ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

Posted by Vidyamaana on 2023-10-14 14:19:51 |

Share: | | | | |


ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

ಬಳ್ಳಾರಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬಳ್ಳಾರಿಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಕೊಪ್ಪಳಕ್ಕೆ ಕರೆತಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿದ ಕಿರಾತಕರು ಕೊಪ್ಪಳದ ಸಣಾಪುರ ಬಳಿಯ ಹೋಟೆಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ಈ ಸಂಬಂಧ ನವೀನ್, ಸಾಕೀವ್, ತನು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.


ಯುವತಿ ಬಳ್ಳಾರಿಯ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ನಿಮ್ಮ ಅಣ್ಣ ಬಂದಿದ್ದಾನೆಂದು ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಕ್ಕೆ ಕರೆಯಿಸಿ ನಂತರ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ನಂತರ ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಕೆಫೆ ಹೋಟೆಲ್ ಗೆ ಕರೆದೊಯ್ದು ಬಿಯರ್ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ : ವಿದ್ಯುತ್​ ಶಾಕ್​ ತಗುಲಿ ಲೈನ್ ಮ್ಯಾನ್​ ಹಾಸನ ಮೂಲದ ರಘು ಮೃತ್ಯು

Posted by Vidyamaana on 2024-01-05 18:49:42 |

Share: | | | | |


ಸುಳ್ಯ : ವಿದ್ಯುತ್​ ಶಾಕ್​ ತಗುಲಿ ಲೈನ್ ಮ್ಯಾನ್​ ಹಾಸನ ಮೂಲದ ರಘು ಮೃತ್ಯು

ಸುಬ್ರಹ್ಮಣ್ಯ: ವಿದ್ಯುತ್ ಶಾಕ್ ಗೆ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪಂಜ ಸೆಕ್ಷನ್‌ನ ಬಳ್ಪದ ಪಾದೆ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. (32) ಮೃತರು ಎಂದು ಗುರುತಿಸಲಾಗಿದೆ.ಬಳ್ಪದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

10ನೇ ತರಗತಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಜವಾನನಿಗೆ ಓದಲೂ, ಬರೆಯಲು ಗೊತ್ತಿಲ್ಲ! ತನಿಖೆ ಆರಂಭ

Posted by Vidyamaana on 2024-05-24 05:44:32 |

Share: | | | | |


10ನೇ ತರಗತಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಜವಾನನಿಗೆ ಓದಲೂ, ಬರೆಯಲು ಗೊತ್ತಿಲ್ಲ! ತನಿಖೆ ಆರಂಭ

ಬೆಂಗಳೂರು :10ನೇ ತರಗತಿ ಪರೀಕ್ಷೆಯಲ್ಲಿ ಶೇ.99.7ರಷ್ಟು ಅಂಕಗಳನ್ನು ಗಳಿಸಿದ್ದ 23 ವರ್ಷದ ಪ್ರಭು ಲಕ್ಷ್ಮೀಕಾಂತ್ ಲೋಕರೆ ಎಂಬ ಜವಾನನಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ಈ ಬಹಿರಂಗಪಡಿಸುವಿಕೆಯು ಆರೋಪದ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ.

ಹೆಚ್ಚಿನ ಅಂಕಗಳನ್ನು ಗಳಿಸಿದ ನಂತರ, ಲೋಕರೆ ಕೊಪ್ಪಳ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಪಡೆದರು. ವರದಿಯ ಪ್ರಕಾರ, ಲೋಕರೆ ಅವರ 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಜವಾನರ ನೇಮಕಾತಿ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯಲ್ಲಿ ಏಪ್ರಿಲ್ 22, 2024 ರಂದು ಅವರ ಹೆಸರು ಕಾಣಿಸಿಕೊಂಡಾಗ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಲಾಯಿತು. ಲೋಕರೆ ಅವರ ಶೈಕ್ಷಣಿಕ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ನರಿಮೊಗರು : ಟ್ರ್ಯಾಕ್ಟರ್ - ಕಾರು ಭೀಕರ ಅಪಘಾತ : ಟ್ರ್ಯಾಕ್ಟರ್ ನಜ್ಜುಗುಜ್ಜು

Posted by Vidyamaana on 2023-10-01 08:55:11 |

Share: | | | | |


ನರಿಮೊಗರು : ಟ್ರ್ಯಾಕ್ಟರ್ - ಕಾರು ಭೀಕರ ಅಪಘಾತ : ಟ್ರ್ಯಾಕ್ಟರ್ ನಜ್ಜುಗುಜ್ಜು

ಪುತ್ತೂರು: ಟ್ರ್ಯಾಕ್ಟರ್ - ಕಾರು ಮುಖಾಮುಖಿ ಢಿಕ್ಕಿಯಾದ ಘಟನೆ ನರಿಮೊಗರಿನ ಪಾಪೆತ್ತಡ್ಕ ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಟ್ರ್ಯಾಕ್ಟರ್ ನಜ್ಜುಗುಜ್ಜಾಗಿದ್ದು, ಗುರುತು ಸಿಗದ ಸ್ಥಿತಿಗೆ ತಲುಪಿದೆ. ಕಾರಿನ ಆ್ಯರ್ ಬ್ಯಾಗ್ ತೆರೆದುಕೊಂಡಿದ್ದು, ಹಾನಿಯಾಗಿದೆ.

ಟ್ರ್ಯಾಕ್ಟರ್ ಚಾಲಕ ಪವಾಡಸದೃಶ ಪಾರಾಗಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಬೆಂಗಳೂರುನಿಂದ ಕಾಣಿಯೂರು ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಕಾರಿನಲ್ಲಿದ್ದವರು, ಅಪಾಯದಿಂದ ಪಾರಾಗಿದ್ದಾರೆ.

ಈ ಪರಿಸರ ಹಲವು ಅಪಘಾತಗಳು, ಸಾವು - ನೋವುಗಳಿಗೆ ಸಾಕ್ಷಿಯಾಗಿದೆ. ಇದನ್ನು ಅಪಘಾತ ವಲಯ ಎಂದೂ ಗುರುತಿಸಲಾಗಿದೆ. ಇದೀಗ ಅಪಘಾತ ನಡೆದ ಸ್ಥಳದಲ್ಲೇ ಗ್ರಾಮ ಪಂಚಾಯತ್ ಹಾಕಿರುವ - "ಅಪಘಾತ ಸ್ಥಳ, ನಿಧಾನವಾಗಿ ಚಲಿಸಿ" ಎಂಬ ಬೋರ್ಡ್ ಇದೆ.

ಅಪಘಾತದ ಬಗೆಗಿನ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಶಾಸಕರ ಇಂದಿನ ಕಾರ್ಯಕ್ರಮ ಜೂ 11

Posted by Vidyamaana on 2023-06-10 23:56:15 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜೂ 11

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 11 ರಂದು 

ಬೆಳಿಗ್ಗೆ 8.30 ಕ್ಕೆ ಮಂಗಳೂರು ವಿಮಾನ‌ನಿಲ್ದಾಣದಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಗೆ ಸ್ವಾಗತ

12.30 ಕ್ಕೆ ಪುತ್ತೂರು ಕೋಟಿಚೆನ್ನಯ ಬಸ್ ನಿಲ್ದಾಣದಲ್ಲಿ ಮಹಿಳಾ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ

ಅಪರಾಹ್ನ 3 ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರ ಜೊತೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪುತ್ತೂರು : ಬಿಜೆಪಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖ ವಾಗ್ವಾದ ವಿಚಾರ ವೈರಲ್ : ಸತ್ಯಕ್ಕೆ ದೂರವಾದ ವಿಷಯ – ಸಾಜ ರಾಧಾಕೃಷ್ಣ ಆಳ್ವ

Posted by Vidyamaana on 2024-03-21 18:14:24 |

Share: | | | | |


ಪುತ್ತೂರು : ಬಿಜೆಪಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖ ವಾಗ್ವಾದ ವಿಚಾರ ವೈರಲ್  : ಸತ್ಯಕ್ಕೆ ದೂರವಾದ ವಿಷಯ – ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು :ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಯ್ಕೆಯಾದ ನಂತರ ಮತ್ತು ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಯ ವಿಚಾರವಾಗಿ ಪುತ್ತೂರಿನ ಹಿರಿಯ-ಕಿರಿಯ ಕಾರ್ಯಕರ್ತರಲ್ಲಿ ಚರ್ಚಿಸಲು ದ.ಕನ್ನಡ ಜಿಲ್ಲಾಧ್ಯಕ್ಷರು ಪಾರ್ಟಿ ಕಛೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಛೇರಿಗೆ ಬೀಗ ಹಾಕಿದ್ದರು ಮತ್ತು ಸಭೆಯಲ್ಲಿ ವಾಗ್ವಾದಗಳು ಜಿಲ್ಲಾಧ್ಯಕ್ಷರ ಎದುರಿಗೆ ಆಗಿವೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ ತಿಳಿಸಿದ್ದಾರೆ.


ಪಕ್ಷದ ಆಂತರಿಕ ಸಭೆ ಆದ ಕಾರಣ ಪತ್ರಿಕೆ ಮಾದ್ಯಮದವರಿಗೆ ಅಹ್ವಾನ ಇರಲಿಲ್ಲ ಮತ್ತು ಒಟ್ಟು ಪುತ್ತೂರಿನ ರಾಜಕೀಯ ಸಾಧಕ ಮತ್ತು ಭಾದಕಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆಯಾಗಿ ಕೊನೆಗೆ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ರವರು ಸೂಕ್ತವಾದ ಸಲಹೆ ಸೂಚನೆಯನ್ನು ನೀಡಿ ಸಭೆ ಸುಖಾಂತ್ಯವಾಗಿದೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಪಾರ್ಟಿಯ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ನಿರ್ಧರಿಸಲಾಯಿತು ಎಂದು ಸಾಜ ರಾಧಕೃಷ್ಣ ಆಳ್ವ ತಿಳಿಸಿದ್ದಾರೆ



Leave a Comment: