ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಇಸ್ರೇಲ್ ದೇಶಕ್ಕೆ ಯಾವುದೇ ಸಾಮಗ್ರಿ ನೀಡಬೇಡಿ ತೈಲ ಸೇರಿ ಎಲ್ಲವನ್ನೂ ಬಹಿಷ್ಕರಿಸಿ ; ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ ಕರೆ

Posted by Vidyamaana on 2023-11-02 15:24:44 |

Share: | | | | |


ಇಸ್ರೇಲ್ ದೇಶಕ್ಕೆ ಯಾವುದೇ ಸಾಮಗ್ರಿ ನೀಡಬೇಡಿ  ತೈಲ ಸೇರಿ ಎಲ್ಲವನ್ನೂ ಬಹಿಷ್ಕರಿಸಿ ; ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ ಕರೆ

ನವದೆಹಲಿ, ನ.2: ಇಸ್ರೇಲ್ ದೇಶಕ್ಕೆ ತೈಲ, ಆಹಾರ ಸೇರಿದಂತೆ ಯಾವುದೇ ಸಾಮಗ್ರಿಗಳನ್ನು ನೀಡಬೇಡಿ. ಆ ದೇಶಕ್ಕೆ ರಫ್ತು ಮಾಡುವುದನ್ನೇ ನಿಲ್ಲಿಸಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ ದೇಶದ ಮುಸ್ಲಿಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಅಲ್ಲದೆ, ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಾಯುಪಡೆ ನಡೆಸುತ್ತಿರುವ ಬಾಂಬ್ ದಾಳಿ ನಿಲ್ಲಿಸಲು ಒತ್ತಾಯಿಸಬೇಕು ಎಂದಿದ್ದಾರೆ. 


ಇಸ್ರೇಲ್ ದೇಶವು ಪ್ಯಾಲೆಸ್ತೀನ್ ಭಾಗವಾಗಿರುವ ಗಾಜಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು. ಯಹೂದಿ ರಾಷ್ಟ್ರಕ್ಕೆ ಮುಸ್ಲಿಂ ದೇಶಗಳಿಂದ ರಫ್ತಾಗುತ್ತಿರುವ ತೈಲ ಉತ್ಪನ್ನಗಳು ಹಾಗೂ ಆಹಾರ ಉತ್ಪನ್ನಗಳ ಸರಬರಾಜು ನಿಲ್ಲಬೇಕು ಎಂದು ಅಯತೊಲ್ಲಾ ಅಲಿ ಖಮೇನಿ ಆಗ್ರಹಿಸಿದ್ದಾರೆ. ಇರಾನ್‌ನ ಸರ್ಕಾರಿ ಮಾಧ್ಯಮದಲ್ಲಿ ಖಮೇನಿ ಭಾಷಣ ಪ್ರಸಾರವಾಗಿದೆ. ಈ ಭಾಷಣದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿಶ್ವದೆಲ್ಲೆಡೆಯ ಇಸ್ಲಾಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. 


 ಇರಾನ್ ಬೆಂಬಲಿತ ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಒಮ್ಮೆಲೇ ದಾಳಿ ನಡೆಸಿದ್ದರು. ಜಲ, ನೆಲ, ವಾಯು ಮಾರ್ಗದಲ್ಲಿ ಇಸ್ರೇಲ್‌ಗೆ ಲಗ್ಗೆ ಇಟ್ಟಿದ್ದ ಉಗ್ರರು, 1,400ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳನ್ನು ಕೊಂದು ಹಾಕಿದ್ದರು. ಅಷ್ಟೇ ಅಲ್ಲ, 200ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ಹಾಗೂ ವಿದೇಶೀಯರನ್ನು ಒತ್ತೆಯಾಳನ್ನಾಗಿಸಿ ಗಾಜಾ ಪಟ್ಟಿಗೆ ಕರೆದೊಯ್ದಿದ್ದು ಸುರಂಗದಲ್ಲಿ ಅಡಗಿಸಿಟ್ಟಿದ್ದಾರೆ. ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಈವರೆಗೆ 8 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಕಡೆಯವರು ಹೇಳುತ್ತಿದ್ದಾರೆ

ವಿಟ್ಲ‌ಮುಡ್ನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

Posted by Vidyamaana on 2024-04-07 14:05:49 |

Share: | | | | |


ವಿಟ್ಲ‌ಮುಡ್ನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಯನ್ನು ನಿಮಗೆ ತಲುಪಿಸಿ, ನುಡಿದಂತೆ ನಡೆದು ಇದೀಗ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದೇವೆ ಹರಸಿ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ವಿಟ್ಲ ಮುಡ್ನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ. ಗೃಹಲಕ್ಣ್ಮಿ ಯೋಜನೆಯ ಎರಡು ಸಾವಿರ ಹಣ ಎಲ್ಲರ ಮನೆ ಬೆಳಗಿಸಿದೆ.‌ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ ವಾರ್ಷಿಕ ಒಂದು ಲಕ್ಷ ಹಣ ನೀಡಲಿದ್ದೇವೆ ಎಂದು ಹೇಳಿದರು. 

ಕಡಬ: ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಸಹೋದರ ಶಿಜು ಡೆಂಗ್ಯೂ ಜ್ವರದಿಂದ ಮೃತ್ಯು

Posted by Vidyamaana on 2024-01-31 17:36:02 |

Share: | | | | |


ಕಡಬ: ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಸಹೋದರ ಶಿಜು ಡೆಂಗ್ಯೂ ಜ್ವರದಿಂದ ಮೃತ್ಯು

ಕಡಬ : ಡೆಂಗ್ಯೂ ಮತ್ತು ಮಲೇರಿಯಾ ಜ್ವರ ವಿಪರೀತವಾದ ಹಿನ್ನೆಲೆಯಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕುಟ್ರುಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ನಡೆದಿದೆ.


ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ ಶಿಜು ಕಲ್ಲೋಳಿಕಲ್ (31) ಎಂಬವರು ಮೃತಪಟ್ಟವರು.ಭಾನುವಾರ ಜ್ವರ  ಹಿನ್ನೆಲೆಯಲ್ಲಿ ಕಡಬದ ಖಾಸಗಿ ಮೆಡಿಕಲ್ ಸೆಂಟರ್‌ಗೆ ಅವರು ಚಿಕಿತ್ಸೆಗಾಗಿ ಆಗಮಿಸಿದ್ದರು.ಅಲ್ಲಿ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರ ಪತ್ತೆಯಾಗಿದೆ. ನಂತರದಲ್ಲಿ ಮನೆಗೆ ಬಂದ ಶಿಜು ಅವರಿಗೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಾರನೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದರು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು.ಆದರೆ ಮಂಗಳೂರಿನ ಆಸ್ಪತ್ರೆಗೆ ತಲುಪಿದ ವೇಳೆಗಾಗಲೇ ಶಿಜು ಅವರು ಮೃತಪಟ್ಟಿದ್ದರು.


ಶಿಜು ಅವರು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಅವರ ಸಹೋದರಾಗಿದ್ದಾರೆ. ಶಿಜು ಅವರು ಅಜ್ಜಿ, ತಾಯಿ ಸಾಲಿ,ಪತ್ನಿ ಧನ್ಯ, ಸಹೋದರಿ ಸ್ವಪ್ನ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.ಮೃತ ಶಿಜು ಅವರ ಅಂತ್ಯ ಸಂಸ್ಕಾರ ಕಾರ್ಯಗಳು ವಿಮಲಗಿರಿ ಸಂತ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚಿನಲ್ಲಿ ನೆರವೇರಿತು.

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ: ಪುತ್ತೂರಿನಲ್ಲಿ ಪ್ರಚಾರ ಅಭಿಯಾನಕ್ಕೆ ಶಾಸಕರಿಂದ ಚಾಲನೆ

Posted by Vidyamaana on 2024-05-29 06:03:09 |

Share: | | | | |


ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ: ಪುತ್ತೂರಿನಲ್ಲಿ ಪ್ರಚಾರ ಅಭಿಯಾನಕ್ಕೆ ಶಾಸಕರಿಂದ ಚಾಲನೆ

ಪುತ್ತೂರು: ಈ ಬಾರಿಯ ಎಂಎಲ್ಸಿ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕ ಕ್ಷೇತ್ರ ಎರಡರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಯಾಗಬೇಕು ಇದಕ್ಕಾಗಿ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪದವೀಧಶರ ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಿರುವ ಆಯನೂರು ಮಂಜುನಾಥ್ ಅವರು ಓರ್ವ ಸಜ್ಜನ ಮತ್ತು ವಿದ್ಯಾವಂತ ರಾಜಕಾರಣಿಯಾಗಿದ್ದು ಈ ಹಿಂದೆಯೂ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಚಿರಪರಿಚಿತ ನಾಯಕರಾಗಿದ್ದಾರೆ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿರುವ ಇವರು ಎಂಥಾ ಸನ್ನಿವೇಶದಲ್ಲೂ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇದ್ದು ಬಡವರ ಬಗ್ಗೆ ಅಪಾರ ಕಾಳಜಿಇರುವ ನಾಯಕರಾಗಿದ್ದು ಇವರಿಗೆ ಪುತ್ತೂರಿನಲ್ಲಿ ಹೆಚ್ಚು ಮತ ಚಲಾವಣೆಯಾಗುವಂತೆ ನಾವು ಕಾರ್ಯಪೃವೃತ್ತರಾಗಬೇಕಿದೆ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಮಟ್ಟದಲ್ಲಿ ಕಾರ್ಯಕರ್ತರು ಮತದಾರನ ಬಳಿ ತೆರಳಿ ಮತಯಾಚನೆ ಮಾಡುವಂತೆ ಶಾಸಕರು ಮನವಿ ಮಾಡಿದರು.

ಪುತ್ತೂರು ಮೆಸ್ಕಾಂ ತುರ್ತು ಕಾಮಗಾರಿ ಇಂದು (ಆಗಸ್ಟ್ 01) ವಿದ್ಯುತ್ ನಿಲುಗಡೆ

Posted by Vidyamaana on 2023-08-01 03:54:44 |

Share: | | | | |


ಪುತ್ತೂರು  ಮೆಸ್ಕಾಂ ತುರ್ತು  ಕಾಮಗಾರಿ ಇಂದು (ಆಗಸ್ಟ್ 01) ವಿದ್ಯುತ್ ನಿಲುಗಡೆ

ಪುತ್ತೂರು: 33ಕೆಪಿ ಮಾಡಾವು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33ಕೆ.ವಿ. ಮಾಡಾವು -ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.1ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5ಗಂಟೆಯವರೆಗೆ 33ಕೆವಿ ಮಾಡಾವು- ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33ಕೆವಿ ಮಾಡಾವು -ಬೆಳ್ಳಾರೆ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. 33/11 ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್‌ ಸರಬರಾಜಾಗುವ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿನಿ ದೀಪಿಕಾ ನಾಪತ್ತೆ

Posted by Vidyamaana on 2024-05-08 23:09:00 |

Share: | | | | |


ವಿದ್ಯಾರ್ಥಿನಿ ದೀಪಿಕಾ ನಾಪತ್ತೆ

ಮಂಗಳೂರು, ಮೇ.8: ಎಂಎಸ್ಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ನಡೆಯುತ್ತಿರುವಾಗಲೇ ನಾಪತ್ತೆಯಾಗಿದ್ದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ವೆಲೆನ್ಸಿಯಾ ರೋಶನಿ ನಿಲಯದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ (21) ನಾಪತ್ತೆಯಾದವಳು. 

ರೋಶನಿ ನಿಲಯದಲ್ಲಿ ಕ್ರಿಮಿನಾಲಜಿ ಆ್ಯಂಡ್ ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಮೊದಲನೇ ವರ್ಷದಲ್ಲಿ ಕಲಿಯುತ್ತಿದ್ದ ದೀಪಿಕಾ ಮೇ 7ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹೊರಗೆ ಬಂದಿದ್ದಳು.



Leave a Comment: