ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಜೆರೋಸಾ ಶಾಲಾ ವಿವಾದ ಬೆನ್ನಲ್ಲೇ ದ.ಕ. ಡಿಡಿಪಿಐ ದಯಾನಂದ ನಾಯ್ಕ ದಿಢೀರ್‌ ವರ್ಗಾವಣೆ

Posted by Vidyamaana on 2024-02-14 20:59:58 |

Share: | | | | |


ಜೆರೋಸಾ ಶಾಲಾ ವಿವಾದ ಬೆನ್ನಲ್ಲೇ ದ.ಕ. ಡಿಡಿಪಿಐ ದಯಾನಂದ ನಾಯ್ಕ ದಿಢೀರ್‌ ವರ್ಗಾವಣೆ

ಮಂಗಳೂರು : ಮಂಗಳೂರು  ಖಾಸಗಿ ಶಾಲೆಯ ವಿವಾದ ಪ್ರಕರಣ ನಡೆದ ಬೆನ್ನಲ್ಲೇ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರನ್ನು (ಡಿಡಿಪಿಐ) ದಿಢೀರ್‌ ವರ್ಗಾವಣೆ ಮಾಡಲಾಗಿದೆ. ನೂತನ ಡಿಡಿಪಿಐ ಆಗಿ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನಿಯುಕ್ತಿಗೊಳಿಸಲಾಗಿದೆ ಶಾಲೆಯ ವಿವಾದದ ನಿರ್ವಹಣೆಯಲ್ಲಿ ವಿಫಲರಾಗಿರುವ ಕುರಿತು ಹಾಗೂ ಡಿಡಿಪಿಐ ವರ್ತನೆ ಬಗ್ಗೆ ಕಾಂಗ್ರೆಸ್‌ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಮಾಜಿ ಸಚಿವ ರಮಾನಾಥ ರೈ, ಸಮಸ್ಯೆ ಉದ್ಭವ ಆದಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕಿತ್ತು. ಆದರೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಹಿಂದುಳಿದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್‌.ಲೋಬೊ ಕೂಡ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ದಕ್ಷಿಣ ಕನ್ನಡ ಡಿಡಿಪಿಐ ಆಗಿ ನೇಮಕ ಮಾಡಲಾಗಿದೆ

ಮಂಗಳೂರು ಕೆಡಿಪಿ ಸಭೆ

Posted by Vidyamaana on 2023-08-02 06:36:27 |

Share: | | | | |


ಮಂಗಳೂರು ಕೆಡಿಪಿ ಸಭೆ

ಪುತ್ತೂರು: ಅಡಿಕೆ,ತೆಂಗು,ಮರ ಮತ್ತು ಇನ್ನಿತರ ಕಾರಣಗಳಿಂದ ಮೂಲೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ,ಮನೆಯಲ್ಲಿ ಮಲಗಿದ್ದಲ್ಲೇ ಇರುವವರಿಗೆ ಸರಕಾರ ಮಾಸಾಶನ ನೀಡಬೇಕು, ಅವರು ಅತ್ತ ಸಾವೂ ಇಲ್ಲ ಇತ್ತ ಬದುಕೂ ಇಲ್ಲ  ಎಂಬಂತೆ ಅವರ ಜೀವನ ಇದೆ ಅವರಿಗೆ ನೆರವಾಗಲು ಮಾಸಾಶನ ಕೊಡಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಸೀಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡರು.

ಮಂಗಳೂರಿನ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಮಾನವೀಯತೆ ನೆಲೆಯಲ್ಲಿ ಅವರಿಗೆ ಬದುಕಲು ಸಹಾಯ ಮಾಡಬೇಕು, ಇಂಥವರು ಬಹುತೇಕ ಬಡವರೇ ಆಗಿದ್ದಾರೆ, ಅವರಿಗೆ ಸಹಾಯ ಮಾಡಿದರೆ ನಮಗೆ ,ನಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ ಎಂದು ಸೀಎಂ ಬಳಿ ಕೇಳಿಕೊಂಡರು. ಶಾಸಕರು ಈ ವಿಚಾರವನ್ನು ಹೇಳುವಾಗ ಸಿದ್ದರಾಮಯ್ಯ ಅವರೂ ಒಂದು ಕ್ಷಣ ಮೌನವಾದರು, ಶಾಸಕರು ಹೇಳಿದ ವಿಚಾರ ಸೀಎಂ ಮನಸ್ಸಿನಲ್ಲಿ ಬೇಸರವಾದಂತೆ ಕಂಡು ಬಂತು, ತಕ್ಷಣವೇ ಈ ವಿಚಾರದ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವಿಚಾರವನ್ನಹ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಸೀಎಂ ಗಮನಕ್ಕೆ ತಂದಿದ್ದರು.

SSLC Result : ಕರ್ನಾಟಕ ಎಸ್‌ಎಸ್ ಎಲ್‌ಸಿ ಫಲಿತಾಂಶ ಪ್ರಕಟ ಶೇ 76.91ರ ಮಂದಿ ಉತ್ತೀರ್ಣ; ಈ ಜಿಲ್ಲೆಗೆ ಮೊದಲನೇ ಸ್ಥಾನ

Posted by Vidyamaana on 2024-05-09 11:21:42 |

Share: | | | | |


SSLC Result : ಕರ್ನಾಟಕ ಎಸ್‌ಎಸ್ ಎಲ್‌ಸಿ ಫಲಿತಾಂಶ ಪ್ರಕಟ ಶೇ 76.91ರ ಮಂದಿ ಉತ್ತೀರ್ಣ; ಈ ಜಿಲ್ಲೆಗೆ ಮೊದಲನೇ ಸ್ಥಾನ

ಬೆಂಗಳೂರು : ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಮಾತನಾಡಿ 2023-24 ನೇ ಸಾಲಿನಲ್ಲಿ ಶೇ 76.91ರ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಅಂತ ತಿಳಿಸಿದರು.ಇನ್ನೂ ಈ ಬಾರಿ ಮೂರು ಬಾರಿ ಎಕ್ಸಾಂ ಬರೆಯುವುದಕ್ಕೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಹೆಚ್ಚಿನ ಅಂಕ ತೆಗೆದುಕೊಂಡದನ್ನು ಅಂತಿಮವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು ಅಂತ ಹೇಳಿದರು.

ಬೆಂಗಳೂರಿನಲ್ಲಿ ಅಪಘಾತ : ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

Posted by Vidyamaana on 2024-05-30 16:54:25 |

Share: | | | | |


ಬೆಂಗಳೂರಿನಲ್ಲಿ ಅಪಘಾತ :  ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

ನೆಲ್ಯಾಡಿ : ಬೆಂಗಳೂರಿನ ನೆಲಮಂಗಲದಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ನೆಲ್ಯಾಡಿ ಎಂಜಿರ ಪರಕ್ಕಳದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.

ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ಕೇರಿಯಾ ಎಂಬವರ ಪುತ್ರ, ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ ಯುವಕ.

ಶಾಸಕರ ಇಂದಿನ ಕಾರ್ಯಕ್ರಮ ಜು 26

Posted by Vidyamaana on 2023-07-25 23:17:13 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 26

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 26 ರಂದು


ಬೆಳ್ಳಗ್ಗೆ 9 ಗಂಟೆಗೆ ಕಾರ್ಗಿಲ್* *ದಿನಾಚರಣೆ*

ಕಿಲ್ಲೆ ಮೈದಾನ


11 ಗಂಟೆಗೆ CET ಕೋಚಿಂಗ್ ಕ್ಲಾಸ್ ಇನ್ಸ್ಟಾಲೇಷನ್ ಕೊಂಬೆಟ್ಟು ಜೂನಿಯರ್ ಕಾಲೇಜು


ಸಂಜೆ 6 ಗಂಟೆಗೆ 

ಪುತ್ತೂರು ಬಸ್ ನಿಲ್ದಾಣ ಬಳಿ*ಕಾರ್ಗಿಲ್ ದಿನಾಚರಣೆ*ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ

ಕಾಸರಗೋಡು ಖಾಸಗಿ ಬಸ್ ಪಲ್ಟಿ, ಚಾಲಕ ಚೇತನ್ ಕುಮಾರ್ ಮೃತ್ಯು ; 20 ಮಂದಿ ಪ್ರಯಾಣಿಕರಿಗೆ ಗಾಯ

Posted by Vidyamaana on 2024-03-18 20:29:07 |

Share: | | | | |


ಕಾಸರಗೋಡು ಖಾಸಗಿ ಬಸ್ ಪಲ್ಟಿ, ಚಾಲಕ ಚೇತನ್ ಕುಮಾರ್ ಮೃತ್ಯು ; 20 ಮಂದಿ ಪ್ರಯಾಣಿಕರಿಗೆ ಗಾಯ

ಕಾಸರಗೋಡು: ಪೆರಿಯ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಸಾವನ್ನಪ್ಪಿದ ಘಟನೆ ಮಾ.18 ರ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.. ಇಪ್ಪತ್ತು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರಿನಿಂದ ಕಣ್ಣೂರಿಗೆ ಹೋಗುತ್ತಿದ್ದ ಮೆಹಬೂಬ್ ಬಸ್ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.  ಮಧೂರು ರಾಮನಗರ ಮೂಲದ ಚೇತನ್ ಕುಮಾರ್ (37) ಮೃತ ವ್ಯಕ್ತಿ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಸ್ಸಿನಲ್ಲಿದ್ದ ಎಲ್ಲರನ್ನೂ ಇಲ್ಲಿಂದ ಹೊರತೆಗೆದ ಬಳಿಕ ಅಗ್ನಿಶಾಮಕ ದಳದವರು ತಂದ ಕ್ರೇನ್ ಬಳಸಿ ಬಸ್ ಅನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಯಿತು. ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.



Leave a Comment: