ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಮಗನ ಉತ್ತರಕ್ರಿಯೆ ನಡೆದ ಎರಡೇ ದಿನದಲ್ಲಿ ತಂದೆ ಆತ್ಮಹತ್ಯೆಗೆ ಶರಣು

Posted by Vidyamaana on 2024-01-16 15:32:09 |

Share: | | | | |


ಮಗನ ಉತ್ತರಕ್ರಿಯೆ ನಡೆದ ಎರಡೇ ದಿನದಲ್ಲಿ ತಂದೆ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ, ಜ.16: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡವರು.‌


ಜ.4 ರಂದು ಎಂಟನೇ ತರಗತಿ ಓದುತ್ತಿದ್ದ ಮಗ ಯಕ್ಷಿತ್ (14) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಉತ್ತರ ಕ್ರಿಯೆ ಜ.14ರಂದು ಭಾನುವಾರ ನಡೆದಿತ್ತು. ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಯ ಪುತ್ರ ಯಕ್ಷಿತ್ (14) ಸಾವಿಗೆ ತಮ್ಮನ ಜೊತೆಗಿನ ಕ್ಷುಲ್ಲಕ ಜಗಳ ಕಾರಣ ಎನ್ನಲಾಗಿತ್ತು. 


ಆರು ವರ್ಷದ ತಮ್ಮನ ಜೊತೆ ಪದೇ ಪದೇ ಗಲಾಟೆ ನಡೆದಿತ್ತು.‌ ಈ ಸಲ ಗಲಾಟೆಯಲ್ಲಿ ತಮ್ಮ ಅಣ್ಣನ ಹೊಟ್ಟೆ ಮೇಲೆ ಕಚ್ಚಿ ಗಾಯ ಮಾಡಿದ್ದ. ಇದೇ ವಿಚಾರದಲ್ಲಿ ನೊಂದು ತಮ್ಮನ ಎದುರೇ ಯಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಯಕ್ಷಿತ್ ಉಜಿರೆ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ. 


ಮನೆಯ ಕೊಠಡಿಯಲ್ಲೇ ತಾಯಿಯ ಸೀರೆಯನ್ನು ಬಿಗಿದುಕೊಂಡು ನೇಣಿಗೆ ಶರಣಾಗಿದ್ದ. ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಬಾಲಕ ದುರಂತ ಸಾವಿಗೀಡಾಗಿದ್ದು ಉಜಿರೆಯ ಜನರ ಮನ ಕಲಕಿತ್ತು. ಬೆಳ್ತಂಗಡಿ ಪೊಲೀಸರು ಸ್ಥಳ ಪರಿಶೀಲಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರು. ಇದೀಗ ಮಗನ ಉತ್ತರ ಕ್ರಿಯೆ ನಡೆದು ಎರಡೇ ದಿನದಲ್ಲಿ ತಂದೆಯೂ ಸಾವಿಗೆ ಶರಣಾಗಿದ್ದಾರೆ

ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಕಳ್ಳತನ

Posted by Vidyamaana on 2024-03-21 20:40:14 |

Share: | | | | |


ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಕಳ್ಳತನ

ಉಪ್ಪಿನಂಗಡಿ :ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನುಗ್ಗಿದ ಕಳ್ಳನೋರ್ವ ಹಣಕ್ಕಾಗಿ ತಡಕಾಡಿದ ಘಟನೆ ಮಾ. 20ರಂದು ಬೆಳಕಿಗೆ ಬಂದಿದೆ.

ಮಾ. 19ರ ಸಂಜೆ ಸಂಘದ ಕಚೇರಿಯನ್ನು ಬಂದ್‌ ಮಾಡಿ ಸಿಬಂದಿ ತೆರಳಿದ್ದು, ಬೆಳಗ್ಗೆ ಬರುವಾಗ ಕಚೇರಿಯ ಷಟರ್‌ನ ಬೀಗ ಮುರಿದು ಕಳ್ಳನೋರ್ವ ಒಳಗೆ ನುಗ್ಗಿದ್ದಾನೆ. . ಈತ ಹಣಕ್ಕಾಗಿ ಮೇಜಿನ ಡ್ರಾವರ್‌ಗಳನ್ನು ಮುರಿದು ಸುಮಾರು ಒಂದೂವರೆ ಸಾವಿರ ರೂ. ಎಗರಿಸಿ, ಪರಾರಿಯಾಗಿದ್ದಾನೆ.

ಸ್ಥಳೀಯ ಮನೆಯೊಂದರಿಂದ ಪಿಕ್ಕಾಸನ್ನು ತಂದು ಷಟರ್‌ನ ಬೀಗ ಮುರಿಯಲು ಬಳಸಿದ್ದ ಎಂದು ತಿಳಿದು ಬಂದಿದೆ. ಗುರುತು ಸಿಗದಂತೆ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ ಈತನ ಚಲನವಲನಗಳು ಸಂಘದ ಸಿಸಿ ಕೆಮರಾದಲ್ಲಿ ಪತ್ತೆಯಾಗಿವೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್, ಪ್ರವೀಣ್ ರವರಿಗೆ ಮಾತೃವಿಯೋಗ

Posted by Vidyamaana on 2023-12-16 20:05:14 |

Share: | | | | |


ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್, ಪ್ರವೀಣ್ ರವರಿಗೆ ಮಾತೃವಿಯೋಗ

ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್ ಅಮೈ ಮತ್ತು ಪ್ರವೀಣ್ ಅಮೈ ರವರ ತಾಯಿ, ಸಾಲ್ಮರ ನಿವಾಸಿ ವಾರಿಜ ಆಚಾರಿ ರವರು (85)ಡಿ 16 ರಂದು ವಯೋಸಹಜ ಕಾಯಿಲೆಯಿಂದ ಬನ್ನೂರಿನ ತಮ್ಮ ನಿವಾಸದಲ್ಲಿ ನಿಧಾನರಾದರು. ಮೃತರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಚಂದ್ರಯಾನ 3: ಮೊಬೈಲ್​​ನಲ್ಲೇ ಚಂದ್ರಯಾನ 3 ವೀಕ್ಷಿಸಲು ಇಲ್ಲಿದೆ ನೇರ ಲಿಂಕ್​

Posted by Vidyamaana on 2023-07-14 09:08:26 |

Share: | | | | |


ಚಂದ್ರಯಾನ 3: ಮೊಬೈಲ್​​ನಲ್ಲೇ ಚಂದ್ರಯಾನ 3 ವೀಕ್ಷಿಸಲು ಇಲ್ಲಿದೆ ನೇರ ಲಿಂಕ್​

Chandrayaan 3: ದೇಶದ ಜನತೆ ಕಾತುರದಿಂದ ಕಾಯುವ ಕ್ಷಣ ಇನ್ನಷ್ಟು ಸಮೀಪಿಸುತ್ತಿದೆ. ಚಂದ್ರನ ಅಂಗಳಲದಲ್ಲಿ ಅಧ್ಯಯನ ನಡೆಸುವ ಸಲುವಾಗಿ ಭಾರತವು ಮೂರನೇ ಬಾರಿಗೆ ಉಪಗ್ರಹಗಳನ್ನು ಕಳುಹಿಸಿಕೊಡ್ತಿದೆ. ಹೀಗಾಗಿ ಇಡೀ ವಿಶ್ವದ ಚಿತ್ತ ಆಂಧ್ರದ ಶ್ರೀಹರಿಕೋಟದ ಮೇಲೆ ನೆಟ್ಟಿದೆ.ಚಂದ್ರನ ಅಂಗಳಕ್ಕೆ ರಾಕೆಟ್​ ಉಡಾವಣೆ ಮಾಡುವ ಇಸ್ರೋದ ಪ್ರಯತ್ನ ವಿಫಲವಾಗಿತ್ತು. ಅಂದು ಇಸ್ರೋ ಮುಖ್ಯಸ್ಥ ಶಿವನ್​ ಜೊತೆಯಲ್ಲಿ ಇಡಿ ದೇಶವೇ ಭಾವುಕವಾಗಿತ್ತು. ಆದರೆ ಇಂದು ಚಂದ್ರಯಾನ 3 ಖಂಡಿತವಾಗಿಯೂ ಯಶಸ್ವಿಯಾಗುತ್ತೆ ಎಂಬ ನಂಬಿಕೆಯಲ್ಲಿ ಇಸ್ರೋ ಇದೆ.



ಇನ್ನು ಚಂದ್ರಯಾನ 3ರ ಉಡಾವಣೆಯನ್ನು ನೀವು ಮೊಬೈಲ್​ನಲ್ಲಿಯೇ ವೀಕ್ಷಿಸಬಹುದಾಗಿದೆ. The launch can be http://isro.gov.in ಹಾಗೂ https://facebook.com/ISRO ಮತ್ತು https://youtube.com/watch?v=q2ueCg9bvvQ ನಲ್ಲಿ ನೇರವಾಗಿ ಚಂದ್ರಯಾನವನ್ನು ವೀಕ್ಷಣೆ ಮಾಡಬಹುದಾಗಿದೆ .ಸರಿಯಾಗಿ 2:35ಕ್ಕೆ ಶ್ರೀಹರಿಕೋಟದಿಂದ ರಾಕೆಟ್ ಉಡಾವಣೆಯಾಗಲಿದೆ.

ಮುನ್ನಡೆ ಕಾಯ್ದುಕೊಂಡ ಅಶೋಕ್ ಕುಮಾರ್ ರೈ

Posted by Vidyamaana on 2023-05-13 03:52:29 |

Share: | | | | |


ಮುನ್ನಡೆ ಕಾಯ್ದುಕೊಂಡ ಅಶೋಕ್ ಕುಮಾರ್ ರೈ

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸುರತ್ಕಲ್ ನಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಪ್ರಾರಂಭದಿಂದಲೂ ಅಶೋಕ್ ಕುಮಾರ್ ರೈ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು ಸಾವಿರಕ್ಕೂ ಅಧಿಕ ಮತಗಳಿಂದ ಅಶೋಕ್ ಕುಮಾರ್ ರೈ ಮೇಲುಗೈ ಸಾಧಿಸುತ್ತಿದ್ದಾರೆ. ಅಶೋಕ್ ಕುಮಾರ್ ರೈ 3996 ಮತ ಪಡೆದುಕೊಂಡಿದ್ದು, ಅರುಣ್ ಕುಮಾರ್ ಪುತ್ತಿಲ 2962 ಮತ, ಆಶಾ ತಿಮ್ಮಪ್ಪ 2393 ಮತ ಬಾಚಿಕೊಂಡಿದ್ದಾರೆ‌

ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ

Posted by Vidyamaana on 2023-04-21 16:46:13 |

Share: | | | | |


ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ

ಪುತ್ತೂರು : ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕ್ಕೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಶುಕ್ರವಾರ ಭೇಟಿ ನೀಡಿದರು.


ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಆಶಾ ತಿಮ್ಮಪ್ಪ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು



Leave a Comment: