ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲ ಕೋಡಿ ಮೂಲದ ರುಕಿಯ ಸಹಿತ ನಾಲ್ವರ ಬಂಧನ- ಪಿಂಪ್‌ ಲತೀಫ್ ಪರಾರಿ

Posted by Vidyamaana on 2023-03-08 11:42:43 |

Share: | | | | |


ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲ ಕೋಡಿ ಮೂಲದ ರುಕಿಯ ಸಹಿತ ನಾಲ್ವರ ಬಂಧನ- ಪಿಂಪ್‌ ಲತೀಫ್ ಪರಾರಿ

ಉಳ್ಳಾಲ: ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿರುವ ಉಳ್ಳಾಲ ಪೊಲೀಸರು, ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ದಾಳಿಯ ವೇಳೆ ಗ್ರಾಹಕ ಹಾಗೂ ಮಹಿಳೆಯರ ಮಧ್ಯೆ ಪಿಂಪ್‌ ರೀತಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಪರಾರಿಯಾಗಿ ತಪ್ಪಿಸಿಕೊಂಡಿದ್ದಾನೆ.ಬಂಟ್ವಾಳದ ಬೋಳಂತೂರು ವಿಟ್ಲಕೋಡಿ ನಿವಾಸಿ ರುಕಿಯಾ (50), ಉಳ್ಳಾಲ ಸುಭಾಶ್ ನಗರ, ಕಡಪರನಿವಾಸಿ ಅಬ್ದುಲ್ ಶಮೀರ್ (30), ಬೆಳ್ತಂಗಡಿ ಕಾಣಿಯೂರು ನೋಂಡಿಲ್ ಕಜೆ ಮನೆ ನಿವಾಸಿ ಅಬ್ದುಲ್ ರಝಾಕ್ ಉಸ್ಮಾನ್ (45) ಹಾಗೂ ಉಳ್ಳಾಲ ಅಕ್ಕರೆಕೆರೆಮಿಲಾಸ್ ಪ್ಲಾಟ್ ನಿವಾಸಿ ಮುಹಮ್ಮದ್ ಇಬ್ರಾಹೀಂ(38) ಬಂಧಿತ ಆರೋಪಿಗಳು. ಲತೀಫ್ ಎಂಬಾತ ತಲೆಮರೆಸಿಕೊಂಡಿರುವ ಪಿಂಪ್‌.ಉಳ್ಳಾಲದ ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ವಿಜೇತ ನಗರದಲ್ಲಿರುವ ʼ ಯಾನ್ವಿʼ   ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಉಳ್ಳಾಲ ಪೊಲೀಸರು ,  ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ.   ಈಸಂಬಂಧ ರುಕಿಯಾ ಮತ್ತು ಲತೀಫ್ ಎಂಬವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತುರುಕಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಲತೀಫ್  ತಲೆಮರೆಸಿಕೊಂಡಿದ್ದಾನೆ. ದಾಳಿಯ ವೇಳೆ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್’ಗಳು, 5000 ರೂ.ನಗದು ಸೇರಿ ಒಟ್ಟು 1,76,580 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್ ಹಾಗೂ ಪಿಎಸ್ಐ ಮಂಜುಳಾ, ಸಿಬ್ಬಂದಿಗಳಾದ ಮಂಜುನಾಥ್, ವಾಸುದೇವ, ಚವ್ಹಾಣ್, ದಾಕ್ಷಾಯಿಣಿ, ಲಕ್ಷ್ಮೀ, ಎಸಿಪಿ ಸ್ಮಾಡ್ ಸಿಬ್ಬಂದಿ ರೆಜಿ ಭಾಗವಹಿಸಿದ್ದರು.

ವಿಟ್ಲ: ಸ್ಕೂಟರ್ ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ: ರಿಕ್ಷಾ ಪ್ರಯಾಣಿಕ ನಾಗೇಶ್ ಸ್ಥಳದಲ್ಲೇ ಮೃತ್ಯು

Posted by Vidyamaana on 2023-10-24 07:31:12 |

Share: | | | | |


ವಿಟ್ಲ: ಸ್ಕೂಟರ್ ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ: ರಿಕ್ಷಾ ಪ್ರಯಾಣಿಕ ನಾಗೇಶ್ ಸ್ಥಳದಲ್ಲೇ ಮೃತ್ಯು

ವಿಟ್ಲ: ಪೆರುವಾಯಿ–ಬೆರಿಪದವು ರಸ್ತೆಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು, ರಿಕ್ಷಾದಲ್ಲಿದ್ದ ಮೂವರ ಪೈಕಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಪೆರುವಾಯಿ–ಬೆರಿಪದವು ರಸ್ತೆಯಲ್ಲಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಕೂಟಿ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ರಿಕ್ಷಾದಲ್ಲಿದ್ದ ಬಾಯಾರು ಪೆರುವೋಡಿ ನಿವಾಸಿ ನಾಗೇಶ್ ಭಟ್ (47) ಎಂಬವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಉಳಿದವರು ಗಂಭೀರ ಗಾಯ ಗೊಂಡಿದ್ದು, ಸ್ಥಳದಲ್ಲಿ ಸೇರಿದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.


ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮುಕ್ವೆ ರಝಾಕ್ ಉಸ್ತಾದ್ ಖ್ಯಾತಿಯ ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಕ್ವೆ ನಿಧನ

Posted by Vidyamaana on 2024-01-03 15:37:55 |

Share: | | | | |


ಮುಕ್ವೆ ರಝಾಕ್ ಉಸ್ತಾದ್ ಖ್ಯಾತಿಯ ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಕ್ವೆ ನಿಧನ

ಪುತ್ತೂರು: ಮುಕ್ವೆ ಮಸೀದಿಯ ಮುದರಿಸ್ ಆಗಿದ್ದ ಅಬ್ದುಲ್ ರಝಾಕ್ ಮುಸ್ಲಿಯಾರ್ (70 ವ.) ಬುಧವಾರ ಮಧ್ಯಾಹ್ನ  ನರಿಮೂಗರು ಗ್ರಾಮದ ಪಾಪೆತಡ್ಕ ದಲ್ಲಿರುವ  ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.


ಮೂಲತಃ ಕಾಸರಗೋಡಿನ ತೆಕ್ಕಿಲ್ ನಿವಾಸಿಯಾಗಿರುವ ಇವರು, ಪುತ್ತೂರು ತಂಙಲ್ ಸಯ್ಯದ್ ಮಹಮ್ಮದ್ ಹಾದಿಲ್ ಖಾದಿರಿಯ್ಯ ಅವರ ಶಿಷ್ಯನಾಗಿ ಸೇರಿಕೊಂಡರು. ನಂತರ ವಿಟ್ಲ ಕುಡ್ತಮುಗೇರುವಿನಲ್ಲಿ ಮುದರಿಸ್ ಆಗಿ ಸೇವೆ ಆರಂಭಿಸಿದರು. ಬಳಿಕ ಕೆಮ್ಮಾಯಿ, ಚಾಪಲ್ಲ, ಬಡಕೋಡಿ ಮೊದಲಾದೆಡೆ ಸೇವೆ ನೀಡಿ ವಾಲೆಮುಂಡೋವು ಮಸೀದಿ ಖತೀಬರಾಗಿ ಆಯ್ಕೆಗೊಂಡಿದ್ದರು.


ಮುಕ್ವೆ ಮಸೀದಿಯಲ್ಲಿ ಸದರ್ ಉಸ್ತಾದರಾಗಿ, ಸಹ ಮುದರಿಸ್ ಆಗಿ ಸುದೀರ್ಘ 30ಕ್ಕಿಂತ ಹೆಚ್ಚು ವರ್ಷಗಳ ಕಾಲ ಸೇವೆ ನೀಡಿ, ಜನರ ವಿಶ್ವಾಸ ಗಳಿಸಿದ್ದರು. ಮಾತ್ರವಲ್ಲ ಮುಕ್ವೆ ರಝಾಕ್ ಉಸ್ತಾದ್ ಎಂದೇ ಗುರುತಿಸಿಕೊಂಡಿದ್ದರು.

 ಅವರ ಹಿರಿಯ ಪುತ್ರ ಅನೀಸ್ ನಿಝಾಮಿ ಅಲ್ ಅರ್ಷದಿ ಅವರು ತಂದೆಯ ಹಾದಿಯಲ್ಲಿದ್ದಾರೆ.

ಮೃತರು ಪತ್ನಿ ಕಡ್ಯ ಪೊಡಿಯಬ್ಬ ಹಾಜಿಯ ಪುತ್ರಿ ರುಖ್ಯಾ, ಆರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ಹಬ್ಬಕ್ಕೆ ಚಾಲನೆ

Posted by Vidyamaana on 2023-10-16 21:51:33 |

Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ಹಬ್ಬಕ್ಕೆ ಚಾಲನೆ

ಪುತ್ತೂರು: ಪರಂಪರೆಯ ಆಭರಣಗಳಿಗೆ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನವರಾತ್ರಿ ಪ್ರಯುಕ್ತ ಸ್ವರ್ಣ ಹಬ್ಬವನ್ನು ಗ್ರಾಹಕರ ಮುಂದಿಟ್ಟಿದೆ.

ಅಕ್ಟೋಬರ್ 15ರಿಂದ 24ರವರೆಗೆ ಪುತ್ತೂರಿನ ಮುಖ್ಯರಸ್ತೆಯ ಆಚಾರ್ಯ ಕಾಂಪ್ಲೆಕ್ಸ್‌ನಲ್ಲಿರುವ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ನಡೆಯಲಿರುವ ಸ್ವರ್ಣ ಹಬ್ಬದಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಕಳೆದ 66 ವರ್ಷಗಳಿಂದ ಸ್ವರ್ಣೋದ್ಯಮದಲ್ಲಿ ಹೊಸ ಛಾಪು ಮೂಡಿಸಿರುವ ಜಿ.ಎಲ್. ಜ್ಯುವೆಲ್ಲರ್ಸ್, ಚಿನ್ನಾಭರಣ ಪ್ರಿಯರ ಮನೆಮಾತಾಗಿದೆ. ಇದೀಗ ಸ್ವರ್ಣ ಹಬ್ಬದ ಮೂಲಕ ಮತ್ತೆ ಗ್ರಾಹಕರಿಗೆ ಹೊಸ ಉಡುಗೊರೆಗಳನ್ನು ನೀಡಲು ಮುಂದಾಗಿದೆ.

ಬಂಗಾರದ ಚೈನ್ ಖರೀದಿಗೆ VA 6%ನಿಂದ ಆರಂಭ, ಜಂಟ್ಸ್ ಕಡ ಖರೀದಿಗೆ VA 6%ನಿಂದ ಆರಂಭ, ಆ್ಯಂಟಿಕ್ ಜ್ಯುವೆಲ್ಲರ್ ಖರೀದಿಗೆ VA 15% ನಿಂದ ಆರಂಭ, ಬ್ಯಾಂಗಲ್ಸ್ ಖರೀದಿಗೆ VA 8%ನಿಂದ ಆರಂಭ. ಗ್ರಾಹಕರಿಗೆ ನವರಾತ್ರಿಯ ಈ ಹಬ್ಬದ ಋತುವಿನಲ್ಲಿ ಚಿನ್ನಭರಣಗಳನ್ನು ಖರೀದಿಸಿ 9 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅಮೂಲ್ಯ ಅವಕಾಶ ನೀಡಲಾಗಿದೆ. ಇದರೊಂದಿಗೆ ಸ್ವರ್ಣ ಹಬ್ಬದ ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಪಡೆಯುವ ಅವಕಾಶವಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಹಾಗೂ ಈ ಜಿ.ಎಲ್. ಸ್ವರ್ಣ ಹಬ್ಬ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರವೀಣ್ ನೆಟ್ಟಾರು ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Posted by Vidyamaana on 2023-05-12 10:23:34 |

Share: | | | | |


ಪ್ರವೀಣ್ ನೆಟ್ಟಾರು ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಪುತ್ತೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ, ಪ್ರವೀಣ್ ಹೆತ್ತವರೊಂದಿಗೆ ಮಾತನಾಡಿದರು.

ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆ: ಮೂವರು ಅರೆಸ್ಟ್

Posted by Vidyamaana on 2023-09-12 16:56:22 |

Share: | | | | |


ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆ: ಮೂವರು ಅರೆಸ್ಟ್

ನೆಲಮಂಗಲ: ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು

ಪೊಲೀಸರು ಬಂಧಿಸಿದ್ದಾರೆ.


ಮೈಲಾರಿ(22), ನವೀನ್(22) ಹಾಗೂ ಶಿವರಾಜ್(30) ಬಂಧಿತ ಆರೋಪಿಗಳು.


ಸೋಮ ಅಲಿಯಾಸ್ ಸೋನು, ಕೀರ್ತಿ ಅಲಿಯಾಸ್ ಉಮೇಶ್ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.


ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ಆ.24ರಂದು ನ್ಯಾನೊ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್​ ಕೇಂದ್ರದ (ಸಿಇಎನ್‌ಎಸ್) 34 ವರ್ಷದ ವಿಜ್ಞಾನಿ ಅಶುತೋಷ್ ಕುಮಾರ್ ಸಿಂಗ್ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು



Leave a Comment: