಲ್ಲದೇ ಈ ಹಿಂದಿನ ಅವಧಿಯಲ್ಲಿ ಮಂಜೂರಾದ ಅಮೃತ ನಗರೋತ್ಥಾನದ ಕಾಮಗಾರಿಗಳು ಆರಂಭವಾಗಿರುವುದಿಲ್ಲ. ನಗರಸಭೆಯ ಎರಡನೆಯ  ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ತೊಡಕು ಇನ್ನೂ ನಿವಾರಣೆಯಾಗಿರುವುದಿಲ್ಲ. ಆದ್ದರಿಂದ ತಾವು ಈ ಎಲ್ಲಾ ವಿಚಾರಗಳ ಬಗ್ಗೆ ವರಿಶೀಲಿಸಿ ಚುನಾಯಿತ ಸದಸ್ಯರಾದ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ ಜಿ ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಮನೋಹರ್ ಕಲ್ಲಾರೆ, ನವೀನ್ ಪೆರಿತ್ತೋಡಿ, ಪ್ರೇಮ್, ಸಂತೋಷ್ ಬೊಳುವಾರು, ಸುಂದರ ಪೂಜಾರಿ ಬಡಾವು, ಶೀನಪ್ಪ ನಾಯ್ಕ್, ಪದ್ಮನಾಭ ಪಡೀಲ್ , ವಸಂತ ಕಾರೆಕ್ಕಾಡು, ಬಾಲಚಂದ್ರ, ಶಶಿಕಲಾ ಸಿ.ಎಸ್, ಪ್ರೇಮಲತಾ ನಂದಿಲ, ಮೋಹಿನಿ ವಿಶ್ವನಾಥ್, ಮಮತಾ ರಂಜನ್, ಯಶೋದಾ ಹರೀಶ್, ಗೌರಿ ಬನ್ನೂರು, ಲೀಲಾವತಿ, ದೀಕ್ಷಾ ಪೈ, ಇಂದಿರಾ, ರೋಹಿಣಿ ಈ ಸಂದರ್ಭ ಉಪಸ್ಥಿತರಿದ್ದರು.

ಪುತ್ತೂರು: ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರ ಗಡಿಪಾರು

Posted by Vidyamaana on 2023-05-08 17:31:02 |

Share: | | | | |


ಪುತ್ತೂರು: ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರ ಗಡಿಪಾರು

ಪುತ್ತೂರು: ಕ್ರಿಮಿನಲ್ ಹಿನ್ನೆಲೆಯುಳ್ಳ ನಾಲ್ಕು ಮಂದಿಯನ್ನು ಪುತ್ತೂರಿನಿಂದ ಗಡಿಪಾರು ಮಾಡಲಾಗಿದೆ.ಹಿಂದೂ ಸಂಘಟನೆ ಕಾರ್ಯಕರ್ತರಾಗಿರುವ ಬನ್ನೂರು ಮೂಲದ ಪ್ರಜ್ವಲ್, ಪ್ರತಾಪ್, ಜಗ್ಗ ಯಾನೆ ಅಚ್ಚು, ಅವಿನಾಶ್ ಅವರು ಗಡಿಪಾರುಆಗಿದ್ದಾರೆ.ಇವರು ಚುನಾವಣೆಯ ಸಂದರ್ಭ ಶಾಂತಿ ಭಂಗ ಮಾಡಬಹುದೆಂಬ ನಿಟ್ಟಿನಲ್ಲಿ ನಗರ ಠಾಣೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ನನ್ನ ಸಾವಿಗೆ ನಾನೇ ಕಾರಣ.. ಕಾಯರ್ತಡ್ಕದಲ್ಲಿ ಯುವತಿ ನೇಣಿಗೆ ಶರಣು

Posted by Vidyamaana on 2024-02-08 17:57:10 |

Share: | | | | |


ನನ್ನ ಸಾವಿಗೆ ನಾನೇ ಕಾರಣ.. ಕಾಯರ್ತಡ್ಕದಲ್ಲಿ ಯುವತಿ ನೇಣಿಗೆ ಶರಣು

ಮಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಯುವತಿ ತನ್ನ ಸ್ವಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ನಡೆದಿದೆ. ಕಾಯರ್ತಡ್ಕ ಕುರುಂಬುಡೇಲು ನಿವಾಸಿ ವನಿತಾ ಯಾನೆ ರೇವತಿ(30) ಮೃತ ಯುವತಿ.ವನಿತಾರವರು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ಅನಾರೋಗ್ಯ ಸಮಸ್ಯೆ ಕಾಡಿದ ಹಿನ್ನಲೆಯಲ್ಲಿ ಒಂದು ತಿಂಗಳ ಹಿಂದೆ ಮನೆಗೆ ಬಂದಿದ್ದರು. ಫೆ. 8 ರಂದು ಮುಂಜಾನೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಡೆತ್ ನೋಟ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಯೋಧನನ್ನು ಥಳಿಸಿ PFI ಎಂದು ಬರೆದ ಪ್ರಕರಣಕ್ಕೆ ಟ್ವಿಸ್ಟ್

Posted by Vidyamaana on 2023-09-26 16:52:40 |

Share: | | | | |


ಯೋಧನನ್ನು ಥಳಿಸಿ PFI ಎಂದು ಬರೆದ ಪ್ರಕರಣಕ್ಕೆ ಟ್ವಿಸ್ಟ್

ಕೊಲ್ಲಂ(ತಿರುವನಂತಪುರ): ಆರು ಮಂದಿ ಕಿಡಿಗೇಡಿಗಳು ತನ್ನನ್ನು ಅಪಹರಿಸಿ, ನಿರ್ಧಯವಾಗಿ ಥಳಿಸಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಬರೆದಿರುವುದಾಗಿ ದೂರು ನೀಡಿದ್ದ ಯೋಧ ಹಲ್ವೀಲ್‌ ಶೈನ್‌ ಕುಮಾರ್‌ ಹಾಗೂ ಗೆಳೆಯನನ್ನು ವಶಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ಫೇಮಸ್‌ ಆಗಲು ಕಥೆ ಕಟ್ಟಿದ ಯೋಧ!


ಯೋಧ ಶೈನ್‌ ಕುಮಾರ್‌ ಮತ್ತು ಆತನ ಗೆಳೆಯ ನೀಡಿರುವ ಹೇಳಿಕೆ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ತಾನು ಭಾರೀ ಹೆಸರುಗಳಿಸಬೇಕು ಎಂಬ ಉದ್ದೇಶದಿಂದ ಯೋಧ ಶೈನ್‌ ಕುಮಾರ್‌ ಈ ಕಥೆಯನ್ನು ಹೆಣೆದಿರುವುದಾಗಿ ಗೆಳೆಯ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.ಇಡೀ ನಾಟಕದ ಸೂತ್ರಧಾರಿ ಶೈನ್‌ ಕುಮಾರ್‌ ಎಂಬುದಾಗಿ ಗೆಳೆಯ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾನೆ. ಗೆಳೆಯನ ಮನೆಯಲ್ಲಿ ಹಸಿರು ಪೈಂಟ್‌, ಬ್ರಷ್‌ ಹಾಗೂ ಟೇಪ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


ADVERTISEMENT

ಕುಮಾರ್‌ ಮನೆಯ ಸಮೀಪದ ರಬ್ಬರ್‌ ತೋಟದೊಳಗೆ ಹೋಗಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಬರೆದು, ಥಳಿಸುವಂತೆ ಗೆಳೆಯನಿಗೆ ಸೂಚನೆ ನೀಡಿದ್ದ. ಈ ಸಂದರ್ಭದಲ್ಲಿ ಗೆಳೆಯ ಮದ್ಯದ ಅಮಲಿನಲ್ಲಿದ್ದು, ಆರಂಭದಲ್ಲಿ ಡಿಎಫ್‌ ಐ ಅಂತ ಬರೆದಿದ್ದ, ಆದರೆ ಕುಮಾರ್‌ ಪಿಎಫ್‌ ಐ ಎಂದು ಬರೆಯುವಂತೆ ಸೂಚಿಸಿದ್ದ. ನಂತರ ತನಗೆ ಹೊಡೆಯುವಂತೆ ಹೇಳಿದ್ದ. ಮದ್ಯ ಸೇವಿಸಿದ್ದರಿಂದ ತನಗೆ ಹೊಡೆಯಲು ಆಗಲಿಲ್ಲ. ಆಗ ಕುಮಾರ್‌ ನೆಲದ ಮೇಲೆ ಹಾಕಿ ಎಳೆದೊಯ್ಯುವಂತೆ ಹೇಳಿದ. ಅದೂ ಕೂಡಾ ತನ್ನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಕೈಯನ್ನು ಹಿಂದಕ್ಕೆ ಕಟ್ಟಿ, ಬಾಯಿಗೆ ಟೇಪ್‌ ಹಾಕಿ ತೆರಳುವಂತೆ ಹೇಳಿದ್ದ ಎಂಬುದಾಗಿ ಗೆಳೆಯ ಪೊಲೀಸರಿಗೆ ವಿವರಣೆ ನೀಡಿರುವುದಾಗಿ ವರದಿ ತಿಳಿಸಿದೆ.


ಆರು ಮಂದಿ ದುಷ್ಕರ್ಮಿಗಳು ತನ್ನನ್ನು ಅಪಹರಿಸಿ ಮನೆ ಸಮೀಪದ ರಬ್ಬರ್‌ ತೋಟಕ್ಕೆ ಎಳೆದೊಯ್ದು, ಹಿಗ್ಗಾಮುಗ್ಗಾ ಥಳಿಸಿ ಬೆನ್ನಿನ ಮೇಲೆ ಪಿಎಫ್‌ ಐ ಎಂದು ಪೈಂಟ್‌ ನಿಂದ ಬರೆದಿರುವುದಾಗಿ ಯೋಧ ಶೈನ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದ.

ಶಾಸಕರ ಇಂದಿನ ಕಾರ್ಯಕ್ರಮ ಆ 13

Posted by Vidyamaana on 2023-08-13 00:43:48 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 13

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 13 ರಂದು

ಬೆಳ್ಳಗ್ಗೆ  10:00 ಆಟಿಡೊಂಜಿ ದಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘ,ಮಣ್ಣ ಗುಡ್ಡ ಮಂಗಳೂರು 

ಬೆಳ್ಳಗ್ಗೆ  11

ಆಟಿದ ಕೂಟ ಬಂಟರ ಭವನ  ಸುರತ್ಕಲ್ 

ಮದ್ಯಾಹ್ನ  1:00 ಆಟಿದ ಕೂಟ  ಬಂಟರ ಭವನ  ಪುತ್ತೂರು 

ಮದ್ಯಾಹ್ನ  2:00 ವಿಟ್ಲ ವಲಯ ಬಂಟರ ಸಂಘದ ಆಟಿದ ಕೂಟ ಪುಣಚ ಬೈಲು ಗುತ್ತು 


ಮದ್ಯಾಹ್ನ 2:30 ಕೆಸರು ಗದ್ದೆ ವಿಟ್ಲ 


ಮದ್ಯಾಹ್ನ  3:30 ಕೆಸರು ಗದ್ದೆ  ಬಿಳಿಯೂರು 


ಮದ್ಯಾಹ್ನ  4:00 ಕೆಸರು ಗದ್ದೆ  ಪುಳಿತ್ತಡಿ ಉಪ್ಪಿನಂಗಡಿ 


ಸಂಜೆ 5:30 ಕೆಸರು ಗದ್ದೆ ಕೈಕಾರ

ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

ಸ್ನೇಹಿತರ ಜತೆ ಪಾರ್ಟಿಗೆ ಹೋಗ್ತೇನೆ.. ಎಂದು ಹೋದವಳ ಶವ ರೈಲು ಹಳಿ ಮೇಲೆ ಪತ್ತೆ

Posted by Vidyamaana on 2024-01-02 11:22:43 |

Share: | | | | |


ಸ್ನೇಹಿತರ ಜತೆ ಪಾರ್ಟಿಗೆ ಹೋಗ್ತೇನೆ.. ಎಂದು ಹೋದವಳ ಶವ ರೈಲು ಹಳಿ ಮೇಲೆ ಪತ್ತೆ

ಚಿಕ್ಕಮಗಳೂರು: ಸ್ನೇಹಿತರ ಜತೆ ಪಾರ್ಟಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಎಂಟನೇ ತರಗತಿ ವಿದ್ಯಾರ್ಥಿನಿ, ಶಾಲೆಯ ಬಸ್ ಚಾಲಕನ ಜೊತೆ ರೈಲಿನಡಿ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಂಕನಕಟ್ಟೆಯಲ್ಲಿ ನಡೆದಿದೆ. 


ಬಸ್ ಚಾಲಕ ಸಂತೋಷ್ (28) ಮತ್ತು ಎಂಟನೇ ತರಗತಿ ವಿದ್ಯಾರ್ಥಿನಿ ಜಾನವಿ (14) ನಿಗೂಢ ಸ್ಥಿತಿಯಲ್ಲಿ ಸಾವು ಕಂಡವರು. ಜಾನವಿ ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಜ್ಞಾನದೀಪ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ಇದೇ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂತೋಷ್ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ, ತನ್ನ ಮಗಳನ್ನು ಪ್ರೀತಿಸುವಂತೆ ಸಂತೋಷ್ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆಯ ಪೋಷಕರು ಈ ಹಿಂದೆ ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. 


ನಿನ್ನೆ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಹೇಳಿದ್ದ ಜಾನವಿಯನ್ನು ಸಂತೋಷ್ ತನ್ನ ಜೊತೆ ಕರೆದೊಯ್ದಿದ್ದ ಎನ್ನಲಾಗಿದೆ. ಆದರೆ, ಮಧ್ಯರಾತ್ರಿ ರೈಲಿನಡಿ ಬಿದ್ದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕೆಯನ್ನು ದೂಡಿಹಾಕಿ ಸಾವಿಗೆ ಶರಣಾಗಿದ್ದಾನೆಯೇ ಎಂಬುದು ತನಿಖೆಯಲ್ಲಿ ತಿಳಿದು ಬರಬೇಕು.‌



Leave a Comment: