ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಇಸ್ರೇಲ್ ವಿರುದ್ಧ ಅಧಿಕೃತ ಯುದ್ಧ ಘೋಷಿಸಿದ ಯೆಮನ್ ಮಿಸೈಲ್ ದಾಳಿ ಆರಂಭ

Posted by Vidyamaana on 2023-11-01 07:28:09 |

Share: | | | | |


ಇಸ್ರೇಲ್ ವಿರುದ್ಧ ಅಧಿಕೃತ ಯುದ್ಧ ಘೋಷಿಸಿದ ಯೆಮನ್ ಮಿಸೈಲ್ ದಾಳಿ ಆರಂಭ

ಯೆಮನ್: ಹಮಾಸ್ ದಾಳಿಯ ನೆಪದಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ನಾಗರಿಕರನ್ನು ಬೇಟೆಯಾಡುತ್ತಿದ್ದು, ಅಂತಾರಾಷ್ಟ್ರೀಯ ಕಾನೂನನ್ನು, ವಿಶ್ವಸಂಸ್ಥೆಯ ಸಲಹೆಗಳನ್ನು ಎಲ್ಲ ಮೀರುತ್ತಿದೆ. ದಾಳಿ ಮುಂದುವರೆಸುವ ಹೇಳಿಕೆಗಳನ್ನೂ ನೀಡುತ್ತಿದೆ. ಪ್ಯಾಲೆಸ್ತಿನಿಯನ್ ನಾಗರಿಕರ ಸಾವು ನೋವಿನ ಬಗ್ಗೆ, ಮಿಲಿಯಾಂತರ ಜನರ ನಿರಾಶ್ರಿತರಾಗಿರುವುದರ ಬಗ್ಗೆ ಕೆಲವು ಮುಸ್ಲಿಂ ರಾಷ್ಟ್ರಗಳು ಕೆರಳಿ ಕೆಂಡಾಮಂಡಲವಾಗಿದೆ. ದಾಳಿ ನಿಲ್ಲಿಸುವ ಎಚ್ಚರಿಕೆ ಮೀರಿದ ಇಸ್ರೇಲ್ ವಿರುದ್ಧ ಇದೀಗ ಯೆಮೆನ್ ಅಧಿಕೃತವಾಗಿ ಯುದ್ಧ ಘೋಷಿಸಿದೆ.

ಯೆಮೆನ್ ಭದ್ರತಾ ಪಡೆ ಮುಖ್ಯಸ್ಥ ಯುದ್ಧ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಮೇಲೆ ಮಿಸೈಲ್‌ಗಳು ತೂರಿ ಬಂದಿದೆ.

ಯೆಮನ್ ಯುದ್ಧ ಘೋಷಣೆ ಕುರಿತು ಭದ್ರತಾ ಪಡೆ ವಕ್ತಾರ ಯಹ್ಯಾ ಸೆರಿ ವಿಡಿಯೋ ಮೂಲಕ ಘೋಷಣೆ ಮಾಡಿದ್ದಾರೆ. ಯುದ್ಧ ಘೋಷಣೆ ಬೆನ್ನಲ್ಲೇ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಆರಂಭಗೊಂಡಿದೆ.

ಪ್ಯಾಲೆಸ್ತಿನ್ ಸಹೋದರ,ಸಹೋದರಿಯರಿಗೆ ನಾವು ಹೋರಾಟ ಆರಂಭಿಸಿದ್ದೇವೆ ಎಂದು ಯೆಮೆನ್ ಹೇಳಿದೆ. ಇಸ್ರೇಲ್ ದಾಳಿ ನಿಲ್ಲಿಸುವವರೆಗೆ ಯೆಮೆನ್ ಶಸಸ್ತ್ರ ಪಡೆಗಳು ಭೀಕರ ದಾಳಿ ನಡೆಸಲಿದೆ ಎಂದೂ ಹೇಳಿದೆ. ಇಸ್ರೇಲ್ ಘೋರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಕೂಡ ಯೆಮೆನ್ ಎಚ್ಚರಿಸಿದೆ.

ತಾಳಿ ಕಟ್ಟುವ ವೇಳೆ ನನಗೆ ಮದುವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು ದಿವ್ಯಾ

Posted by Vidyamaana on 2023-08-27 12:54:47 |

Share: | | | | |


ತಾಳಿ ಕಟ್ಟುವ ವೇಳೆ ನನಗೆ ಮದುವೆ ಬೇಡ  ಎಂದು ಹಸೆಮಣೆಯಿಂದ ಮೇಲೆದ್ದ ವಧು ದಿವ್ಯಾ

ತುಮಕೂರು: ಮದುವೆ ನಡೆಯುತ್ತಿದ್ದ ವೇಳೆ ವರ ವಧುವಿಗೆ ತಾಳಿ ಕಟ್ಟುವ ಸಂದರ್ಭದಲ್ಲಿ ವಧು ನನಗೆ ಮದುವೆ ಬೇಡ ಎಂದು ಹಸೆಮಣೆಯಿಂದ  ಮೇಲೆದ್ದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಕೋಳಾಲ ಗ್ರಾಮದಲ್ಲಿ ಆ.27ರ ಭಾನುವಾರ ನಡೆದಿದೆ.ಸಾಲಾ ಸೋಲಾ ಮಾಡಿ ಮದುವೆಯ ಸಿದ್ಧತೆ ಮಾಡಿ ನೆಂಟರಿಷ್ಟರು, ಬಂಧು ಬಳಗ  ಎಲ್ಲಾ ಸೇರಿ ಕಳೆದ ರಾತ್ರಿಯಿಂದ ಆರತಕ್ಷತೆ, ಮದುವೆಯ ವಿವಿಧ ಶಾಸ್ತ್ರಗಳು ಸರಗಾವಾಗಿ ನಡೆದಿದ್ದು ಭಾನುವಾರ  ಬೆಳಗ್ಗೆ ಮದುವೆಯ ಮಂಟಪದಲ್ಲಿ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡುವ ವೇಳೆ ನನಗೆ ಈ ಮದುವೆಯೇ ಬೇಡ ಎಂದು ವಧು ಮದುವೆ ಮಂಟಪದಿಂದ ಹೊರ ನಡೆದಿದ್ದಾರೆ.


ತಾಳಿ ಕಟ್ಟೋ ವೇಳೆ ಹಸೆ‌ಮಣೆಯಿಂದ ವಧು ಎದ್ದು ಹೊರನಡೆದ ಹಿನ್ನೆಲೆ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ ಮದುವೆ.


ಮದುವೆ ಬೇಡ ಎಂದು ಮೇಲೆದ್ದ ವಧು ದಿವ್ಯಾ


ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಹೀಗಾಗಿ ಮದುವೆ ಬೇಡ ಎಂದು ವಧು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಕೋಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಈ ಘಟನೆ ನಡೆದಿದೆ.



ರಾತ್ರಿ ರಿಸೆಪ್ಷನ್ ನಲ್ಲಿ ಹುಡುಗ ವೆಂಕಟೇಶ್ ನೊಂದಿಗೆ ದಿವ್ಯ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಭಾನುವಾರ ವೆಂಕಟೇಶ್ ಎಂಬವರ ಜೊತೆ ದಿವ್ಯ ಮದುವೆ ನಡೆಯುತ್ತಿದ್ದು, ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ದಿವ್ಯಾ ಹೇಳಿದ್ದಾರೆ.


ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು  ಗೋವಿಂದರಾಜು ಪುತ್ರ ವೆಂಕಟೇಶ್ ಅವರ ವಿವಾಹ ಸಮಾರಂಭವು ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾ ನಡುವೆ ಮದುವೆ ನಡೆಯುತ್ತಿತ್ತು.


ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದೆ. ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆದಿದ್ದು, ಕೋಳಾಲ‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಹುಡುಗನ ಕಡೆಯವರಿಂದ ಆಕ್ರೋಶ  ವ್ಯಕ್ತವಾಗಿದೆ. ಹುಡುಗಿ ಬೇರೆಯವರನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಿದ್ದರೂ ಪೋಷಕರು ಈ ಮದುವೆ ನಿಶ್ಚಯ ಮಾಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮುರ : ಟಿಪ್ಪರ್-ಸ್ಕೂಟರ್ ನಡುವೆ ಡಿಕ್ಕಿ : ಇಬ್ಬರು ಗಂಭೀರ

Posted by Vidyamaana on 2024-02-22 15:59:18 |

Share: | | | | |


ಮುರ : ಟಿಪ್ಪರ್-ಸ್ಕೂಟರ್ ನಡುವೆ ಡಿಕ್ಕಿ : ಇಬ್ಬರು ಗಂಭೀರ

ಪುತ್ತೂರು:  ಮುರ ಸಮೀಪ ಎಂಪಿಎಂ ಸ್ಕೂಲ್ ಬಳಿ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಸ್ಕೂಟರ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಎ 21 ಡಬ್ಲೂ 0247 ನಂಬರಿನ ಸ್ಕೂಟರ್ ಪುತ್ತೂರಿನಿಂದ ಕಬಕ ಕಡೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ಕಬಕದಿಂದ ಪುತ್ತೂರ ಕಡೆ ಬರುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ 

ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಪ್ರೋಟೋಕಾಲ್​​ಗಳು ಹೇಗೆ?

Posted by Vidyamaana on 2023-12-13 20:12:38 |

Share: | | | | |


ಸಂಸತ್ತಿನೊಳಗೆ ಹೋಗಲು ವಿಸಿಟರ್ಸ್ ಪಾಸ್ ಪಡೆಯುವುದು ಹೇಗೆ? ಪ್ರೋಟೋಕಾಲ್​​ಗಳು ಹೇಗೆ?

 ಸಂಸತ್​​​​ ಒಳಗೆ ಬಂದು ಅಶ್ರುವಾಯು ಸಿಡಿಸಿದ ಮೈಸೂರಿನ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್​​​ ಸಿಂಹ ಅವರ ಪಿಎ ವಿಸಿಟರ್ಸ್ ಪಾಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಸಿಟರ್ಸ್ ಪಾಸ್ ಪಡೆಯಬೇಕಾದರೆ ಏನು ಮಾಡಬೇಕು.ಅಲ್ಲಿಯ ಭದ್ರತಾ ಹಂತಗಳು ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ. Parliament security breach) ಉಂಟಾಗಿದ್ದು, ಸಾಗರ್​​ ಶರ್ಮ ಮತ್ತು ಮನೋರಂಜನ್‌​​ ಎಂಬ ಇಬ್ಬರು ಯುವಕರು ಸಂಸತ್​​​ ಅಧಿವೇಶದಲ್ಲಿ ನಿಂತ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ. ಇದೀಗ ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧನವಾಗಿರುವ ನಾಲ್ವರಲ್ಲಿ ಒಬ್ಬ ಮೈಸೂರಿನ ಮನೋಹರ್​​ ಎಂದು ಹೇಳಲಾಗಿದೆ. ಇವರಿಗೆ ಸಂಸತ್​​​ ಒಳಗೆ ಹೋಗಲು ಮೈಸೂರಿನ ಸಂಸದ ಪ್ರತಾಪ್​​​​ ಸಿಂಹ ಅವರ ಪಿಎ ಪಾಸ್​​​ ನೀಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ವಿಸಿಟರ್ಸ್ ಪಾಸ್ ಎಂದರೇನು? ಸಂಸತ್​​ ಒಳಗೆ ಒಬ್ಬ ಸಾಮಾನ್ಯ ವ್ಯಕ್ತಿ ಹೋಗಬೇಕಾದರೆ ಯಾವೆಲ್ಲ ಕ್ರಮ ಮತ್ತು ಭದ್ರತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.


ಪಾಸ್​​ ಪಡೆಯುವುದು ಮತ್ತು ಪ್ರೋಟೋಕಾಲ್​​ಗಳು ಹೇಗೆ?


ಸಂಸತ್ತಿನ ಸಂಕೀರ್ಣದೊಳಗೆ ಹೋಗಲು ನೀಡುವ ಗ್ಯಾಲರಿ ಪಾಸ್‌ಗಳ ವಿತರಣೆಯ ನಿಯಂತ್ರಣ ಪ್ರೋಟೋಕಾಲ್​​​​​​ ಹೊಂದಿರುತ್ತದೆ. ಸಂಸತ್ತಿನ ಸದಸ್ಯರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು, ಪತ್ರಕರ್ತರು, ಮಾಧ್ಯಮ ಮಿತ್ರರು ವೀಕ್ಷಕರಾಗಿ ಈ ಪಾಸ್ ಪಡೆಯಬಹುದು​​​ , ಪ್ರತಿ ಪಾಸ್‌ಗೆ ವಿಶಿಷ್ಟ ಐಡಿಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಈ ಪಾಸ್​​​ ಐಡಿಯಲ್ಲೂ ಬೇರೆ ಬೇರೆ ವಿಧಗಳಿವೆ. ಪ್ರೇಕ್ಷಕರ ಗ್ಯಾಲರಿಗೆ ಪಾಸ್​​​​ ಪಡೆಯಬೇಕಾದರೆ ಸಂಸದ ಸಹಿ ಕೂಡ ಇರಬೇಕು. ಒಂದು ಪಾಸ್​​​ನಲ್ಲಿ ಇಬ್ಬರು ಹೋಗಬಹುದು. ಆ ಪಾಸಿನಲ್ಲಿ ಒಬ್ಬ ಮತ್ತು ಪ್ಲಸ್​​​ ಎಂದು ನಮೂದಿಸಿರುತ್ತಾರೆ. ಇನ್ನು ವಿದ್ಯಾರ್ಥಿಗಳು ಈ ಪಾಸ್​​​ ಪಡೆಯಬೇಕಾದರೆ ಶಾಲೆಯಿಂದ ಒಂದು ಪತ್ರವನ್ನು ಪಡೆದು, ಅದಕ್ಕೆ ಸಂಸದರ ಸಹಿ ಇದ್ದು, ನಂತರ ಹೋಗಬಹುದು.


ಭದ್ರತಾ ರಕ್ಷಕರ ಕಾರ್ಯ


ಸಂಸತ್ತಿನ ಒಳಗೆ ಹಲವು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಇದನ್ನು ನೋಡಿಕೊಳ್ಳುವವರು ಜಂಟಿ ಕಾರ್ಯದರ್ಶಿ. ಇದರಲ್ಲಿ ದೆಹಲಿ ಪೊಲೀಸ್, ಸಂಸತ್ತು ರಕ್ಷಕರು ಮತ್ತು ವಿವಿಧ ಮಿತ್ರ ಭದ್ರತಾ ಏಜೆನ್ಸಿಗಳನ್ನು ಒಳಗೊಂಡಿರುತ್ತಾರೆ. ಇನ್ನು ಸಂಸತ್ತಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಬಹು-ಪದರದಿಂದ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ಒಳಗೊಂಡಿದೆ. ಇಲ್ಲಿ ಟೈರ್ ಕಿಲ್ಲರ್‌ಗಳು ಮತ್ತು ರೋಡ್ ಬ್ಲಾಕರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.


ಪ್ರದೇಶವಾರು ಜವಾಬ್ದಾರಿ


ಇನ್ನು ಇಲ್ಲಿ ಪ್ರದೇಶವಾರು ಜವಾಬ್ದಾರಿಗಳನ್ನು ಹೊಂದಿರುತ್ತದೆ. ಭದ್ರತಾ ಅಧಿಕಾರಿ/ಸಹಾಯಕ ನಿರ್ದೇಶಕರು (ಭದ್ರತೆ) ಸಂಸತ್ ಭವನದ ಕಟ್ಟಡದೊಳಗೆ ಹೋಗುವ ವ್ಯಕ್ತಿಗಳ ಪಾಸ್‌ಗಳನ್ನು ಸರಿಯಾಗಿ ಪರಿಶೀಲಿಸುತ್ತಾರೆ ಮತ್ತು ಅವರನ್ನು ಕೂಡ ಪರಿಶೀಲಿಸುತ್ತಾರೆ. ಯಾವುದೇ ಅನುಮಾನ ಬಂದರು ಅವುಗಳನ್ನು ಹಿರಿಯ ಅಧಿಕಾರಿಗಳಿಗೆ ಹೇಳುತ್ತಾರೆ. ಅಲ್ಲಿ ಅನುಮಾನಾಸ್ಪ ವಿಚಾರಗಳು ತಿಳಿದುಬಂದಲ್ಲಿ ತಕ್ಷಣ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ.


ಸಂಸತ್​​​ ಗ್ಯಾಜೆಟ್‌, ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ ಅಳವಡಿಕೆ


ಭದ್ರತಾ ಶಸ್ತ್ರಾಗಾರವು ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು, ಆಧುನಿಕ ಗ್ಯಾಜೆಟ್‌ಗಳು ಮತ್ತು ವಾಹನದ ಪ್ರವೇಶವನ್ನು ನಿಯಂತ್ರಿಸುವ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಮೂಲಕ ಸಂಸತ್ತಿನಲ್ಲಿ ಸಂದರ್ಶಕನನ್ನು ಪರೀಕ್ಷಿಸಲಾಗುತ್ತದೆ ಮತ್ತು ಅವರ ಬ್ಯಾಗ್‌ಗಳನ್ನು ಕನಿಷ್ಠ ಮೂರು ಬಾರಿ ಪರಿಶೀಲಿಸಲಾಗುತ್ತದೆ. ಮೆಟಲ್ ಡಿಟೆಕ್ಟರ್‌ಗಳಲ್ಲಿ ಪರಿಶೀಲಿಸಿದ ನಂತರ ಮತ್ತೆ ಎರಡನೇ ಹಂತದ ಭದ್ರತಾ ತಪಾಸಣೆ ಮಾಡಲಾಗುತ್ತದೆ.ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸುವ ಮೊದಲು ಮತ್ತೊಂದು ಭದ್ರತಾ ತಪಾಸಣೆ ಮಾಡಲಾಗುತ್ತದೆ.


ಶಸ್ತ್ರಾಸ್ತ್ರ ನಿಷೇಧ


ಸಂಸತ್ತಿನ ಕೆಲವು ಸದಸ್ಯರಿಗೆ ಭದ್ರತಾ ಸಿಬ್ಬಂದಿಗಳನ್ನು ನೀಡಲಾಗಿದೆ. ಆದರೆ ಅವರು ಅಧಿವೇಶನದ ಒಳಗೆ ಬರುವಂತಿಲ್ಲ. ಸಂಸತ್ ಭವನದ ಸಂಕೀರ್ಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿ ಗೇಟ್‌ನಲ್ಲಿ ನಿಖರವಾದ ತಪಾಸಣೆ ನಂತರವೇ ಭದ್ರತಾ ಸಿಬ್ಬಂದಿಗೆ ಸಂಸತ್ತಿನ ಒಳಗೆ ಬರಬಹುದು


ಭದ್ರತಾ ಗುರುತಿಸುವಿಕೆ ಮತ್ತು ಸಮನ್ವಯ


ಸಂಸತ್ತಿನ ಒಳಗಿನ ಪ್ರವೇಶವು ವಿವಿಧ ಭದ್ರತಾ ಏಜೆನ್ಸಿಗಳ ನಡುವೆ ಗುರುತಿಸುವಿಕೆ ಮತ್ತು ಪರಿಶೀಲನೆ ಹಾಗೂ ಸಮನ್ವಯವನ್ನು ಸಾಧಿಸಲಾಗುತ್ತದೆ.ದೆಹಲಿ ಪೊಲೀಸ್, ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್, ಇಂಟೆಲಿಜೆನ್ಸ್ ಬ್ಯೂರೋ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಮತ್ತು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್‌ ಸಂಸತ್ತಿನ ಭದ್ರತಾ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಪುತ್ತೂರಿಗೆ ಭರ್ತಿದ್ದಾರೆ ಫೈರ ಬ್ರ್ಯಾಂಡ್ ಲೀಡರ್ ಯತ್ನಾಳ್

Posted by Vidyamaana on 2023-05-19 02:44:27 |

Share: | | | | |


ಪುತ್ತೂರಿಗೆ ಭರ್ತಿದ್ದಾರೆ ಫೈರ ಬ್ರ್ಯಾಂಡ್ ಲೀಡರ್ ಯತ್ನಾಳ್

ಪುತ್ತೂರು:ಬ್ಯಾನರ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಮತ್ತು ಪ್ರಕರಣದ ಕುರಿತು ಮಾಹಿತಿ ಪಡೆಯಲು ಬಿಜೆಪಿ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೇ 19ರಂದು ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಎಂದು ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ.ಯತ್ನಾಳ್ ಅವರು ನನಗೆ ದೂರವಾಣಿ ಕರೆ ಮಾಡಿ, ಪುತ್ತೂರಿನಲ್ಲಿ ಪೊಲೀಸರಿಂದ

ಹಲ್ಲೆಗೊಳಗಾದ ಹಿಂದು ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದರಲ್ಲದೆ ನಾಳೆ ನಾನು

ಪುತ್ತೂರುಗೆ ಬರುತ್ತೇನೆಂದು ತಿಳಿಸಿರುವುದಾಗಿ ಅರುಣ್ ಕುಮಾರ್ ಪುತ್ತಿಲ ಅವರು ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ.ನಾಳೆ ಬೆಳಿಗ್ಗೆ ಪುತ್ತೂರಿಗೆ ಭೇಟಿ ಕೊಟ್ಟು ನಮ್ಮ ಕಾರ್ಯಕರ್ತರ ಆರೋಗ್ಯ ವಿಚಾರಿಸಲಿದ್ದೇನೆ.ಹಿಂದೂ ಕಾರ್ಯಕರ್ತರೊಂದಿಗೆ ಸದಾ ನಿಲ್ಲಲಿದ್ದೇನೆ.ಧರ್ಮಕ್ಕಾಗಿ ಹೋರಾಟ ಮಾಡುವ ಕಾರ್ಯಕರ್ತರು ಯಾವುದೇ ಕ್ಷಣದಲ್ಲೂ ಎದೆಗುಂದಬೇಡಿ ನಿಮ್ಮೊಡನೆ ನಾವಿದ್ದೇವೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಉಪ್ಪಿನಂಗಡಿ:ಮೇ 1 (ಇಂದು)ರ ಸಂಜೆ SDPIಯಿಂದ ಪಾದಯಾತ್ರೆ, ಮತಯಾಚನೆ.

Posted by Vidyamaana on 2023-05-01 06:54:06 |

Share: | | | | |


ಉಪ್ಪಿನಂಗಡಿ:ಮೇ 1 (ಇಂದು)ರ ಸಂಜೆ SDPIಯಿಂದ ಪಾದಯಾತ್ರೆ, ಮತಯಾಚನೆ.

ಪುತ್ತೂರು: SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಅವರ ಪಕ್ಷದ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಮೇ 1ರಂದು ಸಂಜೆ 4.30ಕ್ಕೆ ಉಪ್ಪಿನಂಗಡಿಯಲ್ಲಿ ಪಾದಯಾತ್ರೆ ಹಾಗೂ ಮತಯಾಚನೆ ನಡೆಯಲಿದೆ.

ಹಸಿವು ಮುಕ್ತ ಸ್ವಾತಂತ್ರ್ಯ ಹಾಗೂ ಭಯ ಮುಕ್ತ ಸ್ವಾತಂತ್ರ್ಯ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಓ್ ಇಂಡಿಯಾದ ಉಪ್ಪಿನಂಗಡಿ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ.

 ಶಾಫಿ ಬೆಳ್ಳಾರೆ ಅವರು ಆಟೋ ರಿಕ್ಷಾ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ ಎಂದು SDPI ಪ್ರಕಟಣೆಯಲ್ಲಿ ತಿಳಿಸಿದೆ.



Leave a Comment: