ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಸ್ವರ್ಣೋದ್ಯಮದ ಬಿಗ್’ಬಾಸಿನಿಂದ ಪುತ್ತೂರಿನಲ್ಲಿ ಕ’ಮಾಲ್’ ಜಿಲ್ಲಾ ಕೇಂದ್ರದ ಕನಸಿಗೆ ಪೂರಕ ಜಿ.ಎಲ್. ವನ್ ಮಾಲ್

Posted by Vidyamaana on 2023-03-28 08:23:50 |

Share: | | | | |


ಸ್ವರ್ಣೋದ್ಯಮದ ಬಿಗ್’ಬಾಸಿನಿಂದ ಪುತ್ತೂರಿನಲ್ಲಿ ಕ’ಮಾಲ್’  ಜಿಲ್ಲಾ ಕೇಂದ್ರದ ಕನಸಿಗೆ ಪೂರಕ ಜಿ.ಎಲ್. ವನ್ ಮಾಲ್

ಪುತ್ತೂರು: ಸ್ವರ್ಣೋದ್ಯಮದಲ್ಲಿ ಪುತ್ತೂರಿನ ಮಟ್ಟಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಅಗ್ರಸ್ಥಾನಿ. ಇದೀಗ ಜಿ.ಎಲ್. ಸಮೂಹ ಸಂಸ್ಥೆಗಳಿಂದ ಪುತ್ತೂರಿಗೆ ಮತ್ತೊಂದು ಬಹುದೊಡ್ಡ ಗಿಫ್ಟ್ ಸಿದ್ಧವಾಗಿದೆ.

ಜಿ.ಎಲ್. ವನ್ ಮಾಲ್ ಏಪ್ರಿಲ್ 2ರಂದು ಲೋಕಾರ್ಪಣೆಗೊಳ್ಳಲಿದೆ. ಸುಸಜ್ಜಿತ, ಆಧುನಿಕ ಮಾರುಕಟ್ಟೆ ವ್ಯವಸ್ಥೆಗೆ ಪೂರಕವೆಂಬಂತೆ ತಲೆಎತ್ತಿರುವ ಮಾಲ್, ಪುತ್ತೂರಿನ ಮಟ್ಟಿಗೆ ಹೊಸ ಪರಿಚಯವೇ ಸರಿ. ಈ ಮೂಲಕ ಪುತ್ತೂರಿಗೆ ಮಾಲ್ ಕಲ್ಚರ್ ಪಾದಾರ್ಪಣೆ ಮಾಡಿದೆ.

ಪುತ್ತೂರು ಜಿಲ್ಲೆ ಆಗಬೇಕೆನ್ನುವುದು ಇಂದು ನಿನ್ನೆಯ ಕನಸಲ್ಲ. ಆದರೆ ಜಿಲ್ಲೆ ಆಗಬೇಕಾದರೆ ಏನೆಲ್ಲಾ ಮೂಲಸೌಕರ್ಯ ಇರಬೇಕು, ಅವನ್ನು ಹೇಗೆ ತರಿಸಿಕೊಳ್ಳಬೇಕು ಎನ್ನುವ ಗೋಜಿಗೆ ಯಾರೂ ಹೋಗಿಲ್ಲ. ಇಂತಹ ಪ್ರಯತ್ನದಲ್ಲಿ ಪುತ್ತೂರಿಗೆ ಮೊದಲ ಯಶಸ್ಸೆಂದರೆ ಮಾಲ್ ಸಂಸ್ಕೃತಿ. ಅದನ್ನು ಪರಿಚಯಿಸುವ ಕೀರ್ತಿ ಜಿ.ಎಲ್. ಜ್ಯುವೆಲ್ಲರ್ಸಿನ ಮಾಲಕ ಬಲರಾಮ ಆಚಾರ್ಯ ಅವರಿಗೆ ಸಲ್ಲಬೇಕು.

ಹೌದು! ಜಿಲ್ಲಾ ಕೇಂದ್ರ ಆಗಬೇಕೆಂದರೆ ಅಲ್ಲಿ ಮಾಲ್ ಗಳ ಪಾತ್ರವೂ ಪ್ರಮುಖವಾದದ್ದು. ಅಂದರೆ ವ್ಯಾಪಾರ ಮಳಿಗೆಗಳು. ವ್ಯಾಪಾರ ಮಳಿಗೆಗಳ ಆಧುನಿಕ ರೂಪವೇ ಈ ಮಾಲ್.

ಮಾಲ್ ಕಮಾಲ್:

ಪುತ್ತೂರಿನಲ್ಲಿ ಕಮಾಲ್ ಸೃಷ್ಟಿಸಲಿರುವ ಜಿ.ಎಲ್. 1 ಮಾಲ್ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಪುತ್ತೂರಿಗೆ ಪ್ರಥಮ ಮಾಲ್ ಎಂಬ ಹೆಗ್ಗಳಿಕೆಯ ಜೊತೆಗೆ, ಭಾರತ್ ಸಿನಿಮಾಸ್ ಅನ್ನು ಪುತ್ತೂರಿಗೆ ಪರಿಚಯಿಸಿದ ಹೆಚ್ಚುಗಾರಿಕೆ. ವ್ಯಾಪಾರಕ್ಕೆ ಆಧುನಿಕ ಟಚ್ ಎಂಬ ಹಿರಿಮೆಯೂ ಇದರದ್ದು. 1 ಲಕ್ಷ ಚದರ ಅಡಿ ಈ ಮಾಲ್ ನ ಒಟ್ಟು ವಿಸ್ತೀರ್ಣ. ಪಾರ್ಕಿಂಗ್ ತಲೆನೋವಾಗಿರುವ ಪುತ್ತೂರಿನ ಗ್ರಾಹಕರಿಗೆ ಪಾರ್ಕಿಂಗ್ ತಲೆನೋವನ್ನು ಇದು ತಗ್ಗಿಸಲಿದೆ. ಕಾರಣ, ಇಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯಿದ್ದು, ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಾಲ್ ನ ಬೃಹತ್ ಕಟ್ಟಡದಲ್ಲಿ ಎಲಿವೇಟರ್ ವ್ಯವಸ್ಥೆಯಿದ್ದು, ಪುತ್ತೂರಿನ ಕಟ್ಟಡಗಳ ಪೈಕಿ ಎಲಿವೇಟರ್ ಪರಿಚಯಿಸಿದ್ದೂ ಕೂಡ ಇಲ್ಲೇ ಮೊದಲು. ಲಿಫ್ಟ್ ಹೇಗೂ ಇದೆ. ಕೇಂದ್ರಿಯ ಹವಾನಿಯಂತ್ರಿತ ವ್ಯವಸ್ಥೆ ಮಾಲ್ ನ‌ ಹೆಚ್ಚುಗಾರಿಕೆ. ಆಧುನಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ. ಮ್ಯಾಕ್ಸ್, ಈಸಿ ಬೇನಂತಹ ಮಲ್ಟಿ ಬ್ರಾಂಡೆಡ್ ಕಂಪೆನಿಗಳನ್ನು ಕರೆತಂದ ಹೆಗ್ಗಳಿಕೆಯೂ ಜಿ.ಎಲ್‌ದು.

ಪೆನ್‌ಡ್ರೈವ್‌ ಪ್ರಕರಣ: ಕುತೂಹಲ ಕೆರಳಿಸಿದ ಪ್ರೀತಮ್‌ ಗೌಡ ಮೌನ

Posted by Vidyamaana on 2024-05-03 08:25:04 |

Share: | | | | |


ಪೆನ್‌ಡ್ರೈವ್‌ ಪ್ರಕರಣ: ಕುತೂಹಲ ಕೆರಳಿಸಿದ ಪ್ರೀತಮ್‌ ಗೌಡ ಮೌನ

ಬೆಂಗಳೂರು : ಹಾಸನ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ವಿರುದ್ಧ ತೊಡೆತಟ್ಟಿದ್ದ ಹಾಸನ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಪ್ರೀತಮ್‌ ಗೌಡ ಅವರು, ಪ್ರಜ್ವಲ್‌ ರೇವಣ್ಣ ಪ್ರಕರಣ ದೇಶಾದ್ಯಂತ ತೀವ್ರ ಬಿರುಗಾಳಿ ಎಬ್ಬಿಸಿದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.ತಮ್ಮ ವಾಟ್ಸಾಪ್‌ ನಂಬರ್‌ನಲ್ಲಿ ಆಗಾಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಟೇಟಸ್‌ ಅಪ್‌ಡೇಟ್‌ ಮಾಡುತ್ತಿರುವುದನ್ನು ಬಿಟ್ಟರೆ, ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟಿಲ್ಲ. ಪ್ರೀತಮ್‌ ಇದ್ದಕ್ಕಿದ್ದಂತೆ ತಟಸ್ಥರಾದಂತೆ ವರ್ತಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

Posted by Vidyamaana on 2024-06-15 20:33:11 |

Share: | | | | |


ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

ತ್ರಿಶೂರ್: ಕೇಂದ್ರ ಸಚಿವ ಮತ್ತು ಕೇರಳದ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ (Suresh Gopi) ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು (Indira Gandhi) ಭಾರತ ಮಾತೆ ಎಂದು ಕರೆದಿದ್ದಾರೆ. ಇದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ಬಣ್ಣಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸುರೇಶ್ ಗೋಪಿ ಅವರು ಮಾಜಿ ಮುಖ್ಯಮಂತ್ರಿಗಳಾದ ಕರುಣಾಕರನ್ ಮತ್ತು ಇ.ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ. ತಮ್ಮ ಕ್ಷೇತ್ರವಾದ ತ್ರಿಶೂರ್‌ನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಂಗೆ ಭೇಟಿ ನೀಡಿದ ನಂತರ ಮಾತನಾಡಿದ ಬಿಜೆಪಿ ನಾಯಕ ಸುರೇಶ್ ಗೋಪಿ ಈ ಹೇಳಿಕೆ ನೀಡಿದ್ದಾರೆ.

750 ರೂ. ಸಾಲ ತೀರಿಸಲಾಗದೆ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ ಶ್ರೀನಿವಾಸ್!!!

Posted by Vidyamaana on 2023-08-28 10:12:14 |

Share: | | | | |


750 ರೂ. ಸಾಲ ತೀರಿಸಲಾಗದೆ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ ಶ್ರೀನಿವಾಸ್!!!

ಚಿಕ್ಕಮಗಳೂರು:ಇತ್ತೀಚಿಗೆ ಕೊಪ್ಪ ತಾಲೂಕಿನ ಖಾಸಗಿ ಶಾಲಾ ವಿದ್ಯಾರ್ಥಿ ಶ್ರೀನಿವಾಸ್ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ 9ನೇ ತರಗತಿ ವಿದ್ಯಾರ್ಥಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ವೇಳೆ ಕೇವಲ 750 ರೂಪಾಯಿ ಸಾಲ ಹಿಂದಿರುಗಿಸಲು ಸಾಧ್ಯವಾಗದಿದ್ದುದಕ್ಕೆ ಕಠಿಣ ನಿರ್ಧಾರ ತಳೆದಿದ್ದಾನೆ ಎಂದು ಹೇಳಿದ್ದಾರೆ.


ಕಡೂರು ತಾಲೂಕಿನ ಹಿರೇ ಬಳ್ಳಕೆರೆ ಗ್ರಾಮದ ಶ್ರೀನಿವಾಸ್ ಕೊಪ್ಪ ತಾಲೂಕಿನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.ಆತ್ಮಹತ್ಯೆಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆ ಗೂ ಮುಂಚೆ ಬರೆದಿಟ್ಟಿದ್ದ ಡೆತ್ ನೋಟ್ ಪರಿಶೀಲಿಸಿದಾಗ, ವಿದ್ಯಾರ್ಥಿ ಸ್ನೇಹಿತರಿಂದ ಪಡೆದಿದ್ದ 750 ರೂ. ಸಾಲವನ್ನು ನೀಡಲು ಸಾಧ್ಯವಾಗದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಶರಣಾಗುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಶ್ರೀನಿವಾಸ್ ಮಾಜಿ ಯೋಧನ ಮಗನಾಗಿದ್ದು, ಮಗನನ್ನು ಕಳೆದು ಕೊಂಡ ತಂದೆ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

Posted by Vidyamaana on 2024-05-21 14:28:01 |

Share: | | | | |


ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

ಮೈಸೂರು: ಪತಿಯೇ ಪತ್ನಿಯನ್ನು (Husband and Wife) ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ತುರಗನೂರು ಗ್ರಾಮದಲ್ಲಿ ನಡೆದಿದೆ. ಮೈಸೂರು (Mysuru) ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆಯಾದ ದುರ್ದೈವಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಗಂಡನೇ ವಿದ್ಯಾಳ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಕ್ರೀಯವಾಗಿದ್ದರು. ಸೋಮವಾರ ರಾತ್ರಿ ಗಂಡ ಹಾಗೂ ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿ ಹತ್ಯೆ ಪತಿ ನಂದೀಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇಲ್ಲಿದೆ ನೋಡಿ ಬಾಯಲ್ಲಿ ನೀರೂರಿಸುವ ಫಿಶ್ ಫ್ರೈ ಮಾಡುವ ವಿಧಾನ..

Posted by Vidyamaana on 2023-09-24 14:32:25 |

Share: | | | | |


ಇಲ್ಲಿದೆ ನೋಡಿ ಬಾಯಲ್ಲಿ ನೀರೂರಿಸುವ ಫಿಶ್ ಫ್ರೈ ಮಾಡುವ ವಿಧಾನ..

ಫಿಶ್ ಫ್ರೈ ರೆಸಿಪಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಭಾರತದ ಈ ಬಗೆಯ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.ಬೇಕಾಗುವಸಾಮಗ್ರಿಗಳು:

* ಮೀನು - 1 ಕೆಜಿ (ಬಾಂಗುಡೆ)

* ಕೆಂಪು ಮೆಣಸಿನಕಾಯಿ ಪುಡಿ - 5 ಚಮಚ

* ಅರಿಶಿಣ ಪುಡಿ- 1 ಚಮಚ

* ಶುಂಠಿ - ಸ್ವಲ್ಪ

* ಬೆಳ್ಳುಳ್ಳಿ- 1

* ರುಚಿಗೆ ತಕ್ಕಷ್ಟು ಉಪ್ಪು

* ತೆಂಗಿನ ಎಣ್ಣೆ 


ಮಾಡುವವಿಧಾನ:

* ಮೀನನನ್ನು ಚೆನ್ನಾಗಿ ತೊಳೆದುಕೊಳ್ಳಿ

* ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ, 2 ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.


* ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗೂ 30 ನಿಮಿಷಗಳ ಕಾಲ ಇದು ನೆನೆಯಲು ಬಿಡಿ.ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ನಂತರ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ.



Leave a Comment: