ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

Posted by Vidyamaana on 2024-01-17 09:31:21 |

Share: | | | | |


ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

ಹೊಸದಿಲ್ಲಿ: ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯವಾಗಲಿವೆ ಎಂದು ಈಗಾಗಲೇ ಎನ್‌ಎಚ್‌ಎಐ ಎಚ್ಚರಿಸಿದೆ. ಫಾಸ್ಟಾಗ್‌ಗೆ ಕೆವೈಸಿ ಪೂರ್ಣಗೊಂಡಿದೆಯೇ, ಇಲ್ಲವೇ ಎಂಬ ಸ್ಥಿತಿಗತಿ ತಿಳಿಯುವುದು ಹೇಗೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.


ಪರಿಶೀಲನೆ ಹೇಗೆ?

ಬಳಕೆದಾರರು https://fastag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಲಾಗಿನ್‌ ಆಗಲು ನೋಂದಾಯಿತ ಮೊಬೈಲ್‌ ಸಂಖ್ಯೆ, ಪಾಸ್‌ವರ್ಡ್‌ ಮತ್ತು ಬಳಿಕ ಮೊಬೈಲ್‌ಗೆ ಬರುವ ಒಟಿಪಿ ಬೇಕಾಗಲಿದೆ.

ಒಮ್ಮೆ ಲಾಗಿನ್‌ ಆದ ಅನಂತರ, ಡ್ಯಾಶ್‌ಬೋರ್ಡ್‌ಗೆ ತೆರಳಿ, “ಮೈ ಪ್ರೊಫೈಲ್‌’ ವಿಭಾಗದ ಮೇಲೆ ಕ್ಲಿಕ್‌ ಮಾಡಬೇಕು.

ಇಲ್ಲಿ ನಿಮ್ಮ ಕೈವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಸ್ಥಿತಿಗತಿ ಹಾಗೂ ನೀವು ಸಲ್ಲಿಸಿರುವ ಪ್ರೊಫೈಲ್‌ ವಿವರ ಸಿಗಲಿದೆ.

ಪೂರ್ಣಗೊಳ್ಳದಿದ್ದರೆ ಏನು ಮಾಡಬೇಕು?

ಪ್ರೊಫೈಲ್‌ ವಿಭಾಗದಲ್ಲಿ, ಕೆವೈಸಿ ಎಂಬ ಉಪ ವಿಭಾಗವಿದೆ. ಅಲ್ಲಿ ಕ್ಲಿಕ್‌ ಮಾಡಿ ನೀವು ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಬಹುದು.

ಬಳಕೆದಾರರು ಗುರುತು, ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್‌ಪೋರ್ಟ್‌ ಗಾತ್ರದ ಫೋಟೋ ಕೂಡ ಅಗತ್ಯ.

ಒಮ್ಮೆ ಪರಿಶೀಲಿಸಿ, ಅನಂತರ ದೃಢೀಕರಿಸಬೇಕಾಗುತ್ತದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ, “ಪ್ರೊಸೀಡ್‌’ ಕ್ಲಿಕ್‌ ಮಾಡಿ ದರೆ ಕೈವೈಸಿ ಪೂರ್ಣಗೊಳ್ಳಲಿದೆ.

ಕುರಿಯ : ಪತಿ ಮನೆಯಲ್ಲೇ ನೇಣಿಗೆ ಶರಣಾದ ನವ ವಿವಾಹಿತೆ

Posted by Vidyamaana on 2024-02-05 17:03:20 |

Share: | | | | |


ಕುರಿಯ : ಪತಿ ಮನೆಯಲ್ಲೇ ನೇಣಿಗೆ ಶರಣಾದ ನವ ವಿವಾಹಿತೆ

ಪುತ್ತೂರು :ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಪ್ಪ ದಂಪತಿ ಪುತ್ರಿ ನವವಿವಾಹಿತೆ ಶೋಭಾ (26ವ.) ನೇಣು ಬಿಗಿದು ಪತಿ ಮನೆಯಲ್ಲಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ  ಫೆ.4 ರಂದು ನಡೆದಿದೆ.


 ಶೋಭಾ ರವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು  ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು.ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ.

BREAKING : ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಆಗಮನ : SIT ಅಧಿಕಾರಿಗಳ ಮುಂದೆ ಶರಣು

Posted by Vidyamaana on 2024-05-05 13:41:54 |

Share: | | | | |


BREAKING : ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಆಗಮನ : SIT ಅಧಿಕಾರಿಗಳ ಮುಂದೆ ಶರಣು

ಬೆಂಗಳೂರು : ವಿದೇಶದಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣನವರು ಇಂದು ಮಧ್ಯಾಹ್ನ 3 ಗಂಟೆಗೆ ದುಬೈನಿಂದ ಬೆಂಗಳೂರಿಗೆ ಆಗಮಿಸಲಿದ್ದು, ಎಸ್ ಐಟಿ ಅಧಿಕಾರಿಗಳ ಮುಂದೆ ಶರಣಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಒಂದು ವೇಳೆ ಪ್ರಜ್ಚಲ್‌ ರೇವಣ್ಣ ಭಾರತಕ್ಕೆ ಆಗಮಿಸದೇ ಹೋದರೆ ಸಿಬಿಐ ನೇರವಿನೊಂದಿಗೆ ರಾಜ್ಯದ ಪೊಲೀಸರು ಅವರು ಇರುವ ಜಾಗಕ್ಕೆ ಹೋಗಿ ಅವರನ್ನು ತಮ್ಮ ವಶಕ್ಕೆಪಡೆದುಕೊಂಡು ರಾಜ್ಯಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪುತ್ತೂರು ಆರ್ವಿ ಇಂಟಗ್ರ್ರಾಫಿಕ್ಸ್ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

Posted by Vidyamaana on 2023-12-12 19:21:56 |

Share: | | | | |


ಪುತ್ತೂರು  ಆರ್ವಿ ಇಂಟಗ್ರ್ರಾಫಿಕ್ಸ್ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು : ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ಕರಾವಳಿಯ ಗಟ್ಟಿ ಹೆಸರೇ ಆರ್ವಿ ಇಂಟರ್ ಗ್ರಾಫಿಕ್ಸ್. ಇದು ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನದ ಅಲೆಯೆಬ್ಬಿಸುತ್ತಾ ಸಾಗುತ್ತಿದ್ದು, ಈ ಡಿಜಿಟಲ್ ದುನಿಯಾದಲ್ಲಿ ಪ್ರತಿಯೊಂದನ್ನೂ ಜನರ ಮನದೊಳಗೆ ಶಾಶ್ವತವಾಗಿ ಅಚ್ಚೊತ್ತುವಂತೆ ವಿಭಿನ್ನವಾಗಿ ವಿಶಿಷ್ಟವಾಗಿ ರೂಪಿಸುವ ಈ ಸಂಸ್ಥೆ ಬೆಳೆದು ಬಂದ ರೀತಿಯೂ ಅಷ್ಟೇ ಅನನ್ಯ.



ಬೆಳೆಯುತ್ತಿರುವ ಮುತ್ತಿನ ನಗರಿ ಪುತ್ತೂರಿನ ಡಿಸೈನಿಂಗ್ ಕ್ಷೇತ್ರದಲ್ಲಿ ಕಲಾತ್ಮಕತೆ-ಸೃಜನಶೀಲತೆ, ಹೊಸತನವನ್ನು ಇನ್ನಷ್ಟು ವಿನೂತನವಾಗಿಸಬೇಕೆಂಬ ಉದ್ದೇಶದಿಂದ ಗಿರೀಶ್ ರಾಜ್ ಹಾಗೂ ಜ್ಞಾನೇಶ್ ವಿಶ್ವಕರ್ಮ ಆರ್ವಿ ಇಂಟರ್ ಗ್ರಾಫಿಕ್ಸ್ ಅನ್ನು 2010ರಲ್ಲಿ ಹುಟ್ಟು ಹಾಕಿದರು. ಇವರಿಬ್ಬರ ಕ್ರಿಯಾಶೀಲ ಮನಸ್ಸುಗಳು ಒಂದಾಗಿ ಪುತ್ತೂರಿಗರ ಕನಸಿಗೆ ಬಣ್ಣ ತುಂಬುವಂತಹ ಕ್ರಿಯೇಟಿವ್ ಡಿಸೈನಿಂಗ್ ಸಂಸ್ಥೆಯೊಂದನ್ನು ತೆರೆಯಲೇಬೇಕೆಂಬ ಛಲದಿಂದ ಪುತ್ತೂರಿನ ಏಳ್ಮುಡಿಯ ಪಾಯಸ್(pais) ಬಿಲ್ಡಿಂಗಿನಲ್ಲಿ ಸಂಸ್ಥೆಯನ್ನು ಆರಂಭಿಸಿಯೇ ಬಿಟ್ಟರು.

ಇಂದು ಡಿಜಿಟಲ್ ಡಿಸೈನಿಂಗ್ ಕ್ಷೇತ್ರದಲ್ಲಿ ಅಕ್ಷರಶಃ ಕ್ರಾಂತಿ ಮಾಡುತ್ತಿರುವ ಆರ್ವಿಯು ಪುತ್ತೂರು ಮತ್ತು ಆಸುಪಾಸಿನ ಊರುಗಳ ಜನತೆ ಮತ್ತು ಸಂಸ್ಥೆಗಳನ್ನು ತನ್ನ ಅದ್ಭುತ ಕ್ರಿಯೇಟಿವಿಟಿಯಿಂದ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಶುಭ ಸಮಾರಂಭಗಳ ಆಮಂತ್ರಣ ಪತ್ರಿಕೆ, ಶಿಕ್ಷಣ-ವಾಣಿಜ್ಯ ಸಂಸ್ಥೆಗಳ ಲೋಗೋ, ಬ್ರೋಷರ್ಸ್, ಜಾಹೀರಾತು, ಡಿಜಿಟಲ್ ಎಲ್.ಇ.ಡಿ. ಬೋರ್ಡುಗಳು ಹೀಗೆ ಎಲ್ಲವನ್ನೂ, ಎಲ್ಲರೂ ವಾವ್ಹ್! ಎಂದು ಕಣ್ಣರಳಿಸಿ ನೋಡುವಂತೆ ರೂಪಿಸುತ್ತಿದೆ.



ತನ್ನೊಳಗಿನ ಕಂಟೆಂಟು- ಕಮಿಟ್ಮೆಂಟುಗಳ ಮೂಲಕ ಅಸಂಖ್ಯಾತ ಗ್ರಾಹಕ ಮನಸುಗಳೊಂದಿಗೆ ಬೆಳೆದದ್ದು ಆರ್ವಿ ಸಂಸ್ಥೆಯ ಹೆಚ್ಚುಗಾರಿಕೆ. ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ 2013ನೇ ಇಸವಿಯಲ್ಲಿ ಪುತ್ತೂರಿನ ಶ್ರೀ ಧರ್ಮಸ್ಥಳ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ತನ್ನ ಕ್ರಿಯಾಶೀಲತೆಯ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಿಕೊಂಡಿತು. ಬ್ರಾಂಡ್ಗೆ ಪ್ರಚಾರಕ್ಕೆ ಪೂರಕವಾದ ಮಾರ್ಕೆಟಿಂಗ್ ಮೆಟೀರಿಯಲ್ ಮಾತ್ರವಲ್ಲ ಡಿಜಿಟಲ್ ಮಾಧ್ಯಮದ A to Z ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಿರುವುದು ಆರ್ವಿಯ ಹೆಚ್ಚುಗಾರಿಕೆ.

2021ರಲ್ಲಿ ಕಸ್ಟಮೈಸ್ಡ್ ಉಡುಗೊರೆಗಳನ್ನೊಳಗೊಂಡ ಆರ್ವಿ ಗಿಫ್ಟ್ ಗ್ಯಾಲರಿಯನ್ನು ತೆರೆದು ವಿಭಿನ್ನವಾದ ಉಡುಗೊರೆಯನ್ನು ಅರಸಿ ಬರುವ ಗ್ರಾಹಕರಿಗೆ ಕಸ್ಟಮೈಸ್ಡ್ ಉಡುಗೊರೆಗಳನ್ನು ಪೂರೈಸುತ್ತಾ ಇನ್ನಷ್ಟು ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದೆ.

ಇದೀಗ ಇನ್ನಷ್ಟು ವಿಶಾಲ ಕಚೇರಿಗೆ ಸ್ಥಳಾಂತರಗೊಂಡಿದ್ದು, ಆಧುನಿಕ ಪ್ರಿಂಟಿಂಗ್ ಮೆಷಿನರಿಗಳನ್ನು ಅಳವಡಿಸಿಕೊಂಡಿದೆ. ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊಸತನದ ಸೇವೆ ನೀಡಲು ಸಜ್ಜಾಗಿದೆ.

ಆರ್ವಿ ಇಂಟರ್ ಗ್ರಾಫಿಕ್ಸಿನ ನೂತನ ಕಚೇರಿಯನ್ನು ಜಿ.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಜಿ.ಎಲ್. ಬಲರಾಮ ಆಚಾರ್ಯ ಅವರು ಉದ್ಘಾಟಿಸಿ, ಶುಭಹಾರೈಸಿದರು. ‘Aarvi My Print’ ಡಿಜಿಟಲ್ ಪ್ರಿಂಟಿಂಗ್ ಯುನಿಟ್ ಅನ್ನು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಉದ್ಘಾಟಿಸಿದರು.

 ಸಂಸ್ಥೆಯ ಪಾಲುದಾರರಾದ ಗಿರೀಶ್‌ರಾಜ್‌ ಎಂ.ವಿ., ಜ್ಞಾನೇಶ ವಿಶ್ವಕರ್ಮ ಅತಿಥಿಗಳನ್ನು ಸ್ವಾಗತಿಸಿದರು..


 ಈ ಸಂದರ್ಭದಲ್ಲಿ  30 ವರ್ಷಗಳ ವೃತ್ತಿಶ್ರದ್ಧೆ, ಸೃಜನಾತ್ಮಕ ಸೇವೆಗಾಗಿ ಉರ್ಲಾಂಡಿ ಚಂದನ್‌ ಆರ್ಟ್ಸ್‌ನ ಚಂದ್ರಶೇಖರ ನಾಯಕ್‌ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 


ಪ್ರಗತಿ ಸ್ಟಡಿ ಸೆಂಟರ್‌ ಸಂಚಾಲಕರಾದ ಗೋಕುಲ್‌ನಾಥ್‌ ಪಿ.ವಿ., ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌, ಮೈತ್ರಿ ಎಲೆಕ್ಟ್ರಿಕ್‌ ನ ರವಿನಾರಾಯಣ ಎಂ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಟ್ರೈಡೆಂಟ್‌ ಕ್ರಿಯೇಟಿವ್ಸ್‌ನ ಚರಣ್‌ ರಾಜ್‌, ಕೆನರಾ ಪ್ರೆಸ್‌ನ ಅರ್ಷದ್‌, ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ, ಎ.ವಿ. ನಾರಾಯಣ, ಕಾರ್ಕಳ ನ್ಯೂಸ್‌ನ ರಾಮಚಂದ್ರ ಬರೆಪ್ಪಾಡಿ, ಭಾವನಾ ಕಲಾ ಆರ್ಟ್ಸ್‌ನ ವಿಘ್ನೇಶ್‌ ವಿಶ್ವಕರ್ಮ, ಶರ್ಮಾ ಪ್ರಿಂಟಿಂಗ್‌ನ ರಾಜೇಶ ಕೃಷ್ಣಪ್ರಸಾದ್‌,   ವಿಟ್ಲದ ನಿವೃತ್ತ ಕೃಷಿ ಅಭಿವೃದ್ಧಿ ಅಧಿಕಾರಿ ದಾಮೋದರ ಆಚಾರ್ಯ,ಸಾಯಿ ಡಿಸ್ಟ್ರಿಬ್ಯೂಟರ್ಸ್‌ ಮ್ಹಾಲಕ ಶೈಲೇಶ್‌,ಸಿಡ್ಕೋ ಸೊಸೈಟಿಯ ಅಧ್ಯಕ್ಷ ರವೀಂದ್ರ ದೇವಾ ಟ್ರೇಡರ್ಸ್‌, ಸಿಡ್ಕೋ ಸೊಸೈಟಿ ಮ್ಯಾನೇಜರ್‌ ಭಟ್‌ ಹಾಗೂ ಸಿಬ್ಬಂದಿಗಳು, ಶ್ರೀಮಾ ಪಾರ್ಲರ್‌ ಮ್ಹಾಲಕಿ ಮಾಧವಿ ಮನೋಹರ್‌ ರೈ, ಉದಯವಾಣಿಯ ಹರ್ಷ ಎ ಪುತ್ತೂರು , ಸುದ್ದಿ ಬಿಡುಗಡೆಯ ಶ್ರೀಧರ್‌, ಲೋಕೇಶ್‌, ಆದಿತ್ಯ, ಚಂದ್ರಕಾಂತ, ನರೇಶ್‌ ಜೈನ್‌, ಜ್ಞಾನದೀಪ ಶಿಕ್ಷಣ ಸಂಸ್ಥೆಯ ಉಮೇಶ್‌ ಮಣಿಕ್ಕರ, ಅಧ್ಯಾಪಕ ಗಣೇಶ್‌ ನಾಯಕ್‌, ಸಾಯಿ ಡಿಸ್ಟ್ರಿಬ್ಯೂಟರ್ಸ್‌ನ ಮ್ಹಾಲಕರು, ಪ್ರಸನ್ನ ರೈ ತಿಂಗಳಾಡಿ ಮುಂತಾದವರು ಭೇಟಿ ನೀಡಿ ಸಂಸ್ಥೆಗೆ ಶುಭಹಾರೈಸಿದರು.

ಅಂಬಿಕಾ ಬಾಲವಿದ್ಯಾಲಯದ ದಿನೇಶ್‌ ವಿಶ್ವಕರ್ಮರವರ ಕೈಚಳಕದಲ್ಲಿ ಮೂಡಿಬಂದ ಮರ ಎಲ್ಲರ ಗಮನ ಸೆಳೆದಿತ್ತು.


ಆರ್ವಿ ಸಿಬ್ಬಂದಿಗಳಾದ ಅನಿಲ್‌, ರಾಮ್‌ಗಣೇಶ್‌, ಶ್ವೇತಾ, ಚೈತ್ರಾ, ಸ್ಪರ್ಷ, ಲಹರಿ, ಮೌಲ್ಯ, ಶಮಿತಾ, ಸುಮಂತ್‌, ಧನ್ಯ, ದೀಕ್ಷಾ ಸಹಕರಿಸಿದರು. ಶ್ರೀಮತಿ ದೀವಿತಾ ಜ್ಞಾನೇಶ್‌,  ಮಾ| ಧ್ರುವಿಜ್‌ ವಿಶ್ವಕರ್ಮ, ಕುಮಾರಿ ಚಿಂತನಾ, ಬೇಬಿ ಧ್ರುವಿ, ಸುದಿನ್‌ ವಿಶ್ವಕರ್ಮ, ವಿನಿಲ್‌ ವಿಶ್ವಕರ್ಮ, ಉಪಸ್ಥಿತರಿದ್ದರು.

ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.


We Make Brands Powerful.!

Aarvi Intergraphics. First Floor, Shri Dharmasthala Building, Main Ro

non

, Puttur

Call : 9483833824, 8970802040

www.aarvi.in


Aarvi Intergraphcis, Design your Dreams..!

ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

Posted by Vidyamaana on 2023-04-27 07:03:32 |

Share: | | | | |


ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

ಪುತ್ತೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ, ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ನಾಲ್ಕು ಗ್ಯಾರಂಟಿ ಯಓಜನೆಯು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಎಲ್ಲಾ ಮನೆಗಳಿಗೂ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡು ವಿತರಣೆ ಮಾಡುತ್ತಿದ್ದು ಬಿಜೆಪಿಗರ ಮನೆಗಳಿಗೂ ಕಾರ್ಡು ವಿತರಿಸಿ ಯಾವುದೇ ತಾರತಮ್ಯ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಪ್ರಭಾವಿ ಲಿಂಗಾಯಿತ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ

Posted by Vidyamaana on 2023-04-15 23:08:57 |

Share: | | | | |


ಪ್ರಭಾವಿ ಲಿಂಗಾಯಿತ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ

ಧಾರವಾಡ: ಈ ಬಾರಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ಪ್ರಭಾವಿ ಲಿಂಗಾಯಿತ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇಂದು(ಏಪ್ರಿಲ್ 15) ರಾತ್ರಿ ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದರು. ಆದ್ರೆ, ಸಂಧಾನ ಸಭೆ ವಿಫಲವಾಗಿದ್ದು, ಇದೀಗ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ

ಘೋಷಣೆ ಮಾಡಿದರು.ಬಿಜೆಪಿ ನಾಯಕರ ಜೊತೆ ಸಂಧಾನ ಸಭೆ ಬಳಿಕ ಹುಬ್ಬಳ್ಳಿಯ ನಿವಾಸದಲ್ಲಿ ಜಗದೀಶ್ ಶೆಟ್ಟರ್ ಮತ್ತೆ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಿಸಿದರು. ನಾಳೆ (ಏಪ್ರಿಲ್ 16) ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಕೊಟ್ಟ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನದು ಯಾವುದೇ ಭ್ರಷ್ಟಾಚಾರ, ಸೆಕ್ಸ್ ಸಿಡಿಯೂ ಇಲ್ಲ. ಹೈಕಮಾಂಡ್ ಸರ್ವೆ ವರದಿಯೂ ಸಹ ನನ್ನ ಪರ ಬಂದಿದೆ. ಆದರೂ ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನು ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್‌ ಘೋಷಿಸಿಲ್ಲ ಎಂದು ಭಾವುಕರಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್‍ಗೆ ಬಂದರೆ ಸ್ವಾಗತ: ಸಿದ್ದರಾಮಯ್ಯ

ಬೆಳಗಾವಿ: ‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹಾಲಿ ಶಾಸಕರಾಗಿದ್ದರೂ ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ದೂರಿದರು.

ಸದಾ ಪಕ್ಷ, ಸಿದ್ಧಾಂತ ಎನ್ನುತ್ತಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಇದೀಗ ಎಲ್ಲಿಗೆ ಹೋದರು ಎಂದು ಗೊತ್ತಿಲ್ಲ. ಶೆಟ್ಟರ್ ಅವರು ನನ್ನೊಂದಿಗೆ ಮಾತನಾಡಿಲ್ಲ. ಅವರು ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಲಕ್ಷ್ಮಣ ಸವದಿ ಆಗಮನದಿಂದ ಕಾಂಗ್ರೆಸ್‍ಗೆ ಲಾಭವಾಗಲಿದೆ. ಸವದಿ ಕೇಳಿದ ಕಡೆ ಪ್ರಚಾರ ಮಾಡಲು ಜವಾಬ್ದಾರಿ ನೀಡುತ್ತೇವೆ ಎಂದು ಹೇಳಿದರು.

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಸ್ಪರ್ಧಿಸುತ್ತಿದ್ದು, ಆ ಕ್ಷೇತ್ರದಲ್ಲಿ ಸೋಮಣ್ಣನ ಪರವಾಗಿ ಒಂದು ಮತವೂ ಇಲ್ಲ. ಅವನು ಹೊರಗಿನವನು’ ಎಂದು ಸಿದ್ದರಾಮಯ್ಯ ಟೀಕಿಸಿದರು.




Leave a Comment: