ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಒಂದೇ ಗ್ರಾಮ ಪಂಚಾಯತ್ ನಲ್ಲಿ ಅಪರೂಪದ ಘಟನೆ: ಅಧ್ಯಕ್ಷೆ-ಉಪಾಧ್ಯಕ್ಷೆಯಾದ ತಾಯಿ-ಮಗಳು..

Posted by Vidyamaana on 2023-08-12 16:15:04 |

Share: | | | | |


ಒಂದೇ ಗ್ರಾಮ ಪಂಚಾಯತ್ ನಲ್ಲಿ ಅಪರೂಪದ ಘಟನೆ: ಅಧ್ಯಕ್ಷೆ-ಉಪಾಧ್ಯಕ್ಷೆಯಾದ ತಾಯಿ-ಮಗಳು..

ಕಡೂರು: ತಾಯಿ ಮತ್ತು ಮಗಳು ಒಂದೇ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡಿರುವ ಸ್ವಾರಸ್ಯಕರ ಘಟನೆ ತಾಲೂಕಿನ ಗರ್ಜೆ ಗ್ರಾಮ ಪಂಚಾಯತ್‌ನಲ್ಲಿ ವರದಿಯಾಗಿದೆ.


ಎರಡನೇ ಅವಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರ ಜೊತೆಗೆ ಗೆಲುವು ಸಾಧಿಸಿದ ಪಂಚಾಯತ್‌ನ ಒಟ್ಟು 7 ಜನ ಸದಸ್ಯರಲ್ಲಿ ಮೊದಲಿನಿಂದಲೂ 3 ಮತ್ತು 4 ಜನ ಸದಸ್ಯರ ಎರಡು ಗುಂಪುಗಳಿದ್ದವು. ತಾಯಿ ನೇತ್ರಾವತಿ ಮತ್ತು ಮಗಳು ಸ್ನೇಹಾ ಬೆಂಬಲದಿಂದ ನಾಲ್ಕು ಜನರ ಗುಂಪಿನ ಎನ್.ಆರ್.ರಂಜಿತಾ ಮತ್ತು ಎಂ.ಎಲ್.ಹರೀಶ್ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ರಂಜಿತಾ ಮತ್ತು ಪ್ರಕಾಶ್, ನೇತ್ರಾವತಿ ಮತ್ತು ಸ್ನೇಹಾ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ತಾಯಿ ಮತ್ತು ಮಗಳು ಅಧಿಕಾರಕ್ಕೇರಿದ್ದಾರೆ. ಬದಲಾದ ಮೀಸಲಾತಿ ಮತ್ತು 4 ಸದಸ್ಯರ ನಡುವಿನ ಒಗ್ಗಟ್ಟು ಚುನಾವಣೆಯಲ್ಲಿ ತಾಯಿ, ಮಗಳು ಗೆಲುವು ಸಾಧಿಸಲು ಸಹಕಾರಿಯಾಗಿದೆಎರಡನೇ ಅವಧಿಗೆ ಗರ್ಜೆ ಗ್ರಾಮ ಪಂಚಾಯತ್ ಚುನಾವಣೆ ನಡೆದ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸ್ನೇಹಾ ಮತ್ತು ಜಿ.ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್.ನೇತ್ರಾವತಿ ಮತ್ತು ಎಂ.ಜ್ಯೋತಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಗಳು ಸ್ನೇಹಾ ಮತ್ತು ತಾಯಿ ನೇತ್ರಾವತಿ ತಲಾ 4 ಮತಗಳನ್ನು ಪಡೆದರೆ, ಪ್ರತಿಸ್ರಗಳಾದ ಮಲ್ಲಿಕಾರ್ಜುನ್ ಮತ್ತು ಜ್ಯೋತಿ ತಲಾ ಮೂರು ಮತಗಳನ್ನು ಪಡೆದು ಸೋತಿದ್ದರು. ಸ್ನೇಹ ಮತ್ತು ನೇತ್ರಾವತಿ ತಲಾ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿ ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಸ್ಥಾನಕ್ಕೆ ಆಯ್ಕೆಯಾದರುಒಂದೇ ಮನೆಗೆ ಎರಡು ಹುದ್ದೆ!


ಮಗಳು ಸ್ನೇಹಾ ಮತ್ತು ತಾಯಿ ನೇತ್ರಾವತಿ ಗರ್ಜೆ ಗ್ರಾಮದವರಾಗಿದ್ದು, ಒಂದೇ ಮನೆಯಲ್ಲೇ ವಾಸವಾಗಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಗಳು ಸ್ನೇಹಾ ಜಿ.ಮಾದಾಪುರ ಗ್ರಾಮದಿಂದ ಮತ್ತು ತಾಯಿ ಗರ್ಜೆಯಿಂದ ಗೆಲುವು ಸಾಧಿಸಿ ಒಂದೇ ಅವಧಿಯಲ್ಲಿ ಒಂದೇ ಮನೆಯಿಂದ ಇಬ್ಬರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸ್ನೇಹಾ ಮತ್ತು ನೇತ್ರಾವತಿಗೆ ಒಲಿದು ಬಂದಿರುವುದರಿಂದ ಒಂದೇ ಮನೆಗೆ ಎರಡು ಹುದ್ದೆಗಳು ಸಿಕ್ಕಂತಾಗಿದೆ.

ಪೈವಳಿಕೆಯಲ್ಲಿ ಕೊಲೆ ಪುತ್ತೂರಿನಲ್ಲಿ ಸೆರೆ

Posted by Vidyamaana on 2023-06-03 10:52:32 |

Share: | | | | |


ಪೈವಳಿಕೆಯಲ್ಲಿ ಕೊಲೆ ಪುತ್ತೂರಿನಲ್ಲಿ ಸೆರೆ

ಪುತ್ತೂರು: ಕಾಸರಗೋಡಿನ ಪೈವಳಿಕೆಯಲ್ಲಿ ತಮ್ಮನನ್ನು ಇರಿದು ಕೊಂದ ಅಣ್ಣ ಪುತ್ತೂರಿನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಸಹೋದರರ ನಡುವಿನ ವೈಷಮ್ಯದ ಕಾರಣದಿಂದ ಅಣ್ಣ ಜಯರಾಮ, ತಮ್ಮ ಪ್ರಭಾಕರ ನೋಂಡಾ (40) ಎಂಬವರನ್ನು ಇರಿದು ಹತ್ಯೆ ಮಾಡಿದ್ದ ಘಟನೆ ಶನಿವಾರ ಬೆಳಿಗ್ಗೆ ಪೈವಳಿಕೆಯಲ್ಲಿ ನಡೆದಿತ್ತು.

ಕೇರಳದ ಪೈವಳಿಕೆಯಲ್ಲಿ ಕೊಲೆ ಮಾಡಿ ಪುತ್ತೂರಿನಲ್ಲಿ ಬಂದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಪುತ್ತೂರಿನ ಕೊಂಬೆಟ್ಟಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ.


ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಸಹಕರಿಸಿದ್ದಾರೆ. ಪ್ರಭಾಕರ ವಿರುದ್ಧ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ಬಾಲಕೃಷ್ಣ ಆತ್ಮಹತ್ಯೆ!!!

Posted by Vidyamaana on 2023-06-09 03:21:43 |

Share: | | | | |


ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ಬಾಲಕೃಷ್ಣ ಆತ್ಮಹತ್ಯೆ!!!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ನಡೆದಿದೆ.

ಬಂಗ್ರಕೂಳೂರು ಮಾಲಾಡಿ ಕೋರ್ಟ್‌ ಬಳಿಯ ನಿವಾಸಿ ಬಾಲಕೃಷ್ಣ (58) ಎಂಬವರು ಆತ್ಮಹತ್ಯೆಗೈದ ಚಾಲಕ. ಬಾಲಕೃಷ್ಣ ಗುರುವಾರ(ಜೂ.8) ತಮ್ಮ ಮನೆ ರಾಘವೇಂದ್ರ ನಿಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಪರ ಜಿಲ್ಲಾಧಿಕಾರಿಯ ಕಾರಿನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

ಮೃತರ ಪುತ್ರ ಚೇತನ್‌ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀವು ಗೆದ್ದು ಸಂಸತ್ತಿಗೆ ಬರುತ್ತೀರಿ ಬೃಜೇಶ್ ಚೌಟ ಯದುವೀರ್‌, ಡಾ ಮಂಜುನಾಥ್‌ಗೆ ಪ್ರಧಾನಿ ಮೋದಿ ಪತ್ರ

Posted by Vidyamaana on 2024-04-23 07:10:06 |

Share: | | | | |


ನೀವು ಗೆದ್ದು ಸಂಸತ್ತಿಗೆ ಬರುತ್ತೀರಿ ಬೃಜೇಶ್ ಚೌಟ ಯದುವೀರ್‌, ಡಾ ಮಂಜುನಾಥ್‌ಗೆ ಪ್ರಧಾನಿ ಮೋದಿ ಪತ್ರ

ಬೆಂಗಳೂರು ,ಏ.22- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ನಾಲ್ಕೇ ದಿನಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದಾರೆ.

ಮೈಸೂರು-ಕೊಡಗು ಅಭ್ಯರ್ಥಿ ಯದುವೀರ ನರಸಿಂಹದತ್ತ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಸಿ.ಎನ್.ಮಂಜುನಾಥ್ ಹಾಗೂ ದಕ್ಷಿಣ ಕನ್ನಡದಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿರುವ ಬೃಜೇಶ್ ಚೌತಲ ಅವರಿಗೆ ಖುದ್ದು ಪ್ರಧಾನಿಯೇ ಪತ್ರ ಬರೆದು, ನೀವು ಗೆದ್ದು ಸಂಸತ್ತಿಗೆ ಆಯ್ಕೆಯಾಗುತ್ತೀರಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಮೋದಿ ಬರೆದ ಪತ್ರದಲ್ಲೇನಿದೆ?

ನನ್ನ ಸಹೋದ್ಯೋಗಿ ಯದುವೀರ್ ಜೀ ಎಂದು ಪತ್ರ ಆರಂಭಸಿರುವ ಮೋದಿ, ಈ ಪತ್ರ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತೆ ಎಂದು ಭಾವಿಸುವೆ. ನೀವು ನೇರವಾಗಿ ಜನರ ಸೇವೆ ಮಾಡುವ ಮೂಲಕ ಮೈಸೂರಿನ ಒಡೆಯರ ಪರಂಪರೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೆ. ಸುಸ್ಥಿರ ಅಭಿವೃದ್ಧಿ, ಶಿಕ್ಷಣಕ್ಕಾಗಿ ನಿಮ್ಮ ಸಮರ್ಪಣೆ ಸ್ಪಷ್ಟವಾಗಿದೆ. ಜನರ ಆಶೀರ್ವಾದದಿಂದ ನೀವು ಸಂಸತ್ತಿಗೆ ಬರುತ್ತೀರಿ ಎಂಬ ವಿಶ್ವಾಸವಿದೆ. ನಿಮ್ಮಂತಹ ತಂಡದ ಸದಸ್ಯರು ನನಗೆ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ.

ಲೋಕಸಭಾ ಎಲೆಕ್ಷನ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

Posted by Vidyamaana on 2024-02-08 17:52:07 |

Share: | | | | |


ಲೋಕಸಭಾ ಎಲೆಕ್ಷನ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

ಪುತ್ತೂರು: ಸತ್ಯಜಿತ್ ಸುರತ್ಕಲ್ ರವರಿಗೆ ಲೋಕಸಭಾ ಚುನಾವಣೆಗೆ ಭಾಜಪದಿಂದ ದ.ಕ ಜಿಲ್ಲೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಫೆ.25ರಂದು ಜಿಲ್ಲಾ ಮಟ್ಟದ ಆಗ್ರಹ ಸಭೆಯ ಪ್ರಯುಕ್ತ ಫೆ.9ರಂದು ಪುತ್ತೂರು ರೋಟರಿ ಕ್ಲಬ್ ಮನಿಶಾ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು 5.30ಕ್ಕೆ ನಡೆಯಲಿದೆ ಎಂದು ಪುತ್ತೂರು ತಾಲೂಕು ಸತ್ಯಜಿತ್‌ ಸುರತ್ಕಲ್ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಮೂರು ಸಿಂಪಲ್ ಟ್ರಿಕ್

Posted by Vidyamaana on 2024-01-25 15:32:59 |

Share: | | | | |


ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಮೂರು ಸಿಂಪಲ್ ಟ್ರಿಕ್

ಹಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ನಾವು ನಮ್ಮ ಸ್ನೇಹಿತರ, ಕುಟುಂಬದವರ ಮೊಬೈಲ್ ಸಂಖ್ಯೆಗಳನ್ನು (Mobile Number) ನೆನಪಿಟ್ಟುಕೊಳ್ಳುವ ಕಾಲವೊಂದಿತ್ತು.ಆದರೆ, ಮೊಬೈಲ್ ತಂತ್ರಜ್ಞಾನವು ಮುಂದುವರೆದ ನಂತರ, ನಾವು ಮೊಬೈಲ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದನ್ನು ಮರೆತುಬಿಟ್ಟಿದ್ದೇವೆ. ಈಗ ಜನರು ತಮ್ಮ ಫೋನ್‌ಗಳಲ್ಲಿ ಕಾಂಟೆಕ್ಟ್ ಅನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ. ಯಾರಿಗಾದರೂ ಕರೆ ಮಾಡಬೇಕು ಎಂದಿದ್ದರೆ, ಆ ನಂಬರ್ ಅನ್ನು ಡಯಲ್ ಮಾಡುವ ಬದಲು, ಕಾಂಟೆಕ್ಟ್ ಲಿಸ್ಟ್​ಗೆ ಹೋಗಿ ಕರೆ ಮಾಡಿದರೆ ಆಯಿತು. ಆದರೆ, ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ ಏನು ಗತಿ?.


ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.


ನಿಮ್ಮ ಫೋನ್‌ನಲ್ಲಿ ಗೂಗಲ್ ಕಾಂಟೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಫೋನ್ ನಂಬರ್ ಸೇವ್ ಮಾಡಲು Google ID ಯೊಂದಿಗೆ ಈ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.

ಈಗ ಕೆಳಭಾಗದಲ್ಲಿರುವ ಫಿಕ್ಸ್ & ಮ್ಯಾನೇಜ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಈಗ ನೀವು ಕಾಂಟೆಕ್ಟ್ ನಂಬರ್ ಆಮದು ಮಾಡಲು, ರಫ್ತು ಮಾಡಲು ಮತ್ತು ಮರುಸ್ಥಾಪಿಸಲು ಆಯ್ಕೆಗಳನ್ನು ಪಡೆಯುತ್ತೀರಿ.

ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಈಗ ಡಿಲೀಟ್ ಆದ ಎಲ್ಲಾ ಕಾಂಟೆಕ್ಟ್ ಫೋನ್‌ಗೆ ಹಿಂತಿರುಗುತ್ತವೆ.

ಫೋನ್ ಬ್ಯಾಕಪ್‌ನಿಂದ ಮೊಬೈಲ್ ನಂಬರ್ ಮರಳಿ ಪಡೆಯಿರಿ:


ನಿಮ್ಮ ಫೋನ್‌ನ ಬ್ಯಾಕಪ್ ನೀವು ಮಾಡಿದರೆ, ಡಿಲೀಟ್ ಆದ ಸಂಪರ್ಕ ಸಂಖ್ಯೆಗಳನ್ನು ಮರುಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಿ.

ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.

ಬ್ಯಾಕಪ್ ಮತ್ತು ರಿ-ಸ್ಟೋರ್ ಆಯ್ಕೆಗೆ ಹೋಗಿ.

ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಕಾಂಟೆಕ್ಸ್ ಆಯ್ಕೆಯನ್ನು ಆರಿಸಿ.

ನಿಮ್ಮ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ರಿ-ಸ್ಟೋರ್ ಮಾಡಲು ಬಯಸುತ್ತೀರಾ ಅಥವಾ ಬೇಡವೇ ಎಂದು ಕೇಳುವ ಸಂದೇಶವನ್ನು ನೀವು ನೋಡಬಹುದು. ನೀವು ಹೌದು ಎಂದು ಬಯಸಿದರೆ, ನಂತರ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.ಥರ್ಡ್ ಪಾರ್ಟಿ ಅಪ್ಲಿಕೇಷನ್:


ನೀವು ಗೂಗಲ್ ಖಾತೆ ಅಥವಾ ಫೋನ್ ಬ್ಯಾಕಪ್ ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಡಿಲೀಟ್ ಆದ ಕಾಂಟ್ಯಾಕ್ಟ್ ನಂಬರ್ ಗಳನ್ನೂ ಇವುಗಳ ಮೂಲಕ ಹಿಂಪಡೆಯಬಹುದು. ಫೋನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಡಿಲೀಟ್ ಆದ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ಕಂಡುಹಿಡಿಯುವ ಸೌಲಭ್ಯವನ್ನು ಈ ಅಪ್ಲಿಕೇಶನ್‌ಗಳು ಒದಗಿಸುತ್ತವೆ. ಥರ್ಡ್ ಪಾರ್ಟಿ ಅಪ್ಲಿಕೇಷನ್​ಗಳನ್ನು ಡೌನ್‌ಲೋಡ್ ಮಾಡುವಾಗ, ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಯಪಲ್ ಆಯಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಥರ್ಡ್ ಪಾರ್ಟಿ ಅಪ್ಲಿಕೇಷನ್ ಅಪಾಯಕಾರಿಯಾಗಿದೆ.



Leave a Comment: